Author name: Tejas

ಕವಿನುಡಿ ಪ್ರೇರಣಾ ನುಡಿಗಳ ವಿಡಿಯೋ ವಾಚನ ಸ್ಪರ್ಧೆಯಲ್ಲಿ ಶ್ವೇತಾ ರಮೇಶ್ ಬೆಳ್ಳಿಪ್ಪಾಡಿ ಪ್ರಥಮ

ರಾಜ್ಯ ಕರುನಾಡ ಹಣತೆ ಕವಿಬಳಗ ಮತ್ತು ಸಾಂಸ್ಕೃತಿಕ ಕಲಾತಂಡ ರಿ. ಚಿತ್ರದುರ್ಗ ಇವರು ಆಯೋಜಿಸಿದ್ದ ಕವಿನುಡಿ ಪ್ರೇರಣಾ ನುಡಿಗಳ ವೀಡಿಯೋ ವಾಚನ ಯೂಟ್ಯೂಬ್ ಚಾನೆಲ್ ಸ್ಪರ್ಧೆಯಲ್ಲಿ ಶ್ವೇತಾ ರಮೇಶ್ ಬೆಳ್ಳಿಪ್ಪಾಡಿ ಇವರು ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.ವಿಜೇತರಿಗೆ ಡಿಸೆಂಬರ್ 8ಕ್ಕೆ ಚಿತ್ರದುರ್ಗದಲ್ಲಿ ನಡೆಯುವ ಜಾನಪದ ಸಾಹಿತ್ಯೋತ್ಸವ 2024- 25ರ ಕಾರ್ಯಕ್ರಮದಲ್ಲಿ ಸನ್ಮಾನ ಪ್ರಶಸ್ತಿ ನೀಡಲಾಗುವುದು ಎಂದು ಸಂಸ್ಥಾಪಕ ಅಧ್ಯಕ್ಷರು ಶ್ರೀ ಕನಕ ಪ್ರೀತೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕವಿನುಡಿ ಪ್ರೇರಣಾ ನುಡಿಗಳ ವಿಡಿಯೋ ವಾಚನ ಸ್ಪರ್ಧೆಯಲ್ಲಿ ಶ್ವೇತಾ ರಮೇಶ್ ಬೆಳ್ಳಿಪ್ಪಾಡಿ ಪ್ರಥಮ Read More »

ಮಂಜುನಾಥ ಭಂಡಾರಿ ನಾಳೆ ಸುಳ್ಯ ಭೇಟಿ

ಕೆಪಿಸಿಸಿ ಕಾರ್ಯಧ್ಯಕ್ಷರು, ವಿಧಾನ ಪರಿಷತ್ ಶಾಸಕರಾದ ಮಂಜುನಾಥ ಭಂಡಾರಿಯವರು ಸುಳ್ಯಕ್ಕೆ ಭೇಟಿ ನೀಡಲಿದ್ದು ಅವರ ಉಪಸ್ಥಿತಿಯಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯು ಡಿ.04 ರಂದು ನಡೆಯಲಿದೆ.ಅಂದು ಅಪರಾಹ್ನ 3:00 ಗಂಟೆಗೆ ಯುವಜನ ಸಂಯುಕ್ತ ಮಂಡಳಿ ಸಭಾಂಗಣದಲ್ಲಿ ಸಭೆ ನಡೆಯಲಿದೆ. ಈ ಸಭೆಗೆ ಪಕ್ಷದ ಹಿರಿಯ ಕಿರಿಯ ನಾಯಕರು, ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು, ಎಲ್ಲಾ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಿ ಸಿ ಜಯರಾಮ್ ಪರವಾಗಿ ಬ್ಲಾಕ್

ಮಂಜುನಾಥ ಭಂಡಾರಿ ನಾಳೆ ಸುಳ್ಯ ಭೇಟಿ Read More »

