ಪ್ರಚಲಿತ

ಪೆರುವಾಜೆ : ಜಾತ್ರೋತ್ಸವ ಆರಂಭ

ಇತಿಹಾಸ ಪ್ರಸಿದ್ದ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ ಹಾಗೂ ಬ್ರಹ್ಮರಥೋತ್ಸವದ ಪ್ರಯುಕ್ತ ಜ.16 ರಂದು ರಾತ್ರಿ ಧ್ವಜಾರೋಹಣಗೊಳ್ಳುವ ಮೂಲಕ ಜಾತ್ರೋತ್ಸವ ಪ್ರಾರಂಭವಾಗಿದೆ.ಕ್ಷೇತ್ರದ ತಂತ್ರಿ ಕೆಮ್ಮಿಂಜೆ ನಾಗೇಶ ತಂತ್ರಿ ಅವರ ಮಾರ್ಗದರ್ಶನದಲ್ಲಿ ಕ್ಷೇತ್ರದ ಪ್ರಧಾನ ಅರ್ಚಕ ಶ್ರೀನಿವಾಸ ಹೆಬ್ಬಾರ್ ಉಪಸ್ಥಿತಿಯಲ್ಲಿ ರಾತ್ರಿ ದೇವತಾ ಪ್ರಾರ್ಥನೆ ಬಳಿಕ ಧ್ವಜಾರೋಹಣ ನಡೆಯಿತು. ನಂತರ ದೇವರ ಬಲಿ ಹೊರಟು ಉತ್ಸವ, ವಸಂತ ಕಟ್ಟೆ ಪೂಜೆ, ಮಹಾಪೂಜೆ,ಶ್ರೀ ಭೂತ ಬಲಿ ನಡೆಯಿತು ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಮಾಜಿ […]

ಪೆರುವಾಜೆ : ಜಾತ್ರೋತ್ಸವ ಆರಂಭ Read More »

ವೌಲ್ಯಯುತ ಶಿಕ್ಷಣ ನೀಡುವ ಮೂಲಕ ಪ್ರೀತಿ ಸಹ ಬಾಳ್ವೆಯಂತಹ ಮಾನವೀಯ ಗುಣಗಳನ್ನು ನೀಡುವ ಕಾರ್ಯವನ್ನು ಕೆಥೋಲಿಕ್ ಶಿಕ್ಷಣ ಸಂಸ್ಥೆಗಳು ಮಾಡುತ್ತಿವೆ : ಪೀಟರ್‌ ಪೌಲ್ ಸಲ್ದಾನಾ

ವೌಲ್ಯಯುತ ಶಿಕ್ಷಣ ನೀಡುವ ಮೂಲಕ ಪ್ರೀತಿ ಸಹ ಬಾಳ್ವೆಯಂತಹ ಮಾನವೀಯ ಗುಣಗಳನ್ನು ನೀಡುವ ಕಾರ್ಯವನ್ನು ಕೆಥೋಲಿಕ್ ಶಿಕ್ಷಣ ಸಂಸ್ಥೆಗಳು ಮಾಡುತ್ತಿವೆ. ಆ ಕಾರಣದಿಂದಲೇ ಪೋಷಕರ ಅಭಿಮಾನಕ್ಕೆ ಪಾತ್ರವಾಗಿ ಇಂತಹ ಶಿಕ್ಷಣ ಸಂಸ್ಥೆಗಳು ಹೆಚ್ಚು ಹೆಚ್ಚು ಬೆಳೆಯುತ್ತಿವೆ ಎಂದು ಮಂಗಳೂರು ಧರ್ಮ ಪ್ರಾಂತ್ಯದ ಬಿಷಪ್ ಹಾಗೂ ಮಂಗಳೂರು ಕೆಥೋಲಿಕ್ ಬೋರ್ಡ್ ಅಧ್ಯಕ್ಷ ರೆ.ಫಾ. ಡಾ.ಪೀಟರ್‌ ಪೌಲ್ ಸಲ್ದಾನಾ ಹೇಳಿದರು.ಸುಳ್ಯದ ಸಂತ ಜೋಸೆಫ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ನ ರಜತ ಸಂಭ್ರಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಮುಖ್ಯ ಅತಿಥಿಯಾಗಿದ್ದ

