ಪ್ರಚಲಿತ

ರೆಂಜಿಲಾಡಿ: ಕಂಬಳ ಸ್ನೇಹಕೂಟ ಕರೆ ನಿರ್ಮಾಣಕ್ಕೆ ಮುಹೂರ್ತ

ಕಡಬ: ಕಡಬ ತಾಲೂಕಿನ ನೂಜಿಬಾಳ್ತಿಲ-ರೆಂಜಿಲಾಡಿಯ ನೂಜಿಬೈಲ್ ತುಳುನಾಡ ತುಡರ್ ಯುವಕ ಮಂಡಲದ ವತಿಯಿಂದ ಅ.20ರಂದು ನಡೆಯಲಿರುವ ಕೆಸರುಗದ್ದೆಯಲ್ಲಿ ಕಂಬಳ ಸ್ನೇಹಕೂಟದ ಕಂಬಳ ಕರೆ ನಿರ್ಮಾಣಕ್ಕೆ ಮುಹೂರ್ತ ಕಾರ್ಯಕ್ರಮ ಗುರುವಾರ ರೆಂಜಿಲಾಡಿ ಗ್ರಾಮದ ದಿ.ಸಾಂತಪ್ಪ ಗೌಡ ಸಾಕೋಟೆಜಾಲು ಅವರ ಗದ್ದೆಯಲ್ಲಿ ನಡೆಯಿತು.ನೂಜಿಬೈಲ್ ನೂಜಿಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನದ ಪರಿಚಾರಕ ವಿಜಯಕುಮಾರ್ ಕೇಪುಂಜ ಅವರು ಕಂಬಳದ ಕೆರೆ ನಿರ್ಮಾಣಕ್ಕೆ ಚಾಲನೆ ನೀಡಿದರು. ಜಾಗದ ಮಾಲಿಕರಾದ ಚಂದ್ರಾವತಿ ಸಾಕೋಟೆಜಾಲು, ಸ್ಥಳೀಯರಾದ ಪುರುಷೋತ್ತಮ ಗೌಡ ಸಂಕೇಶ, ತುಳುನಾಡ ತುಡರ್ ಯುವಕ ಮಂಡಲದ ಅಧ್ಯಕ್ಷ […]

ರೆಂಜಿಲಾಡಿ: ಕಂಬಳ ಸ್ನೇಹಕೂಟ ಕರೆ ನಿರ್ಮಾಣಕ್ಕೆ ಮುಹೂರ್ತ Read More »

ಅರಂತೋಡಿನಲ್ಲಿ ಎನ್.ಎಸ್. ಎಸ್ ದಿನಾಚರಣೆ

ಅರಂತೋಡು: ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಎನ್ಎಸ್ಎಸ್ ದಿನಾಚರಣೆ ಆಚರಿಸಲಾಯಿತು.ಕಾಲೇಜಿನ ಪ್ರಭಾರ ಪ್ರಾಂಶುಪಾಲ ಸುರೇಶ್ ವಾಗ್ಲೆ ಗಿಡಕ್ಕೆ ನೀರು ಎರೆಯುವ ಮೂಲಕ ರಾಷ್ಟ್ರೀಯ ಸೇವಾ ಯೋಜನೆಯ ದಿನಾಚರಣೆ ಚಾಲನೆ ನೀಡಿ, ಎನ್ಎಸ್ಎಸ್ ಸ್ಥಾಪನೆಯ ಗುರಿ ಉದ್ದೇಶಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು. ಇತಿಹಾಸ ಉಪನ್ಯಾಸಕ ಮೋಹನ್ ಚಂದ್ರ ಎನ್ಎಸ್ಎಸ್ ವಾರ್ಷಿಕ ಶಿಬಿರದ ಆಯೋಜನೆ ಕುರಿತು ಮಾಹಿತಿ ನೀಡಿದರು. ವೇದಿಕೆಯಲ್ಲಿ ರಾಜ್ಯಶಾಸ್ತ್ರ ಉಪನ್ಯಾಸಕ ಪದ್ಮಕುಮಾರ್ ಉಪಸ್ಥಿತರಿದ್ದರು. ಕಾರ್ಯಕ್ರಮಾಧಿಕಾರಿ ಲಿಂಗಪ್ಪ ಎಂ.ಸ್ವಾಗತಿಸಿ,

ಅರಂತೋಡಿನಲ್ಲಿ ಎನ್.ಎಸ್. ಎಸ್ ದಿನಾಚರಣೆ Read More »

