ಪ್ರಚಲಿತ

ಪೆರಾಜೆ,ಸಂಪಾಜೆ ಭಾಗಗಳಲ್ಲಿ ಕಾಡಾನೆಗಳಿಂದ ಹೆಚ್ಚಿದ ಸಮಸ್ಯೆ, ಅರಣ್ಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಶಾಸಕಿ ಭಾಗೀರಥಿ ಮುರುಳ್ಯ

ಪೆರಾಜೆ, ಸಂಪಾಜೆ, ಅರಂಬೂರು ಸೇರಿದಂತೆ ಸುಳ್ಯ ತಾಲೂಕಿನಾದ್ಯಂತ ವ್ಯಾಪ್ತಿಯಲ್ಲಿ ವ್ಯಾಪಕವಾಗಿ ಕಾಡಾನೆಗಳಿಂದ ಬೆಳೆ ನಾಶವಾಗುತ್ತಿದ್ದು ಈ ಹಿನ್ನಲೆಯಲ್ಲಿ ಆನೆ ಹಾವಳಿ ಸಮಸ್ಯೆ ಕುರಿತು ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯತ್‌ನ ಶಾಸಕರ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸೆ.25 ರಂದು ಸಭೆ ನಡೆಸಿ ಚರ್ಚಿಸಲಾಯಿತು.ತಾಲೂಕಿನಾದ್ಯಂತ ಕಾಡಾನೆ ಉಪಟಳ ಹೆಚ್ಚಾಗಿದ್ದು ಕೃಷಿಯನ್ನು ಹಾಳು ಸಂಪೂರ್ಣ ಹಾಳುಮಾಡುತ್ತಿದೆ. ಇದರಿಂದ ಕೃಷಿಯನ್ನು ಅವಲಂಬಿಸಿದ ಕೃಷಿಕರು ಸಮಸ್ಯೆಗೆ ಪಾಲಾಗಿದ್ದಾರೆ. ಹಾಗೂ. ಪೂಮಲೆ ಕಾಡಿನಿಂದ ಬರುವ ಆನೆಗಳ ಹಿಂಡು ರಸ್ತೆಯ ಮುಖಾಂತರ ಕೃಷಿಕರ ತೋಟಗಳಿಗೆ ನುಗ್ಗಿ […]

ಪೆರಾಜೆ,ಸಂಪಾಜೆ ಭಾಗಗಳಲ್ಲಿ ಕಾಡಾನೆಗಳಿಂದ ಹೆಚ್ಚಿದ ಸಮಸ್ಯೆ, ಅರಣ್ಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಶಾಸಕಿ ಭಾಗೀರಥಿ ಮುರುಳ್ಯ Read More »

