ಕ್ರೈಂ

ನೇಣು ಬಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ

ಪ್ರತಿಷ್ಠಿತ ಕಾಲೇಜು ಒಂದರ ಪ್ರಥಮ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜ.9ರಂದು ಸಂಜೆ ನಡೆದಿದೆ.ನರಿಮೊಗರು ಕೂಡುರಸ್ತೆಯ ಕೇಶವ ಜೋಗಿ ಎಂಬವರ ಪುತ್ರಿ ಪುತ್ತೂರು ಸಂತ ಪಿಲೋಮಿನಾ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ದೀಕ್ಷಿತಾ(17ವ) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ನಿಯಾಗಿದ್ದಾರೆ.ದೀಕ್ಷಿತಾ ಅವರು ಜ 9 ರಂದು ಕಾಲೇಜಿಗೆ ಹೋಗಿದ್ದುಸಂಜೆ ವಾಪಸ್ಸು ಮನೆಗೆ ಬಂದು ಬಳಿಕ ಮನೆಯ ಕೊಠಡಿಯಲ್ಲಿ ನೇಣು ಬಿಗಿದು ಅತ್ಮಹತ್ಯೆ ಮಾಡಿಕೊಂಡಿದ್ದಾರೆ.ಆತ್ಮ ಹತ್ಯೆಗೆ ಕಾರಣ ಇನ್ನು ನಿಗೂಡವಾಗಿದೆ.

ನೇಣು ಬಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ Read More »

ಸುಳ್ಯದಲ್ಲಿ ಇಬ್ಬರಿಗೆ ಹುಚ್ಚು ನಾಯಿ ಕಡಿತ

ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ಗಾಂಧಿನಗರ ಕಾಯರತೋಡಿ ಭಾಗದಲ್ಲಿ ಹುಚ್ಚು ನಾಯಿಯೊಂದು ಕಾಣಿಸಿಕೊಂಡಿದ್ದು ಹುಚ್ಚು ನಾಯಿ ಇಬ್ಬರಿಗೆ ಅವರ ಮನೆಗಳಿಗೆ ತೆರಳಿ ಕಚ್ಚಿರುವ ಘಟನೆ ವರದಿಯಾಗಿದೆ.ಹುಚ್ಚು ನಾಯಿ ಕಡಿತವೊಳಗಾದವರು ಸುಳ್ಯ ತಾಲೂಕು ಆಸ್ಪತ್ರೆಗೆ ತೆರಳಿ ಲಸಿಕೆ ಪಡಕೊಂಡಿದ್ದಾರೆ.ಇದು ಅನೇಕ ಬೀದಿ ನಾಯಿಗಳಿಗೆ ಹಾಗೂ ಇತರ ಸಾಕು ಪ್ರಾಣಿಗಳಿಗೆ ಕಚ್ಚಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.ಬೀದಿ ನಾಯಿಗಳಿಗೆ ಇತರ ಸಾಕು ಪ್ರಾಣಿಗಳಿಗೆ ಈ ಹುಚ್ಚು ನಾಯಿ ಕಡಿದಿರುವುದರಿಂದ ಮುಂದಿನ ದಿನಗಳಲ್ಲಿ ಹುಚ್ಚುನಾಯಿಗಳ ಸಂಖ್ಯೆ ಹೆಚ್ಚುವ ಸಾಧ್ಯತೆ ಇದ್ದು ಸುಳ್ಯ ನಗರ

ಸುಳ್ಯದಲ್ಲಿ ಇಬ್ಬರಿಗೆ ಹುಚ್ಚು ನಾಯಿ ಕಡಿತ Read More »

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ’ 21ನೇ ಆರೋಪಿಗೆ ಜಾಮೀನು ನಿರಾಕರಿಸಿದ ಸುಪ್ರೀಂ ಕೋರ್ಟ್

ಬಿಜೆಪಿ ಯುವ ಮೋರ್ಚಾ ಮುಖಂಡ ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದ ಪ್ರವೀಣ್ ನೆಟ್ಟಾರು ಅವರ ಹತ್ಯೆ ಪ್ರಕರಣದ 21ನೇ ಆರೋಪಿಯಾಗಿರುವ ಮೊಹಮ್ಮದ್ ಜಾಬೀರ್ ಎಂಬಾತನಿಗೆ ಜಾಮೀನು ನೀಡಲು ಸುಪ್ರಿಂ ಕೋರ್ಟ್ ನಿರಾಕರಿಸಿದೆ.ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ನಿವಾಸಿ 32 ವರ್ಷದ ಜಾಬೀರ್, ತನ್ನ ಕಸ್ಟಡಿ ವಿಸ್ತರಿಸಿ ಡೀಫಾಲ್ಟ್ ಜಾಮೀನು ತಿರಸ್ಕರಿಸಿ ವಿಶೇಷ ಎನ್‌ಐಎ ನ್ಯಾಯಾಲಯ 2023ರ ಫೆಬ್ರವರಿ 9ರಂದು ಮಾಡಿದ್ದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ’ 21ನೇ ಆರೋಪಿಗೆ ಜಾಮೀನು ನಿರಾಕರಿಸಿದ ಸುಪ್ರೀಂ ಕೋರ್ಟ್ Read More »