ಆರ್.ಎಸ್.ಎಸ್ ಪ್ರಚಾರಕರಾಗಿದ್ದ ಪ್ರಸಾದರ ಶವ ನದಿಯಲ್ಲಿ ಪತ್ತೆ

ನೇತ್ರಾವತಿ ನದಿಗೆ ಆಕಸ್ಮೀಕವಾಗಿ ಬಿದ್ದಿದ್ದ ಆರ್ ಎಸ್ಎಸ್ ಪ್ರಚಾರಕರೊಬ್ಬರ ಮೃತದೇಹ ಪತ್ತೆಯಾಗಿದೆ‌.ಬೆಳ್ತಂಡಿ ತಾಲೂಕಿನ ಬೆಳಾಲು ಗ್ರಾಮದ ಸುರುಳಿ ಕುಂಡಡ್ಕ ನಿವಾಸಿ ಪ್ರಸಾದ್ (38) ಸಾವನ್ನಪ್ಪಿದ ವ್ಯಕ್ತಿ ಎಂದು ತಿಳಿದು ಬಂದಿದೆ.ಸೋಮವಾರ ಸಂಜೆ ಪ್ರಸಾದ್ ಮೂವರೊಂದಿಗೆ ನೀರಿಗೆ ಇಳಿದಿದ್ದು ಈ ವೇಳೆ ಪ್ರಸಾದ್ ನೀರಿನಲ್ಲಿ ಮುಳುಗಿದ್ದಾರೆ ಎನ್ನಲಾಗಿದೆ. ಒಟ್ಟಿಗೆ ರಕ್ಷಿಸಲು ಯತ್ನಿಸಿದ್ದು, ಈ ವೇಳೆ ಪ್ರಸಾದ್ ಮುಳುಗಿ ಕಾಣದಾಗಿದ್ದರು.ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಶೌರ್ಯ ವಿಪತ್ತು ನಿರ್ವಹಣೆ ತಂಡದ ಸದಸ್ಯರು ಭೇಟಿ ನೀಡಿ ಶೋಧ ಕಾರ್ಯಾಚರಣೆ ನಡೆಸಿದ್ದರು. ಮುಳುಗು

ಆರ್.ಎಸ್.ಎಸ್ ಪ್ರಚಾರಕರಾಗಿದ್ದ ಪ್ರಸಾದರ ಶವ ನದಿಯಲ್ಲಿ ಪತ್ತೆ Read More »

( ಕವನ) ಶ್ರೀ ಕೃಷ್ಣ

ದೇವಕಿಯ ಗರ್ಭದಲ್ಲಿ ಬೆಳಕು ಕಂಡ|ಯಶೋಧೆಯ ಮಡಿಲಲ್ಲಿ ಮಮತೆಯ ಕಂದ||ಬೆಂಕಿ ಎಂದವರಿಗೆ ಬೆಳಕಾಗಿ ಅರಳಲು ವದನ|ಸುಶ್ರಾವ್ಯ ಕೋಮಲ ಹೃದಯದ ಕೊಳಲ ವಾದನ ||ಮಾವ ಕಂಸನೇನೋ ಅತೀ ಕಟುಕನಲ್ಲ|ಹಾಗಿದ್ದರೆ ತಂಗಿಯ ಪ್ರಾಣ ಉಳಿಸುತ್ತಿರಲಿಲ್ಲ||ಕೋಪದಿಂದ ಭಯಪಟ್ಟಿದ್ದು ಸಾವಿಗೆ ಮಾತ್ರ|ನಿನ್ನಿಂದಲೇ ದುಷ್ಟರ ಸಾವಿಗೆ ಸೂತ್ರ||ರಾಧೆಯ ಹೃದಯದಲ್ಲಿ ಪ್ರೇಮಿಯಾದೆ|ರುಕ್ಮಿಣಿಯ ಮನಸಲ್ಲಿ ಪ್ರೀತಿಯ ಪತಿಯಾದೆ||ಜಗದೋಧ್ದಾರಕ ನಿನಗೇ ನಿನ್ನ ಪ್ರೀತಿ ದಕ್ಕಿಲ್ಲ|ಜಗದಲ್ಲಿರುವ ಮೂಢರಿಗೆ ನಿಜ ಪ್ರೀತಿ ಸಿಕ್ಕಿಲ್ಲ||ದುಡುಕಿನ ನಿರ್ಧಾರ ತಕ್ಷಣಕ್ಕೆ ಬರುವ ವೈರಾಗ್ಯ ಕ್ಷಣಿಕ| ಅನುಭವಿಸಿ ಜಯಿಸಿದರೆ ಮಾತ್ರ ಮಾಣಿಕ್ಯ ||ಬಾಳಿ ಬದುಕಬೇಕಾದವರು ಮುದುಡಲು ಕಾರಣ| ಮಾತಾಪಿತೃರು

