ಕ್ರೈಂ

ಭಯೋತ್ಪಾದಕರಿಂದ ವಶಪಡಿಸಿಕೊಂಡ ಸ್ಪೋಟಕ ಪೊಲೀಸ್ ಠಾಣೆಯಲ್ಲಿ ಸಿಡಿದು ಆರು ಪೊಲೀಸರು ಸಾವು, 27 ಮಂದಿ ಗಂಭೀರ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ನೌಗಮ್ ಪೊಲೀಸ್ ಠಾಣೆಯಲ್ಲಿ ಭಯೋತ್ಪಾದನೆಗೆ ಸಂಬಂಧಿಸಿದಂತೆ ಫರೀದಾಬಾದ್‌ ನಲ್ಲಿ ಇತ್ತೀಚೆಗೆ ವಶಪಡಿಸಿಕೊಳ್ಳಲಾಗಿದ್ದ ಸ್ಫೋಟಕಗಳ ಸಂಗ್ರಹದಿಂದ ಮಾದರಿಯನ್ನು ಹೊರತೆಗೆಯುವ ಸಂದರ್ಭದಲ್ಲಿ ಸ್ಫೋಟ ಸಂಭವಿಸಿದ್ದು, 6 ಪೊಲೀಸರು ಮೃತಪಟ್ಟಿದ್ದಾರೆ. 27 ಮಂದಿ ಗಂಭೀರ ಗಾಯಗೊಂಡಿದ್ದಾರೆ.ಶುಕ್ರವಾರ ರಾತ್ರಿ ಶಂಕಿತ ಉಗ್ರ ಡಾ.ಮುಜಮ್ಮಿಲ್ ಗನಿಯ ಬಾಡಿಗೆ ಮನೆಯಿಂದ ವಶಪಡಿಸಿಕೊಳ್ಳಲಾಗಿದ್ದ 360 ಕಿ.ಲೋ. ಸ್ಫೋಟಕಗಳ ಪರಿಶೀಲನೆ ನಡೆಸುವ ವೇಳೆ ಘಟನೆ ಸಂಭವಿಸಿದೆ.ಘಟನಾ ಸ್ಥಳದಿಂದ 6 ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಅವು ಗುರುತಿಸಲಾಗದ ಸ್ಥಿತಿಯಲ್ಲಿದೆ. ಮೃತದೇಹಗಳನ್ನು ಶ್ರೀನಗರದಲ್ಲಿರುವ ಪೊಲೀಸ್‌ ಕಂಟ್ರಲ್ ರೂಮ್‌ […]

ಭಯೋತ್ಪಾದಕರಿಂದ ವಶಪಡಿಸಿಕೊಂಡ ಸ್ಪೋಟಕ ಪೊಲೀಸ್ ಠಾಣೆಯಲ್ಲಿ ಸಿಡಿದು ಆರು ಪೊಲೀಸರು ಸಾವು, 27 ಮಂದಿ ಗಂಭೀರ Read More »

ಬಿಸಿರೋಡು : ಭೀಕರ ಕಾರು ಅಪಘಾತದಲ್ಲಿ ಇಬ್ಬರು ಸಾವು

ಬಂಟ್ವಾಳದಲ್ಲಿ ಸರ್ಕಲ್‌ಗೆ ಕಾರು ಢಿಕ್ಕಿ ಹೊಡೆದು ಕಾರಿನಲ್ಲಿದ್ದ ಇಬ್ಬರು ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ. ಇನ್ನೋವಾ ಕಾರೊಂದು ಬೆಂಗಳೂರಿನಿಂದ ಮಂಗಳೂರು ಕಡೆ ಬರುತ್ತಿತ್ತು. ಈ ವೇಳೆ ಬಿಸಿ ರೋಡಿನ ಮುಖ್ಯ ವೃತ್ತಕ್ಕೆ ಢಿಕ್ಕಿ ಹೊಡೆದಿದೆ. ಢಿಕ್ಕಿ ಹೊಡೆದ ತೀವ್ರತೆಗೆ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟು, ಐವರು ಗಾಯಗೊಂಡಿದ್ದಾರೆ. ಶನಿವಾರ ಮುಂಜಾನೆ 5ರ ವೇಳೆಗೆ ಘಟನೆ ಸಂಭವಿಸಿದೆ.ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಇನ್ನೋವಾ ಕಾರು ಬ್ರಹ್ಮಶ್ರೀ ನಾರಾಯಣ ಗುರು ವೃತ್ತಕ್ಕೆ ನೇರವಾಗಿ ಢಿಕ್ಕಿ ಹೊಡೆದು ದುರಂತ ಸಂಭವಿಸಿದೆ. ಮೃತರ ವಿವರ

