ಪ್ರಚಲಿತ

ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾಗಿ ಆಯ್ಕೆಗೊಂಡ ಡಾ.ರೇಣುಕಾಪ್ರಸಾದ್ ಅವರಿಗೆ ಗೌರವಾರ್ಪಣೆ

ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾಗಿ ಬಹುಮತದಿಂದ ಆಯ್ಕೆಗೊಂಡ ಕೊಡುಗೈ ಧಾನಿ ಡಾ.ರೇಣುಕಾಪ್ರಸಾದ್ ರವರನ್ನು ಗೌಡರ ಯಾನೆ ಒಕ್ಕಲಿಗರ ಜಿಲ್ಲಾ ಮಾತೃ ಸಂಘದ ಪದಾಧಿಕಾರಿಗಳು ಪುಷ್ಪಗುಚ್ಛ ನೀಡಿ ಗೌರವಿಸಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಮಾತೃಸಂಘದ ಅಧ್ಯಕ್ಷ ಲೋಕಯ್ಯ ಗೌಡ ಕೆ., ಪ್ರಧಾನ ಕಾರ್ಯದರ್ಶಿ ದಿನೇಶ್ ಮಡಪ್ಪಾಡಿ, ಕಾರ್ಯದರ್ಶಿ ಕೆ.ರಾಮಣ್ಣ ಗೌಡ ಕೊಂಡೆಬಾಯಿ, ಆಡಳಿತ ಮಂಡಳಿಯ ಲತಾ ಕುದ್ರಾಜೆ, ತಿಮ್ಮಯ್ಯ ಪಿಂಡಿಮನೆ, ಅನಿತಾ ರಾಮಣ್ಣ ಗೌಡ ಮುಂತಾದವರು ಉಪಸ್ಥಿತರಿದ್ದರು.

ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾಗಿ ಆಯ್ಕೆಗೊಂಡ ಡಾ.ರೇಣುಕಾಪ್ರಸಾದ್ ಅವರಿಗೆ ಗೌರವಾರ್ಪಣೆ Read More »

ಕುರುಂಜಿಭಾಗ್ ನಲ್ಲಿ ಟೋಪ್ ಹೌಸ್ ರೆಸ್ಟೋ ಶುಭಾರಂಭ,ಇಲ್ಲಿ ಹಲವು ವಿಶೇಷತೆಗಳಿವೆ ಇಂದೇ ಭೇಟಿ ನೀಡಿ

ಸುಳ್ಯದ ಕುರುಂಜಿಭಾಗ್ ಕೆ.ವಿ.ಜಿ ಸರ್ಕಲ್ ನಲ್ಲಿ ಕಳೆದ 21 ವರ್ಷಗಳಿಂದ ಹೋಟೆಲ್ ಉದ್ಯಮ ನಡೆಸಿಕೊಂಡು ಬರುತ್ತಿರುವ ವಿಜಯ್ ಕುಮಾರ್ ಮಯೂರಿ ಮತ್ತು ಶ್ರೀಮತಿ ರೂಪವಿಜಯ್ ಕುಮಾರ್ ರವರ ಮಾಲಕತ್ವದ ಮಯೂರಿ ರೆಸ್ಟೋರೆಂಟ್ ರವರ ನೂತನ ಮಯೂರಿ ಟೋಪ್ ಹೌಸ್ ರೆಸ್ಟೋ ಡಿ.ಎಂ.ಕಾಂಪ್ಲೆಕ್ಸ್‌ ರೂಫ್ ಗಾರ್ಡನ್ ನಲ್ಲಿಡಿ.25ರಂದು ಶುಭಾರಂಭಗೊಂಡಿದೆ.ಇಂದು ಬೆಳಿಗ್ಗೆ ಸುಳ್ಯದ ಕುರುಂಜಿಭಾಗ್ ನ ಕೆ.ವಿ.ಜಿ ಸರ್ಕಲ್ ನಲ್ಲಿ ಉದ್ಘಾಟನೆಗೊಂಡ ಮಯೂರಿ ಟಾಪ್ ಹೌಸ್ ರೆಸ್ಟೋಗೆ ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಹರೀಶ್‌ರವರು ಭೇಟಿ ನೀಡಿ ಶುಭ

ಕುರುಂಜಿಭಾಗ್ ನಲ್ಲಿ ಟೋಪ್ ಹೌಸ್ ರೆಸ್ಟೋ ಶುಭಾರಂಭ,ಇಲ್ಲಿ ಹಲವು ವಿಶೇಷತೆಗಳಿವೆ ಇಂದೇ ಭೇಟಿ ನೀಡಿ Read More »

