ಕ್ರೈಂ

ಮೇಯಲು ಬಿಟ್ಟಿದ ದನದ ಕಾಲಿಗೆ ಕಡಿದ ಕಟುಕ

ಮೇಯಲು ಬಿಟ್ಟಿದ್ದ ದನದ ಕಾಲಿಗೆ ಪಕ್ಕದ ಮನೆಯ ವ್ಯಕ್ತಿಯೋರ್ವರು ಕತ್ತಿಯಿಂದ ಕಡಿದು ಗಂಭೀರ ಗಾಯಗೊಳಿಸಿದ ಘಟನೆ ರಾಮಕುಂಜ ಗ್ರಾಮದ ಕೊಂಡ್ಯಾಡಿ ಎಂಬಲ್ಲಿ ನಡೆದಿದೆ. ಈ ಬಗ್ಗೆ ಕಡಬ ಪೊಲೀಸರಿಗೆ ದೂರು ನೀಡಲಾಗಿದೆ. ಕೊಂಡ್ಯಾಡಿಯ ಮಹಿಳೆಯೋರ್ವೆ ಕಡಬ ಪೊಲೀಸರಿಗೆ ದೂರು ನೀಡಿದ್ದು, ಕೊಟ್ಟಿಗೆಯಿಂದ ದನವನ್ನು ತೋಟಕ್ಕೆ ಮೇಯಲು ಬಿಟ್ಟಿದ್ದೆ. ದನ ಸಂಜೆಯಾದರೂ ಮರಳಿ ಮನೆಗೆ ಬಾರಲಿಲ್ಲ. ಹುಡುಕಾಡಿದಾಗ ಪಕ್ಕದ ಮನೆಯ ಅಬ್ಬಾಸ್ ರ ತೋಟದಲ್ಲಿ ಕಾಲಿಗೆ ಗಂಭೀರ ಗಾಯವಾದ ಸ್ಥಿತಿಯಲ್ಲಿ ಬಿದ್ದುಕೊಂಡಿತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಮೇಯಲು ಬಿಟ್ಟಿದ ದನದ ಕಾಲಿಗೆ ಕಡಿದ ಕಟುಕ Read More »

ಸ್ಕೂಟಿ‌ ಅಪಘಾತ ದಂಪತಿ‌ ಸಾವು, ಇಲ್ಲಿದೆ ಹೆಚ್ಚಿನ ಮಾಹಿತಿ

ಕಂಟೈನ‌ರ್ ಲಾರಿ ಸ್ಕೂಟರ್ ಗೆ ಢಿಕ್ಕಿಯಾಗಿ ಸ್ಕೂಟಿ ಸವಾರರಾದ ದಂಪತಿ ಮ್ರತಪಟ್ಟ ಘಟನೆ ಸಂಪಾಜೆ ಬಳಿಯ ಚೆಡಾವಿನಲ್ಲಿ ಮಂಗಳವಾರ ಸಂಜೆ ಸಂಭವಿಸಿದೆ.ಮ್ರತಪಟ್ಟ ದಂಪತಿಯನ್ನು ಎಂ.ಚಿದಾನಂದ ಆಚಾರ್ಯ ಮತ್ತು ಅವರ ಧರ್ಮ ಪತ್ನಿ ನಳೀನಿ (38) ಎಂದು ಗುರುತಿಸಲಾಗಿದೆ.ಅವರ ತಮ್ಮ ಊರಾದ ಕೊಡಗಿನ ನೆಲ್ಲಿಹುದುಕೇರಿಯಿಂದ ಪುತ್ತೂರಿಗೆ ಸ್ಕೂಟಿಯಲ್ಲಿ ಹೋಗುತ್ತಿದ್ದಾಗಸುಳ್ಯದಿಂದ ಮಡಿಕೇರಿ ಕಡೆಗೆ ಹೋಗುತ್ತಿದ್ದ ಕಂಟೈನರ್ ಲಾರಿ ಸ್ಕೂಟಿಗೆ ಸಂಪಾಜೆಯ ಚೆಡಾವು ಬಳಿ ಡಿಕ್ಕಿಯಾಯಿತು. ಪರಿಣಾಮ ಚಿದಾನಂದ ಆಚಾರ್ಯ ಸ್ಥಳದಲ್ಲಿಯೇ ಮೃತಪಟ್ಟರು. ಸಹಸವಾರೆಯಾಗಿದ್ದ ನಳಿನಿಗೆ ಗಂಭೀರ ಗಾಯಗಳಾಗಿದ್ದ ಪರಿಣಾಮ ಸುಳ್ಯದ

