ಕ್ರೈಂ

ಹುಡುಗಿಯರು ಸ್ನಾನ ಮಾಡುತ್ತಿದ್ದಾಗ ವಿಡಿಯೋ ಮಾಡುತ್ತಿದ್ದ ಯುವಕನ ಬಂಧನ

ಹುಡುಗಿಯರೇ ನೀವು ಸ್ನಾನಕ್ಕೆ ಹೋಗುವಾಗ ಕೋಣೆಯ ಕಿಟಕಿ ಮುಚ್ಚಿದೆಯಾ ಅಂತಾ ಪರಿಶೀಲಿಸಿಕೊಳ್ಳಿ. ಕೊಂಚ ಎಚ್ಚರ ತಪ್ಪಿದರೂ ನಿಮ್ಮ ಖಾಸಗಿ ವೀಡಿಯೋಗಳು, ಹಾಗೂ ಫೋಟೋಗಳು ರೆಕಾರ್ಡ್ ಆಗಿ, ಸಂಕಷ್ಟಕ್ಕೆ ಸಿಲುಕಿಕೊಳ್ಳಬೇಕಾಗುತ್ತದೆ. ಇಂತಹದೊಂದು ಘಟನೆಬೆಂಗಳೂರು ಸಿಲಿಕಾನ್ ಸಿಟಿಯ ಪಿಜಿಯಲ್ಲಿ ನಡೆದಿದೆ.ಯುವತಿಯರು ಸ್ನಾನ‌ ಮಾಡುವ ವೀಡಿಯೋವನ್ನು ಕಾಮುಕನೊಬ್ಬ ಕದ್ದು ಮುಚ್ಚಿ ತನ್ನ ಮೊಬೈಲ್​​ನಲ್ಲಿ ಸೆರೆ ಹಿಡಿದಿರುವ ಪ್ರಕರಣ ಬೆಳಕಿಗೆ ಬಂದಿದೆ.ಚಿಕ್ಕಬಳ್ಳಾಪುರ ಮೂಲದ ಅಶೋಕ್ ಬಂಧಿತ ಆರೋಪಿ.ಮಹದೇವಪುರ ಹೂಡಿಯಲ್ಲಿರುವ ಪಿಜಿಯೊಂದರಲ್ಲಿ ಕಾಮುಕ ಅಶೋಕ್ ಎಂಬಾತ ವಾಸವಾಗಿದ್ದ. ಖಾಸಗಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ವಿಭಾಗದಲ್ಲಿ […]

ಹುಡುಗಿಯರು ಸ್ನಾನ ಮಾಡುತ್ತಿದ್ದಾಗ ವಿಡಿಯೋ ಮಾಡುತ್ತಿದ್ದ ಯುವಕನ ಬಂಧನ Read More »

ಹೃದಯಾಘಾತ: ಯುವಕ ಸಾವು

ಪಂಜ: ಹೃದಯಾಘಾತದಿಂದ ಯುವಕನೋರ್ವ ಮೃತಪಟ್ಟ ಘಟನೆ‌ ಸುಳ್ಯ ತಾಲೂಕಿನ ಪಂಜ ಸಮೀಪದ ಕರಿಕ್ಕಳದಿಂದ ವರದಿಯಾಗಿದೆ. ಕಳೆದ ಜೂ.25 ರಾತ್ರಿ ಘಟನೆ ಸಂಭವಿಸಿದ್ದು ಕುಟುಂಬಸ್ಥರು ಆಘಾತಕ್ಕೆ ಒಳಗಾಗಿದ್ದಾರೆ.ಪಂಬೆತ್ತಾಡಿ ಗ್ರಾಮದ ಕರಿಕ್ಕಳ ದಿ.ತಮ್ಮಯ್ಯ ಗೌಡರ ಪುತ್ರ,ಪಂಜದ ಶಿವಕೃಪಾ ಮೋಟಾರ್ಸ್ ನಮೆಕಾನಿಕ್ ಭಾಸ್ಕರ ಗೌಡ ಮೃತಪಟ್ಟ ದುರ್ದೈವಿ. ಅವರು ಜೂ.25 ರಾತ್ರಿ10 ಗಂಟೆಗೆ ವೇಳೆಗೆ ಮನೆಯಲ್ಲಿ ತೀವ್ರ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ಹೃದಯಾಘಾತ: ಯುವಕ ಸಾವು Read More »

