ಪ್ರಚಲಿತ

ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾಗಿ ಡಾ.ರೇಣುಕಾ ಪ್ರಸಾದ್ ಪುನರಾಯ್ಕೆ

ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾಗಿ ಡಾ ರೇಣುಕಾ ಪ್ರಸಾದ್ ಕುರುಂಜಿಯವರು ಸರ್ವಾನುಮತದಿಂದ ಪುನಾರಯ್ಕೆಗೊಂಡಿದ್ದಾರೆ.ಹಲವಾರು ಮಂದಿ ಅಭಿಮಾನಿಗಳು‌ ಅವರನ್ನು ಅಭಿನಂದಿಸಿದ್ದಾರೆ.

ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾಗಿ ಡಾ.ರೇಣುಕಾ ಪ್ರಸಾದ್ ಪುನರಾಯ್ಕೆ Read More »

ದ.ಕ ಜಿಲ್ಲಾ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕದ ವಿದ್ಯಾರ್ಥಿಗಳು ಚಾಂಪಿಯನ್

ಶಾಲಾ ಶಿಕ್ಷಣ ಇಲಾಖೆ ಹಾಗೂ ದೀಪಿಕಾ ಪ್ರೌಢಶಾಲೆ ಮೊಡಂಕಾಪು-ಬಂಟ್ವಾಳ ಆಶ್ರಯದಲ್ಲಿ ನಡೆದ ದ.ಕ‌.ಜಿಲ್ಲಾ ಮಟ್ಟದ ಪ್ರೌಢಶಾಲಾ 17 ಹಾಗೂ 14 ರ ವಯೋಮಿತಿಯ ಬಾಲಕ ಹಾಗೂ ಬಾಲಕಿಯರ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕ ಇದರ ಬಾಲಕರ ತಂಡ 17 ರ ವಯೋಮಿತಿಯ ಬಾಲಕರ ವಿಭಾಗದಲ್ಲಿ ಜಿಲ್ಲಾ ಮಟ್ಟದಲ್ಲಿ ಚಾಂಪಿಯನ್ ಆಗಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದೆ.ಅನ್ವಿತ್.ಎಂ.ಪಿ,ಧನುಷ್,ನಿತೇಶ್.ಡಿ,ಅಕ್ಷಯ್‌.ಕೆ.ಸಿ ಹಾಗೂ ಗಿರೀಶ್ .ಕೆ ತಂಡದಲ್ಲಿದ್ದರು

ದ.ಕ ಜಿಲ್ಲಾ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕದ ವಿದ್ಯಾರ್ಥಿಗಳು ಚಾಂಪಿಯನ್ Read More »

ಕೆಸೆಟ್ ಪರೀಕ್ಷೆಯಲ್ಲಿ ಮೇಘಾ ಪಿ.ಎಂ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣ

ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆಸಲ್ಪಡುವ ಸಹಾಯಕ ಪ್ರಾಧ್ಯಾಪಕ ಅರ್ಹತಾ ಪರೀಕ್ಷೆಯಲ್ಲಿ (ಕೆಸೆಟ್ -೨೦೨೫) ರಲ್ಲಿ ಮೇಘಾ ಪಿ.ಎಂ. ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.ಇವರು ಪೂಜಾರಿಮನೆ ಮಾಧವ ಮಾಸ್ಟರ್ ಹಾಗೂ ಗೂನಡ್ಕ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿರುವ ಶೀಲಾವತಿ ಕೆ.ಎನ್‌. ಇವರ ಪುತ್ರಿ.ಮೇಘಾ ಪಿ.ಎಂ. ರೋಟರಿ ಶಾಲೆ ಸುಳ್ಯ, ಅಂಬಿಕಾ ಪದವಿ ಪೂರ್ವ ಕಾಲೇಜು ಪುತ್ತೂರು, ಎನ್.ಎಂ.ಸಿ. ಸುಳ್ಯದ ಹಳೆ ವಿದ್ಯಾರ್ಥಿನಿ.ಮಂಗಳೂರು ವಿಶ್ವ ವಿದ್ಯಾಲಯ ಮಂಗಳೂರು ಗಂಗೋತ್ರಿಯಲ್ಲಿ ೨೦೨೫ನೇ ಸಾಲಿನಲ್ಲಿ ರಸಾಯನ ಶಾಸ್ತ್ರದಲ್ಲಿ ಎಂ.ಎಸ್ಸಿ ಪದವಿಯನ್ನು ಪಡೆದಿದ್ದಾರೆ.

