ಪ್ರಚಲಿತ

ಅರಂತೋಡು: ನೆಹರು ಸ್ಮಾರಕ ಪದವಿಪೂರ್ವ ಕಾಲೇಜು ಅರಂತೋಡುನಲ್ಲಿ ಸಂವಿಧಾನ ದಿನಾಚರಣೆ

ಅರಂತೋಡು: ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನಲ್ಲಿ ಸಂವಿಧಾನ ದಿನಾಚರಣೆ ಆಚರಿಸಲಾಯಿತು.ಕಾಲೇಜಿನ ಪ್ರಭಾರ ಪ್ರಾಂಶುಪಾಲ ಸುರೇಶ್ ವಾಗ್ಲೆ ಸಂವಿಧಾನ ದಿನಾಚರಣೆಯ ಮಹತ್ವ ಮತ್ತು ಡಾ.ಬಿ.ಆರ್ ಅಂಬೇಡ್ಕರ್ ಕೊಡುಗೆಗಳನ್ನು ಸ್ಮರಿಸಿದರು. ಈ ಸಂದರ್ಭದಲ್ಲಿ ಸಂವಿಧಾನದ ಪೀಠಿಕೆಯನ್ನು ಎಲ್ಲಾ ವಿದ್ಯಾರ್ಥಿಗಳು ಮತ್ತು ಎಲ್ಲಾ ಭೋದಕ ಮತ್ತು ಬೋಧಕೇತರ ಸಿಬ್ಬಂದಿಗಳು ಸಾಮೂಹಿಕವಾಗಿ ಓದಿದರು.

ಅರಂತೋಡು: ನೆಹರು ಸ್ಮಾರಕ ಪದವಿಪೂರ್ವ ಕಾಲೇಜು ಅರಂತೋಡುನಲ್ಲಿ ಸಂವಿಧಾನ ದಿನಾಚರಣೆ Read More »

ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರೀ ಕ್ಷೇತ್ರದ ಪವಿತ್ರ ಮಹಾಪ್ರಸಾದ ಮೂಲಮೃತ್ತಿಕೆ ತೆಗೆಯುವ ಕಾರ್ಯಕ್ರಮ

ದ.ಕ ಜಿಲ್ಲೆಯ ಪ್ರಸಿದ್ದ ತೀರ್ಥ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರೀ ಕ್ಷೇತ್ರದ ಪವಿತ್ರ ಮಹಾಪ್ರಸಾದ ಮೂಲಮೃತ್ತಿಕೆ (ಹುತ್ತದ ಮಣ್ಣು)ನ್ನು ಇಂದು ತೆಗೆಯಲಾಯಿತು.ಶ್ರೀ ದೇವಳದ ಗರ್ಭಗುಡಿಯಿಂದ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯರು ವಿವಿಧ ವೈದಿಕ ವಿದಿವಿಧಾನಗಳೊಂದಿಗೆ ಮುಂಜಾನೆಯ ಶುಭ ಮುಹೂರ್ತದಲ್ಲಿ ಮೂಲಪ್ರಸಾದ ತೆಗೆದರು.

ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರೀ ಕ್ಷೇತ್ರದ ಪವಿತ್ರ ಮಹಾಪ್ರಸಾದ ಮೂಲಮೃತ್ತಿಕೆ ತೆಗೆಯುವ ಕಾರ್ಯಕ್ರಮ Read More »

