October 2024

ರಾಜ್ಯದಲ್ಲಿ ಮುಂದಿನ ಹತ್ತು ದಿವಸ ಭಾರೀ ಮಳೆ, ಹವಾಮಾನ ಇಲಾಖೆ ಎಚ್ಚರಿಕೆ

ಬೆಂಗಳೂರು :ಕಳೆದ ಎರಡು ದಿವಸದಿಂದ ಮಳೆಯ ಪ್ರಮಾಣ ಹೆಚ್ಚಾಗಿದ್ದು ರಾಜ್ಯದ ಮುಂದಿನ 10 ದಿನಗಳ ಕಾಲ ಕೆಲವು ಜಿಲ್ಲೆಗಳಲ್ಲಿ ಭರ್ಜರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸಿಲಿಕಾನ್ ಸಿಟಿ ಸೇರಿದಂತೆ ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ತುಮಕೂರು, ಮಂಡ್ಯ, ಕೋಲಾರ, ಚಾಮರಾಜನಗರ, ರಾಮನಗರ, ಹಾಸನ, ಚಿಕ್ಕಮಂಗಳೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ, ವಿಜಯನಗರ, ಕೊಡಗು ಜಿಲ್ಲೆಗಳಲ್ಲಿ ಮಳೆ ಆರ್ಭಟಿಸಲಿದೆ ಎಂದು ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ

ರಾಜ್ಯದಲ್ಲಿ ಮುಂದಿನ ಹತ್ತು ದಿವಸ ಭಾರೀ ಮಳೆ, ಹವಾಮಾನ ಇಲಾಖೆ ಎಚ್ಚರಿಕೆ Read More »

ಮಾನವನು ಸತ್ಯ,ಧರ್ಮ ನ್ಯಾಯ ಮಾರ್ಗದಲ್ಲಿ ನಡೆಯುವುದನ್ನು ದೇವರು ಇಷ್ಟಪಡುತ್ತಾನೆ : ಶ್ರೀ ಯೋಗೇಶ್ವರಾನಂದ ಸರಸ್ವತಿ ಸ್ವಾಮೀಜಿ

ಅಜ್ಜಾವರ : ನಾವು ಸತ್ಯ,ಧರ್ಮ ನ್ಯಾಯ ಮಾರ್ಗದಲ್ಲಿ ನಡೆಯುವುದನ್ನು ದೇವರು ಇಷ್ಟಪಡುತ್ತಾನೆ ಎಂದು ಅಜ್ಜಾವ ಚೈತನ್ಯ ಸೇವಾಶ್ರಮದ ಸ್ವಾಮೀಜಿ‌ ಶ್ರೀ ಯೋಗೇಶ್ವರಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.ಅಜ್ಜಾವರ ಚೈತನ್ಯ ಸೇವಾಶ್ರಮದಲ್ಲಿ ನವರಾತ್ರಿ ಅಂಗವಾಗಿ ನಡೆದ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಯಾರೂ ಸ್ವಾರ್ಥಕ್ಕಾಗಿ ಸುಳ್ಳು ಹೇಳಿ ನ್ಯಾಯಾ ಮಾರ್ಗದಲ್ಲಿ ನಡೆಯದೆ ಇತರರಿಗೆ ಅನ್ಯಾಯ ಮಾಡಿದರೆ ಭಗವಂತ ಮೆಚ್ಚಲಾರ.ಈ ನಿಟ್ಟಿನಲ್ಲಿ ಸತ್ಯ,ಧರ್ಮ,ನ್ಯಾಯ ಮಾರ್ಗದಲ್ಲಿ ನಡೆದು ಪರೋಪಕಾರಿಯಾಗಿ ಬದುಕಬೇಕು.ಆಗ ನಮ್ಮ ಜೀವನ‌ ಸಾರ್ಥಕವಾಗುತ್ತದೆ ಎಂದು ಸ್ವಾಮೀಜಿಯವರು ಹೇಳಿದರು.ಈ ಸಂದರ್ಭದಲ್ಲಿ ಸ್ವಾಮೀಜಿಯವರ 211ನೇ