ಕೆಸೆಟ್ ಪರೀಕ್ಷೆಯಲ್ಲಿ ಮೇಘಾ ಪಿ.ಎಂ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣ Read More »

ನವೆಂಬರ್ 24 ಕ್ಕೆ ಆರಂತೋಡು ಗ್ರಾಮ ಪಂಚಾಯತ್ ಘನ ತಾಜ್ಯ ಘಟಕದ ಮರು ನಿರ್ಮಾಣಕ್ಕೆ ಗುದ್ದಲಿ ಪೂಜೆ

ಆಕಸ್ಮಿಕವಾಗಿ ಬೆಂಕಿ ಅವಘಡಕ್ಕೆ ತುತ್ತಾದ ರಾಜ್ಯದಲ್ಲಿ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಆರಂತೋಡು ಗ್ರಾಮ ಪಂಚಾಯತ್ ನ ಕೊಡಂಕೇರಿ ಯಲ್ಲಿಯ ಘನ ತ್ಯಾಜ್ಯ ಘಟಕ ಮರು ನಿರ್ಮಾಣಕ್ಕೆ ಮತ್ತು ಅದಕ್ಕೆ ಸಂಪರ್ಕಿಸುವ ಉದಯನಗರ- ಕೊಡಂಕೇರಿ ರಸ್ತೆಯ ಕಾಂಗ್ರಿಟಿಕರಣದ ಗುದ್ದಲಿ ಪೂಜೆ ಕಾರ್ಯಕ್ರಮ ನವಂಬರ್ 24 ನೇ ಸೋಮವಾರದಂದು ಬೆಳಿಗ್ಗೆ 8.30ಕ್ಕೆ ಮಾನ್ಯ ಶಾಸಕರು, ವಿಧಾನಪರಿಷತ್ ಸದಸ್ಯರು,ಸರಕಾರದ ನಿಗಮ ಅಧ್ಯಕ್ಷರು,ಜನಪ್ರತಿನಿದಿನಗಳು ಅಧಿಕಾರಿಗಳು,ಘಟಕದ ಮರು ನಿರ್ಮಾಣಕ್ಕೆ ಧನ ಸಹಾಯ ನೀಡಿದ ದಾನಿಗಳ ಉಪಸ್ಥಿತಿಯಲ್ಲಿ ನಡೆಯಲಿದೆ ಎಂದು ಆರಂತೋಡು ಪಂಚಾಯತ್ ಅಧ್ಯಕ್ಷರಾದ ಕೇಶವ ಅಡ್ತಲೆ

ನವೆಂಬರ್ 24 ಕ್ಕೆ ಆರಂತೋಡು ಗ್ರಾಮ ಪಂಚಾಯತ್ ಘನ ತಾಜ್ಯ ಘಟಕದ ಮರು ನಿರ್ಮಾಣಕ್ಕೆ ಗುದ್ದಲಿ ಪೂಜೆ Read More »

ಸುಳ್ಯ ತಾಲೂಕು 28ನೇ ಕನ್ನಡ ಸಾಹಿತ್ಯ ಸಮ್ಮೇಳನ‌ದ ಕವಿಗೋಷ್ಠಿಗೆ ಕವನಗಳ ಆಹ್ವಾನ

ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸ್ವಾಗತ ಸಮಿತಿ 28ನೇ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ -2025 ಇದರ ಆಶ್ರಯದಲ್ಲಿ ದಿನಾಂಕ 30-12- 2025ರಂದು ಚೊಕ್ಕಾಡಿ ಪ್ರೌಢ ಶಾಲೆ ಕುಕ್ಕುಜಡ್ಕ ಇಲ್ಲಿ 28ನೇ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಈ ಸಮ್ಮೇಳನದ ಸಮಾರಂಭದಲ್ಲಿ ಕವಿಗೋಷ್ಠಿ ನಡೆಯಲಿದ್ದು ಇದರಲ್ಲಿ ಭಾಗವಸುವ ಆಸಕ್ತರು ತಮ್ಮ ಕವನ ಮತ್ತು ಹೆಸರು ಹಾಗೂ ವಿಳಾಸವನ್ನು ಹೆಸರನ್ನು ದಿನಾಂಕ 02-12-2025ರ ಒಳಗೆ ಅಧ್ಯಕ್ಷರು, ಸುಳ್ಯ ತಾಲೂಕು ಕನ್ನಡ ಸಾಹಿತ್ಯ

ಸುಳ್ಯ ತಾಲೂಕು 28ನೇ ಕನ್ನಡ ಸಾಹಿತ್ಯ ಸಮ್ಮೇಳನ‌ದ ಕವಿಗೋಷ್ಠಿಗೆ ಕವನಗಳ ಆಹ್ವಾನ Read More »

