ಕ್ರೈಂ

ಪೆರ್ಲ : ಕೊಲೆ ಆರೋಪಿಯ ಬಂಧನ

ಕಡಬ ತಾಲೂಕಿನ ಅಲಂತಾಯ ಗ್ರಾಮದ ಪೆರ್ಲ ಎಂಬಲ್ಲಿ ಅಕ್ಕ ಪಕ್ಕದ ಸಂಬಂಧಿ ಮನೆಯವರು ಇಬ್ಬರು ಹೊಡೆದಾಡಿಕೊಂಡು ಓರ್ವ ಕೊಲೆಯಯಾದ ಪ್ರಕರಣಕ್ಕೆ ಸಂಬಂಧಿಸಿ ಕೊಲೆ ಆರೋಪಿಯನ್ನು‌ ಪೊಲೀಸರು ಬಂಧಿಸಿದ್ದಾರೆ.ಗೋಳಿತ್ತೊಟ್ಟುವಿನ ಅಲಂತಾಯ ನಿವಾಸಿ ವೆಂಕಪ್ಪ ಗೌಡರ ಪುತ್ರ ರಮೇಶ್ ಕೊಲೆಯಾದವರು. ಅವರ ನೆರೆಮನೆಯವರಾದ ಸಂಬಂಧಿ ಹರೀಶ್ ಕೊಲೆ ಮಾಡಿದ ಆರೋಪಿ. ಕೊಲೆ ಆರೋಪಿ ಹರೀಶ್ ಗೋಳಿತೊಟ್ಟು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಆತನನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

ಪೆರ್ಲ : ಕೊಲೆ ಆರೋಪಿಯ ಬಂಧನ Read More »

ಪೆರ್ಲ : ಕೊಲೆ ಆರೋಪಿ ನಾಪತ್ತೆ,ಪೊಲೀಸರಿಂದ ತೀವ್ರ ಹುಡುಕಾಟ

ಕಡಬ ತಾಲೂಕಿನ ಅಲಂತಾಯ ಗ್ರಾಮದ ಪೆರ್ಲ ಎಂಬಲ್ಲಿ ಅಕ್ಕ ಪಕ್ಕದ ಸಂಬಂಧಿ ಮನೆಯವರು ಇಬ್ಬರು ಹೊಡೆದಾಡಿಕೊಂಡು ಓರ್ವ ಕೊಲೆಯಯಾದ ಪ್ರಕರಣಕ್ಕೆ ಸಂಬಂಧಿಸಿ ಕೊಲೆ ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.ಗೋಳಿತ್ತೊಟ್ಟುವಿನ ಅಲಂತಾಯ ನಿವಾಸಿ ವೆಂಕಪ್ಪ ಗೌಡರ ಪುತ್ರ ರಮೇಶ್ ಕೊಲೆಯಾದವರು. ಅವರ ನೆರೆಮನೆಯವರಾದ ಸಂಬಂಧಿ ಹರೀಶ್ ಕೊಲೆ ಮಾಡಿದ ಆರೋಪಿ.ಇದೀಗ ಹರೀಶ್ ನಾಪತ್ತೆಯಾಗಿದ್ದು ಪೊಲೀಸರು ಆತನ ಮೊಬೈಲ್ ಲೊಕೇಶನ್ ಆಧಾರಿಸಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.ಇನ್ನು ಕೊಲೆಗೆ ಆಸ್ತಿ ವಿವಾದ ಕಾರಣ ಎನ್ನಲಾಗಿದ್ದು ಹೆಚ್ಚಿನ ಮಾಹಿತಿ

ಪೆರ್ಲ : ಕೊಲೆ ಆರೋಪಿ ನಾಪತ್ತೆ,ಪೊಲೀಸರಿಂದ ತೀವ್ರ ಹುಡುಕಾಟ Read More »

