ಅರಂತೋಡು : ಮಹಿಳೆಗೆ ಕಾರು ಡಿಕ್ಕಿ
ಅರಂತೋಡು ಪೇಟೆಯಲ್ಲಿ ರಸ್ತೆ ದಾಟುತ್ತಿದ್ದ ಮಹಿಳೆಗೆ ಆಲ್ಲೋ ಕಾರೊಂದು ಢಿಕ್ಕಿ ಹೊಡೆದ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಅಪಘಾತದ ರಭಸಕ್ಕೆ ಮಹಿಳೆ ರಸ್ತೆಗೆ ಎಸೆಯಲ್ಪಟ್ಟು ಕಾಲು ಮುರಿತವಾಗಿದ್ದು, ಪ್ರಾಣಾಪಯದಿಂದ ಪಾರಾಗಿದ್ದಾರೆ. ಕಲ್ಲುಗುಂಡಿ ಹೊರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.
ಅರಂತೋಡು : ಮಹಿಳೆಗೆ ಕಾರು ಡಿಕ್ಕಿ Read More »
ಸುಳ್ಯದ ಗೋಕುಲದಾಸ್ ಅವರಿಗೆ ಜಿಲ್ಲಾ ರಾಜೋತ್ಸವ ಪ್ರಶಸ್ತಿ
ಸುಳ್ಯ: ಸುಳ್ಯದ ಕೆ.ಗೋಕುಲ್‌ದಾಸ್ ಅವರಿಗೆ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಂಗಳೂರಿನಲ್ಲಿ ನಡೆದ ರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿದರು. ಕೆ.ಗೋಕುಲ್‌ದಾಸ್ ಅವರು ಸಾಮಾಜಿಕ, ಧಾರ್ಮಿಕ, ರಾಜಕೀಯ, ಸಂಘಟನಾ ಕ್ಷೇತ್ರದಲ್ಲಿ ಸಕ್ರೀಯರಾಗಿದ್ದಾರೆ.ಸುಳ್ಯದ ಶಾರದಾಂಬ ಉತ್ಸವ (ಎಸ್.ಸಿಕ್ಸ್ ನಲ್ಲಿ ಕಳೆದ 50 ವರ್ಷಗಳಿಂದ ಗೋಕುಲ್ ದಾಸ್ ಮುಂಚೂಣಿಯಲ್ಲಿದ್ದಾರೆ. ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರೀಯರಾಗಿದ್ದಾರೆ. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕರಾದದ ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯ ಐವನ್
ಸುಳ್ಯದ ಗೋಕುಲದಾಸ್ ಅವರಿಗೆ ಜಿಲ್ಲಾ ರಾಜೋತ್ಸವ ಪ್ರಶಸ್ತಿ Read More »
ಕರಾವಳಿ ಭಾಗದಲ್ಲಿ ತುಳುವರ ತುಡರ ಹಬ್ಬ
ತುಳುನಾಡಿನ ಜನ ಜೀವನದಲ್ಲಿ ಮಹತ್ವವಾದ ಹಬ್ಬ ಈ ತುಡರ ಹಬ್ಬ, ದೀಪಾವಳಿ ಹಬ್ಬವನ್ನು ಈ ಭಾಗದಲ್ಲಿ ತುಡರ ಹಬ್ಬ ಎನ್ನುತ್ತಾರೆ. ಹಿಂದೂ ಸಂಪ್ರದಾಯದಲ್ಲಿ ಆಚರಿಸಲ್ಪಡುವ ಪ್ರಮುಖ ಹಬ್ಬ. ಈ ಹಬ್ಬದ ಹಿಂದೆ ಹಲವಾರು ಪುರಾಣ ಕಥೆಗಳು, ಸಾಂಸ್ಕೃತಿಕ ಆಚರಣೆಗಳಿವೆ .ಈ ದೀಪಾವಳಿಯು ಹಿಂದೂ ಧರ್ಮದ ಪ್ರಕಾರ ರಾಮಾಯಣದ ಕಥೆಗೂ ಸಂಬಂಧಿಸಿದೆ. ಕರಾವಳಿ ಭಾಗದಲ್ಲಿ ಈ ದೀಪಗಳ ಹಬ್ಬವನ್ನು ಮೂರು ದಿನಗಳ ಕಾಲ ಆಚರಿಸುತ್ತೇವೆ. ಮೊದಲನೆಯ ದಿನ ನರಕ ಚತುರ್ದಶಿ, ಈ ದಿವಸದಂದು ಎಣ್ಣೆ ಸ್ನಾನ ಮಾಡುವಂತಹ ಸಂಪ್ರದಾಯವಿದೆ.