( ಕವನ) ಶ್ರೀ ಕೃಷ್ಣ Read More »

ನಾಪತ್ತೆಯಾಗಿದ್ದ ಸಂದೀಪ್ ಗೌಡನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ

ನಾಪತ್ತೆಯಾಗಿದ್ದ ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಮುಂಗ್ಲಿಮಜಲು ನಿವಾಸಿ ದಿ| ಶಾಂತಪ್ಪ ಗೌಡ ಅವರ ಪುತ್ರ ಸಂದೀಪ್‌ ಗೌಡ (29) ಅವರ ಮೃತದೇಹ ನೆಟ್ಟಣ ರೈಲು ನಿಲ್ದಾಣದಿಂದ ಸಮೀಪ ಕಾಡಿನಲ್ಲಿ ಕೊಳೆತ ಸ್ಥಿತಿಯಲ್ಲಿ ಸೋಮವಾರ ಸಂಜೆ ಪತ್ತೆಯಾಗಿದೆ.ಆತನನ್ನು‌ ಅವನ ಮಿತ್ರ ನೆಟ್ಟಣ ನಿವಾಸಿ ಪ್ರತೀಕ್‌ ಎಂಬಾತನು ನೆಟ್ಟಣ ರೈಲು ನಿಲ್ದಾಣದ ಬಳಿಯ ಗುಡ್ಡದಲ್ಲಿ ಕಬ್ಬಿಣದ ರಾಡ್‌ನಿಂದ ಹೊಡೆದು ಕೊಲೆಗೈದು ಶವವನ್ನು ಕಾಡಿನೊಳಗೆ ಕೊಂಡೊಯ್ದು ಸುಟ್ಟುಹಾಕಲು ಯತ್ನಿಸಿರುವುದು ತನಿಖೆಯಿಂದ ತಿಳಿದು ಬಂದಿದೆ.ಸಂದೀಪ್‌ ಮರ್ದಾಳದಲ್ಲಿ ವಿನಯ ಎಂಬವರೊಂದಿಗೆ ಶಾಮಿಯಾನ ಹಾಕುವ

ನಾಪತ್ತೆಯಾಗಿದ್ದ ಸಂದೀಪ್ ಗೌಡನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ Read More »