ಸಿಟಿ ರವಿ ಪ್ರಕರಣ: ಪೊಲೀಸ್ ಅಧಿಕಾರಿ ಮಂಜುನಾಥ್ ಅಮಾನತು

ಸಚಿವೆ ಲಕ್ಷ್ಮಿ ಹೆಬ್ಬಾಳ್ಳರ್ ಅವರಿಗೆ ಸಿಟಿ ರವಿ ಅಶ್ಲೀಲ ಪದ ಬಳಕೆ ಪ್ರಕರಣದಲ್ಲಿ ಓರ್ವ ಅಧಿಕಾರಿಯ ತಲೆದಂಡವಾಗಿದೆ.ಖಾನಾಪುರದ ಸಿಪಿಐ ಮಂಜುನಾಥ್ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಬೆಳಗಾವಿ ಉತ್ತರ ವಲಯದ ಐಜಿಪಿ ವಿಕಾಸ್ ಕುಮಾರ್ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಬಿಜೆಪಿ ನಾಯಕರನ್ನು ಖಾನಾಪುರ ಠಾಣೆಯೊಳಗೆ ಬಿಟ್ಟು, ಬಿಜೆಪಿ ನಾಯಕರು ಸಭೆ ನಡೆಸಲು ಅವಕಾಶ ಮಾಡಿಕೊಟ್ಟಿರುವ ಹಿನ್ನೆಲೆಯಲ್ಲಿ ಈ ಅಮಾನತು ನಡೆದಿದೆ.

ಸಿಟಿ ರವಿ ಪ್ರಕರಣ: ಪೊಲೀಸ್ ಅಧಿಕಾರಿ ಮಂಜುನಾಥ್ ಅಮಾನತು Read More »

ತಾಲೂಕು ಮಟ್ಟದ ಕೆ.ಡಿ.ಪಿ ಸದಸ್ಯರ ಆಯ್ಕೆ

ಕರ್ನಾಟಕ ಸರಕಾರವು ಹಲವು ಇಲಾಖೆಗಳಿಗೆ ನಾಮನಿರ್ದೇಶಕ ಸದಸ್ಯರನ್ನು ಆಯ್ಕೆ ಮಾಡುತ್ತಿದ್ದು ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (20 ಅಂಶಗಳ ಕಾರ್ಯಕ್ರಮವೂ ಸೇರಿದಂತೆ) ಪರಿಣಾಮಕಾರಿ ಅನುಷ್ಠಾನದ ಪರಿಶೀಲನೆಗಾಗಿ ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲ್ಲೂಕು ಮಟ್ಟದ ತ್ರೈಮಾಸಿಕ ಪರಿಶೀಲನಾ (ಕೆ.ಡಿ.ಪಿ) ಸಮಿತಿಗೆ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಕೆಲವರನ್ನು ಸದಸ್ಯರನ್ನಾಗಿ ನಾಮನಿರ್ದೇಶನಗೊಳಿಸಿ ಆದೇಶಿಸಿದೆ.ಸದಸ್ಯರ ವಿವರ ಈ ಕೆಳಗಿನಂತಿದೆ.ಸುಳ್ಯ ತಾಲೂಕು ಪಂಚಾಯಿತಿ ಕೆಡಿಪಿ ಇದರ ನಾಮ ನಿರ್ದೇಶನದ ಸದಸ್ಯರಾಗಿ ಸುಳ್ಯದಲ್ಲಿ ವಕೀಲರು ಹಾಗೂ ನೋಟರಿಯಾಗಿ ಸೇವೆ ಸಲ್ಲಿಸುತ್ತಿರುವ

ತಾಲೂಕು ಮಟ್ಟದ ಕೆ.ಡಿ.ಪಿ ಸದಸ್ಯರ ಆಯ್ಕೆ Read More »

