ಕ್ರೈಂ

ಸಹೋದರನ ಅತ್ತೆಯನ್ನು ಕೊಲೆ ಮಾಡಿದ ಆರೋಪಿ ಆತ್ಮಹತ್ಯೆ

ಮೂಡಿಗೆರೆ ತಾಲೂಕಿನ ಭಾರತೀಬೈಲ್ ಗ್ರಾಮದಲ್ಲಿ ಸಹೋದರನ ಅತ್ತೆಯನ್ನು ಕೊಲೆ ಮಾಡಿದ್ದ ಆರೋಪಿ ಶಶಿಧ‌ರ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆರೋಪಿ ಶಶಿಧರ್ ಕುಡಿದ ಮತ್ತಿನಲ್ಲಿ ಬುದ್ದಿ ಹೇಳಿದ ಕಾರಣಕ್ಕೆ ಫೆ.16 ರಂದು ಸಹೋದರನ ಅತ್ತೆ ಯಮುನಾ (65) ಅವರನ್ನು ಶಶಿಧರ್ ಎಂಬ ವ್ಯಕ್ತಿ ಸುತ್ತಿಗೆಯಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದ. ಕೊಲೆ ಮಾಡಿದ ಬಳಿಕ ಶಶಿಧರ್ ಸ್ಥಳದಿಂದ ಪರಾರಿಯಾಗಿದ್ದ. ಈ ಸಂಬಂಧ ಬಣಕಲ್ ಪೊಲೀಸರು ತನಿಖೆ ಆರಂಭಿಸಿದ್ದರು. ಶಶಿಧರ್ ನನ್ನು ಪತ್ತೆ ಹಚ್ಚಲು ಪೊಲೀಸರು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದರು, […]

ಸಹೋದರನ ಅತ್ತೆಯನ್ನು ಕೊಲೆ ಮಾಡಿದ ಆರೋಪಿ ಆತ್ಮಹತ್ಯೆ Read More »

ಶಾಲಾ ಮಕ್ಕಳ ಮೇಲೆ ಹೆಜ್ಜೇನು ದಾಳಿ,ಅಸ್ವಸ್ಥರಾದ ಮಕ್ಕಳು

ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆ ಸ.ಹಿ.ಪ್ರಾ ಶಾಲೆಯಲ್ಲಿ ಮಕ್ಕಳ ಮೇಲೆ ಹೆಚ್ಚೇನು ದಾಳಿ ನಡೆಸಿದ ಘಟನೆ ಫೆ.18 ವರದಿಯಾಗಿದೆ. ಸುಮಾರು 15 ಮಕ್ಕಳು ಹೆಚ್ಚೇನು ದಾಳಿಯಿಂದ ಅಸ್ವಸ್ಥರಾಗಿದ್ದು ಸ್ಥಳೀಯ ಕ್ಕಕ್ಕಿಂಜೆ ಕೃಷ್ಣ ಆಸ್ಪತ್ರೆಗೆ ದಾಖಲಿಸಲಾಗಿದೆ.ಕಕ್ಕಿಂಜೆ ಮಕ್ಕಳು ಶಾಲೆಯಲ್ಲಿ ಪ್ರೆಯರ್ ಮಾಡಿದ ಬಳಿಕ ಏಕಾಏಕಿ ಹೆಚ್ಚೇನು ದಾಳಿ ನಡೆಸಿದೆ. ಮಕ್ಕಳು ಚಲ್ಲಾಪಿಲ್ಲಿಯಾಗಿ ಓಡಿದ್ದು ಹಲವರಿಗೆ ಹೆಚ್ಚೇನು ಕಚ್ಚಿದೆ. ಮಕ್ಕಳ ಅಳು ಕೇಳಿ ಸ್ಥಳೀಯರು ಶಾಲೆಗೆ ಧಾವಿಸಿದ್ದು ಮಕ್ಕಳನ್ನು ರಕ್ಷಿಸುವ ಪ್ರಯತ್ನ ನಡೆಸಿದ್ದಾರೆ. ಹಲವು ಮಕ್ಕಳಿಗೆ ಈ ವೇಳೆ ಹೆಚ್ಚೇನು ಕಚ್ಚಿದ್ದು

ಶಾಲಾ ಮಕ್ಕಳ ಮೇಲೆ ಹೆಜ್ಜೇನು ದಾಳಿ,ಅಸ್ವಸ್ಥರಾದ ಮಕ್ಕಳು Read More »

