ಕ್ರೈಂ

ತೋಟದ ಕೆರೆಗೆ ವೃದ್ಧ ಬಿದ್ದು ಸಾವು

ಆಲೆಟ್ಟಿ : ತೋಟದ ಕೆರೆಗೆ ವೃದ್ಧರೊಬ್ಬರು ಆಕಸ್ಮಿಕವಾಗಿ ಬಿದ್ದು ಮೃತ ಪಟ್ಟಿರುವ ಘಟನೆ ಮಂಗಳವಾರ ಸಂಜೆ ಆಲೆಟ್ಟಿಯಿಂದ ವರದಿಯಾಗಿದೆ.ಆಲೆಟ್ಟಿಯ ಗ್ರಾಮದ ಶಂಕರ ಪಾಟಾಳಿ ಎಂಬವರು ಮೃತಪಟ್ಟ ವ್ಯಕ್ತಿ.ಅವರಿಗೆ 75 ವರ್ಷ ಪ್ರಾಯವಾಗಿತ್ತು.ಮೃತರು ಮನೆಯಿಂದ ತೋಟದ ಕಡೆಗೆ ಹೋದವರು ಬಾರದೆ ಇದ್ದುದರಿಂದ ಪರಿಸರದಲ್ಲಿ ಹುಡುಕಾಟ ನಡೆಸಿದ ಸಂದರ್ಭದಲ್ಲಿ ಪಕ್ಕದ ಪರಮೇಶ್ವರ ಗೌಡ ಎಂಬವರ ತೋಟದ ಕೆರೆಯಲ್ಲಿ ಮೃತ ದೇಹ ಪತ್ತೆಯಾಯಿತು.ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತೋಟದ ಕೆರೆಗೆ ವೃದ್ಧ ಬಿದ್ದು ಸಾವು Read More »

ಭೀಕರ ಅಪಘಾತದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು

ಮಂಗಳೂರು : ಮಂಗಳೂರಿನ ಮಾರಿಪಳ್ಳ ಎಂಬಲ್ಲಿ ಸೋಮವಾರ ರಾತ್ರಿ ನಡೆದ ಭೀಕರ ಬೈಕ್ ಅಪಘಾತದಲ್ಲಿ ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ನೆಡ್ಚಿಲು ವಾಸುದೇವ ಗೌಡ ರವರ ಪುತ್ರ ಇಂಜಿನಿಯರಿಂಗ್ ವಿದ್ಯಾರ್ಥಿ ಸೇವಂತ್ ನೆಡ್ಡಿಲು ಸಾಚನ್ನಪ್ಪಿದ ಘಟನೆ ವರದಿಯಾಗಿದೆ .ತಲೆಗೆ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವನ್ನಪಿದರು ಎಂದು ತಿಳಿದು ಬಂದಿದೆ. ಮೃತರು ತಂದೆ ವಾಸುದೇವ ಗೌಡ ನೆಡ್ವಿಲು, ತಾಯಿ ಶೋಭಾ ನೆಡ್ಚಿಲು ಹಾಗೂ ಸಹೋದರ ಲೋಚನ್ ಮತ್ತು ಬಂಧು ಮಿತ್ರರನ್ನು,ಕುಟುಂಬಸ್ಥರನ್ನು ಅಗಲಿದ್ದಾರೆ.

ಭೀಕರ ಅಪಘಾತದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು Read More »

ಸ್ಕೂಟಿ- ಕಂಟೇನರ್ ಡಿಕ್ಕಿ ಸವಾರನಿಗೆ ಗಂಭೀರ ಗಾಯ

ಸುಳ್ಯ: ಗೂನಡ್ಕದ ಬೈಲೆ ಸಮೀಪದ ಶಿರಾಡಿ ದ್ವಾರದ ಬಳಿ ಸ್ಕೂಟಿ ಮತ್ತು ಕಂಟೈನರ್ ಲಾರಿ ನಡುವೆ ಡಿಕ್ಕಿ ಸಂಭವಿಸಿ ಸ್ಕೂಟಿ ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆ ದಾಖಲಾದ ಘಟನೆ ನಡೆದಿದೆ.ಗಾಯಗೊಂಡ ವ್ಯಕ್ತಿಯನ್ನು ಕಾಸರಗೋಡಿನ ಜುನೈದ್ ಎಂದು ತಿಳಿದು ಬಂದಿದೆ.