ಕರಾವಳಿ ಭಾಗದಲ್ಲಿ ತುಳುವರ ತುಡರ ಹಬ್ಬ Read More »
ಕನ್ನಡ ರಾಜ್ಯೋತ್ಸವವಲ್ಲ, ಕರ್ನಾಟಕ ರಾಜ್ಯೋತ್ಸವ
ಹಲವು ಉಪ ಭಾಷೆ, ಸಂಸ್ಕೃತಿ, ವೈವಿಧ್ಯತೆಯಿಂದ ಕೂಡಿದ ರಾಜ್ಯ ನಮ್ಮ ಕರ್ನಾಟಕ. ಒಂದೇ ನಾಡಿನೊಳಗೆ ವೈವಿಧ್ಯತೆಯಿದ್ದರೂ, ರಾಜ್ಯ ಎಂದು ಬಂದಾಗ ಅಲ್ಲಿ ಮೇಳೈಸುವುದು ಶ್ರೀಮಂತಿಕೆಯಿಂದ ಕೂಡಿದ ಕನ್ನಡ. ಅದಕ್ಕೇ ನಮ್ಮ ಕವಿಗಳು ಬಾರಿಸು ಕನ್ನಡ ಡಿಂಡಿಮವ..ಓ ಕರ್ನಾಟಕ ಹೃದಯ ಶಿವ ಎಂದು ಹಾಡಿದರು.ಕರ್ನಾಟಕ ಜನಗಳ ಮಾತೃಭಾಷೆ ಕನ್ನಡ. ವಿಶ್ವದ ಎಲ್ಲೇ ಹೋದರೂ ಅಲ್ಲಿ ಕನ್ನಡಿಗರು ಸಿಗುತ್ತಾರೆ. ವಿಶಾಲ ಹೃದಯಿಗಳಾದ ಕನ್ನಡಿಗರ ಪರಂಪರೆಯೇ ಅಂತಹುದು. ವಿಶ್ವಾದ್ಯಂತ ತಮ್ಮ ಛಾಪು ಮೂಡಿಸಿ ಕರ್ನಾಟಕದ ಹಿರಿಮೆಯನ್ನು ಬಾನೆತ್ತರಕ್ಕೆ ಹಾರಿಸುವಲ್ಲಿ ಕನ್ನಡಿಗರು ಒಂದೆಜ್ಜೆ
ಕನ್ನಡ ರಾಜ್ಯೋತ್ಸವವಲ್ಲ, ಕರ್ನಾಟಕ ರಾಜ್ಯೋತ್ಸವ Read More »
ಗೌಡರ ಕುರಿತು ಪಠ್ಯಪುಸ್ತಕದಲ್ಲಿ ಮರು ಸೇರ್ಪಡೆಗೆ ಕ್ರಮ: ಎ.ಎಸ್.ಪೊನ್ನಣ್ಣ
ಮಡಿಕೇರಿ ಅ.31(ಕರ್ನಾಟಕ ವಾರ್ತೆ):-ಸ್ವಾತಂತ್ರ್ಯ ಹೋರಾಟಗಾರ ಗುಡ್ಡೆಮನೆ ಅಪ್ಪಯ್ಯ ಗೌಡರ ಕುರಿತು ಮತ್ತು ಅಮರ ಸುಳ್ಯ ದಂಗೆಯ ಹೋರಾಟಗಾರರ ವಿಷಯವನ್ನು ಪಠ್ಯಪುಸ್ತಕದಲ್ಲಿ ಮರು ಸೇರ್ಪಡೆ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ತಿಳಿಸಿದ್ದಾರೆ. ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ನಗರದ ಕೋಟೆ ಆವರಣದಲ್ಲಿ ಗುರುವಾರ ಏರ್ಪಡಿಲಾಗಿದ್ದ ಸ್ವಾತಂತ್ರ್ಯ ಹೋರಾಟಗಾರ ಸುಬೇದಾರ್
ಗೌಡರ ಕುರಿತು ಪಠ್ಯಪುಸ್ತಕದಲ್ಲಿ ಮರು ಸೇರ್ಪಡೆಗೆ ಕ್ರಮ: ಎ.ಎಸ್.ಪೊನ್ನಣ್ಣ Read More »
ಕೈ ಕೊಟ್ಟ ವಿದ್ಯುತ್, ಬೆಳಕಿನ ಹಬ್ಬ ದೀಪಾವಳಿ ಕತ್ತಲಲ್ಲಿ ಆಚರಣೆ,ಮೆಸ್ಕಾಂ ಗೆ ಜನರಿಂದ ಹಿಡಿಶಾಪ
