ಬುಡಗಟ್ಟು ಹಾಗೂ ನಿರ್ಲಕ್ಷಿತ ಭಾಷೆಗಳಿಗೆ ಹಂತ ಹಂತವಾಗಿ ಅಕಾಡಮಿಗಳು ಸ್ಥಾಪಿತಗೊಳ್ಳುವ ಅವಶ್ಯಕತೆ ಇದೆ : ತೇಜಕುಮಾರ್ ಬಡ್ಡಡ್ಕ
ಸುಳ್ಯ : ಬುಡಗಟ್ಟು ಹಾಗೂ ನಿರ್ಲಕ್ಷಿತ ಭಾಷೆಗಳಿಗೂ ಹಂತ ಹಂತವಾಗಿ ಅಕಾಡಮಿಗಳನ್ನು ಸ್ಥಾಪಿಸುವ ಅವಶ್ಯಕತೆ ಇದೆ ಎಂದು ಸುಳ್ಯ ತಾಲೂಕು 28ನೇ ಸಾಹಿತ್ಯ ಸಮ್ಮೇಳನದ ಸರ್ವ ಅಧ್ಯಕ್ಷ ತೇಜಕುಮಾರ್ ಬಡ್ಡಡ್ಕ ಹೇಳಿದ್ದಾರೆ.ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸುಳ್ಯ ತಾಲೂಕು ಘಟಕ, ಸಮ್ಮೇಳನ ಸ್ವಾಗತ ಸಮಿತಿ ನೇತ್ರತ್ವದಲ್ಲಿ ಕುಕ್ಕುಜಡ್ಕ ಚೊಕ್ಕಾಡಿ ವಿದ್ಯಾಸಂಸ್ಥೆಯಲ್ಲಿ ನಡೆಯುತ್ತಿರುವ 28ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಪ್ರಾಕೃತಿಕ ದಟ್ಟಣೆಯು ವಿರಳವಾಗುತ್ತಿರುವಂತೆ ನಾವುಗಳು ವಿಕಾಸದಿಂದ ವಿನಾಶದೆಡೆಗೆ ಸಾವಧಾನದ ಹೆಜ್ಜೆ […]










