ಕ್ರೈಂ

ಗಾಂಧಿನಗರದಲ್ಲಿ ಕುಸಿದು ಬಿದ್ದ ಯುವತಿ ಆಸ್ಪತ್ರೆಗೆ ದಾಖಲು

ಸುಳ್ಯ ಗಾಂಧಿನಗರದ ಪಿಕಪ್ ಪಾರ್ಕಿಂಗ್ ಎದುರಿನ ರಸ್ತೆಯ ಬದಿಯಲ್ಲಿ ಹಠಾತ್ ಕುಸಿದು ಬಿದ್ದ ಯುವತಿಯೊಬ್ಬಳನ್ನು ಪಿಕಪ್ ಚಾಲಕರು ಆಸ್ಪತ್ರೆಗೆ ದಾಖಲಿಸಿದ ಘಟನೆ ನ.20ರಂದು ವರದಿಯಾಗಿದೆ.ಈ ಯುವತಿ ಕಾಣಿಯೂರುನವಳಾಗಿದ್ದು ವೈದ್ಯರು ವಿಚಾರಿಸಿದ್ದಾಗ ವಿಷ ಸೇವಿಸಿದ್ದೇನೆ ಎಂದು ತಿಳಿಸಿದ್ದಾಳೆ ಎಂದು ತಿಳಿದು ಬಂದಿದೆ.ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.

ಗಾಂಧಿನಗರದಲ್ಲಿ ಕುಸಿದು ಬಿದ್ದ ಯುವತಿ ಆಸ್ಪತ್ರೆಗೆ ದಾಖಲು Read More »

ಕಾಡು ಹಂದಿ ತಿವಿದು ಮಹಿಳೆ ಗಂಭೀರ

ಕಾಡು ಹಂದಿ ತಿವಿದು ಮಹಿಳೆ ಗಾಯಗೊಂಡ ಘಟನೆ ದುಗ್ಗಲಡ್ಕ ದಲ್ಲಿ ಮಂಗಳವಾರ ಮುಂಜಾನೆ ಬೆಳಿಗ್ಗೆ ನಡೆದಿದೆ.ಕೂಟೇಲು ಸಿಆರ್ ಸಿ ಯ ರಾಮಚಂದ್ರನ್ ಎಂಬವರ ಪತ್ನಿ ಅಂಬಿಕಾ ಎಂಬವರು ದುಗ್ಗಲಡ್ಕ ರಬ್ಬರ್ ತೋಟದಲ್ಲಿ ಟ್ಯಾಪಿಂಗ್ ನಡೆಸುತ್ತಿದ್ದರು. ಆಗ ಪೊದೆಗಳ ಮಧ್ಯೆಯಿದ್ದ ಕಾಡುಹಂದಿಯೊಂದು ಬಂದು ಮಹಿಳೆಗೆ ತಿವಿಯಿತು.ಇದರಿಂದ ಮಹಿಳೆಯ ಕಾಲಿಗೆ ಗಾಯವಾಗಿದ್ದು,ತಕ್ಷಣ ಸುಳ್ಯದ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತೆಂದು ತಿಳಿದುಬಂದಿದೆ.

ಕಾಡು ಹಂದಿ ತಿವಿದು ಮಹಿಳೆ ಗಂಭೀರ Read More »

ಮನೆಯಿಂದ ನಗ ನಗದು ಕಳವು

ಮನೆಯಿಂದ ಕಳ್ಳರು ಅಪಾರ ಮೌಲ್ಯದ ನಗದು ಮತ್ತು ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ವಿಟ್ಲ ಸಮೀಪದ ಕುಡ್ತಮುಗೇರ್ ಸಮೀಪ ಮಂಕುಡೆ ಎಂಬಲ್ಲಿ ನಡೆದಿದೆ.ಕೆಲ ದಿನಗಳ ಹಿಂದೆ ಅಳಕೆಮಜಲಿನಲ್ಲಿ 2 ಮನೆಗಳಿಂದ ಇದೇ ಮಾದರಿಯಲ್ಲಿ ಕಳ್ಳತನ ನಡೆದಿತ್ತು.ಮನೆಯ ಯಜಮಾನ ಗಣೇಶ್ ರೈ ಕೆಲಸಕ್ಕೆ ಹೋಗಿದ್ದು, ಮನೆಯ ಯಜಮಾನಿ ವಿಟ್ಲ ಸಂತೆಗೆ ತೆರಳಿದ್ದರು. ಮಧ್ಯಾಹ್ನ ಸುಮಾರು 12 ಗಂಟೆಯಿಂದ ಒಂದೂವರೆ ಗಂಟೆಯ ಒಳಗೆ ಈ ಕೃತ್ಯ ನಡೆದಿದೆ ಎಂದು ಅಂದಾಜಿಸಲಾಗಿದೆ.ಮನೆಯ ಹಿಂದಿನ ಬಾಗಿಲನ್ನು ಮುರಿದು ಕಳ್ಳರು ಒಳ ನುಗ್ಗಿದ್ದಾರೆ.ಸ್ಥಳಕ್ಕೆ ವಿಟ್ಲ

