ಕ್ರೈಂ

ಶಿಕ್ಷಕ ಕೋಟಿಯಪ್ಪ ಪೂಜಾರಿ ನಿಧನ

ಶಿಕ್ಷಕ ಕೋಟಿಯಪ್ಪ ಪೂಜಾರಿ ನ.25ರಂದು ಬೆಳಗ್ಗೆ ಬೊಳುವಾರಿನ ಮನೆಯಲ್ಲಿ ನಿಧನರಾಗಿದ್ದಾರೆ.ಸುಳ್ಯ ಗಾಂಧಿನಗರ ಶಾಲೆಯಲ್ಲಿ ಮುಖ್ಯಗುರುಗಳಾಗಿದ್ದು, ಅನಾರೋಗ್ಯದ ಹಿನ್ನಲೆಯಲ್ಲಿ ಸ್ವಯಂ ನಿವೃತ್ತಿ ಹೊಂದಿದ್ದ ಕೋಟಿಯಪ್ಪ ಪೂಜಾರಿ ಅವರು ಪುತ್ತೂರು ಬೊಳುವಾರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸ್ತವ್ಯ ಹೊಂದಿದ್ದರು. .

ಶಿಕ್ಷಕ ಕೋಟಿಯಪ್ಪ ಪೂಜಾರಿ ನಿಧನ Read More »

ವರದಕ್ಷಿಣೆ ಕಿರುಕುಳದಿಂದು ತುಂಬು ಗರ್ಬಿಣಿ ಆತ್ಮ ಹತ್ಯೆ

ಬೆಂಗಳೂರು: ವರದಕ್ಷಿಣೆ ಕಿರುಕುಳ ಸಹಿಸದೆ ಗಂಡನ ಮನೆಯಲ್ಲೇ ಗರ್ಬಿಣಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಗುಮ್ಮನಹಳ್ಳಿಯಲ್ಲಿ ನಡೆದಿದೆ.ರೂಪ ಮೃತ ಮಹಿಳೆ ಎಂದು ತಿಳಿದುಬಂದಿದೆ. ಕಳೆದ ಎರಡು ವರ್ಷಗಳ ಹಿಂದೆ ಪರಸ್ಪರ ಎರಡು ಮನೆಯವರನ್ನ ಒಪ್ಪಿಸಿ ಮದುವೆಯಾಗಿದ್ದ ರೂಪ ಮತ್ತು ಸುರೇಶ್ ಆರು ತಿಂಗಳವರೆಗೂ ಸುಖ ಸಂಸಾರ ಮಾಡಿದ್ದಾರೆ. ಆದರೆ ಆರು ತಿಂಗಳು ಕಳೆಯುತ್ತಿದ್ದಂತೆ ವರದಕ್ಷಿಣೆ ಕಿರುಕುಳ ಜಾಸ್ತಿಯಾಗಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವರದಕ್ಷಿಣೆ ಕಿರುಕುಳದಿಂದು ತುಂಬು ಗರ್ಬಿಣಿ ಆತ್ಮ ಹತ್ಯೆ Read More »

ಸೇಲ್ವಮ್ಮ ಅಡ್ಯಡ್ಕ ನಿಧನ

ತೊಡಿಕಾನ ಗ್ರಾಮದ ಅಡ್ಯಡ್ಕ ಸಿ.ಆರ್.ಸಿ ಕಾಲೋನಿಯ ಸೆಲ್ವಮ್ಮ ಎಂಬವರು ಅಲ್ಪಕಾಲದ ಅಸೌಕ್ಯದಿಂದ ನ. 22 ರಂದು ಸುಳ್ಯದ ಸರಕಾರಿ ಆಸ್ಪತ್ರೆಯಲ್ಲಿ ನಿಧನರಾದರು.ಅವರಿಗೆ 81 ವರ್ಷ ವಯಸ್ಸಾಗಿತ್ತು.ಮೃತರು ನಾಲ್ಕು ಮಂದಿ ಪುತ್ರರು, ಮೂರು ಮಂದಿ ಹೆಣ್ಣುಮಕ್ಕಳನ್ನು, ಕುಟುಂಬಸ್ಥರನ್ನು, ಬಂಧು ಮಿತ್ರರನ್ನು ಅಗಲಿದ್ದಾರೆ. .

