Author name: Tejas

ಸುಳ್ಯ ಗಾಂಧಿನಗರ ಭಾಗದಲ್ಲಿ ಶಂಕಿತ ಹುಚ್ಚು ನಾಯಿ ತಿರುಗಾಟ,ಆತಂಕದಲ್ಲಿ ಜನರು,ವಿದ್ಯಾರ್ಥಿಗಳು !

ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ಗಾಂಧಿನಗರ ಕಾಯರತೋಡಿ ಭಾಗದಲ್ಲಿ ಶಂಕಿತ ಹುಚ್ಚು ನಾಯಿಯೊಂದು ಕಾಣಿಸಿಕೊಂಡಿದ್ದು ಜನರು,ವಿದ್ಯಾರ್ಥಿಗಳು ಆತಂಕದಲ್ಲಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.ಗಾಂಧಿನಗರದ ಕೆಲವು ಬೀದಿ ನಾಯಿಗಳಿಗೆ ಈ ಹುಚ್ಚು ನಾಯಿ ಕಚ್ಚಿದ್ದು ಇನ್ನಷ್ಟು ಹುಚ್ಚು ನಾಯಿಗಳು ಕಾಣಿಸಿಕೊಳ್ಳಲಿದೆ.ಸುಳ್ಯ ನಗರ ಪಂಚಾಯತ್ ಈ ಬಗ್ಗೆ ಗಮನ ಹರಿಸಿ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಸುಳ್ಯ ಗಾಂಧಿನಗರ ಭಾಗದಲ್ಲಿ ಶಂಕಿತ ಹುಚ್ಚು ನಾಯಿ ತಿರುಗಾಟ,ಆತಂಕದಲ್ಲಿ ಜನರು,ವಿದ್ಯಾರ್ಥಿಗಳು ! Read More »

ಡಾ.  ಅನುರಾಧಾ ಕುರುಂಜಿಯವರಿಗೆ “ಚೈತನ್ಯ ಶ್ರೀ- 2024” ಪ್ರಶಸ್ತಿ ಪ್ರದಾನ

ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್ತ್ ನವರು ಪ್ರಥಮ ಬಾರಿಗೆ ಕೊಡಮಾಡಿದ ಪ್ರತಿಷ್ಠಿತ “ಚೈತನ್ಯ ಶ್ರೀ- 2024” ಪ್ರಶಸ್ತಿ ಪ್ರದಾನ ಸಮಾರಂಭವು ಬೆಂಗಳೂರಿನ ಯಲಹಂಕದ ವಿ ಜೆ ಇಂಟರ್ ನ್ಯಾಷನಲ್ ಶಾಲಾ ಮೈದಾನದಲ್ಲಿ ಜನವರಿ 3 ಮತ್ತು 4 ರಂದು ನಡೆದ ರಾಜ್ಯ ಮಟ್ಟದ ನಾಲ್ಕನೇ ಬೃಹತ್ ವೈಜ್ಞಾನಿಕ ಸಮ್ಮೇಳನದಲ್ಲಿ ನಡೆಯಿತು. ಈ ಪ್ರಶಸ್ತಿಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಪ್ರಥಮ ಬಾರಿಗೆ ಭಾಜನರಾದ ಸುಳ್ಯದ ಬಹುಮುಖ ಸಾಧಕಿ ಡಾ. ಅನುರಾಧಾ ಕುರುಂಜಿಯವರಿಗೆ ಶೈಕ್ಷಣಿಕ ಕ್ಷೇತ್ರದ ಸಾಧನೆಗಾಗಿ ನಟಿ ಉಮಾಶ್ರೀಯವರು

ಡಾ.  ಅನುರಾಧಾ ಕುರುಂಜಿಯವರಿಗೆ “ಚೈತನ್ಯ ಶ್ರೀ- 2024” ಪ್ರಶಸ್ತಿ ಪ್ರದಾನ Read More »