ಕಾಂಪೌಂಡ್ ಕುಸಿತ: ಅಪಾರ ನಷ್ಟ

ಸಂಪಾಜೆ: ಕಾಂಪೌಂಡ್ ಕುಸಿತಗೊಂಡು ಕೊಟ್ಟಿಗೆಗೆ ಹಾನಿ ಸಂಭವಿಸಿದ ಘಟನೆ ಸಂಪಾಜೆಯಿಂದ ವರದಿಯಾಗಿದೆ ಸಂಪಾಜೆ ಗ್ರಾಮದ ಅಶ್ರಫ್ ಟರ್ಲಿಯವರ ಕಾಂಪೌಂಡ್ ಮಳೆಗೆ ಕುಸಿತ. 2 ವರ್ಷದ ಹಿಂದೆ ಭೂ ಕುಸಿತ ಸಂಭವಿಸಿದ ಸಂದರ್ಭದಲ್ಲಿ ಈ ಕಾಂಪೌಂಡ್ ಕೂಡ ಜರಿದು ಬಿದ್ದಿದ್ದು ಇದಕ್ಕೆ ಸರಕಾರದಿಂದ 4000 ರೂ ಪರಿಹಾರವೂ ದೊರಕಿತ್ತು. ಇದನ್ನು ಕೆಲ ತಿಂಗಳ ಹಿಂದೆ ಕಾಂಪೌಂಡ್ ನಿರ್ಮಾಣ ಮಾಡಲಾಯಿತು. ಆದರೆ ಇಂದು ಸುರಿದ ಮಳೆಗೆ ಕಾಂಪೌಂಡ್ ವಾಪಾಸ್ ಸಂಪೂರ್ಣ ಕುಸಿದಿದೆ.ಪರಿಣಾಮವಾಗಿ ಪಕ್ಕದ ಮನೆ ಹಾಗೂ ಕೊಟ್ಟಿಗೆ ಜಖಂಗೊಂಡಿದ್ದು, ಅಪಾರ

ಕಾಂಪೌಂಡ್ ಕುಸಿತ: ಅಪಾರ ನಷ್ಟ Read More »

ಕುಮಾರಧಾರ ನದಿಗೆ ವ್ಯಕ್ತಿ ಹಾರಿರುವ ಶಂಕೆ: ಬಿರುಸಿನ ಹುಡುಕಾಟ ಆರಂಭ

ಕುಮಾರಧಾರ ನದಿಗೆ ವ್ಯಕ್ತಿಯೊಬ್ಬ ಹಾರಿರುವ ಶಂಕೆ ಮೂಡಿದೆಕಡಬ ತಾಲೂಕಿನ ಕೋಡಿಂಬಾಳ ಸಮೀಪದ ನೆಕ್ಕಿಲಾಡಿ ಗ್ರಾಮದ ಕೋರಿಯರ್ ಎಂಬಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ.ಸಕಲೇಶಪುರ ಬಾಲಗದ್ದೆ ನಿವಾಸಿ ಧರ್ಮಯ್ಯ (40) ಎಂಬವರು ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದೆ ಎನ್ನಲಾಗಿದೆ. ನದಿ ಬದಿಯಲ್ಲಿ ಧರ್ಮಯ್ಯ ಅವರ ಶೂ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶೌರ್ಯ ತಂಡದ ಸದಸ್ಯರಿಂದ ನದಿಯಲ್ಲಿ ಹುಡುಕಾಟ ನಡೆಯುತ್ತಿದೆ. ಧರ್ಮಯ್ಯ ರಬ್ಬರ್ ಕಟ್ಟಿಂಗ್ ಕೆಲಸಕ್ಕೆ ಸಕಲೇಶಪುರದಿಂದ ಕೋಡಿಂಬಾಳಕ್ಕೆ ಬಂದಿದ್ದ ಎನ್ನಲಾಗಿದೆ. ಹೆಚ್ಚಿನ

ಕುಮಾರಧಾರ ನದಿಗೆ ವ್ಯಕ್ತಿ ಹಾರಿರುವ ಶಂಕೆ: ಬಿರುಸಿನ ಹುಡುಕಾಟ ಆರಂಭ Read More »

