( ಕವನ) ಶ್ರೀ ಕೃಷ್ಣ
ದೇವಕಿಯ ಗರ್ಭದಲ್ಲಿ ಬೆಳಕು ಕಂಡ|ಯಶೋಧೆಯ ಮಡಿಲಲ್ಲಿ ಮಮತೆಯ ಕಂದ||ಬೆಂಕಿ ಎಂದವರಿಗೆ ಬೆಳಕಾಗಿ ಅರಳಲು ವದನ|ಸುಶ್ರಾವ್ಯ ಕೋಮಲ ಹೃದಯದ ಕೊಳಲ ವಾದನ ||ಮಾವ ಕಂಸನೇನೋ ಅತೀ ಕಟುಕನಲ್ಲ|ಹಾಗಿದ್ದರೆ ತಂಗಿಯ ಪ್ರಾಣ ಉಳಿಸುತ್ತಿರಲಿಲ್ಲ||ಕೋಪದಿಂದ ಭಯಪಟ್ಟಿದ್ದು ಸಾವಿಗೆ ಮಾತ್ರ|ನಿನ್ನಿಂದಲೇ ದುಷ್ಟರ ಸಾವಿಗೆ ಸೂತ್ರ||ರಾಧೆಯ ಹೃದಯದಲ್ಲಿ ಪ್ರೇಮಿಯಾದೆ|ರುಕ್ಮಿಣಿಯ ಮನಸಲ್ಲಿ ಪ್ರೀತಿಯ ಪತಿಯಾದೆ||ಜಗದೋಧ್ದಾರಕ ನಿನಗೇ ನಿನ್ನ ಪ್ರೀತಿ ದಕ್ಕಿಲ್ಲ|ಜಗದಲ್ಲಿರುವ ಮೂಢರಿಗೆ ನಿಜ ಪ್ರೀತಿ ಸಿಕ್ಕಿಲ್ಲ||ದುಡುಕಿನ ನಿರ್ಧಾರ ತಕ್ಷಣಕ್ಕೆ ಬರುವ ವೈರಾಗ್ಯ ಕ್ಷಣಿಕ| ಅನುಭವಿಸಿ ಜಯಿಸಿದರೆ ಮಾತ್ರ ಮಾಣಿಕ್ಯ ||ಬಾಳಿ ಬದುಕಬೇಕಾದವರು ಮುದುಡಲು ಕಾರಣ| ಮಾತಾಪಿತೃರು […]