ವೌಲ್ಯಯುತ ಶಿಕ್ಷಣ ನೀಡುವ ಮೂಲಕ ಪ್ರೀತಿ ಸಹ ಬಾಳ್ವೆಯಂತಹ ಮಾನವೀಯ ಗುಣಗಳನ್ನು ನೀಡುವ ಕಾರ್ಯವನ್ನು ಕೆಥೋಲಿಕ್ ಶಿಕ್ಷಣ ಸಂಸ್ಥೆಗಳು ಮಾಡುತ್ತಿವೆ : ಪೀಟರ್‌ ಪೌಲ್ ಸಲ್ದಾನಾ Read More »

ಭರತನಾಟ್ಯ ಜ್ಯೂನಿಯ‌ರ್ ವಿಭಾಗದ ಪರೀಕ್ಷೆಯಲ್ಲಿ ಗಾನವಿಗೆ ಡಿಸ್ಟಿಂಕ್ಷನ್

ಪುತ್ತೂರು ತಾಲೂಕಿನ ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆಯ 6 ನೇ ತರಗತಿ ವಿದ್ಯಾರ್ಥಿನಿ ಗಾನವಿ ಎಚ್ ರವರು ಭರತನಾಟ್ಯ ಜ್ಯೂನಿಯ‌ರ್ ವಿಭಾಗದ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಪಡೆದಿರುತ್ತಾರೆ.ಪುತ್ತೂರು ಕ್ಯಾಂಪ್ಕೊ ಚಾಕಲೇಟ್ ಪ್ಯಾಕ್ಟರಿಯ ಉದ್ಯೋಗಿ, ನಿವೃತ್ತ ಸೈನಿಕ ಗಣೇಶ್ ನರಿಮೊಗರು ಮತ್ತು ಸಂಗೀತ ಶಿಕ್ಷಕಿ ಜಾಸ್ಮಿನ್ ಯು ನರಿಮೊಗರುರವರ ಪುತ್ರಿಯಾಗಿರುವ ಗಾನವಿ ಎಚ್ ರವರು ಕುದ್ಮಾಡಿ ನಯನಾ ವಿ.ರೈ ಮತ್ತು ಸ್ವಸ್ತಿಕ್ ಆರ್ ಶೆಟ್ಟಿ ರವರ ಶಿಷ್ಯೆಸವಣೂರು ನಿವ್ರತ್ತ ಬಿ.ಎಸ್.ಎನ್.ಎಲ್ ಉದ್ಯೋಗಿ ಉಳುವಾರು ಜಯಪ್ಪ ಹಾಗೂ ವಿಮಲ ದಂಪತಿಯ ಮೊಮ್ಮಗಳು.

ಭರತನಾಟ್ಯ ಜ್ಯೂನಿಯ‌ರ್ ವಿಭಾಗದ ಪರೀಕ್ಷೆಯಲ್ಲಿ ಗಾನವಿಗೆ ಡಿಸ್ಟಿಂಕ್ಷನ್ Read More »

