Author name: Tejas

ಮಂಡೆಕೋಲಿನಲ್ಲಿ ಆಕರ್ಷಕ ಮೆರವಣಿಗೆಯೊಂದಿಗೆ ಅರೆಭಾಷೆ ಗಡಿನಾಡ ಉತ್ಸವಕ್ಕೆ ಚಾಲನೆ

ಕರ್ನಾಟ ಅರೆಬಾಷೆ ಸಂಸ್ಕ್ರತಿ ಸಾಹಿತ್ಯ ಅಕಾಡೆಮಿ ನೇತೃತ್ವದಲ್ಲಿ ಮಂಡೆಕೋಲು ಗ್ರಾಮ ಗೌಡ ಸಮಿತಿ ಇವರ ಸಹಕಾರದಲ್ಲಿ ಅರೆಭಾಷೆ ಗಡಿನಾಡ ಉತ್ಸವವು ಡಿಸೆಂಬರ್ 1ರಂದು ಮಂಡೆಕೋಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ‘ಅಮೃತ ಸಭಾಭವನದಲ್ಲಿ ಅದ್ದೂರಿಯಾಗಿ ಚಾಲನೆಗೊಂಡಿದೆ. ಅರಂಭದಲ್ಲಿ ಆಕರ್ಷಕ ಮೆರವಣಿಗೆ ನಡೆಯಿತು. ‘ಫಾರೆಸ್ಟ್ ಬಂಗಲೆ ಬಳಿಯಿಂದ ಆರಂಭಗೊಂಡಿತು. ಮೆರವಣಿಗೆಯನ್ನು ಪ್ರಗತಿಪರ ಕೃಷಿಕ ಹಾಗೂ ಸಾಮಾಜಿಕ ಧುರೀಣ ಕುಶಾಲಪ್ಪ ಗೌಡ ಕುಕ್ಕೇಟಿ ಉದ್ಘಾಟಿಸಿದರು. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಹಾಗೂ […]

ಮಂಡೆಕೋಲಿನಲ್ಲಿ ಆಕರ್ಷಕ ಮೆರವಣಿಗೆಯೊಂದಿಗೆ ಅರೆಭಾಷೆ ಗಡಿನಾಡ ಉತ್ಸವಕ್ಕೆ ಚಾಲನೆ Read More »

ಗಾಂಜಾ ಸೇವೆನೆ ಮತ್ತು ಮಾರಾಟ ಪ್ರಕರಣ ನಾಲ್ವರ ಬಂಧನ

ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ಜಯನಗರದಲ್ಲಿ ನಿಷೇಧಿತ ಅಮಲು ಪದಾರ್ಥ ಗಾಂಜ ಸೇವನೆ ಮತ್ತು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ಪೊಲೀಸ್‌ ಅಧಿಕಾರಿಗಳು ದಾಳಿ ನಡೆಸಿ ಗಾಂಜಾ ಮಾರಾಟ ಮಾಡುತ್ತಿದ್ದ ಒರ್ವನನ್ನು ಗಾಂಜಾ ಸೇವೆನೆ ಮಾಡಿದ ಮೂವರನ್ನು ಕರೆತಂದಿದ್ದು ಆರೋಗ್ಯ ತಪಾಸಣೆ ನಡೆಸಲಾಗಿದೆ. ಎಂದು ತಿಳಿದುಬಂದಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

ಗಾಂಜಾ ಸೇವೆನೆ ಮತ್ತು ಮಾರಾಟ ಪ್ರಕರಣ ನಾಲ್ವರ ಬಂಧನ Read More »

ಡಿ.7ಕ್ಕೆ ಸುಳ್ಯದಲ್ಲಿ ಮಾಜಿ ಸಚಿವ ಎಸ್‌.ಅಂಗಾರರ ನೇತೃತ್ವದಲ್ಲಿ ದೀನದಯಾಳ್ ಸಹಕಾರ ಸಂಘ ಶುಭಾರಂಭ

