Author name: Tejas

ಸುಳ್ಯ : ನಾಳೆ ಪವರ್ ಕಟ್

33 ಕಾವು – ಸುಳ್ಯ ಏಕ ಪಥ ವಿದ್ಯುತ್ ಲೈನನ್ನು ಕೌಡಿಚಾರ್ ನಿಂದ ಕಾವು ಜಂಕ್ಷನ್ ವರೆಗೆ ದ್ವಿ ಪಥ ಮಾರ್ಗವನ್ನಾಗಿ ಪರಿವರ್ತಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಫೆ.04ರಂದು ಮಂಗಳವಾರ ಬೆಳಿಗ್ಗೆ 10.00 ರಿಂದ ಸಂಜೆ 6.00 ಗಂಟೆಯವರೆಗೆ ಕಾವು ಮತ್ತು ಸುಳ್ಯ ವಿದ್ಯುತ್ ಸಬ್ ಸ್ಟೇಷನ್ ನಿಂದ ಹೊರಡುವ ಎಲ್ಲಾ 11 ಕೆ.ವಿ. ಫೀಡರ್ ಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುವುದು ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ಸುಳ್ಯ : ನಾಳೆ ಪವರ್ ಕಟ್ Read More »

ಐವರ್ನಾಡು : ಪಂಚಲಿಂಗೇಶ್ವರ ದೇವರ ಜಾತ್ರೋತ್ಸವಕ್ಕೆ ಗೊನೆ ಮೂಹೂರ್ತ

ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ದಲ್ಲಿ ಫೆ. 8, 9, 10 ರಂದು ನಡೆಯುವ ಪ್ರತಿಷ್ಟಾ ವಾರ್ಷಿಕೋತ್ಸವ ಪ್ರಯುಕ್ತ ಫೆ.2 ರಂದು ಬೆಳಿಗ್ಗೆ ಶ್ರೀ ದೇವರಿಗೆ ಮಹಾಪೂಜೆ, ಮಂಗಳಾರತಿಯ ಬಳಿಕ ಅರ್ಚಕರಾದ ರಾಮಚಂದ್ರ ಪಿ.ಜಿ. ಯವರಿಂದ ಗೊನೆ ಕಡಿಯುವ ಮುಹೂರ್ತ ನೆರವೇರಿತು. ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಯ ನೂತನ ಅಧ್ಯಕ್ಷರಾದ ರಾಜೇಶ್ ಭಟ್ ಬಾಂಜಿಕೋಡಿ, ಪೂರ್ವಾಧ್ಯಕ್ಷರಾದ ಶ್ರೀನಿವಾಸ ಮಡ್ತಿಲ, ರಾಜಾರಾಮ ರಾವ್ ಉದ್ದಂಪಾಡಿ, ವೈದಿಕ ಮುಖ್ಯಸ್ಥರು, ವಸಿಷ್ಠ ಭಟ್ ನಾಟಿಕೇರಿ ನರಸಿಂಹ ಭಟ್, ಅರ್ಚಕರ ಸಹಾಯಕರು.

ಐವರ್ನಾಡು : ಪಂಚಲಿಂಗೇಶ್ವರ ದೇವರ ಜಾತ್ರೋತ್ಸವಕ್ಕೆ ಗೊನೆ ಮೂಹೂರ್ತ Read More »

