ಕ್ರೈಂ

ಶಾಲೆಯಲ್ಲಿ ಜಗಳ ಮಾಡುತ್ತಿದ್ದ ಶಿಕ್ಷಕಿಯರಿಗೆ ವಾರ್ನಿಂಗ್ ಮಾಡಿದ ಪೋಷಕರು

ಪ್ರತಿದಿನ ಶಾಲೆಯಲ್ಲಿ ಜಗಳ ಮಾಡುತ್ತಿದ್ದ ಶಿಕ್ಷಕಿಯರಿಗೆ ಪೋಷಕರು ಶಾಲೆಗೆ ಬಂದು ವಾರ್ನಿಂಗ್ ಕೊಟ್ಟ ಘಟನೆ ಬಂಟ್ವಾಳ ತಾಲೂಕಿನ ಕನ್ಯಾನ ಗ್ರಾಮದ ಕಣಿಯೂರು ಸರಕಾರಿ ಶಾಲೆಯಲ್ಲಿ ನಡೆದಿದೆ.ಈ ಶಾಲೆಯಲ್ಲಿ 46 ವಿದ್ಯಾರ್ಥಿಗಳಿದ್ದಾರೆ. ಈ ಶಾಲೆಗೆ ಮೂವರು ಶಿಕ್ಷಕರನ್ನು ಶಿಕ್ಷಣ ಇಲಾಖೆ ನಿಯೋಜಿಸಿತ್ತು, ಮುಖ್ಯ ಶಿಕ್ಷಕಿ ಅನಿತಾ,ಲವಿನಾ ಮತ್ತು ಸುಮಯ್ಯ, ಮುಖ್ಯ ಶಿಕ್ಷಕಿ ಅನಿತಾ ಮತ್ತು ಸುಮಯ್ಯ ನಡುವೆ ಮನಸ್ತಾಪ ಇತ್ತು ಎಂದು ಹೇಳಲಾಗಿದ್ದು, ಈ ಹಿನ್ನಲೆ ಇಬ್ಬರು ಪ್ರತಿದಿನ ಶಾಲೆಯಲ್ಲೇ ಜಗಳವಾಡುತ್ತಿದ್ದರು ಎನ್ನಲಾಗಿದೆ.ಇದರಿಂದ ಬೇಸತ್ತ ವಿದ್ಯಾರ್ಥಿಗಳಿಂದ ಸೀದಾ ಮನೆಯಲ್ಲಿ […]

ಶಾಲೆಯಲ್ಲಿ ಜಗಳ ಮಾಡುತ್ತಿದ್ದ ಶಿಕ್ಷಕಿಯರಿಗೆ ವಾರ್ನಿಂಗ್ ಮಾಡಿದ ಪೋಷಕರು Read More »

ಅಕ್ರಮ ಜಾನುವಾರು ಸಾಗಾಟದ ಸಂಶಯ,ಜಾನುವಾರು ಸಾಗಾಟ ವಾಹನ ತಡೆದ ಹಿಂದು ಸಂಘಟನೆ

ಸಂಪಾಜೆ ಸಮೀಪ ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದಾರೆ ಎನ್ನುವ ಸಂಶಯದಲ್ಲಿ ಜಾನುವಾರು ಸಾಗಿಸುತ್ತಿದ್ದ ವಾಹನವನ್ನು ಹಿಂದೂ ಸಂಘಟನೆ ಕಾರ್ಯಕರ್ತರು ಹಾಗೂ ಊರವರು ಸೇರಿಕೊಂಡು ತಡೆದು ನಿಲ್ಲಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಅಕ್ರಮವಾಗಿ ಮೈಸೂರಿಗೆ ಗೋವುಗಳನ್ನು ಸಾಗಿಸಲಾಗುತ್ತಿತ್ತು ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ಅಕ್ರಮ ಜಾನುವಾರು ಸಾಗಾಟದ ಸಂಶಯ,ಜಾನುವಾರು ಸಾಗಾಟ ವಾಹನ ತಡೆದ ಹಿಂದು ಸಂಘಟನೆ Read More »

ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿ ಬಿದ್ದ ರಿಕ್ಷಾ,ಚಾಲಕ ಸಾವು

ರಿಕ್ಷಾವೊಂದು ಚಾಲಕನ ನಿಯಂತ್ರಣ ತಪ್ಪಿ ರಿಕ್ಷಾ ರಸ್ತೆ ಬದಿಯ ಚರಂಡಿಗೆ ಬಿದ್ದ ಪರಿಣಾಮ ಚಾಲಕ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಅಮ್ಮುಂಜೆಯಲ್ಲಿ ಕಳೆದ ಮಧ್ಯ ರಾತ್ರಿ ವೇಳೆ ನಡೆದಿದೆ.ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ಗಾಣೆಮಾ‌ರ್ ಎಂಬಲ್ಲಿ ಅಪಘಾತ ನಡೆದಿದ್ದು. ರಿಕ್ಷಾ ಚಾಲಕ ಅಮ್ಮುಂಜೆ ನಿವಾಸಿ ಮಹಾಬಲ ಪೂಜಾರಿ (37) ಮೃತಪಟ್ಟ ಯುವಕನಾಗಿದ್ದಾನೆ.ಈತನ ಸಂಬಂಧಿ ಮಕ್ಕಳಾದ ತುಷಾರ್.ಭವಿತ್ ಮತ್ತು ಪ್ರದೀಪ್‌ ಅವರನ್ನು ಮೂಡಬಿದರೆಯ ಮಿಜಾರು ಎಂಬಲ್ಲಿಗೆ ಜಾತ್ರೆಗೆ ಹೋಗಿ ವಾಪಸು ಮನೆಗೆ ಬರುವ ವೇಳೆ ಘಟನೆ ನಡೆದಿದೆ.

ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿ ಬಿದ್ದ ರಿಕ್ಷಾ,ಚಾಲಕ ಸಾವು Read More »

ಕಾಡು ಹಂದಿಯ ಮಾಂಸ ನೀಡುವುದಾಗಿ ಹಣ ಪಡೆದು ಮಾಂಸ ನೀಡದೆ ಭಾರೀ ವಂಚನೆ !

ಕಾಡು ಹಂದಿಯ ಮಾಂಸ ನೀಡುವುದಾಗಿ ಅನೇಕರಿಂದ ಹಣ ಪಡೆದು ಅಪರಿಚಿತ ವ್ಯಕ್ತಿ ವಂಚಿಸಿದ ಘಟನೆ ಎಡಮಂಗಲದಲ್ಲಿ ಕೆಲವು ದಿನಗಳ ಹಿಂದೆ ನಡೆದ ಪ್ರಕರಣ ಬೆಳಕಿಗೆ ಬರುತ್ತಿದೆ.ಎಡಮಂಗಲದ ವ್ಯಕ್ತಿಯೊಬ್ಬರು ಮಹಾಕಾಳಿ ಬಸ್ ನಿಲ್ದಾಣದಲ್ಲಿ ನಿಂತಿದ್ದಾಗ ಬೈಕ್ ನಲ್ಲಿ ಬಂದ ವ್ಯಕ್ತಿ “ಹಂದಿ ಮಾಂಸ ಇದೆ, ಬೇಕಾದರೆ ಕೊಡುತ್ತೇನೆ ಎಂದು ಹೇಳಿ ನಂಬಿಸಿದ್ದ .ತುಳುವರ ಕೆಡ್ಡಸವೂ ಆಗಿರುವ ಕಾರಣ ಮತ್ತು ಕೆ.ಜಿಗೆ 300 ರೂ ಎಂದಿದ್ದರಿಂದ ಹಿರಿಯ ವ್ಯಕ್ತಿ ಆತನ ಬೈಕ್ ನಲ್ಲಿ ಹೋಗಿ ಎಂ.ಎಸ್.ಎಲ್ ಶಾಪ್ ಬಳಿಯ ಇತರ

ಕಾಡು ಹಂದಿಯ ಮಾಂಸ ನೀಡುವುದಾಗಿ ಹಣ ಪಡೆದು ಮಾಂಸ ನೀಡದೆ ಭಾರೀ ವಂಚನೆ ! Read More »