ಬೆಳಕಿನ ಹಬ್ಬ ದೀಪಾವಳಿಯನ್ನು ಮೊದಲ ದಿನ ಸುಳ್ಯ ತಾಲೂಕಿನಲ್ಲಿ ಕತ್ತಲಲ್ಲಿ ಆಚರಿಸುವ ಭಾಗ್ಯವನ್ನು ಮೆಸ್ಕಾಂ ಕರುಣಿಸಿದೆ.ಬುಧವಾರ ರಾತ್ರಿ ಹೋಗಿರುವ ವಿದ್ಯುತ್ ಗುರುವಾರ ಬೆಳಿಗ್ಗೆ 7 ಗಂಟೆಗೆ ಮತ್ತೆ ಪಾಪಸ್ ಬಂದಿದೆ.ಇದರಿಂದ ದೀಪಾವಳಿಗೆ ತಯಾರಿ ನಡೆಸುತ್ತಿದ್ದವರು ವಿದ್ಯುತ್ ಇಲ್ಲದೆ ಪರದಾಡಬೇಕಾದ ಪರಿಸ್ಥಿತಿ ಎದುರಾಯಿತು.ಗುರುವಾರ ಸಂಜೆ 6 ಗಂಟೆಗೆ ಕೈ ಕೊಟ್ಟಿರುವ ವಿದ್ಯುತ್ ರಾತ್ರಿ 10 ಗಂಟೆಯ ತನಕ ಬಂದಿಲ್ಲ.ಬೇರೆ ತಾಲೂಕುಗಳಲ್ಲಿ ಬೆಳಕಿನಲ್ಲಿ ದೀಪಾವಳಿ ಹಬ್ಬವನ್ನು ಆಚರಿಸುತ್ತಿದ್ದರೆ ಸುಳ್ಯ ತಾಲೂಕಿನಲ್ಲಿ ಬರೇ ಕತ್ತಲ್ಲಿ ಜನರು ದೀಪಾವಳಿ ಆಚರಿಸಿಕೊಂಡಿದ್ದು ಮೆಸ್ಕಾಂಗೆ ಹಿಡಿಶಾಪ
ಕೈ ಕೊಟ್ಟ ವಿದ್ಯುತ್, ಬೆಳಕಿನ ಹಬ್ಬ ದೀಪಾವಳಿ ಕತ್ತಲಲ್ಲಿ ಆಚರಣೆ,ಮೆಸ್ಕಾಂ ಗೆ ಜನರಿಂದ ಹಿಡಿಶಾಪ Read More »
(ಕವನ) ನವರಾಗ ನುಡಿಸು
ಅಂತರಂಗದ ಭಾವ ವಿರಹದುರಿಯ ಬಂಧನದಿ ಸಿಲುಕಿ ಮಿಡಿಯುತಿತ್ತು ಬೇಗೆಯ ಸೀಳಲು ಎದೆಯ ಕತ್ತಲನಳಿಸಲು ನಿನಗಾಗಿ ತುಡಿಯುತಿತ್ತು . ಹುಡುಕುತಿತ್ತು ಮನ ದೀಪ ಹಚ್ಚುವ ಕೈಗಳ ಮುಡಿ ಹರಡಿ ಮುನಿಸಿದೆ ಅಮಾವಾಸ್ಯೆ ಕಡುಗತ್ತಲು ಎದೆ ಸೀಳಿ ಬಗೆದರು ಸ್ಫುರಣ ಕಾಣಲೊಲ್ಲವು. ಎತ್ತ ಸಾಗುತ್ತಿದೆ ನನ್ನ ಭವಿಷ್ಯ? ಹಸುರು ಸೀರೆ ಮಾಸುತ್ತಿದೆ ನಾರುವ ವಾಸನೆ ಮುಗಿಲ ಮುಟ್ಟುತ್ತಿದೆ ಒಮ್ಮೆ ನೀ ಬಂದು ಬೆಳಕ ಸ್ಫುರಿಸು ಎಲ್ಲಿ ಮರೆಯಾದೆ ವರ್ಷದ ಬೆಳಕ ಹೊತ್ತು ? ನೀ ಬರುವೆ
(ಕವನ) ನವರಾಗ ನುಡಿಸು Read More »
ದೀಪಾವಳಿ ಹಬ್ಬದ ಪ್ರಯುಕ್ತ ಸೋಜಾ ಇಲೆಕ್ಟ್ರಾನಿಕ್ಸ್‌ನಲ್ಲಿ ಅಕರ್ಷಕ ಆಫರ್‌ಗಳು ಲಭ್ಯ
