ಪ್ರಚಲಿತ

ಸಿ.ಸಿ. ಆರ್. ಟಿ.ಬಳಗ ಸುಳ್ಯ ವತಿಯಿಂದ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಮೋಹನ್ ಎಣ್ಮೂರಿಗೆ ಸನ್ಮಾನ

ಸಿ.ಸಿ. ಆರ್. ಟಿ.ಬಳಗ ಸುಳ್ಯ ಇವರ ವತಿಯಿಂದ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಮೋಹನ್ ಎಣ್ಮೂ ರು ಇವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷ ರಾದ ಚಿನ್ನಪ್ಪ ಗೌಡ ಹಾಗೂ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಗಳಾದ ಶೀತಲ್ ಮೇಡಂ ಸನ್ಮಾನಿಸಿದರು. ನೂತನ ಶಿಕ್ಷಣ ಸಂಯೋಜಕರಾದ ಉದಯ್ ಕುಮಾರ್, ಮತ್ತು ನಾರಾಯಣ ಇವರನ್ನು ಅಭಿನಂದಿಸಲಾಯಿ ತು. ಕೇಶವ ಸಿ. ಎ ಕಾರ್ಯದರ್ಶಿ ccrt ಬಳಗ ಸುಳ್ಯ. ಸ್ವಾಗತಿಸಿದರು. ಸಂಯೋಜಕರಾದ ನಾರಾಯಣ ಐವರ್ಣಾಡು ವಂದಿಸಿದರು. ಗಿರಿಜಾ ಟೀಚರ್, ನಿವೃತ್ತ ಶಿಕ್ಷಕಿ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ […]

ಸಿ.ಸಿ. ಆರ್. ಟಿ.ಬಳಗ ಸುಳ್ಯ ವತಿಯಿಂದ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಮೋಹನ್ ಎಣ್ಮೂರಿಗೆ ಸನ್ಮಾನ Read More »

ರಶ್ಮಿ ಆಶೋಕ್ ನೆಕ್ರಾಜೆಯವರಿಗೆ ಜಿಲ್ಲಾ ಮಕ್ಕಳ ರಕ್ಷಾಧಿಕಾರಿಯಾಗಿ ಹೆಚ್ಚುವರಿ ಪ್ರಭಾರ

ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಂಗಳೂರು ಇಲ್ಲಿ ಜಿಲ್ಲಾ ನಿರೂಪಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ರಶ್ಮಿ ಅಶೋಕ್ ನೆಕ್ರಾಜೆಯವರಿಗೆ ಜಿಲ್ಲಾ ಮಕ್ಕಳ ರಕ್ಷಾಧಿಕಾರಿಯಾಗಿ ಹೆಚ್ಚುವರಿ ಪ್ರಭಾರ ವಹಿಸಿಕೊಂಡಿದ್ದಾರೆ.ಕಾಂಗ್ರೆಸ್ ಮುಖಂಡ ಹಾಗೂ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯ.ಸ.ಸಮಿತಿ ಸದಸ್ಯರಾಗಿರುವ ಅಶೋಕ್‌ ನೆಕ್ರಾಜೆಯವರ ಪತ್ನಿಯಾಗಿರುವ ಇವರು ಕಳೆದ 3.5 ವರ್ಷಗಳ ಹಿಂದೆ ಸುಳ್ಯದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ರಶ್ಮಿ ಆಶೋಕ್ ನೆಕ್ರಾಜೆಯವರಿಗೆ ಜಿಲ್ಲಾ ಮಕ್ಕಳ ರಕ್ಷಾಧಿಕಾರಿಯಾಗಿ ಹೆಚ್ಚುವರಿ ಪ್ರಭಾರ Read More »