ಸುಳ್ಯ : ಬಿಜೆಪಿ ಸಂಘಟನಾ ಪರ್ವ ಸಭೆ

ಸುಳ್ಯ ಬಿಜೆಪಿ ಸಂಘಟನಾ ಪರ್ವ ಸಭೆ ಸುಳ್ಯದ ಕಛೇರಿಯಲ್ಲಿ ನಡೆಯಿತು. ಸುಳ್ಯ ಮಂಡಲದ ಮುಂದಿನ ಅವಧಿಗೆ ನೂತನ ಅಧ್ಯಕ್ಷರಾಗಿ ವೆಂಕಟ್ ವಳಲಂಬೆ ಅವರನ್ನು ಆಯ್ಕೆಮಾಡಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಸತೀಶ್ ಕುಂಪಲ, ಮಾನ್ಯ ಸಂಸದರಾದ ಬ್ರಿಜೇಶ್ ಚೌಟ, ಮಾಜಿ ಸಚಿವರಾದ ಎಸ್ ಅಂಗಾರ,ಹಾಗೂ ಜಿಲ್ಲಾ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಪಕ್ಷದ ಹಿರಿಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸುಳ್ಯ : ಬಿಜೆಪಿ ಸಂಘಟನಾ ಪರ್ವ ಸಭೆ Read More »

ಗೋಣಿಕೊಪ್ಪದ ಪುಟ್ಟ ಬಾಲೆಗಾಗಿ ಮಿಡಿದ ಸುಳ್ಯ ದ ಹೃದಯಗಳು

ಕೊಡಗು ಜಿಲ್ಲೆಯ ಗೋಣಿಕೊಪ್ಪದಿಂದ ಪುಟ್ಟ ಬಾಲೆಯನ್ನು ಮಂಗಳೂರು ಆಸ್ಪತ್ರೆಗೆ ತುರ್ತು ಚಿಕಿತ್ಸೆಗಾಗಿ ಅತೀ ಕಡಿಮೆ ಅವಧಿಯಲ್ಲಿ ತಲುಪಿಸುವಲ್ಲಿ ಸುಳ್ಯ ತಾಲೂಕು ಅಂಬುಲನ್ಸ್ ಮಾಲಕರ ಹಾಗೂ ಚಾಲಕರ ಸಂಘ ನೆರವಾಯಿತು, ಸುಳ್ಯ ಗಡಿಪ್ರದೇಶವಾದ ಕೊಯನಾಡುವಿನಿಂದ ಜಾಲ್ಸೂರು ವರೆಗೆ ಸಂಘದ ವಿವಿಧ ವಾಹನಗಳು ಬೆಂಗಾವಲಾಗಿ ಸಂಚರಿಸಿತು, ಸಂಘದ ಈ ಕಾರ್ಯಾಚರಣೆಯಲ್ಲಿ ಸುಳ್ಯದ ಸಮಾನ ಮನಸ್ಕ ಹೃದಯಗಳು ಆ ಬಾಲೆಗಾಗಿ ಮಿಡಿದವು, ಸುಳ್ಯ ದ ಮುಖಾಂತರ ಅಂಬುಲನ್ಸ್ ಚಲಿಸಲಿದೆ ಎಂಬ ಮಾಹಿತಿ ತಿಳಿದ ತಕ್ಷಣ ತಾಲೂಕಿನ ಹಲವು ಜನರು ಆ ಬಾಲೆಯ

ಗೋಣಿಕೊಪ್ಪದ ಪುಟ್ಟ ಬಾಲೆಗಾಗಿ ಮಿಡಿದ ಸುಳ್ಯ ದ ಹೃದಯಗಳು Read More »

ತೊಡಿಕಾನ : ಆಯಿರಕೊಡ ಅಭಿಷೇಕ,ಸಿಯಾಳಾಭಿಷೇಕ,ರಂಗಪೂಜೆ,ಜ.27ಕ್ಕೆ ಚಾಕಟಡಿ ನೇಮೋತ್ಸವ,ಜ.28ಕ್ಕೆ ಪಾಷಾಣಮೂರ್ತಿ ಅಮ್ಮನವರ ಕೋಲ

