ಕ್ರೈಂ

ಔಷಧಿಗೆ ತೆರಳಿದ ಯುವಕ ನಾಪತ್ತೆ

ಚೆಂಬು ಗ್ರಾಮದ ಊರುಬೈಲು ಹರೀಶ – ಭಾರತಿ ದಂಪತಿಗಳ ಪುತ್ರ ಕುಶಾಂತ್ ನಾಮಪತ್ತೆಯಾಗಿರುವುದಾಗಿ ತಿಳಿದು ಬಂದಿದೆ.ಆತನು ಅಕ್ಟೋಬರ್ 13ರಂದು ಮನೆಯಿಂದ ಔಷಧಿಗೆ ತೆರಳಿದ್ದವನು ಮನೆಗೆ ಬಂದಿಲ್ಲ.ಹುಡುಗ ನಾಪತ್ತೆಯಾಗಿ ಮನೆಗೆ ಸಂಜೆಯಾದರೂ ಬಾರದಿದ್ದುದರಿಂದ ಮನೆಯವರು ಹುಡುಕಾಟ ಆರಂಭಿಸಿದ್ದಾರೆ. ಪೋಲೀಸರಿಗೂ ಮಾಹಿತಿ ನೀಡಿರುವುದಾಗಿ ತಿಳಿದುಬಂದಿದೆ

ಔಷಧಿಗೆ ತೆರಳಿದ ಯುವಕ ನಾಪತ್ತೆ Read More »

ಅವಿನಾಶ್ ಬಸ್ಸು ಕಂಡೆಕ್ಟ ರ್ ಎದೆನೋವಿನಿಂದ ನಿಧನ

ಅವಿನಾಶ್ ಬಸ್ ನಲ್ಲಿ ಕಂಡೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದ ಯುವಕನೊಬ್ಬ ಸಾವನ್ನಪ್ಪಿದ ಘಟನೆ ವರದಿಯಾಗಿದೆ. ಗುರು ಪ್ರಸಾದ್ ಕುಂಚಡ್ಕ ಸಾವನ್ನಪ್ಪಿದ ಕಂಡೆಕ್ಟರ್ ಎಂದು ತಿಳಿದು ಬಂದಿದೆ.ಅವರಿಗೆ 30 ವರ್ಷ ಪ್ರಾಯವಾಗಿತ್ತು.ಬಸ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ರಿಕ್ಷಾವೊಂದರಲ್ಲಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಅರಂಬೂರು ಬಳಿ ಆಟೋ ರಿಕ್ಷಾದಲ್ಲೇ ಪ್ರಾಣ ಬಿಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಅವಿನಾಶ್ ಬಸ್ಸು ಕಂಡೆಕ್ಟ ರ್ ಎದೆನೋವಿನಿಂದ ನಿಧನ Read More »

ಕಾರು ಪಲ್ಟಿಯಾಗಿ ಮಹಿಳೆ ಸಾವು

ವಿಟ್ಲ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ರಸ್ತೆ ಬದಿಯ ತೋಟಕ್ಕೆ ಬಿದ್ದು ಮಹಿಳೆಯೋರ್ವರು ಮೃತಪಟ್ಟ ಘಟನೆ ಬಿಸಿರೋಡು- ಬೆಳ್ತಂಗಡಿ ರಾಜ್ಯ ಹೆದ್ದಾರಿಯ ಬಾಂಬಿಲ ಎಂಬಲ್ಲಿ ನಡೆದಿದೆ.ಮೂಲತಃ ಮಂಗಳೂರು ಕೊಡಿಯಾಲ್ ಬೈಲು ನಿವಾಸಿಯಾದ ಪಿಡಬ್ಲೂಡಿ ಇಂಜಿನಿಯರ್ ಗೋಪಾಲರವರ ಸಹೋದರಿ ಕೋಡಿಯಾಲ್ ಬೈಲು ನಿವಾಸಿ ಭಾಗೀರಥಿ (58 ವ.) ಮೃತಪಟ್ಟ ಮಹಿಳೆಯಾಗಿದ್ದಾರೆ.ಚಾಲಕ ರೂಪೇಶ್ (40 ವ.) ಅವರಿಗೆ ಗಂಭೀರ ಸ್ವರೂಪದ ಗಾಯವಾಗಿದ್ದು, ಚಿಂತಾಜನಕ ಸ್ಥಿತಿಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.ರೂಪೇಶ್ ಅವರ ಪತ್ನಿ ಸುಚಿತ್ರ (33 ವ.)

