ಪ್ರಚಲಿತ

ನಾಳೆ ಪವರ್ ಕಟ್,ಎಲ್ಲೆಲ್ಲಿ ಪವರ್ ಕಟ್ ಇಲ್ಲಿದೆ ಮಾಹಿತಿ

33 ಕೆ.ವಿ ಕಾವು-ಸುಳ್ಯ ಏಕ ಪಥ ಮಾರ್ಗವನ್ನು ಕೌಡಿಚ್ಚಾರಿನಿಂದ ಕಾವು ಜಂಕ್ಷನ್ ವರೆಗೆ ದ್ವಿಪಥ ಮಾರ್ಗವಾಗಿ ಬದಲಾಯಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ನ.5 ಮಂಗಳವಾರ ನಡೆಸುವುದರಿಂದ ಬೆಳಿಗ್ಗೆ 9:30 ಗಂಟೆಯಿಂದ ಸಂಜೆ 5:00 ಗಂಟೆವರೆಗೆ 33 ಕೆ.ವಿ ಕಾವು-ಸುಳ್ಯ ವಿದ್ಯುತ್ ಮಾರ್ಗದ ವಿದ್ಯುತ್ ನಿಲುಗಡೆ ಮಾಡಲಾಗುವುದು. ಆದ್ದರಿಂದ 33/11 ಕೆವಿ ಕಾವು ಹಾಗೂ ಸುಳ್ಯ ಉಪಕೇಂದ್ರದಿಂದ ಹೊರಡುವ ಎಲ್ಲಾ 11 ಕೆ.ವಿ ಫೀಡರ್‌ಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ನಾಳೆ ಪವರ್ ಕಟ್,ಎಲ್ಲೆಲ್ಲಿ ಪವರ್ ಕಟ್ ಇಲ್ಲಿದೆ ಮಾಹಿತಿ Read More »

ಹೊಸೋಳಿಕೆ ಕಟ್ಟೆಮನೆಯಲ್ಲಿ ದೀಪಾವಳಿ ಆಚರಣೆತೀರ್ಥರಾಮ ಎಚ್. ಬಿ ಯವರಿಗೆ ಗೌರವ ಸಮರ್ಪಣೆ

ಗುತ್ತಿಗಾರುವಿನ ಹೊಸೋಳಿಕೆ ಕಟ್ಟೆಮನೆಯಲ್ಲಿ ದೀಪಾವಳಿ ಆಚರಣೆ ಹಾಗೂ ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಯ ನಿವೃತ್ತ ಸಿಬ್ಬಂದಿ, ಸುಳ್ಯ ತಾಲೂಕು ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷರಾದ ತೀರ್ಥರಾಮ ಎಚ್. ಬಿ ಹೊಸೋಳಿಕೆಯವರು ಸರಳ, ಸಜ್ಜನ, ದಕ್ಷ, ಭ್ರಷ್ಟಾಚಾರ ರಹಿತ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತಿ ಹೊಂದಿದ್ದರು ಹೊಸೋಳಿಕೆ ಕಟ್ಟೆಮನೆ ಕುಟುಂಬದ ಮುಖ್ಯಸ್ಥರಾಗಿರುವ ಇವರನ್ನು ಕುಟುಂಬಸ್ಥರು ದೀಪಾವಳಿ ಹಬ್ಬದಲ್ಲಿ ಕುಟುಂಬಸ್ಥರ ಸಮಾಗಮದಲ್ಲಿ ಗೌರವಿಸಿದರುಕುಟುಂಬದ ಹಿರಿಯರಾದ ವಿಶ್ವನಾಥ ಹೊಸೋಳಿಕೆ ಯವರು ಅಧ್ಯಕ್ಷತೆ ವಹಿಸಿದರು, ರಾಧಾಕೃಷ್ಣ ಹೊಸೋಳಿಕೆ, ಕುಟುಂಬದ ಅಧ್ಯಕ್ಷರಾದ ಎಚ್.