ಉಬೈಸ್ ಗೂನಡ್ಕ ರವರಿಗೆ ರಾಷ್ಟ್ರೀಯ ಪ್ರೇರಣಾ ದೂತ ಪ್ರಶಸ್ತಿ ಪ್ರದಾನ

ಉಬೈಸ್ ಗೂನಡ್ಕ ರವರಿಗೆ ಮೆಡಲ್ ಮತ್ತು ರಾಷ್ಟ್ರೀಯ ಪ್ರೇರಣಾ ದೂತ ಪ್ರಶಸ್ತಿಯನ್ನು ರಾಮಕೃl ಮಠದ ಕಾರ್ಯದರ್ಶಿ ಸ್ವಾಮಿ ಅತಿ ದೇವಾನಂದ ಮಹಾರಾಜ್, ಐಎಎಸ್ ಅಧಿಕಾರಿಗಳು ಮತ್ತು ಬಿಹಾರದ ಮಾಜಿ ಕಾರ್ಮಿಕ ಸಚಿವ ಸುರೇಂದ್ರ ರಾಂ ಅವರಿಂದ ಪ್ರದಾನ ಮಾಡಲಾಯಿತು. ಉಬೈಸ್ ಅವರು ಯೆನೆಪೋಯಾ ವಿಶ್ವವಿದ್ಯಾಲಯದಲ್ಲಿ ಸಕ್ರಿಯ NSS ಸ್ವಯಂಸೇವಕರಾಗಿ, ಚುರುಕು ವಿದ್ಯಾರ್ಥಿಯಾಗಿ ಮತ್ತು ತುರ್ತು ರಕ್ತದಾತರಾಗಿ ವಿಶಿಷ್ಟ ಹೆಸರು ಮಾಡಿದ್ದಾರೆ. ಯೆನಪೋಯಾ ಕಾಲೇಜಿನ ವಿದ್ಯಾರ್ಥಿ ಪರಿಷತ್ ಕಾರ್ಯದರ್ಶಿಯಾಗಿ ಗುರುತಿಸಿಕೊಂಡಿರುವ ಅವರು ರಾಷ್ಟ್ರೀಯ ಶಿಬಿರದಲ್ಲೂ ಭಾಗವಹಿಸಿದ್ದಾರೆ. NSS ಮತ್ತು

ಉಬೈಸ್ ಗೂನಡ್ಕ ರವರಿಗೆ ರಾಷ್ಟ್ರೀಯ ಪ್ರೇರಣಾ ದೂತ ಪ್ರಶಸ್ತಿ ಪ್ರದಾನ Read More »

ಉಬರಡ್ಕ : ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ

ಉಬರಡ್ಕದ ಶ್ರೀ ವೀರಭದ್ರ ದೇವರ ಭಂಡಾರದ ಮನೆಯ ಗೃಹಪ್ರವೇಶ ಮತ್ತು ಶ್ರೀ ದೇವರ ಪ್ರತಿಷ್ಟ್ಯ ಬ್ರಹ್ಮ ಕಲಶೋತ್ಸವದ ಪ್ರಯುಕ್ತ ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ಮಾಚಿದೇವ ಜಯಂತಿ ಆಚರಣೆ ಫೆ.2 ರಂದು ಸಂಜೆ ನಡೆಯಿತು.ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಸುಳ್ಯ ತಾಲೂಕು ಮಡಿವಾಳ ಸಂಘದ ಅಧ್ಯಕ್ಷರಾದ ಲೋಕೇಶ್ ಏನೆಕಲ್ಲು ವಹಿಸಿದ್ದರು.ಉಬರಡ್ಕದ ಶ್ರೀ ನರಸಿಂಹ ದೇವಸ್ಥಾನದ ವ್ಯವಸ್ಥಾಪನ ಸಮಿತಿ ನಿಕಟ ಪೂರ್ವಧ್ಯಕ್ಷ ರತ್ನಕರ ಗೌಡ ಬಳ್ಳಡ್ಕ ಸಭಾ ಕಾರ್ಯಕ್ರಮ ವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.ಸಮೂಹ ಸಂಪನ್ಮೂಲ ವ್ಯಕ್ತಿ

ಉಬರಡ್ಕ : ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ Read More »

ಉಬರಡ್ಕ : ವೀರಭದ್ರ ದೇವರ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಅಂಗವಾಗಿ ಹಸಿರುವಾಣಿ ಮೆರವಣಿಗೆ

