ಪ್ರಚಲಿತ

ವಳಲಂಬೆ : ಮಕ್ಕಳ ದಿನಾಚರಣೆ ಮತ್ತು ಸನ್ಮಾನ ಕಾರ್ಯಕ್ರಮ

ಬಾಲವಿಕಾಸ ಸಮಿತಿ ಅಂಗನವಾಡಿ ಕೇಂದ್ರ ವಳಲಂಬೆ, ಅಂಗನವಾಡಿ ಹಿರಿಯ ವಿದ್ಯಾರ್ಥಿ ಸಂಘ ಹಾಗೂ ಪೋಷಕರ ಸಹಯೋಗದೊಂದಿಗೆ ನ.24 ರಂದು ವಳಲಂಬೆ ಅಂಗನವಾಡಿ ಕೇಂದ್ರದಲ್ಲಿ “ಮಕ್ಕಳ ದಿನಾಚರಣೆ, ಸನ್ಮಾನ ಕಾರ್ಯಕ್ರಮ ಹಾಗೂ ಪುಟಾಣಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಗ್ರಾ.ಪಂ. ಸದಸ್ಯ ವೆಂಕಟ್ ವಳಲಂಬೆ ಕಾರ್ಯಕ್ರಮ ಉದ್ಘಾಟಿಸಿದರು. ಗುತ್ತಿಗಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಮಿತ್ರಾ ಮೂಕಮಲೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದರು.ಗುತ್ತಿಗಾರು ಪಿ.ಯಂ.ಶ್ರೀ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ವೆಂಕಟ್ ದಂಬೆಕೋಡಿ ಮಾತನಾಡಿ […]

ವಳಲಂಬೆ : ಮಕ್ಕಳ ದಿನಾಚರಣೆ ಮತ್ತು ಸನ್ಮಾನ ಕಾರ್ಯಕ್ರಮ Read More »

ಆರಂತೋಡು ಗ್ರಾಮ ಪಂಚಾಯತ್ ಘನ ತಾಜ್ಯ ಘಟಕದ ಮರು ನಿರ್ಮಾಣಕ್ಕೆ ಗುದ್ದಲಿ ಪೂಜೆ

ಅರಂತೋಡು ಗ್ರಾಮ ಪಂಚಾಯತ್ ನ ಕೊಡಂಕೇರಿ ಯಲ್ಲಿಯ ಘನ ತ್ಯಾಜ್ಯ ಘಟಕ ಮರು ನಿರ್ಮಾಣಕ್ಕೆ ಮತ್ತು ಅದಕ್ಕೆ ಸಂಪರ್ಕಿಸುವ ಉದಯನಗರ- ಕೊಡಂಕೇರಿ ರಸ್ತೆಯ ಕಾಂಗ್ರಿಟಿಕರಣದ ಗುದ್ದಲಿ ಪೂಜೆ ಕಾರ್ಯಕ್ರಮ ನ 24 ರಂದು ನಡೆಯಿತು.ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಗುದ್ನಲಿ ಪೂಜೆ ನೆರವೇರಿಸಿದರು.ಅರಂತೋಡು ಗ್ರಾಮದಲ್ಲಿ ಅವ್ಯವಸ್ತೆಯಲ್ಲಿದ್ದ ಕಂದಾಯ ಕಚೇರಿ ಯನ್ನು ಗ್ರಾಮ ಪಂಚಾಯತ್ ಹಳೆ ಸಭಾ ಭವನಕ್ಕೆ ಸ್ಥಳಾಂತರಿಸಿ ನೂತನ ಕಚೇರಿಯನ್ನು ಶಾಸಕಿ ಭಾಗೀರಥಿ ಉದ್ಘಾಟನೆ ಮಾಡಿದರು.ಸುಮಾರು1.20 ಸಾವಿರ ವ್ಯಯ ಮಾಡಿ ಜನರ ಸಮಸ್ಯೆಗಳಿಗೆ ಗ್ರಾಮಪಂಚಾಯತ್ ಒಂದೇ

ಆರಂತೋಡು ಗ್ರಾಮ ಪಂಚಾಯತ್ ಘನ ತಾಜ್ಯ ಘಟಕದ ಮರು ನಿರ್ಮಾಣಕ್ಕೆ ಗುದ್ದಲಿ ಪೂಜೆ Read More »

ತೊಡಿಕಾನ ಗ್ರಾಮದಲ್ಲಿ ನೆಟ್ ವರ್ಕ್ ಇಲ್ಲದೆ ಜನರ ಪರದಾಟ!