ಸ್ಕೂಟಿ- ಕಂಟೇನರ್ ಡಿಕ್ಕಿ ಸವಾರನಿಗೆ ಗಂಭೀರ ಗಾಯ Read More »

ಕಾಣಿಕೆ ಡಬ್ಬಿಯಿಂದ ಹಣ ಕಳವು

ಕಾಣಿಯೂರು : ಇಲ್ಲಿಯ ಶ್ರೀ ಅಮ್ಮನವರ ಕ್ಷೇತ್ರದ ಕಾಣಿಕೆ ಡಬ್ಬಿಯಿಂದ ನಗದು ಕದ್ದೊಯ್ದ ಘಟನೆ ಸೆ 21ರ ರಾತ್ರಿ ನಡೆದಿದೆ. ಕಾಣಿಯೂರು-ಸುಬ್ರಹ್ಮಣ್ಯ ರಸ್ತೆಯ ಬದಿಯಲ್ಲಿರುವ ಕ್ಷೇತ್ರದ ಹೊರಾಂಗಣದಲ್ಲಿರುವ ಕಾಣಿಕೆ ಡಬ್ಬಿ ಒಡೆದು ಕಳ್ಳತನ ಮಾಡಲಾಗಿದೆ ಎಂದು ತಿಳಿದು ಬಂದಿದೆ.ಬೆಳ್ಳಾರೆ ಠಾಣಾಧಿಕಾರಿ ಡಿ.ಎನ್‌. ಈರಯ್ಯ ಸ್ಥಳಕ್ಕೆ ಬಂದು ತನಿಖೆ ನಡೆಸಿದ್ದಾರೆ. ಈ ಹಿಂದೆ ಕಾಣಿಯೂರಿನಲ್ಲಿ ಅಡಿಕೆ ಅಂಗಡಿಯಿಂದ ಅಡಿಕೆ ಕಳ್ಳತನವಾಗಿತ್ತು. ತೆಂಗಿನಕಾಯಿ ಮಾರಾಟ ಅಂಗಡಿ ಯಿಂದ ಹಾಡಹಗಲೇ ಹಣ ಕಳ್ಳತನ ಸೇರಿದಂತೆ ಹಲವಾರು ಕಳ್ಳತನ ಪ್ರಕರಣ ನಡೆದರೂ, ಈವರೆಗೂ

ಕಾಣಿಕೆ ಡಬ್ಬಿಯಿಂದ ಹಣ ಕಳವು Read More »

ಅಕ್ರಮವಾಗಿ ತೋಟದಲ್ಲಿ ಗೋ ವಧೆ ಮಾಡುತ್ತಿದ್ದ ಸ್ಥಳಕ್ಕೆ ಪೊಲೀಸ್ ದಾಳಿ,ಗೋಮಾಂಸ ವಶ,ಆರೋಪಿಗಳು ಪರಾರಿ

ಉಪ್ಪಿನಂಗಡಿ: ಅಕ್ರಮವಾಗಿ ಗೋ ವಧೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಉಪ್ಪಿನಂಗಡಿ ಪೊಲೀಸರು ದಾಳಿ ನಡೆಸಿದ ಘಟನೆ ಪುತ್ತೂರು ತಾಲೂಕು 34 ನೇ ನೆಕ್ಕಿಲಾಡಿ ಗ್ರಾಮದ ಆದರ್ಶ ನಗರದ ಕಜೆ ಎಂಬಲ್ಲಿಂದ ವರದಿಯಾಗಿದೆ.ಇಲ್ಲಿಯ ಖತೀಜಮ್ಮ ಎಂಬವರ ಅಡಿಕೆ ತೋಟಕ್ಕೆ ದಾಳಿ ನಡೆಸಿದ ವೇಳೆ ಆರೋಪಿಗಳು ಪರಾರಿಯಾಗಿದ್ದು, ಸ್ಥಳದಲ್ಲಿ ಅಂದಾಜು ರೂ 24,000/-ಮೌಲ್ಯದ 96 ಕೆ.ಜಿ ದನದ ಮಾಂಸ, ದೇಹದ ಅಂಗಾಂಗಗಳು, ಮಾಂಸ ಮಾಡಲು ಬಳಸಿದ ಚೂರಿಗಳು, ಕಬ್ಬಿಣದ ಎಲೆಕ್ಟೋನಿಕ್ ತೂಕ ಮಾಪನ ಹಾಗು ಇತರ ಸೊತ್ತುಗಳು,

ಅಕ್ರಮವಾಗಿ ತೋಟದಲ್ಲಿ ಗೋ ವಧೆ ಮಾಡುತ್ತಿದ್ದ ಸ್ಥಳಕ್ಕೆ ಪೊಲೀಸ್ ದಾಳಿ,ಗೋಮಾಂಸ ವಶ,ಆರೋಪಿಗಳು ಪರಾರಿ Read More »

