Author name: Tejas

ನಾಲ್ಕು ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದ ದುಷ್ಕರ್ಮಿಗಳ ವಿರುದ್ದ ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ತೀವ್ರ ಖಂಡನೆ

ಬೆಂಗಳೂರಿನಲ್ಲಿ ನಾಲ್ಕು ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದ ದುಷ್ಕರ್ಮಿಗಳು ರಾಕ್ಷಸಿ ಪ್ರವೃತ್ತಿ ಹೊಂದಿದವರು ಎಂದು ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಎಂದು ಹೇಳಿದ್ದಾರೆ.ಜಮೀರ್ ಅಹ್ಮದ ಅವರೇ ಇದು ನಿಮ್ಮ ಕ್ಷೇತದಲ್ಲಾಗಿರುವ ಘಟನೆ ನಾನು ಇದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ತಿಳಿಸಿದ್ದಾರೆ. ಜಮೀರ್ ಅವರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದ್ದಾರೆ.ಹಸುಗಳ ಕೆಚ್ಚಲು ಕೊಯ್ದು ನೀಚರನ್ನು ಬಂಧಿಸಿ ಉಗ್ರ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದರು.ಒಂದು ವೇಳೆ ಈ ಪ್ರಕರಣದಲ್ಲಿ ಬೇಜವಾಬ್ದಾರಿ ಪ್ರದರ್ಶಿಸಿದರೆ ರಾಜ್ಯಾದ್ಯಂತ ಶ್ರೀರಾಮಸೇನೆ ಜಮೀರ್ […]

ನಾಲ್ಕು ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದ ದುಷ್ಕರ್ಮಿಗಳ ವಿರುದ್ದ ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ತೀವ್ರ ಖಂಡನೆ Read More »

ಇಂದು ಸಾರ್ವಜನಿಕ ಭೇಟಿಗೆ ಶಾಸಕರು ಲಭ್ಯರಿಲ್ಲ

ಇಂದು (ಜ.13 ) ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಭಾಗೀರಥಿ ಮುರುಳ್ಯ ಅವರು ಸುಳ್ಯ ಕಛೇರಿಯಲ್ಲಿ ಸಾರ್ವಜನಿಕ ಭೇಟಿಗೆ ಲಬ್ಯರಿರುವುದಿಲ್ಲ. ಕಡಬ ಕಚೇರಿಯಲ್ಲ್ಕಿಯೂ ನಿಗದಿತ ದಿನದಂದು ಶಾಸಕರು ಸಾರ್ವಜನಿಕ ಭೇಟಿಗೆ ಲಭ್ಯರಿರುವುದಿಲ್ಲ.ಭೇಟಿಗೆ ಮುಂದಿನ ದಿನಾಂಕವನ್ನು ತಿಳಿಸಲಾಗುವುದು.

ಇಂದು ಸಾರ್ವಜನಿಕ ಭೇಟಿಗೆ ಶಾಸಕರು ಲಭ್ಯರಿಲ್ಲ Read More »

ತೊಡಿಕಾನ : ವಿಷ್ಣುಮೂರ್ತಿ ದೈವಸ್ಥಾನದ ಜೀರ್ಣೋದ್ಧಾರ ಹಿನ್ನಲೆ ದೇಣಿಗೆ ಸಂಗ್ರಹಕ್ಕೆ ಚಾಲನೆ

ತೊಡಿಕಾನ ಗ್ರಾಮದ ಪಡ್ಪು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯವು ನಡೆಯುತ್ತಿದ್ದು ದೇಣಿಗೆ ಸಂಗ್ರಹ ಕಾರ್ಯಕ್ಕೆ ಜ.12 ದೈವಸ್ಥಾನದಲ್ಲಿ ಪ್ರಾರ್ಥಿಸಿ ಚಾಲನೆ ನೀಡಲಾಯಿತು.ಈ ಸಂದರ್ಭದಲ್ಲಿ ಜೀರ್ಣೊದ್ದಾರ ಸಮಿತಿ ಅಧ್ಯಕ್ಷ ಚಂದ್ರಶೇಖರ ಬಾಳೆಕಜೆ,ಗೌರವ ಸಲಹೆಗಾರರಾದಸಂತೋಷ್ ಕುತ್ತಮೊಟ್ಟೆ,ಕೆ ಕೆ ನಾರಾಯಣ ಕುಂಟುಕಾಡು ಇತರ ಪದಾಧಿಕಾರಿಗಳು,ಬೈಲುವಾರು ಸಮಿತಿಯವರು ಉಪಸ್ಥಿತರಿದ್ದರು.ದೈವಸ್ಥಾನದ ಜೀರ್ಣೊದ್ದಾರ ಕಾರ್ಯಕ್ಕೆ ಊರ ಹಾಗೂ ಪರ ಊರಿನ ದಾನಿಗಳ ಸಹಕಾರ ಅಗತ್ಯವಿದ್ದು ಸಹಕಾರ ನೀಡಬೇಕೆಂದು ಸಮಿತಿಯರು ವಿನಂತಿಸಿಕೊಂಡಿದ್ದಾರೆ. ಬೈಲುವಾರು ಸಮಿತಿಗಳ ಮೂಲಕ ಮನೆವಂತಿಗೆ ಸಂಗ್ರಹ ನಡೆಯುತ್ತಿದೆ.

