ಕ್ರೈಂ

ಶ್ರೀ ರಾಮಸೇನೆ ಸಂಘಟನೆಯ ಸಂಸ್ಥಾಪಕ ಪ್ರಸಾದ್ ಅತ್ತಾವರ ಪೊಲೀಸರ ವಶ

ಮಸಾಜ್ ಪಾರ್ಲರ್ ಒಂದರ ಮೇಲೆ ದಾಳಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಮಸೇನೆ ಸಂಘಟನೆಯ ಸಂಸ್ಥಾಪಕ ಪ್ರಸಾದ್ ಅತ್ತಾವ‌ರ್ ಅವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಮಂಗಳೂರಿನ ಬಿಜೈ ಬಳಿ ಇರುವ ಕಲರ್ಸ್ ಮಸಾಜ್ ಪಾರ್ಲರ್ ನಲ್ಲಿ ಅನೈತಿಕ ಚಟುವಟಿಕೆ ನಡೆಸಲಾಗುತ್ತಿದೆ ಎಂದು ರಾಮ ಸೇನೆ ಕಾರ್ಯಕರ್ತರು ದಾಳಿ ನಡೆಸಿ ಪಾರ್ಲರ್ ಅಲ್ಲಿದ್ದ ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದರು ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ, ರಾಮಸೇನೆ ಸಂಘಟನೆಯ ಸಂಸ್ಥಾಪಕನಾಗಿರುವ ಪ್ರಸಾದ ಅತ್ತಾವರ್ ಅವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಶ್ರೀ ರಾಮಸೇನೆ ಸಂಘಟನೆಯ ಸಂಸ್ಥಾಪಕ ಪ್ರಸಾದ್ ಅತ್ತಾವರ ಪೊಲೀಸರ ವಶ Read More »

ಬಸ್ ನಿರ್ವಾಹಕ‌ನಿಂದ ಮಹಿಳೆ ಮೇಲೆ ಹಲ್ಲೆ

ಮೂಡುಬಿದಿರೆಯ ನೀರುಡೆಯಲ್ಲಿ ಬಸ್‌ ನಿರ್ವಾಹಕನೊಬ್ಬ ಬಸ್ ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬರಿಗೆ ಕಪಾಳ ಮೋಕ್ಷ ಮಾಡಿರು ಘಟನೆ ನಡೆದಿದ್ದು, ನಿರ್ವಾಹಕನನ್ನು ಬುಧವಾರ ಪೊಲೀಸರು ಬಂಧಿಸಿದ್ದಾರೆ.ಬಂಧಿತ ಆರೋಪಿ ಶಾಲೋಮ್ ಬಸ್ ನ ನಿರ್ವಾಹಕ ಪ್ರಶಾಂತ್ ಪೂಜಾರಿ ಎಂದು ತಿಳಿದು ಬಂದಿದೆ.ಪುತ್ತಿಗೆಯಲ್ಲಿರುವ ಆಳ್ವಾಸ್ ಹಾಸ್ಟೆಲ್ ಗೆ ಮುಚೂರಿನಿಂದ ಸುಮಾರು 15 ಮಂದಿ ಮಹಿಳೆಯರು ಶಾಲೊಮ್ ಬಸ್ ನಲ್ಲಿ ನಿತ್ಯ ಕೆಲಸಕ್ಕೆಂದು ಪ್ರಯಾಣಿಸುತ್ತಿದ್ದರು. ತಮ್ಮ ಕೆಲಸ ಬೇಗ ಮುಗಿದರೆ ಮನೆಗೆ ಬೇರೊಂದು ಬಸ್ಸಿನಲ್ಲಿ ತೆರೆಳುತ್ತಿದ್ದರು. ಈ ಕುರಿತಂತೆ ನಿರ್ವಾಹಕನು ಪ್ರತೀ ದಿನ

ಬಸ್ ನಿರ್ವಾಹಕ‌ನಿಂದ ಮಹಿಳೆ ಮೇಲೆ ಹಲ್ಲೆ Read More »

ಪೆರಾಜೆ ಸಮೀಪ ಭೀಕರ ಬೈಕ್ ಕಾರು ಅಪಘಾತ ಬೈಕ್ ಸವಾರ ಗಂಭೀರ

ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪೆರಾಜೆ ಸಮೀಪದ ಕಲ್ವೆರ್ಪೆಯಲ್ಲಿ ಕಾರು ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಬುಧವಾರ ವರದಿಯಾಗಿದೆ.ಬೈಕ್ ಮಡಿಕೇರಿ ಕಡೆಯಿಂದ ಮಂಗಳೂರು ಕಡೆ ತೆರಳುತ್ತಿತ್ತು.ಕಾರು ಸುಳ್ಯದಿಂದ ಸಂಪಾಜೆ ಕಡೆ ತೆರಳುತ್ತಿತ್ತು ಎಂದು ತಿಳಿದು ಬಂದಿದೆ‌.ಗಾಯಾಳು ಬೈಕ್ ಸವಾರನನ್ನು ಅಸ್ಪತ್ರೆಗೆ ಕರೆದೊಯ್ಯಲಾಗಿದೆ.ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.