ಕುಕ್ಕುಡೇಲು ಶೀನಪ್ಪ ಗೌಡ ನಿಧನ

ಮಂಡೆಕೋಲು ಗ್ರಾಮದ ಪೇರಾಲು ಕುಕ್ಕುಡೇಲು ನಿವಾಸಿ ಶೀನಪ್ಪ ಗೌಡರು ಜ.4ರಂದು ಮುಂಜಾನೆ ನಿಧನರಾದರು.ಅವರಿಗೆ 87 ವರ್ಷ ಪ್ರಾಯವಾಗಿತ್ತು.ಡಿ.4ರಂದು ಮುಂಜಾನೆ ಅಸ್ವಸ್ಥಗೊಂಡ ಅವರನ್ನು ಮನೆಯವರು ಸುಳ್ಯ ಆಸ್ಪತ್ರೆಗೆ ಕರೆತಂದರಾದರೂ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದರು.ಕೃಷಿಕರಾಗಿದ್ದ ಅವರು ಪತ್ನಿ ಗಿರಿಜಾ, ಪುತ್ರರಾದ ನವೀನ್ ಕುಮಾರ್ ಕುಕ್ಕುಡೇಲು, ಉದಯಕುಮಾರ್ ಕುಕ್ಕುಡೇಲು, ಪುತ್ರಿಯರಾದ ಗೀತಾಂಜಲಿ, ತಾರಕೇಶ್ವರಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಕುಕ್ಕುಡೇಲು ಶೀನಪ್ಪ ಗೌಡ ನಿಧನ Read More »

ಬೆಳ್ಳಾರೆ ಕೆಪಿಎಸ್ ವಸಂತ ಸಂಭ್ರಮ ಕಾರ್ಯಕ್ರಮ ಒಂದು ಮಾದರಿ ಕಾರ್ಯಕ್ರಮ : ಮೋಹನ್ ಆಳ್ವ

ಬೆಳ್ಳಾರೆ ಕೆಪಿಎಸ್ ನಲ್ಲಿ ಶಿಕ್ಷಣ ಸಂಸ್ಥೆಗಳ ವಸಂತ ಸಂಭ್ರಮ ಯಶಸ್ವಿಯಾಗಿ ನಡೆದಿದೆ.ಇದೊಂದು ಮಾದರಿ ಕಾರ್ಯಕ್ರಮ.ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಂತದ ಶಿಕ್ಷಣ ಗಟ್ಟಿಯಾಗಬೇಕು.ಆಗ ಮುಂದಿನ ಶಿಕ್ಷಣ ಗಟ್ಟಿಯಾಗುತ್ತದೆ.ಆರೋಗ್ಯ ಮತ್ತು ವಿದ್ಯೆ ಇದ್ದರೆ ಜನರು ನಾಡಿನಲ್ಲಿ ಪ್ರಬುದ್ಧರಾಗಲು ಸಾಧ್ಯ.ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣದ ಬಗ್ಗೆ ಮೌನ ಕ್ರಾಂತಿ ನಡೆಯಬೇಕು.ಕನ್ನಡ ಮಾಧ್ಯಮವನ್ನು ಬಲಾಡ್ಯವಾಗಿ ಕಟ್ಟುವ ಅಗತ್ಯ ನಮ್ಮ ನಿಮ್ಮ ನಮ್ಮೇಲ್ಲರ ಹೊಣೆಯಾಗಿದೆ. ಕನ್ನಡ ಮಾಧ್ಯಮದ ಬಗ್ಗೆ ಕೀಳರಿಮೆ ಇಟ್ಟುಕೊಳ್ಳಬಾರದು ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮೋಹನ ಆಳ್ವರವರು ಹೇಳಿದರುಅವರು ಬೆಳ್ಳಾರೆ ಕರ್ನಾಟಕ ಪಬ್ಲಿಕ್

ಬೆಳ್ಳಾರೆ ಕೆಪಿಎಸ್ ವಸಂತ ಸಂಭ್ರಮ ಕಾರ್ಯಕ್ರಮ ಒಂದು ಮಾದರಿ ಕಾರ್ಯಕ್ರಮ : ಮೋಹನ್ ಆಳ್ವ Read More »

ಹಣ ಮಾಡುವುದೇ ಬದುಕಲ್ಲ !