5 ಮತ್ತು 8ನೇ ಕ್ಲಾಸ್ ವಿದ್ಯಾರ್ಥಿಗಳಿಗೆ ಶಾಕ್ ಕೊಟ್ಟ ಕೇಂದ್ರ ಸರ್ಕಾರ

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. 5 ಮತ್ತು 8ನೇ ತರಗತಿಯಲ್ಲಿ ವಿದ್ಯಾರ್ಥಿಗಳು ಫೇಲ್ ಆದರೆ ಮತ್ತೆ ಅದೇ ತರಗತಿಯಲ್ಲಿ ಓದಬೇಕಾಗುತ್ತದೆ. ಉಚಿತ ಮತ್ತು ಕಡ್ಡಾಯ ಶಿಕ್ಷಣದ ಮಕ್ಕಳ ಹಕ್ಕು ಕಾಯ್ದೆ 2010ಕ್ಕೆ ಕೇಂದ್ರ ಸರ್ಕಾರ ತಿದ್ದುಪಡಿ ತಂದಿದೆ. ವಿದ್ಯಾರ್ಥಿಗಳು ಫೇಲ್ ಆದ 2 ತಿಂಗಳಲ್ಲಿ ರೀ ಎಕ್ಸಾಮ್ ಮಾಡಲಾಗುತ್ತದೆ. ಮತ್ತೊಮ್ಮೆ ಪರೀಕ್ಷೆ ಬರೆದು ಪಾಸ್ ಮಾಡಬಹುದು. ಇಲ್ಲದೆ ಹೋದಲ್ಲಿ ಅದೇ ತರಗತಿಯಲ್ಲೇ ಮುಂದುವರಿಯಬೇಕು ಎಂದು ಶಿಕ್ಷಣ ಸಚಿವಾಲಯ ಅಧಿಸೂಚನೆಯಲ್ಲಿ ತಿಳಿಸಿದೆ

5 ಮತ್ತು 8ನೇ ಕ್ಲಾಸ್ ವಿದ್ಯಾರ್ಥಿಗಳಿಗೆ ಶಾಕ್ ಕೊಟ್ಟ ಕೇಂದ್ರ ಸರ್ಕಾರ Read More »

ಶ್ರದ್ಧಾ ಭಕ್ತಿಯ ಸೇವೆಯಿಂದ ಶ್ರದ್ಧಾ ಕೇಂದ್ರಗಳ ಅಭಿವೃದ್ಧಿ ಸಾಧ್ಯ : ಶ್ರೀ ಧರ್ಮಪಾಲನಾಥ ಸ್ವಾಮೀಜಿ

ಶ್ರದ್ಧಾ ಭಕ್ತಿಯ ಸೇವೆಯಿಂದ ಶ್ರದ್ಧಾ ಕೇಂದ್ರಗಳ ಅಭಿವೃದ್ಧಿ ಸಾಧ್ಯ,ಇಲ್ಲಿನ ಜನರ ಒಗ್ಗಟ್ಟು ಶ್ರದ್ಧಾ ಭಕ್ತಿಯ ಸೇವೆ ಮತ್ತು ಭಕ್ತರು ತಮ್ಮ ಹೃದಯದಲ್ಲಿ ಭಕ್ತಿಯ ದೀವಿಗೆ ಹಚ್ಚಿದ್ದರಿಂದಲೇ ಬಜಪ್ಪಿಲ ಕ್ಷೇತ್ರ ಇಷ್ಟು ಸುಂದರವಾಗಿ ಪುನರ್ ನಿರ್ಮಾಣವಾಗಿ ಇಂದು ಕ್ಷೇತ್ರ ಪ್ರಜ್ವಲಿಸುತ್ತಿದೆ. ನೀವೆಲ್ಲರೂ ಸಂಕಲ್ಪ ಮಾಡಿಕೊಂಡಂತೆ ೧೯೫ ದಿನಗಳಲ್ಲಿ ದೈವಸ್ಥಾನ ನಿರ್ಮಾಣ ಆಗಿರುವುದರಿಂದ ಮಾನವ ಜನ್ಮ ಸಾರ್ಥಕ್ಯವನ್ನು ಕಂಡಂತಾಗಿದೆ” ಎಂದು ಮಂಗಳೂರು ಆದಿಚುಂಚನಗಿರಿ ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಹೇಳಿದರು. ಬಜಪ್ಪಿಲ ಕ್ಷೇತ್ರದ ಬ್ರಹ್ಮಕಲಶೋತ್ಸವ ಸಮಾರಂಭದ ಧಾರ್ಮಿಕ ಸಭಾ

ಶ್ರದ್ಧಾ ಭಕ್ತಿಯ ಸೇವೆಯಿಂದ ಶ್ರದ್ಧಾ ಕೇಂದ್ರಗಳ ಅಭಿವೃದ್ಧಿ ಸಾಧ್ಯ : ಶ್ರೀ ಧರ್ಮಪಾಲನಾಥ ಸ್ವಾಮೀಜಿ Read More »