ಪೆರಾಜೆ ಸಮೀಪ ಭೀಕರ ಬೈಕ್ ಕಾರು ಅಪಘಾತ ಬೈಕ್ ಸವಾರ ಗಂಭೀರ Read More »

ತಪ್ಪಿದ ಮಗ್ಗಿ ,ವಿದ್ಯಾರ್ಥಿಗೆ ಶಿಕ್ಷಕನಿಂದ ಬೆತ್ತದಿಂದ ಹೊಡೆತ

ಹೈಸ್ಕೂಲ್ ವಿದ್ಯಾರ್ಥಿಯೊಬ್ಬ ಮಗ್ಗಿ ತಪ್ಪು ಹೇಳಿದ್ದಾನೆ ಎಂದು ಆರೋಪಿಸಿ ಶಿಕ್ಷಕರೊಬ್ಬರು ಹೊಡೆದಿರುವ ಘಟನೆ ವರದಿಯಾಗಿದೆ. ಪುತ್ತೂರು ತಾಲೂಕು ಪಾಪೆಮಜಲು ಸರಕಾರಿ ಶಾಲೆಯಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ.8ನೇ ತರಗತಿ ವಿದ್ಯಾರ್ಥಿ ಗಾಯಗೊಂಡವನು.ಶಿಕ್ಷಕರು ನಾಗರಬೆತ್ತದಿಂದ ಹೊಡೆದಿರುವುದಾಗಿ ವಿದ್ಯಾರ್ಥಿಯ ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ಈದರಿಂದ ಬಾಲಕನ ಎಡ ಕೈಗೆ ಗಾಯವಾಗಿರುವುದಾಗಿ ಮಾಹಿತಿ ನೀಡಿದ್ದಾರೆ. ವಿದ್ಯಾರ್ಥಿಯು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುವುದಾಗಿ ತಿಳಿದು ಬಂದಿದೆ.

ತಪ್ಪಿದ ಮಗ್ಗಿ ,ವಿದ್ಯಾರ್ಥಿಗೆ ಶಿಕ್ಷಕನಿಂದ ಬೆತ್ತದಿಂದ ಹೊಡೆತ Read More »

ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣದ ಪ್ರಮುಖ ಸಂಚುಕೋರನ ಬಂಧನ

ಬಿಜೆಪಿ ಯುವ ಮೋರ್ಚಾ ಸದಸ್ಯ ಹಾಗೂ ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಸಂಚುಕೋರನನ್ನು ಬಂಧಿಸಲಾಗಿದೆ. ನಿಷೇಧಿತ ಪಿಎಫ್‌ಐ ಸದಸ್ಯನಾಗಿದ್ದ ಅತೀಕ್ ಅಹ್ಮದ್ ಎಂಬಾತನನ್ನು ಈ ಪ್ರಕರಣದಲ್ಲಿ ಬಂಧನ ಮಾಡಲಾಗಿದೆ. ಪ್ರವೀಣ್ ನೆಟ್ಟಾರು ಕೊಲೆ ಕೇಸ್‌ಗೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ 21ನೇ ಆರೋಪಿ ಅತೀಕ್. ಈತ ಮುಸ್ತಫಾ ಪೈಚಾರ್‌ಗೆ ಆಶ್ರಯ ನೀಡಿದ್ದ ಎನ್ನಲಾಗಿದೆ. ಈ ಕುರಿತು ಎನ್‌ಐಎಯಿಂದ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಲಾಗಿದೆ.

ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣದ ಪ್ರಮುಖ ಸಂಚುಕೋರನ ಬಂಧನ Read More »