ಹೊಸೋಳಿಕೆ ಕಟ್ಟೆಮನೆಯಲ್ಲಿ ದೀಪಾವಳಿ ಆಚರಣೆತೀರ್ಥರಾಮ ಎಚ್. ಬಿ ಯವರಿಗೆ ಗೌರವ ಸಮರ್ಪಣೆ Read More »

ಅಜ್ಜಾವರ : ಬಾಲ ಸಂಸ್ಕಾರ ಕೇಂದ್ರ ಉದ್ಘಾಟನೆ

ವಿಶ್ವ ಹಿಂದೂ ಪರಿಷತ್, ಬಜರಂಗದಳ, ಮಾತೃಶಕ್ತಿ ದುರ್ಗಾವಾಹಿನಿ ಶಿವಾಜಿ ಶಾಖೆ ಅಜ್ಜಾವರ ಇದರ ನೇತೃತ್ವದಲ್ಲಿ ಶ್ರೀ ಶಾರದ ರಾಮ ಸೇವಾ ಪ್ರತಿಷ್ಠಾನ ಬಯಂಬು ಇಲ್ಲಿ ಬಾಲಸಂಸ್ಕಾರ ಕೇಂದ್ರ ಉದ್ಘಾಟನೆಗೊಂಡಿತು. ಅಜ್ಜಾವರದ ಶ್ರೀ ಮಹಿಷ ಮರ್ದಿನಿ ದೇವಸ್ಥಾನದ ಧರ್ಮದರ್ಶಿಗಳಾದ ಭಾಸ್ಕರ್ ರಾವ್ ಬಯಂಬು ದೀಪ ಪ್ರಜ್ವಲಿಸುವ ಮೂಲಕ ಬಾಲ ಸಂಸ್ಕಾರ ಕೇಂದ್ರವನ್ನು ಉದ್ಘಾಟಿಸಿದರು. ಅಟಲ್ ಜೀ ಚಾರಿಟೇಬಲ್ ಟ್ರಸ್ಟಿನ ಕಾರ್ಯದರ್ಶಿಯಾದ ಸುಭೋದ್ ಶೆಟ್ಟಿ ಮೇನಾಲ ಇವರು ಬಾಲ ಸಂಸ್ಕಾರದ ಮಹತ್ವದ ಬಗ್ಗೆ ಬೌದ್ಧಿಕ ನಡೆಸಿದರು. ವಿಶ್ವ ಹಿಂದೂ ಪರಿಷತ್ತು

ಅಜ್ಜಾವರ : ಬಾಲ ಸಂಸ್ಕಾರ ಕೇಂದ್ರ ಉದ್ಘಾಟನೆ Read More »

ಮರಬಿದ್ದು ಸ್ಕೂಟಿ ಸವಾರ ಸಾವನ್ನಪ್ಪಿದ ಹಿನ್ನಲೆ,ಸಾರ್ವಜನಿಕರಿಂದ ಅರಣ್ಯ ಇಲಾಖೆ ವಿರುದ್ದ ಪ್ರತಿಭಟನೆ

ಎಡಮಂಗಲ : ಸ್ಕೂಟಿ ಸವಾರನ ಮೇಲೆ ಪುಳಿಕುಕ್ಕು ಸಮೀಪ ದೂಪದ ಮರ ಬಿದ್ದು ಸವಾರ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ರಸ್ತೆ ಪಕ್ಕದ ಅಪಾಯಕಾರಿ ಮರಗಳನ್ನು ಕೂಡಲೇ ತೆರವುಗೊಳಿಸಬೇಕು ಮತ್ತು ಮೃತರ ಕುಟುಂಬಕ್ಕೆ ಸರಕಾರದಿಂದ ಸೂಕ್ತ ಪರಿಹಾರ ಒದಗಿಸಬೇಕು ಎಂದು ಅಗ್ರಹಿಸಿ ನ.2ರ ಶನಿವಾರ ಸಾರ್ವಜನಿಕರು ಅವಘಡ ಸಂಭವಿಸಿದ ಸ್ಥಳದಲ್ಲಿ ರಸ್ತೆತಡೆ ನಡೆಸಿ ಪ್ರತಿಭಟಿಸಿದರು.ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಬೇಕೆಂದು ಪಟ್ಟು ಹಿಡಿದ ಸಾರ್ವಜನಿಕರು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರವನ್ನು ತೆರವುಗೊಳಿಸಲು ಅವಕಾಶ ನೀಡಲಿಲ್ಲ. ಅದರಿಂದಾಗಿ ಕಡಬ -ಪಂಜ ರಸ್ತೆಯಲ್ಲಿ ಸುಮಾರು

