Author name: Tejas

ಮುಡಾ ಹಗರಣ ವಿಚಾರಣೆ ಬಳಿಕ ಸಿದ್ದರಮಾಯ್ಯ ಹೇಳಿದ್ದೇನು ಗೊತ್ತಾ?

ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಇಂದು ಮೈಸೂರು ಲೋಕಾಯುಕ್ತ ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯ 2 ಗಂಟೆ ವಿಚಾರಣೆ ಎದುರಿಸಿದ್ದರು. ಈ ವೇಳೆ ನಗುಮುಖದಿಂದಲೇ ಕಚೇರಿಯಿಂದ ಹೊರ ಬಂದ ಸಿಎಂ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಮತ್ತೆ ವಿಚಾರಣೆಗೆ ಬರಲು ಲೋಕಾಯುಕ್ತ ಅಧಿಕಾರಿಗಳು ಹೇಳಿಲ್ಲ. ಕಾನೂನು ಪ್ರಕಾರವೇ ನಿವೇಶನ ಪಡೆದಿದ್ದೇನೆ. ಬಿಜೆಪಿ, ಜೆಡಿಎಸ್‌ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿವೆ. ಲೋಕಾಯುಕ್ತ ಅಧಿಕಾರಿಗಳು ಕೇಳಿದ ಎಲ್ಲಾ ಪ್ರಶ್ನೆಗೆ ಉತ್ತರಿಸಿದ್ದೇನೆ ಎಂದು ತಿಳಿಸಿದರು.

ಮುಡಾ ಹಗರಣ ವಿಚಾರಣೆ ಬಳಿಕ ಸಿದ್ದರಮಾಯ್ಯ ಹೇಳಿದ್ದೇನು ಗೊತ್ತಾ? Read More »

ಕನ್ನಡ ಸಾಹಿತ್ಯ ಸಂಸ್ಕ್ರತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸಿ ಮುಂದಿನ ಜನಾಂಗಕ್ಕೆ ಕೊಂಡೊಯ್ಯುವ ಮಹತ್ತರ ಜವಬ್ದಾರಿ ಕನ್ನಡಿಗರ ಮೇಲಿದೆ

ಸುಳ್ಯ : ಕನ್ನಡ ಸಾಹಿತ್ಯ ಸಂಸ್ಕ್ರತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸಿ ಮುಂದಿನ ಜನಾಂಗಕ್ಕೆ ಕೊಂಡೊಯ್ಯುವ ಮಹತ್ತರ ಜವಬ್ದಾರಿ ನಮ್ಮೆಲ್ಲಾ ಕನ್ನಡಿಗರ ಮೇಲಿದೆ ಎಂದು ಜನಪದ ಸಂಶೋಧಕ, ಸಾಹಿತಿ ಡಾ. ಸುಂದರ ಕೇನಾಜೆ ನುಡಿದರು. ಇವರು ಸುಳ್ಯ ತಾಲುಕು ಕನ್ನಡ ಸಾಹಿತ್ಯ ಪರಿಷತ್ತು, ಸುಳ್ಯ ಹೋಬಳಿ ಘಟಕ ಹಾಗು ಸಂಧ್ಯಾರಶ್ಮಿ ಸಾಹಿತ್ಯ ಸಂಘಗಳು‌ ಜಂಟಿಯಾಗಿ ನಡೆಸಿದ ಕನ್ನಡ ರಾಜ್ಯೋತ್ಸವ ಸಾಹಿತ್ಯ ಸಂಭ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡುತ್ತಿದ್ದರು. ಸುಳ್ಯದ ಸಂಧ್ಯಾರಶ್ಮಿ ಸಭಾಭವನದಲ್ಲಿ ಕಾರ್ಯಕ್ರಮ‌ ಹಮ್ಮಿಕೊಳ್ಳಲಾಗಿತ್ತು‌. ಕನ್ನಡ ಭಾಷೆ ರಾಜಾಶ್ರಯ