ಅಜ್ಜಾವರ : ಚೈತನ್ಯ ಸೇವಾಶ್ರಮದಲ್ಲಿ ನವರಾತ್ರಿ ಪ್ರಯುಕ್ತ ದುರ್ಗಾಪೂಜೆ ಸಹಿತ ವಿವಿಧ ಕಾರ್ಯಕ್ರಮ

ಅಜ್ಜಾವರ ಚೈತನ್ಯ ಸೇವಾಶ್ರಮದಲ್ಲಿ ನವರಾತ್ರಿ ಪ್ರಯುಕ್ತ ಗಣಹೋಮ,ದುರ್ಗಾಪೂಜೆ,ಭಜನಾ‌ ಸತ್ಸಂಗ ಕಾರ್ಯಕ್ರಮ ಹಾಗೂ ಆಶ್ರಮದ ಸ್ವಾಮೀಜಿ ಶ್ರೀ ಯೋಗೇಶ್ವರಾನಂದ ಸರಸ್ವತಿಯವರ 230ನೇ ಕೃತಿಮಾಲೆ ಜೀವನ್ಮುಕ್ತನಾಗು ಬಿಡುಗಡೆ ಸಮಾರಂಭ ನಡೆಯಿತು.ಸುಳ್ಯ ಕೆ.ವಿ.ಜಿ ಕಾನೂನು ಕಾಲೇಜಿನ‌ ಉಪನ್ಯಾಸಕಿ ಸವಿತ ಸ್ವಾಮೀಜಿಯವರ ಕೃತಿಮಾಲೆಯನ್ನು ಬಿಡುಗಡೆಗೊಳಿಸಿ ಮಾತನಾಡಿ ಸ್ವಾಮೀಜಿಯರು ಪುಸ್ತಕ ಬರೆದು ಉಚಿತವಾಗಿ ವಿತರಣೆ ಮಾಡುತ್ತಿರುವುದು ಶ್ರೇಷ್ಠ ಕೆಲಸವಾಗಿದೆ.ಇವರ ಸರಳ ಬರಣಿಗೆ ಸುಲಭವಾಗಿ ಅರ್ಥವಾಡಿಕೊಂಡು ಓದಬಹುದಾಗಿದೆ.ಎಲ್ಲರೂ ಪುಸ್ತಕಕೊಂಡು ಓದಿ ಎಂದು ಹೇಳಿದರು.ಸ್ವಾಮೀಜಿಯವರು ನವರಾತ್ರಿಯ ವಿಶೇಷತೆಯ ಬಗ್ಗೆ ತಿಳಿಸಿದರು.ವೇಣುಗೋಪಾಲ ಅಡೂರು,ಚಿತ್ರಕುಮಾರ ಮುಡೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.ಡಾ.ಸಾಯಿಗೀತಾ,ಶಿಕ್ಷಕಿ

ಅಜ್ಜಾವರ : ಚೈತನ್ಯ ಸೇವಾಶ್ರಮದಲ್ಲಿ ನವರಾತ್ರಿ ಪ್ರಯುಕ್ತ ದುರ್ಗಾಪೂಜೆ ಸಹಿತ ವಿವಿಧ ಕಾರ್ಯಕ್ರಮ Read More »

ಕರ್ನಾಟಕ ರಾಜ್ಯ ಕಾರ್ಮಿಕ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷರಾಗಿ ಟಿ. ಎಂ. ಶಹೀದ್ ನೇಮಕ

ಅರಂತೋಡಿನ ಪ್ರಭಾವಿ ನಾಯಕ ಟಿ.ಎಂ ಶಾಹಿದ್ ತೆಕ್ಕಿಲ್ ರವರು ಕರ್ನಾಟಕ ರಾಜ್ಯ ಕಾರ್ಮಿಕ ಕನಿಷ್ಠ ವೇತನ ಮಂಡಳಿ ಅಧ್ಯಕ್ಷರಾಗಿ ರಾಜ್ಯ ಸರಕಾರದಿಂದ ನೇಮಕಗೊಂಡಿರುತ್ತಾರೆ. ರಾಜಕೀಯದಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿರುವ ಕ್ರಿಯಾಶೀಲ ರಾಜಕಾರಣಿ ಟಿ.ಎಂ ಶಾಹಿದ್ ತೆಕ್ಕಿಲ್ ರವರು ಸುಳ್ಯ ತಾಲೂಕು ಎನ್.ಎಸ್.ಯು.ಐ ನ ಪ್ರಧಾನ ಕಾರ್ಯದರ್ಶಿಯಾಗಿ, ಜಿಲ್ಲಾ ಎನ್ ಎಸ್ ಯು ಐ ಪ್ರಧಾನ ಕಾರ್ಯದರ್ಶಿಯಾಗಿ, ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ರಾಜ್ಯ ಎನ್.ಎಸ್.ಯು.ಐ ಪ್ರಧಾನ ಕಾರ್ಯದರ್ಶಿಯಾಗಿ, ರಾಜ್ಯ ಯುವ ಕಾಂಗ್ರೇಸ್ ನ ಪ್ರಧಾನ

ಕರ್ನಾಟಕ ರಾಜ್ಯ ಕಾರ್ಮಿಕ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷರಾಗಿ ಟಿ. ಎಂ. ಶಹೀದ್ ನೇಮಕ Read More »