ಮಾಜಿ ಸಚಿವ ಎಸ್‌.ಅಂಗಾರರ ನೇತೃತ್ವದಲ್ಲಿ ದೀನದಯಾಳ್ ಸಹಕಾರ ಸಂಘ ಡಿ.7ರಂದು ಸುಳ್ಯದ ಟಿ.ಎ.ಪಿ.ಸಿ.ಎಂ.ಎಸ್‌. ಬಿಲ್ಡಿಂಗ್ ಇದರ 2 ನೇ ಮಹಡಿಯಲ್ಲಿ ಶುಭಾರಂಭಗೊಳ್ಳಲಿದೆ.ಅಂಗಾರ ಅವರು ನೂತನ ಸಹಕಾರ ಸಂಘ ಆರಂಭದ ಕುರಿತು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ಕರೆದು ಮಾಹಿತಿ ನೀಡಿದರು.ನೂತನ ಸಹಕಾರ ಸಂಘವನ್ನು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಉದ್ಘಾಟಿಸಲಿದ್ದಾರೆ. ಸಂಸದ ಕ್ಯಾ.ಬ್ರಿಜೀಶ್ ಚೌಟ, ಶಾಸಕಿ ಭಾಗೀರಥಿ ಮುರುಳ್ಯ, ವಿಧಾನ ಪರಿಷತ್‌ ಸದಸ್ಯರುಗಳಾದ ಕಿಶೋರ್ ಕುಮಾರ್, ಮಂಜುನಾಥ ಭಂಡಾರಿ, ಮಾಜಿ ಸಂಸದ ನಳಿನ್

ಡಿ.7ಕ್ಕೆ ಸುಳ್ಯದಲ್ಲಿ ಮಾಜಿ ಸಚಿವ ಎಸ್‌.ಅಂಗಾರರ ನೇತೃತ್ವದಲ್ಲಿ ದೀನದಯಾಳ್ ಸಹಕಾರ ಸಂಘ ಶುಭಾರಂಭ Read More »

ಚಿಕ್ಕಿ ತಿಂದ 46 ವಿದ್ಯಾರ್ಥಿಗಳು ಅಸ್ವಸ್ಥ..!

‘ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಕೋಣನಕುರಿಕೆ ಎಂಬಲ್ಲಿ ಶಾಲೆಯಲ್ಲಿ ಶೇಂಗಾ ಚಿಕ್ಕಿ ತಿಂದು ಸುಮಾರು 46 ವಿದ್ಯಾರ್ಥಿಗಳು ವಾಂತಿ ಮಾಡಿಕೊಂಡು ಅಸ್ವಸ್ಥರಾಗಿರುವ ಘಟನೆ ವರದಿಯಾಗಿದೆ. ಮಧ್ಯಾಹ್ನ ಬಿಸಿ ಊಟದ ವೇಳೆ ಚಿಕ್ಕಿ ನೀಡಲಾಗಿತ್ತು.ಪರಿಣಾಮವಾಗಿ 46 ವಿದ್ಯಾರ್ಥಿಗಳು ವಾಂತಿ ಮಾಡಿಕೊಂಡು ಅಸ್ವಸ್ಥರಾಗಿದ್ದಾರೆ. ಈ ವಿದ್ಯಾರ್ಥಿಗಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ತಹಶೀಲ್ದಾ‌ರ್ ವರದರಾಜು, ಬಿಇಒ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಚಿಕ್ಕಿ ತಿಂದ 46 ವಿದ್ಯಾರ್ಥಿಗಳು ಅಸ್ವಸ್ಥ..! Read More »

ಸಂಪಾಜೆ : ತಂಬಾಕು ಕಾರ್ಯಾಚರಣೆ

ಸಂಪಾಜೆ ಗ್ರಾಮದ ಕಲ್ಲುಗುಂಡಿ ಪೇಟೆಯ ಅಂಗಡಿಗಳಲ್ಲಿ ನ.29ರಂದು ತಂಬಾಕು ಕಾರ್ಯಾಚರಣೆ ನಡೆಸಲಾಯಿತು. ತಾಲೂಕು ಆರೋಗ್ಯಾಧಿಕಾರಿ ಢಾ.ನಂದಕುಮಾರ್, ಸುಳ್ಯ ಫೋಲಿಸ್ ಠಾಣೆಯ ಉಪನೀರಿಕ್ಷಕರಾದ ಸಂತೋಷ್, ಸಂಪಾಜೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಸರಿತ ಓಲ್ಗಾ ಡಿಸೋಜ, ಕಲ್ಲುಗುಂಡಿ ಹೊರಠಾಣೆಯ ಸಹಾಯಕ ಉಪನೀರಿಕ್ಷರಾದ ತಾರನಾಥ್, ಬೀಟ್ ಪೋಲಿಸ್ ರಾಜು ಆರೋಗ್ಯ ಇಲಾಖೆಯ ಆಶಿಕ್ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಮತ್ತು ರಾಜಶೇಖರ್ ತಾಲೂಕು ಲೇಖಪತ್ರ ವ್ಯವಸ್ಥಾಪಕ ಹಾಗೂ ಚಂದ್ರಪ್ಪ ಆರೋಗ್ಯ ನಿರೀಕ್ಷಣಾಧಿಕಾರಿ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.