ಕಾರು ಪಲ್ಟಿಯಾಗಿ ಮಹಿಳೆ ಸಾವು Read More »

ಸಂಪಾಜೆಯಲ್ಲಿ ಭೀಕರ ಕಾರು ಅಪಘಾತ

ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ತೋಟಕ್ಕೆ ನುಗ್ಗಿ ಪಲ್ಟಿಯಾಗಿ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾದ ಘಟನೆ ಕೊಡಗು ಸಂಪಾಜೆ ಶಾಲೆಯ ಬಳಿ ನಡೆದಿದೆ. ಕಾರಿನಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯವಾಗಿದೆ. ಗಾಯಾಳುಗಳನ್ನು ಕೊಡಗು ಸಂಪಾಜೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಸಂಪಾಜೆ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಸಂಪಾಜೆಯಲ್ಲಿ ಭೀಕರ ಕಾರು ಅಪಘಾತ Read More »

ಜಗನ್ನಾಥ ಆಲಡ್ಕ ನಿಧನ

ಅರಂತೋಡು : ಸಂಪಾಜೆ ಗ್ರಾಮದ ಆಲಡ್ಕ ನಿವಾಸಿ ಜಗನ್ನಾಥ ಆಲಡ್ಕ( 26 )ಅಲ್ಪ ಕಾಲದ ಅಸೌಖ್ಯದಿಂದ ಸ್ವ ಗೃಹದಲ್ಲಿ ಶನಿವಾರ ನಿಧನರಾದರು.ಅವರು ಕೆಲವು ಸಮಯದಿಂದ ಅಸೌಖ್ಯಕೊಳಗಾಗಿ ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು‌.ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನರಾದರು.

ಜಗನ್ನಾಥ ಆಲಡ್ಕ ನಿಧನ Read More »

ಎರಡು ಕಾರುಗಳ ನಡುವೆ ಭೀಕರ ಅಪಘಾತ

ಧರ್ಮಸ್ಥಳ : ಎರಡು ಕಾರುಗಳ ನಡುವೆ ಭೀಕರ ಅಪಘಾತ ಸಂಭವಿಸಿದ ಘಟನೆ ಧರ್ಮಸ್ಥಳದ ಶಕ್ತಿನಗರದಿಂದ ವರದಿಯಾಗಿದೆ. ಗುರುವಾಯನಕೆರೆಯಿಂದ ಹೆಬ್ರಿ ಕಡೆಗೆ ಹೋಗುವ ಸ್ಕೋಡಾ ಕಾರು ಮತ್ತು ಧರ್ಮಸ್ಥಳ ಕಡೆಗೆ ಹೋಗುತ್ತಿದ್ದ ಐ20 ಕಾರಿನ ನಡುವೆ ಅಪಘಾತ ಸಂಭವಿಸಿದೆ. ಐ20 ಕಾರು ಚಾಲಕ ರಸ್ತೆಯ ಹೊಂಡ ತಪ್ಪಿಸಲು ಹೋಗಿ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದವರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಕಾರುಗಳು ಎರಡೂ ಜಖಂಗೊಂಡಿದೆ.