ಕೈ ರುಚಿ..ಅತಿರಸ ಅತ್ರಾಸ ಕಜ್ಜಾಜಯ

ಮನೆಯಲ್ಲಿ ಚಿಕ್ಕ ಚಿಕ್ಕ ವಿಷಯಗಳು ಸಂತೋಷವನ್ನು ನೀಡುತ್ತದೆ ಆಹಾರದ ಬಗ್ಗೆ ಸ್ವಲ್ಪ ಹೊಗಳಿಕೆ ಸಿಕ್ಕಿದರಂತೂ ಬಹಳ ಖುಷಿ ಪಡುವ ನಮ್ಮವರು ಅವರ ಜೊತೆ ಸ್ವಲ್ಪ ಹೆಜ್ಜೆ ಹಾಕಿದರಂತೂ ಸ್ವರ್ಗಕ್ಕೆ ಹೋಗಿ ಬಂದ ಅನುಭವ ಬೇರೆ ತಿನ್ನೋದರಲ್ಲಿ ಬಾಯಿಯ ಕಂಟ್ರೋಲ್ ಯಾಕೆ…! ಇಂತಹ ಸಾತ್ವಿಕ ಆಹಾರ ಸವಿ ಸವಿ ರುಚಿಯ ದಿಡೀರಾಗಿ ಅತಿರಸ ಎಂದಾಗಲೇ ಬಾಯಿಯಲ್ಲಿ ನೀರೂರಿಸುವ ಜನ ಸವಿಯಲು ಅತ್ಯಂತ ರುಚಿಕರವಾದ ತಿಂಡಿ ಸ್ವಾದ ಬಾಯಿ ಚಪ್ಪರಿಸಿ ಸವಿಯೋದಕ್ಕೆ ಬೆಸ್ಟ್ ಫುಡ್ ಸವಿದು ಮೆಚ್ಚಿಗೆ ಸೂಚಿಸಿದ ಜನ

ಕೈ ರುಚಿ..ಅತಿರಸ ಅತ್ರಾಸ ಕಜ್ಜಾಜಯ Read More »

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಖ್ಯಾತ ಸಾಹಿತಿ ನಿರಂಜನರ ಜನ್ಮ ಶತಮಾನೋತ್ಸವದ ಪ್ರಯುಕ್ತ  “ನಿರಂಜನ ಬದುಕು –  ಬರಹ:  ನೆನಪು”  ಕಾರ್ಯಕ್ರಮ

ಅಂತಾರಾಷ್ಟ್ರೀಯ ಖ್ಯಾತಿಯ ಸುಳ್ಯದ ಸಾಹಿತಿ ನಿರಂಜನರೆಂದೇ ಪ್ರಸಿದ್ಧರಾದ ಕುಲ್ಕುಂದ ಶಿವರಾಯರ ಜನ್ಮ ಶತಮಾನೋತ್ಸವದ ಪ್ರಯುಕ್ತ “ನಿರಂಜನ ಬದುಕು – ಬರಹ : ನೆನಪು” ಕಾರ್ಯಕ್ರಮವನ್ನು ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಸೆಪ್ಟೆಂಬರ್ 26,2025ನೇ ಶುಕ್ರವಾರದಂದು ಹಮ್ಮಿಕೊಳ್ಳಲಾಗಿದೆ. ಕಾಲೇಜಿನ ಕನ್ನಡ ಸಂಘ ಹಾಗೂ ಕನ್ನಡ ವಿಭಾಗದ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತು, ಸುಳ್ಯ ಹಾಗೂ ಕಾಲೇಜಿನ ಐಕ್ಯೂಎಸಿ ಆಶ್ರಯದಲ್ಲಿ ಹಮ್ಮಿಕೊಂಡ ಕಾರ್ಯಕ್ರಮವನ್ನು ಕೆನರಾ ಬ್ಯಾಂಕಿನ ನಿವೃತ್ತ ಜನರಲ್ ಮ್ಯಾನೇಜರ್ ವೆಂಕಟೇಶ್ ಕೆ ಪ್ರಭು ಅವರು ಉದ್ಘಾಟಿಸಲಿದ್ದು, ಕಾಲೇಜಿನ ಪ್ರಾಂಶುಪಾಲರಾದ