ಕನ್ನಡ ಸಾಹಿತ್ಯ ಸಂಸ್ಕ್ರತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸಿ ಮುಂದಿನ ಜನಾಂಗಕ್ಕೆ ಕೊಂಡೊಯ್ಯುವ ಮಹತ್ತರ ಜವಬ್ದಾರಿ ಕನ್ನಡಿಗರ ಮೇಲಿದೆ Read More »

ಸುಳ್ಯದಲ್ಲಿ ಹೆಚ್ಚಿದ ವಿದ್ಯುತ್ ಸಮಸ್ಯೆ, ಸಮಸ್ಯೆ ಪರಿಹರಿಸಲು ಶಾಸಕರ ಸೂಚನೆ

ಮಂಗಳೂರು:ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಪದ್ಮಾವತಿ ಅವರನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಭೇಟಿಯಾಗಿ ಸುಳ್ಯದ ವಿದ್ಯುತ್ ಸಮಸ್ಯೆಯ ಬಗ್ಗೆ ಚರ್ಚಿಸಲಾಯಿತು. ಸುಳ್ಯದ 110 ಕೆವಿ ನೂತನ ಲೈನ್‌ ಕಾಮಗಾರಿ ಸುಳ್ಯಕ್ಕೆ ಕಾವು- ಜಾಲ್ಕೂರು ಮಧ್ಯೆ ವಿದ್ಯುತ್ ಲೈನ್ ಕಾಮಗಾರಿನಡೆಯುತ್ತಿದ್ದು ಅದಷ್ಟು ಬೇಗ ಕಾಮಗಾರಿ ಮುಗಿಸಿ ನಿರಂತರ ವಿದ್ಯುತ್ ಪೂರೈಕೆ ಮಾಡುವಂತೆ ಶಾಸಕರು ಸಲಹೆ ನೀಡಿದರು. ಸುಳ್ಯಕ್ಕೆ ತುರ್ತು ಸಂದರ್ಭದಲ್ಲಿ ವಿದ್ಯುತ್ ಪೂರೈಸಲು ಬೆಳ್ಳಾರೆ- ಪೈಚಾರು ಮೂಲಕ ಹೊಸ ಕೇಬಲ್ ಲೈನ್‌ನ ಕಾಮಗಾರಿಯನ್ನು ಶೀಘ್ರವಾಗಿ ಮುಗಿಸುವಂತೆ ಮತ್ತು

ಸುಳ್ಯದಲ್ಲಿ ಹೆಚ್ಚಿದ ವಿದ್ಯುತ್ ಸಮಸ್ಯೆ, ಸಮಸ್ಯೆ ಪರಿಹರಿಸಲು ಶಾಸಕರ ಸೂಚನೆ Read More »

ಆಯುಷ್ಮಾನ್‌ ಭಾರತ್‌ಗೆ ಎಲ್ಲಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ

ದ.ಕ. ಜಿಲ್ಲೆಯಲ್ಲಿರುವ ಎಲ್ಲ ಖಾಸಗಿ ಆಸ್ಪತ್ರೆಗಳನ್ನು ಆಯುಷ್ಮಾನ್ ಭಾರತ್ ಯೋಜನೆಯಡಿ ಸೇರಿಸಬೇಕು ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಜಿಲ್ಲಾಡ ಳಿತಕ್ಕೆ ಸೂಚಿಸಿದ್ದಾರೆ.ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನಾರೋಗ್ಯ ಯೋಜನೆ ಮತ್ತು ಮುಖ್ಯ ಮಂತ್ರಿ ಆರೋಗ್ಯ ಕರ್ನಾಟಕ ಯೋಜನೆ ಯ ಪರಿಣಾಮಕಾರಿ ಅನುಷ್ಠಾನದ ಕುರಿತು ಏರ್ಪಡಿಸಿದ್ದ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳ ಸಭೆಯಲ್ಲಿ ಸೋಮವಾರ ಅವರು ಮಾತನಾಡಿ ದರು.ತುರ್ತು ಸಂದರ್ಭದಲ್ಲಿ ರೋಗಿ ಮತ್ತು ಕುಟುಂಬದವರಿಗೆ ಆಯುಷ್ಮಾನ್ ಭಾರತ್‌ ನಡಿ ನೋಂದಣಿಯಾದ ಆಸ್ಪತ್ರೆ