ತಿರುಪತಿಯಲ್ಲಿ ಕಾಲ್ತುಳಿತಕ್ಕೆ ಏಳು ಮಂದಿ ಭಕ್ತರ ಸಾವು

ಏಕಾದಶಿ ಹಿನ್ನೆಲೆಯಲ್ಲಿ ಭಕ್ತರು ಹೆಚ್ಚಿರುವ ಕಾರಣ ತಿರುಪತಿಯಲ್ಲಿ ಭಾರೀಪ್ರಮಾಣದ ಕಾಲ್ತುಳಿತ ಸಂಭವಿಸಿದ್ದು, 7 ಮಂದಿ ಸಾವನ್ನಪ್ಪಿದ್ದಾರೆ.lಹಲವವರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ. ಭಕ್ತಾದಿಗಳು ತಿರುಪತಿಯ ವೈಕುಂಠ ದ್ವಾರ ದರ್ಶನದ ಟಿಕೆಟ್ ತೆಗೆದುಕೊಳ್ಳುವ ವೇಳೆ ನೂಕುನುಗ್ಗಲು ಉಂಟಾಗಿದ್ದು ಅಪಾರ ಪ್ರಮಾಣದ ಸಾವು ನೋವು ಉಂಟಾಗಿದೆ. ಟಿಕೆಟ್ ಪಡೆದುಕೊಳ್ಳುವ ನಿಟ್ಟಿನಲ್ಲಿ ಏಕಕಾಲಕ್ಕೆ ಸಾವಿರಾರು ಮಂದಿ ನುಗ್ಗಿದ್ದರಿಂದ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಮೊದಲು ಒಬ್ಬ ಮಹಿಳೆ ಸಾವು ಕಂಡಿದ್ದಾಗಿ ವರದಿಯಾಗಿತ್ತಾದರೂ, ಅಪ್‌ಡೇಟ್ ಆಗಿರುವ ಮಾಹಿತಿಯ

ತಿರುಪತಿಯಲ್ಲಿ ಕಾಲ್ತುಳಿತಕ್ಕೆ ಏಳು ಮಂದಿ ಭಕ್ತರ ಸಾವು Read More »

ಕೊಲೆ ಪ್ರಕರಣ : 9 ಮಂದಿ ಆರ್.ಎಸ್.ಎಸ್ ಕಾರ್ಯಕರ್ತರಿಗೆ ಜೀವಾವಧಿ ಶಿಕ್ಷೆ ಪ್ರಕಟ

ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆಯ (RSS) 9 ಮಂದಿ ಕಾರ್ಯಕರ್ತರಿಕೆ ತಲಶ್ಶೇರಿ (kerala)ಹೆಚ್ಚುವರಿ ಜಿಲ್ಲಾ ಸೆಷನ್ಸ್‌ ನ್ಯಾಯಾಲಯವು ಜೀವಾವಧಿ ಶಿಕ್ಷೆ ಪ್ರಕಟಿಸಿದೆ.ಕೇರಳದ ಕಣ್ಣೂರು ಜಿಲ್ಲೆಯಲ್ಲಿ 19 ವರ್ಷಗಳ ಹಿಂದೆ ನಡೆದ ಅಪರಾಧ ಸಿಪಿಐ ಕಾರ್ಯಕರ್ತ ರಿಜಿತ್ ಶಂಕರನ್ ಹತ್ಯೆಗೆ ಸಂಬಂಧಿಸಿದಂತೆ ಒಂಬತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಕಾರ್ಯಕರ್ತರಿಗೆ ತಲಕ್ಕೇರಿ ನ್ಯಾಯಾಲಯ ಮಂಗಳವಾರ (ಜ.7) ಜೀವಾವಧಿ ಶಿಕ್ಷೆ ವಿಧಿಸಿದೆ.ಕನ್ನಪುರಂ ಚುಂಡಾದ 25 ವರ್ಷದ ಸಿಪಿಐ(ಎಂ) ಸದಸ್ಯ ರಿಜಿತ್ ಅವರನ್ನು ಅಕ್ಟೋಬರ್ 3, 2005

ಕೊಲೆ ಪ್ರಕರಣ : 9 ಮಂದಿ ಆರ್.ಎಸ್.ಎಸ್ ಕಾರ್ಯಕರ್ತರಿಗೆ ಜೀವಾವಧಿ ಶಿಕ್ಷೆ ಪ್ರಕಟ Read More »

ಪುತ್ತೂರಿನಲ್ಲಿ ಭೀಕರ ಬಸ್ ಬೈಕ್ ಅಪಘಾತ ಇಬ್ಬರು ವಿದ್ಯಾರ್ಥಿಗಳು ಗಂಭೀರ!