ಬಿಸಿರೋಡು : ಭೀಕರ ಕಾರು ಅಪಘಾತದಲ್ಲಿ ಇಬ್ಬರು ಸಾವು Read More »

ವಿಷ ಸೇವಿಸಿದ ಹತ್ತನೇ ತರಗತಿಯ ವಿದ್ಯಾರ್ಥಿ ಸಾವು

ಉಪ್ಪಿನಂಗಡಿ: ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ವರದಿಯಾಗಿದೆ.ಮೃತಳನ್ನು ಇಳಂತಿಲ ಗ್ರಾಮದ ಪಾರಡ್ಕ ನಿವಾಸಿ ಶ್ರೀಧರ ಕುಂಬಾರ ಅವರ ಪುತ್ರಿ ಹರ್ಷಿತಾ (15) ಎಂದು ಗುರುತಿಸಲಾಗಿದೆ.ಉಪ್ಪಿನಂಗಡಿಯ ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದ ಈಕೆ ನವೆಂಬರ್ 4ರಂದು ತಲೆನೋವು ಕಾರಣದಿಂದ ಶಾಲೆಗೆ ತೆರಳದೇ ಮನೆಯಲ್ಲಿ ಉಳಿದಿದ್ದಳು. ಈ ವೇಳೆ ಮನೆಯಲ್ಲಿ ತಂದಿಟ್ಟಿದ್ದ ಹುಲ್ಲಿಗೆ ಸಿಂಪಡಿಸುವ ಕೀಟನಾಶಕವನ್ನು ಸೇವಿಸಿ ಅಸ್ವಸ್ಥಳಾಗಿದ್ದಾಳೆ.ಘಟನೆಯಾಗುವ ವೇಳೆ ಕೂಲಿ ಕೆಲಸಕ್ಕೆ ತೆರಳಿದ್ದ ತಾಯಿ ಮನೆಗೆ ಬಂದು ಅಸ್ವಸ್ಥಳಾದ ಮಗಳನ್ನು

ವಿಷ ಸೇವಿಸಿದ ಹತ್ತನೇ ತರಗತಿಯ ವಿದ್ಯಾರ್ಥಿ ಸಾವು Read More »

ಸಾಲು ಮರದ ತಿಮ್ಮಕ್ಕ ಇನ್ನಿಲ್ಲ

: ಕನ್ನಡ ನಾಡಿನ ಹೆಮ್ಮೆಯ ಸಾಧಕಿ ಪದ್ಮಶ್ರೀ ವ ಪ್ರಶಸ್ತಿ ಪುರಸ್ಕೃತೆ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ನಿಧನರಾಗಿದ್ದಾರೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ನವೆಂಬರ್ 2ರಿಂದ ಜಯನಗರ ಅಪೊಲೋ‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಸಾಲುಮರದ ತಿಮ್ಮಕ್ಕ ಅವರಿಗೆ 114 ವರ್ಷ ವಯಸ್ಸಾಗಿತ್ತು. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ಜನಿಸಿದ ತಿಮ್ಮಕ್ಕ ಅವರನ್ನು ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಹುಲಿಕಲ್ ಗ್ರಾಮದ ಚಿಕ್ಕಯ್ಯ ಎಂಬವರೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಆದ್ರೆ ಚಿಕ್ಕಯ್ಯ-ತಿಮ್ಮಯ್ಯ ದಂಪತಿಗೆ ಮಕ್ಕಳಾಗುವುದಿಲ್ಲ. ಮಕ್ಕಳಿಲ್ಲದ ದುಃಖವನ್ನು ಮರೆಯಲು ತಿಮ್ಮಕ್ಕ

ಸಾಲು ಮರದ ತಿಮ್ಮಕ್ಕ ಇನ್ನಿಲ್ಲ Read More »