ಸುಳ್ಯ ಸೀಮೆಯ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಮಕರ ಸಂಕ್ರಾತಿ ಪ್ರಯುಕ್ತ ಶ್ರೀ ದೇವರಿಗೆ ಆಯಿರಕೊಡ ಅಭಿಷೇಕ,ಸಿಯಾಳಭಿಷೇಕ ಮತ್ತು ರಂಗಪೂಜೆ ನಡೆಯಿತು.ದೇವರಗುಂಡಿಯಿಂದ ಬೆಳಿಗ್ಗೆ ತೀರ್ಥ ತರಲಾಯಿತು,ಬಳಿಕ ಗಣಹೋಮ,ಶತರುದ್ರಾಭಿಷೇಕ,ಸಿಯಾಳಾಭಿ಼ಷೇಕ ನಡೆಯಿತು.ಶ್ರೀ ಕಾಂಚಿ ಕಾಮಕೋಟಿ ವೇದ ವಿದ್ಯಾಲಯ ಶ್ರೀ ಭಾರದ್ವಾಜಾಶ್ರಮ ಅರಂಬೂರು ಅವರಿಂದ ವೇದ ಪಾರಾಯಣ ನಡೆಯಿತು.ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ನಿಕಟ ಪೂರ್ವ ಅಧ್ಯಕ್ಷರು,ಮಾಜಿ ಅಧ್ಯಕ್ಷರು ಸದಸ್ಯರು, ಸಿಬ್ಬಂದಿ ವರ್ಗದವರು, ಊರಿನ ಹಾಗೂ ಪರ ಊರಿನ ಸಾವಿರಾರು ಭಕ್ತರು ಧನು ಪೂಜೆಯಲ್ಲಿ ಭಾಗವಹಿಸಿ ಶ್ರೀ ದೇವರ ದರ್ಶನ ಪಡೆದರು.ಜ.18ಕ್ಕೆ

ತೊಡಿಕಾನ : ಆಯಿರಕೊಡ ಅಭಿಷೇಕ,ಸಿಯಾಳಾಭಿಷೇಕ,ರಂಗಪೂಜೆ,ಜ.27ಕ್ಕೆ ಚಾಕಟಡಿ ನೇಮೋತ್ಸವ,ಜ.28ಕ್ಕೆ ಪಾಷಾಣಮೂರ್ತಿ ಅಮ್ಮನವರ ಕೋಲ Read More »

ಎನ್ ಲೈಟ್ ಎಜ್ಯುಕೇಶನ್ ಸರ್ವಿಸ್ ಮತ್ತು ಪಟೇಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಎಸ್ಎಸ್ ಎಲ್ ಸಿ ವಿದ್ಯಾರ್ಥಿ ಗಳಿಗೆ ತರಬೇತಿ

ಅರಂತೋಡು ಪಟೇಲ್ ಚಾರಿಟೇಬಲ್ ಟ್ರಸ್ಟ್ ಮತ್ತು ಸುಳ್ಯ ಏನ್ ಲೈಟ್ ಎಜ್ಯುಕೇಶನ್ ಸರ್ವಿಸ್ ವತಿಯಿಂದ ಎಸ್ ಎಸೆಲ್ಸಿ ವಿದ್ಯಾರ್ಥಿ ಗಳಿಗೆ ಗಣಿತ ಮತ್ತು ವಿಜ್ಞಾನ ವಿಷಯದ ಬಗ್ಗೆ ತರಬೇತಿ ಮತ್ತು ಪರಿಕ್ಷಾ ಪೂರ್ವ ಸಿದ್ಧತಾ ಮಾಹಿತಿ ಕಾರ್ಯಗಾರ ವು ಅರಂತೋಡು ಪಟೇಲ್ ಕಾಂಪ್ಲೆಕ್ಸ್ ನಲ್ಲಿ ಜ.14 ರಂದು ನಡೆಯತು.ಅಧ್ಯಕ್ಷತೆಯನ್ನು ಪಟೇಲ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಹಾಜಿ ಬದ್ರುದ್ದೀನ್ ಪಟೇಲ್ ವಹಿಸಿದರು. ಸೈಫುದ್ದೀನ್ ಪಟೇಲ್ ಹಾಗೂ.ನಿವೃತ ಎನ್.ಎಂ. ಪಿಯುಸಿ ಶಿಕ್ಷಕ ಅಬ್ದುಲ್ಲಾ ಮಾಸ್ತರ್,ಪ್ರಾಸ್ತಾವಿಕ ಮಾತನಾಡಿದರು. ವೇದಿಕೆಯಲ್ಲಿ ಪಟೇಲ್ ಚಾರಿಟೇಬಲ್