ಮನೆಯಿಂದ ನಗ ನಗದು ಕಳವು Read More »

ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

ವ್ಯಕ್ತಿಯೋರ್ವರು ನೇಣುಬಿಗಿದುಆತ್ಮಹತ್ಯೆ ಮಾಡಿಕೊಂಡ ಘಟನೆ ಅರಂತೋಡು ಗ್ರಾಮದಿಂದ ವರದಿಯಾಗಿದೆ.ಇಲ್ಲಿಯ ಉಳುವಾರಿನ ಪುಟ್ಟಣ್ಣ ಅವರು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದು, ಅವರಿಗೆ 63 ವರ್ಷ ವಯಸ್ಸಾಗಿತ್ತು.ಮ್ರತರು ಒರ್ವ ಪುತ್ರ,ಒಬ್ಬಳು ಪುತ್ರಿಯನ್ನು ಅಗಲಿದ್ದಾರೆ.ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ Read More »

ನಕ್ಸಲ್ ನಾಯಕ ವಿಕ್ರಮ್ ಗೌಡನಿಗೆ ಎನ್ ಕೌಂಟರ್ ಏಕೆ?ಅನಿವಾರ್ಯವಾಯಿತು,ಡಿಐಜಿ ರೂಪ ಮೌದ್ಗಿಲ್ ಹೇಳಿದ್ದೇನು ? ಇಲ್ಲಿದೆ ಮಾಹಿತಿ

ಕಬ್ಬಿನಾಲೆ, ಪೀತಬೈಲು ಎಂಬಲ್ಲಿ ನಕ್ಸಲ್ ನಾಯಕ ವಿಕ್ರಂ ಗೌಡನನ್ನು ‌ ಎಎನ್ಎಫ್ ಪಡೆ ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಿದ್ದಾರೆ. ನಕ್ಸಲರ ಚಲನವಲನದ‌ ಬಗ್ಗೆ ಮಾಹಿತಿ ಮೇರೆಗೆ ಎಎನ್ಎಫ್ ಕೋಂಬಿಂಗ್ ಕಾರ್ಯಾಚರಣೆ ನಡೆಸಿದ್ದಾರೆ, ಈ ವೇಳೆ‌ ನಕ್ಸಲರು ಮುಖಾಮುಖಿಯಾಗಿದ್ದಾರೆ. ಆತನಿಗೆ ಶರಣಾಗತಿಗೆ ಸೂಚನೆ ನೀಡಲಾಗಿತ್ತು.ಆದರೆ ನಕ್ಸಲರ ತಂಡದಿಂದ ಎಎನ್ಎಫ್ ಸಿಬಂದಿಗಳ ಮೇಲೆ ದಾಳಿಗೆ ತಯಾರಿ ನಡೆಸಿದರು. ಈ ವೇಳೆ ಎರಡು ಕಡೆಗಳಿಂದ ಗುಂಡಿನ ಚಕಮಕಿ ನಡೆದಿದ್ದು, ಇದರಲ್ಲಿ ನಕ್ಸಲ್ ನಾಯಕ ವಿಕ್ರಂ ಗೌಡ ಸಾವನ್ನಪ್ಪಿದ್ದಾರೆ ಎಂದುರಾಜ್ಯ ಆಂತರಿಕ

ನಕ್ಸಲ್ ನಾಯಕ ವಿಕ್ರಮ್ ಗೌಡನಿಗೆ ಎನ್ ಕೌಂಟರ್ ಏಕೆ?ಅನಿವಾರ್ಯವಾಯಿತು,ಡಿಐಜಿ ರೂಪ ಮೌದ್ಗಿಲ್ ಹೇಳಿದ್ದೇನು ? ಇಲ್ಲಿದೆ ಮಾಹಿತಿ Read More »