ಮಂಡೆಕೋಲು ಗ್ರಾಮ ಪಂಚಾಯತ್ ಉಪಚುನಾವಣೆ,ಬಿಜೆಪಿ ಅಭ್ಯರ್ಥಿಗೆ ಭಾರೀ ಅಂತರದ ಗೆಲುವು

ತೆರವಾಗಿದ್ದ ಮಂಡೆಕೋಲು ಗ್ರಾಮ ಪಂಚಾಯತ್‌ನ 2ನೇ ವಾರ್ಡ್‌ಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ನವೀನ್ ಮುರೂರು ಜಯ ಗಳಿಸಿದ್ದಾರೆ. ನವೀನ್ 301 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.849 ಒಟ್ಡು ಮತದಾನವಾಗಿತ್ತು. ಬಿಜೆಪಿ ಬೆಂಬಲಿತ ಅಭ್ಯರ್ಥಿ ನವೀನ್ ಮುರೂರು ಅವರಿಗೆ 568 ಮತ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕೃಷ್ಣ ಮಣಿಯಾಣಿ ಅವರಿಗೆ 267 ಮತ ಲಭಿಸಿದೆ. 14 ಮತಗಳು ತಿರಸ್ಕೃತಗೊಂಡವು.ನ.23 ರಂದು ಉಪಚುನಾವಣೆ ನಡೆದಿತ್ತು. ಇಂದು ಮತ ಎಣಿಕೆ ನಡೆಸಲಾಯಿತು.

ಮಂಡೆಕೋಲು ಗ್ರಾಮ ಪಂಚಾಯತ್ ಉಪಚುನಾವಣೆ,ಬಿಜೆಪಿ ಅಭ್ಯರ್ಥಿಗೆ ಭಾರೀ ಅಂತರದ ಗೆಲುವು Read More »

ಅರೆಭಾಷೆ ಉಳಿಸಲು ಅಕಾಡೆಮಿಯಿಂದ ನಿರಂತರ ಕಾರ್ಯಕ್ರಮ : ಸದಾನಂದ ಮಾವಜಿ

ದಕ್ಷಿಣ ಕನ್ನಡ ಜಿಲ್ಲಾ ಗೌಡ ಸಂಘ ಮೈಸೂರು ಇದರ ವತಿಯಿಂದ ಪ್ರತಿಭಾ ಪುರಸ್ಕಾರ ಹಾಗೂ ದೀಪಾವಳಿ ಸಾಂಕೇತಿಕ ಆಚರಣೆ ಕಾರ್ಯಕ್ರಮ ನ. 24ರಂದು ಮೈಸೂರಿನ ಕುವೆಂಪು ನಗರದಲ್ಲಿರುವ ಉತ್ತರ ಕನ್ನಡ ಜಿಲ್ಲಾ ಸಾಂಸ್ಕೃತಿಕ ಸಂಘದಲ್ಲಿ ನಡೆಯಿತು.ದ.ಕ.ಜಿಲ್ಲಾ ಗೌಡ ಸಂಘ ಮೈಸೂರು ಇದರ ಅಧ್ಯಕ್ಷ ವಿಶ್ವನಾಥ ದೇವಸ್ಯ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಭಾಗವಹಿಸಿ ಮಾತನಾಡಿ, “ಭಾಷೆ ಉಳಿಸುವ ನಿಟ್ಟಿನಲ್ಲಿ ಅರೆಭಾಷೆ ಅಕಾಡೆಮಿ ಕೆಲಸ ಮಾಡುತ್ತಿದ್ದು, ಮುಂದಿನ

ಅರೆಭಾಷೆ ಉಳಿಸಲು ಅಕಾಡೆಮಿಯಿಂದ ನಿರಂತರ ಕಾರ್ಯಕ್ರಮ : ಸದಾನಂದ ಮಾವಜಿ Read More »

