Author name: Tejas

ಆನ್‌ಲೈನ್‌ ವಂಚಕರ ದಿನಕ್ಕೊಂದು ತಂತ್ರ-ಬಲಿಯಾದಿರಿ ಜೋಕೆ!

ಪತ್ರಿಕೋದ್ಯಮ ಬಿಟ್ಟು ನನ್ನದೇ ಸ್ವಂತ ಏನಾದರೂ ಮಾಡಬೇಕೆಂಬ ತುಡಿತದೊಂದಿಗೆ ಆನ್‌ಲೈನ್‌ ಉದ್ಯಮಕ್ಕಿಳಿದ ಆರಂಭದ ದಿನಗಳವು. ನನ್ನಂತೆ ನೂರಾರು ಮಂದಿ ಯುವತಿಯರು, ಮಹಿಳೆಯರು ಮನೆಯಲ್ಲೇ ತಯಾರಿಸಿದ ಉತ್ಪನ್ನಗಳನ್ನು ಆನ್‌ಲೈನ್‌ ಮೂಲಕ ಮಾರಾಟ ಮಾಡುತ್ತಿದ್ದುದರಿಂದ ನಾನೂ ಅವರಂತಾಗಬೇಕು ಎಂಬ ಹಂಬಲ ಬಲವಾಗಿತ್ತು. ಹಾಗಾಗಿ ನನ್ನ ಕನಸಿನ ನನಸಿಗಾಗಿ ಫೇಸ್ಬುಕ್‌, ವಾಟ್ಸಾಪ್‌ನಂತಹ ಸಾಮಾಜಿಕ ಜಾಲತಾಣಗಳನ್ನು ಆಯ್ಕೆ ಮಾಡಿಕೊಂಡಿದ್ದೆ.ಮದುವೆ, ಮಗು ಆದ ಮೇಲೆ ಮನೆಯಲ್ಲಿ ಕುಳಿತಿರಬಾರದು, ಅವರಿವರ ಬಾಯಿಗೆ ಆಹಾರವಾಗಬಾರದು ಎಂಬುದು ಜಾಗೃತ ಮನಸ್ಸಿನ ಪ್ರತಿ ಬಾರಿಯ ಎಚ್ಚರಿಕೆ. ಉತ್ಪನ್ನಗಳ ಮಾರಾಟದ ಬಗ್ಗೆ […]

ಆನ್‌ಲೈನ್‌ ವಂಚಕರ ದಿನಕ್ಕೊಂದು ತಂತ್ರ-ಬಲಿಯಾದಿರಿ ಜೋಕೆ! Read More »

ಕೊಡಗಿನ ವೀರ ಯೋಧ ದಿವಿನ್ ಹುತಾತ್ಮ

ಜಮ್ಮು ಕಾಶ್ಮೀರದಲ್ಲಿ ನಡೆದ ಸೇನಾ ವಾಹನ ಅಪಘಾತದಲ್ಕಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೊಡಗಿನ ವೀರ ಯೋಧ ಕೊಡಗು ಜಿಲ್ಲೆಯ ಆಲೂರು ಸಿದ್ದಾಪುರದ ದಿವಿನ್( 28 ವರ್ಷ) ಹುತಾತ್ಮರಾಗಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ನಡೆದ ಸೇನಾ ವಾಹನ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಆಲೂರು ಸಿದ್ದಾಪುರ ಗ್ರಾಮದ ಸೈನಿಕಪಳಂಗೋಟಿ ದಿವಿನ್ ರವರಿಗೆ ಶ್ರೀನಗರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.ದಿವಿನ್ ತಾಯಿ ಜಯ ಕೂಡ ಆಸ್ಪತ್ರೆ ತಲುಪಿದ್ದರು.ಶ್ವಾಸಕೋಶಕ್ಕೆ ತೀವ್ರ ಹಾನಿ ಆದ ಹಿನ್ನಲೆ ಇಂದು ರಾತ್ರಿ ಧಿವಿನ್ ಕೊನೆಯುಸಿರು ಎಳೆದಿದ್ದಾರೆ.ತಂದೆ

ಕೊಡಗಿನ ವೀರ ಯೋಧ ದಿವಿನ್ ಹುತಾತ್ಮ Read More »

