November 3, 2026

ಪೆರುವೋಡಿ ವಿಷ್ಣುಮೂರ್ತಿ ದೇವಸ್ಥಾನದ ರಸ್ತೆ ಕಾಂಕ್ರೀಟಿಕರಣ ಕಾಮಗಾರಿಗೆ ಚಾಲನೆ

ಪೆರುವೋಡಿ: ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರೂ.5.5 ಲಕ್ಷ ವೆಚ್ಚದ ಕಾಂಕ್ರೀಟಿಕರಣ ರಸ್ತೆ ಕಾಮಗಾರಿಗೆ ಸುಳ್ಯ ಶಾಸಕಿ ಕು. ಭಾಗೀರಥಿ ಮುರುಳ್ಯ ಅವರು ಚಾಲನೆ ನೀಡಿದರು. ಕಾಮಗಾರಿಯ ಉದ್ಘಾಟನೆ ನೆರವೇರಿಸಿದ ಶಾಸಕರು, ಕಾಮಗಾರಿಯ ಗುಣಮಟ್ಟವನ್ನು ಪರಿಶೀಲಿಸಿ ಹರ್ಷ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಮುಂದಿನ ದಿನಗಳಲ್ಲಿ ಗ್ರಾಮದ ಅಭಿವೃದ್ಧಿ ಕಾರ್ಯಗಳಿಗೂ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ದಯಾಕರ ಆಳ್ವ ಬೋಳಕುಮೇರು, ಕುಶಾಲಪ್ಪ ಗೌಡ ಅಡ್ಯತಕಂಡ, ಉಮೇಶ್ ಕೆ.ಎಂ.ಬಿ., ದಯಾನಂದ ಗೌಡ ಜಾಲು,

ಪೆರುವೋಡಿ ವಿಷ್ಣುಮೂರ್ತಿ ದೇವಸ್ಥಾನದ ರಸ್ತೆ ಕಾಂಕ್ರೀಟಿಕರಣ ಕಾಮಗಾರಿಗೆ ಚಾಲನೆ Read More »

ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಕನ್ನಡ ನುಡಿ ಹಬ್ಬ ಸಂಭ್ರಮ

ಸುಳ್ಯ: ಕನ್ನಡ ಸಾಹಿತ್ಯ ಪರಿಷತ್, ಸುಳ್ಯ, ನೆಹರೂ ಮೆಮೋರಿಯಲ್ ಕಾಲೇಜು, ಕಾಲೇಜಿನ ಕನ್ನಡ ಸಂಘ ಹಾಗೂ ಕನ್ನಡ ವಿಭಾಗದ ವತಿಯಿಂದ ಕಾಲೇಜಿನ ಸುವರ್ಣ ಮಹೋತ್ಸವದ ಅಂಗವಾಗಿ ಆಯೋಜಿಸಲಾದ ಕನ್ನಡ ನುಡಿ ಹಬ್ಬ ಸಂಭ್ರಮ ಕಾರ್ಯಕ್ರಮವು ನವೆಂಬರ್ 3ರಂದು ಕಾಲೇಜಿನಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಆಡಳಿತಾಧಿಕಾರಿ, ಕನ್ನಡ ಸಾಹಿತ್ಯ ಪರಿಷತ್, ಸುಳ್ಯ, ಇದರ ಅಧ್ಯಕ್ಷ ಚಂದ್ರಶೇಖರ ಪೇರಾಲು, ವಹಿಸಿದ್ದರು. ಶ್ರೀಮತಿ ವಿಮಲಾರುಣ ಪಡ್ಡಂಬೈಲು ಮುಖ್ಯ ಅತಿಧಿಯಾಗಿ ಭಾಗವಹಿಸಿ ಉಪನ್ಯಾಸ ನೀಡಿದರು. ಕಾಲೇಜಿನ ಪ್ರಾಂಶುಪಾಲ ಡಾ. ರುದ್ರಕುಮಾರ್ ಎಂ.ಎಂ.

ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಕನ್ನಡ ನುಡಿ ಹಬ್ಬ ಸಂಭ್ರಮ Read More »

ಸುಳ್ಯದಲ್ಲಿ ಭಾರೀ ಮಳೆ: ಪೈಚಾರಿನಲ್ಲಿ ರಸ್ತೆಗೆ ಉಕ್ಕಿ ಹರಿದ ನೀರು; ವಾಹನ ಸಂಚಾರಕ್ಕೆ ಅಡಚಣೆ

ಸುಳ್ಯ: ಸುಳ್ಯ ತಾಲೂಕು ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ಪೈಚಾರು ಬೊಳುಬೈಲು ಪ್ರದೇಶದಲ್ಲಿ ಮಳೆಯ ನೀರು ರಸ್ತೆಗೆ ಉಕ್ಕಿ ಹರಿದ ಪರಿಣಾಮ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಭಾರೀ ಮಳೆಯಿಂದಾಗಿ ರಸ್ತೆಯಲ್ಲಿ ನೀರು ಹರಿದ ಪರಿಣಾಮ ವಾಹನ ಸವಾರರು ಸಂಚರಿಸಲು ಸಮಸ್ಯೆ ಎದುರಿಸುತ್ತಿದ್ದಾರೆ. ರಸ್ತೆಯಲ್ಲಿ ನೀರು ಹರಿಯುತ್ತಿದ್ದುದರಿಂದ ವಾಹನ ಚಾಲಕರು ಎಚ್ಚರಿಕೆಯಿಂದ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.ಮಳೆಯ ನೀರು ರಸ್ತೆಗೆ ಹರಿದುಬಂದ ಹಿನ್ನೆಲೆಯಲ್ಲಿ ವಾಹನ ಸವಾರರು ತೊಂದರೆ ಅನುಭವಿಸುವಂತಾಯಿತು. ನಿರಂತರ ಮಳೆಯಾಗುತ್ತಿರುವುದರಿಂದ ರಸ್ತೆಗಳಲ್ಲಿ ನೀರು ಹರಿಯುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಸಾರ್ವಜನಿಕರು