ವಿಶ್ವ ಶಾಂತಿ ದಿನಾಚರಣೆ ಕಾರ್ಯಕ್ರಮ

ಸುಳ್ಯ : ವಿಶ್ವ ಶಾಂತಿ ದಿನಾಚರಣೆಯನ್ನು ಲಯನ್ಸ್ ಕ್ಲಬ್ ಸುಳ್ಯ ಇದರ ವತಿಯಿಂದ ಕೆಪಿಸ್ ಗಾಂಧೀನಗರದಲ್ಲಿ ಆಚರಿಸಲಾಯಿತು. ಸಂಪನ್ಮೂಲ ವ್ಯಕ್ತಿ ಯಾಗಿ ಲಯನ್ ರಂಗನಾಥ ಭಾಗವಹಿಸಿದ್ದರು. ವಿಶ್ವ ಶಾಂತಿ ಯ ಮಹತ್ವ ದ ಕುರಿತು ವಿದ್ಯಾರ್ಥಿ ಗಳಿಗೆ ಸೂಕ್ತ ಮಾಹಿತಿ ಯನ್ನು ನೀಡಿದರು.ವೇದಿಕೆಯಲ್ಲಿ ಲಯನ್ಸ್ ಕ್ಲಬ್ ಸುಳ್ಯ ಇದರ ಅಧ್ಯಕ್ಷ ರಾಮಕೃಷ್ಣ ರೈ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿಗಳಾದ ಲಯನ್ ರಾಮಚಂದ್ರ ಪಲ್ಲತಡ್ಕ, ಆನಂದ ಪೂಜಾರಿ, ರಮೇಶ್ ಶೆಟ್ಟಿ, ಪ್ರಭಾರ ಉಪ ಪ್ರಾಂಶುಪಾಲರಾದ ಜ್ಯೋತಿ ಲಕ್ಷ್ಮೀ, ಹಿರಿಯ ಶಿಕ್ಷಕರಾದ

ವಿಶ್ವ ಶಾಂತಿ ದಿನಾಚರಣೆ ಕಾರ್ಯಕ್ರಮ Read More »

ಅಕ್ಟೋಬ‌ರ್ 3ರಿಂದ 20ರವರೆಗೆ ಶಾಲಾ ಮಕ್ಕಳಿಗೆ ದಸರಾ ರಜೆ

ಬೆಂಗಳೂರು: ಪ್ರಸಕ್ತ ಸಾಲಿನ ಶೈಕ್ಷಣಿಕ ವೇಳಾಪ ಟ್ಟಿಯಂತೆಅಕ್ಟೋಬ‌ರ್3 ರಿಂದ 20ರವರೆಗೆ ಶಾಲಾ ಮಕ್ಕಳಿಗೆ ದಸರಾ ರಜೆ ಇರಲಿದೆ. ಕಳೆದ ಏಪ್ರಿಲ್‌ನಲ್ಲೇ ಪ್ರಕಟಿಸಿರುವ ವೇಳಾಪಟ್ಟಿಯಂತೆ ಅ.1ರವರೆಗೆ ತರಗ ತಿಗಳು ನಡೆಯಲಿವೆ. ಅ.2ರಂದು ಗಾಂಧಿಜಯಂತಿ ಇರ ಲಿದ್ದು, ಅ. 3 ರಿಂದ 20 ರವರೆಗೆ ರಾಜ್ಯ ಪಠ್ಯಕ್ರಮದ ಎಲ್ಲ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಖಾಸಗಿ ಶಾಲಾ ಮಕ್ಕಳಿಗೆ ದಸರಾ ರಜೆ ಇರಲಿದೆ. ಅ. 21 ರಿಂದ ಮತ್ತೆ ತರಗತಿಗಳು ಪುನಾರಂಭವಾಗಲಿವೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಅಕ್ಟೋಬ‌ರ್ 3ರಿಂದ 20ರವರೆಗೆ ಶಾಲಾ ಮಕ್ಕಳಿಗೆ ದಸರಾ ರಜೆ Read More »

