Author name: Tejas

ಸಂಪಾಜೆ : ಬೈಕ್ ಅಪಘಾತ, ಮೊಬೈಲ್ ಪೋನ್ ಬ್ಲಾಸ್ಟ್ ಯುವಕನಿಗೆ ಗಾಯ

ಬೈಕ್ ಅಪಘಾತವಾಗಿ ಸವಾರ ಗಾಯಗೊಂಡ ಘಟನೆ ಸಂಪಾಜೆ ಗ್ರಾಮದ ಚೌಕಿಯಿಂದ ವರದಿಯಾಗಿದೆ.ಗಾಯಗೊಂಡ ಯುವಕನ್ನು ಕೊಯನಾಡು ಚಡಾವು ನಿವಾಸಿ ತನುಷ್ ಗುರುತಿಸಲಾಗಿದೆ.ಮೊಬೈಲ್ ಅಪಘಾತದ ಸ್ಥಳದಲ್ಲಿ ಬ್ಲಾಸ್ಟ್ ಆಗಿ ಉರಿದಿದೆ ಎಂದು ತಿಳಿದು ಬಂದಿದೆ.ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.

ಸಂಪಾಜೆ : ಬೈಕ್ ಅಪಘಾತ, ಮೊಬೈಲ್ ಪೋನ್ ಬ್ಲಾಸ್ಟ್ ಯುವಕನಿಗೆ ಗಾಯ Read More »

ಕುಕ್ಕೆ ಶ್ರೀ ಸುಬ್ರಹ್ಮಣ್ಯದ ಕಾರ್ಯಕ್ರಮಕ್ಕೆ ಅನ್ಯಧರ್ಮೀಯರಿಗೆ ಆಹ್ವಾನ ನೀಡಿರುವುದನ್ನು ವಿರೋಧಿಸಿ ಪ್ರತಿಭಟನೆ

ಕುಕ್ಕೆ ಶ್ರೀ ಸುಬ್ರಹ್ಮಣ್ಯದ ಕಾರ್ಯಕ್ರಮಕ್ಕೆ ಅನ್ಯಧರ್ಮೀಯರಿಗೆ ಆಹ್ವಾನ ನೀಡಿರುವುದನ್ನು ವಿರೋಧಿಸಿ ಶ್ರೀ ಕ್ಷೇತ್ರ ಸಂರಕ್ಷಣಾ ಸಮಿತಿ ವತಿಯಿಂದ ದೇವಸ್ಥಾನದ ಆಡಳಿತ ಕಚೇರಿ ಎದುರು ಇಂದು ಪ್ರತಿಭಟನೆ ನಡೆಯಿತು.ಆಡಳಿತ ಕಛೇರಿಯ ಎದುರು ಘೋಷಣೆ ಕೂಗಿದ ಬಳಿಕ ದೇವಾಲಯದ ಕಾರ್ಯನಿರ್ವಾಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಅವರಿಗೆ ಮನವಿ ನೀಡಿ ಪ್ರೊಟೊಕಾಲ್ ಹೆಸರಿನಲ್ಲಿ ದೇವಸ್ಥಾನದ ಪಾವಿತ್ರ್ಯತೆಗೆ ಧಕ್ಕೆ ತರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.ಈ ವೇಳೆ ಇದೇ ವಿಚಾರಕ್ಕೆ ಮನವಿ ಕೊಟ್ಟರೆ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ಕಾರ್ಯನಿರ್ವಾಹಣಾಧಿಕಾರಿ ಭರವಸೆ ನೀಡಿದರು.ಹಿಂದೂ ಪರ ಸಂಘಟನೆಗಳ ಮುಖಂಡರು

ಕುಕ್ಕೆ ಶ್ರೀ ಸುಬ್ರಹ್ಮಣ್ಯದ ಕಾರ್ಯಕ್ರಮಕ್ಕೆ ಅನ್ಯಧರ್ಮೀಯರಿಗೆ ಆಹ್ವಾನ ನೀಡಿರುವುದನ್ನು ವಿರೋಧಿಸಿ ಪ್ರತಿಭಟನೆ Read More »