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಖ್ಯಾತ ಸಾಹಿತಿ ನಿರಂಜನರ ಜನ್ಮ ಶತಮಾನೋತ್ಸವದ ಪ್ರಯುಕ್ತ  “ನಿರಂಜನ ಬದುಕು –  ಬರಹ:  ನೆನಪು”  ಕಾರ್ಯಕ್ರಮ Read More »

ಅರಂಬೂರಿನ‌ಲ್ಲಿ ಶ್ರೀಕೃಷ್ಣ ರಸಪಾಕ ಗ್ರ್ಯಾಂಡ್ ಸಸ್ಯಹಾರಿ ಹೋಟೆಲ್ ಶುಭಾರಂಭ

ಸುಳ್ಯದ ಅರಂಬೂರಿನಲ್ಲಿ ನಾರಾಯಣ ಕೇಕಡ್ಕ ಹಾಗೂ ಕೃಷ್ಣ ಕಾಮತ್ ರವರ ಪಾಲುದಾರಿಕೆಯಲ್ಲಿ ಶ್ರೀಕೃಷ್ಣ ರಸಪಾಕ ಗ್ರ್ಯಾಂಡ್ ಸಸ್ಯಹಾರಿ ಹೋಟೆಲ್ ಸೆ.24ರಂದು ಶುಭಾರಂಭಗೊಂಡಿತು.ಎಡನೀರು ಮಠದ ಸಚ್ಚಿಸಾನಂದ ಭಾರತೀ ಸ್ವಾಮೀಜಿಯವರು ದೀಪ ಬೆಳಗಿ ಹೋಟೆಲ್ ಉದ್ಘಾಟಿಸಿ ಶುಭ ಹಾರೈಸಿದರು.ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ರಿಬ್ಬನ್ ಕತ್ತರಿಸಿ ಹೋಟೆಲ್ ಲೋಕಾರ್ಪಣೆ ಮಾಡಿದರು.ಹವಾನಿಯಂತ್ರಿತ ಕೊಠಡಿಯನ್ನು ಶಾಸಕಿ ಕು.ಭಾಗೀರಥಿ ಮುರುಳ್ಯ ಉದ್ಘಾಟಿಸಿದರು.ಕುಂಟಾರು ರವೀಶ ತಂತ್ರಿ ಹಾಗೂ ದೇಲಂಪಾಡಿ ಗಣೇಶ್ ತಂತ್ರಿಯವರು ಆಶೀರ್ವಚನ ನೀಡಿದರು.ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಎಸ್.ಅಂಗಾರ, ಕಾಸರಗೋಡು ಕಾಮತ್ ಮೆಡಿಕಲ್

ಅರಂಬೂರಿನ‌ಲ್ಲಿ ಶ್ರೀಕೃಷ್ಣ ರಸಪಾಕ ಗ್ರ್ಯಾಂಡ್ ಸಸ್ಯಹಾರಿ ಹೋಟೆಲ್ ಶುಭಾರಂಭ Read More »

ಮೈಸೂರು ದಸರಾದಲ್ಲಿ ಸಂದೀಪ್ ದೇವಾಡಿಗರಿಂದ ಸ್ಯಾಕ್ಸೋಫೋನ್ ಕಚೇರಿ ಕಾರ್ಯಕ್ರಮ

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಕರುನಾಡ ಕಲ್ಪತರು ರಾಜ್ಯ ಪ್ರಶಸ್ತಿ ವಿಜೇತ ಸಂದೀಪ್ ದೇವಾಡಿಗ ಅರಿಯಡ್ಕ ಅವರ ತಂಡವು ಸ್ಯಾಕ್ಸೋಫೋನ್ ಕಚೇರಿ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದಾರೆ.ನಾಡಹಬ್ಬದ ವಿಶೇಷ ಕಾರ್ಯಕ್ರಮವಾಗಿ ಸೆ.30 ರ, 2025ರಂದು ಸಂಜೆ 5 ಗಂಟೆಗೆ ಮೈಸೂರಿನ ಕರ್ನಾಟಕ ಕಲಾ ಮಂದಿರದಲ್ಲಿ ಸಂದೀಪ್ ದೇವಾಡಿಗ ಅವರ ಸ್ಯಾಕ್ಸೋಫೋನ್ ಕಚೇರಿ ಜರುಗಲಿದೆ.ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮದ ಮೂಲದ ಸಂದೀಪ್ ದೇವಾಡಿಗ, ರಾಜ್ಯ ಹಾಗೂ ದೇಶದಾದ್ಯಂತ ಅನೇಕ ಕಾರ್ಯಕ್ರಮಗಳಲ್ಲಿ ಸ್ಯಾಕ್ಸೋಫೋನ್ ವಾದನ ನೀಡಿದ್ದು, ಸಂಗೀತ ಪ್ರಿಯರಿಂದ ಅಪಾರ ಮೆಚ್ಚುಗೆ

