July 2023

ಭಾರೀ ಮಳೆ ಹಿನ್ನಲೆ: ದ.ಕ ಜಿಲ್ಲೆಯ 5 ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಮಂಗಳೂರು ಸೇರಿ 5 ತಾಲೂಕಿನ ಎಲ್ಲಾ ಶಾಲಾ ಕಾಲೇಜುಗಳಿಗೆ ಜಿಲ್ಲಾಡಳಿತ ಇಂದು(ಮಂಗಳವಾರ) ರಜೆ ಘೋಷಣೆ ಮಾಡಿದೆ.ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಹವಾಮಾನ ಇಲಾಖಾ ಮುನ್ಸೂಚನೆಯನ್ನು ಗಮನದಲ್ಲಿರಿಸಿ ಮಕ್ಕಳ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡು, ಜುಲೈ 4ರಂದು ಮಂಗಳೂರು, ಮೂಲ್ಕಿ, ಉಲ್ಲಾಳ, ಮೂಡಬಿದರೆ ಹಾಗೂ ಬಂಟ್ವಾಳ ತಾಲೂಕುಗಳ ಎಲ್ಲಾ ಅಂಗನವಾಡಿ, ಪ್ರಾಥಮಿಕ ಶಾಲ ಪ್ರೌಢಶಾಲೆ, ಪದವಿ ಪೂರ್ವ ಹಾಗೂ ಪದವಿ ಕಾಲೇಜು ಮುಂತಾದ ಶೈಕ್ಷಣಿಕ ಸಂಸ್ಥೆಗಳಿಗೆ ಮುಂಜಾಗ್ರತಾ ಕ್ರಮವಾಗಿ […]

ಭಾರೀ ಮಳೆ ಹಿನ್ನಲೆ: ದ.ಕ ಜಿಲ್ಲೆಯ 5 ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ Read More »

ಜಲಪಾತಕ್ಕೆ ಧುಮುಕಿದ ಯುವಕ: ನೀರಲಿ ಮುಳುಗಿ ಸಾವು

ತಿರುಪತಿ ಸಮೀಪದ ಜಲಪಾತದಲ್ಲಿ ಮಂಗಳೂರಿನ ಯುವಕನೊಬ್ಬ ಜಲಪಾತಕ್ಕೆ ಧುಮುಕಿ ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ವರದಿಯಾಗಿದೆ.ಕುಳಾಯಿ ಹೊನ್ನೆಕಟ್ಟೆ ನಿವಾಸಿ ಸುಮಂತ್‌ ಅಮೀನ್‌ (23) ಮೃತರು ಯುವಕ ಸುಮಂತ್‌ ಅವರು ಚೆನ್ನೈಯ ಪ್ರತಿಷ್ಠಿತ ರಾಜೀವ ಗಾಂಧಿ ಯುನಿವರ್ಸಿಟಿಯಲ್ಲಿ ಎಂಎಸ್ಸಿ ವ್ಯಾಸಂಗ ಮಾಡುತ್ತಿದ್ದು, ತಂದೆ ಸುರೇಶ್‌ ಅಮೀನ್‌ ಬಳಿ ತಿರುಪತಿಗೆ ಹೋಗುವುದಾಗಿ ಹೇಳಿದ್ದರು. ಮಧ್ಯಾಹ್ನ 2.30ರ ವೇಳೆಗೆ ತಿರುಪತಿಯಿಂದ 60 ಕಿ.ಮೀ. ದೂರದ ತಲಕೋನ ಜಲಪಾತಕ್ಕೆ ತನ್ನ ಸಹಪಾಠಿ ಜತೆ ಹೋಗಿ ಸ್ನಾನ ಮಾಡುತ್ತಿದ್ದರು. ಈ ಸಂದರ್ಭಬಂಡೆಕಲ್ಲಿನಿಂದ 10 ಅಡಿಕೆಳಭಾಗಕ್ಕೆ

ಜಲಪಾತಕ್ಕೆ ಧುಮುಕಿದ ಯುವಕ: ನೀರಲಿ ಮುಳುಗಿ ಸಾವು Read More »