ಬೊಳಿಯಮ್ಮ ಸಣ್ಣಮನೆ ನಿಧನ

ಸುಳ್ಯ ತಾಲೂಕು ತೊಡಿಕಾನ ಗ್ರಾಮದ ಮುಪ್ಪಸೇರು ಸಣ್ಣಮನೆ ಜತ್ತಪ್ಪ ಗೌಡರ ಧರ್ಮಪತ್ನಿ ಬೊಳಿಯಮ್ಮ ಅಸೌಖ್ಯದಿಂದ ಡಿ.22ರಂದು ತನ್ನ ಸ್ವಗೃಹದಲ್ಲಿ ನಿಧನರಾದರು.ಅವರಿಗೆ ಸುಮಾರು‌ 65ವರ್ಷ ಪ್ರಾಯವಾಗಿತ್ತು.ಮೃತರು ಪತಿ ಜತ್ತಪ್ಪ ಗೌಡ,ಮಕ್ಕಳಾದ ಹರೀಶ,ಶ್ರೀಧರ ಇಬ್ಬರು ಸೊಸೆಯಂದಿರನ್ನು ಮೊಮ್ಮಕ್ಕಳನ್ನು,ಕುಟುಂಬಸ್ಥರನ್ನು,ಬಂಧುಗಳನ್ನು ಅಗಲಿದ್ದಾರೆ.

ಬೊಳಿಯಮ್ಮ ಸಣ್ಣಮನೆ ನಿಧನ Read More »

ಅರಂತೋಡು ಎಸ್.ಕೆ.ಎಸ್.ಎಸ್.ಎಫ್ ವತಿಯಿಂದ ನಡೆದ ಮಜ್ಲಿಸ್ ನ್ನೂರ್ ಹಾಗೂ ಸಮಸ್ತ 100 ನೇ ವಾರ್ಷಿಕ ಪ್ರಚಾರ ಸಮ್ಮೇಳನ ಸಂಪನ್ನ

.ಎಸ್.ಕೆ.ಎಸ್.ಎಸ್.ಎಫ್ ಅರಂತೋಡು ಶಾಖೆ ವತಿಯಿಂದ 7ನೇ ವರ್ಷದ ಮಜ್ಲೀಸ್ ನ್ನೂರ್ ಹಾಗೂ ಸಮಸ್ತ 100 ನೇ ವರ್ಷದ ಪ್ರಚಾರ ಸಮ್ಮೇಳನವು ಡಿ.20 ಮತ್ತು 21 ರಂದು ಅರಂತೋಡು ಬದ್ರಿಯಾ ಜುಮಾ ಮಸೀದಿ ವಠಾರದಲ್ಲಿ ಡಾ| ಕೆ.ಎಂ.ಶಾಹ್ ಮುಸ್ಲಿಯಾರ್ ವೇದಿಕೆಯಲ್ಲಿ ಸಪ್ಪನ್ನಗೊಂಡಿತು. ಅಧ್ಯಕ್ಷತೆಯನ್ನು ಜಮಾಅತ್ ಅಧ್ಯಕ್ಷ ಅಶ್ರಫ್ ಗುಂಡಿ ವಹಿಸಿದರು. ಖತೀಬರಾದ ಬಹು| ಇಸ್ಮಾಯಿಲ್ ಫೈಝಿ ಗಟ್ಟಮನೆ ಸಮಾರಂಭವನ್ನು ಉದ್ಘಾಟಿಸಿದರು. ಬಹು| ಹಾಫಿಝ್ ಮಾಹಿನ್ ಮನ್ನಾನಿ ತಿರುವನಂತಪುರ ಮತ ಪ್ರಭಾಷಣ ಗೈದರು. ಮಜ್ಲೀಸ್ ನ್ನೂರ್ ನ ನೇತೃತ್ವವನ್ನು ಅಸ್ಸಯ್ಯರ್

ಅರಂತೋಡು ಎಸ್.ಕೆ.ಎಸ್.ಎಸ್.ಎಫ್ ವತಿಯಿಂದ ನಡೆದ ಮಜ್ಲಿಸ್ ನ್ನೂರ್ ಹಾಗೂ ಸಮಸ್ತ 100 ನೇ ವಾರ್ಷಿಕ ಪ್ರಚಾರ ಸಮ್ಮೇಳನ ಸಂಪನ್ನ Read More »