ಕೋಟಿಗಟ್ಟಲೆ ಆಸ್ತಿ, ಉದ್ಯಮಿ ಮಗ, ಲಾಯರ್‌ ಪುತ್ರಿಯನ್ನು ಹೊಂದಿರುವ ಲೇಖಕರೊಬ್ಬರು ವೃದ್ದಾಶ್ರಮದಲ್ಲಿದ್ದುಕೊಂಡು ಅನಾಥರಾಗಿ ಜೀವ ತೆತ್ತ ಸುದ್ದಿಯೊಂದು ಹಲವರ ಮನಸ್ಸನ್ನು ಘಾಸಿಗೊಳಿಸಿತ್ತು. ಜೊತೆಗೆ ತಮ್ಮ ಮಕ್ಕಳ ಲಕ್ಷ ಲಕ್ಷ ಪ್ಯಾಕೇಜ್‌ಗಳ ಬಗ್ಗೆ ಬಿಲ್ಡಪ್‌ ಕೊಡುವ ಹೆತ್ತವರಿಗೆ ಇದೊಂದು ಎಚ್ಚರಿಕೆ ಗಂಟೆಯೂ.ಹಣ ಕಂಡರೆ ಹೆಣವೂ ಬಾಯಿ ಬಿಡುತ್ತದೆ ಎಂಬ ಮಾತೊಂದಿದೆ. ಲಕ್ಷಾಂತರ ರೂಪಾಯಿ ವ್ಯಯಿಸಿ ಮಕ್ಕಳನ್ನು ಪ್ರತಿಷ್ಠಿತ ಕಾಲೇಜುಗಳಲ್ಲಿ ಓದಿಸುವ ಹೆತ್ತವರು, ಆ ಮಕ್ಕಳಿಗೆ ಹೇಳಿ ಕೊಡುವುದು ಲಕ್ಷ ಎಣಿಸುವ ದಾರಿಗಳ ಬಗ್ಗೆಯೇ ಹೊರತು ಬದುಕುವ ಕಲೆಯ ಬಗ್ಗೆಯಲ್ಲ.

ಹಣ ಮಾಡುವುದೇ ಬದುಕಲ್ಲ ! Read More »

ಸುಳ್ಯ ಕೆ.ಎಸ್ .ಆರ್.ಟಿ ಸಿ ಬಸ್ ನಿಲ್ದಾದ ಶೌಚಾಲಯಕ್ಕೆ ತೆರಳುವ ಮಹಿಳೆಯರೇ ಎಚ್ಚರ ! ಶೌಚಾಲಯದ ಕಿಟಕಿ ಮೂಲಕ ಪೊಟೋ ತೆಗೆಯುವ ವಿಕ್ರತ ಕಾಮಿಗಳಿದ್ದಾರೆ ಹುಷಾರ್!

ಸುಳ್ಯ ಕೆಎಸ್‌ಆರ್ಟಿಸಿ ಬಸ್ ನಿಲ್ದಾಣದ ಮಹಿಳಾ ಶೌಚಾಲಯದಲ್ಲಿ ಮಹಿಳೆಯೊಬ್ಬರು ಇದ್ದಾಗ ಕಿಟಕಿ ಮೂಲಕ ಯಾರೋ ಫೋಟೋ ತೆಗೆದು ಪರಾರಿಯಾಗಿರುವ ಘಟನೆ ಶನಿವಾರ ರಾತ್ರಿ ವರದಿಯಾಗಿದೆ. ಕಿಟಕಿಯ ಗ್ಲಾಸ್ ಸರಿಸಿ ಫೋಟೋವನ್ನು ಕ್ಲಿಕ್ಕಿಸಿದ್ದಾನೆ ಎಂದು ತಿಳಿದು ಬಂದಿದೆ.ಮಹಿಳೆ ಈ ಘಟನೆಯನ್ನು ಮತ್ತು ಆತನ ಕೈಯನ್ನು ನೋಡಿದ್ದು ಈ ಸಂಧರ್ಭ ಮಹಿಳೆ ಜೋರಾಗಿ ಕಿರುಚಿಕೊಂಡಾಗ ಆತ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.ಮಹಿಳೆ ಸುಳ್ಯಠಾಣೆಗೆ ದೂರು ನೀಡಿದ್ದಾರೆ.