ನಿಂತಿಕಲ್ಲು: ಮಾಸ್ ಲಿಮಿಟೆಡ್‌ನ ಅಡಿಕೆ ಖರೀದಿ ಕೇಂದ್ರ ಉದ್ಘಾಟನೆ

ಮಾಸ್‌ನಿಂದ ಅಡಿಕೆ ಬೆಳೆಗಾರರ ಸಂಕಷ್ಟ ದೂರವಾಗಲಿ; ಭಾಗೀರಥಿ ಮುರುಳ್ಯಸುಳ್ಯ, ನ.೨೫: ಅಡಿಕೆ ಬೆಳೆಗಾರರು ಅಡಿಕೆಯಲ್ಲಿನ ವಿವಿಧ ರೀತಿಯ ರೋಗ ಬಾಧೆಗಳ ಜೊತೆಗೆ ವಿವಿಧ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಅಡಿಕೆ ಹಾಗೂ ಇನ್ನಿತರ ಕೃಷಿ ಬೆಳೆಗಳಿಗೆ ಉತ್ತಮ ಬೆಲೆ ಸಿಕ್ಕಾಗ ಅವರ ಬದುಕು ಹಸನಾಗುತ್ತದೆ. ಮಾಸ್ ಸಂಸ್ಥೆಯಿAದ ಅಡಿಕೆಗೆ ಉತ್ತಮ ಧಾರಣೆ ನೀಡಿ ಅಡಿಕೆ ಖರೀದಿ ಮಾಡುವ ಮೂಲಕ ಅಡಿಕೆ ಬೆಳೆಗಾರರ ಸಂಕಷ್ಟ ದೂರ ಮಾಡುವ ಕೆಲಸ ಆಗಲಿ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.ಮಂಗಳೂರು ಕೃಷಿಕರ ಸಹಕಾರಿ

ನಿಂತಿಕಲ್ಲು: ಮಾಸ್ ಲಿಮಿಟೆಡ್‌ನ ಅಡಿಕೆ ಖರೀದಿ ಕೇಂದ್ರ ಉದ್ಘಾಟನೆ Read More »

ನ.25ಕ್ಕೆ ನಿಂತಿಕಲ್ಲಿನಲ್ಲಿ ಅಡಿಕೆ ಖರೀದಿ ಕೇಂದ್ರ ಉದ್ಘಾಟನೆ

ಸುಳ್ಯ:ಮಂಗಳೂರು ಕೃಷಿಕರ ಸಹಕಾರಿ ಸಂಘ ನಿಯಮಿತ ಮಂಗಳೂರು( ಮಾಸ್ ಲಿಮಿಟೆಡ್ಡ್ ವತಿಯಿಂದ ಮುರುಳ್ಯ ಎಣ್ಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ನಿಂತಿಕಲ್ಲು ಇದರ ಸಹಯೋಗದಲ್ಲಿ ಸಹಕಾರ ರತ್ನ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಸಹಕಾರದೊಂದಿಗೆ ಅಡಿಕೆ ಖರೀದಿ ಕೇಂದ್ರದ ಉದ್ಘಾಟನಾ ಸಮಾರಂಭ ನ.25ರಂದು ಸೋಮವಾರ ಪೂ.10.30ಕ್ಕೆ ನಿಂತಿಕಲ್ಲು ‘ಸಾಧನಾ ಸಹಕಾರಿ ಸೌಧ’ದಲ್ಲಿ ನಡೆಯಲಿದೆ ಎಂದು ಮಾಸ್ ಲಿಮಿಟೆಡ್‌ನ ಅಧ್ಯಕ್ಷರಾದ ಕೆ.ಸೀತಾರಾಮ ರೈ ಸವಣೂರು ತಿಳಿಸಿದ್ದಾರೆ. ಸುಳ್ಯ ಪ್ರೆಸ್‌ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಅವರು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ

ನ.25ಕ್ಕೆ ನಿಂತಿಕಲ್ಲಿನಲ್ಲಿ ಅಡಿಕೆ ಖರೀದಿ ಕೇಂದ್ರ ಉದ್ಘಾಟನೆ Read More »

ಮಿನಿ ವಿಧಾನ ಸೌಧ ಸುಳ್ಯ- ದಲ್ಲಿ ಲಿಫ್ಟ್ ಸೌಲಭ್ಯವನ್ನು ಕಲ್ಪಿಸಿಕೊಡುವಂತೆ ಸಾಮಾಜಿಕ ಕಾರ್ಯಕರ್ತ ಡಿ ಎಂ ಶಾರಿಕ್ ರವರು ಪುತ್ತೂರು ಎ.ಸಿ ಗೆ ಮನವಿ

