ಪ್ರಚಲಿತ

ಅಕ್ಷತಾ ನಾಗನಕಜೆಯವರಿಗೆ ದಿನಕರ ದೇಸಾಯಿ ಪ್ರಶಸ್ತಿ

ಅಕ್ಷರನಾದ ಕಲೆ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಕರ್ನಾಟಕ, ಅಕ್ಷರನಾದ ಪಬ್ಲಿಕೇಶನ್ಸ್ ಎ ಎಸ್ ಟಿ ಆರ್ ಬೆಂಗಳೂರು ಇವರು ಆಯೋಜಿಸಿರುವ “ಚುಟುಕು ಬ್ರಹ್ಮ” ಡಾ|| ದಿನಕರ ದೇಸಾಯಿಯವರ ಸವಿನೆನಪಿನಲ್ಲಿ “ರಾಜ್ಯ ಮಟ್ಟದ ಕವಿನುಡಿ ಸಂಭ್ರಮ ಮೂರನೇ ಆವೃತ್ತಿ-2025” ಬೆಂಗಳೂರಿನಲ್ಲಿ ನಡೆದ ಪ್ರಶಸ್ತಿ ಸಮಾರಂಭದಲ್ಲಿ ಪೆರುವಾಜೆ ಗ್ರಾಮ ಪಂಚಾಯತ್ ನ ಅಕ್ಷತಾ ನಾಗನಕಜೆ ಯವರಿಗೆ “ದಿನಕರ ದೇಸಾಯಿ” ಪ್ರಶಸ್ತಿಯನ್ನು ಡಾ. ಶ್ರುತಿ ಮಧುಸೂದನ್ ಪ್ರಧಾನ ಸಂಪಾದಕರು ಅಕ್ಷರನಾದ ಪಬ್ಲಿಕೇಶನ್ಸ್ ಕರ್ನಾಟಕ ಇವರು ಗಣ್ಯರ ಸಮ್ಮುಖದಲ್ಲಿ ನೀಡಿ ಗೌರವಿಸಿದರು.

ಅಕ್ಷತಾ ನಾಗನಕಜೆಯವರಿಗೆ ದಿನಕರ ದೇಸಾಯಿ ಪ್ರಶಸ್ತಿ Read More »

ತೊಡಿಕಾನ : ಮಲ್ಲಿಕಾರ್ಜುನ ದೇವಳದಲ್ಲಿ ಕಳೆದ ಒಂದು ತಿಂಗಳಿಂದ ನಡೆಯುತ್ತಿದ್ದ ಧನುಪೂಜೆ ಸಂಪನ್ನ,ಸಾವಿರಾರು ಭಕ್ತರು ಭಾಗಿ

ಪುರಾಣ ಪ್ರಸಿದ್ದ ಸುಳ್ಯ ಸೀಮೆಯ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಧನುರ್ ಮಾಸ ಪ್ರಯುಕ್ತ ಡಿ.16ರಿಂದ ಧನು ಪೂಜೆ ಆರಂಭಗೊಂಡಿದ್ದ ಜ.14ರಂದು ಸಮಾಪ್ತಿಯಾಯಿತು.ಇಂದು (ಮಂಗಳವಾರ) ಮಕರ ಸಂಕ್ರಾತಿಯಂದು ಧನುರ್ ಮಾಸದ ಕೊನೆಯ ಧನುಪೂಜೆ ನಡೆಯಿತು.ಧನುಪೂಜೆಯ ಮೊದಲು ಭಜನಾ ಸತ್ಸಂಗ ,ನ್ರತ್ಯ ಭಜನೆ ನಡೆಯಿತು.ಧನುಪೂಜೆಯ ಬಳಿಕ ಪ್ರಸಾದ ವಿತರಿಸಲಾಯಿತು.ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ನಿಕಟ ಪೂರ್ವ ಅಧ್ಯಕ್ಷರು,ಮಾಜಿ ಅಧ್ಯಕ್ಷರು ಸದಸ್ಯರು, ಸಿಬ್ಬಂದಿ ವರ್ಗದವರು, ಊರಿನ‌ ಹಾಗೂ ಪರ ಊರಿನ ಸಾವಿರಾರು ಭಕ್ತರು ಧನು ಪೂಜೆಯಲ್ಲಿ ಭಾಗವಹಿಸಿ ಶ್ರೀ ದೇವರ

ತೊಡಿಕಾನ : ಮಲ್ಲಿಕಾರ್ಜುನ ದೇವಳದಲ್ಲಿ ಕಳೆದ ಒಂದು ತಿಂಗಳಿಂದ ನಡೆಯುತ್ತಿದ್ದ ಧನುಪೂಜೆ ಸಂಪನ್ನ,ಸಾವಿರಾರು ಭಕ್ತರು ಭಾಗಿ Read More »

