ಪ್ರಚಲಿತ

ಅರಂತೋಡು: ಚೆಂಬು ಸರ್ಕಾರಿ ಪ್ರೌಢ ಶಾಲೆಯಲ್ಲಿ ಎನ್ಎಂಪಿಯುಸಿ ಅರಂತೋಡು ಕಾಲೇಜಿನ 17ನೇ ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರ.

ಅರಂತೋಡು: ನೆಹರು ಸ್ಮಾರಕ ಪದವಿಪೂರ್ವ ಕಾಲೇಜು ಅರಂತೋಡು ಇಲ್ಲಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ 17 ನೇ ವಿಶೇಷ ವಾರ್ಷಿಕ ಶಿಬಿರ ಚೆಂಬು ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆಯಿತು.”ನಶಾ ಮುಕ್ತ ಭಾರತ ಅಭಿಯಾನ” ಘೋಷ ವಾಕ್ಯದಡಿಯಲ್ಲಿ ಶಿಬಿರ ಆಯೋಜಿಸಲಾಗಿತ್ತು. ಸ್ಥಳೀಯ ಪ್ರಗತಿಪರ ಕೃಷಿಕರಾದ ಶ್ರೀ ಚಂದ್ರಶೇಖರ್ ಹೊಸೂರು ದೀಪ ಬೆಳಗಿಸಿ ಶಿಬಿರವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಚೆಂಬು ಗ್ರಾಮ ಪಂಚಾಯತ್ ಅಧ್ಯಕ್ಷ ತೀರ್ಥರಾಮ ಪೂಜಾರಿಗದ್ದೆ, ಚೆಂಬು ಸರ್ಕಾರಿ ಪ್ರೌಢಶಾಲೆ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ರಮೇಶ್ ಕುಮಾರ್, […]

ಅರಂತೋಡು: ಚೆಂಬು ಸರ್ಕಾರಿ ಪ್ರೌಢ ಶಾಲೆಯಲ್ಲಿ ಎನ್ಎಂಪಿಯುಸಿ ಅರಂತೋಡು ಕಾಲೇಜಿನ 17ನೇ ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರ. Read More »

ಹಾರ್ದಿಕ್ ಪಾಂಡ್ಯ ಔಟ್, ರಿಂಕು ಸಿಂಗ್ ಫೈನಲ್‌ ಆಟಕ್ಕೆ ಆಯ್ಕೆ

ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಭಾರತಕ್ಕೆ ಆರಂಭಿಕ ಹಿನ್ನಡೆಯಾಗಿದೆ. ತಂಡದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಗಾಯದಿಂದಾಗಿ ಆಡುತ್ತಿಲ್ಲ. ಅವರ ಬದಲಿಗೆ ರಿಂಕು ಸಿಂಗ್ ಅವರಿಗೆ ಸ್ಥಾನ ನೀಡಲಾಗಿದೆ. ಶ್ರೀಲಂಕಾ ವಿರುದ್ಧದ ಕೊನೆಯ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ತಮ್ಮ ತೊಡೆಯನ್ನು ಹಿಡಿದು ಮೈದಾನದಿಂದ ಹೊರನಡೆದಿದ್ದರು. ಅವರು ಚೇತರಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ವರದಿಯಾಗಿದೆ. ನಿಖಿಲ್ ನಾಜ್ ಅವರ ವರದಿಯ ಪ್ರಕಾರ, ಹಾರ್ದಿಕ್ ಪಾಂಡ್ಯ ಯಾವುದೇ ಫೀಲ್ಡಿಂಗ್ ಕಸರತ್ತುಗಳನ್ನು ಮಾಡಿಲ್ಲ ಮತ್ತು ರಿಂಕು ಸಿಂಗ್‌ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ.