ಎನ್ ಲೈಟ್ ಎಜ್ಯುಕೇಶನ್ ಸರ್ವಿಸ್ ಮತ್ತು ಪಟೇಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಎಸ್ಎಸ್ ಎಲ್ ಸಿ ವಿದ್ಯಾರ್ಥಿ ಗಳಿಗೆ ತರಬೇತಿ Read More »

ಅಕ್ಷತಾ ನಾಗನಕಜೆಯವರಿಗೆ ದಿನಕರ ದೇಸಾಯಿ ಪ್ರಶಸ್ತಿ

ಅಕ್ಷರನಾದ ಕಲೆ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಕರ್ನಾಟಕ, ಅಕ್ಷರನಾದ ಪಬ್ಲಿಕೇಶನ್ಸ್ ಎ ಎಸ್ ಟಿ ಆರ್ ಬೆಂಗಳೂರು ಇವರು ಆಯೋಜಿಸಿರುವ “ಚುಟುಕು ಬ್ರಹ್ಮ” ಡಾ|| ದಿನಕರ ದೇಸಾಯಿಯವರ ಸವಿನೆನಪಿನಲ್ಲಿ “ರಾಜ್ಯ ಮಟ್ಟದ ಕವಿನುಡಿ ಸಂಭ್ರಮ ಮೂರನೇ ಆವೃತ್ತಿ-2025” ಬೆಂಗಳೂರಿನಲ್ಲಿ ನಡೆದ ಪ್ರಶಸ್ತಿ ಸಮಾರಂಭದಲ್ಲಿ ಪೆರುವಾಜೆ ಗ್ರಾಮ ಪಂಚಾಯತ್ ನ ಅಕ್ಷತಾ ನಾಗನಕಜೆ ಯವರಿಗೆ “ದಿನಕರ ದೇಸಾಯಿ” ಪ್ರಶಸ್ತಿಯನ್ನು ಡಾ. ಶ್ರುತಿ ಮಧುಸೂದನ್ ಪ್ರಧಾನ ಸಂಪಾದಕರು ಅಕ್ಷರನಾದ ಪಬ್ಲಿಕೇಶನ್ಸ್ ಕರ್ನಾಟಕ ಇವರು ಗಣ್ಯರ ಸಮ್ಮುಖದಲ್ಲಿ ನೀಡಿ ಗೌರವಿಸಿದರು.

ಅಕ್ಷತಾ ನಾಗನಕಜೆಯವರಿಗೆ ದಿನಕರ ದೇಸಾಯಿ ಪ್ರಶಸ್ತಿ Read More »

ತೊಡಿಕಾನ : ಮಲ್ಲಿಕಾರ್ಜುನ ದೇವಳದಲ್ಲಿ ಕಳೆದ ಒಂದು ತಿಂಗಳಿಂದ ನಡೆಯುತ್ತಿದ್ದ ಧನುಪೂಜೆ ಸಂಪನ್ನ,ಸಾವಿರಾರು ಭಕ್ತರು ಭಾಗಿ