ಸಂಪಾಜೆ : ತಂಬಾಕು ಕಾರ್ಯಾಚರಣೆ Read More »

ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಗೆ ಜೈಲು ಶಿಕ್ಷೆ ವಿಧಿಸಿ ತೀರ್ಪು

ಪುತ್ತೂರು : ಪುತ್ತೂರಿನ ಮೊಟೆತ್ತಡ್ಕದಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಅಪರಾಧಿಗೆ ಪುತ್ತೂರು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 5 ವರ್ಷ ಜೈಲು ಶಿಕ್ಷೆ 40 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.ಮೊಟೆತ್ತಡ್ಕ ಮಸೀದಿ ಬಳಿಯ ನಿವಾಸಿ ಅಬ್ದುಲ್ ರಹಿಮಾನ್ ಜೈಲು ಶಿಕ್ಷೆಗೆ ಒಳಗಾದ ಆರೋಪಿ2016ರ ನ. 18ರಂದು ಕೆಮ್ಮಿಂಜೆ ಗ್ರಾಮದ ಮೊಟ್ಟೆತಡ್ಕದಲ್ಲಿ ಅಬ್ದುಲ್ ರಹಿಮಾನ್ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ. ಈ ಬಗ್ಗೆ ಬಾಲಕಿ ದೂರು ನೀಡಿದ್ದು, ಪುತ್ತೂರು ನಗರ ಪೊಲೀಸ್‌

ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಗೆ ಜೈಲು ಶಿಕ್ಷೆ ವಿಧಿಸಿ ತೀರ್ಪು Read More »

(ಕವನ) ಉತ್ತರದ ದೋಣಿ

ಹೊರಟಿಹರೆಲ್ಲರು ಪ್ರಶ್ನೆಗಳ ಹಿಂದೆ… ಉತ್ತರ ಸಿಗಬಹುದೆಂಬ ನಂಬಿಕೆಯು ಮುಂದೆ…ಮೌನವೆಂಬ ಸಾಗರದಿ ಕಣ್ಮರೆಯಾದ ಮುತ್ತಿನಂತೆ… ಪ್ರೀತಿಯ ಅಮಲಿನಲಿ ಮುಳುಗಡೆಯಾದ ಮನದಂತೆ…ಮಳೆಹನಿಯ ಬಿಂದುವಿನಲ್ಲಿ ಹೊಮ್ಮಿದ ಹೊಳಪಂತೆ… ಅಗ್ನಿಯ ಜ್ವಾಲೆಯಲಿ ಬೂದಿಯಾದ ನೆನಪುಗಳಂತೆ…ಮುಳ್ಳುಗಳ ಹಾದಿಯು ಹಬ್ಬಿಹುದು ಕಡಲಾಚೆಗೆ…ದಾಟಲು ಮನ ತವಕಿಸುವುದು ದಿನ ಬೆಳಗೆ…ನಿನ್ನೆಯ ರಾತ್ರಿಗಳೆಲ್ಲ ನೆನಪಿನ ಗೊಂಚಲುಗಳು…ಮುಂದಿನ ಪುಟಗಳಿಗೆ ನಂಬಿಕೆಯ ಮಹಲುಗಳು…ಮನವೆಲ್ಲ ಮುದುಡಿಹುದು ಸಂಜೆಯ ಅಂಬುಜದಂತೆ..ಕನಸೆಲ್ಲ ಅರಳಿಹುದು ಹೊರಬಿದ್ದ ಮುತ್ತಿನಂತೆ…ಉತ್ತರಗಳಿಗು ಪ್ರಶ್ನೆಯೇ ಜೀವನದ ಉತ್ತರವೂ…ಕಟ್ಟಿಟ್ಟ ಬುತ್ತಿಯು ನೆನೆಸದ ಮರಣವೂ… ನಡೆಯುತ್ತಿರು ನೀನು ನೆನಪುಗಳ ಹಿಂದೆ…ದಡ ಸೇರುವುದು ದೋಣಿ ಉತ್ತರಗಳು ನಿನ್ನ ಮುಂದೆ!!!✍️-

(ಕವನ) ಉತ್ತರದ ದೋಣಿ Read More »