ತಾಯಿ ಮಗು ಸಾವು: ಕುಟುಂಬಸ್ಥರ ಆಕ್ರಂದನ

ಪುತ್ತೂರು: ಯುವತಿಯೋರ್ವಳು ಹೆರಿಗೆ ಸಂದರ್ಭದಲ್ಲಿ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿರುವ ಘಟನೆ ಜೂ. 20ರ ರಾತ್ರಿ ನಡೆದಿದೆ.ಉಪ್ಪಿನಂಗಡಿ ಸಮೀಪದ ಹಿರೇಬಂಡಾಡಿ ಗ್ರಾಮದ ಮುರ ಕಾಲೋನಿ ನಿವಾಸಿ, ಬಾಲಕೃಷ್ಣ ಗೌಡ ಎಂಬವರ ಪತ್ನಿ, ಹಿರೇಬಂಡಾಡಿ ಗ್ರಾಮದ ಆಶಾ ಕಾರ್ಯಕರ್ತೆ ಭವ್ಯ (28) ಮೃತಳು. ಇದೀಗ ಅವರ ಹಸುಗೂಸು ಮೂರು ದಿನದ ಬಳಿಕ ಗುರುವಾರ ಮುಂಜಾನೆ ಮೃತಪಟ್ಟಿದೆ ಎಂದು ತಿಳಿದುಬಂದಿದೆ.ಭವ್ಯರವರು ತನ್ನ 3ನೇ ಹೆರಿಗೆಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದ ಮಂಗಳವಾರ ರಾತ್ರಿ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದು,

ತಾಯಿ ಮಗು ಸಾವು: ಕುಟುಂಬಸ್ಥರ ಆಕ್ರಂದನ Read More »

ಪಿಕಪ್-ಕಾರು ಡಿಕ್ಕಿ: ಅಪಾಯದಿಂದ ಪಾರಾದ ಸವಾರರು

ಬೊಳುಬೈಲು : ಸುಳ್ಯ ತಾಲೂಕಿನ‌ ಜಾಲ್ಸೂರು ಗ್ರಾಮದ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಬೊಳುಬೈಲು ಸಮೀಪ ಪಿಕಪ್ ಮತ್ತು ಕಾರು ಪರಸ್ಪರ ಡಿಕ್ಕಿ ಹೊಡೆದು ಎರಡು ವಾಹನಗಳು ಜಖಂ ಗೊಂಡ ಘಟನೆ ಜೂ. 22 ರಂದು ರಾತ್ರಿ ವರದಿಯಾಗಿದೆ.ಸುಳ್ಯದಿಂದ ಪುತ್ತೂರಿನತ್ತ ಹೋಗುತ್ತಿದ್ದ ಪಿಕಪ್ ಹಾಗೂ ಪುತ್ತೂರಿನಿಂದ ಮೈಸೂರು ಕಡೆ ತೆರಳುತ್ತಿದ್ದ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಎರಡು ವಾಹನಗಳು ಜಖಂಗೊಂಡಿದ್ದು ವಾಹನ ಸವಾರರು ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.

ಪಿಕಪ್-ಕಾರು ಡಿಕ್ಕಿ: ಅಪಾಯದಿಂದ ಪಾರಾದ ಸವಾರರು Read More »

ದೇವರಕೊಲ್ಲಿಯಲ್ಲಿ ಭೀಕರ ಅಪಘಾತ :ಓರ್ವ ಸಾವು

ದೇವರಕೊಲ್ಲಿ ಬಳಿ ಸ್ವಿಫ್ಟ್ ಕಾರು ಹಾಗೂ ಕಂಟೈನರ್ ನಡುವೆ ಬುಧವಾರ ರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ನಾಲ್ವರಲ್ಲಿ ಕಾರಿನಲ್ಲಿದ್ದ ಒರ್ವ ಮೃತಪಟ್ಟ ಘಟನೆ ವರದಿಯಾಗಿದೆ. ಗಾಯಾಳುಗಳನ್ನು ಸುಳ್ಯದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮಂಗಳೂರಿಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ. ಕಾರಿನಲ್ಲಿದ್ದವರು ಧರ್ಮಸ್ಥಳ ದೇವಸ್ಥಾನಕ್ಕೆ ಹೋಗಿ ಪುನಃ ಬೆಂಗಳೂರಿಗೆ ಹಿಂತಿರುಗುತ್ತಿದ್ದರೆನ್ನಲಾಗಿದೆ. ಕಾರಿನಲ್ಲಿ ಐವರು ಪ್ರಯಾಣಿಕರಿದ್ದು, ಇಬ್ಬರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಕಂಟೈನರ್ ಚಾಲಕನಿಗೂ ಗಂಭೀರ ಗಾಯಗಳಾಗಿವೆ

ದೇವರಕೊಲ್ಲಿಯಲ್ಲಿ ಭೀಕರ ಅಪಘಾತ :ಓರ್ವ ಸಾವು Read More »