ಮಾನವನು ಸತ್ಯ,ಧರ್ಮ ನ್ಯಾಯ ಮಾರ್ಗದಲ್ಲಿ ನಡೆಯುವುದನ್ನು ದೇವರು ಇಷ್ಟಪಡುತ್ತಾನೆ : ಶ್ರೀ ಯೋಗೇಶ್ವರಾನಂದ ಸರಸ್ವತಿ ಸ್ವಾಮೀಜಿ Read More »

Master These Essential Soft Skills to Skyrocket Your Career Success

Soft skills are crucial for career success, especially for job aspirants and fresh graduates. These interpersonal qualities—such as communication, emotional intelligence, and adaptability—can make a significant difference in how you perform in a job and how quickly you advance in your career. *Effective communication* is key to any role, whether you’re interacting with colleagues, clients,

Master These Essential Soft Skills to Skyrocket Your Career Success Read More »

ಸುಳ್ಯ : ತಾಲೂಕು ಮಟ್ಟದ ಒಕ್ಕೂಟ ಪದಾಧಿಕಾರಿಗಳ ಸಮಾವೇಶ ಕಾರ್ಯಕ್ರಮ

ಸುಳ್ಯ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ)ಸುಳ್ಯ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಸುಳ್ಯ ತಾಲೂಕು ಇದರ ಆಶ್ರಯದಲ್ಲಿ ತಾಲೂಕು ಮಟ್ಟದ ಒಕ್ಕೂಟ ಪದಾಧಿಕಾರಿಗಳ ಸಮಾವೇಶ ಕಾರ್ಯಕ್ರಮವು ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀ ಸುರೇಶ್ ಕಣೆಮರಡ್ಕರವರ ಅಧ್ಯಕ್ಷತೆಯಲ್ಲಿ ಸುಳ್ಯ ಕೇರ್ಪಳದ ಬಂಟರ ಭವನದಲ್ಲಿ ನಡೆಯಿತು.ಈ ಕಾರ್ಯಕ್ರಮವನ್ನು ಸುಳ್ಯ M B ಫೌಂಡೇಶನ್ ಅಧ್ಯಕ್ಷರು , ಮಾಜಿ ಲಯನ್ಸ್ ರಾಜ್ಯ ಗವರ್ನರ್ ರವರಾದ

ಸುಳ್ಯ : ತಾಲೂಕು ಮಟ್ಟದ ಒಕ್ಕೂಟ ಪದಾಧಿಕಾರಿಗಳ ಸಮಾವೇಶ ಕಾರ್ಯಕ್ರಮ Read More »

ಸುಳ್ಯ ತಾಲೂಕು ಆಂಬುಲೆನ್ಸ್ ಚಾಲಕ ಮಾಲಕರ ಸಂಘದ ಕಚೇರಿ ಉದ್ಘಾಟನೆ

ಸುಳ್ಯ ತಾಲೂಕು ಆಂಬುಲೆನ್ಸ್ ಚಾಲಕರ ಮತ್ತು ಮಾಲಕರ ಸಂಘದ ನೂತನ ಕಚೇರಿ ಉದ್ಘಾಟನಾ ಸಮಾರಂಭ ಅಕ್ಟೋಬರ್ 6 ರಂದು ಸುಳ್ಯದ ಸಂತೋಷ್ ಚಿತ್ರಮಂದಿರದ ಬಳಿ ಇರುವ ವೆನಿಸ್ಸಿಯಾ ಬಿಲ್ಡಿಂಗ್ ನಲ್ಲಿ ನಡೆಯಿತು. ತೂಗು ಸೇತುವೆಯ ಸರದಾರ ಪದ್ಮಶ್ರೀ ಗಿರೀಶ್ ಭಾರದ್ವಾಜ್ ರವರು ನೂತನ ಸಂಸ್ಥೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಶರತ್ ತೊಡಿಕ್ಕಾನ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಸುಳ್ಯ ವರ್ತಕ ಸಂಘದ ಅಧ್ಯಕ್ಷ ಪಿ ಬಿ ಸುಧಾಕರ್ ರೈ, ಸುಳ್ಯ ಪ್ರೆಸ್

