ಪ್ರಚಲಿತ

ಸುಳ್ಯ ತಾಲೂಕು ಜನಜಾಗ್ರತಿ ವೇದಿಕೆ ಪದಾಧಿಕಾರಿಗಳ ಸಭೆ

ಸುಳ್ಯ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಂಗ ಸಂಸ್ಥೆಯಾದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ) ಸುಳ್ಯ ತಾಲೂಕು ಇದರ ತಾಲೂಕು ವೇದಿಕೆ ಪದಾಧಿಕಾರಿಗಳ ಸಭೆಯು ಸುಳ್ಯ ಯೋಜನ ಕಚೇರಿ ಸಭಾಂಗಣದಲ್ಲಿತಾಲೂಕು ಅಧ್ಯಕ್ಷರಾದ ಶ್ರೀ ಲೋಕನಾಥ್ ಅಮೆಚೂರ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಶ್ರೀ ಪದ್ಮನಾಭ ಶೆಟ್ಟಿ ರವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು ಸುಳ್ಯ ತಾಲೂಕು ಕ್ಷೇತ್ರ ಯೋಜನಾಧಿಕಾರಿಗಳಾದ ಶ್ರೀ ಮಾಧವ ಗೌಡ ವಾರ್ಷಿಕ […]

ಸುಳ್ಯ ತಾಲೂಕು ಜನಜಾಗ್ರತಿ ವೇದಿಕೆ ಪದಾಧಿಕಾರಿಗಳ ಸಭೆ Read More »

ಸಂಪಾಜೆ : ಗಾಳಿ ಮಳೆಗೆ ಮನೆ ಧ್ವಂಸ,ಸ್ಥಳಕ್ಕೆ ಭೇಟಿ ನೀಡದ ಮೇಲಾಧಿಕಾರಿಗಳು

ಫೆ.25ರಂದು ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಗೂನಡ್ಕ ಪೆಲ್ತಡ್ಕ ವಿಧವೆ ಮಹಿಳೆ ಚಂದ್ರಾವತಿ ಮನೆಗೆ ಮರ ಬಿದ್ದು ಸಂಪೂರ್ಣ ಹಾನಿಯಾಗಿದ್ದು ಸ್ಥಳಕ್ಕೆ ಗ್ರಾಮ ಆಡಳಿತ ಅಧಿಕಾರಿ ಮಂಜುನಾಥ್ ಹೊರತು ಪಡಿಸಿ, ಮೇಲಾಧಿಕಾರಿಗಳು ಭೇಟಿ ಕೊಡದಿರುವುದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರ ಮನೆ ಸಂಪೂರ್ಣ ಹಾನಿಯಾಗಿದ್ದು ಅವರಿಗೆ ಬದಲಿ ವ್ಯವಸ್ಥೆ ಅಗಬೇಕಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಅವರಿಗೆ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಲು ಕೈ ಜೋಡಿಸಬೇಕು. ಅಧಿಕಾರಿಗಳು ಮಾನವೀಯ ನೆಲೆಯಲ್ಲಿ ತಕ್ಷಣ ಭೇಟಿ ನೀಡಿ ಅವರಿಗೆ ಮನೆ ನಿರ್ಮಾಣಕ್ಕೆ ಸಹಾಯ

ಸಂಪಾಜೆ : ಗಾಳಿ ಮಳೆಗೆ ಮನೆ ಧ್ವಂಸ,ಸ್ಥಳಕ್ಕೆ ಭೇಟಿ ನೀಡದ ಮೇಲಾಧಿಕಾರಿಗಳು Read More »

ನಾಳೆ ಪವರ್ ಕಟ್

ಮೆಸ್ಕಾಂ ಸುಳ್ಯ ಉಪವಿಭಾಗ ವ್ಯಾಪ್ತಿಯ 33/11 ಕೆ.ವಿ ಸುಳ್ಯ ವಿದ್ಯುತ್ ವಿತರಣಾ ಕೇಂದ್ರದಿಂದ ವಿತರಣೆಯಾಗುವ ಎಲ್ಲಾ 11 ಕೆ.ವಿ ಫೀಡರುಗಳಲ್ಲಿ ಫೆ. 26 ಗುರುವಾರದಂದು ತುರ್ತು ನಿಯತಕಾಲಿಕ ನಿರ್ವಹಣಾ ಕೆಲಸವನ್ನು ಹಮ್ಮಿಕೊಂಡಿರುವುದರಿಂದ 11ಕೆ.ವಿ ಸುಳ್ಯ 1- ಕೇರ್ಪಳ, ಸುಳ್ಯ-2 ಶ್ರೀರಾಂಪೇಟೆ, ಜಬಳೆ, ಡಿಪೋ, ತೊಡಿಕಾನ, ಕೋಲ್ಟಾರ್, ದೇವರಗುಂಡ, ಅಜ್ಜಾವರ, ಉಬರಡ್ಕ, ಕಲ್ಲುಗುಂಡಿ, ಮಂಡೆಕೋಲು ಫೀಡರುಗಳಲ್ಲಿ ಬೆಳಿಗ್ಗೆ 10:00 ರಿಂದ ಸಾಯಂಕಾಲ 6:00 ರ ತನಕ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ನಾಳೆ ಪವರ್ ಕಟ್ Read More »

