ಸುಳ್ಯ ತಾಲೂಕು ಸಮಸ್ತ ಸಂಯುಕ್ತ ಜಮಾಅತ್ ರಚನೆ.ಅಧ್ಯಕ್ಷರಾಗಿ ಅಬ್ದುಲ್ ಖಾದರ್ ಹಾಜಿ ಬೆಳ್ಳಾರೆ, ಪ್ರಧಾನ ಕಾರ್ಯದರ್ಶಿಯಾಗಿ ಅಶ್ರಫ್ ಗುಂಡಿ
ಸುಳ್ಯ ತಾಲೂಕಿನ ಸಮಸ್ತದ ಅಧಿನದಲ್ಲಿರುವ 15 ಜಮಾಅತ್ ಗಳ ಪ್ರತಿನಿಧಿಗಳ ಸಭೆಯು ಸೈಯದ್ ಝೈನುಲ್ ಆಬಿದೀನ್ ತಂಙಳ್ ರವರ ಅಧ್ಯಕ್ಷತೆಯಲ್ಲಿ ಅ.9 ರಂದು ಸುಳ್ಯದ ಸುಪ್ರಿಮ್ ಹಾಲ್ ನಲ್ಲಿ ನಡೆಯಿತು. ಸಭೆಯನ್ನು ಬಹು| ಝೈನುಲ್ ಆಬಿದೀನ್ ತಂಙಳ್ ದುವಾ ಮೂಲಕ ಉದ್ಘಾಟಿಸಿದರು. ಹಿರಿಯರಾದ ಹಾಜಿ ಇಸಾಕ್ ಸಾಹೇಬ್ ಪಾಜಪಳ್ಳ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ ಸುಳ್ಯ ತಾಲೂಕು ಸಮಸ್ತ ಸಂಯುಕ್ತ ಜಮಾಅತ್ ನ್ನು ರಚಿಸಲಾಯಿತು.ಅಧ್ಯಕ್ಷರಾಗಿ ಅಬ್ದುಲ್ ಖಾದರ್ ಹಾಜಿ ಬಾಯಂಬಾಡಿ ಬೆಳ್ಳಾರೆ, ಪ್ರಧಾನ ಕಾರ್ಯದರ್ಶಿಯಾಗಿ ಅಶ್ರಫ್ ಗುಂಡಿ ಅರಂತೋಡು, […]