ಉಬರಡ್ಕ ಮಿತ್ತೂರಿನ ಹುಳಿಯಡ್ಕ ಶ್ರೀ ವೀರಭದ್ರ ಭಂಡಾರದ ಮನೆ ಚಾರಿಟೇಬಲ್ ಟ್ರಸ್ಟ್ ಇಲ್ಲಿಯ ವೀರಭದ್ರ ದೇವರ ಪ್ರತಿಷ್ಟಾ ಬ್ರಹ್ಮಕಲಶೋತ್ಸವವು ಫೆ.3 ರಂದು ನಡೆಯಲಿದ್ದು, ಇದರ ಪ್ರಯುಕ್ತ ಇಂದು ಬೆಳಿಗ್ಗೆ ಹಸಿರುವಾಣಿ ಮೆರವಣಿಗೆಯು ಕುತ್ತಮೊಟ್ಟೆ ಹೂಪಾರೆಯ ಶ್ರೀ ಅಯ್ಯಪ್ಪ ಶಾಸ್ತಾವು ಭಜನಾ ಮಂದಿರದಿಂದ ಶಂಖನಾದದೊಂದಿಗೆ ಸಾಗಿ ವೀರಭದ್ರ ಕ್ಷೇತ್ರಕ್ಕೆ ತಲುಪಿತು. ನಂತರ ಉಗ್ರಾಣ ತುಂಬಿಸಲಾಯಿತು. ನೂರಾರು ಭಕ್ತರು ಮೆರವಣಿಗೆಯಲ್ಲಿ ಭಾಗವಹಿಸಿದರು. ಸಮಿತಿಯ ಪದಾಧಿಕಾರಿಗಳು ಎಲ್ಲರನ್ನೂ ಸ್ವಾಗತಿಸಿದರು.ಸಂಜೆ ಪೂರ್ಣಕುಂಭ ಸ್ವಾಗತದೊಂದಿಗೆ ತಂತ್ರಿಗಳ ಆಗಮನ, ನಂತರ ದೇವತಾ ಪ್ರಾರ್ಥನೆ, ಆಚಾರ್ಯವರಣ, ಪುಣ್ಯಾಹವಾಚನ,

ಉಬರಡ್ಕ : ವೀರಭದ್ರ ದೇವರ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಅಂಗವಾಗಿ ಹಸಿರುವಾಣಿ ಮೆರವಣಿಗೆ Read More »

ಸಾತ್ವಿಕರಾದ ಮಹಾತ್ಮರ ಬದುಕು ಮಾದರಿಯಾಗಿಸೋಣ – ಶೈಖುನಾ ಉಸ್ಮಾನುಲ್ ಫೈಝಿ ತೋಡಾರ್

ಗೂನಡ್ಕ: ಸಾತ್ವಿಕರಾದ ಔಲಿಯಾಗಳು ಅಲ್ಲಾಹನ ಇಷ್ಟದಾಸರಾಗಿದ್ದಾರೆ. ನೈಜ ವಿಶ್ವಾಸ, ನಿಷ್ಕಳಂಕ ಸತ್ಕರ್ಮಗಳು ಮತ್ತು ಪರಮೋನ್ನತ ಆಧ್ಯಾತ್ಮ ಶಕ್ತಿಗಳ ಮೂಲಕ ಅಲ್ಲಾಹನ ಪ್ರೀತಿ ಪಾತ್ರರಾದ ಇಂತಹ ಮಹಾನುಭಾವರಿಂದ ಈ ಜಗತ್ತಿನಲ್ಲಿ ಧಾರ್ಮಿಕತೆ, ಶಾಂತಿ ಮತ್ತು ನೆಮ್ಮದಿ ನೆಲೆ ನಿಂತಿದೆ. ನೈತಿಕ ಮೌಲ್ಯಗಳೊಂದಿಗೆ ಸಜ್ಜನರಾಗಿ ಬಾಳಲು ನಾವು ಅವರ ಬದುಕನ್ನು ಮಾದರಿಯಾಗಿಸಬೇಕು ಎಂದು ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಶೈಖುನಾ ಉಸ್ಮಾನುಲ್ ಫೈಝಿ ತೋಡಾರ್ ಕರೆ ನೀಡಿದರು. ಇತಿಹಾಸ ಪ್ರಸಿದ್ಧ ಪೇರಡ್ಕ ಗೂನಡ್ಕ ಮಖಾಂ ಉರೂಸಿನ ಎರಡನೇ ದಿನದ ಕಾರ್ಯಕ್ರಮವನ್ನು