ಸೇಲ್ವಮ್ಮ ಅಡ್ಯಡ್ಕ ನಿಧನ Read More »

ಕಾಂತಾರ ಚಿತ್ರದ ಕಲಾವಿದರು ಪ್ರಯಾಣಿಸುತ್ತಿದ್ದ ಬಸ್‌ ಅಪಘಾತ, ಹಲವರಿಗೆ ಗಂಭೀರ ಗಾಯ

ಕಾಂತಾರ ಚಿತ್ರದ ಜ್ಯೂನಿಯರ್ ಕಲಾವಿದರು ಪ್ರಯಾಣಿಸುತ್ತಿದ್ದ ಮಿನಿ ಬಸ್ ಅಪಘಾತವಾಗಿ ಅನೇಕ ಮಂದಿ ಗಾಯಗೊಂಡ ಘಟನೆ ಕೊಲ್ಲೂರು ಸಮೀಪದ ಜಡ್ಕಳ್ ಎಂಬಲ್ಲಿ ನಿನ್ನೆ ರಾತ್ರಿ ವೇಳೆ ನಡೆದಿದೆ.ಮುದೂರಿನಲ್ಲಿ ಕಾಂತಾರ ಚಾಪ್ಟರ್ 1 ಚಿತ್ರದ ಶೂಟಿಂಗ್ ಮುಗಿಸಿ 20 ಜ್ಯೂನಿಯರ್ ಕಲಾವಿದರನ್ನು ಕೊಲ್ಲೂರಿಗೆ ಕರೆದೊಯ್ಯುತ್ತಿದ್ದ ಬಸ್ ಪಲ್ಟಿಯಾಯಿತ್ತೆನ್ನಲಾಗಿದೆ. ಇದರಿಂದ 6 ಮಂದಿ ತೀವ್ರ ಗಾಯಗೊಂಡಿದ್ದಾರೆ. ಇವರೆಲ್ಲ ಜಡ್ಕಲ್ ಮತ್ತು ಕುಂದಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಕೊಲ್ಲೂರು ಪೊಲೀಸರು ಆಗಮಿಸಿ ಪರಿಶೀಲನೆ

ಕಾಂತಾರ ಚಿತ್ರದ ಕಲಾವಿದರು ಪ್ರಯಾಣಿಸುತ್ತಿದ್ದ ಬಸ್‌ ಅಪಘಾತ, ಹಲವರಿಗೆ ಗಂಭೀರ ಗಾಯ Read More »

ಖ್ಯಾತ ಹಾಡುಗಾರ ಶಶೀಧರ ಕೋಟೆಯವರಿಗೆ ಮಾತೃ ವಿಯೋಗ

ಹಿರಿಯ ಸಹಕಾರಿ ಧುರೀಣ, ಸಜ್ಜನ ಬಂಧು ದಿ. ಕೋಟೆ ವಸಂತ ಕುಮಾರ್ ರವರ ಪತ್ನಿ ಪಾರ್ವತಿ ವಸಂತ ಕುಮಾರ್ (82)ಕೋಟೆಯವರು ನ. 23 ರಂದು ನಿಧನರಾದರು.ಮೃತರು ಪುತ್ರರಾದ ಖ್ಶಾತ ಹಾಡುಗಾರ ಶಿಶಿಧರ ಕೋಟೆ, ರಘುರಾಮ ಕೋಟೆ ಪುತ್ರಿ ಶಶಿಕಲಾ ಗಣಪಯ್ಯ ವನಶ್ರಿ ಪೆರುವಾಜೆ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ

ಖ್ಯಾತ ಹಾಡುಗಾರ ಶಶೀಧರ ಕೋಟೆಯವರಿಗೆ ಮಾತೃ ವಿಯೋಗ Read More »

ಆದಿಚುಂಚನಗಿರಿ ಮಠದ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರ ಮಾತೃಶ್ರೀ ನಿಧನ