ಏಪ್ರಿಲ್, ಮೇನಲ್ಲಿ ಜಿಪಂ, ತಾಪಂ ಚುನಾವಣೆ ಆಯುಕ್ತರಿಂದ ಮಾಹಿತಿ

ಜಿಪಂ, ತಾಪಂ ಚುನಾವಣೆ ನಡೆದಿಲ್ಲ. ಮೀಸಲಾತಿ ಅಂತಿಮ ಪಟ್ಟಿ ಕೈಸೇರುತ್ತಿದ್ದಂತೆ ವೇಳಾಪಟ್ಟಿ ಪ್ರಕಟಿಸಲಾಗುವುದು. ಏಪ್ರಿಲ್ ಅಥವಾ ಮೇನಲ್ಲಿ ಚುನಾವಣೆ ನಿಗದಿ ಮಾಡುತ್ತೇವೆ ಎಂದು ರಾಜ್ಯ ಚುನಾವಣೆ ಆಯುಕ್ತ ಜಿ.ಎಸ್.ಸಂಗ್ರೇಶಿ ಹೇಳಿದರು. ಬೆಳಗಾವಿ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅವರು ಮಾತನಾಡಿ, ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸುವ ಪ್ರಯತ್ನ ಮಾಡುತ್ತೇವೆ. ಈ ನಿಟ್ಟಿನಲ್ಲಿ ಅಧಿಕಾರಿಗಳ ಜತೆ ಸಭೆ ಮಾಡಿದ್ದೇವೆ. ಸಂಬಂಧಪಟ್ಟ ರಾಜಕೀಯ ಪಕ್ಷಗಳ ಜತೆಗೆ ಸಭೆ ಮಾಡಿದ ಬಳಿಕ ತೀರ್ಮಾನ ಮಾಡುತ್ತೇವೆ ಎಂದರು. ಇತ್ತೀಚೆಗೆ ಚುನಾವಣೆಗಳ ಫಲಿತಾಂಶದ

ಏಪ್ರಿಲ್, ಮೇನಲ್ಲಿ ಜಿಪಂ, ತಾಪಂ ಚುನಾವಣೆ ಆಯುಕ್ತರಿಂದ ಮಾಹಿತಿ Read More »

ಮತ್ತೆ ಸೈಕ್ಲೋನ್ ಎಫೆಕ್ಟ್: ಕರ್ನಾಟಕ ಸೇರಿ ಹಲವೆಡೆ ಮಳೆ ಮುನ್ಸೂಚನೆ

ಚಂಡಮಾರುತ ಹಿನ್ನೆಲೆ, ಇಂದಿನಿಂದ ಜನವರಿ 16 ರವರೆಗೆ ಕರ್ನಾಟಕ ಸೇರಿ ದೇಶಾದ್ಯಂತ 20 ಕ್ಕೂ ಹೆಚ್ಚು ರಾಜ್ಯಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇಂದು ಪಶ್ಚಿಮ ಹಿಮಾಲಯ ಪ್ರದೇಶದಲ್ಲಿ ಮಳೆ ಮತ್ತು ಹಿಮಪಾತವಾಗುವ ಸಾಧ್ಯತೆಯಿದೆ. ಉತ್ತರಾಖಂಡ, ಪಂಜಾಬ್, ಹರಿಯಾಣ, ಚಂಡೀಗಢ, ಪಶ್ಚಿಮ ಉತ್ತರ ಪ್ರದೇಶ, ರಾಜಸ್ಥಾನ, ಪಶ್ಚಿಮ ಮಧ್ಯಪ್ರದೇಶ, ಪೂರ್ವ ಉತ್ತರ ಪ್ರದೇಶ, ಛತ್ತೀಸ್‌ಗಢದಲ್ಲಿ ಗುಡುಗು ಮತ್ತು ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ.