ಮರಬಿದ್ದು ಸ್ಕೂಟಿ ಸವಾರ ಸಾವನ್ನಪ್ಪಿದ ಹಿನ್ನಲೆ,ಸಾರ್ವಜನಿಕರಿಂದ ಅರಣ್ಯ ಇಲಾಖೆ ವಿರುದ್ದ ಪ್ರತಿಭಟನೆ Read More »

ಸುಳ್ಯದ ಗೋಕುಲದಾಸ್ ಅವರಿಗೆ ಜಿಲ್ಲಾ ರಾಜೋತ್ಸವ ಪ್ರಶಸ್ತಿ

ಸುಳ್ಯ: ಸುಳ್ಯದ ಕೆ.ಗೋಕುಲ್‌ದಾಸ್ ಅವರಿಗೆ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಂಗಳೂರಿನಲ್ಲಿ ನಡೆದ ರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿದರು. ಕೆ.ಗೋಕುಲ್‌ದಾಸ್ ಅವರು ಸಾಮಾಜಿಕ, ಧಾರ್ಮಿಕ, ರಾಜಕೀಯ, ಸಂಘಟನಾ ಕ್ಷೇತ್ರದಲ್ಲಿ ಸಕ್ರೀಯರಾಗಿದ್ದಾರೆ.ಸುಳ್ಯದ ಶಾರದಾಂಬ ಉತ್ಸವ (ಎಸ್.ಸಿಕ್ಸ್ ನಲ್ಲಿ ಕಳೆದ 50 ವರ್ಷಗಳಿಂದ ಗೋಕುಲ್ ದಾಸ್ ಮುಂಚೂಣಿಯಲ್ಲಿದ್ದಾರೆ. ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರೀಯರಾಗಿದ್ದಾರೆ. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕರಾದದ ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯ ಐವನ್

ಸುಳ್ಯದ ಗೋಕುಲದಾಸ್ ಅವರಿಗೆ ಜಿಲ್ಲಾ ರಾಜೋತ್ಸವ ಪ್ರಶಸ್ತಿ Read More »

ಗೌಡರ ಕುರಿತು ಪಠ್ಯಪುಸ್ತಕದಲ್ಲಿ ಮರು ಸೇರ್ಪಡೆಗೆ ಕ್ರಮ: ಎ.ಎಸ್.ಪೊನ್ನಣ್ಣ

ಮಡಿಕೇರಿ ಅ.31(ಕರ್ನಾಟಕ ವಾರ್ತೆ):-ಸ್ವಾತಂತ್ರ್ಯ ಹೋರಾಟಗಾರ ಗುಡ್ಡೆಮನೆ ಅಪ್ಪಯ್ಯ ಗೌಡರ ಕುರಿತು ಮತ್ತು ಅಮರ ಸುಳ್ಯ ದಂಗೆಯ ಹೋರಾಟಗಾರರ ವಿಷಯವನ್ನು ಪಠ್ಯಪುಸ್ತಕದಲ್ಲಿ ಮರು ಸೇರ್ಪಡೆ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ತಿಳಿಸಿದ್ದಾರೆ. ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ನಗರದ ಕೋಟೆ ಆವರಣದಲ್ಲಿ ಗುರುವಾರ ಏರ್ಪಡಿಲಾಗಿದ್ದ ಸ್ವಾತಂತ್ರ್ಯ ಹೋರಾಟಗಾರ ಸುಬೇದಾರ್

ಗೌಡರ ಕುರಿತು ಪಠ್ಯಪುಸ್ತಕದಲ್ಲಿ ಮರು ಸೇರ್ಪಡೆಗೆ ಕ್ರಮ: ಎ.ಎಸ್.ಪೊನ್ನಣ್ಣ Read More »