ಸೆ.22ಕ್ಕೆ ಅಂಜಲಿ ಮೊಂಟೇಸ್ಸೂರಿ ಸ್ಕೂಲ್ ನಲ್ಲಿ ನಾಲ್ಕನೇ ವರ್ಷದ ಗೊಂಬೆ ಹಬ್ಬ

ಅಂಜಲಿ ಮೊಂಟೇಸ್ಸೂರಿ ಸ್ಕೂಲ್ ನಲ್ಲಿ ಇತಿಹಾಸ ಪ್ರಸಿದ್ದವಾದ 4 ನೇ ವರ್ಷದ ಗೊಂಬೆ ಹಬ್ಬ ಸೆ.22ರ ಸೋಮವಾರ ದಂದು ಕೆಂಪೇಗೌಡ ಪ್ರಶಸ್ತಿ ಪುರಸ್ಕೃತ ನಿತ್ಯಾನಂದ ಮುಂಡೋಡಿಯವರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶುಭಕರ ಬಿ. ಸಿ ರವರು ವಹಿಸಲಿದ್ದಾರೆ. ನವರಾತ್ರಿ ಯ ಒಂಭತ್ತು ದಿನವೂ ಸಾರ್ವಜನಿಕರಿಗೆ ಗೊಂಬೆ ಹಬ್ಬವನ್ನು ವೀಕ್ಷಿಸಲು ಮುಕ್ತ ಅವಕಾಶವಿದೆ ಎಂದು ಶಾಲೆಯ ಸಂಚಾಲಕಿ ಗೀತಾಂ ಜಲಿ ಯವರು ತಿಳಿಸಿದ್ದಾರೆ.

ಸೆ.22ಕ್ಕೆ ಅಂಜಲಿ ಮೊಂಟೇಸ್ಸೂರಿ ಸ್ಕೂಲ್ ನಲ್ಲಿ ನಾಲ್ಕನೇ ವರ್ಷದ ಗೊಂಬೆ ಹಬ್ಬ Read More »

ಪುತ್ತೂರು : ನಾಳೆ (ಸೆ.21) ಮೆಡ್ ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆ ಲೋಕಾರ್ಪಣೆ

ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪುತ್ತೂರು ಸಮೀಪದ ಸಂಪ್ಯದಲ್ಲಿ ಅತ್ಯಾಧುನಿಕ ಸೌಕರ್ಯಗಳೊಂದಿಗೆ ಸುಸಜ್ಜಿತವಾಗಿ ನಿರ್ಮಾಣಗೊಂಡಿರುವ ಮೆಡ್ ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಯ ಲೋಕಾರ್ಪಣಾ ಸಮಾರಂಭ ಸೆ.21ರಂದು ಬೆಳಗ್ಗೆ 10.30ಕ್ಕೆ ನಡೆಯಲಿದೆ ಎಂದು ಆಸ್ಪತ್ರೆ ಯ ಕಾನೂನು ಸಲಹೆಗಾರ ಮೂಸಕುಂಜಿ ಪೈಂಬಿಚಾಲ್ ತಿಳಿಸಿದರು.ಸೆ. 20ರಂದು ಅವರು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ಆಸ್ಪತ್ರೆಯನ್ನು ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಉದ್ಘಾಟಿಸಲಿದ್ದು, ಒ.ಟಿ. ಕಾಂಪ್ಲೆಕ್ಸ್‌ನ್ನು ರಾಜ್ಯ ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ಉದ್ಘಾಟಿಸಲಿದ್ದಾರೆ. ಪುತ್ತೂರು ಶಾಸಕ ಅಶೋಕ್

ಪುತ್ತೂರು : ನಾಳೆ (ಸೆ.21) ಮೆಡ್ ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆ ಲೋಕಾರ್ಪಣೆ Read More »