ಸುಳ್ಯ ತಾಲೂಕಿನ ತೊಡಿಕಾನ ಗ್ರಾಮದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ರಸ್ತೆ ಬದಿ ಪೈಪು ಲೈನಿಗಾಗಿ ತೋಡಿದ ಚರಂಡಿಯಿಂದಾಗಿ ಗ್ರಾಮದಲ್ಲಿರುವ ಏಕಮಾತ್ರ ಬಿಎಸ್ಎನ್ಎಲ್ ಮೊಬೈಲ್ ಟವರ್ ಗೆ ಸಂಪರ್ಕ ಕಲ್ಪಿಸುವ ಕೇಬಲ್ ತುಂಡಾದ ಕಾರಣದಿಂದ ತೊಡಿಕಾನ ಗ್ರಾಮದಲ್ಲಿ ಬಿಎಸ್ಎನ್ಎಲ್ ನೆಟ್ವರ್ಕ್ ಇಲ್ಲದೆ ಕಳೆದ ಮೂರು ದಿನಗಳಿಂದ ಜನರು ಪರದಾಟ ನಡೆಸುತ್ತಿದ್ದಾರೆ.ಮೊದಲೇ ತೊಡಿಕಾನ ಗ್ರಾಮದಲ್ಲಿ ಬಿ.ಎಸ್‌.ಎನ್.ಮೊಬೈಲ್ ಟವರ್ ಮಾತ್ರ ಇದ್ದು ಆಗಾಗ ಕೈ ಕೊಡುತ್ತಿತ್ತು.ಇದೀಗ ಟವರ್ ಈಗ ಪೂರ್ಣ ಪ್ರಮಾಣದಲ್ಲಿ ಸ್ಥಗೀತಗೊಂಡ ಹಿನ್ನಲೆಯಲ್ಲಿ ಗುಡ್ಡ ಬೆಟ್ಟ ಹತ್ತಿ ಅಲೆದಾಡಿಷರೂ

ತೊಡಿಕಾನ ಗ್ರಾಮದಲ್ಲಿ ನೆಟ್ ವರ್ಕ್ ಇಲ್ಲದೆ ಜನರ ಪರದಾಟ! Read More »

ಬೆಂಗಳೂರು, ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆ ಸಾಧ್ಯತೆ

ರಾಜ್ಯದಲ್ಲಿ ಹಿಂಗಾರು ಮಳೆ ಮತ್ತೆ ಚುರುಕುಗೊಂಡಿದ್ದು, ಇಂದು ಬೆಂಗಳೂರು, ಕೋಲಾರ ಸೇರಿದಂತೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಉಳಿದ ಜಿಲ್ಲೆಗಳಲ್ಲಿ ದಟ್ಟ ಮಂಜಿನ ವಾತಾವರಣ ಇರಲಿದೆ. ದಕ್ಷಣ ಕನ್ನಡ ಮತ್ತು ಉಡುಪಿಯಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯಲಿದ್ದು, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಹಾಸನ, ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿಯೂ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ಬೆಂಗಳೂರು, ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆ ಸಾಧ್ಯತೆ Read More »

ಸುಳ್ಯ ಸ್ವರ್ಣಂ ಜ್ಯುವೆಲ್ಸ್ ನಲ್ಲಿ ನ.24 ರಿಂದ ಡಿ. 4 ರವರೆ ಗೋಲ್ಡ್  ಎಕ್ಸ್ ಚೇಂಜ್ ಮೇಳ

ಸುಳ್ಯ ಸ್ವರ್ಣಂ ಜ್ಯುವೆಲ್ಸ್ ನಲ್ಲಿ ಗೋಲ್ಡ್  ಎಕ್ಸ್ ಚೇಂಜ್ ಮೇಳ ಇದೇ ನವಂಬರ್ 24 ರಿಂದ ಡಿಸೆಂಬರ್ 4 ರ ವರೆಗೆ ನಡೆಯಲಿದೆ.  ಪ್ರತೀ ಗ್ರಾಂ ಚಿನ್ನ ಖರೀದಿ ಗೆ ರೂ *250* ಕಡಿತ  ನೀಡಲಾವುವುದು. ನಿಮ್ಮ ಹಳೆಯ ಚಿನ್ನಾಭರಣ ಗಳನ್ನು ಹೊಸ 916 ಹಾಲ್ ಮಾರ್ಕ್ ಆಭರಣಗಳೊಂದಿಗೆ ವಿನಿಮಯ ಮಾಡಲು ಅಪೂರ್ವ ಅವಕಾಶ ಇದೆ‌.  ಚಿನ್ನಾಭರಣ ಗಳ ಉಚಿತ ರಿಪೇರಿಗೆ, ಸ್ವರ್ಣಂ ಜ್ಯುವೆಲ್ಸ್ ಸೂಂತೋಡು ಎಂಪೋರಿಯಂ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ 