ಚೆಂಬು ಗ್ರಾಮದ ಚೆಂಡೆಡ್ಕ ದಿ.ವೆಂಕಪ್ಪ ಮಾಸ್ತರ್ ಇವರ ಪತ್ನಿ, ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಗಳ ಮಾತೃಶ್ರೀ ಗಂಗಮ್ಮ ಚೆಂಡೆಡ್ಕ ಇಂದು ಬೆಳಗ್ಗೆ ದೈವಾದೀನಾರಾಗಿದ್ದಾರೆ.ಇವರು ಮಕ್ಕಳಾದ ನೇತ್ರಾವತಿ ಗುಡ್ಡೆಮನೆದ,ಪುಷ್ಪಾವತಿ ಕುಡೆಕಲ್ಲು,ಮಾಚಯ್ಯ ಚೆಂಡೆಡ್ಕ,ಮನೋಹರ ಚೆಂಡೆಡ್ಕ,ಬೇಶ್ ಕುಮಾರಿ ಅಲೆಕ್ಕಾಡಿ,ಕವಿತಾ ಮಣಿ ಪಾಲೆಪ್ಪಾಡಿ,ಕುಸುಮಾಕರ ಚೆಂಡೆಡ್ಕ ಮತ್ತು ಕುಟುಂಬಸ್ಥರು ಹಾಗು ಬಂಧು ಮಿತ್ರರನ್ನು ಅಗಲಿದ್ದಾರೆ.ಇವರಿಗೆ 97 ವರ್ಷ ವಯಸ್ಸಾಗಿತ್ತು.ಇವರ ಅಂತಿಮ ದರ್ಶನಕ್ಕೆ ಇಂದು ಬೆಳಗ್ಗೆ 11 ಗಂಟೆಯಿಂದ ಸಂಜೆ 4 ರ ವರೆಗೆ ಸ.ಹಿ.ಪ್ರಾ. ಶಾಲೆ ಕೂಡಡ್ಕದಲ್ಲಿ ಅವಕಾಶ

ಆದಿಚುಂಚನಗಿರಿ ಮಠದ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರ ಮಾತೃಶ್ರೀ ನಿಧನ Read More »

ಶಾಲೆಗೆ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ಬೈಕ್ ಗೆ ಕಾಡಾನೆ ದಾಳಿ,ತಂದೆ ಇಬ್ಬರು ಮಕ್ಕಳು ಗಾಯಗೊಂಡು ಅಪಾಯದಿಂದ ಪಾರು

ಮಕ್ಕಳನ್ನು ಶಾಲೆಗೆ ಬೈಕಲ್ಲಿ ಕರೆದೊಯ್ಯುತ್ತಿದ್ದ ವೇಳೆ ಕಾಡಾನೆಯೊಂದು ಬೈಕ್ ಮೇಲೆ ದಾಳಿ ನಡೆಸಿರುವ ಘಟನೆ ಬೆಳ್ತಂಗಡಿ ತಾಲೂಕಿನ ಶಿಶಿಲದಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.ಶಿಶಿಲ ಗ್ರಾಮದ ಕಳ್ಳಾಜೆ ನಿವಾಸಿ ವಸಂತ ಗೌಡ ಎಂಬವರು ಗುರುವಾರ ಬೆಳಗ್ಗೆ ತನ್ನ ಮಕ್ಕಳಾದ ಲಾವ್ಯಾ ಹಾಗೂ ಅದ್ವಿತ್‌ರನ್ನು ಶಿಬಾಜೆ ಗ್ರಾಮದ ಪೆರ್ಲ ಶಾಲೆಗೆ ಬೈಕಿನಲ್ಲಿ ಮಕ್ಕಳನ್ನು ಕೂರಿಸಿಕೊಂಡು ಹೋಗುತ್ತಿದ್ದ ವೇಳೆ ರಸ್ತೆಯ ತಿರುವಿನಲ್ಲಿ ಒಂಟಿ ಸಲಗ ಕಾಣಿಸಿಕೊಂಡಿದೆ. ಭಯದಿಂದ ಅವರು ತನ್ನ ಬೈಕ್‌ ಏಕಾಏಕಿ ಬ್ರೇಕ್ ಹಾಕಿ ನಿಲ್ಲಿಸಿದ್ದರಿಂದ ರಸ್ತೆಗೆ ಬಿದ್ದ ವಸಂತ

ಶಾಲೆಗೆ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ಬೈಕ್ ಗೆ ಕಾಡಾನೆ ದಾಳಿ,ತಂದೆ ಇಬ್ಬರು ಮಕ್ಕಳು ಗಾಯಗೊಂಡು ಅಪಾಯದಿಂದ ಪಾರು Read More »