ಮತ್ತೆ ಸೈಕ್ಲೋನ್ ಎಫೆಕ್ಟ್: ಕರ್ನಾಟಕ ಸೇರಿ ಹಲವೆಡೆ ಮಳೆ ಮುನ್ಸೂಚನೆ Read More »

ಐವರ್ನಾಡು : ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಲಾಭಂಶ ವಿತರಣೆಯ ಆಮಂತ್ರಣ ಪತ್ರಿಕೆ ಬಿಡುಗಡೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬೆಳ್ಳಾರೆ ವಲಯ ಐವರ್ನಾಡು ಪಾಲೆ ಪಾಡಿ ದೇವರ ಖಾನ ಒಕ್ಕೂಟದ ಮತ್ತು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಐವರ್ನಾಡು ವತಿಯಿಂದ 17ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಸಂಘಗಳಿಗೆ ಲಾಭಾಂಶ ವಿತರಣೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಪಂಚಲಿಂಗೇಶ್ವರ ದೇವಸ್ಥಾನನದಲ್ಲಿ ಬಿಡುಗಡೆ ಮಾಡಲಾಯಿತು02.02.2025 ಭಾನುವಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಐವರನಾಡು ಸಭಾಭವನದಲ್ಲಿ 17ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಸಂಘಗಳಿಗೆ ಲಾಭಾಂಶ ವಿತರಣೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಅಧ್ಯಕ್ಷತೆಯನ್ನು

ಐವರ್ನಾಡು : ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಲಾಭಂಶ ವಿತರಣೆಯ ಆಮಂತ್ರಣ ಪತ್ರಿಕೆ ಬಿಡುಗಡೆ Read More »

ಅತ್ಲೆಟಿಕ್ ಓಪನ್ ಚಾಂಪಿಯನ್ ಶಿಪ್ ನಲ್ಲಿ ರಮ್ಯಾ ಪವನ್ ಉಳುವಾರು ಪ್ರಥಮ

ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ನಡೆದ ಒಂದನೇ ದಕ್ಷಿಣ ಏಷ್ಯಾ ಮಾಸ್ಟರ್ ಅತ್ಲೆಟಿಕ್ ಓಪನ್ ಚಾಂಪಿಯನ್ ಶಿಪ್ ನಲ್ಲಿ ರಮ್ಯಾ ಪವನ್ ಉಳುವಾರು ಭಾಗವಹಿಸಿ ಶಾಟ್ ಪುಟ್ ನಲ್ಲಿ ಪ್ರಥಮಾ ಡಿಸ್ಕಸ್ ತ್ರೋ ನಲ್ಲಿ ದ್ವಿತೀಯ ಹೆಮರ್ ತ್ರೋ ನಲ್ಲಿ ತೃತೀಯ ಪಡೆದು ತಾಲೂಕಿನ ಹೆಮ್ಮೆಯ ಕ್ರೀಡಾಪಟುವಾಗಿ ಹೊರ ಹೊಮ್ಮಿದ್ದಾರೆ.ಇವರು ದಿವಂಗತ ಚಿನ್ನಪ್ಪ ಗೌಡ ಮತ್ತು ಪುಷ್ಪಲತ ದೊಡ್ಡಿಹಿತ್ಲು ಇವರ ಪುತ್ರಿಯಾಗಿದ್ದು ಉಳುವಾರು ಕೆಎಸ್ಆರ್ಟಿಸಿ ಪವನ್ ಅವರ ಧರ್ಮಪತ್ನಿ ಯಾಗಿದ್ದಾರೆ.ಪ್ರಸ್ತುತ ಮಾರುತಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ದೈಹಿಕ

ಅತ್ಲೆಟಿಕ್ ಓಪನ್ ಚಾಂಪಿಯನ್ ಶಿಪ್ ನಲ್ಲಿ ರಮ್ಯಾ ಪವನ್ ಉಳುವಾರು ಪ್ರಥಮ Read More »

ರಾಷ್ಟ್ರ ಮಟ್ಟದ ಪಾತ್ರಾಭಿನಯದಲ್ಲಿ ಸುಳ್ಯ ಜೂನಿಯರ್ ಕಾಲೇಜಿನ ವಿದ್ಯಾರ್ಥಿಗಳಿಗೆ ದ್ವಿತೀಯ ಸ್ಥಾನ,ವಿದ್ಯಾರ್ಥಿಗಳಿಗೆ ಸುಳ್ಯ ಪೇಟೆಯಲ್ಲಿ ತೆರದ ವಾಹನದಲ್ಲಿ ಮೆರವಣಿಗೆ ಮಾಡಿ ಗೌರವಾರ್ಪಣೆ