ಸುಳ್ಯ ಕೆ.ಎಸ್ .ಆರ್.ಟಿ ಸಿ ಬಸ್ ನಿಲ್ದಾದ ಶೌಚಾಲಯಕ್ಕೆ ತೆರಳುವ ಮಹಿಳೆಯರೇ ಎಚ್ಚರ ! ಶೌಚಾಲಯದ ಕಿಟಕಿ ಮೂಲಕ ಪೊಟೋ ತೆಗೆಯುವ ವಿಕ್ರತ ಕಾಮಿಗಳಿದ್ದಾರೆ ಹುಷಾರ್! Read More »

ಮದೆನಾಡಿನಲ್ಲಿ ಕಾರು ಪಲ್ಟಿ

ಚಾಲಕನ ನಿಯಂತ್ರಣ ಕಾರೊಂದು ರಸ್ತೆ ಬದಿಯ ತೋಡಿಗೆ ಮಗುಚಿ ಬಿದ್ದ ಘಟನೆ ಮದೆನಾಡಿನಲ್ಲಿ ಭಾನುವಾರ ವರದಿಯಾಗಿದೆ.ಬೆಂಗಳೂರಿನಿಂದ ಮಂಗಳೂರು ಕಡೆ ತೆರಳುತ್ತಿದ್ದ ಕಾರು, ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. ಯಾವುದೇ ಪ್ರಾಣಾಪಾಯ ಹಾಗೂ ಗಾಯಗಳು ಸಂಭವವಿಸಿರುವುದಿಲ್ಲ ಎಂದು ತಿಳಿದು ಬಂದಿದೆ.ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.

ಮದೆನಾಡಿನಲ್ಲಿ ಕಾರು ಪಲ್ಟಿ Read More »

ನಮ್ಮ ಸನಾತನ ಸಂಸ್ಕೃತಿ ನಾವು ಮರೆಯಬಾರದು : ಶ್ರೀ ಮಾತಾನಂದಮಯಿ

ತಾಯಿ ಭಾರತ ಮಾತೆಗೆ ತಾಯಿಯ ಸ್ಥಾನವಿದೆ.ತ್ಯಾಗ, ಸೇವೆ ಭಾರತದ ಆದರ್ಶಗಳಲ್ಲಿ ಒಂದು. ಸನಾತನ ಸಂಸ್ಕೃತಿ ನಮ್ಮ ಸಂಸ್ಕೃತಿಯನ್ನು ನಾವು ಮರೆಯಬಾರದು. ನಮ್ಮತನ ಮರೆತರೆ ನಮಗೆ ಭವಿಷ್ಯವಿಲ್ಲ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಸಾದ್ವಿ ಶ್ರೀ ಮಾತಾನಂದಮಯಿಯವರು ನುಡಿದರು.ಶ್ರೀ ಮಹಿಷಮರ್ದಿನೀ ದೇವಸ್ಥಾನ ಕೇರ್ಪಡ ಇಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯುತ್ತಿದ್ದು ಇದರ ಅಂಗವಾಗಿಪ್ರಯುಕ್ತ ಜ. ೩ರಂದು ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರುಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷೆ ಹಾಗೂ ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸಿದ್ದರು.ಧಾರ್ಮಿಕ ಉಪನ್ಯಾಸ ನೀಡಿದ

ನಮ್ಮ ಸನಾತನ ಸಂಸ್ಕೃತಿ ನಾವು ಮರೆಯಬಾರದು : ಶ್ರೀ ಮಾತಾನಂದಮಯಿ Read More »

