November 6, 2026

ರಾಜ್ಯದಲ್ಲಿ ಮತ್ತೆ ಮಳೆ ಆರ್ಭಟ: ಭಾರೀ ಮಳೆ ಮುನ್ಸೂಚನೆ

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಹವಾಮಾನ ಬದಲಾವಣೆಗಳ ಪರಿಣಾಮ ರಾಜ್ಯದಲ್ಲಿ ಮತ್ತೆ ಮಳೆಯ ಆರ್ಭಟ ಮುಂದುವರಿದಿದೆ. ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.ಮೈಸೂರು, ಕೊಡಗು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ನವೆಂಬರ್ 6ರವರೆಗೆ ದಕ್ಷಿಣ ಒಳನಾಡಿನ ವಿವಿಧ ಭಾಗಗಳಲ್ಲಿ ಗಂಟೆಗೆ 30ರಿಂದ 40 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಕೆಲವು ಪ್ರದೇಶಗಳಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗುವ ಸಂಭವವೂ ಇದೆ

ರಾಜ್ಯದಲ್ಲಿ ಮತ್ತೆ ಮಳೆ ಆರ್ಭಟ: ಭಾರೀ ಮಳೆ ಮುನ್ಸೂಚನೆ Read More »

ಮೊಸಳೆ ದಾಳಿಯೇ ಮಹಿಳೆಗೆ ಮರುಜನ್ಮ ನೀಡಿತೇ? ಕುಮಾರಧಾರಾ ನದಿಯಲ್ಲಿ ರೋಚಕ ಘಟನೆ!

ಸುಬ್ರಹ್ಮಣ್ಯ: ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಕುಮಾರಧಾರಾ ನದಿಗೆ ಹಾರಿದ ಮಹಿಳೆಯೊಬ್ಬರಿಗೆ ಮೊಸಳೆ ಕಚ್ಚಿದ ಪರಿಣಾಮ, ಜೀವಭಯದಿಂದ ಆಕೆ ಕೂಗಿಕೊಂಡು ಸ್ಥಳೀಯರ ಗಮನ ಸೆಳೆದು ಪ್ರಾಣಾಪಾಯದಿಂದ ಪಾರಾದ ಅಚ್ಚರಿಯ ಘಟನೆ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ಸೇತುವೆ ಬಳಿ ನವೆಂಬರ್ 4ರ ತಡರಾತ್ರಿ ನಡೆದಿದೆ. ಉಡುಪಿ ಮೂಲದ ಮಹಿಳೆಯೊಬ್ಬರು ಕೌಟುಂಬಿಕ ಮನಸ್ತಾಪದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ತಡರಾತ್ರಿ ಕುಮಾರಧಾರಾ ಸೇತುವೆಯ ಮೇಲಿಂದ ನದಿಗೆ ಹಾರಿದ್ದರು ಎನ್ನಲಾಗಿದೆ. ನದಿಗೆ ಹಾರಿದ ಕೆಲವೇ ಕ್ಷಣಗಳಲ್ಲಿ ನೀರಿನಲ್ಲಿದ್ದ ಮೊಸಳೆಯೊಂದು ಮಹಿಳೆಗೆ ಕಚ್ಚಿದೆ. ಆತ್ಮಹತ್ಯೆ

ಮೊಸಳೆ ದಾಳಿಯೇ ಮಹಿಳೆಗೆ ಮರುಜನ್ಮ ನೀಡಿತೇ? ಕುಮಾರಧಾರಾ ನದಿಯಲ್ಲಿ ರೋಚಕ ಘಟನೆ! Read More »

error: Content is protected !!
Scroll to Top