ಪ್ರಚಲಿತ

ಉದ್ಯೋಗಿನಿ, ಚೇತನ, ಧನಶ್ರೀ ಯೋಜನೆಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು 2025-26ನೇ ಸಾಲಿನ ವಿವಿಧ ಮಹಿಳಾ ಸಬಲೀಕರಣ ಹಾಗೂ ಪುನರ್ವಸತಿ ಯೋಜನೆಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಮಹಿಳೆಯರ ಸ್ವಯಂ ಉದ್ಯೋಗ ಮತ್ತು ಆರ್ಥಿಕ ಸಬಲೀಕರಣಕ್ಕಾಗಿ ಉದ್ಯೋಗಿನಿ, ಚೇತನ, ಧನಶ್ರೀ ಹಾಗೂ ಲಿಂಗ ಅಲ್ಪಸಂಖ್ಯಾತ ಪುನರ್ವಸತಿ ಮತ್ತು ದೇವದಾಸಿ ಮಹಿಳೆಯರ ಪುನರ್ವಸತಿ ಯೋಜನೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಮಹಿಳೆಯರು 2025 ಡಿಸೆಂಬರ್ 15 ರೊಳಗೆ ಅರ್ಜಿ ಸಲ್ಲಿಸಬಹುದು. ಈ ಯೋಜನೆಗಳ ಅಡಿಯಲ್ಲಿ ಮಹಿಳೆಯರಿಗೆ 30 ಸಾವಿರದಿಂದ 3 ಲಕ್ಷಗಳವರೆಗೆ ಸಹಾಯ / ಪ್ರೋತ್ಸಾಹ ಧನ […]

ಉದ್ಯೋಗಿನಿ, ಚೇತನ, ಧನಶ್ರೀ ಯೋಜನೆಗಳಿಗೆ ಅರ್ಜಿ ಆಹ್ವಾನ Read More »

ದಶಮಾನೋತ್ಸವದ ಹೊಸ್ತಿಲಲ್ಲಿ ಕೆ.ವಿ.ಜಿ. ಅಮರಜ್ಯೋತಿ ಪದವಿ ಪೂರ್ವ ಕಾಲೇಜು : ಡಿ.26 ರಂದು ಮಾರಥಾನ್ ಮೂಲಕ ಸಂಭ್ರಮಾಚರಣೆಗೆ ಚಾಲನೆ

ಸುಳ್ಯ: ಕಳೆದ 9 ವರ್ಷಗಳಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಫಲಿತಾಂಶದೊಂದಿಗೆ ಸುಳ್ಯದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾಗಿ ಬೆಳೆದಿರುವ ಕೆ.ವಿ.ಜಿ. ಅಮರಜ್ಯೋತಿ ಪದವಿ ಪೂರ್ವ ಕಾಲೇಜು, ಇದೀಗ ದಶಮಾನೋತ್ಸವದ (Decennial Celebration) ಸಂಭ್ರಮದಲ್ಲಿದೆ. 2026-27ನೇ ಸಾಲಿನಲ್ಲಿ ಜರಗಲಿರುವ ದಶಮಾನೋತ್ಸವದ ಪೂರ್ವಭಾವಿಯಾಗಿ ಹಾಗೂ ಮುನ್ನುಡಿಯಾಗಿ, ಸಂಸ್ಥಾಪಕರಾದ ಡಾ. ಕುರುಂಜಿ ವೆಂಕಟರಮಣ ಗೌಡರ 98ನೇ ಜನ್ಮದಿನಾಚರಣೆಯ ಪ್ರಯುಕ್ತ ಡಿ.26 ರಂದು ‘ಆರೋಗ್ಯಕ್ಕಾಗಿ ಓಟ’ (Run for Health) ಎಂಬ ಮ್ಯಾರಥಾನ್ ಅನ್ನು ಆಯೋಜಿಸಲಾಗಿದೆ ಕೆ.ವಿ.ಜಿ ಅಮರ ಜ್ಯೋತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ

ದಶಮಾನೋತ್ಸವದ ಹೊಸ್ತಿಲಲ್ಲಿ ಕೆ.ವಿ.ಜಿ. ಅಮರಜ್ಯೋತಿ ಪದವಿ ಪೂರ್ವ ಕಾಲೇಜು : ಡಿ.26 ರಂದು ಮಾರಥಾನ್ ಮೂಲಕ ಸಂಭ್ರಮಾಚರಣೆಗೆ ಚಾಲನೆ Read More »

ಕ್ರಿಕೆಟ್ : ದಕ್ಷಿಣ ಆಪ್ರಿಕಾ ವಿರುದ್ಧ ಭಾರತಕ್ಕೆ ಸೋಲು

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ, ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 358 ರನ್ ಕಲೆಹಾಕಿತ್ತು. ನಿಗದಿತ ಮೊತ್ತವನ್ನ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡ 4 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು.

