Author name: Tejas

ಅರಂತೋಡಿನಲ್ಲಿ ತೀವ್ರಗೊಂಡ ವಿದ್ಯುತ್ ಸಮಸ್ಯೆ ಕುಡಿಯುವ ನೀರಿಗೆ ಪರದಾಟ!

ಅರಂತೋಡು ಭಾಗದಲ್ಲಿಯು ವಿದ್ಯುತ್ ಸಮಸ್ಯೆ ತೀವ್ರಗೊಂಡಿದ್ದು ರಾತ್ರಿ ಹೊತ್ತಿನಲ್ಲಿ ಇರುವುದಿಲ್ಲ ದಿನ ನಿತ್ಯ ಟ್ರಿಪ್ ಆಗುತ್ತಿರುವುದರಿಂದ ಗ್ರಾಮ ಪಂಚಾಯತ್ ನ ಸಾರ್ವಜನಿಕ ಕುಡಿಯುವ ನೀರಿಗೆ ಜನ ಪರದಾಡುತ್ತಿದ್ದಾರೆ, ಅಲ್ಲದೆ ಕೃಷಿಕರಿಗೆ, ಬೆಳಗ್ಗಿನ ಹೊತ್ತು ಅಡಚಣೆಯಾಗುತ್ತಿರುವುದರಿಂದ ನೌಕರಿಗೆ ತೆರಳುತ್ತಿರುವವರಿಗೆ ತುಂಬಾ ತೊಂದರೆಯಾಗಿದೆ. ದಿನ ಪತ್ರಿಕೆಯಲ್ಲಿ ಈ ಬಾರಿ ಲೋಡ ಶೆಡ್ ಇಲ್ಲ ಎಂದು ತಿಳಿಸಿದರು ಈ ಭಾಗದಲ್ಲಿ ದಿನಾಲು ಲೋಡ್ ಶೆಡ್ಡಿಂಗ್ ಇರುತ್ತದೆ. ಆದುದರಿಂದ ಮೆಸ್ಕಾಂ ಇಲಾಖೆ ಈ ಭಾಗಕ್ಕೆ ಉತ್ತಮ ಗುಣಮಟ್ಟದ ವಿದ್ಯುತ್ ಸರಬರಾಜಿಗೆ ಕ್ರಮ ಕೈಗೊಳ್ಳ […]

ಅರಂತೋಡಿನಲ್ಲಿ ತೀವ್ರಗೊಂಡ ವಿದ್ಯುತ್ ಸಮಸ್ಯೆ ಕುಡಿಯುವ ನೀರಿಗೆ ಪರದಾಟ! Read More »

ಗುತ್ತಿಗಾರಿನಲ್ಲಿ ಕೈ ಕೊಟ್ಟ ವಿದ್ಯುತ್,ಕುಡಿಯುವ ನೀರಿಗೂ ಸಮಸ್ಯೆ

ಗುತ್ತಿಗಾರು ಭಾಗಕ್ಕೆ ಕಳೆದ ಮೂರು ದಿನಗಳಿಂದ ತ್ರೀ ಫೇಸ್ ವಿದ್ಯುತ್ ಸರಬರಾಜು ಇಲ್ಲದೆ ಗ್ರಾಮ ಪಂಚಾಯತ್, ಸಾರ್ವಜನಿಕರು ಕೃಷಿಕರು ಕಂಗಾಲಾಗಿದ್ದಾರೆ.ಫೆಸ್‌ ಇಲ್ಲದಿರುವುದರಿಂದ ಗ್ರಾ.ಪಂ ಗೆ ಕುಡಿಯುವ ನೀರಿನ ಸರಬರಾಜು ಸಂಕಷ್ಟ ಉಂಟಾಗಿದೆ. ಕೃಷಿಕರಿಗೆ ಕೃಷಿಗೆ, ಗೃಹಪಯೋಗಕ್ಕೂ ನೀರಿನ ಕೊರತೆ ಉಂಟಾಗಿರುವುದಾಗಿ ತಿಳಿದು ಬಂದಿದೆ. ಸುಬ್ರಹ್ಮಣ್ಯದಿಂದ ಸಿಂಗಲ್ ಫೇಸ್ ವಿದ್ಯುತ್ ನೀಡಲಾಗುತ್ತಿದ್ದರೂ ಲೋ ವೋಲ್ವೇಜ್ ಮತ್ತಿತರರ ಸಮಸ್ಯೆಗಳಿವೆ. ಬೆಳ್ಳಾರೆಯಲ್ಲಿ ಮೂರು ಕಡೆ ೩೩ ಕೆ.ವಿ ಭೂಗತ ಕೇಬಲ್ ನಲ್ಲಿ ಫಾಲ್ಟ್ ಕಂಡು ಬಂದ ಕಾರಣ ವಿದ್ಯುತ್ ಸರಬರಾಜು ವ್ಯತ್ಯಯ