ಆಸ್ತಿ ವಿವಾದ : ವ್ಯಕ್ತಿಯ ಬರ್ಬರ ಕೊಲೆ

ಅಕ್ಕ ಪಕ್ಕದ ಮನೆಯವರು ಇಬ್ಬರು ಹೊಡೆದಾಡಿಕೊಂಡು ಓರ್ವ ಕೊಲೆಯಯಾದ ಘಟನೆ ನೆಲ್ಯಾಡಿ ಸಮೀಪದ ಗೋಳಿತ್ತೊಟ್ಟುವಿನಲ್ಲಿ ನಡೆದಿದೆ.ಗೋಳಿತ್ತೊಟ್ಟುವಿನ ಅಲಾಂತಾಯ ನಿವಾಸಿ ವೆಂಕಪ್ಪ ಗೌಡರ ಪುತ್ರ ರಮೇಶ್ ಕೊಲೆಯಾದವರು. ಅವರ ನೆರೆಮನೆಯವರಾದ ಹರೀಶ್ ಕೊಲೆ ಮಾಡಿದ ಆರೋಪಿ.ಇನ್ನು ಕೊಲೆಗೆ ಆಸ್ತಿ ವಿವಾದ ಕಾರಣ ಎನ್ನಲಾಗಿದ್ದು ಪೊಲೀಸರು ಸ್ಥಳಕ್ಕೆ ಆಗಮಿಸಿ ವಿಚಾರಣೆ ನಡೆಸಿ ಆರೋಪಿಯ ಬಂಧನಕ್ಕೆ ತಯಾರಿ ನಡೆಸತ್ತಿದ್ದಾರೆ.

ಆಸ್ತಿ ವಿವಾದ : ವ್ಯಕ್ತಿಯ ಬರ್ಬರ ಕೊಲೆ Read More »

ಉಬರಡ್ಕದಲ್ಲಿ ಬಸ್ ಸ್ಕೂಟಿ ಅಪಘಾತದಲ್ಲಿ ಮೃತಪಟ್ಟ ಯುವತಿ ರಚನಾ, ಪುತ್ತೂರು ವಿವೇಕಾನಂದ ಕಾಲೇಜಿನ ಪದವಿ ವಿದ್ಯಾರ್ಥಿನಿ

ಸುಳ್ಯ ತಾಲೂಕಿನ ಉಬರಡ್ಕ ಗ್ರಾಮದ ಸೂಂತೋಡು ಸಮೀಪ ಕೆ.ಎಸ್.ಆರ್.ಟಿ.ಸಿ. ಬಸ್ ಹಾಗೂ ಸ್ಕೂಟಿ ಅಪಘಾತವಾಗಿ ಸಹೋದರಿಯರಿಬ್ಬರು ಗಂಭೀರ ಗಾಯಗೊಂಡು ಒಬ್ಬರು ಮೃತಪಟ್ಟಿದ್ದು ಮೃತಪಟ್ಟ ಯುವತಿ ಪುತ್ತೂರು ವಿವೇಕಾನಂದ ಕಾಲೇಜಿನ ಪದವಿ ವಿದ್ಯಾರ್ಥಿನಿ ಎಂದು ತಿಳಿದು ಬಂದಿದೆ.ಇಂದು ಸಂಜೆ ಸುಳ್ಯದಿಂದ ಉಬರಡ್ಕಕ್ಕೆ ಸ್ಕೂಟಿಯಲ್ಲಿ ಕಾಡುತೋಟದ ನಾರಾಯಣ ಗೌಡ ಎಂಬವರ ಮಕ್ಕಳಾದ ರಚನಾ ಮತ್ತು ಅನನ್ಯ ತೆರಳುತಿದ್ದಾಗ, ಸೂಂತೋಡು ಬಳಿ ಎದುರಿನಿಂದ ಬಂದ ಬಸ್ ಪರಸ್ಪರ ಢಿಕ್ಕಿಯಾಯಿತು. ಪರಿಣಾಮ ರಚನಾ ಗಂಭೀರ ಗಾಯಗೊಂಡಿದ್ದು ಸುಳ್ಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆ ವೇಳೆಗೆ