ಚೆಂಬು: ಉಂಬಳೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಹೊತ್ತಿ ಉರಿದ ಮನೆ

ಚೆಂಬು ಗ್ರಾಮದ ಉಂಬಳೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಮನೆ ಹೊತ್ತಿ ಉರಿದ ಘಟನೆ ಗುರುವಾರ ವರದಿಯಾಗಿದೆ.ಉಂಬಳೆಯ ಮಾನ್ಯದ ಎಂ‌.ಟಿ. ಭಾಸ್ಕರ ಅವರ ಮನೆಯಲ್ಲಿ ನ.21ರಂದು ಮಧ್ಯಾಹ್ನ ಮನೆಯವರು ಇಲ್ಲದ ಸಮಯದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ, ಮನೆಗೆ ಬೆಂಕಿ ತಗುಲಿ ಹೊತ್ತಿ ಉರಿಯಿತು. ಪರಿಣಾಮವಾಗಿಮನೆಯೊಳಗಿದ್ದ ಮನೆಯ ದಾಖಲೆಪತ್ರಗಳು, ಬಟ್ಟೆಗಳು, ನಗದು ಹಣ, ಚಿನ್ನಾಭರಣ, ಗೋಣಿಯಲ್ಲಿ ತುಂಬಿಸಿಟ್ಟಿದ್ದ ಅಡಿಕೆ ಸ ಬೆಂಕಿಗಾಹುತಿಯಾಗಿದೆ ಎಂದು ತಿಳಿದು ಬಂದಿದೆ‌.

ಚೆಂಬು: ಉಂಬಳೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಹೊತ್ತಿ ಉರಿದ ಮನೆ Read More »

ಮದುವೆ ನಿಶ್ಚಯವಾಗಿದ್ದ ಯುವತಿ ನೇಣು ಬಿಗಿದು ಆತ್ಮ ಹತ್ಯೆ

ಮದುವೆ ನಿಶ್ವಯವಾಗಿದ್ದ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿಯಿಂದ ವರದಿಯಾಗಿದೆ.ಉಡುಪಿ ತಾಲೂಕಿನ ದೆಂದೂರುಕಟ್ಟೆಯ ಇಂದ್ರಾಳಿ ನಿವಾಸಿ ಕೀರ್ತನಾ ಶೆಟ್ಟಿ ಆತ್ಮಹತ್ಯೆ ಮಾಡಿಕೊಂಡ ಯುವತಿ.ಮೃತ ಯುವತಿ ಕೀರ್ತನಾವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಮನೆಯಲ್ಲಿ ಮದುವೆ ನಿಶ್ಚಯ ಮಾಡಿ, ಒಂದೂವರೆ ತಿಂಗಳ ಹಿಂದೆ ನಿಶ್ಚಿತಾರ್ಥವನ್ನು ಮಾಡಿದ್ದರು. ಮುಂದಿನ ಕೆಲವು ದಿನಗಳಲ್ಲಿ ಯುವತಿಗೆ ಮದುವೆ ಮಾಡುವುದಕ್ಕೆ ಮನೆಯಲ್ಲಿ ಸಿದ್ಧತೆಯನ್ನೂ ಮಾಡಿಕೊಂಡಿದ್ದರುಆದರೆ ಯುವತಿ ಮನೆಯ ಕೋಣೆಯಲ್ಲಿ ಕುತ್ತಿಗೆಗೆ ಶಾಲು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಕೂಡಲೇ ಮನೆಯವರು ನೋಡಿ

ಮದುವೆ ನಿಶ್ಚಯವಾಗಿದ್ದ ಯುವತಿ ನೇಣು ಬಿಗಿದು ಆತ್ಮ ಹತ್ಯೆ Read More »

ವಾಹನ ಡಿಕ್ಕಿ ಹೊಡೆದು ಚಿರತೆ ಸಾವು

ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ದೇವರಕೊಲ್ಲಿ ಎಂಬಲ್ಲಿ ಚಿರತೆಯೊಂದು ಕಾಡಿನಿಂದ ರಸ್ತೆ ದಾಟುತ್ತಿದ್ದ ವೇಳೆ ವಾಹನ ಡಿಕ್ಕಿ ಹೊಡೆದು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ . ಅರಣ್ಯ ಇಲಾಖೆಗೆ ಸ್ಥಳೀಯರು ತಿಳಿಸಿದ್ದಾರೆ.ಅರಣ್ಯ ಇಲಾಖೆಯವರು ಬೇಟಿ ನೀಡಿ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.

ವಾಹನ ಡಿಕ್ಕಿ ಹೊಡೆದು ಚಿರತೆ ಸಾವು Read More »

error: Content is protected !!
Scroll to Top