ನಾಯಿ ದಾಳಿಗೆ ವ್ಯಕ್ತಿ ಸಾವು

ಉಳ್ಳಾಲ: ನಾಯಿ ವ್ಯಕ್ತಿಯೊಬ್ಬರ ಮೇಲೆ ದಾಳಿ ನಡೆಸಿ ಅವರನ್ನು ಕೊಂದು ಹಾಕಿದ ಘಟನೆ ಉಳ್ಳಾಲದ ಕುಂಪಲದಲ್ಲಿ 14ರಂದು ನಡೆದಿದೆ.ಮೃತ ವ್ಯಕ್ತಿಯನ್ನು ಕುಂಪಲ ನಿವಾಸಿ ದಯಾನಂದ (60 ವ) ಎಂದು ಗುರುತಿಸಲಾಗಿದೆ.ರಾಷ್ಟ್ರೀಯ ಹೆದ್ದಾರಿ 66ರ ಕುಂಪಲ ಬೈಪಾಸ್ ಬಳಿ ರಸ್ತೆ ಬದಿಯ ಅಂಗಡಿಯ ಎದುರಲ್ಲಿ ಕಳೆದ ರಾತ್ರಿ ದಯಾನಂದ ಮಲಗಿದ್ದರು. ಮದ್ಯಪಾನ ಸೇವಿಸಿ ಮಲಗಿದ್ದ ಇವರ ಮೇಲೆ ಮುಂಜಾನೆ ವೇಳೆ ನಾಯಿ ದಾಳಿ ಮಾಡಿದೆ. ಈ ವೇಳೆ ಅಲ್ಲಿಂದ ರಸ್ತೆಯ ಮತ್ತೊಂದೆಡೆಯ ಮನೆಯತ್ತ ಓಡಿದ್ದರು. ಅಲ್ಲಿಯೂ ಬೆನ್ನಟ್ಟಿದ್ದ ನಾಯಿ

ನಾಯಿ ದಾಳಿಗೆ ವ್ಯಕ್ತಿ ಸಾವು Read More »

ಚೆಂಬು : ಕಳ್ಳತನ ಮಾಡಿದ ಆರೋಪಿಗಳ ಬಂಧನ

ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಸುಳ್ಯ ಗಡಿಭಾಗದ ಎಂ.ಚೆಂಬು ಗ್ರಾಮದ ನಿವಾಸಿ ವೀರಪ್ಪ ಪಿ.ಪಿ. ರವರ ಮನೆಯಿಂದ ಕಳ್ಳತನ ಮಾಡಿದ್ದ ಆರೋಪಿಗಳನ್ನು ಮಡಿಕೇರಿ ಪೊಲೀಸರು ಬಂಧಿಸಿದ್ದಾರೆ. ಮನೆಯವರು ಮನೆಯಲ್ಲಿ ಇಲ್ಲದಿರುವ ಸಮಯದಲ್ಲಿ ರೂಮಿನಲ್ಲಿದ್ದ ಗೋದ್ರೇಜ್‌ನ ಸಣ್ಣ ಕ್ಯಾಶ್ ಲಾಕರ್‌ನಲ್ಲಿ ಇಟ್ಟಿದ್ದ ಅಂದಾಜು ರೂ. 15,000/- ನಗದು ಮತ್ತು 120 ಗ್ರಾಂ ತೂಕದ ಚಿನ್ನಾಭರಣಗಳನ್ನು ನ 5 ರಂದು ಕಳ್ಳತನ ಮಾಡಿ ಆರೋಪಿಗಳು ಪರಾರಿಯಾಗಿದ್ದರು.ಮಡಿಕೇರಿ ಗ್ರಾಮಾಂತರ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.ಪ್ರಕರಣದ ಆರೋಪಿಗಳ ಪತ್ತೆಗಾಗಿ ಮಡಿಕೇರಿ

ಚೆಂಬು : ಕಳ್ಳತನ ಮಾಡಿದ ಆರೋಪಿಗಳ ಬಂಧನ Read More »