ಕ್ರಿಕೆಟ್ : ದಕ್ಷಿಣ ಆಪ್ರಿಕಾ ವಿರುದ್ಧ ಭಾರತಕ್ಕೆ ಸೋಲು Read More »

ಸಿದ್ದರಾಮಯ್ಯ ಸಿ.ಎಂ ಸ್ಥಾನ ಬಿಟ್ಟು ಕೊಡುವುದು ಗ್ಯಾರಂಟಿ : ಸತೀಶ್ ಜಾರಕಿಹೊಳಿ

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ರಾಜ್ಯದ ಮುಖ್ಯಮಂತ್ರಿ ಸ್ಥಾನ ಹಂಚಿಕೆ ಕುರಿತು ಸ್ಪೋಟಕ ಹೇಳಿಕೆ ನೀಡಿದ್ದಾರೆ. ಇಂದು ಬೆಳಗಾವಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಸಿಎಂ ಸ್ಥಾನವನ್ನು ಖಂಡಿತಾ ಬಿಟ್ಟು ಕೊಡುತ್ತಾರೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಆದರೆ, ಅದು 30 ತಿಂಗಳ ನಂತರವೋ ಅಥವಾ ಅದಕ್ಕೂ ಮೊದಲೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾ‌ರ್ ನಡುವಿನ ಅಧಿಕಾರ ಹಂಚಿಕೆಯ ಗೊಂದಲವು ಕಾಂಗ್ರೆಸ್ ಹೈಕಮಾಂಡ್‌ನ ರಹಸ್ಯವಾಗಿಯೇ ಉಳಿದಿದೆ.

ಸಿದ್ದರಾಮಯ್ಯ ಸಿ.ಎಂ ಸ್ಥಾನ ಬಿಟ್ಟು ಕೊಡುವುದು ಗ್ಯಾರಂಟಿ : ಸತೀಶ್ ಜಾರಕಿಹೊಳಿ Read More »

ಸಿಡಿಲು ಬಡಿದು ಮರಕ್ಕೆ ಹಾನಿ

ಸುಳ್ಯದಲ್ಲಿ ಡಿ.3ರಂದು ಸುರಿದ ಭಾರಿ ಮಳೆಯ ಸಂದರ್ಭ ಉಂಟಾದ ಸಿಡಿಲ ಅಘಾತದಿಂದ ಸುಳ್ಯ ತಾಲೂಕು ಕಚೇರಿ ಬಳಿ ರಸ್ತೆ ಬದಿಯ ಮರಕ್ಕೆ ಸಿಡಿಲು ಬಡಿದು ಮರ ಹಾನಿಗೊಂಡ ಘಟನೆ ವರದಿಯಾಗಿದೆ.ಈ ಸಮಯದಲ್ಲಿ ರಸ್ತೆಯಲ್ಲಿ ಜನ ಮತ್ತು ವಾಹನ ಸಂಚಾರ ಇಲ್ಲದ ಕಾರಣ ಭಾರಿ ಅನಾಹುತ ತಪ್ಪಿದಂತೆ ಆಗಿದೆ.

ಸಿಡಿಲು ಬಡಿದು ಮರಕ್ಕೆ ಹಾನಿ Read More »

ಸುಳ್ಯದ ಸ್ವರ್ಣಂ ಜ್ಯುವೆಲ್ಸ್ ನವರ 2026 ನೇ ಇಸವಿಯ ಕ್ಯಾಲೆಂಡರ್ ಬಿಡುಗಡೆ

ಸುಳ್ಯದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಸುಂತೋಡು ಎಂಪೋರಿಯಂ ಲ್ಲಿರುವ ಸ್ವರ್ಣಂ ಜ್ಯುವೆಲ್ಲರ್ ನಲ್ಲಿ 2026ನೇ ವರ್ಷದ ಕ್ಯಾಲೆಂಡರ್ ಬಿಡುಗಡೆ ಡಿ. 2ರಂದು ನಡೆಯಿತು. ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ ವಿಶ್ವನಾಥರವರು ಕ್ಯಾಲೆಂಡರ್ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಈ ಸಂದರ್ಭ ಬಿಲ್ಡಿಂಗ್ ಮಾಲಕ ಸೂರಯ್ಯ ಸುಂತೋಡು, ಸುದ್ದಿ ಬಿಡುಗಡೆ ಕಚೇರಿ ವ್ಯವಸ್ಥಾಪಕ ಯಶ್ವಿತ್ ಕಾಳಮ್ಮನೆ, ಸಂಸ್ಥೆಯ ಆಡಳಿತ ಪಾಲುದಾರರಾದ ಪ್ರವೀಣ್ ಬಿ. ಗೌಡ, ಸಂಜೀವ, ಲೋಕೇಶ್, ಭವಿತ್, ಸಿಬ್ಬಂದಿ ವರ್ಗ