ಸುಳ್ಯ ಸ್ವರ್ಣಂ ಜ್ಯುವೆಲ್ಸ್ ನಲ್ಲಿ ನ.24 ರಿಂದ ಡಿ. 4 ರವರೆ ಗೋಲ್ಡ್  ಎಕ್ಸ್ ಚೇಂಜ್ ಮೇಳ Read More »

ಕ್ಯಾಂಪ್ಕೋ ಆಡಳಿತ ಮಂಡಳಿಗೆ ಶೇ.45.53 ಮತದಾನ

ಪ್ರತಿಷ್ಠಿತ ಕ್ಯಾಂಪ್ಕೋ ಸಂಸ್ಥೆಯ ಆಡಳಿತ ಮಂಡಳಿಗೆ 13 ಸ್ಥಾನ ಅವಿರೋಧವಾಗಿ ಆಯ್ಕೆಯಾಗಿದ್ದು ಬಾಕಿ ಉಳಿದ 6 ಸ್ಥಾನಗಳಿಗೆ ನ.23 ರಂದು ಚುನಾವಣೆ ನಡೆಯಿತು. ಒಟ್ಟು 5651 ಮತದಾರರ ಪೈಕಿ 2573 ಮತದಾರರು ಮತ ಚಲಾಯಿಸಿದ್ದು ಶೇ.45.53% ಮತದಾನವಾಗಿದೆ. 6 ಸ್ಥಾನಗಳಿಗೆ 8 ಅಭ್ಯರ್ಥಿಗಳು ಕಣದಲ್ಲಿದ್ದರು. 6 ಜನ ಸಹಕಾರ ಭಾರತಿಯಿಂದ ಮತ್ತು ಇಬ್ಬರು ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದರು.ನ.25 ರಂದು ಮತ ಎಣಿಕೆ ನಡೆಯಲಿದ್ದು, ನ.28 ರಂದು ಫಲಿತಾಂಶ ಘೋಷಣೆಯಾಗಲಿದೆ.

ಕ್ಯಾಂಪ್ಕೋ ಆಡಳಿತ ಮಂಡಳಿಗೆ ಶೇ.45.53 ಮತದಾನ Read More »

ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾಗಿ ಡಾ.ರೇಣುಕಾ ಪ್ರಸಾದ್ ಪುನರಾಯ್ಕೆ

ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾಗಿ ಡಾ ರೇಣುಕಾ ಪ್ರಸಾದ್ ಕುರುಂಜಿಯವರು ಸರ್ವಾನುಮತದಿಂದ ಪುನಾರಯ್ಕೆಗೊಂಡಿದ್ದಾರೆ.ಹಲವಾರು ಮಂದಿ ಅಭಿಮಾನಿಗಳು‌ ಅವರನ್ನು ಅಭಿನಂದಿಸಿದ್ದಾರೆ.

ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾಗಿ ಡಾ.ರೇಣುಕಾ ಪ್ರಸಾದ್ ಪುನರಾಯ್ಕೆ Read More »

ದ.ಕ ಜಿಲ್ಲಾ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕದ ವಿದ್ಯಾರ್ಥಿಗಳು ಚಾಂಪಿಯನ್

ಶಾಲಾ ಶಿಕ್ಷಣ ಇಲಾಖೆ ಹಾಗೂ ದೀಪಿಕಾ ಪ್ರೌಢಶಾಲೆ ಮೊಡಂಕಾಪು-ಬಂಟ್ವಾಳ ಆಶ್ರಯದಲ್ಲಿ ನಡೆದ ದ.ಕ‌.ಜಿಲ್ಲಾ ಮಟ್ಟದ ಪ್ರೌಢಶಾಲಾ 17 ಹಾಗೂ 14 ರ ವಯೋಮಿತಿಯ ಬಾಲಕ ಹಾಗೂ ಬಾಲಕಿಯರ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕ ಇದರ ಬಾಲಕರ ತಂಡ 17 ರ ವಯೋಮಿತಿಯ ಬಾಲಕರ ವಿಭಾಗದಲ್ಲಿ ಜಿಲ್ಲಾ ಮಟ್ಟದಲ್ಲಿ ಚಾಂಪಿಯನ್ ಆಗಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದೆ.ಅನ್ವಿತ್.ಎಂ.ಪಿ,ಧನುಷ್,ನಿತೇಶ್.ಡಿ,ಅಕ್ಷಯ್‌.ಕೆ.ಸಿ ಹಾಗೂ ಗಿರೀಶ್ .ಕೆ ತಂಡದಲ್ಲಿದ್ದರು

ದ.ಕ ಜಿಲ್ಲಾ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕದ ವಿದ್ಯಾರ್ಥಿಗಳು ಚಾಂಪಿಯನ್ Read More »