ದೀಪಾವಳಿ ಹಬ್ಬದ ಪ್ರಯುಕ್ತ ಸೋಜಾ ಇಲೆಕ್ಟ್ರಾನಿಕ್ಸ್‌ನಲ್ಲಿ ಅಕರ್ಷಕ ಆಫರ್‌ಗಳು ಲಭ್ಯ

ಸುಳ್ಯ: ಕಳೆದ 25 ವರ್ಷಗಳಿಂದ ಅತೀ ಕಡಿಮೆ ದರದಲ್ಲಿ ಅತ್ಯುತ್ತಮ ಗುಣ ಮಟ್ಟದ ಇಲೆಕ್ಟ್ರಾನಿಕ್ಸ್ ಹಾಗೂ ಫರ್ನೀಚರ್ ಮಾರಾಟ ಮಾಡುವ ಮೂಲಕ ಗ್ರಾಹಕರ ಮನ ಗೆದ್ದ ಸುಳ್ಯದ ಪ್ರತಿಷ್ಠಿತ ಇಲೆಕ್ಟ್ರಾನಿಕ್ಸ್‌ನಲ್ಲಿ ಮಳಿಗೆ ಸೋಜಾ ಇಲೆಕ್ಟ್ರಾನಿಕ್ಸ್ ಅತ್ಯುತ್ತಮ ಗುಣಮಟ್ಟದ ಮತ್ತು ಬ್ರಾಂಡೆಡ್ ಇಲೆಕ್ಟ್ರಾನಿಕ್ಸ್ ಉಪಕರಣಗಳ ಮಾರಾಟಕ್ಕೆ ಹೆಸರುವಾಸಿಯಾಗಿ ಜನರ ಇಲೆಕ್ಟ್ರಾನಿಕ್ಸ್‌ ಹಾಗೂ ಫರ್ನೀಚರ್ಸ್‌ ಸೇರಿದ ಗೃಹೋಪಯೋಗಿ ಉಪಕರಣಗಳ ಬೇಡಿಕೆಯನ್ನುಯಶಸ್ವಿಯಾಗಿ ಪೂರೈಸಿದ ಹೆಗ್ಗಳಿಕೆ ಸೋಜಾ ಇಲೆಕ್ಟ್ರಾನಿಕ್ಸ್‌ನದ್ದು.ಸುಳ್ಯ ಮುಖ್ಯ ರಸ್ತೆಯಲ್ಲಿ ಶ್ರೀರಾಮ್ ಪೇಟೆಯಲ್ಲಿ ಕಶ್ಯಪ್ ಕಾಂಪ್ಲೆಕ್ಸ್‌ನಲ್ಲಿರುವ ಸೋಜಾ ಇಲೆಕ್ಟ್ರಾನಿಕ್ಸ್ ಕಳೆದ 25

ದೀಪಾವಳಿ ಹಬ್ಬದ ಪ್ರಯುಕ್ತ ಸೋಜಾ ಇಲೆಕ್ಟ್ರಾನಿಕ್ಸ್‌ನಲ್ಲಿ ಅಕರ್ಷಕ ಆಫರ್‌ಗಳು ಲಭ್ಯ Read More »

ಹೊಳೆ ನರಸಿಪುರ, ಅರಕಲಗೂಡು, ಕೆ.ಪಿ.ಸಿ.ಸಿ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಯಾಗಿ ಟಿ.ಎಂ ಶಹೀದ್ ತೆಕ್ಕಿಲ್ ನೇಮಕ

ಹೊಳೆ ನರಸಿಪುರ, ಅರಕಲಗೂಡು ವಿಧಾನ ಸಭಾ ಕ್ಷೇತ್ರದ ನಾಲ್ಕು ಬ್ಲಾಕ್ ಉಸ್ತುವಾರಿಯಾಗಿ, ಹಾಸನ ಜಿಲ್ಲೆ ಮತ್ತು ಉಪಚುನಾವಣೆ ನಡೆಯುತ್ತಿರುವ ಶಿಗ್ಗಾಂವಿ ವಿಧಾನ ಸಭಾ ಕ್ಷೇತ್ರದ ಕೆ.ಪಿ.ಸಿ.ಸಿ ವೀಕ್ಷರಾಗಿ ಕಾಂಗ್ರೆಸ್ ಮುಖಂಡ ಹಾಗೂ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ ಶಹೀದ್ ತೆಕ್ಕಿಲ್ ರವರನ್ನು ಕೆ.ಪಿ.ಸಿ.ಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ನೇಮಕಗೊಳಿಸಿರುತ್ತಾರೆ. ಕ್ಷೇತ್ರದ ಉಸ್ತುವಾರಿ ವಹಿಸಿಕೊಂಡು ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷ ಸಂಘಟನೆ ಸಂಬಂಧಿದಂತೆ ಪಕ್ಷ ಬಲವರ್ಧನೆಗೆ ಕಾರ್ಯ ಚಟುವಟಿಕೆ ನಡೆಸಲು ಮತ್ತು ಶಿಗ್ಗಾಂವಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ದುಡಿಯಲು