ಸುಳ್ಯದ ಸ್ವರ್ಣಂ ಜ್ಯುವೆಲ್ಸ್ ನವರ 2026 ನೇ ಇಸವಿಯ ಕ್ಯಾಲೆಂಡರ್ ಬಿಡುಗಡೆ Read More »

ಋತುಚಕ್ರ ರಜೆ ಸೌಲಭ್ಯ: ಸರ್ಕಾರದಿಂದ ಅಧಿಕೃತ ಆದೇಶ

ಕರ್ನಾಟಕ ಸರ್ಕಾರವು ರಾಜ್ಯದ ಮಹಿಳಾ ನೌಕರರ ಕಲ್ಯಾಣಕ್ಕಾಗಿ ಮಹತ್ವದ ಆದೇಶ ಹೊರಡಿಸಿದೆ. ರಾಜ್ಯದ ಎಲ್ಲಾ ಖಾಯಂ, ಗುತ್ತಿಗೆ, ಮತ್ತು ಹೊರಗುತ್ತಿಗೆ ನೌಕರರಾಗಿರುವ 18 ರಿಂದ 52 ವಯೋಮಿತಿಯ ಮಹಿಳೆಯರಿಗೆ ವೇತನ ಸಹಿತ ಋತುಚಕ್ರ ರಜೆ ಸೌಲಭ್ಯವನ್ನು ಕಲ್ಪಿಸಿ ಅಧಿಕೃತ ಆದೇಶ ನೀಡಲಾಗಿದೆ. ಈ ಸೌಲಭ್ಯದ ಅಡಿಯಲ್ಲಿ, ಮಹಿಳಾ ನೌಕರರು ಪ್ರತಿ ತಿಂಗಳು ಒಂದು ದಿನದಂತೆ, ವಾರ್ಷಿಕವಾಗಿ ಒಟ್ಟು 12 ದಿನಗಳ ವೇತನ ಸಹಿತ ರಜೆ ಪಡೆಯಲು ಅರ್ಹರಾಗಿರುತ್ತಾರೆ. ಈ ರಜೆಯನ್ನು ಪಡೆಯಲು ಯಾವುದೇ ವೈದ್ಯಕೀಯ ಪ್ರಮಾಣಪತ್ರ ಒದಗಿಸುವ

ಋತುಚಕ್ರ ರಜೆ ಸೌಲಭ್ಯ: ಸರ್ಕಾರದಿಂದ ಅಧಿಕೃತ ಆದೇಶ Read More »

ಕ್ಯಾಂಪ್ಕೋ‌ ಅಧ್ಯಕ್ಷರಾಗಿ ಎಸ್. ಆರ್.ಸತೀಶ್ಚಂದ್ರ ಎರಡನೇ ಬಾರಿ ಆಯ್ಕೆ

ಕ್ಯಾಂಪ್ಕೋ‌ ಅಧ್ಯಕ್ಷರಾಗಿ ಎಸ್. ಆರ್.ಸತೀಶ್ಚಂದ್ರ ಎರಡನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಪದ್ಮರಾಜ ಪಟ್ಟಾಜೆಯವರು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಒಟ್ಟು 19 ನಿರ್ದೇಶಕರ ಪೈಕಿ 13 ಮಂದಿ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದ 6 ಸ್ಥಾನಗಳಿಗೆ ನ.23 ರಂದು ಚುನಾವಣೆ ನಡೆದು ಸಹಕಾರ ಭಾರತಿ ಬೆಂಬಲಿತ ಎಲ್ಲಾ 6 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು.ಡಿ.2ರಂದು ನಡೆದ ಆಡಳಿತ ಮಂಡಳಿ ಸಭೆಯಲ್ಲಿ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ನಡೆಯಿತು.ಈ ಸಂದರ್ಭದಲ್ಲಿ ನಿರ್ದೇಶಕರಾದ ಮುರಳೀಕೃಷ್ಣ ಚಳ್ಳಂಗಾರು, ಪುರುಷೋತ್ತಮ ಭಟ್, ಮಹೇಶ್ ಚೌಟ, ದಯಾನಂದ ಹೆಗ್ಡೆ,