ಹಾರ್ದಿಕ್ ಪಾಂಡ್ಯ ಔಟ್, ರಿಂಕು ಸಿಂಗ್ ಫೈನಲ್‌ ಆಟಕ್ಕೆ ಆಯ್ಕೆ Read More »

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಿಂದ ಮತ್ತೆ ಪ್ರಾರಂಭವಾಗಲಿದೆ ಯಕ್ಷಗಾನ ಮೇಳ

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಿಂದ ಮತ್ತೆ ಯಕ್ಷಗಾನ ಮೇಳ ಪ್ರಾರಂಭವಾಗಲಿದ್ದು ಯಕ್ಷಗಾನ ಅಭಿಮಾನಿಗಳಲ್ಲಿ ಹೊಸ ಹುರುಪು ಮೂಡಿಸಿದೆ.ಆದಿಸುಬ್ರಹ್ಮಣ್ಯ ಕೃ‍ಪಾಪೋಷಿತ ಯಕ್ಷಗಾನ ನಾಟಕಸಭಾ ಸುಬ್ರಹ್ಮಣ್ಯ ಎಂಬ ಹೆಸರಿನ ಬಯಲಾಟ ಮೇಳವು 1990ರವರೆಗೆ ತಿರುಗಾಟ ನಡೆಸಿತ್ತು.ಪುತ್ತೂರು ಬನ್ನೂರಿನ ಶೀನಪ್ಪ ಭಂಡಾರಿ ಇದನ್ನು ಮುನ್ನಡೆಸುತ್ತಿದ್ದರು. ಅವರಿಗೆ ವಯಸ್ಸಾದ ನಂತರ ಮೇಳದ ತಿರುಗಾಟ ನಿಂತಿತ್ತು. ಇದೀಗ ಮತ್ತೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಹೆಸರಿನಲ್ಲಿ ತಿರುಗಾಟ ಪ್ರಾರಂಭಿಸಲಿರುವ ಮೇಳವು, ಸ್ಥಳ ಪುರಾಣದ ಕಥಾಹಂದರ ಹೊಂದಿರುವ ‘ಶ್ರೀ ಸುಬ್ರಹ್ಮಣ್ಯ ಕ್ಷೇತ್ರ ಮಹಾತ್ಮೆ’

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಿಂದ ಮತ್ತೆ ಪ್ರಾರಂಭವಾಗಲಿದೆ ಯಕ್ಷಗಾನ ಮೇಳ Read More »

ಸಹಕಾರ ರತ್ನ ಸವಣೂರು ಸೀತಾರಾಮ ರೈ ಯವರಿಗೆ ರಾಜ್ಯ ಮಟ್ಟದ ಗಾಂಧಿ ಸ್ಮೃತಿ ಪ್ರಶಸ್ತಿ

ಸುಳ್ಯ ಗಾಂಧಿ ಚಿಂತನಾ ವೇದಿಕೆ ವತಿಯಿಂದ ಅ. 2 ರಂದು ಸುಳ್ಯದಲ್ಲಿ ಗಾಂಧಿನಡಿಗೆ ನಡೆಯಲಿದ್ದು ಆ ಸಂದರ್ಭ ಸಹಕಾರ ರತ್ನ ಸವಣೂರು ಸೀತಾರಾಮ ರೈ ಯವರಿಗೆ ರಾಜ್ಯ ಮಟ್ಟದ ಗಾಂಧಿ ಸ್ಮೃತಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಗಾಂಧಿ ಚಿಂತನಾ ವೇದಿಕೆಯ ಪದಾಧಿಕಾರಿಗಳು ಸೆ. 27 ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ ತಿಳಿಸಿದ್ದಾರೆ.ವೇದಿಕೆಯ ಪ್ರಧಾನ ಸಂಚಾಲಕರಾದ ಹಿರಿಯ ಪತ್ರಕರ್ತ ಹರೀಶ್ ಬಂಟ್ವಾಳ್ ರವರು ಮಾತನಾಡಿ ” ವರ್ಷಂಪ್ರತಿ ವೇದಿಕೆ ವತಿಯಿಂದ ಅಕ್ಟೋಬರ್ 2 ರಂದು ಆಚರಿಸಿಕೊಂಡು ಬರುತ್ತಿರುವ ಗಾಂಧಿ

ಸಹಕಾರ ರತ್ನ ಸವಣೂರು ಸೀತಾರಾಮ ರೈ ಯವರಿಗೆ ರಾಜ್ಯ ಮಟ್ಟದ ಗಾಂಧಿ ಸ್ಮೃತಿ ಪ್ರಶಸ್ತಿ Read More »

ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿಗೆ ನೇಮಕಗೊಂಡ ಟಿ.ಎಂ ಶಹೀದ್ ರವರಿಗೆ ತೆಕ್ಕಿಲ್ ಕುಟುಂಬಸ್ಥರಿಂದ ಸನ್ಮಾನ

ಸೆ. 27 ರಂದು ಅರಂತೋಡು ಅಬ್ದುಲ್ ಲತೀಫ್ ಮೊಟ್ಟೆಂಗಾರ್ ರವರ ನಿವಾಸದಲ್ಲಿ ನಡೆದ ದಿ| ಮೊಟ್ಟೆಂಗಾರ್ ಮೊಹಮ್ಮದ್ ಹಾಜಿಯವರ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿತೆಕ್ಕಿಲ್ ಕುಟುಂಬಸ್ಥರಾದ ಅಶ್ರಫ್ ತೆಕ್ಕಿಲ್, ಟಿ.ಎಂ ಅಬ್ದುಲ್ ಲತೀಫ್ ತೆಕ್ಕಿಲ್, ಟಿ.ಎಂ ಅಬ್ದುಲ್ ರಜಾಕ್ ತೆಕ್ಕಿಲ್, ಟಿ.ಎಂ ಖಾಲಿದ್ ತೆಕ್ಕಿಲ್ ರವರು ಕರ್ನಾಟಕ ರಾಜ್ಯ ಕಾರ್ಮಿಕ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾಗಿ ಕರ್ನಾಟಕ ಸರಕಾರದಿಂದ ನೇಮಕಗೊಂಡ ಟಿ.ಎಂ ಶಹೀದ್ ತೆಕ್ಕಿಲ್ ರವರನ್ನು ಸನ್ಮಾನಿಸಿ ಗೌರವಿಸಿದರು. ಪೇರಡ್ಕ ಮುಹಿದ್ದೀನ್ ಜುಮಾ ಮಸೀದಿ ಖತೀಬರಾದ ಬಹು|

ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿಗೆ ನೇಮಕಗೊಂಡ ಟಿ.ಎಂ ಶಹೀದ್ ರವರಿಗೆ ತೆಕ್ಕಿಲ್ ಕುಟುಂಬಸ್ಥರಿಂದ ಸನ್ಮಾನ Read More »

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಮಾದಕ ದ್ರವ್ಯ ಜಾಗೃತಿ ಕಾರ್ಯಕ್ರಮ

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನಾ ಸಮಿತಿ ಹಾಗೂ ಪೊಲೀಸ್ ಇಲಾಖೆ, ಸುಳ್ಯ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಾದಕ ದ್ರವ್ಯ ಜಾಗೃತಿ ಕಾರ್ಯಕ್ರಮವು ನಡೆಯಿತು. ಕಾಲೇಜಿನ ಪ್ರಾಂಶುಪಾಲ ಡಾ. ರುದ್ರಕುಮಾರ್ ಎಂ ಎಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ದಕ್ಷಿಣ ಕನ್ನಡ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಬೂಮರೆಡ್ಡಿ ಮಾತನಾಡಿ ‘ನಮ್ಮ ದೇಶ ಅತ್ಯಂತ ಹೆಚ್ಚು ಯುವಜನತೆಯನ್ನು ಹೊಂದಿದ್ದು, ಯುವಶಕ್ತಿಯನ್ನು ಸಮರ್ಥವಾಗಿ ಬಳಸಿಕೊಂಡರೆ ದೇಶದ ಅಭಿವೃದ್ಧಿ ಸಾಧ್ಯ.