ತೊಡಿಕಾನ : ವಿಷ್ಣುಮೂರ್ತಿ ದೈವಸ್ಥಾನದ ಜೀರ್ಣೋದ್ಧಾರ ಹಿನ್ನಲೆ ದೇಣಿಗೆ ಸಂಗ್ರಹಕ್ಕೆ ಚಾಲನೆ Read More »

ಪಿಕಪ್ ಬೈಕ್ ಅಪಘಾತ ಬೈಕ್ ಸವಾರ ಗಂಭೀರ

ಸುಳ್ಯ ನಗರದ ಸೋಣಂಗೇರಿ-ಗುತ್ತಿಗಾರು ರಸ್ತೆಯ ಮಿತ್ತಮಜಲು ಬಳಿ ಬೈಕ್‌ -ಪಿಕಪ್ ಅಪಘಾತ ಸಂಭವಿಸಿದ ಘಟನೆ ಭಾನುವಾರ ಸಂಜೆ ವರದಿಯಾಗಿದೆ. ಸೋಣಂಗೇರಿ ಕಡೆಯಿಂದ ದುಗಲಡ್ಕ ಕಡೆಗೆ ಹೋಗುವ ಪಿಕಪ್‌ ಹಾಗೂ ದುಗಲಡ್ಕ ಕಡೆಯಿಂದ ಬರುತ್ತಿದ್ದ ಬೈಕ್‌ ಪರಸ್ಪರ ಡಿಕ್ಕಿ ಹೊಡೆದುಕೊಂಡಿದೆ.ಘಟನೆಯಲ್ಲಿ ಬೈಕ್ ಸವಾರನ ಕಾಲಿಗೆ ಗಂಭೀರ ಗಾಯವಾಗಿದ್ದು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ಕಳುಹಿಸಿ ಕೊಡಲಾಗಿದೆ.

ಪಿಕಪ್ ಬೈಕ್ ಅಪಘಾತ ಬೈಕ್ ಸವಾರ ಗಂಭೀರ Read More »

ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಪ್ರಾರ್ಥನಾ ಪಿ.ಎಸ್ ಉತ್ತಮ ಶ್ರೇಯಾಂಕದೊಂದಿಗೆ ತೇರ್ಗಡೆ

ಬೆಳ್ತಂಗಡಿ: ಕರ್ನಾಟಕ ರಾಜ್ಯ ಡಾ. ಗಂಗೂಬಾಯ್ ಹಾನಗಲ್ ಸಂಗೀತ ಮತ್ತು ನೃತ್ಯ ಪರಿಕರಗಳ ವಿಶ್ವವಿದ್ಯಾನಿಲಯ ಮೈಸೂರು ನಡೆಸಿದ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಬೆಳ್ತಂಗಡಿ ತಾಲೂಕಿನ ಬಂದರು ಪಾನೆಕಲ್ಲು ಪ್ರಾರ್ಥನಾ ಪಿ.ಎಸ್ ಉತ್ತಮ ಶ್ರೇಯಾಂಕದೊಂದಿಗೆ ತೇರ್ಗಡೆಯಾಗಿದ್ದಾರೆ.ಪ್ರಾರ್ಥನಾ ಶ್ರೀ ಶಾರದಾ ಕಲಾ ಕೇಂದ್ರ ಟ್ರಸ್ಟ್ ರಿಜಿಸ್ಟರ್ಡ್ ಪುತ್ತೂರು ಇದರ ನಿರ್ದೇಶಕ ವಿದ್ವಾನ್ ಸುದರ್ಶನ್ ಎಂ. ಎಲ್. ಭಟ್ ಅವರ ಶಿಷ್ಯೆ. ವಿದುಷಿ ಡಿಂಪಲ್ ಶಿವರಾಜ್ ಶ್ರೀ ಶಾರದಾ ಕಲಾ ಶಾಲೆ ಪದ್ಮುಂಜ ಶಾಖೆಯಲ್ಲಿ ನೃತ್ಯಾಭ್ಯಾಸ ಮಾಡುತ್ತಿದ್ದಾರೆ.ಬಂದರು ಸರಕಾರಿ ಹಿರಿಯ ಪ್ರಾಥಮಿಕ

ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಪ್ರಾರ್ಥನಾ ಪಿ.ಎಸ್ ಉತ್ತಮ ಶ್ರೇಯಾಂಕದೊಂದಿಗೆ ತೇರ್ಗಡೆ Read More »

ಬೆಳ್ಳಾರೆಯಲ್ಲಿ ಇಬ್ಬರಿಂದ ರಾತ್ರಿ ಯುವಕನ ಬೈಕ್ ತಡೆದು ಹಲ್ಲೆ

ಬೆಳ್ಳಾರೆ ಪೇಟೆಯಲ್ಲಿ ದುಷ್ಕರ್ಮಿಗಳು ವ್ಯಕ್ತಿಯೊಬ್ಬರ ಮೇಲೆ ರಾಡ್ ನಿಂದ ಹೊಡೆದು ಹಲ್ಲೆ ನಡೆಸಿರುವ ಘಟನೆ ಶನಿವಾರ ತಡ ರಾತ್ರಿ ನಡೆದಿದೆ. ದುಷ್ಕರ್ಮಿಗಳು ಯುವಕನೊಬ್ಬನ ಮೇಲೆ ಮಾರಣಾಂತಿಕ ದಾಳಿ ನಡೆಸಿದ್ದಾರೆದ್ದಾರೆ ಎಂದು ದೂರಲಾಗಿದೆ.ಅಜರುದ್ದೀನ್ ಮತ್ತು ಜಮಾಲ್ ಬೆಳ್ಳಾರೆ ಪೇಟೆಯಲ್ಲಿ ಆಶೀರ್ ಎಂಬ ಯುವಕ ಬೈಕ್ ನಲ್ಲಿ ತೆರಳುತ್ತಿದ್ದಾಗ ಕಬ್ಬಿಣದ ರಾಡಿನಿಂದ ತಲೆಗೆ ಹೊಡೆದು ಗಾಯಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ.ಗಾಯಾಳು ಯುವಕನನ್ನು ಪೊಲೀಸರು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಬೆಳ್ಳಾರೆಯಲ್ಲಿ ಇಬ್ಬರಿಂದ ರಾತ್ರಿ ಯುವಕನ ಬೈಕ್ ತಡೆದು ಹಲ್ಲೆ Read More »

ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಜ್ಞಾನಶ್ರೀ ಪಿ.ಎಸ್ ಉತ್ತಮ ಶ್ರೇಯಾಂಕದೊಂದಿಗೆ ತೇರ್ಗಡೆ

ಬೆಳ್ತಂಗಡಿ: ಕರ್ನಾಟಕ ರಾಜ್ಯ ಡಾ. ಗಂಗೂಬಾಯ್ ಹಾನಗಲ್ ಸಂಗೀತ ಮತ್ತು ನೃತ್ಯ ಪರಿಕರಗಳ ವಿಶ್ವವಿದ್ಯಾನಿಲಯ ಮೈಸೂರು ನಡೆಸಿದ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಬೆಳ್ತಂಗಡಿ ತಾಲೂಕಿನ ಬಂದರು ಗ್ರಾಮದ ಪಾನೆಕಲ್ಲಿನ ಜ್ಞಾನಶ್ರೀ ಪಿ.ಎಸ್ ಉತ್ತಮ ಶ್ರೇಯಾಂಕದೊಂದಿಗೆ ತೇರ್ಗಡೆಯಾಗಿದ್ದಾರೆ. ಜ್ಞಾನಶ್ರೀ ಶ್ರೀ ಶಾರದಾ ಕಲಾ ಕೇಂದ್ರ ಟ್ರಸ್ಟ್ ರಿಜಿಸ್ಟರ್ಡ್ ಪುತ್ತೂರು ಇದರ ನಿರ್ದೇಶಕ ವಿದ್ವಾನ್ ಸುದರ್ಶನ್ ಎಂ. ಎಲ್. ಭಟ್ ಅವರ ಶಿಷ್ಯೆ. ವಿದುಷಿ ಡಿಂಪಲ್ ಶಿವರಾಜ್ ಶ್ರೀ ಶಾರದಾ ಕಲಾ ಶಾಲೆ ಪದ್ಮುಂಜ ಶಾಖೆಯಲ್ಲಿ ನೃತ್ಯಾಭ್ಯಾಸ ಮಾಡುತ್ತಿದ್ದಾಳೆ.ಬಂದರು ಪೆರ್ಲ

ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಜ್ಞಾನಶ್ರೀ ಪಿ.ಎಸ್ ಉತ್ತಮ ಶ್ರೇಯಾಂಕದೊಂದಿಗೆ ತೇರ್ಗಡೆ Read More »

ಸುಳ್ಯ ಜೂನಿಯರ್ ಕಾಲೇಜಿಗೆ ಪಾತ್ರಾಭಿನಯದಲ್ಲಿ ರಾಷ್ಟ್ರ ಮಟ್ಟದ ಪ್ರಶಸ್ತಿ,ಸಾಧಕರಿಗೆ ಬಸ್ಸು ನಿಲ್ದಾಣದಲ್ಲಿ ಭವ್ಯ ಸ್ವಾಗತ ಕೋರಿದ ಶಿಕ್ಷಕರು ಹೆತ್ತವರು

ರಾಷ್ಟ್ರೀಯ ಜನಸಂಖ್ಯಾ ಶಿಕ್ಷಣ ಯೋಜನೆಯಡಿ ( NPEP) ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನಡೆದ ರಾಷ್ಟ್ರ ಮಟ್ಟದ ಪಾತ್ರಾಭಿನಯ ಸ್ಪರ್ಧೆಯಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯ ದ್ವಿತೀಯ ಸ್ಥಾನ ಪಡೆದು ವಿಶೇಷ ಸಾಧನೆ ಮಾಡಿದೆ. ಸಮೂಹ ಮಾಧ್ಯಮಗಳ ಸುರಕ್ಷಿತ ಬಳಕೆ ಎಂಬ ವಿಷಯದ ಮೇಲೆ ಆಂಗ್ಲ ಭಾಷಾಯಲ್ಲಿ ಪ್ರಸ್ತುತ ಪಡೆಸಿದ ಪಾತ್ರಾಭಿನಯವನ್ನು ಸಂಸ್ಥೆಯ ಉಪಪ್ರಾಂಶುಪಾಲರಾದ ಪ್ರಕಾಶ ಮೂಡಿತ್ತಾಯ ಇವರು ರಚಿಸಿ ನಿರ್ದೇಶನ ಮಾಡಿದ್ದರು. ಒಂಭತ್ತನೇ ತರಗತಿ ವಿದ್ಯಾರ್ಥಿಗಳಾದ ಪೌರ್ಣಮಿ ಕೆ, ಹಿಮಾದ್ರಿ ಸಿ.ಎಮ್., ತನ್ವಿ ಕೆ.ಟಿ., ಅಶ್ವಿತಾ

ಸುಳ್ಯ ಜೂನಿಯರ್ ಕಾಲೇಜಿಗೆ ಪಾತ್ರಾಭಿನಯದಲ್ಲಿ ರಾಷ್ಟ್ರ ಮಟ್ಟದ ಪ್ರಶಸ್ತಿ,ಸಾಧಕರಿಗೆ ಬಸ್ಸು ನಿಲ್ದಾಣದಲ್ಲಿ ಭವ್ಯ ಸ್ವಾಗತ ಕೋರಿದ ಶಿಕ್ಷಕರು ಹೆತ್ತವರು Read More »

ದುಗ್ಗಲಡ್ಕ; ಕೊಯಿಕುಳಿ ಶಾಲಾ ವಠಾರ ಮತ್ತು ನೀರಬಿದಿರೆ ಪ್ರದೇಶಕ್ಕೆ ವಿದ್ಯುತ್ ಟೌನ್ ಫೀಡರ್ ನ ವಿಸ್ತ್ರತ ಸಂಪರ್ಕ ಕಾರ್ಯಾರಂಭ: ಎಸ್ ಸಂಶುದ್ದಿನ್ ರವರಿಂದ ಚಾಲನೆ

ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ಕೊಯಿಕುಳಿ ವಾರ್ಡ್ ನ ಕೊಯಿಕುಳಿ ಶಾಲಾ ವಠಾರ ನೀರಬಿದಿರೆ ಪ್ರದೇಶದ ಸುಮಾರು 30 ಮನೆಗಳಿಗೆ ಟೌನ್ ಫೀಡರ್ ನಿಂದ ಸಂಪರ್ಕ ಕಲ್ಪಿಸುವ ಕಾರ್ಯಕ್ಕೆ ಜ.10ರಂದು ಚಾಲನೆ ನೀಡಲಾಯಿತು. ಕೊಯಿಕುಳಿ ಶಾಲಾ ಬಳಿ ನಿರ್ಮಿಸಲಾದ ನೂತನ ಟಿ.ಸಿ.ಬಳಿಯಲ್ಲಿ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಸ್.ಸಂಶುದ್ದೀನ್ ಚಾಲನೆ ನೀಡಿ ಮಾತನಾಡಿ 2013ರಲ್ಲಿ ಈ ಯೋಜನೆ ಮಂಜೂರಾಗಿದ್ದು, ಅದು ದುಗ್ಗಲಡ್ಕದ ವರೆಗೆ ಅನುಷ್ಠಾನ ಗೊಂಡಿತ್ತು. ಆದರೆ ಈ ಪ್ರದೇಶಕ್ಕೆ ವಿಸ್ತರಣೆ ಯಾಗಿರಲಿಲ್ಲ. 2023ರಲ್ಲಿ ಜಿಲ್ಲಾ ಉಸ್ತುವಾರಿ

ದುಗ್ಗಲಡ್ಕ; ಕೊಯಿಕುಳಿ ಶಾಲಾ ವಠಾರ ಮತ್ತು ನೀರಬಿದಿರೆ ಪ್ರದೇಶಕ್ಕೆ ವಿದ್ಯುತ್ ಟೌನ್ ಫೀಡರ್ ನ ವಿಸ್ತ್ರತ ಸಂಪರ್ಕ ಕಾರ್ಯಾರಂಭ: ಎಸ್ ಸಂಶುದ್ದಿನ್ ರವರಿಂದ ಚಾಲನೆ Read More »

ಸಂಪಾಜೆ ಧರ್ಮೋತ್ಥಾನ ಪರಿಷತ್ ವತಿಯಿಂದ ನಡೆಯಲಿದೆ “ಬೃಹತ್ ಹಿಂದೂ ಸಮಾಜೋತ್ಸವ,ಹಿಂದು ಮುಖಂಡರಿಂದ ಸಭೆ,ಸಾವಿರಾರು ಹಿಂದುಗಳ ಸಂಘಮಕ್ಕೆ ಸಾಕ್ಷಿಯಾಗಲಿದೆ ಹಿಂದು ಸಮಾಜೋತ್ಸವ!

. ಕಲ್ಲುಗುಂಡಿ ಶ್ರೀ ದುರ್ಗಾಪರಮೇಶ್ವರಿ ಮಂದಿರದಲ್ಲಿ ಕಲ್ಲುಗುಂಡಿ, ಚೆಂಬು, ಮತ್ತು ಸಂಪಾಜೆ ಗ್ರಾಮದ ಪ್ರಮುಖರು ಸೇರಿ ಬೃಹತ್ ಹಿಂದೂ ಸಮಾಜೋತ್ಸವ ನಡೆಸುವ ಕುರಿತು ಸಮಾಲೋಚನೆ ಸಭೆ ನಡೆಸಿದರು . ವಿಚಾರ ಮಂಡನೆ ಸೇರಿದಂತೆ , ರಮಾದೇವಿ ಕಳಗಿ, ರಾಜ ಗೋಪಾಲ ಉಳುವಾರು , ಮಾಧವ ಪೇರಾಲು , ಶ್ರೀಧರ ದುಗ್ಗಳ ಮುಂತಾದವರು ಕಾರ್ಯ ಯೋಜನೆ ಕುರಿತು ಚರ್ಚಿಸಿದರು . ಯಶೋಧರ ಬಿ . ಜೆ ., ಮೋಹನ್ ಚೈಪೆ, ಸುಧಾಕರ ಪೆಲ್ತಡ್ಕ, ಶಿವಪ್ರಸಾದ್ ಗೂನಡ್ಕ, ಹೇಮನಾಥ ಕಡೆಪಾಲ,

ಸಂಪಾಜೆ ಧರ್ಮೋತ್ಥಾನ ಪರಿಷತ್ ವತಿಯಿಂದ ನಡೆಯಲಿದೆ “ಬೃಹತ್ ಹಿಂದೂ ಸಮಾಜೋತ್ಸವ,ಹಿಂದು ಮುಖಂಡರಿಂದ ಸಭೆ,ಸಾವಿರಾರು ಹಿಂದುಗಳ ಸಂಘಮಕ್ಕೆ ಸಾಕ್ಷಿಯಾಗಲಿದೆ ಹಿಂದು ಸಮಾಜೋತ್ಸವ! Read More »

error: Content is protected !!
Scroll to Top