ಕ್ರೈಂ

ಆಟೋ ರಿಕ್ಷಾದಲ್ಲಿ ಅಕ್ರಮ ಗೋಸಾಗಟ,ಬಜರಂಗದಳದಿಂದ ತಡೆ

ಪುತ್ತೂರು :ಇಲ್ಲಿ ಅಕ್ರಮವಾಗಿ ಆಟೋ ರಿಕ್ಷಾದಲ್ಲಿ ಗೋ ಸಾಗಾಟ ಮಾಡುತ್ತಿದ್ದುದನ್ನು ಬಜರಂಗದಳ ಕಾರ್ಯಕರ್ತರು ಪತ್ತೆ ಹಚ್ಚಿ ಪೊಲೀಸರಿಗೆ ಒಪ್ಪಿಸಿದ ಘಟನೆ ವರದಿಯಾಗಿದೆ.ಬೈಪಾಸ್‌ ರಸ್ತೆಯಲ್ಲಿ ಬಜರಂಗದಳದ ಕಾರ್ಯಕರ್ತರು ಆಟೋ ರಿಕ್ಷಾವನ್ನು ತಡೆದು ಗೋವಿನ ರಕ್ಷಣೆ ಮಾಡಿದ್ದಾರೆ.ಅಕ್ರಮವಾಗಿ ಗೋವನ್ನು ಪುತ್ತೂರು ಬೈಪಾಸ್ ರಸ್ತೆಯ ಮೂಲಕ ಆಟೋ ರಿಕ್ಷಾದಲ್ಲಿ ವ್ಯಕ್ತಿಯೋರ್ವ ಸಾಗಿಸುತ್ತಿರುವುದರ ಕುರಿತು ಮಾಹಿತಿ ಪಡೆದ ಬಜರಂಗದಳ ಕಾರ್ಯಕರ್ತರು ದಾಳಿ ನಡೆಸಿದ್ದಾರೆ.ಆ ಬಳಿಕ ಜಾನುವಾರು ಸಹಿತ ಆಟೋ ರಿಕ್ಷಾವನ್ನು ಪೊಲೀಸ್‌ ಠಾಣೆಗೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.ಆಟೋ ರಿಕ್ಷಾದಲ್ಲಿ ಮಹಿಳೆಯರು ಕೂಡ […]

ಆಟೋ ರಿಕ್ಷಾದಲ್ಲಿ ಅಕ್ರಮ ಗೋಸಾಗಟ,ಬಜರಂಗದಳದಿಂದ ತಡೆ Read More »

ಸುಳ್ಯ ತಾಲೂಕಿನಲ್ಲಿ ಮೂರನೇ ದಿನವೂ ಹೃದಯಾಘಾತದಿಂದ ಮತ್ತೋರ್ವ ಸಾವು

ಪೋಟೋ ಗ್ರಾಪರ್ ಹರಿಹರ ಪಲ್ಲತ್ತಡ್ಕದಲ್ಲಿ ಸ್ಟುಡಿಯೋ ಹೊಂದಿದ್ದ ಹಾಗೂ ಗ್ರಾ.ಪಂ.ಸದಸ್ಯರಾಗಿದ್ದ ದಿವಾಕರ ಮುಂಡಾಜೆ ಬುಧವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ದಿನಪತ್ರಿಕೆಗಳ ವಿತರಕರಾಗಿದ್ದ ಅವರು ಮಂಜಾನೆ ಅಂಗಡಿಗೆ ಕಾರಿನಲ್ಲಿ ಬರುತ್ತಿರುವ ವೇಳೆ ಹೃದಯಾಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಸುಳ್ಯ ತಾಲೂಕಿನಲ್ಲಿ ಮೂರನೇ ದಿನವೂ ಹೃದಯಾಘಾತದಿಂದ ಮತ್ತೋರ್ವ ಸಾವು Read More »

