ಜೋಡುಪಾಲ ಬಳಿ ಚಲಿಸುತ್ತಿದ್ದ ಕಾರು ಬೆಂಕಿಗೆ ಆಹುತಿ
ಜೋಡುಪಾಲ ಬಳಿ ಚಲಿಸುತ್ತಿದ್ದ ಡಸ್ಟರ್ ಕಾರಿಗೆ ಬೆಂಕಿ ಹತ್ತಿಕೊಂಡು ಕಾರು ಬೆಂಕಿಗೆ ಆಹುತಿಯಾದ ಘಟನೆ.ನ.4ರಂದು ವರದಿಯಾಗಿದೆ.ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.
ಜೋಡುಪಾಲ ಬಳಿ ಚಲಿಸುತ್ತಿದ್ದ ಕಾರು ಬೆಂಕಿಗೆ ಆಹುತಿ Read More »
ಜೋಡುಪಾಲ ಬಳಿ ಚಲಿಸುತ್ತಿದ್ದ ಡಸ್ಟರ್ ಕಾರಿಗೆ ಬೆಂಕಿ ಹತ್ತಿಕೊಂಡು ಕಾರು ಬೆಂಕಿಗೆ ಆಹುತಿಯಾದ ಘಟನೆ.ನ.4ರಂದು ವರದಿಯಾಗಿದೆ.ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.
ಜೋಡುಪಾಲ ಬಳಿ ಚಲಿಸುತ್ತಿದ್ದ ಕಾರು ಬೆಂಕಿಗೆ ಆಹುತಿ Read More »
ಸುಳ್ಯದ ವಿಷ್ಣು ಸರ್ಕಲ್ ನಿವಾಸಿ ಶ್ರೀನಿವಾಸ್ ರವರ ಪುತ್ರ ದೀಪಕ್ ರವರು ನ.2ರಂದು ಸಂಜೆ ಮಡಿಕೇರಿಯಲ್ಲಿ ಹೃದಯಾಘಾತದಿಂದ ನಿಧನರಾದರು.ಮೃತರು ಅವಿವಾಹಿತ ರಾಗಿದ್ದು ತಂದೆ ಶ್ರೀನಿವಾಸ್, ತಾಯಿ ಚಂದ್ರಿಕಾ, ಸಹೋದರ ಅನಿಲ್, ವಿನೋದ್ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.ಇಂದು ಸಂಜೆ ತನ್ನ ಕಾರಿನಲ್ಲಿ ಗೆಳೆಯನೊಂದಿಗೆ ಮಡಿಕೇರಿಗೆ ಹೋಗಿದ್ದರು. ಅಲ್ಲಿ ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ.ಮೃತರು ಸುಳ್ಯ ಶಾರದಾಂಬಾ ಸೇವಾ ಸಮಿತಿಯ ಸದಸ್ಯರಾಗಿ, ವಿಷ್ಣು ಸರ್ಕಲ್ ವೀರಕೇಸರಿ ಬಳಗದ ಪದಾಧಿಕಾರಿಯಾಗಿ ಉತ್ತಮ
ಸುಳ್ಯ ವಿಷ್ಣು ಸರ್ಕಲ್ ನಿವಾಸಿ ದೀಪಕ್ ನಿಧನ Read More »
ಮೈಸೂರಿನಿಂದ ಹಿಂದಿರುಗುತ್ತಿದ್ದ ಮಿನಿ ಬಸ್ ಅ.2ರಂದು ಮುಂಜಾನೆ ಸುಳ್ಯ ತಾಲೂಕಿನ ಪರಿವಾರಕಾನ ಬಳಿ ಅಪಘಾತಗೊಂಡ ಘಟನೆ ವರದಿಯಾಗಿದೆ.ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ವಾಹನ ರಸ್ತೆ ಪಕ್ಕಕ್ಕೆ ಪಲ್ಟಿಯಾಗಿದೆ.ಅಪಘಾತದ ವೇಳೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದವರು ಅಲ್ಪಸ್ವಲ್ಪ ಗಾಯಗಳಿಂದ ಪಾರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸ್ಥಳೀಯರು ಘಟನಾ ಸ್ಥಳಕ್ಕೆ ಧಾವಿಸಿ ಗಾಯಾಳುಗಳಿಗೆ ನೆರವಾಗಿದ್ದಾರೆ. ಹೆಚ್ಚಿನ ವಿವರಗಳು ಇನ್ನಷ್ಟೇ ತಿಳಿದು ಬರಬೇಕಿದೆ.