ಶಾಂತಿನಗರ : ಮುತ್ತಪ್ಪ ತಿರುವಪ್ಪ ದೈವದ ಕಾಲಾವಧಿ ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಶ್ರೀ ಮುತ್ತಪ್ಪ ತಿರುವಪ್ಪ ದೈವಸ್ಥಾನ ಮಡಪುರ ಶಾಂತಿನಗರ ಪೈಚಾರ್ ಶ್ರೀ ಮುತ್ತಪ್ಪ ತಿರುವಪ್ಪ ದೈವದ ಕಾಲಾವಧಿ ನೇಮೋತ್ಸವ ದ ಆಮಂತ್ರಣ ಪತ್ರಿಕೆ ಬಿಡುಗಡೆ ಸನ್ನಿಧಿಯಲ್ಲಿ ನಡೆಯಿತು ನೇಮೋತ್ಸವ ಮಾರ್ಚ್ ದಿನಾಂಕ 14 ರಿಂದ ಮೊದಲ್ಗೊಂಡು 15ರ ಸಂಜೆ ತನಕ ನಡೆಯಲಿದೆ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಮುತ್ತಪ್ಪ ತಿರುವಪ್ಪ ದೈವದ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ವಿನಂತಿ ಈ ಸಂದರ್ಭದಲ್ಲಿ ಆಡಳಿತ ಸಮಿತಿಯ ಅಧ್ಯಕ್ಷರಾದ ಮಧುಸೂದನ್ ಪಿಎಂ ಪ್ರದಾನ ಕಾರ್ಯದರ್ಶಿ ಕೆ ಕೆ ಬಾಲಕೃಷ್ಣ ಮೊಕ್ತೇಸರರು ರಾದ ರಾಮಕೃಷ್ಣ

ಶಾಂತಿನಗರ : ಮುತ್ತಪ್ಪ ತಿರುವಪ್ಪ ದೈವದ ಕಾಲಾವಧಿ ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ Read More »

ಕುದ್ಪಾಜೆ ತರವಾಡು ಮನೆತನದ ನಾಗನ ಪ್ರತಿಷ್ಠೆ

ಸುಳ್ಯ ಕಸಬಾ ಗ್ರಾಮದ ಪ್ರತಿಷ್ಟಿತ ಕುದ್ಪಾಜೆ ತರವಾಡು ಮನೆತನದ ನಾಗನ ಪ್ರತಿಷ್ಠಾಪನೆಯ ಪೆ 22 ರಂದು ನಡೆಯಿತು.ವೇದಮೂರ್ತಿ ಕುಂಟಾರು ಶ್ರೀ ರವೀಶ್ ತಂತ್ರಿ ಯವರ ಆಶೀರ್ವಾದ ಗಳೊಂದಿಗೆ ನಾಲ್ಕು ಮಂದಿ ಅರ್ಚಕರು ಪೆ 21ರಂದು ರಾತ್ರಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಮೊದಲ್ಗೊಂಡು ಪೆ22 ರಂದು ನಾಗನ ಪ್ರತಿಷ್ಠಾಪನೆ ಮಾಡಲಾಯಿತು.ಐತಿಹಾಸಿಕ ಹಿನ್ನೆಲೆ ಹೊಂದಿರುವ ಕುದ್ಪಾಜೆ ತರವಾಡು ಮನೆತನದ ನಾಗನ ಪ್ರತಿಷ್ಠಾಪನೆಯಲ್ಲಿ ಕುಟುಂಬದ ಹಿರಿಯರಾದ ಶ್ರೀ ಕುದ್ಪಾಜೆ ಸೋಮಯ್ಯ ಮಾಸ್ತರ್ ರವರ ನೇತೃತ್ವದಲ್ಲಿ ನೆರವೇರಿತು.ಈ ಸಂದರ್ಭದಲ್ಲಿ ಕುಟುಂಬದ ಆಡಳಿತ ಮೊಕ್ತೇಸರರು,

ಕುದ್ಪಾಜೆ ತರವಾಡು ಮನೆತನದ ನಾಗನ ಪ್ರತಿಷ್ಠೆ Read More »

ಜೇಸಿಐ ಸುಳ್ಯ ಪಯಸ್ವಿನಿ -ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಪ್ರಶಸ್ತಿ ಪ್ರದಾನ

