September 2024

ಅರಂತೋಡು : ಸಂಭ್ರಮದ ಈದ್ ಮಿಲಾದ್ ಆಚರಣೆ

ಅರಂತೋಡು : 6ನೇ ಶತಮಾನದಲ್ಲಿ ಅರೇಬಿಯಾದಲ್ಲಿನ ಅನಾಚಾರ, ಮೂಡನಂಬಿಕೆ, ಅಕ್ರಮ ದಬ್ಬಾಳಿಕೆಗಳನ್ನು ನಿರ್ಮೂಲನೆ ಮಾಡಿ ಒಂದು ಸಮೂಹವನ್ನು ಅದರಿಂದ ವಿಮುಕ್ತಿಗೊಳಿಸಿ ಅವರನ್ನು ಸುಸಂಸ್ಕೃತಗಳನ್ನಾಗಿ ಮಾಡುವಲ್ಲಿಸಮಗ್ರ ಕ್ರಾಂತಿಯ ಹರಿಕಾರರಾಗಿದ್ದರು ಮಹಮ್ಮದ್ ಪೈಗಂಬರರು ಎಂದು ಅರಂತೋಡು ಬದ್ರಿಯಾ ಜುಮಾ ಮಸೀದಿಯ ಖತೀಬರಾದ ಬಹು ಇಸ್ಮಾಯಿಲ್ ಫೈಝಿ ಹೇಳಿದರು ಅವರು ಸೆ.16 ರಂದು ಅರಂತೋಡು ಬದ್ರಿಯಾ ಜುಮಾ ಮಸೀದಿ, ಅನ್ವಾರುಲ್ ಹುಧಾ ಯಂಗ್ ಮೆನ್ಸ್ ಎಸೋಸಿಯೇಶನ್, ನುಸ್ರತುಲ್ ಇಸ್ಲಾಮ್ ಮದರಸ ಇದರ ಜಂಟಿ ಆಶ್ರಯದಲ್ಲಿ ವಿಶ್ವ ಪ್ರವಾದಿ ಮಹಮ್ಮದ್ (ಸ:ಅ) ರವರ […]

ಅರಂತೋಡು : ಸಂಭ್ರಮದ ಈದ್ ಮಿಲಾದ್ ಆಚರಣೆ Read More »

ಪೆರಾಜೆ : ಕಪ್ಪುಪಟ್ಟಿ ಧರಿಸಿ,ಕಪ್ಪು ಬಾವುಟ ಹಿಡಿದು ಮಾನವ ಸರಪಳಿಯಲ್ಲಿ ಪ್ರತಿಭಟನೆ

ಸುಳ್ಯ : ಸುಳ್ಯ ನಗರದ ಕಸವನ್ನು ಕಲ್ಬರ್ಪೆಯ ವಿಲೇವಾರಿ ಘಟಕದಲ್ಲಿ ಹಾಕುತ್ತಿರುವುದರಿಂದ ಸಮರ್ಕವಾಗಿ ವಿಲೇವಾರಿಯಾಗದೆ ಅಲ್ಲಿನ ಸ್ಥಳೀಯರು ನಿತ್ಯ ಸಮಸ್ಯೆ ಎದುರಿಸುತ್ತಿದ್ದು, ತ್ಯಾಜ್ಯ ನೀರಿನೊಂದಿಗೆ ನದಿಗೆ ಸೇರಿ ನೀರು ಕಲುಷಿತಗೊಳ್ಳುತ್ತಿದೆ. ಇದರ ವಿರುದ್ಧ ಹೋರಾಟದ ಅಂಗವಾಗಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಪ್ರಯುಕ್ತ ಹಮ್ಮಿಕೊಂಡಿರುವ ಮಾನವ ಸರಪಳಿಯಲ್ಲಿ ಕಲ್ಪರ್ಪೆಯ ಸ್ಥಳೀಯರು ಮತ್ತು ಪರಿಸರ ಹೋರಾಟ ಸಮಿತಿ ಸಿರಿಕುರಳ್ ನಗರ ಕಲ್ಚೆರ್ಪೆಯ ಆಲೆಟ್ಟಿಯರು ಕಪ್ಪುಪಟ್ಟಿ ಧರಿಸಿ,ಕಪ್ಪು ಭಾವುಟ ಹಿಡಿದು ಪ್ರತಿಭಟನೆ ನಡೆಸಿದರು.ಪರಿಸರದಲ್ಲಿ ತುಂಬಿಸಿರುವ ಘನತ್ಯಾಜ್ಯವನ್ನು ವಿಲೇವಾರಿ ಮಾಡಿ ಈಗಿರುವ ತ್ಯಾಜ್ಯ