ಸುಳ್ಯ ತಾಲೂಕು ಕಛೇರಿ, ಉಪನೋಂದಣಾಧಿಕಾರಿಗಳ ಕಛೇರಿ ಮತ್ತು ಭೂ ಮಾಪನಾ ಇಲಾಖೆಯ ಕಚೇರಿಗಳು ಸುಳ್ಯ ಮಿನಿ ವಿಧಾನ ಸೌಧದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಎರಡು ಮಹಡಿಗಳನ್ನು ಹೊಂದಿರುತ್ತದೆ. ಇದರಲ್ಲಿ ಲಿಫ್ಟ್ ಸೌಲಭ್ಯವಿಲ್ಲದ್ದರಿಂದ ಹಿರಿಯ ನಾಗರಿಕರಿಗೆ ಮತ್ತು ಅಂಗವಿಕಲರಿಗೆ ತುಂಬಾ ತೊಂದರೆಯಾಗಿರುತ್ತದೆ. ಆದುದರಿಂದ ಸದ್ದಿ ‘ಮಿನಿ ವಿಧಾನ ಸೌಧ ಸುಳ್ಯ- ದಲ್ಲಿ ಲಿಫ್ಟ್ ಸೌಲಭ್ಯವನ್ನು ಕಲ್ಪಿಸಿಕೊಡುವಂತೆ ಸಾಮಾಜಿಕ ಕಾರ್ಯಕರ್ತ ಡಿ ಎಂ ಶಾರಿಕ್ ರವರು ಪುತ್ತೂರು ಎ ಸಿ ರವರಿಗೆ ಮನವಿ ನೀಡಿದ್ದಾರೆ.

ಮಿನಿ ವಿಧಾನ ಸೌಧ ಸುಳ್ಯ- ದಲ್ಲಿ ಲಿಫ್ಟ್ ಸೌಲಭ್ಯವನ್ನು ಕಲ್ಪಿಸಿಕೊಡುವಂತೆ ಸಾಮಾಜಿಕ ಕಾರ್ಯಕರ್ತ ಡಿ ಎಂ ಶಾರಿಕ್ ರವರು ಪುತ್ತೂರು ಎ.ಸಿ ಗೆ ಮನವಿ Read More »

ಅರಂತೋಡಿನಲ್ಲಿ ಅಕ್ರಮ ಮದ್ಯ ಮಾರಾಟ ಪತ್ತೆ : ಪ್ರಕರಣ ದಾಖಲು

ಅರಂತೋಡು ಅಡ್ಕಬಳೆ ಸಂಪರ್ಕ ರಸ್ತೆಯಲ್ಲಿರುವ ಚಿಕನ್ ಸೆಂಟರ್ ಒಂದರಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ಅಬಕಾರಿ ಇಲಾಖೆ ದಾಳಿ ನಡೆಸಿ ಮದ್ಯ ವಶಪಡಿಸಿಕೊಂಡಿದ್ದಾರೆ ಎಂದುವ ಬಂದಿದೆ.ನ 23 ರಂದು ರಾತ್ರಿ 9:00ಗಂಟೆಗೆ ಅರಂತೋಡು ಗ್ರಾಮದ ಅರಂತೋಡು ಪೇಟೆಯ ಅಡ್ಕಬಳೆ ರಸ್ತೆಯ ಗುಳಿಗರಾಜ ಚಿಕನ್ ಸೆಂಟರ್ ಎಂಬ ಹೆಸರಿನ ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ತುಂಬಿದ ಸ್ಯಾಚೇಟ್ ಪ್ಯಾಕೇಟ್ಗಳನ್ನು ಸಂಗ್ರಹ ಮಾಡಿಕೊಂಡು ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ಸುಳ್ಯ ಪೊಲೀಸ್‌ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಸಂತೋಷ್ ಬಿ