ಆಯುಷ್ಮಾನ್‌ ಭಾರತ್‌ಗೆ ಎಲ್ಲಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ Read More »

ಶಿರಾಡಿ ಘಾಟ್‌ನಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಟ್ಯಾಂಕರ್

ಗುಂಡ್ಯ: ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ಶಿರಾಡಿ ಘಾಟ್‌ನಲ್ಲಿ ಕ್ಯಾಂಟರ್ ವಾಹನವೊಂದು ಪ್ರಪಾತಕ್ಕೆ ಉರುಳಿ ಬಿದ್ದಿದೆ.ಕೆಲ ಲಘು ವಾಹನ ಚಾಲಕರು ಘಾಟ್‌ನಲ್ಲಿ ತಿರುವು ಪಡೆದುಕೊಂಡು ಬಿಸಲೆ ಘಾಟ್ ಮೂಲಕ ಸಂಚಾರ ಬೆಳೆಸುವ ಪ್ರಯತ್ನ ನಡೆಸಿದ್ದಾರೆ. ಆದ್ರೆ ಕೆಲವೊಂದು ಕಡೆ ಮುಂದೆ ಹೋಗುವ ಆತುರದಲ್ಲಿ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗಿ ಅಲ್ಲೂ ಕೂಡಾ ಟ್ರಾಫಿಕ್ ಜಾಮ್ ಉಂಟಾಗಿದೆ. ಕ್ಯಾಂಟರ್ ಮೇಲತ್ತುವ ಕಾರ್ಯ ನಡೆಯುತ್ತಿರುವ ಪ್ರದೇಶದ ಇಕ್ಕೆಲೆಗಳಲ್ಲೂ ವಾಹನ ದಟ್ಟಣೆ ಇದೆ.

ಶಿರಾಡಿ ಘಾಟ್‌ನಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಟ್ಯಾಂಕರ್ Read More »

ಸುಳ್ಯ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಮುರುಕಲು ಕಬ್ಬಿಣದ ಚೇಯರ್ ನಿಂದ ಬಿದ್ದು ಮಹಿಳೆಗೆ ಗಾಯ

ಸುಳ್ಯ ಕೆ.ಎಸ್.ಆರ್.ಟಿ ಬಸ್ಸು ನಿಲ್ದಾಣದಲ್ಲಿ ಪ್ರಯಾಣಿಕರು ಕುಳಿತುಕೊಳ್ಳುವ ಕಬ್ಬಿಣದ ಚೇಯರ್ ಗಳು ನಾದುರಸ್ತಿಯಲ್ಲಿದ್ದು ಮಂಗಳವಾರ ಮಹಿಳೆಯೊಬ್ಬರು ಕುಳಿತುಕೊಳ್ಳುವ ಸಂದರ್ಭದಲ್ಲಿ ಚೇಯರ್ ಮುರಿದು ಮಹಿಳೆ ನೆಲಕ್ಕೆ ಬಿದ್ದು ಗಾಯಗೊಂಡ ಘಟನೆ ವರದಿಯಾಗಿದೆ.ಮಹಿಳೆಯ ಕೈ ಕಾಲುಗಳಿಗೆ ಗಾಯವಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.ಕಳೆದ ಕೆಲವು‌ ವರ್ಷಗಳಿಂದ ಚೇಯರ್ ಗಳು ಕಟ್ ಆಗಿ ನಿಂತಿವೆ. ಈ ಸಮಸ್ಯೆಯ ಬಗ್ಗೆ ಮಾದ್ಯಮಗಳಲ್ಲಿ ವರದಿ ಪ್ರಕಟವಾಗಿತ್ರು ಆದರೂ ಈ ಸಮಸ್ಯೆ ಪರಿಹಾರವಾಗಿಲ್ಲ. ಕಳಪೆ ಗುಣಮಟ್ಟದ ಕಬ್ಬಿಣದ ಚೇಯರ್ ಅಳವಡಿಸಿರುವುದೇ ಇಂತಹ ಘಟನೆಗಳು ಆಗಾಗ ನಡೆಯಲು ಕಾರಣವಾಗಿದೆ.ಕೆ.ಎಸ್.ಆರ್.ಟಿ.ಸಿಯವರು

