June 2026

ನಾಗತೀರ್ಥ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪ್ರಾರಂಭೋತ್ಸವ

ಪಂಜ ನಾಗತೀರ್ಥ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವವು ನಡೆಯಿತು. ವಿದ್ಯಾರ್ಥಿಗಳನ್ನು ಮತ್ತು ಅತಿಥಿಗಳನ್ನು ಮೆರವಣಿಗೆಯ ಮೂಲಕ ಸ್ವಾಗತಿಸಲಾಯಿತು. ಶಾಲಾ ಹೊಸ ಕಟ್ಟಡವನ್ನು ಅತಿಥಿಗಳು ಉದ್ಘಾಟನೆ ಮಾಡಿದರು. ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಮಂಡಳಿಯ ಅಧ್ಯಕ್ಷ ಡಾ. ದೇವಿಪ್ರಸಾದ್ ಕಾನತ್ತೂರು ದೀಪೋಜ್ವಲನೆಯ ಮೂಲಕ ಶಾಲಾ ಪ್ರಾರಂಭೋತ್ಸವಕೆ ಚಾಲನೆಯನ್ನು ನೀಡಿದರು. ವಿದ್ಯಾರ್ಥಿಗಳಿಗೆ ಕಬ್ ಬುಲ್ ಬುಲ್ ಸಮವಸ್ತ್ರ ಮತ್ತು ಯೋಗ ಮ್ಯಾಟ್ ವಿತರಿಸುವುದರ ಮೂಲಕ ಹಾಗೂ ವಿದ್ಯಾರ್ಥಿಗಳನ್ನು ಕರಕುಶಲ ಕಲೆಯಲ್ಲಿ ಪರಿಣಿತರನ್ನಾಗಿಸಲು ಹೊಲಿಗೆ ತರಬೇತಿಗೆ ಬೇಕಾದ ಹೊಲಿಗೆ […]

ನಾಗತೀರ್ಥ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪ್ರಾರಂಭೋತ್ಸವ Read More »

ಸ್ಟಾರ್ ಟೈಲ್ಸ್ ನ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯಲ್ಲೇ ಅತೀ ದೊಡ್ಡ ಶೋರೂಂ ಸುಳ್ಯದಲ್ಲಿ ಶುಭಾರಂಭ

ಸ್ಟಾರ್ ಟೈಲ್ಸ್ ಗ್ರೂಪ್ ಆಫ್ ಕಂಪೆನಿಯ 4ನೇಯ ನೂತನ ಶೋರೂಂ ಮತ್ತು ದಾಸ್ತನು ಮಳಿಗೆ ಜೂನ್ 1 ರಂದು ಸುಳ್ಯದಲ್ಲಿ ಶುಭಾರಂಭಗೊಂಡಿದೆ.ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್‌ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಹಾಗೂ ಸುಳ್ಯದ ಸೈಂಟ್ ಬ್ರಿಜಿಡ್ಸ್ ಚರ್ಚ್‌ನ ಧರ್ಮಗುರು ಫಾ.ಅಲ್ವಿನ್ ಡಿ‌.ಕುನ್ಹಾ ಟೈಲ್ಸ್ ಮಳಿಗೆ ಉದ್ಘಾಟಿಸಿದರು.ಸಯ್ಯದ್ ಸಹೀರ್ ತಂಗಳ್ ಕುಂಬೋಳ್ ಮಳಿಗೆಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ ಶುಭ ಹಾರೈಸಿದರು. ಸುಳ್ಯ ಸೂಡ ಅಧ್ಯಕ್ಷ ಕೆ.ಎಂ.ಮುಸ್ತಫ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಸ್ಟಾರ್ ಟೈಲ್ಸ್ ಮಳಿಗೆಯ ಮಾಲಕ ರಿಯಾಝ್.ಪಿ.ಬಿ, ಸ್ಟಾರ್ ಗ್ರೂಪ್‌ನ ಸ್ಥಾಪಕ

ಸ್ಟಾರ್ ಟೈಲ್ಸ್ ನ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯಲ್ಲೇ ಅತೀ ದೊಡ್ಡ ಶೋರೂಂ ಸುಳ್ಯದಲ್ಲಿ ಶುಭಾರಂಭ Read More »

ಸವಣೂರು : ಅಕ್ರಮವಾಗಿ ಗೋವುಗಳನ್ನು ಕಡಿದು ಮಾಂಸ ಮಾಡುತ್ತಿದ್ದ ಮೂವರು ಆರೋಪಿಗಳ ಬಂಧನ

ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸವಣೂರು ಗ್ರಾಮದ ಮಾಂತೂರು ಮುಂಡತಡ್ಕದಲ್ಲಿ ತೋಟವೊಂದರಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಕಡಿದು ಮಾಂಸ ಮಾಡುತ್ತಿದ್ದ ಅಡ್ಡೆಗೆ ಬೆಳ್ಳಾರೆ ಪೊಲೀಸರು ದಾಳಿ ನಡೆಸಿದ್ದಾರೆ. ಉಪ ನಿರೀಕ್ಷಕ ಸಂತೋಷ್ ಬಿ. ಪಿ. ಅವರಿಗೆ ಲಭಿಸಿದ ಖಚಿತ ಮಾಹಿತಿ ಮೇರೆಗೆ, ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ಕಾರ್ಯಾಚರಣೆ ನಡೆಸಿದಾಗ ಜಾನುವಾರನ್ನು ವಧೆ ಮಾಡಿ ಮಾಂಸ ಮಾಡುತ್ತಿರುವುದು ಪತ್ತೆಯಾಗಿದೆ. ಈ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಸವಣೂರು : ಅಕ್ರಮವಾಗಿ ಗೋವುಗಳನ್ನು ಕಡಿದು ಮಾಂಸ ಮಾಡುತ್ತಿದ್ದ ಮೂವರು ಆರೋಪಿಗಳ ಬಂಧನ Read More »

ಆರ್‌ಸಿಬಿ ಐತಿಹಾಸಿಕ ಐಪಿಎಲ್‌ ಚಾಂಪಿಯನ್ಸ್

ಗುಜರಾತ್ ಟೈಟಾನ್ಸ್ ವಿರುದ್ಧದ ರೋಮಾಂಚನಕಾರಿ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಭರ್ಜರಿ ಜಯ ಸಾಧಿಸಿ, ಐಪಿಎಲ್ 2026ರ ಚಾಂಪಿಯನ್ಸ್ ಆಗಿ ಹೊರಹೊಮ್ಮಿದೆ. ವಿರಾಟ್ ಕೊಹ್ಲಿ ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ಆರ್‌ಸಿಬಿ 156 ರನ್‌ಗಳ ಗುರಿಯನ್ನು 18 ಓವರ್‌ಗಳಲ್ಲಿ ಯಶಸ್ವಿಯಾಗಿ ಬೆನ್ನಟ್ಟಿತು. ಇದರೊಂದಿಗೆ ಕೋಟ್ಯಂತರ ಅಭಿಮಾನಿಗಳ “ಈ ಸಲಾನು ಕಪ್ ನಮ್ಹು” ಕನಸು ಕೊನೆಗೂ ನನಸಾಗಿದೆ. RCB ಪರ ವೆಂಕಟೇಶ್‌ ಅಯ್ಯರ್ 32, ವಿರಾಟ್ 75 ರನ್ ಗಳಿಸಿ ಮಿಂಚಿದರು.

ಆರ್‌ಸಿಬಿ ಐತಿಹಾಸಿಕ ಐಪಿಎಲ್‌ ಚಾಂಪಿಯನ್ಸ್ Read More »

error: Content is protected !!
Scroll to Top