ಎರಡು ಕಾರುಗಳ ನಡುವೆ ಭೀಕರ ಅಪಘಾತ Read More »

ರಬ್ಬರ್ ಆಸಿಡ್ ಸೇವಿಸಿದ ವ್ಯಕ್ತಿ ಸಾವು

ಅರಂತೋಡು : ರಬ್ಬರ್ ಆಸಿಡ್‌ ಸೇವಿಸಿ ಅಸೌಖ್ಯಕ್ಕೊಳಗಾಗಿದ್ದ ಮರ್ಕಂಜ ಗ್ರಾಮದ ಗೋಳಿಯಡ್ಕ ಶೇಷಪ್ಪ ಗೌಡ 70)ಪಾಲ್ತಾಡುರವರು ಭಾನುವಾರ ಮೃತಪಟ್ಟರು.ಶೇಷಪ್ಪ ಗೌಡರು ನಾಲ್ಕು ದಿನಗಳ ಹಿಂದೆ ರಬ್ಬರ್ ಆಸಿಡ್‌ ಸೇವಿಸಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಅಲ್ಲಿಂದ ಸುಳ್ಯ ಆಸ್ಪತ್ರೆಗೆ ಕರೆತರಲಾಯಿತು. ಅಲ್ಲಿ ಅವರು ಮೃತಪಟ್ಟರೆಂದು ತಿಳಿದುಬಂದಿದೆ.ಮೃತರು ಓರ್ವ ಪುತ್ರ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ರಬ್ಬರ್ ಆಸಿಡ್ ಸೇವಿಸಿದ ವ್ಯಕ್ತಿ ಸಾವು Read More »

ಪೆರಾಜೆ ಬಿಳಿಯಾರಿನಲ್ಲಿ ಸರಣಿ ಅಪಘಾತ

ಸ್ಕೂಟಿ ಸ್ಕಿಡಾಗಿ ಯುವಕನೋರ್ವ ಬಿದ್ದು ಗಾಯಗೊಂಡಿದ್ದು , ಯುವಕ ರಸ್ತೆಯಲ್ಲಿ ಬಿದ್ದಿರುವುದನ್ನು ನೋಡಲೆಂದು ಕಾರು ಚಾಲಕ ಬ್ರೇಕ್ ಹಾಕಿದ ವೇಳೆ ಹಿಂಬದಿಯಿಂದ ಕಾರಿಗೆ ಬೈಕ್ ಢಿಕ್ಕಿ ಹೊಡೆದ ಘಟನೆ ಶನಿವಾರ ಪೆರಾಜೆ ಬಿಳಿಯಾರಿನಿಂದ ವರದಿಯಾಗಿದೆ. ಅರಂತೋಡಿನ ಯುವಕನೋರ್ವ ಸುಳ್ಯದಿಂದ ಅರಂತೋಡಿಗೆ ಸ್ಕೂಟಿಯಲ್ಲಿ ಹೋಗುತ್ತಿದ್ದ ವೇಳೆ ಬಿಳಿಯಾರು ಪೆಟ್ರೋಲ್ ಪಂಪ್ ಬಳಿ ಸ್ಕೂಟಿ ಸ್ಕಿಡ್ ಆಗಿ ಪಲ್ಟಿಯಾಯಿತೆನ್ನಲಾಗಿದೆ. ಪರಿಣಾಮವಾಗಿ ಯುವಕ ರಸ್ತೆಗೆ ಎಸೆಯಲ್ಪಟ್ಟು ಕೈಗೆ ಗಾಯವಾಗಿತ್ತು.ಈ ಅಪಘಾತ ನಡೆದ ಸಂದರ್ಭದಲ್ಲಿ ಅರಂತೋಡಿನಿಂದ ಸುಳ್ಯಕ್ಕೆ ಬರುತ್ತಿದ್ದ ಅರಂತೋಡಿನ ಸತ್ಯ ಎಂಬವರು

ಪೆರಾಜೆ ಬಿಳಿಯಾರಿನಲ್ಲಿ ಸರಣಿ ಅಪಘಾತ Read More »

