ಕ್ರೈಂ

ಸಿಲಿಂಡರ್ ಸ್ಪೋಟಗೊಂಡು ಐವರು ಸಾವು

ಸಿಕಂದರಾಬಾದ್ : ಸಿಕಂದರಾಬಾದ್ ಮನೆಯೊಂದರಲ್ಲಿ ಸೋಮವಾರ ರಾತ್ರಿ ಸಿಲಿಂಡರ್ ಸ್ಫೋಟಗೊಂಡು ಐವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಸ್ಫೋಟದಿಂದಾಗಿ ಮನೆಯ ಒಂದು ಭಾಗ ಕುಸಿದಿದೆ.ರಕ್ಷಣ ಕಾರ್ಯಾಚರಣೆ ನಡೆಯುತ್ತಿದೆ ಎಂದು ಮೀರತ್ ವಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಧ್ರುವ ಕಾಂತ್ ಠಾಕೂರ್ ತಿಳಿಸಿದ್ದಾರೆ.ರಿಯಾಜುದ್ದೀನ್ ಎಂಬುವರ ಮನೆಯಲ್ಲಿ ರಾತ್ರಿ 8.30 ರಿಂದ 9 ರ ನಡುವೆ ಈ ಘಟನೆ ಸಂಭವಿಸಿದ್ದು, ಮನೆಯಲ್ಲಿ ಸುಮಾರು 19 ಜನರು ವಾಸಿಸುತ್ತಿದ್ದರು.ಎಂಟು ಜನರನ್ನು ರಕ್ಷಿಸಿ ಆಸ್ಪತ್ರೆಗೆ ಸೇರಿಸಲಾಯಿತು.ಕೆಲವರ ಸ್ಥಿತಿ ತುಂಬಾ ಗಂಭೀರವಾಗಿದೆ” ಎಂದು ಅವರು […]

ಸಿಲಿಂಡರ್ ಸ್ಪೋಟಗೊಂಡು ಐವರು ಸಾವು Read More »

ನಿವೃತ್ತ ಕ್ರಷಿ ಇಲಾಖೆಯ ಉದ್ಯೋಗಿ ಕೇಶವ ನಾಯಕ್ ಬೆಟ್ಟಂಪಾಡಿ ನಿಧನ

ಸುಳ್ಯ ನಗರದ ಬೆಟ್ಟಂಪಾಡಿ ಕೇಶವ ನಾಯಕ್ ಅಸೌಖ್ಯದಿಂದು ಅ.21 ರಂದು ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.ಅವರಿಗೆ 67 ವರ್ಷ ಪ್ರಾಯವಾಗಿತ್ತು.ಅವರು ಕ್ರಷಿ ಇಲಾಖೆಯ ನಿವೃತ್ತ ಉದ್ಯೋಗಿಯಾಗಿದ್ದರು.ಮ್ರತರು ಪತ್ನಿ ಉಷಾ,ಮಕ್ಕಳಾದ ಶರ್ಮಿಳ,ರೇಷ್ಮಾ,ರಮ್ಯ, ಕುಟುಂಬಸ್ಥರನ್ನು ಬಂಧುಗಳನ್ನು ಅಗಲಿದ್ದಾರೆ.

ನಿವೃತ್ತ ಕ್ರಷಿ ಇಲಾಖೆಯ ಉದ್ಯೋಗಿ ಕೇಶವ ನಾಯಕ್ ಬೆಟ್ಟಂಪಾಡಿ ನಿಧನ Read More »

ಪ್ರಸಿದ್ಧ ಯಕ್ಷಗಾನ ಹಾಸ್ಯ ಕಲಾವಿದ ಜಯರಾಮ ಆಚಾರ್ಯ ಬಂಟ್ವಾಳ ಇನ್ನಿಲ್ಲ!

ತೆಂಕುತಿಟ್ಟು ಪ್ರಸಿದ್ದ ಹಾಸ್ಯ ಯಕ್ಷಗಾನ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ಇಂದು (ಸೋಮವಾರ) ಬೆಳಗ್ಗೆ ನಿಧನ ಹೊಂದಿದ್ದಾರೆ.ಅವರಿಗೆ 67 ವರ್ಷ ಪ್ರಾಯವಾಗಿತ್ತು.ಬೆಂಗಳೂರಿನಲ್ಲಿ ಯಕ್ಷಗಾನ ಕಾರ್ಯಕ್ರಮವೊಂದಕ್ಕೆ ಭಾಗವಹಿಸಲು ತೆರಳಿದ್ದ ಅವರಿಗೆ ಇಂದು ಮುಂಜಾನೆ ನಾಲ್ಕು ಗಂಟೆಗೆ ಬೆಂಗಳೂರಿನಲ್ಲಿ ಹೃದಯಘಾತವಾಗಿದೆ ಎಂದು ತಿಳಿದು ಬಂದಿದೆ.ಹಿರಿಯ ಯಕ್ಷಗಾನಕಲಾವಿದ ಚಂದ್ರಶೇಖರ ಧರ್ಮಸ್ಥಳ ಅವರ ನೇತೃತ್ವದ ತಂಡದಲ್ಲಿ ನಡೆಯಬೇಕಿದ್ದ ಯಕ್ಷಗಾನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಹೋಗಿದ್ದರು. ಅವರನ್ನು‌ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ.ಅನೇಕ ಅಭಿಮಾನಿಗಳು,ಯಕ್ಷಗಾನ ಕಲಾವಿದರು ಜಯರಾಮ ಆಚಾರ್ಯರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