ಹುಚ್ಚು ನಾಯಿ ಕಡಿತಗೊಳಗಾದ ಮಹಿಳೆ ಗಂಭೀರ

ಸುಳ್ಯ ತಾಲೂಕಿನ ಸಂಪಾಜೆ ಗ್ರಾನದ ಮಹಿಳೆಯೊಬ್ಬರು ಹುಚ್ಚು ನಾಯಿಯ ಕಡಿತಗೊಳಗಾಗಿ ರೇಬೀಸ್ ರೋಗಕ್ಕೆ ತುತ್ತಾಗಿರುವ ಘಟನೆ ವರದಿಯಾಗಿದೆ.ನೆಲ್ಲಿ ಕುಮೇರಿಯ ಮಹಿಳೆಗೆಯೊಬ್ಬರಿಗೆ ಇತ್ತೀಚೆಗೆ ಹುಚ್ಚು ನಾಯಿಯೊಂದು ಕಡಿದಿತ್ತು ಎನ್ನಲಾಗಿದೆ.ನಾಯಿ ಕಚ್ಚಿದ್ದನ್ನು ಮನೆಯಲ್ಲಿ ಯಾರಿಗೂ ತಿಳಿಸದೆ ಮಹಿಳೆ ಟಿಟಿ ಇಂಜೆಕ್ಷನ್ ಹಾಕಿಸಿಕೊಂಡಿದ್ದರು. ಆದರೆ 40 ದಿನದ ಬಳಿಕ ಅವರಲ್ಲಿ ರೇಬಿಸ್ ಲಕ್ಷಣ ಕಾಣಿಸಿಕೊಂಡಿದೆ ಎಂದು ತಿಳಿದು ಬಂದಿದೆ. ಇದೀಗ ಗಂಭೀರ ಸ್ಥಿತಿಯಲ್ಲಿ ಮಂಗಳೂರಿನ‌ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಹುಚ್ಚು ನಾಯಿ ಕಡಿತಗೊಳಗಾದ ಮಹಿಳೆ ಗಂಭೀರ Read More »

ಸಹಪಾಠಿಗಳ ಹಲ್ಲೆಯಿಂದ ವೃಷಣ ಕಳೆದುಕೊಂಡ ವಿದ್ಯಾರ್ಥಿ!

ಮೈಸೂರ : ನಗರದ ಜಯಲಕ್ಷ್ಮೀಪುರಂನಲ್ಲಿರುವ ಖಾಸಗಿ ಪ್ರತಿಷ್ಠಿತ ಶಾಲೆಯೊಂದರಲ್ಲಿ ನಡೆದ raging ಮತ್ತು ಹಲ್ಲೆಯಿಂದ 8ನೇ ತರಗತಿ ವಿದ್ಯಾರ್ಥಿಯೊಬ್ಬ ತನ್ನ ಒಂದು ವೃಷಣವನ್ನೇ ಕಳೆದುಕೊಂಡಿರುವ ಹೇಯ ಕ್ರತ್ಯ ವರದಿಯಾಗಿದೆ.ಸಹಪಾಠಿಗಳಿಂದ ನಿರಂತರವಾಗಿ ಹಲ್ಲೆ ಮತ್ತು ಕಿರುಕುಳಕ್ಕೆ ಒಳಗಾಗುತ್ತಿದ್ದ ಬಾಲಕ ಶಿಕ್ಷಕರಿಗೆ ವಿಷಯ ತಿಳಿಸಿದ್ದ. ಇದೇ ಕೋಪದಿಂದ ಆತನ ಸಹಪಾಠಿಗಳಾದ ಮೂವರು ಅಕ್ಟೋಬ‌ರ್ 25ರಂದು ಶೌಚಾಲಯಕ್ಕೆ ಕರೆದುಕೊಂಡು ಹೋಗಿ ಬಾಲಕನ ಗುಪ್ತಾಂಗಕ್ಕೆ ಕಾಲಿನಿಂದ ಒದ್ದು ಗಂಭೀರ ಗಾಯಗೊಳಿಸಿದ್ದಾರೆ ಎನ್ನಲಾಗಿದೆ.ನೋವಿನಿಂದ ಬಳಲುತ್ತಿದ್ದ ಬಾಲಕ ಪೋಷಕರಿಗೆ ಘಟನೆ ತಿಳಿಸಿದ್ದಾನೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ

ಸಹಪಾಠಿಗಳ ಹಲ್ಲೆಯಿಂದ ವೃಷಣ ಕಳೆದುಕೊಂಡ ವಿದ್ಯಾರ್ಥಿ! Read More »