ರಾಷ್ಟ್ರೀಯ ಜನಸಂಖ್ಯಾ ಶಿಕ್ಷಣ ಯೋಜನೆಯಡಿ (NPEP) ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನಡೆದ ರಾಷ್ಟ್ರ ಮಟ್ಟದ ಪಾತ್ರಾಭಿನಯ ಸ್ಪರ್ಧೆಯಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯ ದ್ವಿತೀಯ ಸ್ಥಾನ ಪಡೆದು ವಿಶೇಷ ಸಾಧನೆ ಮಾಡಿದ್ದು, ಜ.13ರಂದು ವಿದ್ಯಾರ್ಥಿಗಳು ಸುಳ್ಯಕ್ಕೆ ಆಗಮಿಸುತ್ತಿದ್ದಂತೆ ಅವರನ್ನು ಸುಳ್ಯದ ಖಾಸಗಿ ಬಸ್ ನಿಲ್ದಾಣದಲ್ಲಿ ಅದ್ದೂರಿಯಾಗಿ ಸ್ವಾಗತಿಸಿ, ಬರಮಾಡಿಕೊಳ್ಳಲಾಯಿತು.ಸಮೂಹ ಮಾಧ್ಯಮಗಳ ಸುರಕ್ಷಿತ ಬಳಕೆ ಎಂಬ ವಿಷಯದ ಮೇಲೆ ಆಂಗ್ಲ ಭಾಷೆಯಲ್ಲಿ ಪ್ರಸ್ತುತ ಪಡೆಸಿದ ಪಾತ್ರಾಭಿನಯವನ್ನು ಸಂಸ್ಥೆಯ ಉಪಪ್ರಾಂಶುಪಾಲರಾದ ಪ್ರಕಾಶ ಮೂಡಿತ್ತಾಯ ಇವರು ರಚಿಸಿ ನಿರ್ದೇಶನ ಮಾಡಿದ್ದರು.

ರಾಷ್ಟ್ರ ಮಟ್ಟದ ಪಾತ್ರಾಭಿನಯದಲ್ಲಿ ಸುಳ್ಯ ಜೂನಿಯರ್ ಕಾಲೇಜಿನ ವಿದ್ಯಾರ್ಥಿಗಳಿಗೆ ದ್ವಿತೀಯ ಸ್ಥಾನ,ವಿದ್ಯಾರ್ಥಿಗಳಿಗೆ ಸುಳ್ಯ ಪೇಟೆಯಲ್ಲಿ ತೆರದ ವಾಹನದಲ್ಲಿ ಮೆರವಣಿಗೆ ಮಾಡಿ ಗೌರವಾರ್ಪಣೆ Read More »

ತೊಡಿಕಾನ : ಮಲ್ಲಿಕಾರ್ಜುನ ದೇವಳದಲ್ಲಿ ನಡೆಯುತ್ತಿದೆ ಶ್ರದ್ದಾ ಭಕ್ತಿಯಿಂದ ಧನುಪೂಜೆ,ನಾಳೆ ಈ ವರ್ಷದ ಕೊನೆಯ ಧನುಪೂಜೆ,ಹೆಚ್ಚಿನ ಸಂಖ್ಯೆಯ ಭಕ್ತರ ನಿರೀಕ್ಷೆ

ಪುರಾಣ ಪ್ರಸಿದ್ದ ಸುಳ್ಯ ಸೀಮೆಯ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಧನುರ್ ಮಾಸ ಪ್ರಯುಕ್ತ ಡಿ.16ರಿಂದ ಧನು ಪೂಜೆ ಆರಂಭಗೊಂಡಿದ್ದು ಜ.14ರಂದು ಸಮಾಪ್ತಿಯಾಗಲಿದೆ.ಮಂಗಳವಾರ ಈ ವರ್ಷದ ಕೊನೆಯ ಧನುಪೂಜೆ ಆಗಿರುವ ಹಿನ್ನಲೆ ಮತ್ತು ಸರಕಾರಿ ರಜೆ ಇರುವ ಹಿನ್ನಲೆಯಲ್ಲಿ ಈ ದಿನ ಹೆಚ್ಚಿನ ಭಕ್ತಾಧಿಗಳು ಧನುಪೂಜೆಯಲ್ಲಿ ಭಾಗವಹಿಸುವ ‌ನಿರೀಕ್ಷೆ ಇದೆ.ದೇವಳದಲ್ಲಿ ಜೀರ್ಣೋದ್ಧಾರ ಕಾಮಗಾರಿಗಳು ಯಶಸ್ವಿಯಾಗಿ ಪೂರೈಸಿದ್ದು, ಕಳೆದ 2017ರ ಮಾರ್ಚ್ 1ರಿಂದ 11ರ ತನಕ ಅಷ್ಟಬಂಧ ಬ್ರಹ್ಮಕಲಶೋತ್ಸವ ವಿಜೃಂಭಣೆಯಿಂದ ಜರುಗಿದೆ. ಶ್ರೀ ಕ್ಷೇತ್ರದ ಸವಾರ್‌ಂಗೀಣ ಅಭಿವೃದ್ಧಿಗೆ ಪೂರಕವಾಗಿ