ಉಬರಡ್ಕದಲ್ಲಿ ಬಸ್ ಸ್ಕೂಟಿ ಅಪಘಾತದಲ್ಲಿ ಮೃತಪಟ್ಟ ಯುವತಿ ರಚನಾ, ಪುತ್ತೂರು ವಿವೇಕಾನಂದ ಕಾಲೇಜಿನ ಪದವಿ ವಿದ್ಯಾರ್ಥಿನಿ Read More »

ಬಸ್ ಸ್ಕೂಟಿ ಭೀಕರ ಅಪಘಾತ, ವಿದ್ಯಾರ್ಥಿನಿ ಸಾವು,ಸಹೋದರಿ ಗಂಭೀರ

ಸುಳ್ಯ ತಾಲೂಕಿನ ಉಬರಡ್ಕ ಗ್ರಾಮದ ಸೂಂತೋಡು ಸಮೀಪ ಕೆ.ಎಸ್.ಆರ್.ಟಿ.ಸಿ. ಬಸ್ ಹಾಗೂ ಸ್ಕೂಟಿ ಅಪಘಾತವಾಗಿ ವಿದ್ಯಾರ್ಥಿ ಸಹೋದರಿಯರಿಬ್ಬರು ಗಂಭೀರ ಗಾಯಗೊಂಡು ಒಬ್ಬರು ಮೃತಪಟ್ಟ ಘಟನೆ ವರದಿಯಾಗಿದೆ.ಇಂದು ಸಂಜೆ ಸುಳ್ಯದಿಂದ ಉಬರಡ್ಕಕ್ಕೆ ಸ್ಕೂಟಿಯಲ್ಲಿ ಕಾಡುತೋಟದ ಸಹೋದರಿಯರಾದ ರಚನಾ ಮತ್ತು ಅನನ್ಯ ತೆರಳುತಿದ್ದಾಗ, ಸೂಂತೋಡು ಬಳಿ ಎದುರಿನಿಂದ ಬಂದ ಬಸ್ ಪರಸ್ಪರ ಢಿಕ್ಕಿಯಾಯಿತು. ಪರಿಣಾಮ ರಚನಾ ಗಂಭೀರ ಗಾಯಗೊಂಡಿದ್ದು ಸುಳ್ಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆ ವೇಳೆಗೆ ಕೊನೆಯುಸಿರೆಳೆದರೆಂದು ತಿಳಿದುಬಂದಿದೆ. ಅನನ್ಯಳಿಗೆ ಗಂಭೀರ ಗಾಯವಾಗಿದೆ.ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಸ್ ಸ್ಕೂಟಿ ಭೀಕರ ಅಪಘಾತ, ವಿದ್ಯಾರ್ಥಿನಿ ಸಾವು,ಸಹೋದರಿ ಗಂಭೀರ Read More »

ಬೆಂಗಳೂರಿನಲ್ಲಿ ನಡೆದ ಅಪಘಾತದಲ್ಲಿ ತುಷಾರ್ ಗೌಡ ಸಾವು

ಬೈಕ್ ಮತ್ತು ಕಂಟೇನರ್ ನಡುವೆ ಬೆಂಗಳೂರಿನಲ್ಲಿ ನಡೆದ ಭೀಕರ ಅಪಘಾತದಲ್ಲಿ ಬೆಳ್ತಂಗಡಿ ತಾಲೂಕಿನ ಇಂದಬೆಟ್ಟುವಿನ ಯುವಕ ಸಾವನ್ನಪ್ಪಿದ್ದ ಘಟನೆ ನ.7 ರಂದು ರಾತ್ರಿ ನಡೆದಿದೆ.ಮೃತ ವ್ಯಕ್ತಿ ಇಂದಬೆಟ್ಟು ಗ್ರಾಮದ ವಸಂತ ಗೌಡ ರವರ ಪುತ್ರ ತುಷಾರ್ (22ವ) ಎಂದು ಗುರುತಿಸಲಾಗಿದೆ.ಇವರು ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ರಾತ್ರಿ ವೇಳೆ ಬೈಕ್ ನಲ್ಲಿ ಹೋಗುವಾಗ ಈ ಘಟನೆ ನಡೆದಿದೆ. ಬೈಕ್ ನಲ್ಲಿದ್ದ ಇನೋರ್ವ ವ್ಯಕ್ತಿ ಬೆಳಾಲು ನಿವಾಸಿ ಸೃಜನ್ ಸುರುಳಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ

ಬೆಂಗಳೂರಿನಲ್ಲಿ ನಡೆದ ಅಪಘಾತದಲ್ಲಿ ತುಷಾರ್ ಗೌಡ ಸಾವು Read More »

ಖ್ಯಾತ ಮಹಾಸ್ವಾಮಿ ಹೃದಯಾಘಾತದಿಂದ ನಿಧನ

ಬಾಗಲಕೋಟೆ ಜಿಲ್ಲೆಯ ಜಮಖಂಡಿ ಓಲೆಮಠದ ಶ್ರೀ ಡಾ.ಅಭಿನವ ಕುಮಾರ ಚೆನ್ನಬಸವ ಮಹಾಸ್ವಾಮಿಗಳು ಹೃದಯಾಘಾತದಿಂದ ನಿಧನರಾಗಿದ್ದಾರೆ. ಕಳೆದ ರಾತ್ರಿ 9:30 ಕ್ಕೆ ಇಹ ಲೋಕ ತ್ಯಜಿಸಿದ್ದಾರೆ. ಸ್ವಾಮೀಜಿಗಳು ಶುಗರ್, ಬಿಪಿ, ಹೃದಯ ಸಮಸ್ಯೆಯಿಂದ ಕಳೆದ ಎರಡು ವರ್ಷದಿಂದ ಬಳಲುತ್ತಿದ್ದರು. ಬೆಳಗ್ಗೆ 9:30 ರ ನಂತರ ಗೊರವಿನಕೊಳ್ಳ ಸವದತ್ತಿಯಲ್ಲಿ ಪಾರ್ಥಿವ ಶರೀರ ಮೆರವಣಿಗೆ ನಡೆಯಲಿದೆ. ಓಲೆಮಠದ ಆವರಣದಲ್ಲಿ ಸಾರ್ವಜನಿಕರಿಗೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು. ಸಂಜೆ 7 ಗಂಟೆಗೆ ಮಠದ ಆವರಣದಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ.

ಖ್ಯಾತ ಮಹಾಸ್ವಾಮಿ ಹೃದಯಾಘಾತದಿಂದ ನಿಧನ Read More »

ಬಾಟಲಿಯಿಂದ ವ್ಯಕ್ತಿಗೆ ಗಂಭೀರ ಹಲ್ಲೆ

ಪಂಜದ ಬಾರ್ ಸಮೀಪ ಬಾಟಲಿಯಿಂದ ಒರ್ವ ವ್ಯಕ್ತಿ ಇನ್ನೊಬ್ಬನಿಗೆ ಗಂಭೀರವಾಗಿ ಹಲ್ಲೆ ನಡೆಸಿದ ಘಟನೆ ನ.7 ರಂದು ಸಂಜೆ ಪಂಜದಿಂದ ವರದಿಯಾಗಿದೆ.ಪಂಜ ಬಾರ್ ಸಮೀಪ ಘಟನೆ ನಡೆದಿದ್ದು ಪುರುಷೋತ್ತಮ ಎಂಬವರು ಅವರ ಸಂಬಂಧಿಕ ಜಗನ್ ಎಂಬವರಿಗೆ ಬಾಟಲಿಯಿಂದ ಹಲ್ಲೆ ಮಾಡಿದ್ದಾರೆ. ಕುತ್ತಿಗೆಗೆ ಜಗನ್ ಅವರಿಗೆ ಹಲ್ಲೆ ನಡೆಸಲಾಗಿದ್ದು ಅವರು ಅಲ್ಲೆ ಕುಸಿದು ಬಿದ್ದರು. ಬಳಿಕ ಅವರನ್ನು ಅಂಬ್ಯುಲೆನ್ಸ್ ನಲ್ಲಿ ಸುಳ್ಯದ ಸರಕಾರಿ ಆಸ್ಪತ್ರೆಗೆ ಕರೆ ತಂದು ದಾಖಲಿಸಲಾಗಿದೆ.