ಸ್ಕೂಟಿ ಸವಾರನ ಮೇಲೆ ಕಾಡಾನೆ ದಾಳಿ,ಆಸ್ಪತ್ರೆಗೆ ದಾಖಲು,ಜಖಂಗೊಂಡ ಸ್ಕೂಟಿ

ತನ್ನ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಕಾಡಾನೆಯೊಂದು ದಾಳಿ ಮಾಡಿದ ಘಟನೆ ದೇವರ ಕೊಲ್ಲಿಯಲ್ಲಿ ಜ.4 ರಂದು ನಡೆದಿದೆ.ದೇವರಕೊಲ್ಲಿಯ ಸ್ಥಳೀಯ ನಿವಾಸಿ ಮುತ್ತು ಕಾಡಾನೆ ದಾಳಿಗೊಳಗಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಅವರು ಎಸ್ಟೇಟ್ ನಲ್ಲಿ ರಾತ್ರಿ ವಾಚೆನ್ ಕೆಲಸ ಮಾಡುತ್ತಿದ್ದು, ಬೆಳಗ್ಗೆ ಸ್ಕೂಟಿಯಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಕಾಡಾನೆಯೊಂದು ದಿಡೀರ್ ದಾಳಿ ಮಾಡಿದೆ. ಅದೃಷ್ಟವಶಾತ್ ಗಾಯಾಳು ಓಡಿ ತಪ್ಪಿಸಿಕೊಂಡು ಸಣ್ಣ ಪುಟ್ಟ ಗಾಯಗಳೊಂದಿಗೆ. ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಸ್ಕೂಟಿ ಜಖಂಗೊಂಡಿದೆ. ಮುತ್ತು ಅವರನ್ನು ಮಡಿಕೇರಿ ಸರಕಾರಿ

ಸ್ಕೂಟಿ ಸವಾರನ ಮೇಲೆ ಕಾಡಾನೆ ದಾಳಿ,ಆಸ್ಪತ್ರೆಗೆ ದಾಖಲು,ಜಖಂಗೊಂಡ ಸ್ಕೂಟಿ Read More »

ಪೆರಾಜೆ : ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ನೂತನ ರಾಜಗೋಪುರದ ಉದ್ಘಾಟನಾ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ

ಸುಳ್ಯ ಸಮೀಪದ ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಜ. ೩೦ರಂದು ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ನೂತನ ರಾಜಗೋಪುರದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಇದರ ಆಮಂತ್ರಣ ಪತ್ರ ಬಿಡುಗಡೆ ಜ.4ರಂದು ದೇವಳದ ವಠಾರದಲ್ಲಿ ನಡೆಯಿತು.ದೇವತಕ್ಕರಾದ ರಾಮಕಜೆ ರಾಜಗೋಪಾಲರವರು ಆಮಂತ್ರ ಪತ್ರ ಬಿಡುಗಡೆಗೊಳಿಸಿದರು.ಈ ಸಂದರ್ಭದಲ್ಲಿ ಆಡಳಿತ ಮೊಕೇಸರರಾದ ಜಿತೇಂದ್ರ ನಿಡ್ಯಮಲೆ, ಆಡಳಿತ ಕಾರ್ಯದರ್ಶಿ ತೇಜಪ್ರಸಾದ್ ಅಮೆಚೂರು, ಸಹಕಾರ್ಯದರ್ಶಿ ಚಿನ್ನಪ್ಪ ಅಡ್ಕ, ಮಾಜಿ ಮೊಕೇಸರುಗಳಾದ ನಾಗೇಶ್ ಕುಂದಲ್ಪಾಡಿ, ಲೋಕನಾಥ ಅಮೆಚೂರು, ಸುರೇಶ್ ಪೆರುಮುಂಡ, ನಂಜಪ್ಪ ನಿಡ್ಯಮಲೆ, ಪದ್ಮಯ್ಯಕೆ.ಎಸ್., ಜೋಯಪ್ಪ ನಿಡ್ಯಮಲೆ, ಆ‌ರ್.ಡಿ.ಆನಂದ,

ಪೆರಾಜೆ : ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ನೂತನ ರಾಜಗೋಪುರದ ಉದ್ಘಾಟನಾ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ Read More »

error: Content is protected !!
Scroll to Top