ಕೇರಳದಲ್ಲಿ ಭೀಕರ ಕಾರು ಬಸ್ ಅಪಘಾತ : ಐವರು ಮೆಡಿಕಲ್ ವಿದ್ಯಾರ್ಥಿಗಳ ದುರ್ಮರಣ

ಕೇರಳ ರಾಜ್ಯದ ಆಲಪುಝ ಜಿಲ್ಲೆಯ ಮೆಡಿಕಲ್ ಕಾಲೇಜು ವಿಧ್ಯಾರ್ಥಿಗಳು ಸಂಚರಿಸುತ್ತಿದ್ದ ಟವೇರಾ ಕಾರ್ ಹಾಗೂ ಬಸ್‌ ನಡುವೆ ನಡೆದ ಭೀಕರ ಅಪಘಾತದಲ್ಲಿ ಐದು ಮಂದಿ ವಿದ್ಯಾರ್ಥಿಗಳು ಸಾವನ್ನಪ್ಪಿದ ಘಟನೆ ವರದಿಯಾಗಿದೆ.ಪ್ರಥಮ ವರ್ಷ ಮೆಡಿಕಲ್ ಅಧ್ಯಾಯನ ಮಾಡುತ್ತಿದ್ದ ವಿದ್ಯಾರ್ಥಿಗಳಾಗಿದ್ದು ಕಾರಿನಲ್ಲಿ 12 ವಿಧ್ಯಾರ್ಥಿಗಳು ಇದ್ದರು ಎನ್ನಲಾಗಿದೆ. 12 ವಿಧ್ಯಾರ್ಥಿಗಳ ಪೈಕಿ ಐವರು ಮೃತಪಟ್ಟಿರುವುದಾಗಿ ಸ್ಥಳೀಯ ಮೂಲಗಳು ವರದಿ ಮಾಡಿದೆ.ಇನ್ನುಳಿದ 7 ವಿದ್ಯಾರ್ಥಿಗಳಿಗೆ ಗಂಭೀರ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಕಾಯಂಗುಳಂ ಕಡೆಯಿಂದ ಎರ್ನಾಕುಲಂ ಕಡೆಗೆ ಹೊರಟಿದ್ದ ಟವೆರಾ ಕಾರು,

ಕೇರಳದಲ್ಲಿ ಭೀಕರ ಕಾರು ಬಸ್ ಅಪಘಾತ : ಐವರು ಮೆಡಿಕಲ್ ವಿದ್ಯಾರ್ಥಿಗಳ ದುರ್ಮರಣ Read More »

ಕವಿನುಡಿ ಪ್ರೇರಣಾ ನುಡಿಗಳ ವೀಡಿಯೋ ವಾಚನ ಸ್ಪರ್ಧೆಯಲ್ಲಿ ಅಕ್ಷತಾ ನಾಗನಕಜೆ ದ್ವಿತೀಯ

ರಾಜ್ಯ ಕರುನಾಡ ಹಣತೆ ಕವಿ ಬಳಗ ಮತ್ತು ಸಾಂಸ್ಕೃತಿಕ ಕಲಾ ತಂಡ (ರಿ) ಚಿತ್ರದುರ್ಗ ಇವರು ಆಯೋಜಿಸಿದ ಕವಿನುಡಿ ಪ್ರೇರಣಾ ನುಡಿಗಳ ವೀಡಿಯೋ ವಾಚನ ಸ್ಪರ್ಧೆಯಲ್ಲಿ ಪೆರುವಾಜೆ ಗ್ರಾಮ ಪಂಚಾಯತ್ ನ ಅಕ್ಷತಾ ನಾಗನಕಜೆ ದ್ವಿತೀಯ ಸ್ಥಾನ ಪಡಕೊಂಡಿದ್ದಾರೆ.ವಿಜೇತರಿಗೆ ಡಿಸೆಂಬರ್ 9ಕ್ಕೆ ಚಿತ್ರದುರ್ಗದಲ್ಲಿ ನಡೆಯುವ ಜಾನಪದ ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನ ಪ್ರಶಸ್ತಿ ನೀಡಲಾಗುವುದು.