ಪ್ರಸಿದ್ಧ ಯಕ್ಷಗಾನ ಹಾಸ್ಯ ಕಲಾವಿದ ಜಯರಾಮ ಆಚಾರ್ಯ ಬಂಟ್ವಾಳ ಇನ್ನಿಲ್ಲ! Read More »

ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ ಹೊಡೆದು ಕಾರು ಅಪಘಾತ

ಮಡಿಕೇರಿ ಕಡೆಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಡಿಸೈರ್ ಕಾರ್ ಚಾಲಕನ ನಿಯಂತ್ರಣ ತಪ್ಪಿ ಕಾಯರ್ತೋಡಿ ಮಹಾವಿಷ್ಣು ದೇವಸ್ಥಾನಕ್ಕೆ ತಿರುಗುವ ವಿಷ್ಣು ಸರ್ಕಲ್ ಬಳಿ ವಿದ್ಯುತ್‌ ಕಂಬಕ್ಕೆ ಹೊಡೆದಿದೆ.ಅಪಘಾತಕ್ಕೆ ಕಾರಿನ ಮುಂಭಾಗ ಜಖಂಗೊಂಡಿದ್ದು ವಿದ್ಯುತ್ ಕಂಬ ತುಂಡಾಗಿ ಕಾರಿನ ಮೇಲೆ ಬಿದ್ದಿದೆ.ಪ್ರಯಾಣಿಕರು ಗಾಯಗೊಂಡು ಪ್ರಾಣಾಪಾಯಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.ಹೆಚ್ಚಿನ ಮಾಹಿತಿ‌ ತಿಳಿದು ಬರಬೇಕಾಗಿದೆ.

ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ ಹೊಡೆದು ಕಾರು ಅಪಘಾತ Read More »

ಬೆಡ್ ಶೀಟ್ ವಿಚಾರಕ್ಕೆ ಅಕ್ಕ ತಂಗಿ ಜಗಳ; ಯುವತಿ ಆತ್ಮಹತ್ಯೆಗೆ ಶರಣು

ಬೆಂಗಳೂರು : ಬೆಂಗಳೂರಿನಲ್ಲಿ ವಿದ್ಯಾರ್ಥಿನಿಯೊಬ್ಬಳು ಕ್ಷುಲ್ಲಕ ವಿಚಾರಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಾನುವಾರ ವರದಿಯಾಗಿದೆ. ಶ್ರಾವ್ಯ (19) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಶ್ರಾವ್ಯ ತನ್ನ ಅಕ್ಕನ ಜೊತೆ ಬೆಡ್ ಶೀಟ್ ಬಗ್ಗೆ ಜಗಳವಾಡಿದ್ದಳು. ಇದರಿಂದ ಮನನೊಂದು ಶ್ರಾವ್ಯ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬೆಡ್ ಶೀಟ್ ವಿಚಾರಕ್ಕೆ ಅಕ್ಕ ತಂಗಿ ಜಗಳ; ಯುವತಿ ಆತ್ಮಹತ್ಯೆಗೆ ಶರಣು Read More »