ಅರಂತೋಡಿನಲ್ಲಿ ಅಕ್ರಮ ಮದ್ಯ ಮಾರಾಟ ಪತ್ತೆ : ಪ್ರಕರಣ ದಾಖಲು Read More »

ದರ್ಖಾಸ್ : ಆಟೋಟ ಸ್ಪರ್ಧೆ ಉದ್ಘಾಟನೆ

ಸಂಪಾಜೆ ದರ್ಖಾಸ್ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಮಕ್ಕಳಿಗೆ ಹಾಗೂ ಪೋಷಕರಿಗೆ ಆಟೋಟ ಸ್ಪರ್ಧಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪೋಷಕರಾದ ಶ್ರೀಮತಿ ಹೇಮಾವತಿ ಲಕ್ಷ್ಮೀನಾರಾಯಣ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಶಿಕ್ಷಕರಾದ ಶ್ರೀಯುತ ಚಿದಾನಂದ ಮಾಸ್ತರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪಂಚಾಯತ್ ಸದಸ್ಯರಾದ ಶ್ರೀ ಅಬೂಸಾಲಿ ಪಿ ಕೆ, ಶ್ರೀ ಶೌವಾದ್ ಗೂನಡ್ಕ, ಸಮುದಾಯ ಆರೋಗ್ಯ ಅಧಿಕಾರಿ ಶ್ರೀಮತಿ ಹರ್ಷಿತಾ, ಸಂಪಾಜೆ ಗ್ರಾಮದ ಕೃಷಿ ಸಖಿ ಮೋಹಿನಿ ವಿಶ್ವನಾಥ್ ( ನಿಶಾ )

ದರ್ಖಾಸ್ : ಆಟೋಟ ಸ್ಪರ್ಧೆ ಉದ್ಘಾಟನೆ Read More »

ಕುಂತೂರು ಶಾಲೆಯ ಕೊಠಡಿ ನಿರ್ಮಾಣಕ್ಕೆ 29 ಲಕ್ಷರೂ. ಅನುದಾನ ಮಂಜೂರು

ಕಟ್ಟಡ ಕುಸಿದು ಬಿದ್ದು ವಿದ್ಯಾರ್ಥಿಗಳು ಗಾಯಗೊಂಡು ಭಾರೀ ಸುದ್ದಿಯಾಗಿದ್ದ ಕಡಬ ತಾಲೂಕಿನ ಪೆರಾಬೆ ಗ್ರಾಮದ ಕುಂತೂರು ಸರಕಾರಿ ಉನ್ನತ ಹಿ.ಪ್ರಾ.ಶಾಲೆಗೆ ನೂತನ ಕೊಠಡಿ ನಿರ್ಮಾಣಕ್ಕಾಗಿ 29 ಲಕ್ಷ ರೂ. ಅನುದಾನ ಮಂಜೂರಾಗಿದೆ ಎಂದು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ತಿಳಿಸಿದ್ದಾರೆ.ಆ.27 ರಂದು ಶಿಥಿಲಗೊಂಡಿದ್ದ ಶಾಲಾ ಕಟ್ಟಡದ ಪಂಚಾಂಗ ದುರಸ್ತಿ ಕಾಮಗಾರಿ ನಡೆಯುತ್ತಿದ್ದ ವೇಳೆ ಕುಂತೂರು ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ ಕುಸಿದ ಪರಿಣಾಮ ನಾಲ್ವರು ವಿದ್ಯಾರ್ಥಿಗಳು ಗಾಯಗೊಂಡಿದ್ದರು. ಘಟನೆಯ ಹಿನ್ನೆಲೆಯಲ್ಲಿ ಜಿ.ಪಂ.

ಕುಂತೂರು ಶಾಲೆಯ ಕೊಠಡಿ ನಿರ್ಮಾಣಕ್ಕೆ 29 ಲಕ್ಷರೂ. ಅನುದಾನ ಮಂಜೂರು Read More »

error: Content is protected !!
Scroll to Top