ಪೆರಾಜೆ : ಕಪ್ಪುಪಟ್ಟಿ ಧರಿಸಿ,ಕಪ್ಪು ಬಾವುಟ ಹಿಡಿದು ಮಾನವ ಸರಪಳಿಯಲ್ಲಿ ಪ್ರತಿಭಟನೆ Read More »

ಕಲ್ಚರ್ಪೆಯಲ್ಲಿ ನಗರದ ಕಸದಿಂದ ಸ್ಥಳೀಯರಿಗೆ ಸಮಸ್ಯೆ ! ಸೆ.15ಕ್ಕೆ ಕಪ್ಪುಪಟ್ಟಿ ಧರಿಸಿ ಮಾನವ ಸರಪಳಿಯಲ್ಲಿ ಭಾಗವಹಿಸಲು ಸ್ಥಳೀಯರ ನಿರ್ಧಾರ

ಸುಳ್ಯ : ಸುಳ್ಯ ನಗರದ ಕಸವನ್ನು ಕಲ್ಚರ್ಪೆಯ ವಿಲೇವಾರಿ ಘಟಕದಲ್ಲಿ ಹಾಕುತ್ತಿರುವುದರಿಂದ ಅಲ್ಲಿನ ಸ್ಥಳೀಯರು ನಿತ್ಯ ಸಮಸ್ಯೆ ಎದುರಿಸುತ್ತಿದ್ದು, ತ್ಯಾಜ್ಯ ನೀರಿನೊಂದಿಗೆ ನದಿಗೆ ಸೇರಿ ನೀರು ಕಲುಷಿತಗೊಳ್ಳುತ್ತಿದೆ. ಇದರ ವಿರುದ್ಧ ಹೋರಾಟದ ಅಂಗವಾಗಿ ಸೆ.೧೫ರಂದು ಅಂತರಾಷ್ಡ್ರೀಯ ಪ್ರಜಾಪ್ರಭುತ್ವ ದಿನದ ಪ್ರಯುಕ್ತ ಹಮ್ಮಿಕೊಂಡಿರುವ ಮಾನವ ಸರಪಳಿಯಲ್ಲಿ ಕಲ್ಚರ್ಪೆಯ ಸ್ಥಳೀಯರು ಕಪ್ಪುಪಟ್ಟಿ ಧರಿಸಿ ಭಾಗವಹಿಸಲು ನಿರ್ಧರಿಸಿದ್ದೇವೆ ಎಂದು ಹೋರಾಟ ಸಮಿತಿಯವರು ತಿಳಿಸಿದ್ದಾರೆ.ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪರಿಸರದ ನಿವಾಸಿ ಗೋಕುಲದಾಸ್ ಅವರು, ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಕಸ ವಿಲೇವಾರಿ

ಕಲ್ಚರ್ಪೆಯಲ್ಲಿ ನಗರದ ಕಸದಿಂದ ಸ್ಥಳೀಯರಿಗೆ ಸಮಸ್ಯೆ ! ಸೆ.15ಕ್ಕೆ ಕಪ್ಪುಪಟ್ಟಿ ಧರಿಸಿ ಮಾನವ ಸರಪಳಿಯಲ್ಲಿ ಭಾಗವಹಿಸಲು ಸ್ಥಳೀಯರ ನಿರ್ಧಾರ Read More »

ನಾಗಮಂಗಲ ದಲ್ಲಿ ಗಣಪತಿ ವಿಸರ್ಜನೆ ಸಂದರ್ಭದಲ್ಲಿ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿ ದಾಂಧಲೆ ನಡೆಸಿರುವುದು ಖಂಡನೀಯ : ವೆಂಕಟ್ ವಳಂಬೆ