ಪ್ರೀತಿಯಿಂದ ಈ ಜಗತ್ತನ್ನೇ ಗೆಲ್ಲಬಹುದೆಂಬ ಸಂದೇಶ ನೀಡಿದ ಪ್ರವಾದಿಗಳ ಸಂದೇಶ ಶ್ರೇಷ್ಠ

ಸುಳ್ಯ : ಪ್ರೀತಿಯಿಂದ ಈ ಜಗತ್ತನ್ನೇ ಗೆಲ್ಲಬಹುದು ಸಂದೇಶ ನೀಡಿದ ಪ್ರವಾದಿಗಳನ್ನು ಮಹಾನುಭಾವರನ್ನು ಸ್ಮರಣೆ ಮಾಡಬೇಕಾದುದುಅಗತ್ಯ ಎಂದು ಅಂತರರಾಷ್ಟ್ರೀಯ ವಾಗ್ನಿ ಕೇರಳ ರಾಜ್ಯದ ಕುರುವಾರಕುಂಡ್‌ ಸಮನ್ವಯ ಗಿರಿ ಅಧೀನ ಮಠದ ಸ್ವಾಮಿ ಶ್ರೀಮದ್ ಆತ್ಮಾದಾಸ್ ಯಾಮಿ ಹೇಳಿದರು.ಅವರು ಸುಳ್ಯ ತಾಲೂಕು ಮೀಲಾದ್ ಸಮಿತಿ ವತಿಯಿಂದ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಪ್ರವಾದಿ ಮಹಮ್ಮದ್ ಮುಸ್ತಾಫ (ಸ.ಅ) ಅವರ ಜನ್ಮದಿನಾಚರಣೆಯ ಅಂಗವಾಗಿ ಸೆ. 20 ರಂದು ಸುಳ್ಯದಲ್ಲಿ ನಡೆದ ಬೃಹತ್ ಮಿಲಾದ್ ಕಾಲ್ನಡಿಗೆ ಜಾಥಾ ಬಳಿಕ ಗಾಂಧಿನಗರದಲ್ಲಿ ನಡೆದ ಸಾರ್ವಜನಿಕ

ಪ್ರೀತಿಯಿಂದ ಈ ಜಗತ್ತನ್ನೇ ಗೆಲ್ಲಬಹುದೆಂಬ ಸಂದೇಶ ನೀಡಿದ ಪ್ರವಾದಿಗಳ ಸಂದೇಶ ಶ್ರೇಷ್ಠ Read More »

ಅಡ್ಕಾರು : ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಪರಿವಾರ ದೈವಗಳ ಜೀರ್ಣೋದ್ಧಾರ ಬಗ್ಗೆ ನಿಧಿ ಸಂಕಲ್ಪ ಸಭೆ

ಜಾಲ್ಲೂರು : ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಪರಿವಾರ ದೈವಗಳ ಜೀರ್ಣೋದ್ಧಾರ ಬಗ್ಗೆ ನಿಧಿ ಸಂಕಲ್ಪ ಸಭೆಯು ದೇವಸ್ಥಾನದ ಶ್ರೀ ಕಾರ್ತಿಕೇಯ ಸಭಾಭವನದಲ್ಲಿ ಕುಂಟರು ರವೀಶ ತಂತ್ರಿಗಳ ಉಪಸ್ಥಿತಿಯಲ್ಲಿ ಜರುಗಿತು.ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಸುಧಾಕರ ಕಾಮತ್ ವಿನೋಬನಗರ ಅವರು ಅಧ್ಯಕ್ಷತೆ ವಹಿಸಿದ್ದರು.ದೇವಸ್ಥಾನದ ಪರಿವಾರ ಸಾನಿಧ್ಯಗಳಾದ ಕಳರಿ ಶ್ರೀ ಧೂಮಾವತಿ ದೈವಸ್ಥಾನ ಮತ್ತು ಶ್ರೀ ವಯನಾಟ್ ಕುಲವನ್ ಮಹಾವಿಷ್ಣುಮೂರ್ತಿ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯ ಬಾಕಿ ಉಳಿದಿದ್ದು, ಮುಂದಿನ ಒಂದು ವರ್ಷದೊಳಗೆ ಪೂರ್ತಿಗೊಳಿಸುವುದೆಂದು ತೀರ್ಮಾನ ಕೈಗೊಳ್ಳಲಾಯಿತು.ಈ ಸಂದರ್ಭದಲ್ಲಿ ಜೀರ್ಣೋದ್ದಾರ

ಅಡ್ಕಾರು : ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಪರಿವಾರ ದೈವಗಳ ಜೀರ್ಣೋದ್ಧಾರ ಬಗ್ಗೆ ನಿಧಿ ಸಂಕಲ್ಪ ಸಭೆ Read More »