ಕೊಡಗು ಸಂಪಾಜೆ ಹೆದ್ದಾರಿ ಕುಸಿಯುವ ಭೀತಿ: ತಾತ್ಕಾಲಿಕ ರಸ್ತೆ ಮೂಲಕ ಸಂಚಾರ ವ್ಯವಸ್ಥೆ

ಕೊಡಗು ಸಂಪಾಜೆ ಗ್ರಾಮದ ಕೊಯನಾಡು ಅರಣ್ಯ ಇಲಾಖಾ ಕಚೇರಿಯ ಬಳಿ ಮತ್ತೆ ಹೆದ್ದಾರಿ ಕುಸಿಯುವ ಭೀತಿ ಎದುರಾಗಿದ್ದು, ಬ್ಯಾರಿಕೇಡ್ ಅಳವಡಿಸಿ ಮತ್ತೆ ರಸ್ತೆ ಬಂದ್ ಮಾಡಲಾಗಿದ್ದು, ಮುಖ್ಯ ರಸ್ತೆಯ ಬದಿಯಲ್ಲಿ ಕಳೆದ ಬಾರಿ ನಿರ್ಮಾಣ ಮಾಡಿದ್ದ ತಾತ್ಕಾಲಿಕ ರಸ್ತೆ ಮೂಲಕ ವಾಹನ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.ಕಳೆದ ವರ್ಷದ ಮಳೆಗಾಲದಲ್ಲಿ ಈ ಪ್ರದೇಶದಲ್ಲಿ ಹೆದ್ದಾರಿಯಲ್ಲಿ ಬಿರುಕು ಕಾಣಿಸಿಕೊಂಡ ಕಾರಣ ಬ್ಯಾರಿಕೇಡ್ ಅಳವಡಿಸಿ, ರಸ್ತೆ ಬಂದ್ ಮಾಡಿ, ಮುಖ್ಯ ರಸ್ತೆಯ ಬದಿಯಲ್ಲಿ ಜೆಸಿಬಿ ಮೂಲಕ ತಾತ್ಕಾಲಿಕ ರಸ್ತೆ ನಿರ್ಮಾಣ ಮಾಡಲಾಗಿತ್ತು.ಈ

ಕೊಡಗು ಸಂಪಾಜೆ ಹೆದ್ದಾರಿ ಕುಸಿಯುವ ಭೀತಿ: ತಾತ್ಕಾಲಿಕ ರಸ್ತೆ ಮೂಲಕ ಸಂಚಾರ ವ್ಯವಸ್ಥೆ Read More »

ಮಗನ ಮದುವೆಯ ಮುನ್ನಾ ದಿನ ನಾಪತ್ತೆಯಾಗಿದ್ದ ತಂದೆ ಪತ್ತೆ

ಮಗನ ಮದುವೆಯ ಮುನ್ನಾ ದಿನವಾದ ಜು.1ರಿಂದ ನಾಪತ್ತೆಯಾಗಿದ್ದ ಕುಂಬ್ರ ನಿವಾಸಿ ಉಮರ್ ಎಂಬವರು ಮಂಗಳೂರಿನಲ್ಲಿ ಪತ್ತೆಯಾಗಿದ್ದಾರೆ. ಮಗನ ಜೊತೆ ಪುತ್ತೂರಿಗೆ ಬಂದಿದ್ದ ಅವರು ದಿಢೀರನೆ ನಾಪತ್ತೆಯಾಗಿದ್ದರು. ಜು.3ರಂದು ಅವರ ಪುತ್ರ ಆಸಿಫ್ ವಿವಾಹ ಕಾರ್ಯ ನಡೆಯುವುದಿತ್ತು. ಮದುವೆಯ ಮದರಂಗಿ ಶಾಸ್ತ್ರದ ಮುನ್ನಾ ದಿನ ನಾಪತ್ತೆಯಾಗಿದ್ದ ಕಾರಣ ಮದರಂಗಿ ಮದುವೆ ರದ್ದಾಗಿತ್ತು. ಮದುವೆಯ ಬ್ಯುಸಿಯಲ್ಲಿದ್ದ ಮಗ ಅಪ್ಪನ ಹುಡುಕಾಟದಲ್ಲಿದ್ದರು. ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪೊಲೀಸರ ಜೊತೆ ಕುಟುಂಬಸ್ಥರು ಅವರನ್ನು ಹುಡುಕಾಡಿದಾಗ ಮಂಗಳೂರಿನಲ್ಲಿ ಪತ್ತೆಯಾಗಿದ್ದು,

ಮಗನ ಮದುವೆಯ ಮುನ್ನಾ ದಿನ ನಾಪತ್ತೆಯಾಗಿದ್ದ ತಂದೆ ಪತ್ತೆ Read More »