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಮಾದಕ ದ್ರವ್ಯ ಜಾಗೃತಿ ಕಾರ್ಯಕ್ರಮ Read More »

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಖ್ಯಾತ ಸಾಹಿತಿ ನಿರಂಜನರ ಜನ್ಮ ಶತಮಾನೋತ್ಸವ ಕಾರ್ಯಕ್ರಮ

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಸುಳ್ಯದ ಸಾಹಿತಿ ನಿರಂಜನರ ಜನ್ಮ ಶತಮಾನೋತ್ಸವದ ಪ್ರಯುಕ್ತ “ನಿರಂಜನ ಬದುಕು – ಬರಹ: ನೆನಪು” ಕಾರ್ಯಕ್ರಮವನ್ನು ಕಾಲೇಜಿನ ಕನ್ನಡ ಸಂಘ ಹಾಗೂ ಕನ್ನಡ ವಿಭಾಗದ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತು, ಸುಳ್ಯ ಹಾಗೂ ಕಾಲೇಜಿನ ಐಕ್ಯೂಎಸಿ ಆಶ್ರಯದಲ್ಲಿ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಕೆನರಾ ಬ್ಯಾಂಕಿನ ನಿವೃತ್ತ ಜನರಲ್ ಮ್ಯಾನೇಜರ್ ವೆಂಕಟೇಶ್ ಕೆ ಪ್ರಭು ಅವರು ಉದ್ಘಾಟಿಸಿ ಸಾಹಿತ್ಯ ಕ್ಷೇತ್ರದ ಮೂಲಕ ಸುಳ್ಯವನ್ನು ಜಗತ್ತಿಗೆ ಪರಿಚಯಿಸಿದನ್ನು, ಅವರ ಮನೆಯವರಿಗೂ ನಿರಂಜನರಿಗೂ ಇದ್ದ

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಖ್ಯಾತ ಸಾಹಿತಿ ನಿರಂಜನರ ಜನ್ಮ ಶತಮಾನೋತ್ಸವ ಕಾರ್ಯಕ್ರಮ Read More »

ನ.೫ಕ್ಕೆ ನಿಡ್ವಾಳ ಮಹಾವಿಷ್ಣು ದೇವಳದಲ್ಲಿ ಶ್ರೀ ಮಹಾವಿಷ್ಣು ಮಹಾಯಾಗ

ಸುಳ್ಯ ತಾಲೂಕಿನ ಐವತ್ತೊಕ್ಲು ಗ್ರಾಮದ ನಿಡ್ವಾಳ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ನ.೫ರಂದು ಶ್ರೀ ಮಹಾವಿಷ್ಣು ಮಹಾಯಾಗ ನಡೆಯಲಿದೆ ಎಂದು ಶ್ರೀ ಮಹಾವಿಷ್ಣು ಮಹಾಯಾಗದ ಸಮಿತಿ ಸಂಚಾಲಕ ವಿ.ಜೆ ವಿಖ್ಯಾತ್ ಸುಳ್ಯ ತಿಳಿಸಿದರು.ಅವರು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ರೃಷಿ ಪರಂಪರೆಯ, ಸನಾತನ ಹಿಂದೂ ಧರ್ಮದ ಉಳಿವಿಗಾಗಿ ಮತ್ತು ಲೋಕಕಲ್ಯಾಣಾರ್ಥವಾಗಿ ಹಾಗೂ ೨೦೨೬ನೇ ಎಪ್ರಿಲ್ ತಿಂಗಳಲ್ಲಿ ಶ್ರೀ ಮಹಾವಿಷ್ಣು ದೇವಸ್ಥಾನ ನಿಡ್ವಾಳ ಕರಿಕಳ ಇದರ ನೂತನ ದೇವಾಲಯದ ಲೋಕಾರ್ಪಣೆಯ ಪೂರ್ವಭಾವಿಯಾಗಿ ಕಾತಿಕ ಮಾಸ ಹುಣ್ಣಿಮೆಯ ನ.೫ರಂದು ಬೆಳಗ್ಗೆಯಿಂದ

ನ.೫ಕ್ಕೆ ನಿಡ್ವಾಳ ಮಹಾವಿಷ್ಣು ದೇವಳದಲ್ಲಿ ಶ್ರೀ ಮಹಾವಿಷ್ಣು ಮಹಾಯಾಗ Read More »