ಪುರಾಣ ಪ್ರಸಿದ್ದ ಸುಳ್ಯ ಸೀಮೆಯ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಧನುರ್ ಮಾಸ ಪ್ರಯುಕ್ತ ಡಿ.16ರಿಂದ ಧನು ಪೂಜೆ ಆರಂಭಗೊಂಡಿದ್ದ ಜ.14ರಂದು ಸಮಾಪ್ತಿಯಾಯಿತು.ಇಂದು (ಮಂಗಳವಾರ) ಮಕರ ಸಂಕ್ರಾತಿಯಂದು ಧನುರ್ ಮಾಸದ ಕೊನೆಯ ಧನುಪೂಜೆ ನಡೆಯಿತು.ಧನುಪೂಜೆಯ ಮೊದಲು ಭಜನಾ ಸತ್ಸಂಗ ,ನ್ರತ್ಯ ಭಜನೆ ನಡೆಯಿತು.ಧನುಪೂಜೆಯ ಬಳಿಕ ಪ್ರಸಾದ ವಿತರಿಸಲಾಯಿತು.ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ನಿಕಟ ಪೂರ್ವ ಅಧ್ಯಕ್ಷರು,ಮಾಜಿ ಅಧ್ಯಕ್ಷರು ಸದಸ್ಯರು, ಸಿಬ್ಬಂದಿ ವರ್ಗದವರು, ಊರಿನ‌ ಹಾಗೂ ಪರ ಊರಿನ ಸಾವಿರಾರು ಭಕ್ತರು ಧನು ಪೂಜೆಯಲ್ಲಿ ಭಾಗವಹಿಸಿ ಶ್ರೀ ದೇವರ

ತೊಡಿಕಾನ : ಮಲ್ಲಿಕಾರ್ಜುನ ದೇವಳದಲ್ಲಿ ಕಳೆದ ಒಂದು ತಿಂಗಳಿಂದ ನಡೆಯುತ್ತಿದ್ದ ಧನುಪೂಜೆ ಸಂಪನ್ನ,ಸಾವಿರಾರು ಭಕ್ತರು ಭಾಗಿ Read More »

ಏಪ್ರಿಲ್, ಮೇನಲ್ಲಿ ಜಿಪಂ, ತಾಪಂ ಚುನಾವಣೆ ಆಯುಕ್ತರಿಂದ ಮಾಹಿತಿ

ಜಿಪಂ, ತಾಪಂ ಚುನಾವಣೆ ನಡೆದಿಲ್ಲ. ಮೀಸಲಾತಿ ಅಂತಿಮ ಪಟ್ಟಿ ಕೈಸೇರುತ್ತಿದ್ದಂತೆ ವೇಳಾಪಟ್ಟಿ ಪ್ರಕಟಿಸಲಾಗುವುದು. ಏಪ್ರಿಲ್ ಅಥವಾ ಮೇನಲ್ಲಿ ಚುನಾವಣೆ ನಿಗದಿ ಮಾಡುತ್ತೇವೆ ಎಂದು ರಾಜ್ಯ ಚುನಾವಣೆ ಆಯುಕ್ತ ಜಿ.ಎಸ್.ಸಂಗ್ರೇಶಿ ಹೇಳಿದರು. ಬೆಳಗಾವಿ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅವರು ಮಾತನಾಡಿ, ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸುವ ಪ್ರಯತ್ನ ಮಾಡುತ್ತೇವೆ. ಈ ನಿಟ್ಟಿನಲ್ಲಿ ಅಧಿಕಾರಿಗಳ ಜತೆ ಸಭೆ ಮಾಡಿದ್ದೇವೆ. ಸಂಬಂಧಪಟ್ಟ ರಾಜಕೀಯ ಪಕ್ಷಗಳ ಜತೆಗೆ ಸಭೆ ಮಾಡಿದ ಬಳಿಕ ತೀರ್ಮಾನ ಮಾಡುತ್ತೇವೆ ಎಂದರು. ಇತ್ತೀಚೆಗೆ ಚುನಾವಣೆಗಳ ಫಲಿತಾಂಶದ

ಏಪ್ರಿಲ್, ಮೇನಲ್ಲಿ ಜಿಪಂ, ತಾಪಂ ಚುನಾವಣೆ ಆಯುಕ್ತರಿಂದ ಮಾಹಿತಿ Read More »

error: Content is protected !!
Scroll to Top