ಸುಳ್ಯ ಸರಕಾರಿ ಪ.ಪೂ.ಕಾಲೇಜು: ಡಿ.27-29ರವರೆಗೆ ಅಮೃತ ಮೇಳ

ಸರಕಾರಿ ಪದವಿ ಪೂರ್ವ ಕಾಲೇಜಿನ ಅಮೃತ ಮಹೋತ್ಸವ ಹಿನ್ನಲೆ ಯಲ್ಲಿ ವಸ್ತು ಪ್ರದರ್ಶನ ಮತ್ತು ಅಮೃತ ಮೇಳವು ಡಿ.27ರಿಂದ ಮೂರು ದಿನಗಳ ಕಾಲ ನಡೆಯಲಿದೆ ಎಂದು ವಸ್ತು ಪ್ರದರ್ಶನ ಸಮಿತಿ ವ್ಯವಸ್ಥಾ ನಿರ್ವಾಹಕ ಕೆ. ಗೋಕುಲ್‌ದಾಸ್ ತಿಳಿಸಿದರು. ಅವರು ಸುಳ್ಯ ಸರಕಾರಿ ಪ.ಪೂ. ಕಾಲೇಜಿನ ಅಮೃತ ಮಹೋತ್ಸವ ಸಮಿತಿ ಕಛೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿಮಾತ ನಾಡಿ, ಶೈಕ್ಷಣಿಕ, ಔದ್ಯೋಗಿಕ, ಕೃಷಿ, ವ್ಯಾಪಾರ, ಆಹಾರ, ಆರೋಗ್ಯ ಮತ್ತು ತಾಂತ್ರಿಕ ವಿಷಯಗಳನ್ನು ಒಳಗೊಂಡ ವಸ್ತು ಪ್ರದರ್ಶನ 3 ದಿನಗಳ ಕಾಲ ನಡೆಯಲಿದೆ. ಸುಮಾರು

ಸುಳ್ಯ ಸರಕಾರಿ ಪ.ಪೂ.ಕಾಲೇಜು: ಡಿ.27-29ರವರೆಗೆ ಅಮೃತ ಮೇಳ Read More »

ಕೆ ವಿ ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ – ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ನಶಾ ಮುಕ್ತ ಕರ್ನಾಟಕ ಅಭಿಯಾನ ಕಾರ್ಯಕ್ರಮ

ಕೆ ವಿ ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ ಇದರ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ನಶಾ ಮುಕ್ತ ಕರ್ನಾಟಕ ಅಭಿಯಾನವು ಪರಿವರ್ತನಾ ಸೇವಾ ಟ್ರಸ್ಟ್ ಬೆಂಗಳೂರು ಇದರ ಪ್ರಾಯೋಜಕತ್ವದಲ್ಲಿ ನಶಾ ಮುಕ್ತ ಕರ್ನಾಟಕ ಅಭಿಯಾನ ರಥಯಾತ್ರೆ ಹಾಗೂ ಜನಜಾಗೃತಿ ಕಾಯಕ್ರಮವು ಕಾಲೇಜಿನ ಎನ್ ಎಸ್ ಎಸ್ ಘಟಕದ ಪಾಲ್ಗೊಳ್ಳುವಿಕೆಯೊಂದಿಗೆ ಡಿ. 20 ರಂದು ನೆಹರೂ ಮೆಮೋರಿಯಲ್ ಕಾಲೇಜಿನ ಆವರಣದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನಡೆಯಿತು. ಈ ಸಂಧರ್ಭದಲ್ಲಿ ಕಾರ್ಯಕ್ರಮದ ಸಂಯೋಜಕರಾದ

ಕೆ ವಿ ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ – ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ನಶಾ ಮುಕ್ತ ಕರ್ನಾಟಕ ಅಭಿಯಾನ ಕಾರ್ಯಕ್ರಮ Read More »