ಪುತ್ತೂರು: ಕೆಎಸ್ ಆರ್ ಟಿ ಸಿ ಬಸ್ ಮತ್ತು ಬೈಕ್‌ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಪುತ್ತೂರು ಕೊಡಿಮರ ರಸ್ತೆಯ ಕೊಲ್ಯ ಎಂಬಲ್ಲಿ ನಡೆದಿದೆ.ಡಿಕ್ಕಿಯ ಪರಿಣಾಮ ಬೈಕ್ ಸಂಪೂರ್ಣ ನುಜ್ಜು ಗುಜ್ಜಾಗಿದ್ದು ಸವಾರರು ಗಂಭೀರ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.ಗಂಭೀರ ಗಾಯಗೊಂಡ ವಿದ್ಯಾರ್ಥಿ ಗಳನ್ನು ಬೆಳ್ಳಿಪ್ಪಾಡಿಯ ನಿಶಾಂತ್ ಮತ್ತು ಕಾರ್ತಿಕ್ ಎಂದು ಗುರುತಿಸಲಾಗಿದೆ.

ಪುತ್ತೂರಿನಲ್ಲಿ ಭೀಕರ ಬಸ್ ಬೈಕ್ ಅಪಘಾತ ಇಬ್ಬರು ವಿದ್ಯಾರ್ಥಿಗಳು ಗಂಭೀರ! Read More »

ಭೀಕರ ಟ್ಯಾಕ್ಟರ್ ಬೈಕ್ ಅಪಘಾತದಲ್ಲಿ ಮೂವರು ಸ್ಥಳದಲ್ಲಿಯೇ ಸಾವು

ಟ್ರ್ಯಾಕ್ಟರ್ ಗೆ ಬೈಕೊಂದು ಡಿಕ್ಕಿ ಹೊಡೆದು ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತುಮಕೂರು ತಾಲೂಕಿನ ಓಬಳಾಪುರ ಗೇಟ್ ಬಳಿ ಮಂಗಳವಾರ ಸಂಭವಿಸಿದೆ.ಮಹಮದ್ ಆಸೀಫ್ (12 ) ಮಮ್ತಾಜ್ (38 )ಶಾಖೀರ್ ಹುಸೇನ್ (48 ) ಮೃತರು. ಮೃತರು ಮಧುಗಿರಿ ತಾಲ್ಲೂಕಿನ ಪುರವರದ ಗುಡ್ಡೇನಹಳ್ಳಿ ಗ್ರಾಮದವರು ಎನ್ನಲಾಗಿದೆ.ಮೂವರು ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಟ್ರ್ಯಾಕ್ಟರ್ ಗೆ ಗುದ್ದಿ ಭೀಕರ ಅಪಘಾತ ಸಂಭವಿಸಿದೆ ಡಿಕ್ಕಿಯ ರಭಸಕ್ಕೆ ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೋರಾ ಪೊಲೀಸ್ ಠಾಣೆಯಲ್ಲಿ

ಭೀಕರ ಟ್ಯಾಕ್ಟರ್ ಬೈಕ್ ಅಪಘಾತದಲ್ಲಿ ಮೂವರು ಸ್ಥಳದಲ್ಲಿಯೇ ಸಾವು Read More »

ನಾಳೆ ಆರು ಮಂದಿ ನಕ್ಸಲರು‌ ಶರಣಾಗತಿ ?

ನಕ್ಸಲ್‌ ನಾಯಕಿ ಮುಂಡಗಾರು ಲತಾ ಸೇರಿದಂತೆ 6 ಮಂದಿ ನಕ್ಸಲರು ಜ. 8ರಂದು ಚಿಕ್ಕಮಗಳೂರು ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್‌ ಇಲಾಖೆ ಮುಂದೆ ಶರಣಾಗಲಿದ್ದಾರೆಂದು ಖಚಿತ ಮೂಲಗಳಿಂದ ತಿಳಿದು ಬಂದಿದೆ.ಮುಂಡಗಾರು ಲತಾ, ವನಜಾಕ್ಷಿ ಬಾಳೆಹೊಳೆ, ಸುಂದರಿ ಕುತ್ಲೂರು, ಮಾರೆಪ್ಪ ಅರೋಲಿ, ಕೆ. ವಸಂತ, ಟಿ.ಎನ್‌. ಜೀಶ್‌ 2024ರ ನಕ್ಸಲ್‌ ಶರಣಾಗತಿ ಪ್ಯಾಕೇಜ್‌ನಡಿ ಸಮಾಜದ ಮುಖ್ಯವಾಹಿಗೆ ಬರುವುದು ಬಹುತೇಕ ಖಚಿತವಾಗಿದೆ. ಉಡುಪಿ ಜಿಲ್ಲೆ ಕಾರ್ಕಳ ಸಮೀಪದಲ್ಲಿ ನಕ್ಸಲ್‌ ಮುಖಂಡ ವಿಕ್ರಮ್‌ ಗೌಡ ಎನ್‌ಕೌಂಟರ್‌ ಬಳಿಕ ಭೂಗತರಾಗಿರುವ ನಕ್ಸಲರನ್ನು ಮುಖ್ಯವಾಹಿನಿಗೆ