ಶಬ್ದವಿಲ್ಲದೇ ಪ್ರಚಾರ ಮಾಡುವವರು ಸಮಾಜದ ನಿಜವಾದ ನಾಯಕರು. ಈ ಹಿನ್ನೆಲೆಯಲ್ಲಿ ಜೇಸಿಐ ಭಾರತದ ಪೆಬ್ರವರಿ ತಿಂಗಳ ಗೌರವ ಸಮರ್ಪಣೆಯು ಸ್ಥಳೀಯಾಡಳಿತ ವ್ಯವಸ್ಥೆಯಲ್ಲಿ ಸಹಾಯಕರಾಗಿ ನಿಷ್ಠೆ ಪ್ರಾಮಾಣಿಕತೆಯಿಂದ ದುಡಿದ ಸೇವೆಯನ್ನು ಗುರುತಿಸಿ ಗೌರವಿಸುವುದಾಗಿದ್ದು, ಅದರಂತೆ ಅಮರಮುಡ್ನೂರು ಗ್ರಾಮ ಪಂಚಾಯತ್ ನಲ್ಲಿ ಕಳೆದ 16ವರ್ಷಗಳಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀಮತಿ. ಜಯಲಕ್ಷ್ಮಿ ಎಂ.ಎನ್ ರವರನ್ನುಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಪ್ರಶಸ್ತಿ ನೀಡಿ ಫೆ.22ರಂದು ಜೇಸಿಐ ಸುಳ್ಯ ಪಯಸ್ವಿನಿಯ ವತಿಯಿಂದ ಅಕ್ಕೋಜಿಪಾಲ್ ರವಿಕುಮಾರ್

ಜೇಸಿಐ ಸುಳ್ಯ ಪಯಸ್ವಿನಿ -ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಪ್ರಶಸ್ತಿ ಪ್ರದಾನ Read More »

ಕೂತ್ಕುಂಜ : ಅರೆಭಾಷೆ ನಾಟಕ ಪ್ರದರ್ಶನ ಉದ್ಘಾಟನೆ

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಪ್ರಸ್ತುತ ಪಡಿಸುವ ಶಿವಾಜಿ ಯುವಕ ಮಂಡಲ (ರಿ) ಕೂತ್ಕುಂಜ, ಪಂಜ ಇದರ ಆಶ್ರಯದಲ್ಲಿ ಕೂತ್ಕುಂಜ ಅಟಲ್ ಜೀ ಕ್ರೀಡಾಂಗಣದಲ್ಲಿ ಅರೆಭಾಷೆ ನಾಟಕ ‘ಅಪ್ಪ’ ಹಾಗೂ ಗಾನ ವೈಭವ ಫೆ.21 ರಂದು ನಡೆಯಿತು.ಅಕಾಡೆಮಿ ಸದಸ್ಯರಾದ ಚಂದ್ರಶೇಖರ ಪೇರಾಲು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ “ಅಪ್ಪ ನಾಟಕ 8ನೇ ಪ್ರದರ್ಶನ ನಡೆಯುತ್ತಿದೆ. ಜನರ ಮುಟ್ಟಲು ಪ್ರಯತ್ನ ನಡೆದಿದೆ ಎಂಬ ಆತ್ಮ ತೃಪ್ತಿ ನಮಗಿದೆ. ಅಪ್ಪನ ಪ್ರಾಮುಖ್ಯತೆ ಏನು. ಅಪ್ಪ ಎಷ್ಟು ಸಹಿಸಿಕೊಂಡು

ಕೂತ್ಕುಂಜ : ಅರೆಭಾಷೆ ನಾಟಕ ಪ್ರದರ್ಶನ ಉದ್ಘಾಟನೆ Read More »