ಮನೆಯ ಬಾಗಿಲ ಬೀಗ ಮುರಿದು ರೂ.12 ಲಕ್ಷ 28 ಪವನ್ ಚಿನ್ನ ಕಳವು

ಸುಬ್ರಹ್ಮಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಬಳ್ಪ ಗ್ರಾಮದ ಅಕ್ಕೇಣಿ ಸುಂದರ ಗೌಡ ಎಂಬವರ ಮನೆಯಿಂದ ರೂ. 12 ಲಕ್ಷ ಮತ್ತು ಅಂದಾಜು 28 ಪವನ್ ಚಿನ್ನ ಕಳ್ಳತನವಾಗಿರುವ ಘಟನೆ ಭಾನುವಾರ ಬೆಳಕಿಗೆ ಬಂದಿದೆ. ಅಕ್ಕೇಣಿ ಸುಂದರ ಗೌಡರು ತಮ್ಮ ಕುಟುಂಬದೊಂದಿಗೆ ಅ. 17ರಂದು ಸಂಜೆ ಮನೆಗೆ ಬೀಗ ಹಾಕಿ ತಮ್ಮ ಮಗಳ ಮನೆ ಪೆರಿಗೇರಿಗೆ ಹೋಗಿದ್ದರು. ಇಂದು ಮಧ್ಯಾಹ್ನ ಮನೆಗೆ ಹಿಂತಿರುಗಿ ಬಂದಾಗ ಮನೆಯ ಎದುರು ಬಾಗಿಲಿನ ಬೀಗ ಮುರಿದಿರುವುದನ್ನು ಗಮನಿಸಿ ಮನೆಯೊಳಗೆ ನೋಡಿದಾಗ ರೂ. 12

ಮನೆಯ ಬಾಗಿಲ ಬೀಗ ಮುರಿದು ರೂ.12 ಲಕ್ಷ 28 ಪವನ್ ಚಿನ್ನ ಕಳವು Read More »

ಕೊಡಗು ಜಿಲ್ಲಾ ಬಿಜೆಪಿ ಮುಖಂಡ ಬಾಲಚಂದ್ರ ಕಳಗಿ ಕೊಲೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟ

ಕೊಡಗು ಜಿಲ್ಲಾ ಬಿಜೆಪಿ ಮುಖಂಡ ಕೊಡಗು ಸಂಪಾಜೆ ಗ್ರಾಮದ ಬಾಲಚಂದ್ರ ಕಳಗಿ ಕೊಲೆ ಪ್ರಕರಣದ ಆರೋಪಿಗಳಾದ ಹರಿಪ್ರಸಾದ್ ಮತ್ತು ಜಯನ್‌ರವರಿಗೆ ಜೀವಾವಧಿ ಸಜೆಯನ್ನು ಕೊಡಗು ಜಿಲ್ಲಾ ಸೆಷನ್ಸ್‌ ನ್ಯಾಯಾಲಯ ಇಂದು ಘೋಷಿಸಿ ಆದೇಶ ಹೊರಡಿಸಿದೆ.ಬಾಲಚಂದ್ರ ಕಳಗಿಯವರು ಚಲಾಯಿಸುತ್ತಿದ್ದ ಒಮಿನಿ ಕಾರಿಗೆ 2019 ಮಾ.19 ರಂದು ಲಾರಿ ಗುದ್ದಿಸಿ ಬಳಿಕ ಹೊಡೆದು ಹತ್ಯೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳಾದ ಸಂಪತ್, ಹರಿಪ್ರಸಾದ್ ಮತ್ತು ಜಯನ್ ಎಂಬವರನ್ನು ಮಡಿಕೇರಿ ಪೋಲೀಸರು ಬಂಧಿಸಿದ್ದರು. ಜಾಮೀನಿನಲ್ಲಿ ಹೊರಗೆ ಬಂದಿದ್ದ ಆರೋಪಿಗಳಲ್ಲಿ

ಕೊಡಗು ಜಿಲ್ಲಾ ಬಿಜೆಪಿ ಮುಖಂಡ ಬಾಲಚಂದ್ರ ಕಳಗಿ ಕೊಲೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟ Read More »

ರಿಕ್ಷಾಕ್ಕೆ ಲಾರಿ ಡಿಕ್ಕಿ ಹೊಡೆದು ಒಂದೇ ಕುಟುಂಬದ ನಾಲ್ಕು ಮಂದಿಗೆ ಗಾಯ : ಆಸ್ಪತ್ರೆಗೆ ದಾಖಲು

ಪೆರಾಜೆ : ಪೆರಾಜೆಯ ಬಂಗಾರ ಕೋಡಿಯಿಂದ ಮಡಿಕೇರಿಗೆ ಸಂಚರಿಸುತ್ತಿದ್ದ ಖಾಸಗಿ ಅಟೋ ರಿಕ್ಷಾಕ್ಕೆ ಜೋಡುಪಾಲದಲ್ಲಿ ವಿರುದ್ದ ದಿಕ್ಕಿನಲ್ಲಿ ಬಂದ ಲಾರಿಯೊಂದು ಡಿಕ್ಕಿ ಹೊಡೆದು ರಿಕ್ಷಾದಲ್ಲಿದ್ದ ಕುಟುಂಬ ಗಾಯಗೊಂಡು ಪ್ರಾಣಾಪಾಯದಿಂದ ಪಾರಾದ ಘಟನೆ ವರದಿಯಾಗಿದೆ.ಬಂಗಾರಕೋಡಿಯ ಲೋಹಿತ್ ಅವರುಕುಟುಂಬ ಸಮೇತರಾಗಿ ಮಡಿಕೇರಿಗೆ ಪ್ರಯಾಣಿಸುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಲೋಹಿತ್ ಅವರಿಗೆ ಮತ್ತು ಅವರ ಪತ್ನಿಗೆ ಗಾಯವಾಗಿದ್ದು ಮಡಿಕೇರಿ ಸರಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಮಕ್ಕಳು ಚಿಕ್ಕ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.ಮಡಿಕೇರಿ ಗ್ರಾಮಾಂತರ ಠಾಣೆಯ ಪೊಲೀಸರು