ಸುಳ್ಯದಲ್ಲಿ ಭಾರೀ ಮಳೆ: ಪೈಚಾರಿನಲ್ಲಿ ರಸ್ತೆಗೆ ಉಕ್ಕಿ ಹರಿದ ನೀರು; ವಾಹನ ಸಂಚಾರಕ್ಕೆ ಅಡಚಣೆ Read More »

ಐದು ದಶಕಗಳ ಸಾಹಿತ್ಯ ಸೇವೆ, ಮೂರೂವರೆ ದಶಕಗಳ ಪತ್ರಿಕಾ ವೃತ್ತಿ; ಗಂಗಾಧರ ಮಟ್ಟಿ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ಐದು ದಶಕಗಳಿಂದ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಬರವಣಿಗೆಯ ಛಾಪು ಮೂಡಿಸಿ, ಮೂರೂವರೆ ದಶಕಗಳಿಂದ ಪತ್ರಿಕೋದ್ಯಮದ ಮೂಲಕ ಸಮಾಜದ ಆಗುಹೋಗುಗಳಿಗೆ ಧ್ವನಿಯಾಗಿರುವ ಹಿರಿಯ ಪತ್ರಕರ್ತ ಹಾಗೂ ಸಾಹಿತಿ ಗಂಗಾಧರ ಮಟ್ಟಿ ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ರವಿವಾರ ಮಂಗಳೂರಿನಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.ಮಣಿಪಾಲ ಇಂಡಸ್ಟ್ರೀಸ್ ಸಂಸ್ಥೆಯಲ್ಲಿ ಅಧಿಕಾರಿಯಾಗಿ ವೃತ್ತಿಜೀವನ ಆರಂಭಿಸಿದ ಗಂಗಾಧರ ಮಟ್ಟಿ ಅವರು, ಹೊನ್ನಾವರದ ಮಾವಿನಕುರ್ವೆಯಲ್ಲಿ ಮೊದಲ ಬಾರಿಗೆ ಕರ್ತವ್ಯಕ್ಕೆ ಹಾಜರಾಗಿ ಸತತ 13

ಐದು ದಶಕಗಳ ಸಾಹಿತ್ಯ ಸೇವೆ, ಮೂರೂವರೆ ದಶಕಗಳ ಪತ್ರಿಕಾ ವೃತ್ತಿ; ಗಂಗಾಧರ ಮಟ್ಟಿ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ Read More »

ಸುಳ್ಯಕ್ಕೆ ನಟ ಆದಿ ಲೋಕೇಶ್ ಭೇಟಿ – ಜೇಸಿಐ ಭಾರತ ವಲಯ 15ರ ವಲಯ ಉಪಾಧ್ಯಕ್ಷರಿಗೆ ಗೌರವ

ಕನ್ನಡ ಚಿತ್ರರಂಗದ ಖ್ಯಾತ ನಟ ಆದಿ ಲೋಕೇಶ್ ರವರು ಮಂಗಳೂರಿನಿಂದ ಮೈಸೂರಿಗೆ ತೆರಳುವ ವೇಳೆ ನ.2ರಂದು ಸಂಜೆ ಗಾಂಧಿನಗರದ ಡಿಲೈಟ್ ಕೆಫೆಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಜೇಸಿಐ ಭಾರತ ವಲಯ 15ರ ವಲಯ ಉಪಾಧ್ಯಕ್ಷರಾಗಿ ಆಯ್ಕೆಯಾದ ಜೇಸಿಐ ಸುಳ್ಯ ಪಯಸ್ವಿನಿಯ ಅಧ್ಯಕ್ಷೆ ಶ್ರೀಮತಿ ಲತಾಶ್ರೀ ಸುಪ್ರೀತ್ ಮೋoಟಡ್ಕರವರನ್ನು ಆದಿ ಲೋಕೇಶ್ ರವರು ಸನ್ಮಾನಿಸಿ ಗೌರವಿಸಿದರು.ಅಲ್ಲದೆ ಪಯಸ್ವಿನಿ ಜೇಸಿಐಯವರ ಅಭಿಯಾನವಾದ ಸ್ಟೀಲ್ ಬಾಟಲ್ ವಿತರಣೆಯ ಬಗ್ಗೆ ಮೆಚ್ಚುಗೆ ಮಾತನಾಡಿ ಅಲ್ಲೇ ಪ್ಲಾಸ್ಟಿಕ್ ಬಾಟಲ್ ನಲ್ಲಿದ್ದ ನೀರನ್ನು ಸ್ಟೀಲ್

ಸುಳ್ಯಕ್ಕೆ ನಟ ಆದಿ ಲೋಕೇಶ್ ಭೇಟಿ – ಜೇಸಿಐ ಭಾರತ ವಲಯ 15ರ ವಲಯ ಉಪಾಧ್ಯಕ್ಷರಿಗೆ ಗೌರವ Read More »

error: Content is protected !!
Scroll to Top