ಉದ್ಯಮಿಯ ಬರ್ಬರ ಕೊಲೆ,ಪತ್ನಿಯನ್ನು ಗಂಭೀರ ಗಾಯಗೊಳಿಸಿದ ದುಷ್ಕರ್ಮಿಗಳು

ಕಾರವಾರ : ಉದ್ಯಮಿಯೊಬ್ಬರನ್ನು ಬರ್ಬರವಾಗಿ ಕೊಲೆ ಮಾಡಿ ಅವರ ಪತ್ನಿಯನ್ನು ಗಂಭೀರವಾಗಿ ಗಾಯಗೊಳಿಸಿದ ಘಟನೆ ವರದಿಯಾಗಿದೆ.ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಹಣಕೊಣ ಗ್ರಾಮದ ಮನೆಯೊಂದರಲ್ಲಿ ಈ ಘಟನೆ ನಡೆದಿದೆ.ಮಹಾರಾಷ್ಟ್ರದ ಪುಣೆಯ ಉದ್ಯಮಿ ವಿನಾಯಕ ನಾಯ್ಕ(52) ಎಂಬುವವರನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ.ಅವರ ಪತ್ನಿ ವೈಶಾಲಿ ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದಿದ್ದು. ಅವರನ್ನು ಕಾರವಾರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮನೆಯಲ್ಲಿ ದಂಪತಿಗಳು ಮಾತ್ರ ಇದ್ದರು ಎಂದು ತಿಳಿದು ಬಂದಿದೆ.ಚಿತಾಕುಲ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಉದ್ಯಮಿಯ ಬರ್ಬರ ಕೊಲೆ,ಪತ್ನಿಯನ್ನು ಗಂಭೀರ ಗಾಯಗೊಳಿಸಿದ ದುಷ್ಕರ್ಮಿಗಳು Read More »

ಯುವಕ ಅಸೌಖ್ಯದಿಂದ ನಿಧನ

ಸುಬ್ರಹ್ಮಣ್ಯ : ಸುಬ್ರಹ್ಮಣ್ಯ ಸಮೀಪದ ಏನೆಕಲ್ಲು ಗ್ರಾಮದ ಪೂಜಾರಿಮನೆ ದಿ. ದೇವರಾಜ ಪೂಜಾರಿಮನೆಯವರ ಪುತ್ರ ವಿನೋದ್‌ರವರು ಇಂದು ಬೆಳಿಗ್ಗೆ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 35 ವರ್ಷ ವಯಸ್ಸಾಗಿತ್ತು.ಅವಿವಾಹಿತರಾಗಿದ್ದ ಇವರು ತಾಯಿ, ಓರ್ವ ಸಹೋದರ, ಇಬ್ಬರು ಸಹೋದರಿಯರು, ಕುಟುಂಬಸ್ಥರು, ಬಂಧುಗಳನ್ನು ಅಗಲಿದ್ದಾರೆ.

ಯುವಕ ಅಸೌಖ್ಯದಿಂದ ನಿಧನ Read More »

ಕಾರು ಸ್ಕೂಟರ್ ಭೀಕರ ಅಪಘಾತದಲ್ಲಿ ಸ್ಕೂಟರ್ ಸವಾರ ಸಾವು

ಪುತ್ತೂರು: ಕಾರು ಮತ್ತು ಸ್ಕೂಟರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತಪಟ್ಟ ಘಟನೆ ನಡೆದಿದೆ.ಸೆ.21 ರಂದು ರಾತ್ರಿ ಪುರುಷರಕಟ್ಟೆಯಿಂದ ಪುತ್ತೂರು ಕಡೆಗೆ ಹೋಗುತ್ತಿದ್ದ ಬೀಝಾ ಕಾರು ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ.ಡಿಕ್ಕಿಯ ರಭಸಕ್ಕೆ ಸ್ಕೂಟರ್ ಸವಾರ ಸ್ಕೂಟರ್ ಸಮೇತ ರಸ್ತೆ ಬದಿಯ ಚರಂಡಿಗೆ ಎಸೆಯಪಟ್ಟಿದ್ದು ಗಂಭೀರ ಗಾಯಗೊಂಡರು.ಗಂಭೀರ ಗಾಯಗೊಂಡಿರುವ ಸ್ಕೂಟರ್ ಸವಾರ ಹೋಳಿಗೆ ವ್ಯಾಪಾರಿ, ಪುರುಷರಕಟ್ಟೆ ಇಂದಿರಾ ನಗರ ನಿವಾಸಿ ಗಣೇಶ್‌ ಪ್ರಭು ಅವರನ್ನು ಪುತ್ತೂರು ಸರ್ಕಾರಿ

ಕಾರು ಸ್ಕೂಟರ್ ಭೀಕರ ಅಪಘಾತದಲ್ಲಿ ಸ್ಕೂಟರ್ ಸವಾರ ಸಾವು Read More »

ಯುವತಿಯನ್ನ ಪೀಸ್ ಪೀಸ್ ಮಾಡಿ ಫ್ರಿಡ್ಜ್‌ನಲ್ಲಿಟ್ಟ ಪಾಪಿ!