ರಿಕ್ಷಾಕ್ಕೆ ಲಾರಿ ಡಿಕ್ಕಿ ಹೊಡೆದು ಒಂದೇ ಕುಟುಂಬದ ನಾಲ್ಕು ಮಂದಿಗೆ ಗಾಯ : ಆಸ್ಪತ್ರೆಗೆ ದಾಖಲು Read More »

ಮಗನ ಹುಟ್ಟು ಹಬ್ಬಕ್ಕೆ ಕಡೆವೆ ಬೇಟೆ : ಪ್ರಕರಣ ದಾಖಲು

: ಉಪ್ಪಿನಂಗಡಿ : ಕಡವೆಯನ್ನು ಗುಂಡಿಕ್ಕಿ ಕೊಂದು ಅದರ ಮಾಂಸವನ್ನು ಮನೆಯ ಪ್ರಿಝರ್ ನಲ್ಲಿ ದಾಸ್ತಾನು ಇರಿಸಲಾದ ಪ್ರಕರಣವನ್ನು ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿಗಳ ತಂಡ ಪತ್ತೆ ಹಚ್ಚಿ ಹತ್ಯೆಗೆ ಬಳಸಲಾದ ಕೋವಿ ಮತ್ತು ಕಡವೆ ಮಾಂಸವನ್ನು ವಶಪಡಿಸಿಕೊಂಡ ಘಟನೆ ವರದಿಯಾಗಿದೆ.ಶಿರಾಡಿ ಗ್ರಾಮದ ಗುಂಡ್ಯ ಎಂಬಲ್ಲಿನ ನಿವಾಸಿ ಸುರೇಶ್ ಮತ್ತವರ ಸಹವರ್ತಿ ಜೊತೆಗೂಡಿ ಸರಕಾರಿ ರಕ್ಷಿತಾರಣ್ಯದಲ್ಲಿದ್ದ ಕಡವೆಯೊಂದಕ್ಕೆ ಗುಂಡಿಕ್ಕಿ ಹತ್ಯೆಗೈದಿದ್ದರು. ಹಾಗೂ ಮಗನ ಹುಟ್ಟು ಹಬ್ಬದ ಔತಣಕೂಟಕ್ಕೆಂದು ಕಡವೆ ಮಾಂಸವನ್ನು ಮನೆಯ ಪ್ರೀಝರ್ ನಲ್ಲಿರಿಸಲಾಗಿತ್ತು. ಈ ಬಗ್ಗೆ ಮಾಹಿತಿ

ಮಗನ ಹುಟ್ಟು ಹಬ್ಬಕ್ಕೆ ಕಡೆವೆ ಬೇಟೆ : ಪ್ರಕರಣ ದಾಖಲು Read More »

ವಿಷ ಸೇವಿಸಿ ವ್ಯಕ್ತಿ ಆತ್ಮ ಹತ್ಯೆ

ಕಡಬ : ಕಡಬ ತಾಲೂಕಿನ ಐತ್ತೂರು ಗ್ರಾಮದಲ್ಲಿ ಹೊಟ್ಟೆನೋವಿನಿಂದ ಬಳುತ್ತಿದ್ದ ವ್ಯಕ್ತಿಯೊಬ್ಬರು ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.ಐತ್ತೂರು ಗ್ರಾಮದ ಬೆತ್ತೋಡಿ ನಿವಾಸಿ ಪರಮಶಿವಂ (65) ಮೃತಪಟ್ಟವರು.ಕೃಷಿ ಕೆಲಸ ಮಾಡಿಕೊಂಡಿದ್ದ ಇವರು ಇತ್ತೀಚೆಗೆ ಹೊಟ್ಟೆನೋವಿನಿಂದ ಬಳಲುತ್ತಿದ್ದು ಮಾನಸಿಕವಾಗಿ ನೊಂದು ಅ.12ರಂದು ವಿಷ ಪದಾರ್ಥ ಸೇವಿಸಿ ಅಸ್ವಸ್ಥರಾಗಿದ್ದರು.ಮನೆ ಮಂದಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಬಳಿಕ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿದ್ದರು. ಬಳಿಕ ವೆಸ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ

ವಿಷ ಸೇವಿಸಿ ವ್ಯಕ್ತಿ ಆತ್ಮ ಹತ್ಯೆ Read More »

error: Content is protected !!
Scroll to Top