ಆಲೆಟ್ಟಿಯಲ್ಲಿ ಭೀಕರ ಗಾಳಿ ಮಳೆ ಅವಾಂತರ: ಮನೆಯ ಮೇಲೆ ಬೃಹತ್ ಮರ ಬಿದ್ದು ಮನೆ ಸಂಪೂರ್ಣ ಧ್ವಂಸ; ಆರು ಮಂದಿಗೆ ಗಾಯ
ಅರಂತೋಡು, ನ. 26 : : ಆಲೆಟ್ಟಿ ಗ್ರಾಮದ ಚಳ್ಳಂಗಾರು ಎಂಬಲ್ಲಿ ನ.25ರ ರಾತ್ರಿ ಸುರಿದ ಭಾರೀ ಗಾಳಿ ಮಳೆಗೆ ಬೃಹತ್ ಗಾತ್ರದ ಮರವೊಂದು ಮನೆಯ ಮೇಲೆ ಉರುಳಿಬಿದ್ದ ಪರಿಣಾಮ ಮನೆ ಸಂಪೂರ್ಣ ಧ್ವಂಸಗೊಂಡಿದ್ದು, ಮನೆಯಲ್ಲಿದ್ದ ಆರು ಮಂದಿ ಗಾಯಗೊಂಡ ಘಟನೆ ವರದಿಯಾಗಿದೆ. ಚಳ್ಳಂಗಾರು ನಿವಾಸಿ ದೇವಿದಾಸ ಅವರ ಮನೆಗೆ ರಾತ್ರಿ ಸುಮಾರು 9.30ರ ವೇಳೆಗೆ ಮನೆಯ ಎಡಭಾಗದಲ್ಲಿದ್ದ ಬೃಹತ್ ಗಾತ್ರದ ಶಾಂತಿ ಮರ ಇದ್ದಕ್ಕಿದ್ದಂತೆ ಉರುಳಿಬಿದ್ದಿದೆ. ಈ ಸಂದರ್ಭದಲ್ಲಿ ಮನೆಯೊಳಗೆ ದೇವಿದಾಸ, ಅವರ ಪತ್ನಿ ಪೂರ್ಣಿಮಾ,