ಸಂಪಾಜೆ ಪಯಸ್ವಿನಿ ಪ್ರಾ.ಕೃ.ಪ.ಸಹಕಾರ ಸಂಘಕ್ಕೆ ಸ್ಕ್ಯಾಡ್ಸ್ ನ ಸಮಗ್ರ ಪ್ರಶಸ್ತಿ

ಕೊಡಗು ಸಂಪಾಜೆ ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ದ.ಕ ಕೃಷಿ ಅಭಿವೃದ್ಧಿ ಸಹಕಾರ ಸಂಘ ಕೊಡಮಾಡುವ ,ಕೃಷಿ ಯಂತ್ರೋಪಕರಣಗಳ ಮಾರಾಟ ಮತ್ತು ಸೇವಾ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಸಮಗ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಇಂದು ಮಂಗಳೂರಿನಲ್ಲಿ ನಡೆದ ಸಂಘದ ಮಹಾಸಭೆಯಲ್ಲಿ ಸ್ಕ್ಯಾಡ್ಸ್ ಅದ್ಯಕ್ಷರಾದ ಶ್ರೀ ರವೀಂದ್ರ ಕಂಬಳಿ ಮತ್ತು ನಿರ್ದೇಶಕರಾದ ಶ್ರೀ. ರವಿ ಬಸಪ್ಪ ರವರು ಪಯಸ್ವಿನಿ ಪ್ರಾ.ಕೃ.ಪ.ಸ.ಸಂಘದ ಅದ್ಯಕ್ಷರು ಶ್ರೀ. ಯನ್.ಸಿ.ಅನಂತ್ ಊರುಬೈಲು ಮತ್ತು ಸಿ ಇ ಒ ಶ್ರೀ. ಬಿ.ಕೆ.ಆನಂದ ರವರಿಗೆ ಪ್ರಶಸ್ತಿ

ಸಂಪಾಜೆ ಪಯಸ್ವಿನಿ ಪ್ರಾ.ಕೃ.ಪ.ಸಹಕಾರ ಸಂಘಕ್ಕೆ ಸ್ಕ್ಯಾಡ್ಸ್ ನ ಸಮಗ್ರ ಪ್ರಶಸ್ತಿ Read More »

ಮಂಡೆಕೋಲು ಸಹಕಾರಿ‌ ಸಂಘಕ್ಕೆ ಸ್ಕ್ಯಾಡ್ಸ್ ಜಿಲ್ಲಾ ಸಮಗ್ರ ಪ್ರಶಸ್ತಿ

ದಕ್ಷಿಣ ಕನ್ನಡ ಕೃಷಿ ಅಭಿವೃದ್ದಿ ಸಹಕಾರಿ ಸಂಘದ ವತಿಯಿಂದ ಕೊಡಮಾಡುವ ಸ್ಕ್ಯಾಡ್ಸ್ ಜಿಲ್ಲಾ ಸಮಗ್ರ ಪ್ರಶಸ್ತಿಗೆ ಮಂಡೆಕೋಲು ಪ್ರಾಥಮಿಕ ಕ್ರಷಿ ಪತ್ತಿನ ಸಹಕಾರ ಸಂಘ ಭಾಜನವಾಗಿದ್ದು, ಸೆ.25ರಂದು ನಡೆದ ಮಹಾಸಭೆಯಲ್ಲಿ ಪ್ರಶಸ್ತಿ ಪ್ರದಾನ ನಡೆಯಿತು.ಕಳೆದ ಏಳು ವರ್ಷದಿಂದ ಸ್ಕ್ಯಾಡ್ಸ್ ಜೊತೆಗಿನ ವ್ಯವಹಾರಕ್ಕಾಗಿ ಮಂಡೆಕೋಲು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದೆ.ಈ ವರ್ಷ ವಿಶೇಷವಾಗಿ ಸಂಸ್ಥೆಯು ಜಿಲ್ಲೆಯ ಸಮಗ್ರ ಪ್ರಶಸ್ತಿಯನ್ನು ಪಡಕೊಂಡಿದೆ.

ಮಂಡೆಕೋಲು ಸಹಕಾರಿ‌ ಸಂಘಕ್ಕೆ ಸ್ಕ್ಯಾಡ್ಸ್ ಜಿಲ್ಲಾ ಸಮಗ್ರ ಪ್ರಶಸ್ತಿ Read More »

error: Content is protected !!
Scroll to Top