ನಾಳೆ ಆರು ಮಂದಿ ನಕ್ಸಲರು‌ ಶರಣಾಗತಿ ? Read More »

ಕರ್ನಾಟಕದಲ್ಲಿ ಮೊದಲ ಎಚ್‌ಎಂಪಿವಿ ಪ್ರಕರಣ ಪತ್ತೆ !

ಚೀನಾದಲ್ಲಿಜೂನಿಯರ್ ಕೊರೊನೊ ಎಂದು ಕರೆಯಲ್ಪಡುವ ಸೋಂಕು ಎಚ್‌ಎಂಪಿವಿ ಹಬ್ಬುತ್ತಿರುವ ಆತಂಕದ ನಡುವೆ ಕರ್ನಾಟಕದಲ್ಲಿ ಮೊದಲ ಪ್ರಕರಣ ಪತ್ತೆಯಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಎಂಟು ತಿಂಗಳ ಮಗುವಿನಲ್ಲಿ ಶಂಕಿತ ಸೋಂಕಿನ ಲಕ್ಷಣಗಳು ಪತ್ತೆಯಾಗಿದೆ.ಮಗುವಿಗೆ ಜ್ವರ ಬಂದ ಕಾರಣ ನಗರದ ಖಾಸಗಿ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಲಾಗಿತ್ತು. ರಕ್ತ ಪರೀಕ್ಷೆ ಮಾಡಿಸಿದಾಗ HMPV ವೈರಸ್ ಇರುವುದು ಪತ್ತೆಯಾಗಿದೆ. ಆದರೆ, ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಮಗುವಿನಲ್ಲಿ ವೈರಸ್ ಪತ್ತೆಯಾದ ಬಗ್ಗೆ

ಕರ್ನಾಟಕದಲ್ಲಿ ಮೊದಲ ಎಚ್‌ಎಂಪಿವಿ ಪ್ರಕರಣ ಪತ್ತೆ ! Read More »

ಬಂಗಾರಕೋಡಿಯಲ್ಲಿ ತೋಟಕ್ಕೆ ನುಗ್ಗಿದ ಕಾಡಾನೆಗಳ ಹಿಂಡು,ಅಪಾರ ಪ್ರಮಾಣದ ಬೆಳೆ ನಾಶ

ಪೆರಾಜೆ ಗ್ರಾಮದ ಬಂಗಾರಕೋಡಿ ಪರಿಸರದಲ್ಲಿ ಕಾಡಾನೆಗಳು ರೈತರ ತೋಟಗಳಿಗೆ ನುಗ್ಗಿ ಅಪಾರ ಪ್ರಮಾಣದ ಕ್ರಷಿ ಬೆಳೆಗಳನ್ನು ಹಾನಿ ಮಾಡಿರುವ ಘಟನೆ ವರದಿಯಾಗಿದೆ‌.ಬಂಗಾರಕೋಡಿ ಜಯರಾಮ ಎಂಬವರ ತೋಟಕ್ಕೆ ಕಳೆದ ರಾತ್ರಿ ನುಗ್ಗಿರುವ ಕಾಡಾನೆಗಳು ಅಪಾರ ಪ್ರಮಾಣದ ಬಾಳೆಗಿಡಗಳು,ತೆಂಗು,ಅಡಿಕೆ ಗಿಡಗಳನ್ನು ನಾಶ ಮಾಡಿರುವ ಬಗ್ಗೆ ವರದಿಯಾಗಿದೆ.ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.

ಬಂಗಾರಕೋಡಿಯಲ್ಲಿ ತೋಟಕ್ಕೆ ನುಗ್ಗಿದ ಕಾಡಾನೆಗಳ ಹಿಂಡು,ಅಪಾರ ಪ್ರಮಾಣದ ಬೆಳೆ ನಾಶ Read More »

error: Content is protected !!
Scroll to Top