ಗ್ಯಾರೇಜಿನಿಂದ ಕಬ್ಬಿಣದ ವಸ್ತುಗಳನ್ನು ಕಳವುಗೈದ ಕುಡುಕ

ಸುಳ್ಯ ಮೆಸ್ಕಾಂ ಕಚೇರಿ ಬಳಿಯ ಗ್ಯಾರೇಜೊಂದರಿಂದ ಕಬ್ಬಿಣದ ವಸ್ತುವನ್ನು ಕಳವುಗೈದ ಘಟನೆ ವರದಿಯಾಗಿದೆ.ಆ ವ್ಯಕ್ತಿಯನ್ನು ಸ್ಥಳೀಯರು ಹಿಡಿದು, ಎರಡು ಏಟು ಕೊಟ್ಟು ಕೊಟ್ಟು ಕದ್ದ ವಸ್ತುಗಳನ್ನು ವಾಪಾಸು ಗ್ಯಾರೇಜ್ ಗೆ ಅವನಲ್ಲೇ ತಂದು ಹಾಕಿಸಿದ್ದಾರೆ ಎಂದು ತಿಳಿದು ಬಂದಿದೆ.ಕುಡಿದ ನಶೆಯಲ್ಲಿದ್ದು ಕಬ್ಬಿಣದ ವಸ್ತುಗಳನ್ನು ಕಳವು ಗೈದ ವ್ಯಕ್ತಿ ಮಡಿಕೇರಿಯವನೆಂದು ತಿಳಿದು ಬಂದಿದೆ.

ಗ್ಯಾರೇಜಿನಿಂದ ಕಬ್ಬಿಣದ ವಸ್ತುಗಳನ್ನು ಕಳವುಗೈದ ಕುಡುಕ Read More »

ಕೊಲೆ ಮತ್ತು ಆತ್ಮ ಹತ್ಯೆ ಪ್ರಕರಣದ ಸ್ಥಳಕ್ಕೆ ಪಶ್ವಿಮ ವಲಯ ಐಜಿಪಿ ಭೇಟಿ

ಸುಳ್ಯ ತಾಲೂಕಿನ ನೆಲ್ಲೂರು ಕೆಮ್ರಾಜೆ ಗ್ರಾಮದ ಕೋಡಿಮಜಲು ಎಂಬಲ್ಲಿ ಕೊಲೆ ಮತ್ತು ಆತ್ಮಹತ್ಯೆ ಪ್ರಕಕರಣಕ್ಕೆ ಸಂಬಂಧಿಸಿದಂತೆ ಸ್ಥಳಕ್ಕೆ ಪಶ್ಚಿಮ ವಲಯದ ಐಜಿ ಅಮಿತ್‌ ಸಿಂಗ್ ಇಂದು ಭೇಟಿ ನೀಡಿ ಕೊಲೆ ಮತ್ತು ಆತ್ಮಹತ್ಯೆಯ ಬಗ್ಗೆ ಮಾಹಿತಿ ಪಡೆದುಕೊಂಡು ಪರಿಶೀಲನೆ ನಡೆಸಿದರು.ಕೋಡಿಮಜಲು ಎಂಬಲ್ಲಿ ಕಳೆದ ರಾತ್ರಿ ಪತ್ನಿಯನ್ನು ಗುಂಡಿಕ್ಕಿ ಕೊಂದ ಗಂಡ ತಾನು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ.ಕೋಡಿಮಜಲು ನಿವಾಸಿ ಕೃಷಿಕ ರಾಮಚಂದ್ರ ಗೌಡ ( 54 ) ಅವರು ಕುಡಿದು ಬಂದು ಅವರ ಮಗನಿಗೆ ಗುಂಡಿಕ್ಕಿ ಲು

ಕೊಲೆ ಮತ್ತು ಆತ್ಮ ಹತ್ಯೆ ಪ್ರಕರಣದ ಸ್ಥಳಕ್ಕೆ ಪಶ್ವಿಮ ವಲಯ ಐಜಿಪಿ ಭೇಟಿ Read More »

ಪೇಟೆಗೆ ಬಂದು ಇಬ್ಬರು ವಿದ್ಯಾರ್ಥಿಗಳು ಸೇರಿ ಮೂವರಿಗೆ ತಿವಿದ ಕಾಡು ಹಂದಿ

ಕಾಡು ಹಂದಿಗಳು ಪೇಟೆಗೆ ಬಂದು ಇಬ್ಬರು ವಿದ್ಯಾರ್ಥಿಗಳು ಇನ್ನೊಬ್ಬರು ಮೂವರನ್ನು ಗಾಯಗೊಳಿಸಿದ ಘಟನೆ ಇದೀಗ ಗುತ್ತಿಗಾರಿನಿಂದ ವರದಿಯಾಗಿದೆ. ಗುತ್ತಿಗಾರಿನಿಂದ ಮೊಗ್ರ ಕಡೆಗೆ ಹೋಗುವ ರಸ್ತೆಯ ಬದಿ ಕಾಡುಹಂದಿಗಳು ಓಡಿಕೊಂಡು ಬಂದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಮೂವರ ಮೇಲೆ ದಾಳಿ ನಡೆಸಿವೆ.ಗಾಯಾಳುಗಳನ್ನು ಸುಳ್ಯ ಆಸ್ಪತ್ರೆಗೆ ಆಂಬ್ಯುಲೆನ್ಸ್ ಮೂಲಕ ಕರೆದೊಯ್ಯಲಾಗಿದೆ.