ಸುಳ್ಯ: ನಾಗಮಂಗಲ ದಲ್ಲಿ ಗಣಪತಿ ಮೆರವಣಿಗೆ ವಿಸರ್ಜನೆ ಸಂದರ್ಭದಲ್ಲಿ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿ ದಾಂಧಲೆ ನಡೆಸಿರುವುದು ಖಂಡನೀಯವೆಂದು ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ದೇಶದ ಪ್ರತಿ ಹಳ್ಳಿ-ಗಲ್ಲಿಗಳಲ್ಲಿ ನೂರಾರು ವರ್ಷಗಳಿಂದ ಹಿಂದೂ ಸಮಾಜ ಗಣೇಶೋತ್ಸವ ವನ್ನು ಆಚರಣೆ ಮಾಡುತ್ತ ಬಂದಿದೆ, ಸ್ವಾತಂತ್ರ್ಯ ದಂತ ಹೋರಾಟಕ್ಕೆ ಈ ಉತ್ಸವ ಪ್ರೇರಣೆಯಾಗಿತ್ತು ಆದರೆ ನಾಗಮಂಗಲ ದಲ್ಲಿ ಮತಾಂಧ ಶಕ್ತಿಗಳು ಗಣೇಶನ ಮೆರವಣಿಗೆ ಕಲ್ಲು ತೂರಾಟ ನಡೆಸಿ, ಅಂಗಡಿಗಳಿಗೆ ಮೇಲೆ ದಾಳಿ

ನಾಗಮಂಗಲ ದಲ್ಲಿ ಗಣಪತಿ ವಿಸರ್ಜನೆ ಸಂದರ್ಭದಲ್ಲಿ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿ ದಾಂಧಲೆ ನಡೆಸಿರುವುದು ಖಂಡನೀಯ : ವೆಂಕಟ್ ವಳಂಬೆ Read More »

ವಿದ್ಯಾರ್ಥಿಗಳು ಪ್ರಬುದ್ದತೆಯನ್ನು ಬೆಳೆಸಿಕೊಳ್ಳಿ. ಡಾ.ಸುಂದರ ಕೇನಾಜೆ

ನಾವು ಯುವ ವಿದ್ಯಾರ್ಥಿಗಳ ಜೊತೆ ಒಂದಷ್ಟು ಸಮಾಲೋಚಿಸಬೇಕಾದ ಅನಿವಾರ್ಯ ಕಾಲಘಟ್ಟದಲ್ಲಿದ್ದೇವೆ. ಈ ದೇಶದ ಭವಿಷ್ಯ ಯುವಕರ ಕೈಯಲ್ಲಿದೆ. ವಿದ್ಯಾರ್ಥಿ ಸಂಘಟನೆ ಪ್ರಜಾಪ್ರಭುತ್ವ ವ್ಯವಸ್ಥೆಯ ತರಬೇತಿಯಾಗಿ ಬದಲಾಗಲಿ. ಮುಂದಿನ ದಿನಗಳಲ್ಲಿ ಶಾಸಕಾಂಗದ ಚುಕ್ಕಾಣಿಯನ್ನು ಹಿಡಿಯಲು ಪ್ರೇರಣೆಯಾಗಲಿ. ಜೊತೆಗೆ ವಿದ್ಯಾರ್ಥಿಗಳು ಪ್ರಬುದ್ಧತೆಯನ್ನು ಬೆಳೆಸಿಕೊಳ್ಳಿ ಎಂದು ಜಾನಪದ ಲೇಖಕರು ಹಾಗೂ ಸಂಶೋಧಕರಾದ ಡಾ. ಸುಂದರ ಕೇನಾಜೆ ಹೇಳಿದರು. ಇವರು ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಸೆ.12ನೇ ಗುರುವಾರದಂದು ವಿದ್ಯಾರ್ಥಿ ಸಂಘದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.ಸಭೆಯಲ್ಲಿ ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದ ಕಾಲೇಜಿನ ಆಡಳಿತಾಧಿಕಾರಿ ಚಂದ್ರಶೇಖರ

ವಿದ್ಯಾರ್ಥಿಗಳು ಪ್ರಬುದ್ದತೆಯನ್ನು ಬೆಳೆಸಿಕೊಳ್ಳಿ. ಡಾ.ಸುಂದರ ಕೇನಾಜೆ Read More »