ಸುಳ್ಯ ತಾಲೂಕು 28ನೇ ಸಾಹಿತ್ಯ ‌ಸಮ್ಮೇಳನದಲ್ಲಿ ಪುಸ್ತಕ ಬಿಡುಗಡೆಗೆ ಆಹ್ವಾನ

ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸ್ವಾಗತ ಸಮಿತಿ 28ನೇ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ -2025 ಇದರ ಆಶ್ರಯದಲ್ಲಿ ಡಿ.30ರಂದು ಚೊಕ್ಕಾಡಿ ಪ್ರೌಢ ಶಾಲೆ ಕುಕ್ಕುಜಡ್ಕ ಇಲ್ಲಿ 28ನೇ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಈ ಸಮ್ಮೇಳನದಲ್ಲಿ ಪುಸ್ತಕ ಬಿಡುಗಡೆ ಮಾಡಲು ಅವಕಾಶವಿದ್ದು ಆಸಕ್ತರು ಪುಸ್ತಕದ ಹೆಸರು ಹಾಗೂ ಲೇಖಕರ ಹೆಸರನ್ನು 02-12-2025ರ ಒಳಗೆ ಅಧ್ಯಕ್ಷರು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು (9448889005) ಇವರಿಗೆ ಕಳುಹಿಸಲು ಪತ್ರಿಕಾ ಪ್ರಕಟಣೆಯಲ್ಲಿ

ಸುಳ್ಯ ತಾಲೂಕು 28ನೇ ಸಾಹಿತ್ಯ ‌ಸಮ್ಮೇಳನದಲ್ಲಿ ಪುಸ್ತಕ ಬಿಡುಗಡೆಗೆ ಆಹ್ವಾನ Read More »

ಕ್ರೀಡೆಯಿಂದ ವಿದ್ಯಾರ್ಥಿಗಳ ಮಾನಸಿಕ-ದೈಹಿಕ ವಿಕಸನ ಸಾಧ್ಯ: ಟಿ.ಎಂ.ಶಹೀದ್ ತೆಕ್ಕಿಲ್

ಆಧುನಿಕ ಯುಗದಲ್ಲಿ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳ ಮೂಲಕ ತೊಡಗಿಸಿಕೊಂಡು ತಮ್ಮ ಅಮೂಲ್ಯ ಸಮಯಗಳನ್ನು ವ್ಯರ್ಥ ಮಾಡುವ ಸಮಯವನ್ನು ನಾನಾ ರೀತಿಯ ಕ್ರೀಡೆಗಳಲ್ಲಿ ತೊಡಗಿಸಿಕೊಂಡಾಗ ಮಾನಸಿಕ-ದೈಹಿಕ ವಿಕಸನ ಸಾಧ್ಯ ಎಂದು ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್ ಹೇಳಿದರು.ಅವರು ಜಾಲ್ಸೂರು ಪಯಸ್ವಿನಿ ಪ್ರೌಢಶಾಲೆಯಲ್ಲಿ ಶನಿವಾರ ನಡೆದ ಜಿಲ್ಲಾಮಟ್ಟದ ಜಂಪ್‌ರೋಪ್ ಪಂದ್ಯಾಟವನ್ನು ದೀಪಬೆಳಗಿಸಿ, ಉಧ್ಘಾಟಿಸಿ ಮಾತನಾಡಿ, ಗ್ರಾಮೀಣ ಕ್ರೀಡೆಗಳು ಸೇರಿದಂತೆ ಇಂತಹ ಅನೇಕ ರೀತಿಯ ಕ್ರೀಡೆಗಳಿಗೆ ಒತ್ತು ನೀಡುವ ಅಗತ್ಯತೆ ಇದೆ ಎಂದರು.ಗ್ರಾಮೀಣ ಪ್ರದೇಶದ ಹಲವಾರು

ಕ್ರೀಡೆಯಿಂದ ವಿದ್ಯಾರ್ಥಿಗಳ ಮಾನಸಿಕ-ದೈಹಿಕ ವಿಕಸನ ಸಾಧ್ಯ: ಟಿ.ಎಂ.ಶಹೀದ್ ತೆಕ್ಕಿಲ್ Read More »

ಉದ್ಯೋಗಿನಿ, ಚೇತನ, ಧನಶ್ರೀ ಯೋಜನೆಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು 2025-26ನೇ ಸಾಲಿನ ವಿವಿಧ ಮಹಿಳಾ ಸಬಲೀಕರಣ ಹಾಗೂ ಪುನರ್ವಸತಿ ಯೋಜನೆಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಮಹಿಳೆಯರ ಸ್ವಯಂ ಉದ್ಯೋಗ ಮತ್ತು ಆರ್ಥಿಕ ಸಬಲೀಕರಣಕ್ಕಾಗಿ ಉದ್ಯೋಗಿನಿ, ಚೇತನ, ಧನಶ್ರೀ ಹಾಗೂ ಲಿಂಗ ಅಲ್ಪಸಂಖ್ಯಾತ ಪುನರ್ವಸತಿ ಮತ್ತು ದೇವದಾಸಿ ಮಹಿಳೆಯರ ಪುನರ್ವಸತಿ ಯೋಜನೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಮಹಿಳೆಯರು 2025 ಡಿಸೆಂಬರ್ 15 ರೊಳಗೆ ಅರ್ಜಿ ಸಲ್ಲಿಸಬಹುದು. ಈ ಯೋಜನೆಗಳ ಅಡಿಯಲ್ಲಿ ಮಹಿಳೆಯರಿಗೆ 30 ಸಾವಿರದಿಂದ 3 ಲಕ್ಷಗಳವರೆಗೆ ಸಹಾಯ / ಪ್ರೋತ್ಸಾಹ ಧನ