ಹೊಳೆ ನರಸಿಪುರ, ಅರಕಲಗೂಡು, ಕೆ.ಪಿ.ಸಿ.ಸಿ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಯಾಗಿ ಟಿ.ಎಂ ಶಹೀದ್ ತೆಕ್ಕಿಲ್ ನೇಮಕ Read More »

ಶಿಕ್ಷಕ ವೃತ್ತಿ ಶ್ರೇಷ್ಠವಾದುದು : ಶಾಸಕಿ ಭಾಗೀರಥಿ ಮುರುಳ್ಯ

ಅರಂತೋಡು : ಅರಂತೋಡು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುದಿರ್ಘವಾಗಿ ಸಲ್ಲಿಸಿ ನಿವೃತ್ತಿ ಹೊಂದುತ್ತಿರುವ ದ.ಕ. ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ದೈಹಿಕ ಶಿಕ್ಷಕಿ ಸರಸ್ವತಿ ಅವರಿಗೆ ವಿದಾಯ ಸಮಾರಂಭ ಹಾಗೂ ಸಮುದಾಯದತ್ತ ಶಾಲಾ ಕಾರ್ಯಕ್ರಮವು. ಅ. 29ರಂದು ಶಾಲಾ ಸಭಾವನದಲ್ಲಿ ನಡೆಯಿತು.ಕಾರ್ಯಕ್ರಮವನ್ನು ಶಾಸಕಿ ಭಾಗೀರಥಿ ಮುರುಳ್ಯ ಅವರು ಉದ್ಘಾಟಿಸಿ ಬಳಿಕ ಮಾತನಾಡಿ ಶಿಕ್ಷಕ ವ್ರತ್ತಿ ಒಂದು ಶ್ರೇಷ್ಟ ವ್ರತ್ತಿ.ಇದನ್ನು ಸಮರ್ಕವಾಗಿ ನಿರ್ವಹಿಸಿದ್ದಾಗ ಶಿಕ್ಷಕ ವ್ರತ್ತಿಗೆ ಗೌರವ ಬರುತ್ತದೆ ಎಂದು ಹೇಳಿದರು.ಅರಂತೋಡು ಗ್ರಾಮ ಪಂಚಾಯತ್

ಶಿಕ್ಷಕ ವೃತ್ತಿ ಶ್ರೇಷ್ಠವಾದುದು : ಶಾಸಕಿ ಭಾಗೀರಥಿ ಮುರುಳ್ಯ Read More »

ಅ.31ಕ್ಕೆ ಅರಂತೋಡು ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಸರಸ್ವತಿ ಅಡ್ತಲೆ ಸೇವಾ ನಿವೃತ್ತಿ

ಅರಂತೋಡು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಕ್ರಿಯಾಶೀಲಾ ದೈಹಿಕ ಶಿಕ್ಷಣ ಶಿಕ್ಷಕಿ, ದ.ಕ. ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತೆ ಸರಸ್ವತಿ ಅಡ್ತಲೆ ಅವರು ತಮ್ಮ ಸುದೀರ್ಘ 39 ವರ್ಷ ನಾಲ್ಕು ತಿಂಗಳ ಶಿಕ್ಷಕ ವೃತ್ತಿ ಜೀವನದಿಂದ ಅ.31ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ.ಜಾಲ್ಲೂರು ಗ್ರಾಮದ ಕುತ್ಯಾಳ ದಿ. ಕೂಸಪ್ಪ ಗೌಡ ಹಾಗೂ ದಿ. ಶಾಂತಮ್ಮ ದಂಪತಿಯ ಪುತ್ರಿಯಾದ ಸರಸ್ವತಿ ಅವರು ತಮ್ಮ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಜಾಲ್ಲೂರು ಗ್ರಾಮದ ಬೊಳುಬೈಲು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ

ಅ.31ಕ್ಕೆ ಅರಂತೋಡು ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಸರಸ್ವತಿ ಅಡ್ತಲೆ ಸೇವಾ ನಿವೃತ್ತಿ Read More »

error: Content is protected !!
Scroll to Top