ಕ್ಯಾಂಪ್ಕೋ‌ ಅಧ್ಯಕ್ಷರಾಗಿ ಎಸ್. ಆರ್.ಸತೀಶ್ಚಂದ್ರ ಎರಡನೇ ಬಾರಿ ಆಯ್ಕೆ Read More »

ತೊಡಿಕಾನ : ಮನೀಶ್‌ – ಮೈತ್ರಿ ಶುಭವಿವಾಹ

ತೊಡಿಕಾನ ಗ್ರಾಮದ ಮರ್ಪಂಗಲ್ಲು, ಅಮೆಮನೆ ಶ್ರೀಮತಿ ಸೋಜಾವತಿ ಮತ್ತು ದಿ. ಎ.ಜಿ. ವೆಂಕಟ್ರಮಣ ದಂಪತಿಯ ಪುತ್ರ ಮನೀಶ್‌ ಎ.ವಿ. ಯವರ ವಿವಾಹವು ಶಿವಮೊಗ್ಗ ಜಿಲ್ಲೆಯ ಸಹ್ಯಾದ್ರಿ ನಗರ ನಿವಾಸಿ, ಶ್ರೀಮತಿ ಮಂಜುಳ ಮತ್ತು ಕೆ. ಮಹೇಶ್ವರಪ್ಪ ದಂಪತಿಯ ಪುತ್ರಿ ಮೈತ್ರಿ ಕೆ. ಎಂ. ರವರೊಂದಿಗೆ ನ.30ರಂದು ವೀರಶೈವ ಸಾಂಸ್ಕೃತಿಕ ಭವನ, ಜೆ.ಹೆಚ್‌. ಪಟೇಲ್‌ ಬಡಾವಣೆ, ಸೋಮಿನಕೊಪ್ಪ ರಸ್ತೆ, ಶಿವಮೊಗ್ಗದಲ್ಲಿ ನಡೆಯಿತು.ಅತಿಥಿ ಸತ್ಕಾರ ಡಿ. 2 ರಂದು ಆರಂತೋಡಿನ ತೆಕ್ಕಿಲ್ ಸಭಾಭವನದಲ್ಲಿ ನಡೆಯಿತು.

ತೊಡಿಕಾನ : ಮನೀಶ್‌ – ಮೈತ್ರಿ ಶುಭವಿವಾಹ Read More »

ತೊಡಿಕಾನ : ಮನೀಶ್ – ಮೈತ್ರಿ ಶುಭವಿವಾಹ

ತೊಡಿಕಾನ ಗ್ರಾಮದ ಮರ್ಪಂಗಲ್ಲು, ಅಮೆಮನೆ ಸೋಜಾವತಿ ಮತ್ತು ದಿ. ಎ.ಜಿ. ವೆಂಕಟ್ರಮಣ ದಂಪತಿಯ ಪುತ್ರ ಮನೀಶ್‌ ಎ.ವಿ. ಯವರ ವಿವಾಹವು ಶಿವಮೊಗ್ಗ ಜಿಲ್ಲೆಯ ಸಹ್ಯಾದ್ರಿ ನಗರ ನಿವಾಸಿ, ಶ್ರೀಮತಿ ಮಂಜುಳ ಮತ್ತು ಕೆ. ಮಹೇಶ್ವರಪ್ಪ ದಂಪತಿಯ ಪುತ್ರಿ ಮೈತ್ರಿ ಕೆ. ಎಂ. ರವರೊಂದಿಗೆ ನ.30ರಂದು ವೀರಶೈವ ಸಾಂಸ್ಕೃತಿಕ ಭವನ, ಜೆ.ಹೆಚ್‌. ಪಟೇಲ್‌ ಬಡಾವಣೆ, ಸೋಮಿನಕೊಪ್ಪ ರಸ್ತೆ, ಶಿವಮೊಗ್ಗದಲ್ಲಿ ನಡೆಯಿತು.ಅತಿಥಿ ಸತ್ಕಾರ ಡಿ. 2 ರಂದು ಆರಂತೋಡಿನ ತೆಕ್ಕಿಲ್ ಸಭಾಭವನದಲ್ಲಿ ನಡೆಯಿತು.

ತೊಡಿಕಾನ : ಮನೀಶ್ – ಮೈತ್ರಿ ಶುಭವಿವಾಹ Read More »

error: Content is protected !!
Scroll to Top