ತೊಡಿಕಾನ : ಮಲ್ಲಿಕಾರ್ಜುನ ದೇವಳದಲ್ಲಿ ನಡೆಯುತ್ತಿದೆ ಶ್ರದ್ದಾ ಭಕ್ತಿಯಿಂದ ಧನುಪೂಜೆ,ನಾಳೆ ಈ ವರ್ಷದ ಕೊನೆಯ ಧನುಪೂಜೆ,ಹೆಚ್ಚಿನ ಸಂಖ್ಯೆಯ ಭಕ್ತರ ನಿರೀಕ್ಷೆ Read More »

ಇಂದು ಸಾರ್ವಜನಿಕ ಭೇಟಿಗೆ ಶಾಸಕರು ಲಭ್ಯರಿಲ್ಲ

ಇಂದು (ಜ.13 ) ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಭಾಗೀರಥಿ ಮುರುಳ್ಯ ಅವರು ಸುಳ್ಯ ಕಛೇರಿಯಲ್ಲಿ ಸಾರ್ವಜನಿಕ ಭೇಟಿಗೆ ಲಬ್ಯರಿರುವುದಿಲ್ಲ. ಕಡಬ ಕಚೇರಿಯಲ್ಲ್ಕಿಯೂ ನಿಗದಿತ ದಿನದಂದು ಶಾಸಕರು ಸಾರ್ವಜನಿಕ ಭೇಟಿಗೆ ಲಭ್ಯರಿರುವುದಿಲ್ಲ.ಭೇಟಿಗೆ ಮುಂದಿನ ದಿನಾಂಕವನ್ನು ತಿಳಿಸಲಾಗುವುದು.

ಇಂದು ಸಾರ್ವಜನಿಕ ಭೇಟಿಗೆ ಶಾಸಕರು ಲಭ್ಯರಿಲ್ಲ Read More »

ತೊಡಿಕಾನ : ವಿಷ್ಣುಮೂರ್ತಿ ದೈವಸ್ಥಾನದ ಜೀರ್ಣೋದ್ಧಾರ ಹಿನ್ನಲೆ ದೇಣಿಗೆ ಸಂಗ್ರಹಕ್ಕೆ ಚಾಲನೆ

ತೊಡಿಕಾನ ಗ್ರಾಮದ ಪಡ್ಪು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯವು ನಡೆಯುತ್ತಿದ್ದು ದೇಣಿಗೆ ಸಂಗ್ರಹ ಕಾರ್ಯಕ್ಕೆ ಜ.12 ದೈವಸ್ಥಾನದಲ್ಲಿ ಪ್ರಾರ್ಥಿಸಿ ಚಾಲನೆ ನೀಡಲಾಯಿತು.ಈ ಸಂದರ್ಭದಲ್ಲಿ ಜೀರ್ಣೊದ್ದಾರ ಸಮಿತಿ ಅಧ್ಯಕ್ಷ ಚಂದ್ರಶೇಖರ ಬಾಳೆಕಜೆ,ಗೌರವ ಸಲಹೆಗಾರರಾದಸಂತೋಷ್ ಕುತ್ತಮೊಟ್ಟೆ,ಕೆ ಕೆ ನಾರಾಯಣ ಕುಂಟುಕಾಡು ಇತರ ಪದಾಧಿಕಾರಿಗಳು,ಬೈಲುವಾರು ಸಮಿತಿಯವರು ಉಪಸ್ಥಿತರಿದ್ದರು.ದೈವಸ್ಥಾನದ ಜೀರ್ಣೊದ್ದಾರ ಕಾರ್ಯಕ್ಕೆ ಊರ ಹಾಗೂ ಪರ ಊರಿನ ದಾನಿಗಳ ಸಹಕಾರ ಅಗತ್ಯವಿದ್ದು ಸಹಕಾರ ನೀಡಬೇಕೆಂದು ಸಮಿತಿಯರು ವಿನಂತಿಸಿಕೊಂಡಿದ್ದಾರೆ. ಬೈಲುವಾರು ಸಮಿತಿಗಳ ಮೂಲಕ ಮನೆವಂತಿಗೆ ಸಂಗ್ರಹ ನಡೆಯುತ್ತಿದೆ.

ತೊಡಿಕಾನ : ವಿಷ್ಣುಮೂರ್ತಿ ದೈವಸ್ಥಾನದ ಜೀರ್ಣೋದ್ಧಾರ ಹಿನ್ನಲೆ ದೇಣಿಗೆ ಸಂಗ್ರಹಕ್ಕೆ ಚಾಲನೆ Read More »

error: Content is protected !!
Scroll to Top