ಗುತ್ತಿಗಾರಿನಲ್ಲಿ ಕೈ ಕೊಟ್ಟ ವಿದ್ಯುತ್,ಕುಡಿಯುವ ನೀರಿಗೂ ಸಮಸ್ಯೆ Read More »

ರಾಜ್ಯದಲ್ಲಿ ದಿನದ 7 ಗಂಟೆ ಕೃಷಿಗೆ ವಿದ್ಯುತ್ ಪೂರೈಕೆ : ಸಚಿವ ಕೆ.ಜೆ ಜಾರ್ಜ್

ರಾಜ್ಯ ಸರ್ಕಾರವು ರೈತರ ಕೃಷಿ ಕೆಲಸಗಳಿಗೆ ದಿನದ 7 ಗಂಟೆ ವಿದ್ಯುತ್ ಪೂರೈಸಲು ಆದೇಶ ನೀಡಿದೆ.ಕೃಷಿ ಪಂಪ್ ಸೆಟ್ ಗಳಿಗೆ ದಿನದ 7 ತಾಸು ತ್ರಿ ಫೇಸ್ ಹಾಗೂ ಗೃಹ ಬಳಕೆ ಮತ್ತು ಕೈಗಾರಿಕೆಗಳಿಗೆ ದಿನದ 24 ಗಂಟೆ ವಿದ್ಯುತ್ ಪೂರೈಸುವುದು ಸರ್ಕಾರದ ನೀತಿಯಾಗಿದ್ದು, ಇದಕ್ಕೆ ಬದ್ಧವಾಗಿ ವಿದ್ಯುತ್ ನೀಡಲಾಗುತ್ತಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.ರಾಜ್ಯದಲ್ಲಿ ಈ ವರ್ಷ ವಿದ್ಯುತ್ ಕೊರತೆ ಇಲ್ಲ. ಕೆಲವೊಂದು ತಾಂತ್ರಿಕ ಸಮಸ್ಯೆಯಿಂದ ಕೆಲವು ಪ್ರದೇಗಳಲ್ಲಿ ನಿರ್ವಹಣಾ ಕಾರ್ಯಗಳಿಗಾಗಿ ವಿದ್ಯುತ್ ಕಡಿತ

ರಾಜ್ಯದಲ್ಲಿ ದಿನದ 7 ಗಂಟೆ ಕೃಷಿಗೆ ವಿದ್ಯುತ್ ಪೂರೈಕೆ : ಸಚಿವ ಕೆ.ಜೆ ಜಾರ್ಜ್ Read More »

ದೇವರಕೊಲ್ಲಿ : ಟಿ.ಟಿ ಲಾರಿ ನಡುವೆ ಭೀಕರ ಅಪಘಾತ

ಮಾಣಿ ಮೈಸೂರು ರಾಷ್ಟ್ರಿಯ ಹೆದ್ದಾರಿಯ ದೇವರಕೊಲ್ಲಿಯಲ್ಲಿ ಟಿಟಿ ಹಾಗೂ ಲಾರಿ ನಡುವೆ ಫೆ.19ರಂದು ಬೆಳಿಗ್ಗೆಯ ಸಮಯ ಭೀಕರ ಅಪಘಾತ ಸಂಭವಿಸಿದ ಘಟನೆ ವರದಿಯಾಗಿದೆ.ತಡರಾತ್ರಿ 2.30ಕ್ಕೆ ಅಪಘಾತ ಸಂಭವಿಸಿದೆ. ಪ್ರಯಾಣಿಕರು ಗಾಯಗೊಂಡಿದ್ದಾರೆ. ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.