ಹಿಂದು ಯುವಕನಿಗೆ ಪುತ್ತೂರು ರೈಲ್ವೆ ನಿಲ್ದಾಣದಲ್ಲಿ ಅನ್ಯಕೋಮಿನ ಯುವಕರಿಂದ ಹಲ್ಲೆ

ಪುತ್ತೂರು: ಹಿಂದು ಯುವಕನಿಗೆ ನಾಲ್ವರಿದ್ದ ಯುವಕರ ತಂಡ ರೈಲಿನಲ್ಲಿ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಇಂದು ಬೆಳಿಗ್ಗೆ ಕಬಕ ಪುತ್ತೂರು ರೈಲು ನಿಲ್ದಾಣದಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ.ಹಲ್ಲೆಗೊಳಗಾದ ಯುವಕ ಹಿಂದೂ ಧರ್ಮೀಯ, ಹಲ್ಲೆ ನಡೆಸಿದ ಯುವಕರು ಅನ್ಯಧರ್ಮಿಯರು ಎಂದು ಹೇಳಲಾಗುತ್ತಿದೆ.ಹಲ್ಲೆ ನಡೆಸಿದ ನಾಲ್ವರನ್ನು ಪುತ್ತೂರು ನಗರ ಠಾಣೆ ಪೊಲೀಸರು ನಾಲ್ವರನ್ನು ಸಾಲ್ಮರ ಮಸೀದಿ ಬಳಿಯಿಂದ ವಶಕ್ಕೆ ಪಡೆದು ಕೊಂಡಿದ್ದಾರೆ. ಪ್ರಕರಣವು ರೈಲ್ವೇ ಪೊಲೀಸರ ವ್ಯಾಪ್ತಿಯಲ್ಲಿ ನಡೆದಿರುವುದರಿಂದ ವಶಕ್ಕೆ ಪಡೆದ ಆರೋಪಿಗಳನ್ನು ರೈಲ್ವೇ ಪೊಲೀಸರಿಗೆ ಹಸ್ತಾಂತರಿಸಲಾಗುವುದು ಎಂದು ಪೊಲೀಸ್‌

ಹಿಂದು ಯುವಕನಿಗೆ ಪುತ್ತೂರು ರೈಲ್ವೆ ನಿಲ್ದಾಣದಲ್ಲಿ ಅನ್ಯಕೋಮಿನ ಯುವಕರಿಂದ ಹಲ್ಲೆ Read More »

ಗುಂಡ್ಯ : ಕಂದಕಕ್ಕೆ ಉರುಳಿದ ಬಿದ್ದ ಖಾಸಗಿ ಬಸ್ಸು, ಚಾಲಕ ಸಾವು

ಖಾಸಗಿ ಬಸ್ಸೊಂದು ಚಾಲಕನತಪ್ಪಿ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಚಾಲಕ ಮೃತ ಪಟ್ಘಟನೆ ಶುಕ್ರವಾರ ತಡ ರಾತ್ರಿ ನೆಲ್ಯಾಡಿ ಸಮೀಪದ ಲಾವತ್ತಡ್ಕ ಎಂಬಲ್ಲಿ ನಡೆದಿದೆ. ಅಪಘಾತದ ಸಂದರ್ಭ ಬಸ್ಸಿನಲ್ಲಿ ಚಾಲಕ ಹಾಗೂ ನಿರ್ವಾಹಕ ಮಾತ್ರವಿದ್ದರು. ಹೀಗಾಗಿ ಭಾರೀ ದುರಂತವೊಂದು ಸಂಭವಿಸುವುದು ತಪ್ಪಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.ಶುಕ್ರವಾರ ತಡರಾತ್ರಿ 11 ಗಂಟೆಗೆ ಅಪಘಾತ ಸಂಭವಿಸಿದ್ದು, ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಬ್ರಹಣ್ಯ ನಾಮಫಲಕ ಹೊಂದಿದ ಈ ಖಾಸಗಿ ಸ್ವೀಪರ್ ಬಸ್ಸು ಲಾವತ್ತಡ್ಕ ಬಳಿ ಕಂದಕಕಕ್ಕೆ ಉರುಳಿ ಗುಂಡ್ಯ ಹೊಳೆಗೆ

ಗುಂಡ್ಯ : ಕಂದಕಕ್ಕೆ ಉರುಳಿದ ಬಿದ್ದ ಖಾಸಗಿ ಬಸ್ಸು, ಚಾಲಕ ಸಾವು Read More »

error: Content is protected !!
Scroll to Top