ಬಸ್ ಬೈಕ್ ಅಪಘಾತವಾಗಿ ಬೈಕ್ ಸವಾರ ಗಂಭೀರ

ಅರಂತೋಡು : ಖಾಸಗಿ ಬಸ್ ಮತ್ತು ಬೈಕ್ ಡಿಕ್ಕಿಯಾಗಿ ಬೈಕ್ ಸವಾರನಿಗೆ ಗಂಭೀರ ಗಾಯವಾದ ಘಟನೆ ಸಂಪಾಜೆ ಗ್ರಾಮದ ಕಡೆಪಾಲ ಬಳಿ ಡಿ.21ರಂದು ಸಂಭವಿಸಿದೆ.ಗಾಯಗೊಂಡ ಬೈಕ್ ಸವಾರನ್ನು ಕೇರಳ ಮೂಲದ ಜಿನೇಶ್(36) ಎಂದು ಗುರುತಿಸಲಾಗಿದೆ.ಕಡೆಪಾಲ ರಾಷ್ಟ್ರೀಯ ಹೆದ್ದಾರಿ 275ರ ತಿರುವಿನಲ್ಲಿ ಮಿನಿ ಬಸ್ ಮತ್ತು ಬೈಕ್ ಪರಸ್ಪರ ಡಿಕ್ಕಿಯಾಗಿ ಬೈಕ್ ಸವಾರನಿಗೆ ಗಂಭೀರ ಗಾಯಗಳಾಗಿವೆ. ಸ್ಥಳಕ್ಕೆ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಸ್ ಬೈಕ್ ಅಪಘಾತವಾಗಿ ಬೈಕ್ ಸವಾರ ಗಂಭೀರ Read More »

ಸ್ಪಂದನ ಗೆಳೆಯರ ಬಳಗದ ವತಿಯಿಂದ ಪಂಚಸಪ್ತತಿ ಸ್ವಚ್ಛತಾ ಅಭಿಯಾನದ 9 ನೇ ಕಾರ್ಯಕ್ರಮ-ಸ್ವಚ್ಚತೆಯ ಅರಿವಿನ ಕುರಿತ ಭಿತ್ತಿಪತ್ರಗಳ ಅನಾವರಣ ಹಾಗೂ ಆಳವಡಿಸುವಿಕೆ ಕಾರ್ಯಕ್ರಮ

ಯುವಜನ ಸಂಯುಕ್ತ ಮಂಡಳಿ (ರಿ.) ಸುಳ್ಯ ಇದರ ಪಂಚಸಪ್ತತಿ ಸ್ವಚ್ಛತಾ ಅಭಿಯಾನ-2025 ರ ಅಂಗವಾಗಿ ಸ್ಪಂದನ ಗೆಳೆಯರ ಬಳಗ (ರಿ.) ಅಡ್ತಲೆ ಇವರ ವತಿಯಿಂದ ಗ್ರಾಮ ಪಂಚಾಯತ್ ಅರಂತೋಡು ಇವರ ಸಹಯೋಗದೊಂದಿಗೆ ಸ್ವಚ್ಛತಾ ಜಾಗೃತಿ ಕುರಿತ ಭಿತ್ತಿಪತ್ರಗಳ ಅನಾವರಣ ಹಾಗೂ ಅಳವಡಿಸುವ ಕಾರ್ಯವು ಅರಂತೋಡಿನಲ್ಲಿ ನಡೆಯಿತು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೇಶವ ಅಡ್ತಲೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಎಂ.ಆರ್ ಭಿತ್ತಿಪತ್ರವನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯರಾದ ರವೀಂದ್ರ ಪೂಜಾರಿ ಪಂಜಿಕೋಡಿ,ಅರಂತೋಡು ಸೊಸೈಟಿಯ ಉಪ-ಮುಖ್ಯಕಾರ್ಯನೀರ್ವಹಣಾಧಿಕಾರಿ

ಸ್ಪಂದನ ಗೆಳೆಯರ ಬಳಗದ ವತಿಯಿಂದ ಪಂಚಸಪ್ತತಿ ಸ್ವಚ್ಛತಾ ಅಭಿಯಾನದ 9 ನೇ ಕಾರ್ಯಕ್ರಮ-ಸ್ವಚ್ಚತೆಯ ಅರಿವಿನ ಕುರಿತ ಭಿತ್ತಿಪತ್ರಗಳ ಅನಾವರಣ ಹಾಗೂ ಆಳವಡಿಸುವಿಕೆ ಕಾರ್ಯಕ್ರಮ Read More »