ಸತ್ತ ಆನೆಯ ದಫನ ಮಾಡಿದ ಅರಣ್ಯ ಇಲಾಖೆ

ಬೆಳ್ತಂಗಡಿ ತಾಲೂಕು ಚಾರ್ಮಾಡಿ ಗ್ರಾಮದ ಧರ್ಮಸ್ಥಳ – ಮುಂಡಾಜೆ ಮೀಸಲು ಅರಣ್ಯದ ಅನಾರು ಪ್ರದೇಶದಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಫೆ.13 ರಂದು ಮಧ್ಯಾಹ್ನ ಕಂಡು ಬಂದ ಕಾಡಾನೆ ರಾತ್ರಿ ಸುಮಾರು 11 ಗಂಟೆಗೆ ಸಾವನ್ನಪ್ಪಿದ ಘಟನೆ ಹಿನ್ನಲೆ ಫೆ. 14 ರಂದು ತಜ್ಞ ಪಶು ವೈದ್ಯರು ಆನೆಯ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ದಫನ ಮಾಡಲಾಯಿತು.25 ರಿಂದ 30 ವರ್ಷದ ಹೆಣ್ಣು ಆನೆ ಆಗಿದ್ದು, ಕಳೆದ ಎರಡು ತಿಂಗಳಿಂದ ಸರಿಯಾದ ಆಹಾರ ಸೇವಿಸುತ್ತಿರಲ್ಲಿಲ್ಲ ಎನ್ನಲಾಗಿದೆ . ಆನೆಯ ದೇಹದ

ಸತ್ತ ಆನೆಯ ದಫನ ಮಾಡಿದ ಅರಣ್ಯ ಇಲಾಖೆ Read More »

ಕಾಡಾನೆ ಅರಣ್ಯದಲ್ಲಿ ಸಾವು

ಬೆಳ್ತಂಗಡಿ ತಾಲೂಕಿನ ಚಾರ್ಮಾಡಿಯ ಕತ್ತರಿಗುಡ್ಡ ಅನ್ನಾರು ಪರಿಸರದಲ್ಲಿ ಗುರುವಾರ ಅಸ್ವಸ್ಥ ಸ್ಥಿತಿಯಲ್ಲಿದ್ದ ಕಾಡಾನೆ ಶುಕ್ರವಾರ ಮ್ರತಪಟ್ಟಿದೆ ಎಂದು ತಿಳಿದು ಬಂದಿದೆ.ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಅನಾರು ಪ್ರದೇಶದ ಗುಡ್ಡದಲ್ಲಿ ಫೆ.13 ರಂದು ಮಧ್ಯಾಹ್ನ ಕಾಡನೇ ಅರೆ ಪ್ರಜ್ಞಾ ಸ್ಥಿತಿಯಲ್ಲಿ ಬಿದ್ದಿದ್ದ ಬಗ್ಗೆ ಬೆಳ್ತಂಗಡಿ ಅರಣ್ಯ ಇಲಾಖೆಗೆ ಮಾಹಿತಿ ಬಂದಿದ್ದು ತಕ್ಷಣ ಸಿಬ್ಬಂದಿ ಹಾಗೂ ಪಶು ವೈದ್ಯರಾದ ಡಾ. ಯಶಸ್ವಿಯವರು ಸ್ಥಳಕ್ಕೆ ಹೋಗಿ ಚಿಕಿತ್ಸೆ ನೀಡಿದ್ದರು. ಆದರೆ ಆನೆ ಸ್ಥಿತಿ ಗಂಭೀರವಾಗಿದ್ದರಿಂದ ಇಂದು ಅದು ಮೃತಪಟ್ಟಿದೆ ಎನ್ನಲಾಗಿದೆ.

ಕಾಡಾನೆ ಅರಣ್ಯದಲ್ಲಿ ಸಾವು Read More »

ಅರಂತೋಡು : ವಿಷ ಸೇವಿಸಿದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವು

ಅರಂತೋಡು ಗ್ರಾಮದ ಅಡಿಗಾರ ನಾರಾಯಣ ಎಂಬವರು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದು ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ಶುಕ್ರವಾರ ವರದಿಯಾಗಿದೆ.ಜೀವನ್ಮರಣದ ಹೋರಾಟದಲ್ಲಿದ್ದ ನಾರಾಯಣ ಅವರನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗಿಲ್ಲ.