ಮೈಸೂರು ದಸರಾದಲ್ಲಿ ಸಂದೀಪ್ ದೇವಾಡಿಗರಿಂದ ಸ್ಯಾಕ್ಸೋಫೋನ್ ಕಚೇರಿ ಕಾರ್ಯಕ್ರಮ Read More »

ಅರಂಬೂರು : ಇಂದು ನೂತನ ಹೋಟೆಲ್ ‘ಶ್ರೀಕೃಷ್ಣ ರಸಪಾಕ ಗ್ರಾಂಡ್’ ಶುಭಾರಂಭ

ಸುಳ್ಯ ನಗರ ಸಮೀಪ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ನವರಸಗಳ ರಸಪಾಕದ ಖಾದ್ಯಗಳನ್ನು ಉಣಬಡಿಸುವ ನೂತನ ಹೋಟೆಲ್ ‘ಶ್ರೀಕೃಷ್ಣ ರಸಪಾಕ ಗ್ರಾಂಡ್’ ಸೆ.24ರಂದು ಶುಭಾರಂಭಗೊಳ್ಳುತಿದೆ. ರಸಪಾಕ ಗ್ರೂಪ್‌ನ ಈ ನೂತನ ಹೋಟೆಲ್‌ನಲ್ಲಿ ದೇಶದ ಎಲ್ಲಾ ವಿಧದ ಸಸ್ಯಾಹಾರಿ ಖಾದ್ಯಗಳು ದೊರೆಯುವ ರುಚಿ ವೈವಿಧ್ಯತೆಯ ತಾಣವಾಗಲಿದೆ.ಉತ್ತರ ಭಾರತದ ಎಲ್ಲಾ ಸಸ್ಯಾಹಾರಿ ಊಟ ಉಪಹಾರಗಳು, ಜೈನ್ಸ್ ಫುಡ್‌ಗಳು, ಚೈನೀಸ್ ಖಾದ್ಯಗಳು, ರುಚಿ ವೈವಿಧ್ಯತೆಯ ಚಾರ್ಟ್ಸ್ಗಳು, ಫ್ರೆಶ್ ಜ್ಯೂಸ್, ಐಸ್‌ಕ್ರೀಂ ಸೇರಿದಂತೆ ಎಲ್ಲಾ ವರ್ಗದವರಿಗೂ ಇಷ್ಟವಾಗುವ ಎಲ್ಲಾ ಊಟ, ಉಪಾಹಾರಗಳು ಅತ್ಯಂತ

ಅರಂಬೂರು : ಇಂದು ನೂತನ ಹೋಟೆಲ್ ‘ಶ್ರೀಕೃಷ್ಣ ರಸಪಾಕ ಗ್ರಾಂಡ್’ ಶುಭಾರಂಭ Read More »