ಪುತ್ತೂರು ಕಾಲೇಜಿನ ಅಪ್ರಾಪ್ತ.ಪಿ.ಯು.ಸಿ ವಿದ್ಯಾರ್ಥಿನಿಯನ್ನು ಕರೆದೊಯ್ದು ಲೈಂಗಿಕ ಕಿರುಕುಳ

ಪುತ್ತೂರು ನಗರದ ಪಿ.ಜಿ.ಯೊಂದರಲ್ಲಿದ್ದ ಕಾಸರಗೋಡುಮೂಲದ ಅಪ್ರಾಪ್ತೆಯನ್ನು ಪುಸಲಾಯಿಸಿ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಗುಲ್ಬರ್ಗಾ ಮೂಲದ ಯುವಕನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.ಪುತ್ತೂರಿನ ಪ್ರತಿಷ್ಠಿತ ಕಾಲೇಜೊಂದರ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಪಿ.ಜಿ.ಯಿಂದ ಕಾಲೇಜಿಗೆ ಹೋಗುತ್ತಿದ್ದಳು.ವಿದ್ಯಾರ್ಥಿನಿಯನ್ನು ಗುಲ್ಬರ್ಗಾದ ಕಾರ್ತಿಕ್ ಎಂಬಾತ ಪುಸಲಾಯಿಸಿ ಕರೆದುಕೊಂಡು ಹೋಗಿ ಲೈಂಗಿಕ ಕಿರುಕುಳ ನೀಡಿರುವುದಾಗಿ ಪೊಲೀಸ್ ತನಿಖೆ ವೇಳೆ ಬೆಳಕಿಗೆ ಬಂದಿದೆ.ಈ ಹಿನ್ನೆಲೆಯಲ್ಲಿ ಪೋಕ್ಸೊ ಪ್ರಕರಣ ದಾಖಲಿಸಿಕೊಂಡಿರುವ ಮಹಿಳಾ ಠಾಣೆ ಪೊಲೀಸರು ನ.17ರಂದು

ಪುತ್ತೂರು ಕಾಲೇಜಿನ ಅಪ್ರಾಪ್ತ.ಪಿ.ಯು.ಸಿ ವಿದ್ಯಾರ್ಥಿನಿಯನ್ನು ಕರೆದೊಯ್ದು ಲೈಂಗಿಕ ಕಿರುಕುಳ Read More »

ಯುವತಿ ನೇಣು ಬಿಗಿದು ಆತ್ಮಹತ್ಯೆ

ಸುಳ್ಯ ತಾಲೂಕಿನ ಉಬರಡ್ಕ ಗ್ರಾಮದ ಕುತ್ತಮೊಟ್ಟೆ ನಿವಾಸಿ ಮೀನಾಕ್ಷಿ ಎಂಬವರ ಪುತ್ರಿ ವರ್ಷದ ನಮಿತಾ (23)ಎಂಬ ಯುವತಿ ನ.19ರಂದು ಸಂಜೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.ಮೃತರು ತಾಯಿ ಓರ್ವ ಸಹೋದರನ್ನು ಅಗಲಿದ್ದಾರೆ. ಆತ್ಮಹತ್ಯೆಗೆ ಹೆಚ್ಚಿ ಕಾರಣ ನಿಗೂಡವಾಗಿದೆ.

ಯುವತಿ ನೇಣು ಬಿಗಿದು ಆತ್ಮಹತ್ಯೆ Read More »

ಹಿರಿಯ ಪತ್ರಕರ್ತ ಭುವನೇಂದ್ರ ಪುದುಬೆಟ್ಟು ನಿಧನ

ಹಿರಿಯ ಪತ್ರಕರ್ತ ಭುವನೇಂದ್ರ ಪುದುವೆಟ್ಟು ನ.19ರಂದು ನಿಧನರಾಗಿದ್ದಾರೆ. ಅವರಿಗೆ 42ವರ್ಷ ಪ್ರಾಯವಾಗಿತ್ತು.ಧರ್ಮಸ್ಥಳ ಗ್ರಾಮದ ಪುದುವೆಟ್ಟು ನಿವಾಸಿ ನಾರಾಯಣ ಪೂಜಾರಿ ಮತ್ತು ಮೋಹಿನಿ ದಂಪತಿಯ ಪುತ್ರರಾದ ಭುವನೇಂದ್ರ ಅವರಿಗೆ ಎರಡು ದಿನಗಳ ಹಿಂದೆ ತೀವ್ರ ಹೊಟ್ಟೆನೋವು ಮತ್ತು ವಾಂತಿ ಕಾಣಿಸಿಕೊಂಡಿದ್ದರಿಂದ ಅವರನ್ನು ಮೂಡಬಿದ್ರೆ ಆಳ್ವಾಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನರಾದರು.ಭುವನೇಂದ್ರ ಅವರು ಬೆಳ್ತಂಗಡಿ ಸುದ್ದಿ ಬಿಡುಗಡೆ ಪತ್ರಿಕೆಯ ಮುಖ್ಯ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದರು.