ದೇವರಕೊಲ್ಲಿ : ಟಿ.ಟಿ ಲಾರಿ ನಡುವೆ ಭೀಕರ ಅಪಘಾತ Read More »

ಅಂಗನವಾಡಿಯಲ್ಲಿ ಆಟವಾಡುತ್ತಿದ್ದ ಬಾಲಕಿ ಕುಸಿದು ಬಿದ್ದು ಸಾವು

ಕೊಪ್ಪಳ ತಾಲೂಕಿನ ಬಳೂಟಗಿ ಗ್ರಾಮದ ಅಂಗನವಾಡಿಯಲ್ಲಿ 5 ವರ್ಷದ ಬಾಲಕಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.ಮೃತ ಬಾಲಕಿಯನ್ನು ಅಲಿಯಾ ಮಹ್ಮದ್ ರಿಯಾಜ್ (5) ಎನ್ನಲಾಗಿದೆ.ಬಾಲಕಿ ಮಧ್ಯಾಹ್ನದ ವೇಳೆ ಅಂಗನವಾಡಿಯಲ್ಲಿ ಆಟವಾಡುತ್ತಿದ್ದಾಗ ವೇಳೆ ಕುಸಿದು ಬಿದ್ದಿದ್ದು, ಕೂಡಲೇ ಬಾಲಕಿಯನ್ನು ದೋಟಿಹಾಳ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸುತ್ತಿದ್ದಾಗ, ಮಾರ್ಗಮಧ್ಯೆ ಸಾವನ್ನಪ್ಪಿದ್ದಾಳೆ.ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿ ಮೃತಪಟ್ಟಿರುವುದಾಗಿ ವೈದ್ಯರ ತಪಾಸಣೆಯ ವೇಳೆ ತಿಳಿದು ಬಂದಿದೆ.

ಅಂಗನವಾಡಿಯಲ್ಲಿ ಆಟವಾಡುತ್ತಿದ್ದ ಬಾಲಕಿ ಕುಸಿದು ಬಿದ್ದು ಸಾವು Read More »

ಉಪ್ಪಿನಂಗಡಿ, ತೊಡಿಕಾನ ಮತ್ತು ಪುತ್ತೂರು ದೇವಾಲಯಗಳ ಅಭಿವೃದ್ಧಿಗೆ ಒಟ್ಟು 150 ಕೋಟಿ ರೂಪಾಯಿಯ ಪ್ರಸ್ತಾವನೆ ಸಲ್ಲಿಕೆ

ಪ್ರಸಾದಮ್ ಮತ್ತು ಸ್ವದೇಶಿ ದರ್ಶನ್ ಯೋಜನೆಯಡಿ ದೇವಾಲಯಗಳ ಅಭಿವೃದ್ಧಿ ಮತ್ತು ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಉಪ್ಪಿನಂಗಡಿ, ತೊಡಿಕಾನ ಮತ್ತು ಪುತ್ತೂರು ದೇವಾಲಯಗಳ ಅಭಿವೃದ್ಧಿಗೆ ಒಟ್ಟು 150 ಕೋಟಿ ರೂಪಾಯಿಯ ಪ್ರಸ್ತಾವನೆಯನ್ನು ಕೇಂದ್ರ ಸರಕಾರಕ್ಕೆ ಕಳುಹಿಸಲಾಗಿದ್ದು, ಇದರಿಂದ ಸಂಗಮ ಕ್ಷೇತ್ರ ಉಪ್ಪಿನಂಗಡಿಯನ್ನು ಅಮೂಲಾಗ್ರ ಅಭಿವೃದ್ಧಿಗೆ ಒಳಪಡಿಸಲು ಸಾಧ್ಯವಾಗುವುದೆಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದರು.ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದಲ್ಲಿ ಫೆ.17ರಂದು ಸಂಕಲ್ಪಿತ ಅಭಿವೃದ್ಧಿ ಕಾರ್ಯಗಳ ನೀಲ ಸಕಾಶೆಯನ್ನು ಪರಿಶೀಲಿಸಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.