ತೆಕ್ಕಿಲ್ ಪ್ರತಿಷ್ಠಾನದ ವತಿಯಿಂದ ಪೌರಾಡಳಿತ ಮತ್ತು ಹಜ್ಜ್ ಸಚಿವ ರಹೀಂ ಖಾನ್ ಅವರಿಗೆ ಸನ್ಮಾನ

ಕರ್ನಾಟಕ ಸರಕಾರದ ಪೌರಾಡಳಿತ ಮತ್ತು ಹಜ್ಜ್ ಸಚಿವರಾದ ರಹೀಂ ಖಾನ್ ರವರು ಸೆ.21 ರಂದು ಅರಂತೋಡು ಟಿ.ಎಂ ಶಹೀದ್ ತೆಕ್ಕಿಲ್ ರವರ ತೆಕ್ಕಿಲ್ ನಿವಾಸಕ್ಕೆ ಭೇಟಿ ನೀಡಿದರು. ಸಂಧರ್ಭದಲ್ಲಿ ಅವರನ್ನು ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ವತಿಯಿಂದ ಸ್ಥಾಪಕಾಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್ ರವರು ಶಾಲು ಹೊದಿಸಿ ಸ್ಮರಣಿಕೆಯನ್ನು ನೀಡಿ ಸನ್ಮಾನಿಸಿದರು. ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು ಸಂಸ್ಥೆಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮುಂದಿನ ದಿನದಲ್ಲಿ ಸುಳ್ಯಕ್ಕೆ ವಿಶೇಷ ಅನುದಾನವನ್ನು ಒದಗಿಸುವುದಾಗಿ ಭರವಸೆ ನೀಡಿದರು. ಸುಳ್ಯ ನಗರ

ತೆಕ್ಕಿಲ್ ಪ್ರತಿಷ್ಠಾನದ ವತಿಯಿಂದ ಪೌರಾಡಳಿತ ಮತ್ತು ಹಜ್ಜ್ ಸಚಿವ ರಹೀಂ ಖಾನ್ ಅವರಿಗೆ ಸನ್ಮಾನ Read More »

ಅಂಜಲಿ ಮಾಂಟೆಸ್ಸರಿ ಶಾಲೆಯಲ್ಲಿನವರಾತ್ರಿಯ ಪ್ರಯುಕ್ತ 4 ನೇ ವರ್ಷದ ಗೊಂಬೆ ಹಬ್ಬದ ಉದ್ಘಾಟನೆ

ಅಂಜಲಿ ಮಾಂಟೆಸ್ಸರಿ ಶಾಲೆಯಲ್ಲಿ ದಿನಾಂಕ 22/9/2025 ರಂದು ನವರಾತ್ರಿ ಪ್ರಯುಕ್ತ 4 ನೇ ವರ್ಷದ ಗೊಂಬೆ ಹಬ್ಬ ಉದ್ಘಾಟನೆಗೊಂಡಿತು.ಕಾರ್ಯಕ್ರಮವನ್ನು ಕೆಂಪೇಗೌಡ ಪ್ರಶಸ್ತಿ ಪುರಸ್ಕೃತ ಶ್ರೀಯುತ .ನಿತ್ಯಾನಂದ ಮುಂಡೋಡಿ ಅವರು ಉದ್ಘಾಟಿಸಿ ಶಾಲೆ ಹಾಗೂ ಕಾರ್ಯಕ್ರಮದ ಕುರಿತು ಮಾತನಾಡಿ ಶುಭ ಹಾರೈಸಿದರು. ಗೊಂಬೆ ಹಬ್ಬದ ಮಹತ್ವ ಹಾಗೂ ವಿಶೇಷತೆಯನ್ನು ಶಾಲಾ ಸಂಚಾಲಕಿ ಗೀತಾಂಜಲಿ ಟಿ. ಜಿ ಅವರು ವಿವರಿಸಿದರು . ರಾಮ, ಲಕ್ಷ್ಮಣ , ಸೀತಾ , ಹನುಮಂತ ಜೊತೆಗೆ ಶಾರದೆ , ಲಕ್ಷ್ಮೀ, ಸರಸ್ವತಿ, ನವದುರ್ಗೆಯರಾಗಿ ಹಾಗೂ

ಅಂಜಲಿ ಮಾಂಟೆಸ್ಸರಿ ಶಾಲೆಯಲ್ಲಿನವರಾತ್ರಿಯ ಪ್ರಯುಕ್ತ 4 ನೇ ವರ್ಷದ ಗೊಂಬೆ ಹಬ್ಬದ ಉದ್ಘಾಟನೆ Read More »

error: Content is protected !!
Scroll to Top