ಸ್ಕೂಟರ್ ಅಪಘಾತದಲ್ಲಿ ಯುವ ಹಿಂದು ಮುಖಂಡ ಸಾವು

ಪುತ್ತೂರು : ಸ್ಕೂಟರ್ ಅಪಘಾತದಲ್ಲಿ ಗಂಭೀರ ಗಾಯಗೊಂಡು, ಪುತ್ತೂರಿನಿಂದ ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ವರದಿಯಾಗಿದೆ.ಕೆಯ್ಯರು ಗ್ರಾಮದ ಎರಕ್ಕಳ ಬೆಳ್ಯಯಪ್ಪ ಗೌಡರವರ ಪುತ್ರ, ವಿಶ್ವ ಹಿಂದೂ ಪರಿಷದ್ ಬಜರಂಗದಳದ ವೀರಾಂಜನೇಯ ಘಟಕ ತಿಂಗಳಾಡಿಯ ಸಹ ಗೋ ರಕ್ಷಕ ಪ್ರಮುಖ್ ಕೀರ್ತನ್ ಗೌಡ (22) ಮೃತಪಟ್ಟವರು.ಸೆ. 10ರಂದು ಮಧ್ಯರಾತ್ರಿ ಕೆದಂಬಾಡಿ ಗ್ರಾಮದ ತ್ಯಾಗರಾಜನಗರದಲ್ಲಿ ಸ್ಕೂಟರ್ ಅಪಘಾತ ಸಂಭವಿಸಿದ್ದು, ಗಂಭೀರ ಗಾಯಗೊಂಡ ಕೀರ್ತನ್ ರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಚಿಕಿತ್ಸೆಗಾಗಿ ಮಂಗಳೂರು

ಸ್ಕೂಟರ್ ಅಪಘಾತದಲ್ಲಿ ಯುವ ಹಿಂದು ಮುಖಂಡ ಸಾವು Read More »

ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಉಪನ್ಯಾಸಕಿ ಸಾವು

ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಬೀರಮಂಗಲ ನಿವಾಸಿ ಉಪನ್ಯಾಸಕ ಡಾ.ಅಚ್ಚುತ ಪೂಜಾರಿಯವರ ಪತ್ನಿ ಉಪನ್ಯಾಸಕಿ ಸುನಂದ ಅಚ್ಚುತ ಪೂಜಾರಿಯವರು ಬುಧವಾರ ರಾತ್ರಿ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.ಕಳೆದ ಶುಕ್ರವಾರ ತಮ್ಮ ಕುಟುಂಬದ ತರವಾಡು ಮನೆ, ಈಶ್ವರಮಂಗಲದ ಮೇನಾಲಕ್ಕೆ ನಿಕಟ ಸಂಬಂಧಿಕರೊಬ್ಬರ ಬೈಕಲ್ಲಿ ಹೋಗುತ್ತಿರುವಾಗ ಮಳೆ ಬಂದ ಕಾರಣಕ್ಕಾಗಿ ಕೊಡೆ ಬಿಡಿಸಿದರೆಂದೂ, ಗಾಳಿಗೆ ಕೊಡೆ ಎಳೆಯಲ್ಪಟ್ಟು ಇವರು ಬೈಕಿಂದ ಜಾರಿ ರಸ್ತೆಗೆ ಬಿದ್ದು ತಲೆಗೆ ಗಂಭೀರ ಗಾಯವಾಗಿ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರೆಂದೂ ತಿಳಿದುಬಂದಿದೆ.

ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಉಪನ್ಯಾಸಕಿ ಸಾವು Read More »

ಕಡಿಮೆ ರಕ್ತದ ಒತ್ತಡ ಉಂಟಾಗಿ ಕುಸಿದು 8ನೇ ತರಗತಿ ವಿದ್ಯಾರ್ಥಿ ಸಾವು

ರಾಯಚೂರಿನ ವಿದ್ಯಾವಾಹಿನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ ತಾಲೂಕಿನ ಅತ್ತನೂರು ಗ್ರಾಮದ ವಿದ್ಯಾರ್ಥಿ ತರುಣಕುಮಾರ ತಂದೆ ಮಲ್ಲೇಶ (14) ಶಾಲೆಯಲ್ಲಿ ಲೋ ಬಿಪಿ ಉಂಟಾಗಿ ಮೃತಪಟ್ಟಿರುವ ದುರ್ಘಟನೆ ವರದಿಯಾಗಿದೆ.ಶಾಲೆಯಲ್ಲಿ ವಿದ್ಯಾರ್ಥಿ ಕುಸಿದು ಬಿದ್ದಿದ್ದು, ಕೂಡಲೇ ವಿದ್ಯಾರ್ಥಿಯನ್ನು ಶಾಲಾ ಆಡಳಿತ ಮಂಡಳಿ ಪಟ್ಟಣದಲ್ಲಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಸಾಗಿಸುವ ವೇಳೆ ಬಾಲಕ ಸಾವನ್ನಪ್ಪಿದ್ದಾನೆ. ಪೋಷಕರಿಗೆ ಇಬ್ಬರು ಮಕ್ಕಳಿದ್ದು ಮೃತ ಬಾಲಕ ಹಿರಿಯ ಪುತ್ರನೆಂದು ಹೇಳಲಾಗುತ್ತಿದೆ.