ಕವಿನುಡಿ ಪ್ರೇರಣಾ ನುಡಿಗಳ ವೀಡಿಯೋ ವಾಚನ ಸ್ಪರ್ಧೆಯಲ್ಲಿ ಅಕ್ಷತಾ ನಾಗನಕಜೆ ದ್ವಿತೀಯ Read More »

ಭಾರೀ ಮಳೆ ಹಿನ್ನಲೆ ನಾಳೆ ದ.ಕ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಮುಂಜಾಗ್ರತಾ ಕ್ರಮವಾಗಿ ಡಿ.3 ರಂದು ಎಲ್ಲ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ಹಾಗೂ ಪಿಯು ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಪೆ ಮುಗಿಲನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭಾರೀ ಮಳೆ ಹಿನ್ನಲೆ ನಾಳೆ ದ.ಕ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ Read More »

ಸ್ಪೋಟಗೊಂಡ ಭಿನ್ನಮತ ದ.ಕ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಹೊಡೆದಾಟ

ದ.ಕ ಜಿಲ್ಲಾ ಕಾಂಗ್ರೆಸ್’ ನಲ್ಲಿ ಭಿನ್ನಮತ ಸ್ಫೋಟಗೊಂಡ ಹಿನ್ನಲೆಯಲ್ಲಿ ಜಿಲ್ಲೆಯ ಇಬ್ಬರು ನಾಯಕರು ಹೊಡೆದಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್‌ ಅವರು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ತುಂಬೆ ಚಂದ್ರ ಪ್ರಕಾಶ್ ಶೆಟ್ಟಿ ಗೆ ಹಲ್ಲೆ ನಡೆಸಿರುವುದಾಗಿ ಹೇಳಲಾಗುತ್ತಿದೆ.ಕೆಲವು ದಿನಗಳ ಹಿಂದೆ ಗ್ರಾ. ಪಂ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಜಿಲ್ಲೆಯ ಕಾಂಗ್ರೆಸ್ ಬೆಂಬಲಿತ ಗ್ರಾ ಪಂಚಾಯತ್‌ ಸದಸ್ಯರಿಗೆ ಮಂಗಳೂರಿನ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಕಛೇರಿಯಲ್ಲಿ ಸನ್ಮಾನ ನಿಗದಿಪಡಿಸಲಾಗಿತ್ತು. ಈ ಸಭೆಯಲ್ಲಿ ಜಿಲ್ಲಾ

ಸ್ಪೋಟಗೊಂಡ ಭಿನ್ನಮತ ದ.ಕ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಹೊಡೆದಾಟ Read More »

ಬ್ಯೂಟಿ ಪಾರ್ಲರ್ ಗೆ ತೆರಳಿದ ನವ ವಿವಾಹಿತೆ ಎಲ್ಲಿಗೆ ಹೋದಳು?

ನವವಿವಾಹಿತೆ ದಾವಣೆಗೆರೆ ಮೂಲದ ಚೆನ್ನಗಿರಿಯ ಮಂಗಳ ಯಾನೆ ಕಾವ್ಯಾ (28 ವರ್ಷ) ನವಂಬರ್ 20ರಿಂದ ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.ಸುಳ್ಯ ಪೊಲೀಸ್ ಠಾಣೆಯಲ್ಲಿ ಪತಿ ಪತ್ನಿಯನ್ನು ಹುಡುಕಿಕೊಡುವಂತೆ ದೂರು ನೀಡಿದ್ದಾರೆ. ನ.7ರಂದು ಕಾವ್ಯಾ ವಿಕ್ರಂ ಮದುವೆಯಾಗಿದ್ದರು. ನ.20ರಂದು ಈಕೆ ಬ್ಯೂಟಿ ಪಾರ್ಲರ್ ಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೊರಟು ಹೋದವರು ಮನೆಗೆ ಬಾರದೆ ತವರು ಮನೆಗೆ ಹೋಗದೆ ನಿಗೂಡವಾಗಿ ನಾಪತ್ತೆಯಾಗಿದ್ದಾರೆ.

ಬ್ಯೂಟಿ ಪಾರ್ಲರ್ ಗೆ ತೆರಳಿದ ನವ ವಿವಾಹಿತೆ ಎಲ್ಲಿಗೆ ಹೋದಳು? Read More »

error: Content is protected !!
Scroll to Top