ತೊಡಿಕಾನ : ಬಾಳೆಕಜೆ ಕೂಸಕ್ಕ ನಿಧನ

ಸುಳ್ಯ ತಾಲೂಕು ತೊಡಿಕಾನ ಗ್ರಾಮದ ಬಾಳೆಕಜೆ ಶೇಷಪ್ಪ ಗೌಡರ ಧರ್ಮ ಪತ್ನಿ ಕೂಸಕ್ಕ ಫೆ.18ರಂದು ತಮ್ಮ ಮನೆಯಲ್ಲಿ ಅಸೌಖ್ಯದಿಂದ ನಿಧನರಾದರು.ಅವರಿಗೆ 78 ವರ್ಷ ಪ್ರಾಯವಾಗಿತ್ತು.ಅವರು ಪತಿ ಶೇಷಪ್ಪ ಗೌಡ,ಮಗ ಶಶಿಕಾಂತ,ಸೊಸೆ,ಐದು ಮಂದಿ ಹೆಣ್ಣು ಮಕ್ಕಳು,ಸೇರಿದಂತೆ ಮೊಮ್ಮಕ್ಕಳು ಮರಿಮೊಮ್ಮಕ್ಕಳನ್ನು ಕುಟುಂಬಸ್ಥರನ್ನು,ಬಂಧುಗಳನ್ನು ಅಗಲಿದ್ದಾರೆ.

ತೊಡಿಕಾನ : ಬಾಳೆಕಜೆ ಕೂಸಕ್ಕ ನಿಧನ Read More »

ನದಿಗೆ ಹಾರಿ ವ್ಯಕ್ತಿ ಆತ್ಮ ಹತ್ಯೆ

ನೇತ್ರಾವತಿ ನದಿಗೆ ಹಾರಿ ವ್ಯಕ್ತಿ ಆತ್ಮಹ*ತ್ಯೆ ಮಾಡಿಕೊಂಡಿರುವ ಘಟನೆ ಫರಂಗಿಪೇಟೆಯಲ್ಲಿ ನಡೆದಿದೆ.ಪುದು ಗ್ರಾಮದ ಕುಂತ್ಕಳ ನಿವಾಸಿ ನಿತ್ಯಾನಂದ (65) ಆತ್ಮಹತ್ಯೆ ಮಾಡಿಕೊಂಡವರು. ಹಿಂದೆ ಪೈಂಟಿಂಗ್ ಕೆಲಸ ಮಾಡುತ್ತಿದ್ದ ಅವರು 10 ವರ್ಷಗಳಿಂದ ಕೆಲಸ ಮಾಡದೆ ವಿಪರೀತ ಕುಡಿತದ ಚಟ ಹೊಂದಿದ್ದರು.ಫೆ. 16ರಂದು ಕೂಡ ಮಧ್ಯಾಹ್ನ ಮದ್ಯ ಸೇವಿಸಿ ಬಂದು ನದಿಗೆ ಹಾರಿದ್ದಾರೆ. ಅದನ್ನು ಕಂಡು ಸ್ಥಳೀಯ ದೋಣಿಯವರು ರಕ್ಷಿಸಲು ಪ್ರಯತ್ನಿಸಿದ್ದರೂ ಸಾಧ್ಯವಾಗಲಿಲ್ಲ ಎಂದು ಅವರ ಪುತ್ರ ಧನಂಜಯ ದೂರಿನಲ್ಲಿ ತಿಳಿಸಿದ್ದಾರೆ.

ನದಿಗೆ ಹಾರಿ ವ್ಯಕ್ತಿ ಆತ್ಮ ಹತ್ಯೆ Read More »

ಗಂಡನ ಅಕ್ರಮ ಸಂಬಂಧ ಹಿನ್ನಲೆ ಮಗಳನ್ನು ಕೊಂದು ತಾನು ಆತ್ಮ ಹತ್ಯೆ ಮಾಡಿಕೊಂಡ ನೊಂದ ಮಹಿಳೆ!

ಬೆಂಗಳೂರು ಬಗಲಗುಂಟೆಯ ಮಹಿಳೆಯೊಬ್ಬಳು ಗಂಡನ ಅಕ್ರಮ ಸಂಬಂಧಕ್ಕೆ ನೊಂದು , ತನ್ನ 5 ವರ್ಷದ ಮಗಳನ್ನು ಕೊಲೆಗೈದು ಬಳಿಕ ಆಕೆಯು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಿಂದ ವರದಿಯಾಗಿದೆ.ಆತ್ಮಹತ್ಯೆಮಾಡಿಕೊಂಡ ಮಹಿಳೆ ಪಾವಘಡದ ಗುಂಡಾರನಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆಯಾಗಿದ್ದ ಶೃತಿ (33) ಎನ್ನಲಾಗಿದೆ. ಮಹಿಳೆ ತನ್ನ ಐದು ವರ್ಷದ ರೋಶಿಣಿಯನ್ನು ಫ್ಯಾನ್‌ಗೆ ನೇಣು ಹಾಕಿ ಬಳಿಕ ಅದೇ ಫ್ಯಾನಿಗೆ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.ಈ ಘಟನೆಯು ಭಾನುವಾರ ಸಂಜೆ ಘಟನೆ ನಡೆದಿದ್ದು, ಶೃತಿ ತನ್ನ ಗಂಡ ಗೋಪಾಲಕೃಷ್ಣನ