ಪೇಟೆಗೆ ಬಂದು ಇಬ್ಬರು ವಿದ್ಯಾರ್ಥಿಗಳು ಸೇರಿ ಮೂವರಿಗೆ ತಿವಿದ ಕಾಡು ಹಂದಿ Read More »

ಬೈಕ್ ಅಪಘಾತದಲ್ಲಿ 10 ನೇ ತರಗತಿಯ ವಿದ್ಯಾರ್ಥಿ ಸಾವು

ಬೈಕೊಂದು ಸವಾರನ ನಿಯಂತ್ರಣ ಕಳೆದುಕೊಂಡು ಮೋರಿಗೆ ಢಿಕ್ಕಿ ಹೊಡೆದ ಪರಿಣಾಮ ಶಾಲಾ ವಿದ್ಯಾರ್ಥಿಯೋರ್ವ ಮೃತಪಟ್ಟ ದಾರುಣ ಘಟನೆ ಶುಕ್ರವಾರ ಬೆಳಿಗ್ಗೆ ಕಡಬ ತಾಲೂಕಿನ ಧರ್ಮಸ್ಥಳ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಪೇರಡ್ಕ ಸಮೀಪ ನಡೆದಿದೆ.ಮೃತ ಬಾಲಕನನ್ನು ಪೇರಡ್ಕದ ಖಾಸಗಿ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ, ನೂಜಿಬಾಳ್ತಿಲ ಗ್ರಾಮದ ಹೊಸಮನೆ ಕಾನ ನಿವಾಸಿ ವಿಶ್ವನಾಥ್ ಎಂಬವರ ಪುತ್ರ ಆಶಿಶ್(16) ಎಂದು ಗುರುತಿಸಲಾಗಿದೆ. ಮನೆಯಿಂದ ಶಾಲೆಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದ್ದು, ಬಾಲಕನನ್ನು ಕಡಬದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ,

ಬೈಕ್ ಅಪಘಾತದಲ್ಲಿ 10 ನೇ ತರಗತಿಯ ವಿದ್ಯಾರ್ಥಿ ಸಾವು Read More »

ಹೆಂಡತಿಯ ಸಿಟ್ಟು ತಲೆಗೆ ಏರಿ ಗಂಡನ ತಲೆಗೆ ಸೌಟಲ್ಲಿ ಹೊಡೆದ ಹೆಂಡತಿ

ಗಂಡ ಹೆಂಡತಿ ನಡುವೆ ಹೊಡೆದಾಡವಾಗಿ ಪತ್ನಿ ಗಂಡನ ತಲೆಗೆ ಸೌಟಲ್ಲಿ ಹೊಡೆದ ಪರಿಣಾಮ ಗಾಯವಾದ ಘಟನೆ ವರದಿಯಾಗಿದೆ.ಪೆರಾಜೆಯ ದಾಸರಹಿತ್ತು ಎಂಬಲ್ಲಿ ಗಂಡ ಮದ್ಯಪಾನ ಮಾಡಿ ಹೆಂಡತಿಯೊಂದಿಗೆ ಜಗಳ ಮಾಡುತ್ತಿದ್ದನೆನ್ನಲಾಗಿದೆ. ಪರಿಣಾಮ ಅವರಿಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಅದು ಹೊಡೆದಾಟವಾಯಿತು. ಇಬ್ಬರೂ ಪರಸ್ಪರ ಹೊಡೆದಾಡಿಕೊಂಡರು.ಹೆಂಡತಿ ಸೌಟು ಬೀಸಿದಾಗ ಅದು ಗಂಡನ ತಲೆಗೆ ಬಡಿಯಿತು. ಪರಿಣಾಮವಾಗಿ ತಲೆಯಲ್ಲಿ ಗಾಯವಾಗಿ ರಕ್ತ ಚಿಮ್ಮಿತು.ಈ ವಿಷಯ ಅಕ್ಕ ಪಕ್ಕದ ಮನೆಯವರು ಬಂದು ನೋಡಿ ಗಂಡ ಹೆಂಡತಿಯನ್ನು ಅವರಿಬ್ಬರನ್ನೂ ಉನೈಸ್ ಪೆರಾಜೆಯವರು ತಮ್ಮ

ಹೆಂಡತಿಯ ಸಿಟ್ಟು ತಲೆಗೆ ಏರಿ ಗಂಡನ ತಲೆಗೆ ಸೌಟಲ್ಲಿ ಹೊಡೆದ ಹೆಂಡತಿ Read More »

error: Content is protected !!
Scroll to Top