ಸ್ಕೂಟಿ‌ ಅಪಘಾತ ದಂಪತಿ‌ ಸಾವು, ಇಲ್ಲಿದೆ ಹೆಚ್ಚಿನ ಮಾಹಿತಿ Read More »

ಸ್ಕೂಟಿ ಲಾರಿ ಭೀಕರ ಅಪಘಾತದಲ್ಲಿ ಗಂಭೀರ ಗಾಯಗೊಂಡ ಮಹಿಳೆಯೂ ಸಾವು

ಕೊಯನಾಡು ಸಮೀಪದ ಚಡಾವು ಎಂಬಲ್ಲಿ ಲಾರಿ ಹಾಗೂ ಸ್ಕೂಟಿ ಪರಸ್ಪರ ಢಿಕ್ಕಿಯಾಗಿ ಸ್ಕೂಟಿ ಸವಾರರ ಪೈಕಿ ಇಬ್ಬರು ಇದೀಗ ಮಹಿಳೆಯೂ ಮ್ರತಪಟ್ಟ ಘಟನೆ ವರದಿಯಾಗಿದೆ. ಸ್ಕೂಟಿ ಸವಾರ ಚಿದಾನಂದ ಆಚಾರ್ಯ ಸ್ಥಳದಲ್ಲಿಯೇ ಮಟ್ಟರೆ ಸಹಸವಾರೆಯಾಗಿದ್ದ ಮಹಿಳೆಗೂ ಗಂಭೀರ ಗಾಯಗೊಂಡು , ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ಇದೀಗ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಸ್ಕೂಟಿ ಲಾರಿ ಭೀಕರ ಅಪಘಾತದಲ್ಲಿ ಗಂಭೀರ ಗಾಯಗೊಂಡ ಮಹಿಳೆಯೂ ಸಾವು Read More »

ಸ್ಕೂಟಿ ಲಾರಿ ಭೀಕರ ಅಪಘಾತ,ಸ್ಕೂಟಿ ಸವಾರ ಸಾವು

ಲಾರಿ ಹಾಗೂ ಸ್ಕೂಟಿ ಪರಸ್ಪರ ಢಿಕ್ಕಿಯಾಗಿ ಸ್ಕೂಟಿ ಸವಾರ ಮೃತಪಟ್ಟಿದ್ದು, ಮತ್ತೋರ್ವ ಗಾಯಗೊಂಡ ಘಟನೆ ಇದೀಗ ಸಂಪಾಜೆ ಬಳಿಯ ಚೆಡಾವಿನಲ್ಲಿ ಸಂಭವಿಸಿದೆ. ಸಾವನ್ನಪ್ಪಿದ ವ್ಯಕ್ತಿಯನ್ನು ಚಿದಾನಂದ ಆಚಾಅರ್ಯ ಎಂದು ಗುರುತಿಸಲಾಗಿದೆ. ಸಹಸವಾರೆಯಾಗಿದ್ದ ಮಹಿಳೆಗೂ ಗಂಭೀರ ಗಾಯಗಳಾಗಿದ್ದು, ಸುಳ್ಯದ ಕೆವಿಜಿ ಆಸ್ಪತ್ರೆಗೆ ಕರೆತರಲಾಗಿದೆ.

ಸ್ಕೂಟಿ ಲಾರಿ ಭೀಕರ ಅಪಘಾತ,ಸ್ಕೂಟಿ ಸವಾರ ಸಾವು Read More »

ಲಾರಿ ಉದ್ಯಮಿ ಆತ್ಮ ಹತ್ಯೆ ,ಪತ್ನಿಗೆ ಮಾಜಿ ಕುಲಸಚಿವನೊಂದಿಗೆ ಅಕ್ರಮ ಸಂಬಂಧ

ಉದ್ಯಮಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಮಹಾಲಕ್ಷ್ಮೀ ಲೇಔಟ್‌ ನಿವಾಸಿ ಎಂ.ಜಿ. ಸೋಮಶೇಖರ್‌(47) ಆತ್ಮಹತ್ಯೆ ಮಾಡಿಕೊಂಡವರು.ಭಾನುವಾರ ರಾತ್ರಿ 11 ಗಂಟೆಗೆ ಸೋಮಶೇಖರ್‌ ಮನೆಯ ಕೋಣೆಯಲ್ಲೇ ಫ್ಯಾನ್‌ಗೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅದನ್ನು ಗಮನಿಸಿದ ಪತ್ನಿ ಹಾಗೂ ಮಕ್ಕಳು ನೇಣಿನ ಕುಣಿಕೆಯಿಂದ ಕೆಳಗೆ ಇಳಿಸಿ, ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಸೋಮವಾರ ಬೆಳಗ್ಗೆ 11 ಗಂಟೆಗೆ ಸೋಮಶೇಖರ್‌ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.ಮೃತ ಸೋಮಶೇಖರ್‌ ಲಾರಿ