ಗಂಡನ ಅಕ್ರಮ ಸಂಬಂಧ ಹಿನ್ನಲೆ ಮಗಳನ್ನು ಕೊಂದು ತಾನು ಆತ್ಮ ಹತ್ಯೆ ಮಾಡಿಕೊಂಡ ನೊಂದ ಮಹಿಳೆ! Read More »

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ ಎಂ ಶಾಹಿದ್ ತೆಕ್ಕಿಲ್ ಕಾರು ಕಾಸರಗೋಡಿನಲ್ಲಿ ಅಪಘಾತ ಪ್ರಾಣಾಪಯದಿಂದ ಪಾರು

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ.ಶಹೀದ್ ಕಾರು ಕಾಸರಗೋಡಿನಲ್ಲಿ ಅಪಘಾತವಾಗಿ ಕಾರು ಜಖಂಗೊಂಡು ಅವರು ಸಹಿತ ಸಹ ಪ್ರಯಾಣಿಕರು ಪ್ರಾಣಾಪಯದಿಂದ ಪಾರಾದ ಘಟನೆ ಸೋಮವಾರ ವರದಿಯಾಗಿದೆ.ಕೆಪಿಸಿಸಿ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಪೆರಿಯ ಕಲ್ಯೊಟ್ ನಲ್ಲಿ ಕೃಪೆಶ್ ಮತ್ತು ಸಜಿತ್ಲಾಲ್ ಅವರ 6 ನೇ ಪುಣ್ಯ ಸ್ಮರಣೆ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದ ವೇಳೆ ಅವರ ಕನ್ನಡ ಭಾಷಣವನ್ನು ಮಲಯಾಳಂ ಭಾಷೆಗೆ ತರ್ಜುಮೆ ಮಾಡಲು ಅವರ ವಾಹನದ ಬೆಂಗಾವಲು ವಾಹನದ ಜೊತೆಯಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಕಾಸರಗೋಡು ನಗರದ ಟ್ರಾಫಿಕ್

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ ಎಂ ಶಾಹಿದ್ ತೆಕ್ಕಿಲ್ ಕಾರು ಕಾಸರಗೋಡಿನಲ್ಲಿ ಅಪಘಾತ ಪ್ರಾಣಾಪಯದಿಂದ ಪಾರು Read More »

ಹೃದಯಾಘಾತದಿಂದ ಪದವಿ ವಿದ್ಯಾರ್ಥಿ ಸಾವು

ಹೃದಯಾಘಾತದಿಂದ ಪದವಿ ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ ಬೆಳ್ತಂಗಡಿ ತಾಲೂಕಿನ ತೋಟತ್ತಾಡಿ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ನಿವಾಸಿ ದ್ವಿತೀಯ ವರ್ಷದ ಪದವಿ ವಿದ್ಯಾರ್ಥಿ ಜಯರಾಮ (19) ರವರಿಗೆ ಹೃದಯಾಘಾತ ಸಂಭವಿಸಿದ್ದು ಇಂದು(ಫೆ.17) ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.ಇವರು ಬೆಳ್ತಂಗಡಿ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದರು. ಜ. 22 ರಂದು ಬೆಳಿಗ್ಗೆ ಏಕಾಏಕಿ ಹೃದಯಾಘಾತ ಸಂಭವಿಸಿದ್ದು ಬೈನ್ ಸ್ಟೋಕ್ ಕೂಡ ಸಂಭವಿಸಿತ್ತು ಈ ವೇಳೆ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಜಯರಾಮ ರವರು ಚಿಕಿತ್ಸೆ ಫಲಾಕಾರಿಯಾಗದೆ ಫೆ.17

ಹೃದಯಾಘಾತದಿಂದ ಪದವಿ ವಿದ್ಯಾರ್ಥಿ ಸಾವು Read More »