ಟಿಎಂಸಿ ಕಾರ್ಯಕರ್ತ ಗುಂಡಿಕ್ಕಿ ಹತ್ಯೆ

ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕಾರ್ಯಕರ್ತನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿರುವ ಘಟನೆ ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿನಡೆದಿದೆ.ಜಿಯಾRXರುಲ್ ಮೊಲ್ಲಾ ಮೃತ ಕಾರ್ಯಕರ್ತ ಎಂದು ತಿಳಿದು ಬಂದಿದೆ. ಬಸಂತಿ ಗ್ರಾಮದ ರಸ್ತೆಯೊಂದರಲ್ಲಿ ಗುಂಡಿನ ಗಾಯದಿಂದ ಬಿದ್ದಿದ್ದ ಅವರನ್ನು ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಗಂಭೀರ ಸ್ವರೂಪದ ಗಾಯದಿಂದ ಅವರು ಆದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ.ಜಿಯಾರುಲ್ ಮೊಲ್ಲಾ ಅವರು ಯುವ ತೃಣಮೂಲ ಕಾಂಗ್ರೆಸ್ ಸದಸ್ಯನಾಗಿದ್ದು, ಕಳೆದ ಕೆಲ ದಿನಗಳಿಂದ ನಿರಂತರವಾಗಿ ಅವರಿಗೆ ಬೆದರಿಕೆಗಳು ಬರುತ್ತಿದ್ದವು. ರಾಜಕೀಯ ವಿಚಾರಕ್ಕೆ ಸಂಬಂಧಿಸಿ ಅವರನ್ನು

ಟಿಎಂಸಿ ಕಾರ್ಯಕರ್ತ ಗುಂಡಿಕ್ಕಿ ಹತ್ಯೆ Read More »

ನೇಣಿಗೆ ಕೊರಳೊಡ್ಡಿದ ದಂಪತಿ: ಪತಿ ಸಾವು,ಪತ್ನಿ ಗಂಭೀರ

ಗಂಡ-ಹೆಂಡತಿ ಇಬ್ಬರು ಆತ್ಮಹತ್ಯೆಗೆ ಯತ್ನಿಸಿ ಪತಿ ಸಾವನ್ನಪ್ಪಿ, ಪತ್ನಿ ಗಂಭೀರವಾಗಿ ಗಾಯಗೊಂಡ ಘಟನೆ ಮಾಣಿ ಸಮೀಪದ ಕೊಡಾಜೆಯಲ್ಲಿ ನಡೆದಿದೆ.ಮೃತರನ್ನು ಕೊಡಾಜೆ ನಿವಾಸಿ ಪ್ರತಾಪ್ (33) ಎಂದು ಗುರುತಿಸಲಾಗಿದೆ.ಪ್ರತಾಪ್ ರವರು ಖಾಸಗಿ ಬಸ್ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಪತಿ, ಪತ್ನಿ ಇಬ್ಬರು ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ್ದು, ಘಟನೆಯಲ್ಲಿ ಪ್ರತಾಪ್ ರವರು ಸಾವನ್ನಪ್ಪಿ, ಪತ್ನಿ ಗಂಭೀರ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.ಅರುಣ್ ಪುತ್ತಿಲ ರವರು ಪುತ್ತೂರು ಆಸ್ಪತ್ರೆಯಿಂದ ಪ್ರತಾಪ್ ರವರ ಪತ್ನಿಯನ್ನು

ನೇಣಿಗೆ ಕೊರಳೊಡ್ಡಿದ ದಂಪತಿ: ಪತಿ ಸಾವು,ಪತ್ನಿ ಗಂಭೀರ Read More »

ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ : ಸೂಕ್ತ ಕ್ರಮಕ್ಕೆ ಒತ್ತಾಯ

ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ ತರುವ ಕೋಮು ಗಲಭೆ ಪ್ರಚೋದಿಸುವ ಪೋಸ್ಟ್ ಗಳನ್ನು ಹರಿಬಿಡುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ವೈ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿ ಆಗ್ರಹಿಸಿದ್ದಾರೆ.ಶನಿವಾರ ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಆಯುಕ್ತರಿಗೆ ದೂರು ನೀಡಿದ ಶಾಸಕರು, ‘ಸಾಮಾಜಿಕ ಜಾಲತಾಣಗಳಾದ ಇನ್‌ಸ್ಟಾಗ್ರಾಮ್ ಮತ್ತು ವಾಟ್ಸಾಪ್‌ಗಳಲ್ಲಿ ಮತೀಯ ಮನಸ್ಕ ಸಂಘಟನಾ ಗುಂಪುಗಳು ಹಿಂದೂಗಳ ನಂಬಿಕೆ ಮತ್ತು ಆಚರಣಾ ಪದ್ಧತಿಗಳ ವಿರುದ್ಧ, ಹಿಂದೂಗಳು ಆರಾಧಿಸುವ ದೈವ

ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ : ಸೂಕ್ತ ಕ್ರಮಕ್ಕೆ ಒತ್ತಾಯ Read More »

ಖಾಸಗಿ ಬಸ್‌ನಲ್ಲಿ ಬೆಂಕಿ: 26 ಮಂದಿ ಸಾವು

ಖಾಸಗಿ ಬಸ್‌ ನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ 26 ಮಂದಿ ಸಜೀವ ದಹನವಾಗಿರುವ ಘಟನೆ ಮುಂಬೈ-ನಾಗ್ಪುರ ಎಕ್ಸ್‌ಪ್ರೆಸ್‌ವೇಯಲ್ಲಿ ಶನಿವಾರ ವರದಿಯಾಗಿದೆಮಹಾರಾಷ್ಟ್ರದ ಬುಲ್ಧಾನ ಜಿಲ್ಲೆಯಲ್ಲಿ ಶನಿವಾರ ಮುಂಜಾನೆ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.33 ಜನರು ಪ್ರಯಾಣಿಸುತ್ತಿದ್ದ ಬಸ್‌ ಯವತ್ಮಾಲ್ ನಿಂದ ಪುಣೆಗೆ ತೆರಳುತ್ತಿದ್ದ ವೇಳೆ ಸಮೃದ್ಧಿ ಮಹಾಮಾರ್ಗ್ ಎಕ್ಸ್‌ಪ್ರೆಸ್‌ವೇಯಲ್ಲಿ ಬಸ್ಸಿನ ಟೈರ್ ಒಡೆದಿದೆ. ಆ ಬಳಿಕ ಬಸ್‌ ಪಲ್ಟಿಯಾಗಿ ಅದರಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಬಸ್ಸಿನಲ್ಲಿದ್ದ 26 ಮಂದಿ ಸಜೀವ ದಹನವಾಗಿದ್ದಾರೆ

ಖಾಸಗಿ ಬಸ್‌ನಲ್ಲಿ ಬೆಂಕಿ: 26 ಮಂದಿ ಸಾವು Read More »

ಯುವಕ ನೇಣು ಬಿಗಿದು ಆತ್ಮಹತ್ಯೆ

ಯುವಕನೋರ್ವ ಜೀವನದಲ್ಲಿ ನೊಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡಬ ತಾಲೂಕಿನ ಮರ್ಧಾಳದಲ್ಲಿ ನಡೆದಿದೆ.ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಮರ್ಧಾಳ ಸಮೀಪದ ನೆಕ್ಕಿತ್ತಡ್ಕ ನಿವಾಸಿ ದಿ. ಸಂಜೀವ ರೈ ಎಂಬವರ ಪುತ್ರ ರಘುನಾಥ ರೈ (38) ಎಂದು ಗುರುತಿಸಲಾಗಿದೆ.ಗುರುವಾರದಂದು ಸಂಜೆ ವೇಳೆಗೆ ತನ್ನ ಮನೆಯಲ್ಲಿದ್ದ ರಘುನಾಥ್ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಶಂಕಿಸಲಾಗಿದೆ.ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಯಿತು. ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ

ಯುವಕ ನೇಣು ಬಿಗಿದು ಆತ್ಮಹತ್ಯೆ Read More »

ಕಾಡೆಮ್ಮೆ ಮೃತದೇಹ ಪತ್ತೆ

ಕಡಬ: ಇಲ್ಲಿನ ಕೋಡಿಂಬಾಳ ಸಮೀಪದ ಪುಳಿಕುಕ್ಕು ಸೇತುವೆಯ ಬಳಿ ಕಾಡೆಮ್ಮೆ ಮೃತದೇಹ ಪತ್ತೆಯಾಗಿದೆ.ನದಿಯಲ್ಲಿ ತೇಲುವ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.ಅರಣ್ಯ ಇಲಾಖೆಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.ಸ್ಥಳೀಯರು ಸತ್ತ ಕಾಡಮ್ಮೆಯನ್ನು ನೋಡಲು ಜನರು ದಾವಿಸಿ ಬರುತ್ತಿದ್ದಾರೆ.

ಕಾಡೆಮ್ಮೆ ಮೃತದೇಹ ಪತ್ತೆ Read More »

error: Content is protected !!
Scroll to Top