ಹೃದಯಘಾತದಿಂದ ನವ ವಿವಾಹಿತ ಸಾವು

ಕಡಬ ತಾಲೂಕಿನ ನರಿಮೊಗರು ಗ್ರಾಮದ ಧರ್ಮನಗರ ನಿವಾಸಿ ಬೆಂಗಳೂರು ಗ್ಲೋಬಲ್ ಲಿಫ್ಟ್ ಸರ್ವಿಸ್ ಕಂಪೆನಿಯಲ್ಲಿ ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದ ಸುರೇಶ್ ( 30) ವಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ .ಮೃತ ಸುರೇಶ್ ಅವರು 2 ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದರು . ಮೃತರು ಪತ್ನಿ ಶಾರದಾ , ತಂದೆ ಗುರುವಪ್ಪ , ತಾಯಿ ಜಾನಕಿ ಸಹೋದರರಾದ ಸುರೇಂದ್ರ ಹಾಗೂ ಸಂದೇಶ್ ಅವರನ್ನು ಅಗಲಿದ್ದಾರೆ.

ಹೃದಯಘಾತದಿಂದ ನವ ವಿವಾಹಿತ ಸಾವು Read More »

ಜಾತ್ರೆಗೆ ಗೊನೆ ಮೂಹೂರ್ತ

ಮರ್ಕಂಜ : ಕಾಲಾವಧಿ ಜಾತ್ರೋತ್ಸವಕ್ಕೆ ಗೊನೆಮೂಹೂರ್ತಅರಂತೋಡು, ಜ.24 : ಮರ್ಕಂಜ ಗ್ರಾಮದ ರೆಂಜಾಳ ಶ್ರೀ ಶಾಸ್ತಾವು ಸದಾಶಿವ ಮಹಾಗಣಪತಿ ದೇವಸ್ಥಾನದಲ್ಲಿ ಜನವರಿ 24 ರಿಂದ 31 ರವರೆಗೆ ಜಾತ್ರೋತ್ಸವವು ನಡೆಯಲಿದ್ದು , ಇಂದು ಗೊನೆ ಮುಹೂರ್ತ ಕಾರ್ಯಕ್ರಮ ನಡೆಯಿತು . ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಾಘವ ಗೌಡ ಕಂಜಿಪಿಲಿ , ಸದಸ್ಯರಾದ ರಾಜೇಶ್ವರಿ ಕುಮಾರಸ್ವಾಮಿ , ಸೇವಾ ಸಮಿತಿ ಅಧ್ಯಕ್ಷ ಪುಟ್ಟಣ್ಣ ಗೌಡ ಬಾಣೂರು , ಜಾತ್ರೋತ್ಸವ ಸಮಿತಿ ಅಧ್ಯಕ್ಷ ಮನೋಹರ ರೈ ಹೈದಂಗೂರು ,

ಜಾತ್ರೆಗೆ ಗೊನೆ ಮೂಹೂರ್ತ Read More »

ಸುಳ್ಯ ಪ್ರತಿಭಟನೆ

ಸುಳ್ಯ: ಸುಬ್ರಹ್ಮಣ್ಯದಲ್ಲಿ ಅನ್ಯ ಮತಿಯ ಯುವಕನೋರ್ವ ಹಿಂದು ಹುಡುಗಿಯ ಮಾನ ಭಂಗಕ್ಕೆ ಯತ್ನಿಸಿ ಆತನು ಪೊಲೀಸರಿಗೆ ಸುಳ್ಯು ದೂರು ನೀಡಿದ್ದು ಪೊಲೀಸರು ಸುಳ್ಳು ದೂರು ಸ್ವೀಕರಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಆರೋಪಿಸಿ ಪೊಲೀಸ್ ಇಲಾಖೆ ವಿರುದ್ದ ಸಬ್ರಹ್ಮಣ್ಯ ಪೊಲೀಸ್ ಠಾಣೆಯ ಎದುರುಹಿಂದೂ ಜಾಗರಣ ವೇದಿಕೆ ನೇತ್ರತ್ವದಲ್ಲಿ ಜ.7ರಂದು ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ10.30ಕ್ಕೆ ಬೃಹತ್ ಪ್ರತಿಭಟನೆ ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ ಕಾರ್ಯಕರ್ತರು ಹಾಜರಾಗಬೇಕು ಎಂದು ಮಾದ್ಯಮ ಹೇಳಿಕೆಯಲ್ಲಿ ಮನವಿ ಮಾಡಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ

ಸುಳ್ಯ ಪ್ರತಿಭಟನೆ Read More »

error: Content is protected !!
Scroll to Top