ಪರಿವಾಕಾನ ಬಳಿ ಮಿನಿ ಬಸ್ ಅಪಘಾತಗೊಂಡು ಹಲವರಿಗೆ ಗಾಯ Read More »
ಸುಳ್ಯ ತಾಲ್ಲೂಕು ಆಲೆಟ್ಟಿ ಗ್ರಾಮದ ಕೋಲ್ಚಾರು ಹಿರಿಯ ಪ್ರಾಥಮಿಕ ಶಾಲೆಯ 6 ನೇ ತರಗತಿ ವಿದ್ಯಾರ್ಥಿಗೆ ಶಿಕ್ಷಕರೊಬ್ಬರು ಗಂಭೀರವಾಗಿ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ.ಗಂಭೀರ ಗಾಯಗೊಂಡ ವಿಧ್ಯಾರ್ಥಿ ತಂದೆ ಹಾಗೂ ತಾಯಿ ಇಬ್ಬರು ಕೂಡ ವಿಕಲಚೇತನರು ಎನ್ನಲಾಗಿದೆ.ಶಿಕ್ಷಕ ಮನುಕುಮಾರ್ ವಿಧ್ಯಾರ್ಥಿ ಮೇಲೆ ತೀವ್ರ ಹಲ್ಲೆ ನಡೆಸಿದ್ದು ವಿಧ್ಯಾರ್ಥಿ ಕೈ ಮುರಿತವಾಗಿ ಚಿಕಿತ್ಸೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ಪೋಷಕರು ಸುಳ್ಯ ಪೋಲಿಸ್ ಠಾಣೆ ಹಾಗೂ ಚೈಲ್ಡ್ ಕೇರ್ ಗೆ ದೂರು ನೀಡಿರುವುದಾಗಿ ತಿಳಿದುಬಂದಿದೆ.
ಶಿಕ್ಷನಿಂದ ವಿದ್ಯಾರ್ಥಿಗೆ ಹಲ್ಲೆ Read More »
ಮಂಗಳೂರು ಮೂಲದ ರೌಡಿಶೀಟರ್, ಜೋಡಿಕೊಲೆ ಆರೋಪಿ ನೌಫಲ್ ಬಜಾಲ್ ಯಾನೆ ತುಕ್ಕ ನೌಫಲ್ ಎಂಬಾತನನ್ನು ಉಪ್ಪಳದಲ್ಲಿ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಮಂಗಳೂರಿನ ಬಜಾಲ್ ಫೈಝಲ್ ನಗರ ನಿವಾಸಿಯಾಗಿದ್ದ ಈತ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ನೌಫಲ್ ನ ಮೃತದೇಹವನ್ನು ಕಾಸರಗೋಡಿನ ಆಸ್ಪತ್ರೆಯ ಶವಾಗಾರದಲ್ಲಿಡಲಾಗಿದೆ. ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಮಂಗಳೂರು: ರೌಡಿಶೀಟರ್ ನ ಬರ್ಬರ ಕೊಲೆ Read More »
ವಿಶ್ವ ಹಿಂದು ಪರಿಷತ್ ಮುಖಂಡ ಶರಣ್ ಪಂಪ್ವೆಲ್ ರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.ಶರಣ್ ಪಂಪ್ವೆಲ್ ಅವರ ಆರ್ ಎಸ್ಎಸ್ ಮುಖಂಡರೊಬ್ಬರ ಪ್ರಚೋದರಕಾರಿ ಭಾಷಣದ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಕಾರಣ ವಿಶ್ವ ಹಿಂದೂ ಪರಿಷತ್ ಖಾತೆಯಲ್ಲಿ ಈ ವಿಡಿಯೋ ಹರಿದಾಡಿದ ಹಿನ್ನೆಲೆಯಲ್ಲಿ ಕದ್ರಿ ಠಾಣಾ ಪೊಲೀಸರು ಅವರನ್ನು ಬಂಧಿಸಿದ್ದಾಗಿ ತಿಳಿದುಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಶರಣ್ ಪಂಪ್ವೆಲ್ ಬಂಧನ Read More »
ಕಾರು ಡಿವೈಡರ್ ಗೆ ಢಿಕ್ಕಿ ಹೊಡೆದು ಕಾರು ಚಾಲಕ ಮೃತಪಟ್ಟು ನಾಲ್ವರು ಗಾಯಗೊಂಡ ಘಟನೆ ರಾ.ಹೆ.75ರ ಮೆಲ್ಕಾರಿನಲ್ಲಿ ಮಂಗಳವಾರ ರಾತ್ರಿ ನಡೆದಿದೆ.ಕಡಬ ತಾಲೂಕಿನ ಸವಣೂರು ಸಮೀಪದ ಕುದ್ಮಾರು ನಿವಾಸಿ ಕಾರ್ತಿಕ್(23) ಸಾವನ್ನಪ್ಪಿದ ಯುವಕ ಎಂದು ಗುರುತಿಸಲಾಗಿದೆ.ಕಾರಿನಲ್ಲಿದ್ದ ಸವಣೂರು ನಿವಾಸಿಗಳಾದ ಹರ್ಷಿತ್, ದೀಕ್ಷಿತ್, ಜಗದೀಶ್ ಮತ್ತು ನಿತಿನ್ ಎಂಬವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಉದ್ಯೋಗದ ಸಂದರ್ಶನ ಮುಗಿಸಿ ಉದ್ಯೋಗಕ್ಕೆ ಆಯ್ಕೆಯಾಗಿ ಮಂಗಳೂರಿನಿಂದ ಸವಣೂರಿನತ್ತ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.
