ಅರಂತೋಡು : ಅಂತರಾಷ್ಟ್ರೀಯ ಮಾದಕ ವ್ಯಸನ ಮತ್ತು ಅಕ್ರಮ ಸಾಗಾಣಿಕೆ ವಿರೋಧಿ ದಿನಾಚರಣೆ ಪ್ರಯುಕ್ತ ಮಾಹಿತಿ ಕಾರ್ಯಕ್ರಮ
ಜೇಸಿಐ ಸುಳ್ಯ ಪಯಸ್ವಿನಿಹಾಗೂ ಸುಳ್ಯ ಪೊಲೀಸ್ ಇಲಾಖಾ ವತಿಯಿಂದ ಅಂತರಾಷ್ಟ್ರೀಯ ಮಾದಕ ವ್ಯಸನ ಮತ್ತು ಅಕ್ರಮ ಸಾಗಾಣಿಕೆ ವಿರೋಧಿ ದಿನಾಚರಣೆ-2026 ಪ್ರಯುಕ್ತ ಜೂನ್ 23ರಂದು ನೆಹರು ಸ್ಮಾರಕ ವಿದ್ಯಾಸಂಸ್ಥೆ ಅರಂತೋಡು ಇಲ್ಲಿನ ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಾಗಾರವನ್ನು ಸುಳ್ಯ ಪೊಲೀಸ್ ಇಲಾಖೆಯ ಸಹಾಯಕ ಉಪ ನಿರೀಕ್ಷಕರಾದ ಶ್ರೀ. ತಾರನಾಥ್ ಹಾಗೂ ಪ್ರೋಭೇಷನರಿ ಸಹಾಯಕ ಉಪ ನಿರೀಕ್ಷಕರಾದ ಶ್ರೀ ಕೃಷ್ಣ ಜಿ. ಬಿ, ಯವರು ನಡೆಸಿಕೊಟ್ಟರು.ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಜೇಸಿಐ ಸುಳ್ಯ ಪಯಸ್ವಿಯ ಅಧ್ಯಕ್ಷರಾದ ಜೆಎಫ್ಎಂ ಲತಾಶ್ರೀ ಸುಪ್ರೀತ್ ಮೋಂಟಡ್ಕ ವಹಿಸಿದ್ದರು. […]