ಕೌಟಂಬಿಕ ಕಲಹದಿಂದ ಮಹಿಳೆ ವಿಷ ಸೇವಿಸಿ ಆತ್ಮಹತ್ಯೆ

ಮಡಿಕೇರಿ: ಕೌಟುಂಬಿಕ ಸಮಸ್ಯೆಯಿಂದ ಮನನೊಂದು ಗೃಹಿಣಿಯೋರ್ವರು ವಿಷ ಸೇವಿಸಿ ಸಾವಿಗೀಡಾದ ಘಟನೆ ಗುಡ್ಡೆಹೊಸೂರು ಬಳಿಯ ರಸೂಲ್ ಪುರ ಗ್ರಾಮದಿಂದ ವರದಿಯಾಗಿದೆ.ಇಲ್ಲಿಯ ಆಮೆಮನೆ ಬಾಲಕೃಷ್ಣ ಎಂಬವರ ಪುತ್ರ ರಾಜೇಶ್ ಎಂಬವರ ಪತ್ನಿ ತೇಜಸ್ವಿನಿ ಎಂಬಾಕೆಯೇ (30) ಮೃತ ಮಹಿಳೆಕಳೆದ ನಾಲ್ಕು ದಿನಗಳ ಹಿಂದೆ ಸ್ವಗೃಹದಲ್ಲಿ ಕೌಟುಂಬಿಕ ಸಂಘರ್ಷದಿಂದ ಬೇಸತ್ತ ತೇಜಸ್ವಿನಿ ವಿಷ ಸೇವಿಸಿದ್ದರು ಎನ್ನಲಾಗಿದ್ದು, ಕೂಡಲೇ ಅವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ನಾಲ್ಕು ದಿನಗಳ ನಂತರ ಚಿಕಿತ್ಸೆ ಫಲಕಾರಿಯಾಗದೇ ತೇಜಸ್ವಿನಿ ಮೃತಪಟ್ಟರು ಎನ್ನಲಾಗಿದೆ.

ಕೌಟಂಬಿಕ ಕಲಹದಿಂದ ಮಹಿಳೆ ವಿಷ ಸೇವಿಸಿ ಆತ್ಮಹತ್ಯೆ Read More »

ನಾಪತ್ತೆಯಾದ ಬಾಲಕ ಪತ್ತೆ

ಅರಂತೋಡು : ಚೆಂಬು ಗ್ರಾಮದಿಂದ ನಾಪತ್ತೆಯಾದ ಬಾಲಕ ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.ಮಡಿಕೇರಿ ತಾಲೂಕು ಚೆಂಬು ಗ್ರಾಮದ ಊರುಬೈಲು ಹರೀಶ ಹಾಗೂ ಭಾರತಿ ದಂಪತಿಗಳ ಪುತ್ರ ಕುಶಾಂತ್ ಅ. 13ರಂದು ಔಷಧಿಗೆಂದು ತೆರಳಿದವನು ಮನೆಗೆ ಬಾರದೇ ನಾಪತ್ತೆಯಾಗಿದ್ದ. ಮಂಗಳವಾರ ಕುಂಬ್ರದಲ್ಲಿ ಪತ್ತೆಯಾಗಿದ್ದಾನೆಂದು ತಿಳಿದುಬಂದಿದೆ.

ನಾಪತ್ತೆಯಾದ ಬಾಲಕ ಪತ್ತೆ Read More »

ಬೋಜಪ್ಪ ಗೌಡ ಪಾಲೆಪ್ಪಾಡಿ ಬೈಕ್ ಅಪಘಾತಕ್ಕೆ ಬಲಿಯಾದ ವ್ಯಕ್ತಿ

ಪೈಚಾರ್ : ಸುಳ್ಯದ ಪೈಚಾರ್ ಆರ್ತಾಜೆ ಬಳಿಯಲ್ಲಿ ಬೈಕ್‌ ಗಳ ನಡುವೆ ನಡೆದ ಅಪಘಾತದಲ್ಲಿ ಮೃತಪಟ್ಟವರು ಐವರ್ನಾಡು ಪ್ರಾಥಮಿಕ ಕ್ರಷಿ ಪತ್ತಿನ ಸಹಕಾರಿ ಸಂಘದ ಸಿಬ್ಬಂದಿ ಬೊಜಪ್ಪ ಗೌಡ ಪಾಲೆಪ್ಪಾಡಿ ಎಂದು ಗುರುತಿಸಲಾಗಿದೆ. ಬೈಕ್ ಗಳ ನಡುವೆ ಸಂಭವಿಸಿದ ಡಿಕ್ಕಿಯ ರಭಸಕ್ಕೆ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆನ್ನಲಾಗಿದೆ. ಬುಲೆಟ್ ಬೈಕ್ ನಲ್ಲಿ ತೆರಳುತ್ತಿದ್ದ ಅರುಣ ಎಲಿಮಲೆ ಹಾಗೂ ವಸಂತ ಸೇವಾಜೆ ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬೋಜಪ್ಪ ಗೌಡ ಪಾಲೆಪ್ಪಾಡಿ ಬೈಕ್ ಅಪಘಾತಕ್ಕೆ ಬಲಿಯಾದ ವ್ಯಕ್ತಿ Read More »