ಲಾರಿ ಉದ್ಯಮಿ ಆತ್ಮ ಹತ್ಯೆ ,ಪತ್ನಿಗೆ ಮಾಜಿ ಕುಲಸಚಿವನೊಂದಿಗೆ ಅಕ್ರಮ ಸಂಬಂಧ Read More »

ಪತಿಯಿಂದ ಪತ್ನಿಯ ಕೊಲೆ

ಶಿವಮೊಗ್ಗ ನಗರದ ತುಂಗಾನಗರ ಪೊಲೀಸ್ ಠಾಣೆಯ ವ್ಯಾಪ್ತಿಗೆ ಒಳಪಡುವ ಎಸಿ ರಿಪೇರಿ ವೃತ್ತಿ ಮಾಡುವ ಯೂಸುಫ್ s/o ಅಬ್ದುಲ್ ರವೂಫ್, ಎನ್ನುವ ವ್ಯಕ್ತಿ ತನ್ನ ಹೆಂಡತಿ ರುಕ್ಸಾನಾ ಎಂಬಾಕೆಯನ್ನು ತನ್ನ ಮನೆಯಲ್ಲಿ ಕೊಲೆ ಮಾಡಿದ್ದು ಈ ಪ್ರಕರಣದಲ್ಲಿ ವೈಯಕ್ತಿಕ ಜಗಳ ಅನೈತಿಕ ಸಂಬಂಧದ ಬಗ್ಗೆ ಮಾತುಗಳು ಕೇಳಿ ಬರುತ್ತಿದ್ದು ತುಂಗಾನಗರ ಪೊಲೀಸರ ವಶದಲ್ಲಿರುವ ಆರೋಪಿಯ ವಿಚಾರಣೆಯಿಂದ ಇನ್ನಷ್ಟು ಮಾಹಿತಿ ಹೊರಬರಬೇಕಾಗಿದೆ.

ಪತಿಯಿಂದ ಪತ್ನಿಯ ಕೊಲೆ Read More »

ಸಂಪಾಜೆ : ಪ್ರಯಾಣಿಕ ದಾರಿ ಮಧ್ಯೆ ಹೃದಯಾಘಾತದಿಂದ ನಿಧನ

ಪುತ್ತೂರು ತಾಲೂಕಿನ ಮುಂಡೂರು ನಿವಾಸಿ ಮೋಹನ್ ನಾಯ್ಕ (51) ಹೃದಯಾಘಾತದಿಂದ ಭಾನುವಾರ ನಿಧನ ಹೊಂದಿದರು.ಮೋಹನ್ ನಾಯ್ಕ ರವರು ಮನೆಯವರೊಂದಿಗೆ ಮೈಸೂರಿಗೆ ತೆರಳುತ್ತಿದ್ದ ವೇಳೆ ಸಂಪಾಜೆ ಘಾಟ್ ಬಳಿ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ.ಮೃತರು ಪತ್ನಿ ಕೊಡಿನೀರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷೆ ಪುಷ್ಪ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಸಂಪಾಜೆ : ಪ್ರಯಾಣಿಕ ದಾರಿ ಮಧ್ಯೆ ಹೃದಯಾಘಾತದಿಂದ ನಿಧನ Read More »

ಕುಕ್ಕೇಟಿ ಜತ್ತಪ್ಪ ಗೌಡ ನಿಧನ

ಎಂ. ಚೆಂಬು ಗ್ರಾಮದ ಕುಕ್ಕೇಟಿ ಜತ್ತಪ್ಪ (68) ಅವರು ಡಿ. 22ರಂದು ಸ್ವಗೃಹದಲ್ಲಿ ನಿಧನರಾದರು.ಮೃತರು ಪತ್ನಿ ಪುಷ್ಪಾವತಿ ಮಕ್ಕಳಾದ ವನಿತಾ, ಪ್ರಸಾದ್‌, ಕಿಶೋ‌ರ್, ಭವಾನಿ ಶಂಕ‌ರ್, ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧುಗಳನ್ನು ಅಗಲಿದ್ದಾರೆ

ಕುಕ್ಕೇಟಿ ಜತ್ತಪ್ಪ ಗೌಡ ನಿಧನ Read More »

ಪ್ರತಿ ವರ್ಷ ಡಿಸೆಂಬರ್ ತಿಂಗಳಲ್ಲಿಯೇ ಅತಿ ಹೆಚ್ಚು ಸಾವು ಸಂಭವಿಸುವುದು ಹೌದ?