ಕಲಾವಿದ ಭೀಮರಾವ್ ವಾಷ್ಠರ್ ಅವರಿಗೆ ಕಲಾ ರತ್ನ ಪ್ರಶಸ್ತಿ ಪ್ರದಾನ

ಆರ್ ಪಿ ಕಲಾ ಸೇವಾ ಟ್ರಸ್ಟ್ ಪಾಂಬಾರ್ ಇದರ ವತಿಯಿಂದ ಪೆರ್ಲoಪಾಡಿಯಲ್ಲಿ ಶ್ರೀಗಣೇಶೋತ್ಸವದ ಆಚರಣೆಯಲ್ಲಿ ಜರುಗಿದ ಅದ್ದೂರಿ ಸಂಗೀತ ರಸಮಂಜರಿ ಕಾರ್ಯಕ್ರಮದಲ್ಲಿ ಸುಳ್ಯದ ಸಾಹಿತಿ, ಜ್ಯೋತಿಷಿ, ಕಲಾವಿದರಾದ ಶ್ರೀ ಎಚ್. ಭೀಮರಾವ್ ವಾಷ್ಠರ್ ಇವರ ವಿವಿಧ ಸಾಧನೆಗಳನ್ನು ಪರಿಗಣಿಸಿ 2024 ನೇ ಸಾಲಿನ ಕಲಾ ರತ್ನ ಪ್ರಶಸ್ತಿ ನೀಡಿ ಸಮ್ಮಾನಿಸಿ ಗೌರವಿಸಿದ್ದಾರೆ. ಈ ಸಂದರ್ಭದಲ್ಲಿ ನಡೆದ ಸಂಗೀತ ರಸಮಂಜರಿಯಲ್ಲಿ ಭೀಮರಾವ್ ವಾಷ್ಠರ್ ಸುಳ್ಯ ಅವರು ಅನೇಕ ಗೀತೆಗಳನ್ನು ಹಾಡಿ ಮನರಂಜಿಸಿದ್ದಾರೆ. ವೇದಿಕೆಯಲ್ಲಿ ಆರ್ ಪಿ ಕಲಾ ಸೇವಾ

ಕಲಾವಿದ ಭೀಮರಾವ್ ವಾಷ್ಠರ್ ಅವರಿಗೆ ಕಲಾ ರತ್ನ ಪ್ರಶಸ್ತಿ ಪ್ರದಾನ Read More »

ಸಂಸ್ಕೃತಿಯುತ,ಸಂಸ್ಕಾರಯುತ ಮಗುವನ್ನು ಬೆಳೆಸಲು ಪೋಷಕರ ಎಚ್ಚರಿಕೆ ಹೆಜ್ಜೆ ಅಗತ್ಯ: ಡಾ. ಅನುರಾಧ ಕುರುಂಜಿ

ಜಾಲ್ಸೂರು : ಮಗು ಉತ್ತಮ ಪ್ರಜೆಯಾಗಿ ರೂಪಿಸಲು ,ಪೋಷಕರು ಶಿಕ್ಷಕರು ಕೆತ್ತನೆಯ ಶಿಲ್ಪಿಗಳಾಗಬೇಕು. ವಿದ್ಯಾರ್ಥಿ ಜೀವನದ ಮಾನದಂಡವಾದ ಅಂಕದ ಜತೆ ಗೆ ಸಂಸ್ಕೃತಿಯುತ-ಸಂಸ್ಕಾರಯುತ ವಾಗಿ ಮಕ್ಕಳನ್ನು ಬೆಳೆಸಲು ಪೋಷಕರು ಎಚ್ಚರಿಕೆಯ ಹೆಜ್ಜೆ ಇಡುವ ಅಗತ್ಯತೆ ಇದೆ ಎಂದು ಉಪನ್ಯಾಸಕಿ ಹಾಗೂ ಸಂಪನ್ಮೂಲ ವ್ಯಕ್ತಿ ಡಾ. ಅನುರಾಧ ಕುರುಂಜಿ ಹೇಳಿದರು.ಅವರು ಜಾಲ್ಸೂರು ಪಯಸ್ವಿನಿ ಪ್ರೌಢಶಾಲೆಯಲ್ಲಿ ನಡೆದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ನಡೆದ ಮಾಹಿತಿ ಕಾರ್ಯಗಾರದಲ್ಲಿ ಮಾತನಾಡಿದರು.ಶಾಲಾ ಎಸ್. ಡಿ.ಎಂ.ಸಿ ಅಧ್ಯಕ್ಷ ಅಬ್ದುಲ್ ಖಾದರ್ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ

ಸಂಸ್ಕೃತಿಯುತ,ಸಂಸ್ಕಾರಯುತ ಮಗುವನ್ನು ಬೆಳೆಸಲು ಪೋಷಕರ ಎಚ್ಚರಿಕೆ ಹೆಜ್ಜೆ ಅಗತ್ಯ: ಡಾ. ಅನುರಾಧ ಕುರುಂಜಿ Read More »

ಪೂರ್ಣಿಮಾ ಪೆರ್ಲಂಪಾಡಿಗೆ ಸನ್ಮಾನ

ಬೆಳ್ಳಾರೆ ಜೇಸಿಸ್ ನ ಜೊತೆ ಕಾರ್ಯದರ್ಶಿಕೊಳ್ತಿಗೆ ವಲಯದ ಅಂಗನವಾಡಿ ಕಾರ್ಯಕರ್ತೆ ಪೂರ್ಣಿಮಾ ಪೆರ್ಲoಪಾಡಿ ಇವರಿಗೆ ಸೆ.17ರಂದು ಕೊಳ್ತಿಗೆ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ ನ 65ನೇ ವರ್ಷದ ವಾರ್ಷಿಕ ಮಹಾ ಸಭೆಯಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಗೌರವಿಸಲಾಯಿತು. ಪೂರ್ಣಿಮಾರು ಸಾಹಿತ್ಯ ಕ್ಷೇತ್ರ ದಲ್ಲಿ ಮಾಡಿದ ಸಾಧನೆಗಾಗಿ ಅನೇಕ ಪ್ರಶಸ್ತಿ ಗಳನ್ನು ಪಡೆದಿರುತ್ತಾರೆ.

ಪೂರ್ಣಿಮಾ ಪೆರ್ಲಂಪಾಡಿಗೆ ಸನ್ಮಾನ Read More »

ಸೆ. 20 ರಂದು ಸುಳ್ಯದಲ್ಲಿ ಬೃಹತ್ ಮಿಲಾದ್ ಕಾಲ್ನಡಿಗೆ ಜಾಥಾ

ಸುಳ್ಯ : ಪ್ರತಿ ವರ್ಷ ಆಚರಿಸಿಕೊಂಡು ಬರುತ್ತಿರುವ ಪ್ರವಾದಿ ಮಹಮ್ಮದ್ ಮುಸ್ತಾಫ (ಸ.ಅ)ರವರ ಜನ್ಮ ದಿನಾಚರಣೆಯ ಅಂಗವಾಗಿ ಸೆ ೨೦ ರಂದು ಸುಳ್ಯದಲ್ಲಿ ಬೃಹತ್ ಮಿಲಾದ್ ಕಾಲ್ನಡಿಗೆ ಜಾಥಾ ಹಾಗೂ ಪ್ರವಾದಿ ಸಂದೇಶ ಭಾಷಣ ಕಾರ್ಯಕ್ರಮ ನಡೆಯಲಿದೆ ಎಂದು ತಾಲೂಕು ಮಿಲಾದ್ ಸಮಿತಿ ತಿಳಿಸಿದೆ.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಿಲಾದ್ ಸಮಿತಿಯ ಅಧ್ಯಕ್ಷ ಶರೀಫ್ ಕಂಠಿ ಸೆ.20ನೇ ಶುಕ್ರವಾರ ಸಂಜೆ ೪.೦0 ಗಂಟೆಗೆ ಮೊಗರ್ಪಣೆ ಮಸೀದಿ ವಠಾರದಿಂದ ಕಾಲ್ನಡಿಗೆ ಜಾಥಾ ಪ್ರಾರಂಭಗೊಂಡು ಗಾಂಧಿನಗರ ಪೆಟ್ರೋಲ್ ಪಂಪ್ ಮುಭಾಗದಲ್ಲಿ ಜಾಥಾ ಸಮಾಪ್ತಿಗೊಳ್ಳಲಿದೆ.

ಸೆ. 20 ರಂದು ಸುಳ್ಯದಲ್ಲಿ ಬೃಹತ್ ಮಿಲಾದ್ ಕಾಲ್ನಡಿಗೆ ಜಾಥಾ Read More »

error: Content is protected !!
Scroll to Top