ಸುಳ್ಯ ತಾಲೂಕು ಆಂಬುಲೆನ್ಸ್ ಚಾಲಕ ಮಾಲಕರ ಸಂಘದ ಕಚೇರಿ ಉದ್ಘಾಟನೆ Read More »

ಅರಂಬೂರು : ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

ಅರಂಬೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ (ರಿ ) ಸುಳ್ಯ ತಾಲ್ಲೂಕು ಸುಳ್ಯ ವಲಯ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸುಳ್ಯ ವಲಯ ಇದರ ಸಂಯುಕ್ತ ಆಶ್ರಯದಲ್ಲಿ ಅ.5ರಂದು ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಇಡ್ಯಡ್ಕ ಆರಂಬೂರು ಶಾಲೆಯಲ್ಲಿ ನಡೆಯಿತು.ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಅರಂತೋಡು ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮದ ಅಡಿಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ನಡೆಸಲಾಯಿತು.ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪರಿವಾರಕಾನ

ಅರಂಬೂರು : ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ Read More »

ಹೆಚ್ಚುವರಿ ತರಗತಿಯಲ್ಲಿ ಶಿಕ್ಷಕಿಯ ಅಶ್ಲೀಲ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟ ವಿದ್ಯಾರ್ಥಿ !

ಆಗ್ರಾ: ಹಿಂದೆಲ್ಲ ಗುರುಗಳಿಗೆ ಸಮಾಜದಲ್ಲಿ ಉನ್ನತ ಗೌರವ ನೀಡಲಾಗುತ್ತಿತ್ತು.ಆದರೆ ಇಲ್ಲೊಂದು ಶಿಷ್ಯರ ತಂಡ ಶಿಕ್ಷಕಿಗೆ ಮಾಡಿದ್ದಾರು ಏನು ? ಇಂತಹ ಶಿಷ್ಯರಿದ್ದಾರೆ ಎಂದರೆ ನಿಮಗೆ ಅಚ್ಚರಿ ಆಗಬಹುದು.ಶಾಲಾ ಶಿಕ್ಷಕಿಯ ಅಶ್ಲೀಲ ವಿಡಿಯೋ ಬಳಸಿ ಆಕೆಯನ್ನು ಬ್ಯ್ಲಾಕ್ ಮೇಲ್‌ ಮಾಡಿದ್ದಾರೆ. ಬಳಿಕ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.ಈ ಆರೋಪದಡಿ ನಾಲ್ವರು ವಿದ್ಯಾರ್ಥಿಗಳನ್ನು ಆಗ್ರಾ ಪೊಲೀಸರು ಬಂಧಿಸಿದ್ದಾರೆ.ಆಗ್ರಾದ ಶಿಕ್ಷಕಿ ಮಥುರಾದ ಶಾಲೆಯಲ್ಲಿ ಶಿಕ್ಷಕಿಯಾಗಿ ಪಾಠ ಮಾಡುತ್ತಿದ್ದರು.ಕಲಿಕೆಯಲ್ಲಿ ಹಿಂದಿರುವ 10ನೇ ತರಗತಿ ವಿದ್ಯಾರ್ಥಿಗಳಿಗೆ ಅವರು ಹೆಚ್ಚುವರಿ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದರು.ವಿದ್ಯಾರ್ಥಿಯೊಬ್ಬ ಮತ್ತು ಶಿಕ್ಷಕಿ

ಹೆಚ್ಚುವರಿ ತರಗತಿಯಲ್ಲಿ ಶಿಕ್ಷಕಿಯ ಅಶ್ಲೀಲ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟ ವಿದ್ಯಾರ್ಥಿ ! Read More »

ಹೆಚ್. ಡಿ ಕುಮಾರಸ್ವಾಮಿಯವರಿಗೆ ಅಸಹನೀಯ ಪದ ಬಳಸಿ ಅಗೌರವ : ಸುಳ್ಯ ತಾಲೂಕು ಜನತದಳ ಸೂಕ್ತ ಕ್ರಮಕ್ಕೆ ಒತ್ತಾಯ