ಪ್ರತಿ ವರ್ಷ ಡಿಸೆಂಬರ್ನಲ್ಲಿಯೇ ಅತೀಹೆಚ್ಚು ಸಾವು ನೋವುಗಳು ಸಂಭವಿಸುತ್ತವೆಯಂತೆ… ಹೌದ ?ವಿಶೇಷವಾಗಿ ವರ್ಷದ ಕೊನೆಯ 3-4 ದಿನಗಳಲ್ಲಿ ರಾಷ್ಟ್ರದ/ರಾಜ್ಯದ ನಾಯಕರ ಹೆಚ್ಚು ನಿಧನಗಳನ್ನು ನೋಡುತ್ತೇವೆಯಂತೆ. ಈಗಾಗಲೇ ಅನೇಕ ಗಣ್ಯರು, ಎಸ್.ಎಂ.ಕೃಷ್ಣ, ಜಾಕೀರ್ ಹುಸೇನ್, ಪದ್ಮಶ್ರೀ ತುಳಸಿಗೌಡ, ನಟಿ ಶೋಭಿತಾ, ಐಪಿಎಸ್ ಅಧಿಕಾರಿ ಹರ್ಷವರ್ಧನ ಮುಂತಾದವರ ನಿಧನವಾಗಿದೆ. ಡಿಸೆಂಬರ್ ತಿಂಗಳಲ್ಲಿ ಅತೀಹೆಚ್ಚು ಚಳಿ ಇರುವುದರಿಂದ ಅತೀ ಹಿರಿಯರಿಗೆ ಮತ್ತು ಅತೀ ಕಿರಿಯ ಜೀವಗಳಿಗೆ ದೈಹಿಕ ತೊಂದರೆ ಮತ್ತು ಹೃದಯಾಘಾತ ಹೆಚ್ಚು. ಅತೀ ಹೆಚ್ಚು ಪ್ರವಾಸ ಕೈಗೊಳ್ಳುವ ತಿಂಗಳಾಗಿದೆ. ಈ

ಪ್ರತಿ ವರ್ಷ ಡಿಸೆಂಬರ್ ತಿಂಗಳಲ್ಲಿಯೇ ಅತಿ ಹೆಚ್ಚು ಸಾವು ಸಂಭವಿಸುವುದು ಹೌದ? Read More »

ಅಂಗವಾಡಿ ಕಾರ್ಯಕರ್ತೆ ಹರಿಣಿ ನಿಧನ

ಪೆರಾಜೆ ಗ್ರಾಮದ ಅಮೆಚೂರು ಅಂಗನವಾಡಿ ಕಾರ್ಯಕರ್ತೆಹರಿಣಿ ಶನಿವಾರ ಸ್ವಗೃಹದಲ್ಲಿ ನಿಧನರಾದರು.ಅವರಿಗೆ 46 ವರ್ಷ ಪ್ರಾಯವಾಗಿತ್ತು.ಕಳೆದ 12 ವರ್ಷಗಳಿಂದ ಅಮೆಚೂರಿನಲ್ಲಿ ಅಂಗನವಾಡಿ ಕಾರ್ಯಕರ್ತೆಯಾಗಿ ಅವರು ಸೇವೆ ಸಲ್ಲಿಸಿದ್ದರು. ಕಳೆದ ಆರು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಮಡಿಕೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಯಲ್ಲಿದ್ದರು.ಮೃತರು ಪತಿ,ಪುತ್ರ ಸೇರಿದಂತೆ ಕುಟುಂಬಸ್ಥರನ್ನು ಅಗಲಿದ್ದಾರೆ.

ಅಂಗವಾಡಿ ಕಾರ್ಯಕರ್ತೆ ಹರಿಣಿ ನಿಧನ Read More »

error: Content is protected !!
Scroll to Top