ಭೀಕರ ಕಾರು ಅಪಘಾತದಲ್ಲಿ ಕುದ್ಮಾರಿನ ಯುವಕ ಸಾವು Read More »
ನೆರೆಮನೆಯವರ ತೋಟದಲ್ಲಿ ತೆಂಗಿನ ಮರಕ್ಕೆ ನೇಣು ಬಿಗಿದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಎಡಮಂಗಲ ಗ್ರಾಮದಿಂದ ವರದಿಯಾಗಿದೆ.ಜನಾರ್ದನ ಗೌಡ(62) ಮೃತ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದಾರೆ.ಜನಾರ್ದನ ಗೌಡ ಅವರು ಕೆಲಸಕ್ಕೆ ಹೋಗದೆ ಮನೆಯಲ್ಲೇ ಇದ್ದರು ಎನ್ನಲಾಗಿದೆ. ಅವರು ಜೀವನದಲ್ಲಿ ಜಿಗುಪ್ಪೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಬೆಳ್ಳಾರೆ ಠಾಣಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು ಮಹಜರು ನಡೆಸಿ ಪ್ರಕರಣ ದಾಖಲು ಮಾಡಿದ್ದಾರೆ.ಮೃತರು ಪತ್ನಿ ಓರ್ವ ಪುತ್ರ ಇಬ್ಬರು ಪುತ್ರಿಯನ್ನು ಅಗಲಿದ್ದಾರೆ.
ನೆರೆಮನೆಯವರ ತೋಟದ ತೆಂಗಿನ ಮರಕ್ಕೆ ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ Read More »
ಮಂಗಳೂರು ಪಾಂಡೆಶ್ವರ ಮಹಿಳಾ ಪೊಲೀಸ್ ಠಾಣೆಯ ASI ರಾಜೇಶ್ ಹೆಗ್ಡೆ ಅವರು ಸೆ.. 27ರಂದು ಹೃದಯಾಘಾತದಿಂದ ನಿಧನರಾಧರು.ರಾಜೇಶ ಹೆಗ್ಡೆ ಅವರು ಕಾಸರಗೋಡಿನ ಚಿತ್ತಾರಿ ನಿವಾಸಿಯಾಗಿದ್ದರು.1993ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡ ಅವರು ವಿಟ್ಲ ಠಾಣೆಯಲ್ಲಿ ಕರ್ತವ್ಯ ಆರಂಭವಿಸಿ ಬಂದರು ಸೇರಿದಂತೆ ವಿವಿಧ ಠಾಣೆಯಲ್ಲಿ ನಿರ್ವಹಿಸಿದ್ದರು. ಪ್ರಸ್ತುತ ಉರ್ವಸ್ಟೋರ್ ಬಳಿಯಲ್ಲಿ ಮನೆಮಾಡಿ ನೆಲೆಸಿದ್ದರು
ಎ.ಎಸ್.ಐ ರಾಜೇಶ್ ಹೆಗ್ಡೆ ಹೃದಯಾಘಾತದಿಂದ ನಿಧನ Read More »
ಸುಳ್ಯ ತಾಲೂಕಿನ ಕೊಲ್ಲಮೊಗ್ರು ಗ್ರಾಮ ಪಂಚಾಯತ್ ನಲ್ಲಿ ಸೊತ್ತುಗಳು ಕಳವಾಗಿದ್ದು ಈ ಬಗ್ಗೆ ಪಂಚಾಯತ್ ನ ಉಪಾಧ್ಯಕ್ಷರ ಮೇಲೆ ಶಂಕೆ ವ್ಯಕ್ತಪಡಿಸಿ ಸುಬ್ರಹ್ಮಣ್ಯ ಠಾಣೆಗೆ ದೂರು ನೀಡಲಾಗಿದ್ದು ಪ್ರಕರಣ ದಾಖಲಾಗಿದೆ.ಗ್ರಾಮ ಪಂಚಾಯತ್ ಪಿಡಿಒ ದೂರು ನೀಡಿದ್ದು, ಸೆ.25ರಂದು ಗ್ರಾಮ ಪಂಚಾಯತ್ ಚರಾಸ್ಥಿಗಳನ್ನು ಪರಿಶೀಲನೆ ಮಾಡುವಾಗ ಪಂಚಾಯತ್ ನ ಚರಾಸ್ಥಿಗಳಾದ ಹೆಡ್ಫೋನ್, ಧ್ವನಿವರ್ಧಕ ಸ್ಟ್ಯಾಂಡ್, ಮೈಕ್ ಸೆಟ್, ಸಿಸಿ ಕೆಮರಾಗಳು ಕಳವು ಆಗಿರುವುದು ಗಮನಕ್ಕೆ ಬಂದಿದ್ದು, ಕಳವಾದ ಸೊತ್ತುಗಳ ಮೌಲ್ಯ ಹತ್ತು ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ. ಕಳವಾದ
ಕೊಲ್ಲಮೊಗ್ರ ಗ್ರಾ.ಪಂ.ನ ಸೊತ್ತುಗಳ ಕಳವು: ಉಪಾಧ್ಯಕ್ಷ ಮಾಧವ ಚಾಂತಳ ವಿರುದ್ಧ ಪ್ರಕರಣ ದಾಖಲು Read More »