ಹಿರಿಯ ಪತ್ರಕರ್ತ ಭುವನೇಂದ್ರ ಪುದುಬೆಟ್ಟು ನಿಧನ Read More »

ನಕ್ಸಲ್ ನಾಯಕ ವಿಕ್ರಮ್ ಗೌಡ ಎನ್ ಕೌಂಟರ್ ಗೆ ಬಲಿ

ಕಾರ್ಕಳ: ನಕ್ಸಲ್ ನಾಯಕ ವಿಕ್ರಂ ಗೌಡ ನನ್ನು ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಲಾಗಿದೆ.ಹೆಬ್ರಿ ಪರಿಸರ ಕಬ್ಬಿನಾಲೆ, ಪೀತೆಬೈಲು ಪರಿಸರದಲ್ಲಿ ನಾಲ್ವರು ನಕ್ಸಲರು ಓಡಾಡುತ್ತಿದ್ದ ಮಾಹಿತಿ ಹಿನ್ನೆಲೆಯಲ್ಲಿ ಎಎನ್ ಎಫ್ ಕಾರ್ಯಾಚರಣೆ ನಡೆಸಿದ್ದು, ಈ‌ ನಡುವೆ ಎಎನ್ ಎಫ್, ನಕ್ಸಲರ‌ ನಡುವೆ ಮುಖಾಮುಖಿಯಾಗಿದ್ದು, ಗುಂಡಿನ ಚಕಮಕಿ ನಡೆದಿದೆ.ನಕ್ಸಲ್ ನಾಯಕ ವಿಕ್ರಮ್ ಗೌಡನಿಗೆ ಗುಂಡು ತಗುಲಿದ್ದು, ಮೃತಪಟ್ಟಿದ್ದು, ಮೂವರು ಕಾಡಿನಲ್ಲಿ ತಲೆಮರೆಸಿಕೊಂಡಿದ್ದಾರೆ. ಕಾರ್ಕಳ, ಹೆಬ್ರಿ ಸಹಿತ ವಿವಿಧ ಪಶ್ಚಿಮಘಟ್ಟ ಕಾಡಿನಲ್ಲಿ ಕೂಂಬಿಂಗ್ ಕಾರ್ಯಾಚರಣೆ ತೀವ್ರಗೊಂಡಿದೆ.

ನಕ್ಸಲ್ ನಾಯಕ ವಿಕ್ರಮ್ ಗೌಡ ಎನ್ ಕೌಂಟರ್ ಗೆ ಬಲಿ Read More »

ಶಿವಪ್ಪ ಸಾವು ಪ್ರಕರಣ : ಮೂವರ ವಿರುದ್ಧ ಪ್ರಕರಣ ದಾಖಲು

ಪುತ್ತೂರು: ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಸಾಲ್ಮರ ಕೆರೆಮೂಲೆ ನಿವಾಸಿ ಶಿವಪ್ಪ ಅವರು ಮೃತಪಟ್ಟ ವಿಚಾರಕ್ಕೆ ಸಂಬಂಧಿಸಿ ಕೆಲಸ ಮಾಡಿಸಿಕೊಂಡ ಮಾಲಕರ ಸಹಿತ ಮೂವರ ವಿರುದ್ದ ಪುತ್ತೂರು ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.ಮೃತ ಶಿವಪ್ಪ ಅವರ ಅಳಿಯ ಶಶಿ ಕೆರೆಮೂಲೆ ಅವರು ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ನ.16ರಂದು ಬೆಳಿಗ್ಗೆ ತಾವೋ ವುಡ್ ಇಂಡಸ್ಟ್ರೀಸ್ ನ ಮಾಲೀಕರಾದ ಹೆನ್ರಿ ತಾವೋ ಅವರು ಶಿವಪ್ಪ ಅವರನ್ನು ಮರದ ಕೆಲಸಕ್ಕೆ ಕರೆದುಕೊಂಡು ಹೋಗಿದ್ದು ಬಳಿಕ ಅವರನ್ನು

ಶಿವಪ್ಪ ಸಾವು ಪ್ರಕರಣ : ಮೂವರ ವಿರುದ್ಧ ಪ್ರಕರಣ ದಾಖಲು Read More »

error: Content is protected !!
Scroll to Top