ಯುವತಿಯೋರ್ವಳನ್ನು ಭೀಕರವಾಗಿ ಕೊಂದು ಮೃತದೇಹ ಪೀಸ್ ಮಾಡಿ ಫ್ರಿಡ್ಜ್‌ನಲ್ಲಿಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಗರದ ಪೈಪ್‌ಲೈನ್‌ ರಸ್ತೆಯ ಬಳಿಯ ಮನೆಯೊಂದರಲ್ಲಿ ಈ ಕೃತ್ಯ ನಡೆದಿದ್ದು, ಮೃತ ಯುವತಿಯನ್ನು ಮಹಾಲಕ್ಷ್ಮಿ ಎಂದು ಗುರುತಿಸಲಾಗಿದೆ. 10 ರಿಂದ 15 ದಿನಗಳ ಹಿಂದೆಯೇ ಈ ಕೊಲೆ ನಡೆದಿದೆ ಎಂದು ಅಂದಾಜಿಸಲಾಗಿದೆ. 30 ಕ್ಕೂ ಹೆಚ್ಚು ಪೀಸ್ ಮಾಡಿ 160 ಲೀಟರ್‌ನ ಫ್ರಿಡ್ಜ್‌ನಲ್ಲಿ ಇರಿಸಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಯುವತಿಯನ್ನ ಪೀಸ್ ಪೀಸ್ ಮಾಡಿ ಫ್ರಿಡ್ಜ್‌ನಲ್ಲಿಟ್ಟ ಪಾಪಿ! Read More »

ಬಾಲಕನ ಮಾರ್ಮಾಂಗವನ್ನು ಎಳೆದು ಗಾಯಗೊಳಿಸಿದ ವಿದ್ಯಾರ್ಥಿಗಳು

ಸಂಪಾಜೆ : ವಸತಿ ನಿಲಯದಿಂದ ಶಾಲೆಗೆ ಹೋಗುತ್ತಿದ್ದ ಬಾಲಕನೋರ್ವನ ಮರ್ಮಾಂಗವನ್ನು ಇಬ್ಬರು ವಿದ್ಯಾರ್ಥಿಗಳು ಹಿಡಿದೆಳೆದ ಪರಿಣಾಮವಾಗಿ ಮರ್ಮಾಂಗ ಊದಿಕೊಂಡು ಬಾಲಕ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ವರದಿಯಾಗಿದೆ.ದ.ಕ. ಸಂಪಾಜೆಯ ಆಲಡ್ಕ ನಿವಾಸಿಯಾಗಿರುವ 12 ವರ್ಷದ ಬಾಲಕ ಕಳೆದ ಕೆಲ ಸಮಯಗಳಿಂದ ಕೊಡಗು ಸಂಪಾಜೆಯ ವಸತಿ ನಿಲಯದಲ್ಲಿ ಶಾಲೆಗೆ ಹೋಗುತ್ತಿದ್ದುಸೆ.14ರಂದು ರಾತ್ರಿ ವಸತಿ ನಿಲಯದಲ್ಲಿ ಇಬ್ಬರು ಸಹಪಾಠಿವಿದ್ಯಾರ್ಥಿಗಳು ಬಾಲಕನ ಮರ್ಮಾಂಗವನ್ನು ಹಿಡಿದೆಳೆದಿದ್ದರು.ಬಳಿಕ ಬಾಲಕ ಮೂತ್ರ ವಿಸರ್ಜನೆ ಮಾಡುವ ವೇಳೆ ನೋವಾಗುತ್ತಿದ್ದ ಪರಿಣಾಮ ಮನಗೆ ಬಂದಿದ್ದನೆನ್ನಲಾಗಿದೆ.ಬಾಲಕ ಮರ್ಮಾಂಗ ಊದಿಕೊಂಡಿದ್ದರಿಂದತಾಯಿಯೊಡನೆ

ಬಾಲಕನ ಮಾರ್ಮಾಂಗವನ್ನು ಎಳೆದು ಗಾಯಗೊಳಿಸಿದ ವಿದ್ಯಾರ್ಥಿಗಳು Read More »

error: Content is protected !!
Scroll to Top