ಉಪ್ಪಿನಂಗಡಿ, ತೊಡಿಕಾನ ಮತ್ತು ಪುತ್ತೂರು ದೇವಾಲಯಗಳ ಅಭಿವೃದ್ಧಿಗೆ ಒಟ್ಟು 150 ಕೋಟಿ ರೂಪಾಯಿಯ ಪ್ರಸ್ತಾವನೆ ಸಲ್ಲಿಕೆ Read More »

ಸಹೋದರನ ಅತ್ತೆಯನ್ನು ಕೊಲೆ ಮಾಡಿದ ಆರೋಪಿ ಆತ್ಮಹತ್ಯೆ

ಮೂಡಿಗೆರೆ ತಾಲೂಕಿನ ಭಾರತೀಬೈಲ್ ಗ್ರಾಮದಲ್ಲಿ ಸಹೋದರನ ಅತ್ತೆಯನ್ನು ಕೊಲೆ ಮಾಡಿದ್ದ ಆರೋಪಿ ಶಶಿಧ‌ರ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆರೋಪಿ ಶಶಿಧರ್ ಕುಡಿದ ಮತ್ತಿನಲ್ಲಿ ಬುದ್ದಿ ಹೇಳಿದ ಕಾರಣಕ್ಕೆ ಫೆ.16 ರಂದು ಸಹೋದರನ ಅತ್ತೆ ಯಮುನಾ (65) ಅವರನ್ನು ಶಶಿಧರ್ ಎಂಬ ವ್ಯಕ್ತಿ ಸುತ್ತಿಗೆಯಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದ. ಕೊಲೆ ಮಾಡಿದ ಬಳಿಕ ಶಶಿಧರ್ ಸ್ಥಳದಿಂದ ಪರಾರಿಯಾಗಿದ್ದ. ಈ ಸಂಬಂಧ ಬಣಕಲ್ ಪೊಲೀಸರು ತನಿಖೆ ಆರಂಭಿಸಿದ್ದರು. ಶಶಿಧರ್ ನನ್ನು ಪತ್ತೆ ಹಚ್ಚಲು ಪೊಲೀಸರು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದರು,

ಸಹೋದರನ ಅತ್ತೆಯನ್ನು ಕೊಲೆ ಮಾಡಿದ ಆರೋಪಿ ಆತ್ಮಹತ್ಯೆ Read More »

ಶಾಲಾ ಮಕ್ಕಳ ಮೇಲೆ ಹೆಜ್ಜೇನು ದಾಳಿ,ಅಸ್ವಸ್ಥರಾದ ಮಕ್ಕಳು

ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆ ಸ.ಹಿ.ಪ್ರಾ ಶಾಲೆಯಲ್ಲಿ ಮಕ್ಕಳ ಮೇಲೆ ಹೆಚ್ಚೇನು ದಾಳಿ ನಡೆಸಿದ ಘಟನೆ ಫೆ.18 ವರದಿಯಾಗಿದೆ. ಸುಮಾರು 15 ಮಕ್ಕಳು ಹೆಚ್ಚೇನು ದಾಳಿಯಿಂದ ಅಸ್ವಸ್ಥರಾಗಿದ್ದು ಸ್ಥಳೀಯ ಕ್ಕಕ್ಕಿಂಜೆ ಕೃಷ್ಣ ಆಸ್ಪತ್ರೆಗೆ ದಾಖಲಿಸಲಾಗಿದೆ.ಕಕ್ಕಿಂಜೆ ಮಕ್ಕಳು ಶಾಲೆಯಲ್ಲಿ ಪ್ರೆಯರ್ ಮಾಡಿದ ಬಳಿಕ ಏಕಾಏಕಿ ಹೆಚ್ಚೇನು ದಾಳಿ ನಡೆಸಿದೆ. ಮಕ್ಕಳು ಚಲ್ಲಾಪಿಲ್ಲಿಯಾಗಿ ಓಡಿದ್ದು ಹಲವರಿಗೆ ಹೆಚ್ಚೇನು ಕಚ್ಚಿದೆ. ಮಕ್ಕಳ ಅಳು ಕೇಳಿ ಸ್ಥಳೀಯರು ಶಾಲೆಗೆ ಧಾವಿಸಿದ್ದು ಮಕ್ಕಳನ್ನು ರಕ್ಷಿಸುವ ಪ್ರಯತ್ನ ನಡೆಸಿದ್ದಾರೆ. ಹಲವು ಮಕ್ಕಳಿಗೆ ಈ ವೇಳೆ ಹೆಚ್ಚೇನು ಕಚ್ಚಿದ್ದು