ಸಂಪಾಜೆ ಕಾರುಗಳ ನಡುವೆ ಭೀಕರ ಅಪಘಾತ, ಗಂಭೀರ ಗಾಯಗೊಂಡ ಗಾಯಾಳು ಮಂಗಳೂರಿಗೆ ಶಿಪ್ಟ್

ಸಂಪಾಜೆ ಗ್ರಾಮದ ಗಡಿಕಲ್ಲು ಬಳಿ ಕಾರುಗಳ ನಡುವೆ ಭೀಕರ ಅಪಘಾತ ನಡೆದು ಕಾರು ಸವಾರರಿಗೆ ಗಂಭೀರ ಗಾಯವಾದ ಘಟನೆ ಭಾನುವಾರ ವರದಿಯಾಗಿದೆ. ಮಡಿಕೇರಿ ಕಡೆಯಿಂದ ಮಂಗಳೂರಿಗೆ ಹೋಗುತ್ತಿದ್ದ ಕಾರೊಂದು ಸಂಪಾಜೆ ಗಡಿಕಲ್ಲು ಎಂಬಲ್ಲಿ ಇನ್ನೊಂದು ಕಾರಿಗೆ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದೆ.ಪರಿಣಾಮವಾಗಿ ಎರಡು ಕಾರುಗಳು ಜಖಂಗೊಂಡಿದೆ.ಗಂಭೀರ ಗಾಯಗೊಂಡ ಗಾಯಾಳುವನ್ನು ಸುಳ್ಯದಿಂದ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಸಂಪಾಜೆ ಕಾರುಗಳ ನಡುವೆ ಭೀಕರ ಅಪಘಾತ, ಗಂಭೀರ ಗಾಯಗೊಂಡ ಗಾಯಾಳು ಮಂಗಳೂರಿಗೆ ಶಿಪ್ಟ್ Read More »

ರಾಮಾನಾಥ ಅಡ್ಯಡ್ಕ ನಿಧನ

ಸುಳ್ಯ ತಾಲೂಕು ತೊಡಿಕಾನ ಗ್ರಾಮದ ಅಡ್ಯಡ್ಕ ಸಿ. ಆರ್.ಸಿ ಕಾಲೋನಿಯ ರಾಮಾನಾಥ ಅಡ್ಯಡ್ಕ ರವರು ಅಲ್ಪ ಕಾಲದ ಅಸೌಖ್ಯದಿಂದ ಡಿ. 28 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 53 ವರ್ಷ ವಯಸ್ಸಾಗಿತ್ತು.ಮೃತರು ಪತ್ನಿ ಮುನಿಯಮ್ಮ ಪುತ್ರರಾದ ಭುವನ್, ಜೀವನ್, ಪ್ರತುಲ್ ಅವರನ್ನು ಅಗಲಿದ್ದಾರೆ.

ರಾಮಾನಾಥ ಅಡ್ಯಡ್ಕ ನಿಧನ Read More »

ಜೋಡುಪಾಲ: ಲಾರಿಗೆ ಬೆಂಕಿ ಹತ್ತಿಕೊಂಡು ಹೊತ್ತಿ ಉರಿದ ಲಾರಿ

ಕೊಡಗು ಜಿಲ್ಲೆಯ ಜೋಡುಪಾಲ ಸಮೀಪ ಡಿ. 29 ತಡ ರಾತ್ರಿಯಲ್ಲಿ ಈಚರ್ ಲಾರಿಯೊಂದಕ್ಕೆ ಆಕಸ್ಮಿಕ ಬೆಂಕಿ ಹತ್ತಿಕೊಂಡು ಲಾರಿ ಹೊತ್ತಿ ಉರಿದ ಘಟನೆ ಇಂದು ಮುಂಜಾನೆ ವರದಿಯಾಗಿದೆ.ಹೆಚ್ ಡಿ ಕೋಟೆಯಿಂದ ಭತ್ತದ ಲೋಡ್ ಉಡುಪಿಗೆ ಸಾಗಿಸುತ್ತಿದ್ದ ವೇಳೆ ಏಕಾ ಏಕಿ ಲಾರಿಗೆ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ. ಇದನ್ನು ಗಮನಿಸಿದ ಚಾಲಕ ಹಾಗೂ ಕ್ಲೀನರ್ ಲಾರಿಯನ್ನು ರಸ್ತೆ ಪಕ್ಕ ನಿಲ್ಲಿಸಿ, ಕೆಳಗಿಳಿದಿದ್ದಾರೆ.ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.