ಹೃದಯಾಘಾತಕ್ಕೆ ಸುಳ್ಯ ತಾಲೂಕಿನಲ್ಲಿ‌ ಎರಡನೇ ದಿನವೂ ಮತ್ತೋರ್ವ ಯುವಕ ಬಲಿ

ಸುಳ್ಯ ತಾಲೂಕಿನಲ್ಲಿ ಎರಡನೇ ದಿನವೂ ಮತ್ತೋರ್ವ ಯುವಕ ಹ್ರದಯಘಾತಕ್ಕೆ ಬಲಿಯಾಗಿದ್ದಾರೆ.ಸೋಮವಾರ ಅವಿನಾಶ್ ಬಸ್ಸು ಕಂಡೆಕ್ಟರ್ ಗುರುಪ್ರಸಾದ್ ಕುಂಚಡ್ಕ ಹ್ರದಯಘಾತಕ್ಕೆ ನಿಧನರಾಗಿದ್ದರು. ಅಮರಮುಡ್ನೂರು ಗ್ರಾಮದ ಕೆರೆಗದ್ದೆ ಜನಾರ್ದನ ಗೌಡ ರವರ ಮಗ ಪುನೀತ್ ಕೆರೆಗದ್ದೆ ಎಂಬವರು ಹೃದಯಾಘಾತದಿಂದ ತನ್ನ ಸ್ವಗೃಹದಲ್ಲಿ ಅ.15 ರಂದು ನಿಧನರಾದರು.ಅವರಿಗೆ 42 ವರ್ಷ ಪ್ರಾಯವಾಗಿತ್ತು.ಪುನೀತ್ ತಾಯಿ, ಪತ್ನಿ, ಮಗು ಹಾಗೂಸಹೋದರಿಯನ್ನು ಮತ್ತು ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರು ಕುಕ್ಕುಜಡ್ಕದಲ್ಲಿ ಕೆಲ ಸಮಯದಿಂದ ಹೋಟೆಲೊಂದರಲ್ಲಿ ಅಡುಗೆ ಕೆಲಸ ಮಾಡುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.

ಹೃದಯಾಘಾತಕ್ಕೆ ಸುಳ್ಯ ತಾಲೂಕಿನಲ್ಲಿ‌ ಎರಡನೇ ದಿನವೂ ಮತ್ತೋರ್ವ ಯುವಕ ಬಲಿ Read More »

ಬೈಕ್ ಗಳ ನಡುವೆ ಭೀಕರ ಅಪಘಾತ ಓರ್ವ ಸಾವು!

ಪೈಚಾರ್ ಆರ್ತಾಜೆ ಬಳಿ ಎರಡು ಬೈಕ್ ಗಳ ನಡುವೆ ಅಪಘಾತ ಸಂಭವಿಸಿ ಓರ್ವ ಸವಾರ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.ಬೈಕುಗಳ ನಡುವೆ ಅಪಘಾತ ಸಂಭವಿಸಿದ ವೇಳೆ ತೀವ್ರ ಗಾಯವಾಗಿದ್ದ ಒಂದು ಬೈಕಿನ ಸವಾರನನ್ನು ಆಸ್ಪತ್ರೆಗೆ ಸಾಗಿಸಿದರೂ ಮಾರ್ಗ ಮಧ್ಯೆ ಮತಪಟ್ಟಿರುವುದಾಗಿ ತಿಳಿದು ಬಂದಿದೆ.ಮತ್ತೊಂದು ಬೈಕಿನಲ್ಲಿ ಇದ್ದ ಇಬ್ಬರು ಸವಾರರೂ ಗಾಯಗೊಂಡಿದ್ದು ಅವರನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿದೆ.ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬೈಕ್ ಗಳ ನಡುವೆ ಭೀಕರ ಅಪಘಾತ ಓರ್ವ ಸಾವು! Read More »

ಅತ್ಯಾಚಾರ ಪ್ರಕರಣ : ಬಿಜೆಪಿ ಶಾಸಕ ಮುನಿರತ್ನಗೆ ಜಾಮೀನು

ಅತ್ಯಾಚಾರ ಪ್ರಕರಣದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ ಜಾಮೀನು ಮಂಜೂರು ಆಗಿದೆ ಎಂದು ತಿಳಿದು ಬಂದಿದೆ. ಬೆದರಿಕೆ, ಜಾತಿನಿಂದನೆ ಪ್ರಕರಣದಲ್ಲಿ ಜಾಮೀನು ಸಿಕ್ಕ ಬೆನ್ನಲ್ಲೇ ಇದೀಗ ಅತ್ಯಾಚಾರ ಪ್ರಕರಣದಲ್ಲೂ ಸಹ ಮುನಿರತ್ನಗೆ ಜಾಮೀನು ದೊರೆತಿದೆ. ಮಂಗಳವಾರ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಮುನಿರತ್ನ ಅವರಿಗೆ ಜಾಮೀನು ನೀಡಿ ಆದೇಶ ಹೊರಡಿಸಿದೆ.