ಇಂದು ಪವರ್ ಕಟ್,ಎಲ್ಲೆಲ್ಲಿ ಪವರ್ ಕಟ್ ಇದೆ ಇಲ್ಲಿದೆ ಮಾಹಿತಿ

ಸೆ.20ರಂದು ಮೆಸ್ಕಾಂ ಸುಳ್ಯ ಉಪವಿಭಾಗ ವ್ಯಾಪ್ತಿಯ 33/11 ಕೆ.ವಿ. ಸುಳ್ಯ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಲ್ಲಾ 11 ಕೆ.ವಿ. ಫೀಡರುಗಳಲ್ಲಿ ತುರ್ತು ನಿಯತಕಾಲಿಕ ನಿರ್ವಹಣಾ ಕೆಲಸವನ್ನು ಹಮ್ಮಿಕೊಂಡಿರುವುದರಿಂದ 11ಕೆ.ವಿ ಸುಳ್ಯ-1 ಕೇರ್ಪಳ, ಸುಳ್ಯ-2 ಶ್ರೀರಾಂಪೇಟೆ,, ತೋಡಿಕಾನ, ಕೊಲ್ಕಾರ್, ದೇವರಗುಂಡ, ಅಜ್ಜಾವಾರ, ಉಬರಡ್ಕ, ಕಲ್ಲು ಗುಂಡಿ, ಮಂಡೆಕೋಲು ಫೀಡರುಗಳಲ್ಲಿ ಬೆಳಿಗ್ಗೆ 10:00 ರಿಂದ ಸಂಜೆ 5:00 ರ ತನಕ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು ಗ್ರಾಹಕರು ಸಹಕರಿಸಬೇಕಾಗಿ ಮೆಸ್ಕಾಂ ಪ್ರಕಟನೆಯಲ್ಲಿ ತಿಳಿಸಿದೆ.

ಇಂದು ಪವರ್ ಕಟ್,ಎಲ್ಲೆಲ್ಲಿ ಪವರ್ ಕಟ್ ಇದೆ ಇಲ್ಲಿದೆ ಮಾಹಿತಿ Read More »

ಪೂರ್ಣಿಮಾ ತೋಟಪ್ಪಾಡಿಯವರಿಗೆ ರಾಜ್ಯಮಟ್ಟದ ಭಾವೈಕ್ಯತಾ ಸಾಹಿತ್ಯ ರತ್ನ ಪ್ರಶಸ್ತಿ

ವಿವಿಧ ಕಡೆಗಳಲ್ಲಿ ಜರುಗಿದ ಕಾರ್ಯಕ್ರಮ ಹಾಗೂ ಕವಿಗೋಷ್ಠಿಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಪಡೆದ ತಮ್ಮ ಸಾಹಿತ್ಯ ಕ್ಷೇತ್ರದ ಸೇವೆಯನ್ನು ಗುರುತಿಸಿ 2025 ಸೆಪ್ಟೆಂಬರ್ 14ರಂದು ಮಂಗಳೂರಿನ ದೇರಳಕಟ್ಟೆಯಲ್ಲಿ ನಡೆದ ರಾಜ್ಯಮಟ್ಟದ ಚುಟುಕು ಕವಿಗೋಷ್ಠಿಯಲ್ಲಿ ಪೂರ್ಣಿಮಾ ತೋಟಪ್ಪಾಡಿಯವರಿಗೆ ಭಾವೈಕ್ಯತಾ ಸಾಹಿತ್ಯ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಪೂರ್ಣಿಮಾ ತೋಟಪ್ಪಾಡಿಯವರಿಗೆ ರಾಜ್ಯಮಟ್ಟದ ಭಾವೈಕ್ಯತಾ ಸಾಹಿತ್ಯ ರತ್ನ ಪ್ರಶಸ್ತಿ Read More »

ಮಡಿಕೇರಿ ದಸರಾ ಕವಿಗೋಷ್ಠಿಗೆ ಡಾ. ಅನುರಾಧಾ ಕುರುಂಜಿ ಆಯ್ಕೆ

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರು, ವ್ಯಕ್ತಿತ್ವ ವಿಕಸನ ತರಬೇತುದಾರರೂ ಆದ ಲೇಖಕಿ, ಕವಯತ್ರಿ ಡಾ. ಅನುರಾಧಾ ಕುರುಂಜಿಯವರು 2025 ರ ಮಡಿಕೇರಿ ದಸರ ಬಹುಭಾಷಾ ಕವಿಗೋಷ್ಠಿಯಲ್ಲಿ ಕವನ ವಾಚಿಸಲು ಆಯ್ಕೆಯಾಗಿರುತ್ತಾರೆ. ಸೆಪ್ಟೆಂಬರ್ 25 ರಂದು ಮಡಿಕೇರಿಯ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ನಡೆಯಲಿರುವ ಬಹುಭಾಷಾ ಕವಿಗೋಷ್ಠಿಯಲ್ಲಿ ಇವರು ಕವನ ವಾಚಿಸಲಿದ್ದು ಈ ಹಿಂದೆ ಹಂಪಿ ಉತ್ಸವ ಹಾಗೂ ತಾಲೂಕು, ಜಿಲ್ಲೆ, ರಾಜ್ಯ, ಕೇರಳ ರಾಜ್ಯ, ಕಾಸರಗೋಡು ಮೊದಲಾದ ಕಡೆಗಳಲ್ಲಿ ಕವನ, ಚುಟುಕು ವಾಚನಗಳನ್ನು