ಐವರ್ನಾಡು : 350ನೇ ಸ್ವಸಹಾಯ ಸಂಘ ಉದ್ಘಾಟನೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಸುಳ್ಯ ತಾಲೂಕು ಬೆಳ್ಳಾರೆ ವಲಯದ 350 ನೇ ಸ್ವಸಹಾಯ ಸಂಘವನ್ನು ಐವರ್ನಾಡು ಕಾರ್ಯಕ್ಷೇತ್ರದಲ್ಲಿ ಹೊಸ ಸ್ವಸಹಾಯ ಸಂಘ “ನೇಸರ” ಸಂಘವನ್ನು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಚಂದ್ರಲಿಂಗಂ ಬೆಂಗಮಲೆ ಅವರು ಉದ್ಘಾಟನೆ ಮಾಡಿ ಮಾನ್ಯ ಯೋಜನಾಧಿಕಾರಿ ಅವರು ಸ್ವಸಹಾಯ ಸಂಘದ ನಿಯಮವಳಿಗಳ ಬಗ್ಗೆ ಸಂಕ್ಷಿಪ್ತ ವಾಗಿ ಮಾಹಿತಿ ನೀಡಿ ದಾಖಲಾತಿ ಹಸ್ತಾತಂತರ ಮಾಡಿದರು. ವಲಯ ಅಧ್ಯಕ್ಷ ವೇದಾ ಶೆಟ್ಟಿ ,ವಲಯದ ಮೇಲ್ವಿಚಾರಕರು ವಿಶಾಲ ಕೆ ಸೇವಾಪ್ರತಿನಿಧಿ ರಶ್ಮಿತಾ ಸ್ವಸಹಾಯ ಸಂಘದ

ಐವರ್ನಾಡು : 350ನೇ ಸ್ವಸಹಾಯ ಸಂಘ ಉದ್ಘಾಟನೆ Read More »

ನಾಳೆ ಸಾರ್ವಜನಿಕರ ಭೇಟಿಗೆ ಸಂಸದ ಬ್ರಿಜೇಶ್ ಚೌಟ ಲಭ್ಯ

ಮಂಗಳೂರು: ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ನ.30ರ ಶನಿವಾರ ಬೆಳಗ್ಗೆ 8.30 ಗಂಟೆಯಿಂದ 10.30 ಗಂಟೆಯವರೆಗೆ ಸಾರ್ವಜನಿಕರ ಭೇಟಿಗೆ ತಮ್ಮ ಕಚೇರಿಯಲ್ಲಿ ಲಭ್ಯವಿರುತ್ತಾರೆ ಅವರ ಮಂಗಳೂರು ಕಚೇರಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.ನಾಗರಿಕರು ತಮ್ಮ ಅಹವಾಲುಗಳೊಂದಿಗೆ ಮಂಗಳೂರಿನ ಜಿಲ್ಲಾಧಿಕಾರಿ ಸಂಕೀರ್ಣದಲ್ಲಿರುವ ಸಂಸದರ ಕಚೇರಿಗೆ ಬಂದು ಚೌಟ ಅವರನ್ನು ಖುದ್ದು ಭೇಟಿ ಮಾಡಬಹುದು. ಆ ಮೂಲಕ ಸಾರ್ವಜನಿಕರು ತಮ್ಮ ಕುಂದು-ಕೊರತೆಗಳನ್ನು ಗಮನಕ್ಕೆ ತರಬಹುದಾಗಿದೆ.

ನಾಳೆ ಸಾರ್ವಜನಿಕರ ಭೇಟಿಗೆ ಸಂಸದ ಬ್ರಿಜೇಶ್ ಚೌಟ ಲಭ್ಯ Read More »

ಮರದಿಂದ ಬಿದ್ದು ಗಂಭೀರ ಗಾಯಗೊಂಡ ವ್ಯಕ್ತಿ ಸಾವು

ಸುಳ್ಯ ತಾಲೂಕಿನ ದೇವಚಳ್ಳ ಗ್ರಾಮದ ಮಾವಿನಕಟ್ಟೆ ಸಮೀಪ ಮರದಿಂದ ಬಿದ್ದು ಗಂಭೀರ ಗಾಯಗೊಂಡು ವ್ಯಕ್ತಿ ಸಾವನ್ನಪ್ಪಿದ ಘಟನೆ ನ.29 ನಡೆದಿದೆ.ಮೃತಪಟ್ಟ ವ್ಯಕ್ತಿಯನ್ನು ಕೊಡಗಿನ ಸಿದ್ದಾಪುರ ಕೃಷ್ಣ ಎಂದು ಗುರುತಿಸಲಾಗಿದ್ದು ಅವರಿಗೆ 55 ವರ್ಷ ಪ್ರಾಯವಾಗಿತ್ತು. ಸಂಬಂಧಿಕರ ಮನೆಗೆ ಕೆಲಸಕ್ಕೆಂದು ಬಂದಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಆಸ್ಪತ್ರೆ ತಲುಪುತ್ತಿದ್ದಂತೆ ಸಾವನ್ನಪ್ಪಿದರು.

ಮರದಿಂದ ಬಿದ್ದು ಗಂಭೀರ ಗಾಯಗೊಂಡ ವ್ಯಕ್ತಿ ಸಾವು Read More »

error: Content is protected !!
Scroll to Top