ಸಂಪಾಜೆ: ಸ್ವಸಹಾಯ ಸಂಘಗಳ ಮಹಿಳೆಯರಿಗೆ ನವೀಕರಿಸಬಹುದಾದ ಇಂಧನ ಹಾಗೂ ಪರಿಸರ ಸಂರಕ್ಷಣೆ ಕುರಿತು ತರಬೇತಿ

ಸುಳ್ಯ ತಾಲೂಕು ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಶ್ರೀ ವಿಷ್ಣು ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಸಂಪಾಜೆ ವತಿಯಿಂದ, ಮಹಾತ್ಮಾ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ, ಬೆಂಗಳೂರು ಇವರ ಕಾರ್ಯಾದೇಶದನ್ವಯ ಶ್ರೀ ಅನ್ನಪೂರ್ಣೇಶ್ವರಿ ಚಾರಿಟಿ ಫೌಂಡೇಷನ್, ಚಿಕ್ಕಮಗಳೂರು ಇವರ ಸಹಯೋಗದಲ್ಲಿ ಇಂದು ಸಂಪಾಜೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಸ್ವಸಹಾಯ ಸಂಘಗಳ ಸದಸ್ಯರು ಹಾಗೂ ಗ್ರಾಮೀಣ ಮಹಿಳೆಯರಿಗಾಗಿ ಅರಿವು ಮೂಡಿಸುವ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಮತಿ ಶಕ್ತಿವೇಲು

ಸಂಪಾಜೆ: ಸ್ವಸಹಾಯ ಸಂಘಗಳ ಮಹಿಳೆಯರಿಗೆ ನವೀಕರಿಸಬಹುದಾದ ಇಂಧನ ಹಾಗೂ ಪರಿಸರ ಸಂರಕ್ಷಣೆ ಕುರಿತು ತರಬೇತಿ Read More »

ಅರಂತೋಡು ಗ್ರಾಮ ಪಂಚಾಯತ್ ಸಾಮಾನ್ಯ ಸಭೆ

ಆರಂತೋಡು ಗ್ರಾಮ ಪಂಚಾಯತ್ ನ ಡಿಸೇಂಬರ್ ತಿಂಗಳ ಸಾಮಾನ್ಯ ಸಭೆಯು ಪಂಚಾಯತ್ ಅಧ್ಯಕ್ಷರಾದ ಕೇಶವ ಅಡ್ತಲೆಯವರ ಅಧ್ಯಕ್ಷತೆಯಲ್ಲಿ ಡಿ.20ರಂದು ನಡೆಯಿತು. ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೈಲೆಟ್ ಯೋಜನೆಯಾಗಿ ಆಯ್ಕೆ ಮಾಡಿಕೊಂಡಿರುವ ಆರಂತೋಡು ಗ್ರಾಮ ಪಂಚಾಯತ್ ನ.ತೊಡಿಕಾನ ಗ್ರಾಮದ ಅಡ್ಯಡ್ಕದಲ್ಲಿ 24/7 ಕುಡಿಯುವ ನೀರಿನ ಸರಬರಾಜು ವ್ಯವಸ್ಥೆ ಯನ್ನು ಡಿಸೆಂಬರ್ ತಿಂಗಳ ಅಂತ್ಯದೊಳಗಾಗಿ ಚಾಲನೆ ನೀಡುವುದೆಂದು ಸರ್ವ ಸಮ್ಮತದಿಂದ ತೀರ್ಮಾನಿಸಲಾಯಿತು. ಅಲ್ಲದೆ ಸರಕಾರದಿಂದ ಆಯ್ಕೆಯಾದ ತಾಲೂಕಿನ ಏಕೈಕ ಪಂಚಾಯತ್ ಕಲಿಕಾ ಕೇಂದ್ರ ( Panchayat learning centre

ಅರಂತೋಡು ಗ್ರಾಮ ಪಂಚಾಯತ್ ಸಾಮಾನ್ಯ ಸಭೆ Read More »

error: Content is protected !!
Scroll to Top