ಅರಂತೋಡು : ವಿಷ ಸೇವಿಸಿದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವು Read More »

ಅರಂತೋಡು : ಆತ್ಮಹತ್ಯೆಗೆ ಯತ್ನಿಸಿ ವ್ಯಕ್ತಿ ಗಂಭೀರ

ಅರಂತೋಡು ಗ್ರಾಮದ ಅಡಿಗಾರ ನಾರಾಯಣ ಎಂಬವರು ವಿಷ ಕುಡಿದು ಆತ್ಮಹತ್ಯೆಗೆ ಯತ್ನ ಮಾಡಿದ ಘಟನೆ ಶುಕ್ರವಾರ ವರದಿಯಾಗಿದೆ.ಜೀವನ್ಮರಣದ ಹೋರಾಟದಲ್ಲಿರುವ ಅವರನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಅರಂತೋಡು : ಆತ್ಮಹತ್ಯೆಗೆ ಯತ್ನಿಸಿ ವ್ಯಕ್ತಿ ಗಂಭೀರ Read More »

ಮಹಿಳೆ ಸ್ನಾನ ಮಾಡುವಾಗ ವಿಡಿಯೋ ಮಾಡಿದ ಆರೋಪ,ರೂಂ ಬಾಯ್ ಪೊಲೀಸ್ ವಶ!

ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಹೊರ ಗುತ್ತಿಗೆ ನೌಕರ ರೂಂ ಬಾಯ್ ವಸತಿ ಗೃಹವೊಂದರಲ್ಲಿ ಕರ್ತವ್ಯದಲ್ಲಿದ್ದಾತ ಮಹಿಳೆಯೊಬ್ಬರು ಸ್ನಾನ ಮಾಡುತ್ತಿರುವಾಗ ವಿಡಿಯೋ ಮಾಡಿರುವುದಾಗಿ ಆರೋಪಿಸಲಾಗಿದೆ.ಪ್ರಕರಣ ಹಿನ್ನೆಲೆಯಲ್ಲಿ ಯುವಕನ್ನು ದೇವಸ್ಥಾನ ವತಿಯಿಂದ ಪೊಲೀಸ್‌ ಠಾಣೆಗೆ ಒಪ್ಪಿಸಲಾಗಿದ್ದು ಮೊಬೈಲ್ ಪರಿಶೀಲಿಸಲಾಗುತ್ತಿರುವುದಾಗಿ ತಿಳಿದು ಬಂದಿದೆ.

ಮಹಿಳೆ ಸ್ನಾನ ಮಾಡುವಾಗ ವಿಡಿಯೋ ಮಾಡಿದ ಆರೋಪ,ರೂಂ ಬಾಯ್ ಪೊಲೀಸ್ ವಶ! Read More »

14 ದಿವಸದ ಹಸುಗೂಸನ್ನು ಬಿಟ್ಟು ಮಹಿಳೆ ಆತ್ಮಹತ್ಯೆ

ವಿರಾಜಪೇಟೆ ತಾಲ್ಲೂಕಿನ ಕೊಟ್ಟೋಳಿಯಲ್ಲಿ ಬಾಣಂತಿ ಮಹಿಳೆಯೊಬ್ಬರು ತನ್ನ 14 ದಿವಸದ ಹಸುಗೂಸನ್ನು ಬಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರಣ ಘಟನೆ ನಡೆದಿದೆ.ವಿರಾಜಪೇಟೆ ತಾಲೂಕಿನ ಕೊಟ್ಟೋಳಿ ಗ್ರಾಮದ ನಿವಾಸಿ ಎಂ.ಎಂ ದಿನೇಶ್ ಎಂಬುವವರ ಪತ್ನಿ ಕಾವೇರಮ್ಮ (24) ನೇಣಿಗೆ ಶರಣಾದ ಮಹಿಳೆ.4 ವರ್ಷಗಳ ಹಿಂದೆ ದಿನೇಶ್-ಕಾವೇರಮ್ಮ ಮದುವೆಯಾದ್ದು, ಫೆ.12 ರಂದು ಪತಿ ದಿನೇಶ್ ತಮ್ಮ ಮನೆಯ ಸಮೀಪದ ಕಾಫಿ ತೋಟದಲ್ಲಿ ಕೆಲಸ ಮಾಡುವ ವೇಳೆ ಮನೆಯಲ್ಲಿ ಮಗುವಿನ ಕೂಗಾಟ ಕೇಳಿ ಬಂದು ನೋಡಿದ್ದಾರೆ. ಕಾವೇರಮ್ಮ ಸ್ನಾನದ ಕೋಣೆಯಲ್ಲಿ

14 ದಿವಸದ ಹಸುಗೂಸನ್ನು ಬಿಟ್ಟು ಮಹಿಳೆ ಆತ್ಮಹತ್ಯೆ Read More »

error: Content is protected !!
Scroll to Top