ಸುಳ್ಯ: ಕಳೆದ 25 ವರ್ಷಗಳಿಂದ ಅತೀ ಕಡಿಮೆ ದರದಲ್ಲಿ ಅತ್ಯುತ್ತಮ ಗುಣ ಮಟ್ಟದ ಇಲೆಕ್ಟ್ರಾನಿಕ್ಸ್ ಹಾಗೂ ಫರ್ನೀಚರ್ ಮಾರಾಟ ಮಾಡುವ ಮೂಲಕ ಗ್ರಾಹಕರ ಮನ ಗೆದ್ದ ಸುಳ್ಯದ ಪ್ರತಿಷ್ಠಿತ ಇಲೆಕ್ಟ್ರಾನಿಕ್ಸ್‌ನಲ್ಲಿ ಮಳಿಗೆ ಸೋಜಾ ಇಲೆಕ್ಟ್ರಾನಿಕ್ಸ್ ಅತ್ಯುತ್ತಮ ಗುಣಮಟ್ಟದ ಮತ್ತು ಬ್ರಾಂಡೆಡ್ ಇಲೆಕ್ಟ್ರಾನಿಕ್ಸ್ ಉಪಕರಣಗಳ ಮಾರಾಟಕ್ಕೆ ಹೆಸರುವಾಸಿಯಾಗಿ ಜನರ ಇಲೆಕ್ಟ್ರಾನಿಕ್ಸ್ ಹಾಗೂ ಫರ್ನೀಚರ್ಸ್ ಸೇರಿದ ಗೃಹೋಪಯೋಗಿ ಉಪಕರಣಗಳ ಬೇಡಿಕೆಯನ್ನುಯಶಸ್ವಿಯಾಗಿ ಪೂರೈಸಿದ ಹೆಗ್ಗಳಿಕೆ ಸೋಜಾ ಇಲೆಕ್ಟ್ರಾನಿಕ್ಸ್‌ನದ್ದು.ಸುಳ್ಯ ಮುಖ್ಯ ರಸ್ತೆಯಲ್ಲಿ ಶ್ರೀರಾಮ್ ಪೇಟೆಯಲ್ಲಿ ಕಶ್ಯಪ್ ಕಾಂಪ್ಲೆಕ್ಸ್‌ನಲ್ಲಿರುವ ಸೋಜಾ ಇಲೆಕ್ಟ್ರಾನಿಕ್ಸ್ ಕಳೆದ 25
ದೀಪಾವಳಿ ಹಬ್ಬದ ಪ್ರಯುಕ್ತ ಸೋಜಾ ಇಲೆಕ್ಟ್ರಾನಿಕ್ಸ್‌ನಲ್ಲಿ ಅಕರ್ಷಕ ಆಫರ್‌ಗಳು ಲಭ್ಯ Read More »
ದೀಪಗಳು ಭರವಸೆಯ ಬೆಳಕಾಗಲಿ
ಭಾರತೀಯ ಪರಂಪರೆಯಲ್ಲಿ ಹಬ್ಬಗಳು ತನ್ನದೇ ಆದ ವೈಶಿಷ್ಟ್ಯತೆಯನ್ನು ಪಡೆದಿದೆ. ಹಿಂದೂ ಸಂಪ್ರದಾಯದಲ್ಲಿ ಆಚರಿಸುವ ಹಬ್ಬಗಳು ಸಂಸ್ಕೃತಿ,ಸಂಸ್ಕಾರ,ಆಚಾರ ವಿಚಾರ ಮುಂತಾದವುಗಳನ್ನು ಒಳಗೊಂಡು ಹಬ್ಬದ ವಾತಾವರಣವನ್ನು ಸೃಷ್ಟಿಸುತ್ತದೆ. ಅಂತಹ ಹಲವಾರು ಹಬ್ಬಗಳಲ್ಲಿ ದೀಪಾವಳಿ ಹಬ್ಬ ಕೂಡ ಒಂದು. ಹಬ್ಬದ ಹೆಸರನ್ನೇ ಸೂಚಿಸುವಂತೆ ದೀಪದ ಬೆಳಕಲ್ಲಿ ಆಚರಿಸುವ ಹಬ್ಬ ಇದಾಗಿದ್ದು ಮನೆ ಮನೆಗಳಲ್ಲಿ ದೀಪ ಬೆಳಗಿಸಿ ಸಂಭ್ರಮಿಸಲಾಗುತ್ತದೆ. ಈ ಹಬ್ಬದಲ್ಲಿ ಸಾಲು ಸಾಲು ದೀಪಗಳು ಬೆಳಕಿನ ದ್ಯೋತಕವಾಗಿ ಬೆಳಗುತ್ತವೆ. ಕತ್ತಲೆಯ ಅಂಧಕಾರವನ್ನು ಸರಿಸಿ ಜಗಜ್ಯೋತಿಯನ್ನು ಬೆಳಗಿಸುವ ಶಕ್ತಿ ಇರುವ ದೀಪಗಳಿಗೆ ಈ
ದೀಪಗಳು ಭರವಸೆಯ ಬೆಳಕಾಗಲಿ Read More »