ಸುಳ್ಯ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಮುರುಕಲು ಕಬ್ಬಿಣದ ಚೇಯರ್ ನಿಂದ ಬಿದ್ದು ಮಹಿಳೆಗೆ ಗಾಯ Read More »

ಪೊಲೀಸ್ ಕಾನ್ಸ್‌ಟೇಬಲ್‌ ನನ್ನು ಕಡಿದು ಬರ್ಬರ ಕೊಲೆ!

ಹಾಸನ: ಹಾಸನದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಪೊಲೀಸ್ ಕಾನ್ಸ್‌ಟೇಬಲ್ ಒಬ್ಬರನ್ನು ದುಷ್ಕರ್ಮಿಗಳು ಬರ್ಬರ ಹತ್ಯೆ ಮಾಡಿದ ಘಟನೆ ವರದಿಯಾಗಿದೆ.ಈ ಘಟನೆ ಹಾಸನ ತಾಲೂಕಿನ ದುದ್ದ ಗ್ರಾಮದಲ್ಲಿ ನಡೆದಿದೆ. ಅರಸೀಕೆರೆ ತಾಲೂಕಿನ ಬಾಗೇಶಪುರ ಗ್ರಾಮದವರಾದ ಹರೀಶ್.ವಿ (32) ಕೊಲೆಯಾದ ಪೊಲೀಸ್‌ ಕಾನ್ಸ್‌ಟೇಬಲ್.ಹರೀಶ್ ಬೆಂಗಳೂರಿನ KSISFನಲ್ಲಿ ಕಾನ್ಸ್‌ಟೇಬಲ್ ಆಗಿದ್ದರು. ಇದೇ ತಿಂಗಳು 11 ರಂದು ಹರೀಶ್ ವಿವಾಹ ನಿಶ್ಚಯವಾಗಿತ್ತು.ಸೋಮವಾರ ರಾತ್ರಿ ಮದುವೆ ಆಮಂತ್ರಣ ಪತ್ರ ಹಂಚಿ ಮನೆಗೆ ವಾಪಾಸ್ ಆಗುತ್ತಿದ್ದ ವೇಳೆ ದುದ್ದ ಗ್ರಾಮದ ಹೊರವಲಯದಲ್ಲಿರುವ ಡಾಬಾ ಸರ್ಕಲ್‌ನಲ್ಲಿ ದುಷ್ಕರ್ಮಿಗಳು ಬರ್ಬರವಾಗಿ

ಪೊಲೀಸ್ ಕಾನ್ಸ್‌ಟೇಬಲ್‌ ನನ್ನು ಕಡಿದು ಬರ್ಬರ ಕೊಲೆ! Read More »