ಸಾತ್ವಿಕರಾದ ಮಹಾತ್ಮರ ಬದುಕು ಮಾದರಿಯಾಗಿಸೋಣ – ಶೈಖುನಾ ಉಸ್ಮಾನುಲ್ ಫೈಝಿ ತೋಡಾರ್ Read More »

ಐವರ್ನಾಡು : 17ನೇ ವರ್ಷದ ಸಾಮೂಹಿಕ‌ ಸತ್ಯನಾರಾಯಣ ಪೂಜೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಬೆಳ್ಳಾರೆ ವಲಯ. ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಐವರ್ನಾಡು ಇದರ ಸಹಯೋಗದಿಂದ 17ನೇ ವರ್ಷದ ಸಾಮೂಹಿಕ ಸತ್ಯನಾರಾಯಣ ಪೂಜೆ ಈ ದಿನ ಪಂಚಲಿಂಗೇಶ್ವರ ದೇವಸ್ಥಾನ ಐವರ್ನಾಡು ಸಭಾಂಗಣದಲ್ಲಿ ನಡೆಯಿತು. ಶ್ರೀ ಸತ್ಯನಾರಾಯಣ ಪೂಜೆಗೆ 105 ವೃತದಾರಿಗಳು ಇದ್ದು 620 ಸತ್ಯನಾರಾಯಣ ಪೂಜಾ ಸೇವೆ ಆಗಿರುತ್ತದೆ. ಈ ಪೂಜಾ ಧಾರ್ಮಿಕ ಸಭಾ ಕಾರ್ಯಕ್ರಮವು ಭಕ್ತಾದಿಗಳಿಗೆ ಶ್ರೀ ಶ್ರೀ ಮೋಹನದಾಸ ಸ್ವಾಮೀಜಿ ಶ್ರೀ ಕ್ಷೇತ್ರ ಮಾಣಿಲ ಆಶೀರ್ವಚನ ನೀಡಿದರು.

ಐವರ್ನಾಡು : 17ನೇ ವರ್ಷದ ಸಾಮೂಹಿಕ‌ ಸತ್ಯನಾರಾಯಣ ಪೂಜೆ Read More »

ಸುಳ್ಯ : ಶ್ರದ್ಧಾ ಭಕ್ತಿಯಿಂದ ನಡೆದ ಕಲ್ಕುಡ,ಕಲ್ಲುರ್ಟಿ,ಗುಳಿಗ ದೈವದ ಕೋಲ

ಸುಳ್ಯದ ನಾವೂರು ಕಲ್ಕುಡ ದೈವಸ್ಥಾನದಲ್ಲಿ ಫೆ.2ರಂದು ಕಲ್ಕುಡ ಕಲ್ಲುರ್ಟಿ ಗುಳಿಗ ದೈವದ ಕೋಲ ನಡೆಯಿತು.ಕೋಲದ ಬಳಿಕ ಪ್ರಸಾದ ವಿತರಿಸಲಾಯಿತು.ಮಧ್ಯಾಹ್ಬಅನ್ನಸಂತರ್ಪಣೆ ನಡೆಯಿತು‌.ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಸಮಿತಿಯವರು ಸಾವಿರಾರು ಭಕ್ತರು ಉಪಸ್ಥಿತರಿದ್ದು ದೈವಗಳ ದರ್ಶ‌ನ ಪಡೆದರು.

ಸುಳ್ಯ : ಶ್ರದ್ಧಾ ಭಕ್ತಿಯಿಂದ ನಡೆದ ಕಲ್ಕುಡ,ಕಲ್ಲುರ್ಟಿ,ಗುಳಿಗ ದೈವದ ಕೋಲ Read More »

ಪುತ್ತೂರು : ಲಂಚ ತೆಗೆದುಕೊಂಡರೆ ಚಪ್ಪಲಿಯಲ್ಲಿ ಹೊಡೆಯುತ್ತೇನೆ !