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು -ವಾರ್ಷಿಕೋತ್ಸವ ಸಮಾರಂಭ

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ವಾರ್ಷಿಕೋತ್ಸವ ಸಮಾರಂಭವನ್ನು ಆಚರಿಸಲಾಯಿತು.ಈ ಕಾರ್ಯಕ್ರಮದ ಗೌರವ ಅತಿಥಿಗಳಾಗಿ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ (ರಿ.) ಸುಳ್ಯ ಇದರ ಪ್ರಧಾನ ಕಾರ್ಯದರ್ಶಿಗಳಾದ ಆರ್ಕಿಟೆಕ್ಟ್ ಅಕ್ಷಯ್ ಕೆ ಸಿ ಹಾಗೂ ಕಾಲೇಜಿನ ಹಳೆಯ ವಿದ್ಯಾರ್ಥಿ ಮತ್ತು ಈಜಿ ಆಯುರ್ವೇದ ಹಾಸ್ಪಿಟಲ್ ಮಂಗಳೂರು ಇದರ ಮುಖ್ಯ ವೈದ್ಯಕೀಯ ಅಧಿಕಾರಿಯಾದ ಡಾ. ರವಿಗಣೇಶ್ ಮೊಗ್ರ ಉಪಸ್ಥಿತರಿದ್ದರು.ಕಾರ್ಯಕ್ರಮದ ವೇದಿಕೆಯಲ್ಲಿ ಎ ಒ ಎಲ್ ಇ (ರಿ.) ಇದರ ಕಾರ್ಯದರ್ಶಿಗಳಾದ ಶ್ರೀ. ಹೇಮನಾಥ ಕೆ ವಿ, ಕೌನ್ಸಿಲ್

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು -ವಾರ್ಷಿಕೋತ್ಸವ ಸಮಾರಂಭ Read More »

ಬಜಪ್ಪಿಲ ಇರುವೆರ್ ಉಳ್ಳಾಕುಲು ಶ್ರೀ ಧೂಮಾವತಿ ಮತ್ತು ಪರಿವಾರ ದೈವಗಳ ಕ್ಷೇತ್ರದಲ್ಲಿ ಬಜಪಿಲ ಇರುವೆರ್ ಉಳ್ಳಾಕುಲು ಶ್ರೀ ಧೂಮಾವತಿ ಪರಿವಾರ ದೈವಗಳ ಪುನರ್ ಪ್ರತಿಷ್ಠೆ

ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಪೇರಾಲ್ ಬಜಪ್ಪಿಲ ಇರುವೆರ್ ಉಳ್ಳಾಕುಲು ಶ್ರೀ ಧೂಮಾವತಿ ಮತ್ತು ಪರಿವಾರ ದೈವಗಳ ಕ್ಷೇತ್ರದಲ್ಲಿ ಬಜಪಿಲ ಇರುವೆರ್ ಉಳ್ಳಾಕುಲು ಶ್ರೀ ಧೂಮಾವತಿ ಪರಿವಾರ ದೈವಗಳ ಪುನರ್ ಪ್ರತಿಷ್ಠೆ ಬ್ರಹ್ಮಕಲಶಾಭಿಷೇಕ ಶ್ರದ್ದಾ ಭಕ್ತಿಯಿಂದ ಡಿ.೨೨ರಂದು ಬೆಳಗ್ಗೆ 10-23 ರ ಕುಂಭ ಲಗ್ನ ಸುಮೂಹೂರ್ತದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಬಜಪ್ಪಿಲ ಇರುವೆರ್ ಉಳ್ಳಾಕುಲು ಶ್ರೀ ಧೂಮಾವತಿ ಮತ್ತು ಪರಿವಾರ ದೈವಗಳ ಕ್ಷೇತ್ರದಲ್ಲಿ ಬಜಪಿಲ ಇರುವೆರ್ ಉಳ್ಳಾಕುಲು ಶ್ರೀ ಧೂಮಾವತಿ ಪರಿವಾರ ದೈವಗಳ ಪುನರ್ ಪ್ರತಿಷ್ಠೆ Read More »

ಸಂಪಾಜೆ ಮದುವೆ ಮನೆಯಲ್ಲಿ ಮಾದರಿ ಕಾರ್ಯ, ಕೆರೆಮೂಲೆ ಕುಟುಂಬದ ರಾಜ್ಯಮಟ್ಟದ ಪ್ರತಿಭೆ ಶಮ್ಮಾಸ್ ಗೆ ಸನ್ಮಾನ