ಮಡಿಕೇರಿ ದಸರಾ ಕವಿಗೋಷ್ಠಿಗೆ ಡಾ. ಅನುರಾಧಾ ಕುರುಂಜಿ ಆಯ್ಕೆ Read More »

ಆರಂತೋಡು : ಗ್ರಾಮ ಪಂಚಾಯತ್ ಸಾಮಾನ್ಯ ಸಭೆ

ಆರಂತೋಡು ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯು ಪಂಚಾಯತ್ ಅಧ್ಯಕ್ಷರಾದ ಕೇಶವ ಅಡ್ತಲೆಯವರ ಅಧ್ಯಕ್ಚತೆಯಲ್ಲಿ ಪಂಚಾಯತ್ “ಗ್ರಾಮ ಸ್ವರಾಜ್” ಸಭಾಂಗಣದಲ್ಲಿ ಸೆ.18ರಂದು ನಡೆಯಿತು.ಸಭೆಯಲ್ಲಿ ಪಂಚಾಯತ್ ಆಡಳಿತದ ಆಡಳಿತಾವಧಿ 3,4ತಿಂಗಳಲ್ಲಿ ಮುಗಿಯುವುದರಿಂದ ಬೆಂಕಿಗೆ ಆಹುತಿಯಾದ ಘನ ತ್ಯಾಜ್ಯ ಘಟಕ “ಸ್ವಚ್ಛ ಸಂಕೀರ್ಣ”ದ ಕಟ್ಟಡ ರಚನೆಗೆ ಶೀಘ್ರದಲ್ಲಿ ಟೆಂಡರ್ ಪ್ರಕ್ರಿಯೆ ನಡೆಸಿ ಕಾಮಗಾರಿ ಕೈಗೊಳ್ಳಳು ಕ್ರಮ ವಹಿಸಲು ಸರ್ವಾನುಮತದಿಂದ ತೀರ್ಮಾನಿಸಲಾಯಿತು. ಮೀಟಿಂಗ್ ಹಾಲ್, ಅಧ್ಯಕ್ಷ ಉಪಾಧ್ಯಕ್ಷರ ಚೇಂಬರ್ ಗಳಲ್ಲಿ ಸ್ಥಳಾವಕಾಶ ಕೊರತೆ ಇರುವುದರಿಂದ ಬದಲಿ ವ್ಯವಸ್ಥೆಯ ಬಗ್ಗೆ ಚರ್ಚಿಸಲಾಯಿತು. ತೋಡಿಕಾನ ಗ್ರಾಮದಲ್ಲಿ

ಆರಂತೋಡು : ಗ್ರಾಮ ಪಂಚಾಯತ್ ಸಾಮಾನ್ಯ ಸಭೆ Read More »