ಪುತ್ತೂರು:ಯಾವುದೇ ಅಧಿಕಾರಿಗಳಾಗಲಿ, ಸಿಬ್ಬಂದಿಗಳಾಗಲಿ ಎಲ್ಲಾದರೂ ನನ್ನ ಹೆಸರು ಹೇಳಿ,ಶಾಸಕರಿಗೆ ಪಾಲು ನೀಡಬೇಕಾಗಿದೆ ಎಂದು ಹೇಳಿ ಜನರಿಂದ ದುಡ್ಡು ತೆಗೆದುಕೊಂಡಿರುವುದು ಗೊತ್ತಾದರೆ ಅಂಥವರಿಗೆ ಚಪ್ಪಲಿಯಲ್ಲಿ ಹೊಡೆಯುತ್ತೇನೆ ಎಂದು ಶಾಸಕ ಅಶೋಕ್‌ ಕುಮಾರ್ ರೈ ಅವರು ಆಕ್ರೋಶ ಭರಿತ ಮಾತುಗಳ ಮೂಲಕ ಎಚ್ಚರಿಕೆ ನೀಡಿದ್ದಾರೆ.ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪುಷ್ಕರಣಿಯ ಬಳಿ ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಶಾಸಕರು ಉತ್ತರಿಸಿದರು.ಸರಕಾರಿ ಆಪ್ ಬಗ್ಗೆ ಗ್ರಾಮ ಆಡಳಿತಾಧಿಕಾರಿಯೋರ್ವರು ಧಿಕ್ಕಾರ ಕೂಗಿದ ವಿಚಾರ ವೈರಲ್ ಆಗಿರುವ ಕುರಿತು ಪತ್ರಕರ್ತರು ಪ್ರಸ್ತಾಪಿಸಿದಾಗ ಪ್ರತಿಕ್ರಿಯಿಸಿದ ಶಾಸಕ ಅಶೋಕ್ ಕುಮಾರ್

ಪುತ್ತೂರು : ಲಂಚ ತೆಗೆದುಕೊಂಡರೆ ಚಪ್ಪಲಿಯಲ್ಲಿ ಹೊಡೆಯುತ್ತೇನೆ ! Read More »

ಉಬರಡ್ಕ : ಫೆ.2ರಿಂದ ವೀರಭದ್ರ ದೇವರ ನೂತನ ದೇವಸ್ಥಾನದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

ಸುಳ್ಯ ತಾಲೂಕಿನ ಉಬರಡ್ಕಮಿತ್ತೂರು ಗ್ರಾಮದ ಹುಳಿಯಡ್ಕದಲ್ಲಿ ನಿರ್ಮಾಣಗೊಂಡಿರುವ ವೀರಭದ್ರ ದೇವರ ನೂತನ ದೇವಸ್ಥಾನದ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಫೆ.2ರಂದು ಆರಂಭಗೊಂಡು ಫೆ.4 ರವರೆಗೆ ನಡೆಯಲಿದೆ.ಫೆ.2 ರಂದು ಬೆಳಗ್ಗೆ ಉಬರಡ್ಕ ಹೂಪಾರೆ (ಕುತ್ತಮೊಟ್ಟೆ) ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ ಬಳಿಯಿಂದ ಹಸಿರುವಾಣಿ ಮೆರವಣಿಗೆ ಆರಂಭಗೊಳ್ಳುವುದು, ಮೆರವಣಿಗೆ ಕ್ಷೇತ್ರಕ್ಕೆ ತಲುಪಿದ ಬಳಿಕ ಉಗ್ರಾಣ ತುಂಬಿಸಲಾಗುವುದು. ಸಂಜೆ ತಂತ್ರಿಗಳ ಆಗಮಣದ ಬಳಿಕ ದೇವತಾ ಪ್ರಾರ್ಥನೆ, ಬಳಿಕ ವಿವಿಧ ವೈದಿಕ ಕಾರ್ಯಗಳು ನಡೆಯುವುದು.ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿರುವುದು, ಫೆ.3ರಂದು ಬೆಳಗ್ಗೆ ಗಣಪತಿ ಹವನ, ಬಳಿಕ

ಉಬರಡ್ಕ : ಫೆ.2ರಿಂದ ವೀರಭದ್ರ ದೇವರ ನೂತನ ದೇವಸ್ಥಾನದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ Read More »

error: Content is protected !!
Scroll to Top