ಬಳ್ಪ : ಗಾರೆಕೆಲಸಕ್ಕೆ ತೆರಳಿದ ವ್ಯಕ್ತಿ ನಾಪತ್ತೆ

ಬಳ್ಪ : ಗಾರೆ ಕೆಲಸಕ್ಕೆಂದು ಹೋದ ವ್ಯಕ್ತಿ ಮನೆಗೆ ಬಾರದೇ ನಾಪತ್ತೆಯಾಗಿರುವ ಘಟನೆ ಬಳ್ಪ ಗ್ರಾಮದಲ್ಲಿ ನಡೆದಿದೆ. ಸುಬ್ಬಪ್ಪ ಗೌಡ ಎಂಬವರ ಪುತ್ರ ಚನ್ನಕೇಶವ ಜೋಗಿ ಮನೆ (61) ನಾಪತ್ತೆಯಾದವರು. ಈ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ದೂರು ದಾಖಲಾಗಿದೆ.ಚೆನ್ನಕೇಶವ ಅವರು ಗಾರೆ ಕೆಲಸಕ್ಕೆಂದು ಹೋಗುತ್ತೆನೆಂದು ಹೇಳಿ ಹೋದವರು ಮತ್ತೆ ಮನೆಗೆ ಬಂದಿಲ್ಲ ಎಂದು ಮನೆಯವರು ಸುಬ್ರಹ್ಮಣ್ಯ ಠಾಣೆಗೆ ದೂರು ನೀಡಿದ್ದಾರೆ. ಇವರು ಪತ್ತೆಯಾದಲ್ಲಿ ಸುಬ್ರಹ್ಮಣ್ಯ ಠಾಣೆಗೆ ತಿಳಿಸುವಂತೆ ಕೋರಲಾಗಿದೆ.

ಬಳ್ಪ : ಗಾರೆಕೆಲಸಕ್ಕೆ ತೆರಳಿದ ವ್ಯಕ್ತಿ ನಾಪತ್ತೆ Read More »

ಬಾಲಕನ‌ ಶವ ನದಿಯಲ್ಲಿ ಪತ್ತೆ

ಉಡುಪಿ: ಪೆರ್ಡೂರು ಗ್ರಾಮದ ಅಲಂಗಾರು ನಿವಾಸಿ ಶ್ರೀಶಾನ್ ಶೆಟ್ಟಿ (15) ಎಂಬ ಬಾಲಕನ ಮೃತದೇಹವು ಸೋಮವಾರ ಪೆರ್ಡೂರು ಬಳಿಯ ಅಲಂಗಾರು ಹೊಳೆಬಾಗಿಲು ನದಿಯಲ್ಲಿ ಪತ್ತೆಯಾಗಿದೆ.ಶ್ರೀಶಾನ್ ಭಾನುವಾರ ತನ್ನ ಸ್ನೇಹಿತನೊಂದಿಗೆ ಸ್ನಾನ ಮಾಡಲು ನದಿಗೆ ಹೋಗಿದ್ದನು. ಸ್ನಾನ ಮಾಡುವಾಗ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಘಟನೆಯಿಂದ ಭಯಭೀತನಾದ ಅವನ ಸ್ನೇಹಿತನು ನಡೆದ ಸಂಗತಿಯನ್ನು ಬಹಿರಂಗಪಡಿಸಿರಲಿಲ್ಲ.ಸಂಬಂಧಿಕರು ಬಾಲಕನಿಗಾಗಿ ಹುಡುಕಾಟ ನಡೆಸಿದರೂ ಆತ ಪತ್ತೆಯಾಗಲಿಲ್ಲ. ನಂತರ, ಪೊಲೀಸರು ಶ್ರೀಶಾನ್ ಸ್ನೇಹಿತನನ್ನು ವಿಚಾರಣೆಗೊಳಪಡಿಸಿದಾಗ ಘಟನೆಯ ಬಗ್ಗೆ ತಿಳಿದುಬಂದಿದೆ.ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾಲಕನ‌ ಶವ ನದಿಯಲ್ಲಿ ಪತ್ತೆ Read More »

error: Content is protected !!
Scroll to Top