ಕಡಿಮೆ ರಕ್ತದ ಒತ್ತಡ ಉಂಟಾಗಿ ಕುಸಿದು 8ನೇ ತರಗತಿ ವಿದ್ಯಾರ್ಥಿ ಸಾವು Read More »

ಶಿಕ್ಷಕಿ ಲಾಲಿಯವರಿಗೆ ನೇಶನ್ ಬಿಲ್ಡರ್ ಅವರ್ಡ್

ಪೆರಾಜೆ ಗ್ರಾಮದ ಅಮಚೂರು‌ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಲಾಲಿ ಪಿ.ಜೆ ಅವರು ಮಡಿಕೇರಿ ರೋಟರಿ ಕ್ಲಬ್ ವತಿಯಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಾಗಿ ನೀಡಲಾಗುವ 2024 2025ನೇ ಸಾಲಿನ ನೇಶನ್ ಬಿಲ್ಡರ್ ಅವರ್ಡ್ ನ್ನು ಮಡಿಕೇರಿಯಲ್ಲಿ ರೋಟರಿ ಕ್ಲಬ್ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಸ್ವೀಕರಿಸಿದ್ದಾರೆ.ಶೈಕ್ಷಣಿಕ ಕ್ಷೇತ್ರದಲ್ಲಿ ಇವರ ಬಹುಮುಖ ಪ್ರತಿಭೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಸೇವೆಯನ್ನು ಪರಿಗಣಿಸಿ ಮಡಿಕೇರಿಯಲ್ಲಿ ಸೆ.4 ರಂದು ನಡೆದ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆಯಲ್ಲಿ

ಶಿಕ್ಷಕಿ ಲಾಲಿಯವರಿಗೆ ನೇಶನ್ ಬಿಲ್ಡರ್ ಅವರ್ಡ್ Read More »

ಅರುಣ್ ಕುಮಾರ್ ಪುತ್ತಿಲ ಹಾಗೂ ಬೆಂಬಲಿಗರಿಂದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ವಿಶೇಷ ಪ್ರಾರ್ಥನೆ

ಪುತ್ತೂರು: ಲೈಂಗಿಕ ದೌರ್ಜನ್ಯ ಆರೋಪಗೊಳಗಾಗಿರುವ ಹಿಂದು ಮುಖಂಡ ಅರುಣ್ ಕುಮಾರ್ ಪುತ್ತಿಲರಿಗೆ ನ್ಯಾಯಾಲಯ ಜಾಮೀನು ನೀಡಿರುವ ಹಿನ್ನಲೆಯಲ್ಲಿ ಪುತ್ತಿಲ ಹಾಗೂ ಬೆಂಬಲಿಗರು ಬುಧವಾರ ಬೆಳಿಗ್ಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಡೆಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.ಅರುಣ್ ಕುಮಾ‌ರ್ ಪುತ್ತಿಲ ಪುತ್ತೂರು ದೇವಳದ ಗದ್ದೆಗೆ ಆಗಮಿಸುತ್ತಿದ್ದಂತೆ ಆನೇಕ ಮಂದಿ ಆಗಮಿಸಿ ಶುಭ ಕೋರಿದರು.ಇದೇ ಸಂದರ್ಭ ಮಾಧ್ಯಮದ ಜೊತೆ ಮಾತನಾಡಿ ಅವರು, ಈ ಪ್ರಕರಣದ ಹಿಂದೆ ಕಾಣದ ಕೈಗಳ ಭಾರೀ ಷಡ್ಯಂತ್ರ ಇದೆ.ಅದರಿಂದ ಮುಕ್ತನಾಗಿ ಹೊರ ಬಂದಿದ್ದೇನೆ. ಈಗಲೂ ಆರೋಪಗಳಿಂದ

ಅರುಣ್ ಕುಮಾರ್ ಪುತ್ತಿಲ ಹಾಗೂ ಬೆಂಬಲಿಗರಿಂದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ವಿಶೇಷ ಪ್ರಾರ್ಥನೆ Read More »

error: Content is protected !!
Scroll to Top