ಕ್ರೈಂ

ಕೆ.ಟಿ.ವಿಶ್ವನಾಥ ದಂಪತಿ ಕಾರು ಅಪಘಾತ

ಸುಳ್ಯ ತಾಲೂಕಿನನ ಗೋಂಟಡ್ಕದಲ್ಲಿ ಕಾರು ಚರಂಡಿಗೆ ಬಿದ್ದು ವೆಂಕಟರಮಣ ಸೊಸೈಟಿ ಮುಖ್ಯ ಕಾರ್ಯನಿರ್ವಹಣಾಧಿ ಕೆ.ಟಿ.ವಿಶ್ವನಾಥ ದಂಪತಿ ಅಪಾಯದಿಂದ ಪಾರಾದ ಘಟನೆ ವರದಿಯಾಗಿದೆ.ಅವರು ಕಚೇರಿಗೆ ಬೆಳಿಗ್ಗೆ ಕತ್ಯವ್ಯಕ್ಕೆ ಬರುತ್ತಿದ್ದ ವೇಳೆ ಗೋಂಟಡ್ಕ ತಿರುವಿನಲ್ಲಿ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿ ಬಿದ್ದಿದೆ.ಪತ್ನಿ ಗೆ ಸಣ್ಣ ಪುಟ್ಟ ಗಾಯವಾಗಿದ್ದು, ಮಕ್ಕಳು ಮತ್ತು ವಿಶ್ವನಾಥರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಕೆ.ಟಿ.ವಿಶ್ವನಾಥ ದಂಪತಿ ಕಾರು ಅಪಘಾತ Read More »

ಕಟ್ಟದ ಮೇಲೆ ವೆಲ್ಡಿಂಗ್ ಕೆಲಸ ನಿರ್ವಹಿಸುತ್ತಿದ್ದ ವೇಳೆ ಕುಸಿದು ಬಿದ್ದು ಮೃತ್ಯು

ಸುಳ್ಯ ಜ್ಯೋತಿ ಸರ್ಕಲ್ ಬಳಿ ಕಟ್ಟಡವೊಂದರಲ್ಲಿ ವೆಲ್ಡಿಂಗ್ ಮಾಡುತ್ತಿದ್ದ ವ್ಯಕ್ತಿ ಕುಸಿದು ಬಿದ್ದು ಹೃದಯಾಘಾತದಿಂದ ಮೃತಪಟ್ಟ ಘಟನೆ ವರದಿಯಾಗಿದೆ.ಅಲ್ಲಿ ಸೇರಿದ್ದ ಸ್ಥಳೀಯರು ಕೂಡಲೇ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದೊಯ್ದರು. ಆದರೆ ಆಸ್ಪತ್ರೆಗೆ ತಲುಪುಷ್ಟರಲ್ಲಿ ಮೃತಪಟ್ಟಿದ್ದರು. ಮೃತಪಟ್ಟ ವ್ಯಕ್ತಿ ಕಲ್ಲಡ್ಕ ನಿವಾಸಿ ಪ್ರಮೋದ್ ಎಂದು ತಿಳಿದುಬಂದಿದೆ.

ಕಟ್ಟದ ಮೇಲೆ ವೆಲ್ಡಿಂಗ್ ಕೆಲಸ ನಿರ್ವಹಿಸುತ್ತಿದ್ದ ವೇಳೆ ಕುಸಿದು ಬಿದ್ದು ಮೃತ್ಯು Read More »

ಪೆರಾಜೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ,ಸ್ಥಳೀಯ ಬಿಜೆಪಿ ಮುಖಂಡ ಎ.ಸಿ ಹೊನ್ನಪ್ಪ ಗೌಡ ನಿಧನ

ಪೆರಾಜೆ ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷ ,ಪೆರಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರು,ಬಿಜೆಪಿ ಹಿರಿಯ ಮುಖಂಡರು ಅಮಚೂರು ಎ.ಸಿ ಹೊನ್ನಪ್ಪ ಅವರು ಅಲ್ಪ ಕಾಲದ ಅನಾರೋಗ್ಯದಿಂದ ಇಂದು ಮುಂಜಾನೆ ನಿಧನ ಹೊಂದಿದ್ದಾರೆ.

ಪೆರಾಜೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ,ಸ್ಥಳೀಯ ಬಿಜೆಪಿ ಮುಖಂಡ ಎ.ಸಿ ಹೊನ್ನಪ್ಪ ಗೌಡ ನಿಧನ Read More »

ಪಾದಚಾರಿಗೆ ಕಾರು ಡಿಕ್ಕಿ ಹೊಡೆದು ಗಾಯ

ಸುಳ್ಯದ ಬಸ್ ನಿಲ್ದಾಣದ ಸಮೀಪ ಮಂಗಳವಾರ ರಾತ್ರಿ ಕಾರು ಪಾದಚಾರಿಯೊಬ್ಬರಿಗೆ ಡಿಕ್ಕಿ ಹೊಡೆದ ಘಟನೆ ವರದಿಯಾಗಿದೆ. ಡಿಕ್ಕಿಯ ರಭಸಕ್ಕೆ ಪಾದಾಚಾರಿ ಗಾಯಗೊಂಡಿದ್ದಾರೆ.ಗಾಯಳುವನ್ನು ಸ್ಥಳೀಯರು ಸೇರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಾಳು ಯಾರು ಅನ್ನುವು ಮಾಹಿತಿ ದೊರೆತ್ತಿಲ್ಲ.ಸುಳ್ಯ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ಪಾದಚಾರಿಗೆ ಕಾರು ಡಿಕ್ಕಿ ಹೊಡೆದು ಗಾಯ Read More »

ಅಕ್ರಮ‌ ಜಾನುವಾರು ಸಾಗಾಟ ವಾಹನಗಳಿಗೆ ಅರಂತೋಡಿನಲ್ಲಿ ತಡೆ

ಪುತ್ತೂರು ಭಾಗದಿಂದ ಮಂಡ್ಯ ಮೈಸೂರು ಕಡೆಗೆ ಅಕ್ರಮವಾಗಿ ದನ ಸಾಗಾಟ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಹಿಂದುಪರ ಸಂಘಟನೆಗಳು ವಾಹನಗಳಿಗೆ ತಡೆಯೊಡ್ಡಿ ವಾಹನವನ್ನು ಇದೀಗ ಸುಳ್ಯ ಪೋಲಿಸರಿಗೆ ಒಪ್ಪಿಸಿದ ಘಟನೆ ಇದೀಗ ನಡೆದಿದೆ. ಎರಡು ವಾಹನಗಳಲ್ಲಿ 5 ಹೋರಿಗಳು ಹಾಗು 2 ಹಸುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದರೆನ್ನಲಾಗಿದೆ. ವಾಹನ ಚಾಲಕರು ಸೇರಿದಂತೆ ಮೂವರನ್ನು ಪೋಲಿಸರು ಇದೀಗ ಠಾಣೆಗೆ ಕರೆತಂದಿದ್ದು ಈ ಕುರಿತು ತನಿಖೆ ನಡೆಸುತ್ತಿದ್ದಾರೆ.

ಅಕ್ರಮ‌ ಜಾನುವಾರು ಸಾಗಾಟ ವಾಹನಗಳಿಗೆ ಅರಂತೋಡಿನಲ್ಲಿ ತಡೆ Read More »