ಉದ್ಯೋಗಿನಿ, ಚೇತನ, ಧನಶ್ರೀ ಯೋಜನೆಗಳಿಗೆ ಅರ್ಜಿ ಆಹ್ವಾನ Read More »

ವಾಯುಭಾರ ಕುಸಿತ ಹಿನ್ನಲೆ, ರಾಜ್ಯದ ಹಲವೆಡೆ ಮೂರು ದಿನ ಮಳೆ

ನವೆಂಬರ್ 22, 23 ಮತ್ತು 24ರಂದು ಹೊಸ ವಾಯುಭಾರ ಕುಸಿತದ ಪ್ರಭಾವದಿಂದ ರಾಜ್ಯದ ಹಲವೆಡೆ ಮಳೆ ನಿರೀಕ್ಷಿಸಲಾಗಿದೆ. ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ, ಉತ್ತರ ಒಳನಾಡಿನ ರಾಯಚೂರು, ಯಾದಗಿರಿ, ಕೊಪ್ಪಳ, ಕಲಬುರಗಿ, ಗದಗ ಜಿಲ್ಲೆಗಳಲ್ಲಿ, ಹಾಗೂ ದಕ್ಷಿಣ ಒಳನಾಡಿನ ಚಾಮರಾಜನಗರ, ಕೊಡಗು, ಹಾಸನ, ರಾಮನಗರ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಉಳಿದಂತೆ ಕೆಲವು ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ.

ವಾಯುಭಾರ ಕುಸಿತ ಹಿನ್ನಲೆ, ರಾಜ್ಯದ ಹಲವೆಡೆ ಮೂರು ದಿನ ಮಳೆ Read More »

ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ ಸುಳ್ಯ, ಜನಜಾಗೃತಿ ವೇದಿಕೆ ಸುಳ್ಯ ಇದರ ವತಿಯಿಂದ ಪ್ರಕಟವಾದ “ಜಾಗೃತಿ-ಪ್ರಗತಿ ಪಥ” ಎಂಬ ಸ್ಮರಣ ಸಂಚಿಕೆಯ ವಿತರಣಾ ಕಾರ್ಯಕ್ರಮ

ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ ಸುಳ್ಯ, ಜನಜಾಗೃತಿ ವೇದಿಕೆ ಸುಳ್ಯ ಇದರ ವತಿಯಿಂದ ಪ್ರಕಟವಾದ “ಜಾಗೃತಿ-ಪ್ರಗತಿ ಪಥ” ಎಂಬ ಸ್ಮರಣ ಸಂಚಿಕೆಯ ವಿತರಣಾ ಕಾರ್ಯಕ್ರಮನ. 21 ರಂದು ಸುಳ್ಯ ಯೋಜನಾ ಕಚೇರಿಯ ಸಭಾಂಗಣದಲ್ಲಿ ನಡೆಯಿತು.ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ಲೋಕನಾಥ್ ಅಮೆಚೂ‌ರ್ ಅಧ್ಯಕ್ಷತೆ ವಹಿಸಿ, ಸ್ಮರಣ ಸಂಚಿಕೆಯ ಸಂಪಾದಕ ನೆಲೆಯಲ್ಲಿ ಮಾತನಾಡಿದರು. ಕ್ಷೇತ್ರದ ಮೇಲೆ ಬಂದಿರುವ ಅಪಪ್ರಚಾರಕ್ಕೆ ಉತ್ತರವಾಗಿ ಸಂಚಿಕೆ ಮೂಡಿ ಬಂದಿದೆ. ಕ್ಷೇತ್ರದ ಸಮಾಜ ಸೇವಾ ಚಿಂತನೆಯ ಕುರಿತು ಸಮಗ್ರ ಮಾಹಿತಿಗಳು

ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ ಸುಳ್ಯ, ಜನಜಾಗೃತಿ ವೇದಿಕೆ ಸುಳ್ಯ ಇದರ ವತಿಯಿಂದ ಪ್ರಕಟವಾದ “ಜಾಗೃತಿ-ಪ್ರಗತಿ ಪಥ” ಎಂಬ ಸ್ಮರಣ ಸಂಚಿಕೆಯ ವಿತರಣಾ ಕಾರ್ಯಕ್ರಮ Read More »

error: Content is protected !!
Scroll to Top