ವಿದ್ಯಾರ್ಥಿಗಳು ಭಾಷೆ ಸಂಸ್ಕೃತಿಗಳನ್ನು ಉಳಿಸಿ ಬೆಳೆಸಲು ಶಕ್ತರು: ಸದಾನಂದ ಮಾವಜಿ

ವಿದ್ಯಾರ್ಥಿಗಳಿಗೆ ತಮ್ಮ ಭಾಷೆ ಮತ್ತು ಸಂಸ್ಕೃತಿಯ ಮಹತ್ವದ ಅರಿವು ಮೂಡಿದರೆ ಅದು ನಿರಂತರವಾಗಿ ಮುಂದೆ ಸಾಗುತ್ತದೆ. ಅವರು ಮುಂದಿನ ತಲೆಮಾರಿನ ಸಾಂಸ್ಕೃತಿ ರಾಯಭಾರಿಗಳು ಎಂದು ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ ಹೇಳಿದರು. ಅವರು ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನ ಬೆಳ್ಳಿಹಬ್ಬ ಸಭಾಂಗಣದಲ್ಲಿ ಮಂಗಳವಾರ ನಡೆದ ದಕ್ಷಿಣ ಕನ್ನಡ ಜಿಲ್ಲಾ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಸಂಘಗಳ ಸಮ್ಮಿಲನ ಮತ್ತು ಸ್ಫರ್ಧೆಗಳ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಿದ್ದರು.“ಕಾಲೇಜಿಲಿ ಅರೆಭಾಷೆ ಸಾಹಿತ್ಯ ಮತ್ತೆ ಸಾಂಸ್ಕೃತಿಕ

ವಿದ್ಯಾರ್ಥಿಗಳು ಭಾಷೆ ಸಂಸ್ಕೃತಿಗಳನ್ನು ಉಳಿಸಿ ಬೆಳೆಸಲು ಶಕ್ತರು: ಸದಾನಂದ ಮಾವಜಿ Read More »

ಸುಳ್ಯ : ರಾಣಿ ಅಬ್ಬಕ್ಕ ರಥಯಾತ್ರೆಗೆ ಸುಳ್ಯದಲ್ಲಿ ಅದ್ದೂರಿ ಸ್ವಾಗತ

ಎ.ಬಿ.ವಿ.ಪಿ ವತಿಯಿಂದ ಭಾರತದ ಮೊದಲ ಸ್ವಾತಂತ್ರ್ಯ ಹೋರಾಟಗಾರ್ತಿ ವೀರ ರಾಣಿ ಅಬ್ಬಕ್ಕ ಅವರ ೫೦೦ನೇ ಜಯಂತ್ಯೋತ್ಸವದ ಅಂಗವಾಗಿ ಹಮ್ಮಿಕೊಂಡ ರಾಣಿ ಅಬ್ಬಕ್ಕ ರಥಯಾತ್ರೆ ಸುಳ್ಯಕ್ಕೆ ಸೆ.15ರಂದು ಆಗಮಿಸಿತು.ಮಡಿಕೇರಿಯಿಂದ ಗಾಂಧಿನಗರಕ್ಕೆ ಆಗಮಿಸಿದ ರಥಯಾತ್ರೆಗೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಸೇರಿದಂತೆ ಗಣ್ಯರು ಅದ್ದೂರಿ ಸ್ವಾಗತ ಕೋರಿದರು.ರಾಣಿ ಅಬ್ಬಕ್ಕ ಪ್ರತಿಮೆಗೆ ಶಾಸಕಿ ಭಾಗೀರಥಿ ಯವರು ಹಾರಾರ್ಪಣೆಗೈದರು. ನಗರ ಪಂಚಾಯತ್‌ ಅಧ್ಯಕ್ಷ ಶಶಿಕಲಾ ಎ. ನೀರಬಿದಿರೆ, ಹಿರಿಯರಾದ ಪಿ.ಕೆ.ಉಮೇಶ್., ಎ.ಬಿ.ವಿ.ಪಿ. ಪ್ರಮುಖರಾದ ಕುಲದೀಪ್ ಪೆಲ್ತೆಡ್ಕ, ನಂದನ್ ಪವಿತ್ರಮಜಲು ಪುಷ್ಪಾರ್ಚನೆಗೈದರು.ಈ ಸಂದರ್ಭದಲ್ಲಿ ಪ್ರಮುಖರಾದ

ಸುಳ್ಯ : ರಾಣಿ ಅಬ್ಬಕ್ಕ ರಥಯಾತ್ರೆಗೆ ಸುಳ್ಯದಲ್ಲಿ ಅದ್ದೂರಿ ಸ್ವಾಗತ Read More »

error: Content is protected !!
Scroll to Top