ಅರಂತೋಡು : ಶ್ರದ್ಧಾ ಭಕ್ತಿಯಿಂದ‌ ನಡೆದ ಕೊರಗಜ್ಜ ದೈವದ ಕಾಲಾವಧಿಯ ಕೋಲ ಹಾಗೂ ಹರಕೆ ಕೋಲ

ಅರಂತೋಡು-ಕೊಡಂಕೇರಿ ಕೊರಗಜ್ಜ ದೈವಸ್ಥಾನದಲ್ಲಿಫೆ.21ರಂದು ಗುಳಿಗ ದೈವದ ಕೋಲ ಹಾಗೂ ಕೊರಗಜ್ಜ ದೈವದ ಕಾಲಾವಧಿಯ ಕೊಲ ಹಾಗೂ ಹರಕೆ ಕೋಲ ನಡೆಯಿತು.ಶ್ರೀ ದೈವತಾಕಾರ್ಯಕ್ಕೆ ಭಕ್ತರು ಆಗಮಿಸಿ, ಪ್ರಸಾದವನ್ನು ಸ್ವೀಕರಿಸಿ, ಶ್ರೀ ದೈವದ ಕೃಪೆಗೆ ಪಾತ್ರರಾದರು. 8-30ರಿಂದಅನ್ನಸಂತರ್ಪಣೆ ನಡೆಯಿತು.ದಿನಾಂಕ 22-02-2026ನೇ ಆದಿತ್ಯವಾರ ರಾತ್ರಿ ಗಂಟೆ 8-00 ರಿಂದ ದಿನಾಂಕ 23-02-2026ನೇ ಸೋಮವಾರದವರೆಗೆಸ್ವಾಮಿ ಕೊರಗಜ್ಜ ದೈವದ ಹರಕೆಯ ಕೋಲ ನಡೆಯಲಿದೆ.ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ತನು-ಮನ-ಧನ ಸಹಾಯವನ್ನು ನೀಡಿ ಸಹಕರಿಸಬೇಕಾಗಿ ದೈವಸ್ಥಾನದ ಆಡಳಿ ಮಂಡಳಿಯವರು ವಿನಂತಿಸಿಕೊಂಡಿದ್ದಾರೆ.ಈ ದಿನ‌ ಅಗೇಲು ಸೇವೆ ನಡೆಯಲಿದೆ.

ಅರಂತೋಡು : ಶ್ರದ್ಧಾ ಭಕ್ತಿಯಿಂದ‌ ನಡೆದ ಕೊರಗಜ್ಜ ದೈವದ ಕಾಲಾವಧಿಯ ಕೋಲ ಹಾಗೂ ಹರಕೆ ಕೋಲ Read More »

ಸುಳ್ಯ ತಾಲೂಕಿನ ವಿವಿಧೆಡೆ ಭಾರೀ ಮಳೆ,ತಂಪಾದ ಭೂಮಿ

ಸುಳ್ಯ ತಾಲೂಕಿನ ವಿವಿಧೆಡೆ ಫೆ.21ರಂದು ರಾತ್ರಿ ಭಾರೀ ಮಳೆಸುರಿಯುತ್ತಿದೆ.ಕಲ್ಲುಗುಂಡಿ ಸಂಪಾಜೆ,ಪೆರಾಜೆ,ಅರಂತೋಡು ಭಾಗದಲ್ಲಿ ಮಳೆ ಸುರಿಯುತ್ತಿವೆ‌.ಸುಳ್ಯ ನಗರದಲ್ಲಿಯೂ ಮಳೆ ಸುರಿತ್ತಿರುವ ಬಗ್ಗೆ ವರದಿಯಾಗಿವೆ‌.

ಸುಳ್ಯ ತಾಲೂಕಿನ ವಿವಿಧೆಡೆ ಭಾರೀ ಮಳೆ,ತಂಪಾದ ಭೂಮಿ Read More »

ನಾಳೆ : ಪುನ್ಚತ್ತಾರು ಕರಿಮಜಲು ವಿಷ್ಣು‌ನಗರ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ ಪೂರ್ವಬಾವಿ ಸಭೆ

ಪುನ್ಚತ್ತಾರು ಕರಿಮಜಲು ವಿಷ್ಣು‌ನಗರ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ ಏಪ್ರಿಲ್ 2,3,4 ರಂದು ನಡೆಯಲಿದ್ದು ಇದರ ಪೂರ್ವಬಾವಿ ಸಭೆ ನಾಳೆ( ಫೆ22 ) ರಂದು ಶ್ರೀ ದೈವಸ್ಥಾನದ ಸಭಾಭವನದಲ್ಲಿ ನಡೆಯಲಿದೆ. ಎಲ್ಲಾ ಭಕ್ತರು ಈ ಸಭೆಗೆ ಆಗಮಿಸಿ ಸೂಕ್ತ ಸಲಹೆ ಸೂಚನೆ ನೀಡಬೇಕಾಗಿ ಆಡಳಿತ ಮಂಡಳಿ ಅಧ್ಯಕ್ಷರಾದ ಡಾ.ದೇವಿ ಪ್ರಸಾದ್ ಕಾನತ್ತೂರು ಹಾಗೂ ಆಡಳಿತ ಮೊಕ್ತೇಸರಾದ ವೆಂಕಟ್ರಮಣ ಆಚಾರ್ಯ ವಿಷ್ಣುಪುರ ವಿನಂತಿಸಿಕೊಂಡಿದ್ದಾರೆ.

ನಾಳೆ : ಪುನ್ಚತ್ತಾರು ಕರಿಮಜಲು ವಿಷ್ಣು‌ನಗರ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ ಪೂರ್ವಬಾವಿ ಸಭೆ Read More »

error: Content is protected !!
Scroll to Top