ಭೀಕರ ಅಪಘಾತದಲ್ಲಿ ಕರ್ಲಪ್ಪಾಡಿಯ ವ್ಯಕ್ತಿ ಸಾವು

ಜಾಲ್ಸೂರು – ಕಾಸರಗೋಡು ರಸ್ತೆಯ ಕುಂಟಾರು – ಮುರೂರು ಮಧ್ಯೆ ಓಮ್ಮಿ ಮತ್ತು ಮಿನಿ ಲಾರಿ ನಡುವೆ ನಡೆದ ಭೀಕರ ಅಪಘಾತದಲ್ಲಿ ಅಜ್ಜಾವರ ಕರ್ಲಪ್ಪಾಡಿಯ ಮಹಮ್ಮದ್ ಕುಂಞಯವರು ಮೃತಪಟ್ಟಿರುವುದಾಗಿ ತಿಳಿದುಬಂದಿದೆ.ಓಮ್ನಿ ಕಾರು ಸಂಪೂರ್ಣ ಜಖಂಗೊಂಡಿದೆ.ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.

ಭೀಕರ ಅಪಘಾತದಲ್ಲಿ ಕರ್ಲಪ್ಪಾಡಿಯ ವ್ಯಕ್ತಿ ಸಾವು Read More »

ಗುಂಡಿಮಜಲು ಗಣಪಯ್ಯ ಜಿ.ವಿ ನಿಧನ

ಚೆಂಬು ಗ್ರಾಮದ ಗುಂಡಿಮಜಲು ಗಣಪಯ್ಯ ಜಿ.ವಿ.ಯವರು ಮಂಗಳವಾರ ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.ಅವರಿಗೆ 65 ವರ್ಷ ಪ್ರಾಯವಾಗಿತ್ತು.ಮೃತರು ಪತ್ನಿ ಲಕ್ಷ್ಮಿ, ಪುತ್ರ ಚಿಂತನ್, ಪುತ್ರಿ ಅನಿತಾ, ಅಳಿಯ, ಸಹೋದರರು, ಸಹೋದರಿಯರು, ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.ಗಣಪಯ್ಯರವರು ಚೆಂಬು ಗ್ರಾಮ ಪಂಚಾಯತಿನ ಮಾಜಿ ಸದಸ್ಯರಾಗಿ, ಊರು ಗೌಡರಾಗಿ, ಚೆಂಬು ಕಿನುಮಾಣಿ ದೈವಸ್ಥಾನದ ಕಾರ್ಯದರ್ಶಿ ಹಾಗೂ ಉಗ್ರಾಣ ಮುಖ್ಯಸ್ಥರಾಗಿ, ಜೈ ಹಿಂದ್ ಯುವಕ ಮಂಡಲದ ಸಕ್ರಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು

ಗುಂಡಿಮಜಲು ಗಣಪಯ್ಯ ಜಿ.ವಿ ನಿಧನ Read More »

ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ನಿಧನದ ಹಿನ್ನೆಲೆಯಲ್ಲಿ ಡಿ.11ರಂದು ಸರಕಾರಿ ರಜೆ ಘೋಷಣೆ

ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ನಿಧನದ ಹಿನ್ನೆಲೆಯಲ್ಲಿ ಡಿ.11ರಂದು ಸರಕಾರಿ ರಜೆ ಘೋಷಣೆ ಮಾಡಲಾಗಿದೆ. ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರಾಗಿದ್ದ.ಎಸ್.ಎಂ.ಕೃಷ್ಣ ರವರು ಡಿ.10ರಂದು ಮಂಗಳವಾರ ಬೆಳಗಿನ ಜಾವ 02:30ಕ್ಕೆ ನಿಧನರಾಗಿದ್ದಾರೆ. ಅಂತ್ಯಕ್ರಿಯೆ ಡಿ.11 ಬುಧವಾರದಂದುಹುಟ್ಟೂರಾದ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಸೋಮನಹಳ್ಳಿ ಸ್ವಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗುವುದು. ದಿವಂಗತರ ಗೌರವಾರ್ಥವಾಗಿ ಡಿ.11 ಬುಧವಾರದಂದು ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಕಚೇರಿಗಳಿಗೆ ಮತ್ತು ಎಲ್ಲಾ ಶಾಲಾ ಕಾಲೇಜುಗಳಿಗೆ ಸಾರ್ವಜನಿಕ ರಜೆಯನ್ನು ಘೋಷಿಸಲಾಗಿದೆ. ಮೂರು ದಿನಗಳು ರಾಜ್ಯಾದ್ಯಂತ

ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ನಿಧನದ ಹಿನ್ನೆಲೆಯಲ್ಲಿ ಡಿ.11ರಂದು ಸರಕಾರಿ ರಜೆ ಘೋಷಣೆ Read More »

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ನಿಧನಕ್ಕೆ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ ಶಹೀದ್ ತೆಕ್ಕಿಲ್ ಸಂತಾಪ

ರಾಜ್ಯದ ಮಾಜಿ ಸ್ಪೀಕರ್, ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿಗಳು, ಕೇಂದ್ರದ ಮಾಜಿ ಸಚಿವರಾಗಿ ಹಾಗೂ ಮಹಾರಾಷ್ಟ್ರದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದ ಎಸ್.ಎಂ ಕೃಷ್ಣರವರ ನಿಧನವು ಅತೀವ ದುಃಖವನ್ನುಂಟು ಮಾಡಿದೆ. ಅವರ ನಿಧನದಿಂದ ಓರ್ವ ರಾಜಕೀಯ ಮತ್ಸದ್ಧಿಯನ್ನು ಕಳೆದುಕೊಂಡಿದೆ ಎಂದು ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ ಶಹೀದ್ ತೆಕ್ಕಿಲ್ ಸಂತಾಪ ವ್ಯಕ್ತಪಡಿಸಿರುತ್ತಾರೆ.1994 ರಲ್ಲಿ ರಾಜ್ಯ ಸಭಾ ಸದಸ್ಯರಾಗಿದ್ದಾಗ ಎಸ್.ಎಂ ಕೃಷ್ಣರವರ ಪರಿಚಯವಾಗಿ ಅವರೊಂದಿಗಿನ ಸಂಬಂಧ ಕೊನೆ ತನಕ ಇತ್ತು. ನನ್ನನ್ನು ಮಗನಂತೆ ನೋಡಿಕೊಂಡಿದ್ದರು ಮತ್ತು ರಾಜಕೀಯವಾಗಿ ಬೆಳೆಸಿದ್ದರು. ಕರ್ನಾಟಕ ಸರಕಾರದ

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ನಿಧನಕ್ಕೆ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ ಶಹೀದ್ ತೆಕ್ಕಿಲ್ ಸಂತಾಪ Read More »

ರಿಕ್ಷಾ ಚಾಲಕ ನೇಣು ಬಿಗಿದು ಆತ್ಮ ಹತ್ಯೆ

ಸುಳ್ಯ ಜೂನಿಯ‌ರ್ ಕಾಲೇಜು ರಸ್ತೆಯ ರಿಕ್ಷಾ ಪಾರ್ಕಿಂಗ್ ನಲ್ಲಿ ರಿಕ್ಷಾ ಪಾರ್ಕಿಂಗ್ ಮಾಡಿಕೊಂಡು ರಿಕ್ಷಾ ಓಡಿಸುತ್ತಿದ್ದ ಮೂಲತ ತೊಡಿಕಾನ ಗ್ರಾಮದ ಕೋಣಗುಂಡಿ ನಿವಾಸಿ ಜಗನ್ನಾಥ ಎಂಬವರು ಸುಳ್ಯದ ಬಾಡಿಗೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.ಅವರಿಗೆ ಸುಮಾರು 50 ವರ್ಷ ವಯಸ್ಸಾಗಿತ್ತು.ಸುಳ್ಯ ಪೊಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರಿಕ್ಷಾ ಚಾಲಕ ನೇಣು ಬಿಗಿದು ಆತ್ಮ ಹತ್ಯೆ Read More »

error: Content is protected !!
Scroll to Top