ಜೋಡುಪಾಲ: ಲಾರಿಗೆ ಬೆಂಕಿ ಹತ್ತಿಕೊಂಡು ಹೊತ್ತಿ ಉರಿದ ಲಾರಿ Read More »

ಜ.5ಕ್ಕೆ ಗೂನಡ್ಕದಲ್ಲಿ ತಾಲೂಕು ಮಟ್ಟದ ಹಾಗೂ ರಾಜ್ಯ ರಾಜ್ಯಮಟ್ಟದ ದಫ್ ಸ್ಪರ್ಧೆ

ಸುಳ್ಯ ತಾಲೂಕಿನ ಸಂಪಾಜೆ ಗ್ರಾಮ ದ ಮುಹಿಯ್ಯದ್ದೀನ್ ರಿಪಾಯಿ ದಫ್ ಅಸೋಸಿಯೇಶನ್ ಪೇರಡ್ಕ, ತೆಕ್ಕಿಲ್ ಸಮೂಹ ಶಿಕ್ಷಣ ಸಂಸ್ಥೆಗಳು ಗೂನಡ್ಕ, ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ, ಸಿ. ಕೆ. ಲೆಜೆಂಡ್ಸ್ ಕಲ್ಲುಗುಂಡಿ, ತಾಲೂಕು ಮುಸ್ಲಿಂ ಫೆಡರೇಷನ್‌ ಹಾಗು ಇತರ ಸಂಘ ಸಂಸ್ಥೆಗಳ ಸಹಕಾರದಲ್ಲಿ ಸುಳ್ಯ ತಾಲೂಕು ಮಟ್ಟದ ಹಾಗೂ ರಾಜ್ಯ ರಾಜ್ಯಮಟ್ಟದ ದಫ್ ಸ್ಪರ್ಧೆ ಜ.5ರಂದು ಗೂನಡ್ಕದ ಸಜ್ಜನ ಸಭಾ ಭವನದಲ್ಲಿ ನಡೆಯಲಿದೆ ಎಂದುಧಪ್ ಸ್ಪರ್ಧೆಯ ಸಂಘಟನಾ ಸಮಿತಿಯ ಪದಾಧಿಕಾರಿಗಳು ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಅವರು ಸುಳ್ಯ ಪ್ರೆಸ್‌

ಜ.5ಕ್ಕೆ ಗೂನಡ್ಕದಲ್ಲಿ ತಾಲೂಕು ಮಟ್ಟದ ಹಾಗೂ ರಾಜ್ಯ ರಾಜ್ಯಮಟ್ಟದ ದಫ್ ಸ್ಪರ್ಧೆ Read More »

ಗೋಕುಲದಾಸ್ ಅವರ ತೆರೆಮರೆಯ ಸಮಾಜ ಸೇವೆ ಸಮಾಜಕ್ಕೆ ಮಾದರಿ : ಸವಣೂರು ಸೀತಾರಾಮ ರೈ

ಯಾವುದೇ ಫಲಾಪೇಕ್ಷೆ ಬಯಸದೆ ಗೋಕುಲದಾಸರ ಸಮಾಜ ಸೇವೆ ಸಮಾಜಕ್ಕೆ ಮಾದರಿಯಾಗಿದೆ. ಅವರ ಸೇವೆಗೆ ತಕ್ಕ ಪ್ರತಿಫಲ ದೊರೆತ್ತಿರುವುದು ಸಂತೋಷ ನೀಡಿದೆ ಎಂದು ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕರಾದ ಸಹಕಾರ ರತ್ನ ಹಿರಿಯ ಸಹಕಾರಿ ಸೀತಾರಾಮ ರೈ ಹೇಳಿದ್ದಾರೆ.ಅವರು ಡಿ.28ರಂದು ಸುಳ್ಯದ ಲಯನ್ಸ್ ಸೇವಾ ಸದನದಲ್ಲಿ ನಡೆದ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತಸಿ ಕೆ.ಗೋಕುಲ್‌ದಾಸ್ ಅಭಿನಂದನಾ ಸಮಿತಿ ಮತ್ತು ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿರುವ ಕೆ.ಗೋಕುಲ್‌ದಾಸ್ ಅವರಿಗೆ ಸಾರ್ವಜನಿಕ ಅಭಿನಂದನಾ ಸಮಾರಂಭ

ಗೋಕುಲದಾಸ್ ಅವರ ತೆರೆಮರೆಯ ಸಮಾಜ ಸೇವೆ ಸಮಾಜಕ್ಕೆ ಮಾದರಿ : ಸವಣೂರು ಸೀತಾರಾಮ ರೈ Read More »

ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಜ.03,4 ಮತ್ತು 5 ರಂದು ವಸಂತ ಸಂಭ್ರಮ ಕಾರ್ಯಕ್ರಮ