ಶಾಲಾ ಮಕ್ಕಳ ಮೇಲೆ ಹೆಜ್ಜೇನು ದಾಳಿ,ಅಸ್ವಸ್ಥರಾದ ಮಕ್ಕಳು Read More »

ತೊಡಿಕಾನ : ಬಾಳೆಕಜೆ ಕೂಸಕ್ಕ ನಿಧನ

ಸುಳ್ಯ ತಾಲೂಕು ತೊಡಿಕಾನ ಗ್ರಾಮದ ಬಾಳೆಕಜೆ ಶೇಷಪ್ಪ ಗೌಡರ ಧರ್ಮ ಪತ್ನಿ ಕೂಸಕ್ಕ ಫೆ.18ರಂದು ತಮ್ಮ ಮನೆಯಲ್ಲಿ ಅಸೌಖ್ಯದಿಂದ ನಿಧನರಾದರು.ಅವರಿಗೆ 78 ವರ್ಷ ಪ್ರಾಯವಾಗಿತ್ತು.ಅವರು ಪತಿ ಶೇಷಪ್ಪ ಗೌಡ,ಮಗ ಶಶಿಕಾಂತ,ಸೊಸೆ,ಐದು ಮಂದಿ ಹೆಣ್ಣು ಮಕ್ಕಳು,ಸೇರಿದಂತೆ ಮೊಮ್ಮಕ್ಕಳು ಮರಿಮೊಮ್ಮಕ್ಕಳನ್ನು ಕುಟುಂಬಸ್ಥರನ್ನು,ಬಂಧುಗಳನ್ನು ಅಗಲಿದ್ದಾರೆ.

ತೊಡಿಕಾನ : ಬಾಳೆಕಜೆ ಕೂಸಕ್ಕ ನಿಧನ Read More »

ನದಿಗೆ ಹಾರಿ ವ್ಯಕ್ತಿ ಆತ್ಮ ಹತ್ಯೆ

ನೇತ್ರಾವತಿ ನದಿಗೆ ಹಾರಿ ವ್ಯಕ್ತಿ ಆತ್ಮಹ*ತ್ಯೆ ಮಾಡಿಕೊಂಡಿರುವ ಘಟನೆ ಫರಂಗಿಪೇಟೆಯಲ್ಲಿ ನಡೆದಿದೆ.ಪುದು ಗ್ರಾಮದ ಕುಂತ್ಕಳ ನಿವಾಸಿ ನಿತ್ಯಾನಂದ (65) ಆತ್ಮಹತ್ಯೆ ಮಾಡಿಕೊಂಡವರು. ಹಿಂದೆ ಪೈಂಟಿಂಗ್ ಕೆಲಸ ಮಾಡುತ್ತಿದ್ದ ಅವರು 10 ವರ್ಷಗಳಿಂದ ಕೆಲಸ ಮಾಡದೆ ವಿಪರೀತ ಕುಡಿತದ ಚಟ ಹೊಂದಿದ್ದರು.ಫೆ. 16ರಂದು ಕೂಡ ಮಧ್ಯಾಹ್ನ ಮದ್ಯ ಸೇವಿಸಿ ಬಂದು ನದಿಗೆ ಹಾರಿದ್ದಾರೆ. ಅದನ್ನು ಕಂಡು ಸ್ಥಳೀಯ ದೋಣಿಯವರು ರಕ್ಷಿಸಲು ಪ್ರಯತ್ನಿಸಿದ್ದರೂ ಸಾಧ್ಯವಾಗಲಿಲ್ಲ ಎಂದು ಅವರ ಪುತ್ರ ಧನಂಜಯ ದೂರಿನಲ್ಲಿ ತಿಳಿಸಿದ್ದಾರೆ.

ನದಿಗೆ ಹಾರಿ ವ್ಯಕ್ತಿ ಆತ್ಮ ಹತ್ಯೆ Read More »

error: Content is protected !!
Scroll to Top