ಕೆಸೆಟ್ ಪರೀಕ್ಷೆಯಲ್ಲಿ ಮೇಘಾ ಪಿ.ಎಂ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣ

ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆಸಲ್ಪಡುವ ಸಹಾಯಕ ಪ್ರಾಧ್ಯಾಪಕ ಅರ್ಹತಾ ಪರೀಕ್ಷೆಯಲ್ಲಿ (ಕೆಸೆಟ್ -೨೦೨೫) ರಲ್ಲಿ ಮೇಘಾ ಪಿ.ಎಂ. ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.ಇವರು ಪೂಜಾರಿಮನೆ ಮಾಧವ ಮಾಸ್ಟರ್ ಹಾಗೂ ಗೂನಡ್ಕ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿರುವ ಶೀಲಾವತಿ ಕೆ.ಎನ್‌. ಇವರ ಪುತ್ರಿ.ಮೇಘಾ ಪಿ.ಎಂ. ರೋಟರಿ ಶಾಲೆ ಸುಳ್ಯ, ಅಂಬಿಕಾ ಪದವಿ ಪೂರ್ವ ಕಾಲೇಜು ಪುತ್ತೂರು, ಎನ್.ಎಂ.ಸಿ. ಸುಳ್ಯದ ಹಳೆ ವಿದ್ಯಾರ್ಥಿನಿ.ಮಂಗಳೂರು ವಿಶ್ವ ವಿದ್ಯಾಲಯ ಮಂಗಳೂರು ಗಂಗೋತ್ರಿಯಲ್ಲಿ ೨೦೨೫ನೇ ಸಾಲಿನಲ್ಲಿ ರಸಾಯನ ಶಾಸ್ತ್ರದಲ್ಲಿ ಎಂ.ಎಸ್ಸಿ ಪದವಿಯನ್ನು ಪಡೆದಿದ್ದಾರೆ.

ಕೆಸೆಟ್ ಪರೀಕ್ಷೆಯಲ್ಲಿ ಮೇಘಾ ಪಿ.ಎಂ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣ Read More »

ನವೆಂಬರ್ 24 ಕ್ಕೆ ಆರಂತೋಡು ಗ್ರಾಮ ಪಂಚಾಯತ್ ಘನ ತಾಜ್ಯ ಘಟಕದ ಮರು ನಿರ್ಮಾಣಕ್ಕೆ ಗುದ್ದಲಿ ಪೂಜೆ

ಆಕಸ್ಮಿಕವಾಗಿ ಬೆಂಕಿ ಅವಘಡಕ್ಕೆ ತುತ್ತಾದ ರಾಜ್ಯದಲ್ಲಿ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಆರಂತೋಡು ಗ್ರಾಮ ಪಂಚಾಯತ್ ನ ಕೊಡಂಕೇರಿ ಯಲ್ಲಿಯ ಘನ ತ್ಯಾಜ್ಯ ಘಟಕ ಮರು ನಿರ್ಮಾಣಕ್ಕೆ ಮತ್ತು ಅದಕ್ಕೆ ಸಂಪರ್ಕಿಸುವ ಉದಯನಗರ- ಕೊಡಂಕೇರಿ ರಸ್ತೆಯ ಕಾಂಗ್ರಿಟಿಕರಣದ ಗುದ್ದಲಿ ಪೂಜೆ ಕಾರ್ಯಕ್ರಮ ನವಂಬರ್ 24 ನೇ ಸೋಮವಾರದಂದು ಬೆಳಿಗ್ಗೆ 8.30ಕ್ಕೆ ಮಾನ್ಯ ಶಾಸಕರು, ವಿಧಾನಪರಿಷತ್ ಸದಸ್ಯರು,ಸರಕಾರದ ನಿಗಮ ಅಧ್ಯಕ್ಷರು,ಜನಪ್ರತಿನಿದಿನಗಳು ಅಧಿಕಾರಿಗಳು,ಘಟಕದ ಮರು ನಿರ್ಮಾಣಕ್ಕೆ ಧನ ಸಹಾಯ ನೀಡಿದ ದಾನಿಗಳ ಉಪಸ್ಥಿತಿಯಲ್ಲಿ ನಡೆಯಲಿದೆ ಎಂದು ಆರಂತೋಡು ಪಂಚಾಯತ್ ಅಧ್ಯಕ್ಷರಾದ ಕೇಶವ ಅಡ್ತಲೆ

ನವೆಂಬರ್ 24 ಕ್ಕೆ ಆರಂತೋಡು ಗ್ರಾಮ ಪಂಚಾಯತ್ ಘನ ತಾಜ್ಯ ಘಟಕದ ಮರು ನಿರ್ಮಾಣಕ್ಕೆ ಗುದ್ದಲಿ ಪೂಜೆ Read More »

error: Content is protected !!
Scroll to Top