ಕನಕಮಜಲು ಗ್ರಾಮ ಪಂಚಾಯತ್ ಉಪಾಧ್ಯಕ್ಷ ರವಿಚಂದ್ರ ಕಾಪಿಲ ನಿಧನ

ಸುಳ್ಯ ತಾಲೂಕಿನ‌ ಕನಕಮಜಲು ಗ್ರಾಮ ಪಂಚಾಯತಿ ಉಪಾಧ್ಯಕ್ಷ ರವಿಚಂದ್ರ ಕಾಪಿಲ ಅಸೌಖ್ಯದಿಂದ ಫೆ.17ರಂದು ಮುಂಜಾನೆ ನಿಧನರಾದರು. ಅವರಿಗೆ 50 ವರ್ಷ ವಯಸ್ಸಾಗಿತ್ತು.ಮೃತರು ತಾಯಿ ಹೊನ್ನಮ್ಮ, ಪತ್ನಿ ಹೇಮಾವತಿ, ಪುತ್ರರಾದ ಮೌರ್ಯ, ಆರ್ಯ ಸೇರಿದಂತೆ ಕುಟುಂಬಸ್ಥರನ್ನು ಅಗಲಿದ್ದಾರೆ.ಇಂದು ಅವರ ಮನೆಯಲ್ಲಿ‌ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.ಅಂತಿಮ ದರ್ಶನದ ಬಳಿಕ ಅಂತ್ಯಕ್ರಿಯೆ ನಡೆಯಲಿದೆ.

ಕನಕಮಜಲು ಗ್ರಾಮ ಪಂಚಾಯತ್ ಉಪಾಧ್ಯಕ್ಷ ರವಿಚಂದ್ರ ಕಾಪಿಲ ನಿಧನ Read More »

ಬಾಣಂತಿ ಸಾವು

ಬಾಣಂತಿ ಸಾವನ್ನಪ್ಪಿರುವ ಘಟನೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.ಮಾಳೂರು ಗ್ರಾಮದ ಮಂಜುಳಾ (25) ಮೃತ ಬಾಣಂತಿ. ಫೆಬ್ರವರಿ .10 ರಂದು ಅವರಿಗೆ ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿತ್ತು. ಬಳಿಕ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು.ಈ ಹಿನ್ನಲೆ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಅವರು ಸಾವಿಗೀಡಾಗಿದ್ದಾರೆ. ಮಂಜುಳಾ ಅವರಿಗೆ ಒಂದು ವರ್ಷದ ಹಿಂದೆ ವಿವಾಹವಾಗಿತ್ತು.

ಬಾಣಂತಿ ಸಾವು Read More »

ಸುಳ್ಯ : ನದಿಯಲ್ಲಿ ಪತ್ತೆಯಾದ ಶವದ ಗುರುತು ಪತ್ತೆ!

ಸುಳ್ಯ ಪಯಸ್ವಿನಿ ನದಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಭಾನುವಾರ ಪತ್ತೆಯಾದ ಶವದ ಗುರುತು ಪತ್ತೆಯಾಗಿದ್ದು, ಇದು ಪಿರಿಯಾಪಟ್ಟಣದ ಅಜಿತ್ (24) ಎಂಬರ ಶವ ಎಂದು ತಿಳಿದುಬಂದಿದೆ.ಈತ ಸುಳ್ಯದ ವೆಲ್ಕಮ್ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದನೆಂದೂ, ಕೆಲ ತಿಂಗಳ ಹಿಂದೆ ಊರಿಗೆ ಹೋಗುತ್ತೇನೆ ಎಂದು ತೆರಳಿದ್ದ ಎನ್ನಲಾಗಿದೆ. ಫೆ.16ರಂದು ಪಯಸ್ವಿನಿ ನದಿ ಹರಿಯುವ ಅಂಗಡಿಮಠ ಗೋಳಿಮೂಲೆ ಎಂಬಲ್ಲಿ ಸ್ಥಳೀಯರಿಗೆ ಕೊಳೆತ ಶವ ಕಂಡುಬಂತೆನ್ನಲಾಗಿದೆ. ಪೋಲೀಸರಿಗೆ ವಿಷಯ ತಿಳಿಸಲಾಯಿತು. ಪರಿಶೀಲನೆ ನಡೆಸಿದಾಗ ದಾಖಲೆ ಇದ್ದುದನ್ನು ಕಂಡು ಪ್ರದೀಪ್ ಪಿರಿಯಾಪಟ್ಟಣ ಆತ ಸುಳ್ಯದ

ಸುಳ್ಯ : ನದಿಯಲ್ಲಿ ಪತ್ತೆಯಾದ ಶವದ ಗುರುತು ಪತ್ತೆ! Read More »

error: Content is protected !!
Scroll to Top