ಸುಳ್ಯ ತಾಲೂಕಿನ ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಜ.03,4 ಮತ್ತು 5 ರಂದು ವಸಂತ ಸಂಭ್ರಮ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಲಿದೆ.ವಸಂತ ಸಂಭ್ರಮ ಸಮಿತಿಯ ಸಂಚಾಲಕ ಎಸ್.ಎನ್ ಮನ್ಮಥ ಮತ್ತು ಅಧ್ಯಕ್ಷೆ ರಾಜೀವಿ ರೈ ಯವರು ಹೇಳಿದರು. ಪ್ರಾಥಮಿಕ ಶಾಲಾ ವಿಭಾಗದ ಶತಮಾನೋತ್ತರ’, ಪ್ರೌಢಶಾಲಾ ವಿಭಾಗದ ‘ಅಮೃತ’ ಪದವಿಪೂರ್ವ ಕಾಲೇಜಿನ ‘ಸ್ವರ್ಣ ಸಂಭ್ರಮ’ ಕಾರ್ಯಕ್ರಮ ಒಟ್ಟಾಗಿ ವಸಂತ ಸಂಭ್ರಮ ಸಂಭ್ರಮಿಸಲಿದೆ. ಮೂರು ದಿನವೂ ಬೆಳಿಗ್ಗೆಯಿಂದ ರಾತ್ರಿವರೆಗೆ ನಿರಂತರ ಕಾರ್ಯಕ್ರಮಗಳ ನಡೆಯಲಿದೆ ಎಂದುಅವರು ಡಿ.28 ರಂದು ಬೆಳ್ಳಾರೆ ಕೆ.ಪಿ.ಎಸ್.ನಲ್ಲಿ

ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಜ.03,4 ಮತ್ತು 5 ರಂದು ವಸಂತ ಸಂಭ್ರಮ ಕಾರ್ಯಕ್ರಮ Read More »

ಗಿರಿಧರ ಕುಂಟುಕಾಡು ನಿಧನ

ಸುಳ್ಯ ತಾಲೂಕಿನ ತೊಡಿಕಾನ ಗ್ರಾಮದ ಕುಂಟುಕಾಡು ಮುದ್ದಪ್ಪ ಗೌಡರ ಮಗ ಗಿರೀಧರ ಅಲ್ಪಕಾಲದ ಅಸೌಖ್ಯದಿಂದ ಡಿ.28ರಂದು ನಿಧನರಾದರು. ಅವರಿಗೆ 55 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ರಾಜೇಶ್ವರಿ, ಇಬ್ಬರು ಸಹೋದರರು, ಇಬ್ಬರು ಸಹೋದರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಗಿರಿಧರ ಕುಂಟುಕಾಡು ನಿಧನ Read More »

ಅರಂತೋಡು-ತೊಡಿಕಾನ ಸೊಸೈಟಿ ಚುನಾವಣೆ:ಸಹಕಾರ ಭಾರತಿಗೆ ಕ್ಲೀನ್ ಸ್ವೀಪ್

ಸುಳ್ಯ : ಅರಂತೋಡು- ತೊಡಿಕಾನ ಪ್ರಾಥಮಿಕ ಕೃಷಿ ಪತ್ತನ ಸಹಕಾರ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಗೆಲುವು ದಾಖಲಿಸಿದ್ದಾರೆ. ಆಡಳಿತ ಮಂಡಳಿಯ ಎಲ್ಲಾ 12 ನಿರ್ದೇಶಕ ಸ್ಥಾನಗಳಲ್ಲಿಯೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.ಸಂತೋಷ್ ಕುತ್ತಮೊಟ್ಟೆ, ದಯಾನಂದ ಕುರುಂಜಿ, ಚಂದ್ರಶೇಖರ ಚೋಡಿಪಣೆ, ಶಿವಾನಂದ‌ ಕುಕ್ಕುಂಬಳ, ಉದಯಕುಮಾರ್ ಉಳುವಾರು, ಶ್ರೀಲತಾ ದೇರಾಜೆ, ಲೋಚನ ಕೊಳಲುಮೂಲೆ, ಚಂದ್ರಶೇಖರ ಎ.ಎಸ್, ಡಾ.ಲಕ್ಷ್ಮೀಶ ಕಲ್ಲುಮುಟ್ಲು, ದಿನೇಶ್ ಅರಮನೆಗಯ, ಹಾಗೂ ಪ್ರಶಾಂತ ಕಾಪಿಲ ಗೆಲುವು ಸಾಧಿಸಿದ್ದಾರೆ.

ಅರಂತೋಡು-ತೊಡಿಕಾನ ಸೊಸೈಟಿ ಚುನಾವಣೆ:ಸಹಕಾರ ಭಾರತಿಗೆ ಕ್ಲೀನ್ ಸ್ವೀಪ್ Read More »

error: Content is protected !!
Scroll to Top