ಅತ್ಯಾಚಾರ ಪ್ರಕರಣ : ಬಿಜೆಪಿ ಶಾಸಕ ಮುನಿರತ್ನಗೆ ಜಾಮೀನು Read More »

ಶಾಲಾ ಬಸ್ ಚಾಲಕನಿಗೆ ಪಿಡ್ಸ್ ರೋಗ,ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಬಸ್

ಬಂಟ್ವಾಳ: ಖಾಸಗಿ ಶಾಲೆಯ ಬಸ್ ಚಾಲಕನಿಗೆ ಮೂರ್ಚೆ ರೋಗ ( ಪಿಡ್ಸ್) ಉಂಟಾಗಿ ಬಸ್ ವಿದ್ಯುತ್ ‌ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಪೊಳಲಿ ಸಮೀಪದ ಬಡಕಬೈಲು ಎಂಬಲ್ಲಿ ಅ.14 ರಂದು ನಡೆದಿದೆ.ಬಡಕಬೈಲು ಸೈಂಟ್ ಡೊಮಿನಿಕ್‌ ಆಂಗ್ಲ ‌ಮಾಧ್ಯಮ ಶಾಲೆಯ ಬಸ್ ಚಾಲಕ ಅಡ್ಡೂರು ನಿವಾಸಿ ಸುರೇಶ್ ಎಂಬವರಿಗೆ ಮೂರ್ಚೆ ರೋಗ ಬಾಧಿಸಿದ ಪರಿಣಾಮ ಬಸ್ ನಿಯಂತ್ರಣ ‌ಕಳೆದುಕೊಂಡು ರಸ್ತೆ ಬದಿಗೆ ತೆರಳಿ ವಿದ್ಯುತ್ ಕಂಬಕ್ಕೆ ‌ಡಿಕ್ಕಿ‌ಹೊಡೆದಿದೆ.ಘಟನೆಯಲ್ಲಿ ಯಾವುದೇ ಅಪಾಯವಿಲ್ಲದೆ ಚಾಲಕ ಸಹಿತ ವಿದ್ಯಾರ್ಥಿಗಳು ಪಾರಾಗಿದ್ದಾರೆ.

ಶಾಲಾ ಬಸ್ ಚಾಲಕನಿಗೆ ಪಿಡ್ಸ್ ರೋಗ,ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಬಸ್ Read More »

ಮಹಿಳೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಬಾವನಿಂದ ಕೊಲೆಯತ್ನ

ಕೊಡಿಯಾಲ :ಬೆಳ್ಳಾರೆ ಸಮೀಪದ ಕೊಡಿಯಾಲ ಗ್ರಾಮದ ಮಹಿಳೆ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿರುವ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಬಗ್ಗೆ ವರದಿಯಾಗಿದೆ.ಸುಳ್ಯ ತಾಲೂಕಿನ ಕೊಡಿಯಾಲ ಗ್ರಾಮದ ಕಲ್ಲರ್ಪೆ ಜಯಭಾರತಿ (56) ಅವರು ಮನೆಯಲ್ಲಿ ರಾತ್ರಿ ಮಲಗಿದ್ದ ಸಂದರ್ಭದಲ್ಲಿ ಮಹಿಳೆಯ ಬಾವ ಶಂಕರ ಅವರು ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸಲಾಗಿದೆ.ಗಂಭೀರ ಗಾಯಗೊಂಡಿರುವ ಮಹಿಳೆಯನ್ನು ಸಂಬಂಧಿಕರು ಸುಳ್ಯದ ಆಸ್ಪತ್ರೆಗೆ ಕರೆತಂದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.ಬೆಂಕಿ ಹಚ್ಚಿರುವ ವ್ಯಕ್ತಿಗೂ ಗಾಯವಾಗಿದ್ದು,

ಮಹಿಳೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಬಾವನಿಂದ ಕೊಲೆಯತ್ನ Read More »

error: Content is protected !!
Scroll to Top