ಸಂಪಾಜೆಯಲ್ಲಿ ನಡೆದ ಅನಸ್ ಹಸೈನಾರ್ ರವರ ಮದುವೆ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಕಲೋತ್ಸವದಲ್ಲಿ ಇಂಗ್ಲೀಷ್ ಮತ್ತು ಮಲಯಾಳಂ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಕೆರೆಮೂಲೆ ಹನೀಫ್ ರವರ ಸುಪುತ್ರ ಸುಳ್ಯ ಅನ್ಸಾರಿಯ ಎಜ್ಯುಕೇಶನ್ ಸೆಂಟರ್ ನ ವಿದ್ಯಾರ್ಥಿ ಮೊಹಮ್ಮದ್ ಶಮ್ಮಾಸ್ ರವರನ್ನು ಕೆರೆಮೂಲೆ ಕುಟುಂಬಸ್ಥರ ಪರವಾಗಿ ಹಿರಿಯರಾದ ಹಾಜಿ ಅಬ್ದುಲ್ ಖಾದರ್ ಕೆರೆಮೂಲೆ ಶಾಲು ಹೊದಿಸಿ ಸನ್ಮಾಸಿದರು.ಈ ಸಂದರ್ಭದಲ್ಲಿ ಮೀಫ್ ಉಪಾಧ್ಯಕ್ಷ ಕೆ ಎಂ ಮುಸ್ತಾಫ ಮಾತನಾಡಿ ಕುಟುಂಬದ ಸಮ್ಮುಖದಲ್ಲಿ ಪ್ರತಿಭೆಯನ್ನು ಗುರುತಿಸಿದಾಗ ಇತರ

ಸಂಪಾಜೆ ಮದುವೆ ಮನೆಯಲ್ಲಿ ಮಾದರಿ ಕಾರ್ಯ, ಕೆರೆಮೂಲೆ ಕುಟುಂಬದ ರಾಜ್ಯಮಟ್ಟದ ಪ್ರತಿಭೆ ಶಮ್ಮಾಸ್ ಗೆ ಸನ್ಮಾನ Read More »

ಕೊಬ್ಬರಿ ಬೆಲೆಯಲ್ಲಿ ಹೆಚ್ಚಳ..!ಕೇಂದ್ರ ಸರಕಾರದಿಂದ ಗುಡ್ ನ್ಯೂಸ್

ತೆಂಗಿನ ಕಾಯಿ ಧಾರಣೆಯಲ್ಲಿ ಈಗ ಸ್ವಲ್ಪ ಮಟ್ಟಿಗೆ ಹೆಚ್ಚಳವಾಗಿದೆ.ಇದರಿಂದ ತೆಂಗು ಬೆಳಗಾರರು ನಿಟ್ಟುಸಿರು ಬಿಟ್ಟಿದ್ದಾರೆ.ಕೇಂದ್ರ ಸರ್ಕಾರ ತೆಂಗು ಬೆಳೆಗಾರರಿಗೆ ದೊಡ್ಡ ಗುಡ್ ನ್ಯೂಸ್ ಕೊಟ್ಟಿದೆ. ಹೌದು, ಕೊಬ್ಬರಿಯ ಕನಿಷ್ಠ ಬೆಲೆಯನ್ನು ಹೆಚ್ಚಿಸಲು ಶುಕ್ರವಾರ ನಡೆದ ಸಚಿವ ಸಂಪುಟದಲ್ಲಿ ಅನುಮೋದನೆ ಸಿಕ್ಕಿದೆ. ಸಭೆಯ ಬಳಿಕ ಈ ಸಂಬಂಧ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ. ಉಂಡೆ ಕೊಬ್ಬರಿಗೆ ಪ್ರತಿ ಕ್ವಿಂಟಾಲ್ ಗೆ 100 ರೂಪಾಯಿ ಹಾಗೂ ಹೋಳಾದ ಕೊಬ್ಬರಿಗೆ 422 ರೂಪಾಯಿ ಹೆಚ್ಚಿಸಲಾಗಿದೆ. ಕೊಬ್ಬರಿಗೆ ಬೆಂಬಲ ಬೆಲೆ

ಕೊಬ್ಬರಿ ಬೆಲೆಯಲ್ಲಿ ಹೆಚ್ಚಳ..!ಕೇಂದ್ರ ಸರಕಾರದಿಂದ ಗುಡ್ ನ್ಯೂಸ್ Read More »

error: Content is protected !!
Scroll to Top