ಬಾಟಲಿಯಿಂದ ವ್ಯಕ್ತಿಗೆ ಗಂಭೀರ ಹಲ್ಲೆ Read More »

ಕಾನೂನು ವಿದ್ಯಾರ್ಥಿ ನೇಣು ಬಿಗಿದು ಆತ್ಮ ಹತ್ಯ

ಆಲೆಟ್ಟಿ ಗ್ರಾಮದ ಕಲ್ಲೆಂಬಿ ಎಂಬಲ್ಲಿ ಕಾನೂನು ವಿದ್ಯಾರ್ಥಿಯೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಸಂಜೆ ವರದಿಯಾಗಿದೆಕಲ್ಲೆಂಬಿ ಸ್ಥಾನದ ಮನೆಯ ರಾಘವ ಬೆಳ್ಳಪ್ಪಾಡ ಎಂಬವರ ಪುತ್ರ ಮಿಥುನ್ ರಾಜ್( 26) ಎಂಬ ಯುವಕ ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದಾನೆ.ಮನೆಯವರು ಸುಳ್ಯಕ್ಕೆ ಮದುವೆಗೆಂದು ಬಂದಿರುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಪೋಲಿಸರು ಆಗಮಿಸಿ ಮಹಜರು ನಡೆಸಿ ಸರಕಾರಿ ಆಸ್ಪತ್ರೆಗೆ ಶವವನ್ನು ಮರಣೋತ್ತರ ಪರೀಕ್ಷೆಗೆಂದು ಕೊಂಡೊಯ್ದಿದ್ದಾರೆ.ಯುವಕ ಸುಳ್ಯದ ಕಾನೂನು ಮಹಾವಿದ್ಯಾಲಯದ

ಕಾನೂನು ವಿದ್ಯಾರ್ಥಿ ನೇಣು ಬಿಗಿದು ಆತ್ಮ ಹತ್ಯ Read More »

ಬಸ್ ಸಂಚಾರದಲ್ಲಿವಾಗಲೇ ಚಾಲಕ ಹೃದಯಾಘಾತದಿಂದ ಸಾವು

ಬೆಂಗಳೂರು: ಬೆಂಗಳೂರು ನೆಲಮಂಗಲದಿಂದ ದಾಸನಪುರಕ್ಕೆ ಬಿಎಂಟಿಸಿ ಬಸ್ ಸಂಚಾರದಲ್ಲಿರುವಾಗಲೇ ಬಸ್ ಚಾಲಕ ಕಿರಣ್ ಕುಮಾರ್ (40 ವರ್ಷ) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಈ ವೇಳೆ ಬಸ್‌ ನಿರ್ವಾಹಕನ ಸಮಯ ಪ್ರಜ್ಞೆಯಿಂದ ಪ್ರಯಾಣಿಕರು ಪಾರಾಗಿದ್ದಾರೆ. ಬಸ್ ಬೆಳಗ್ಗೆ ನೆಲಮಂಗಲ ನಗರದ ಬಿನ್ನ ಮಂಗಲದ ಮುಖ್ಯರಸ್ತೆಯಲ್ಲಿ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ.

ಬಸ್ ಸಂಚಾರದಲ್ಲಿವಾಗಲೇ ಚಾಲಕ ಹೃದಯಾಘಾತದಿಂದ ಸಾವು Read More »

error: Content is protected !!
Scroll to Top