ತಹಶೀಲ್ದಾರ್ ಕಚೇರಿಯಲ್ಲಿ ಸಿಬ್ಬಂದಿ ಆತ್ಮಹತ್ಯೆ

ಬೆಳಗಾವಿಯ ತಹಶೀಲ್ದಾರ ಕಚೇರಿಯ ಕೊಠಡಿಯಲ್ಲಿಯೇ ಎಸ್ ಡಿಎ ಸಿಬ್ಬಂದಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ವರದಿಯಾಗಿದೆ.ದ್ವಿತೀಯ ದರ್ಜೆ ಗುಮಾಸ್ತ ರುದ್ರಣ್ಣ ಯಡವನ್ನವರ ಎಂಬ ಸಿಬ್ಬಂದಿ ಕಚೇರಿಯಲ್ಲೇ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದಾನೆ. ತಹಶೀಲ್ದಾರರು ಕುಳಿತುಕೊಳ್ಳುವ ಸ್ಥಳದಲ್ಲಿಯ ಫ್ಯಾನ್ ಗೆ ನೇಣು ಬಿಗಿದುಕೊಂಡಿದ್ದಾನೆ. ಬೆಳಗ್ಗೆ ಕಚೇರಿಗೆ ಸಿಬ್ಬಂದಿ ಬರುತ್ತಿದ್ದಂತೆ ವಿಚಾರ ಗೊತ್ತಾಗಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಡೆತ್ ನೋಟ್ ಪತ್ತೆಯಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಹಶೀಲ್ದಾರ್ ಕಚೇರಿಯಲ್ಲಿ ಸಿಬ್ಬಂದಿ ಆತ್ಮಹತ್ಯೆ Read More »

ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ. ಕೆ ವಿ ಚಿದಾನಂದ ರಿಂದ ದ. ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗೋಕುಲ್ ದಾಸ್ ರವರಿಗೆ ಗೌರವಾರ್ಪಣೆ

ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷರಾದ ಡಾ. ಕೆ ವಿ ಚಿದಾನಂದರವರು 2024-25ನೇ ಸಾಲಿನ ದ. ಕ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಕೆ. ಗೋಕುಲ್ ದಾಸ್ ರವರಿಗೆ ಇಂದು ತಮ್ಮ ಕಚೇರಿಯಲ್ಲಿ ಶುಭಹಾರೈಸಿ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಕೆ ವಿ ಜಿ ಆಯುರ್ವೇದ ಮೆಡಿಕಲ್ ಕಾಲೇಜು ಪ್ರಾಂಶುಪಾಲ ಡಾ. ಲೀಲಾಧರ್ ಡಿ. ವಿ ಉಪಸ್ಥಿತರಿದ್ದರು.

ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ. ಕೆ ವಿ ಚಿದಾನಂದ ರಿಂದ ದ. ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗೋಕುಲ್ ದಾಸ್ ರವರಿಗೆ ಗೌರವಾರ್ಪಣೆ Read More »

ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಎಫ್‌ಐಆ‌ರ್ ದಾಖಲು

ಎಡಿಜಿಪಿ ಚಂದ್ರಶೇಖರ್ ಹಾಗೂ ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ ನಡುವಿನ ವಾಕ್ಸಮರ ಇದೀಗ ತಾರಕಕ್ಕೆ ಏರಿದ್ದು, ಹೆಚ್‌ಡಿಕೆ ಬೆದರಿಸುವುದಾಗಿ ಹೇಳಿಕೆ ನೀಡಿದ್ದರು. ಈ ವಿಚಾರವಾಗಿ ಬೆಂಗಳೂರಿನ ಸಂಜಯನಗರ ಪೊಲೀಸ್ ಠಾಣೆಯಲ್ಲಿ ಎಡಿಜಿಪಿ ಚಂದ್ರಶೇಖರ್ ಅವರು ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಎ1 ಆರೋಪಿಯಾಗಿ ಹೆಚ್. ಡಿ. ಕುಮಾರಸ್ವಾಮಿ, ಎ2 ನಿಖಿಲ್, ಹಾಗೂ ಎ3 ಆರೋಪಿ ಜೆಡಿಎಸ್ ಮುಖಂಡ ಸುರೇಶ್ ಬಾಬು ವಿರುದ್ಧ ಎಫ್‌ಐಆರ್ ದಾಖಲಾಗಿದೆ

ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಎಫ್‌ಐಆ‌ರ್ ದಾಖಲು Read More »

error: Content is protected !!
Scroll to Top