ಸುಳ್ಯ: ಕೇಂದ್ರ ಸರ್ಕಾರದ ಸಚಿವರಾದ ಹೆಚ್. ಡಿ ಕುಮಾರಸ್ವಾಮಿಯವರನ್ನು ಅಸಹನೀಯ ಪದ ಬಳಕೆ ಬಳಸಿ ಅಗೌರವಿಸಿರುವುದನ್ನು ಸುಳ್ಯ ತಾಲೂಕು ಜನತದಳವು ಖಂಡಿಸುತ್ತದೆ. ಹಾಗೆಯೇ ಪೊಲೀಸ್‌ ಇಲಾಖೆಯ ಉನ್ನತ ಹುದ್ದೆಯಲ್ಲಿ ಇದ್ದುಕೊಂಡು ದುರುದ್ದೇಶದಿಂದ ಕೇಂದ್ರ ಸಚಿವರನ್ನು ಅವಮಾನಗೊಳಿಸಿರುವ ಲೋಕಾಯುಕ್ತ ಎ.ಡಿ.ಜಿ.ಪಿ. ಚಂದ್ರಶೇಖ‌ರ್ ಇವರ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ಆಗ್ರಹಿಸಿ ಸುಳ್ಯ ತಾಲೂಕು ಜನತಾದಳವು ಸುಳ್ಯ ತಾಲೂಕು ತಹಶೀಲ್ದಾರರಿಗೆ ಮನವಿಯನ್ನು ಸಲ್ಲಿಸಿತು. ಇದರಲ್ಲಿ ಸುಳ್ಯ ತಾಲೂಕು ಜನತಾದಳದ ಅಧ್ಯಕ್ಷರಾದ ಸುಕುಮಾ‌ರ್ ಕೊಡುಗುಳಿ, ಪ್ರಧಾನ ಕಾರ್ಯದರ್ಶಿ ರಾಕೇಶ್ ಕುಂಟಿಕಾನ,

ಹೆಚ್. ಡಿ ಕುಮಾರಸ್ವಾಮಿಯವರಿಗೆ ಅಸಹನೀಯ ಪದ ಬಳಸಿ ಅಗೌರವ : ಸುಳ್ಯ ತಾಲೂಕು ಜನತದಳ ಸೂಕ್ತ ಕ್ರಮಕ್ಕೆ ಒತ್ತಾಯ Read More »

ಪೊಲೀಸರಿಂದ ತಪ್ಪಿಸಿಕೊಂಡ ಕಳ್ಳನ್ನು ಹಿಡಿಯಲು ಸಾರ್ವಜನಿಕರು ಸಹಕರಿಸಲು ಪೊಲೀಸರ ಮನವಿ

ಶನಿವಾರ ಸಂಜೆ ಸುಳ್ಯದ ಸರಕಾರಿ ಆಸ್ಪತ್ರೆಗೆ ಆರೋಗ್ಯ ತಪಾಸಣೆಗೆ ಕರೆತಂದಿದ್ದಾಗ ಪೋಲೀಸರ ಕೈಯಿಂದ ತಪ್ಪಿಸಿಕೊಂಡು ಓಡಿದ ಈ ವ್ಯಕ್ತಿಯನ್ನು ಪತ್ತೆ ಹಚ್ಚಲು ಸಹಕರಿಸುವಂತೆ ಪೋಲೀಸರು ಸಾರ್ವಜನಿಕರನ್ನು ವಿನಂತಿಸಿಕೊಂಡಿದ್ದಾರೆ.ಸಂಪಾಜೆಯ ಮನೆಯೊಂದರಿಂದ ದರೋಡೆ ನಡೆಸಿದ ಪ್ರಕರಣದಲ್ಲಿ ಆರೋಪಿಯಾಗಿದ್ದು ನ್ಯಾಯಾಲಯಕ್ಕೆ ಹಾಜರಾಗದೆ ತಪ್ಪಿಸಿಕೊಳ್ಳುತ್ತಿದ್ದ ತಮಿಳುನಾಡಿನ ಈ ವ್ಯಕ್ತಿಯನ್ನು ಪೋಲೀಸರು ತಮಿಳುನಾಡಿನಲ್ಲಿ ಹಿಡಿದು ಸುಳ್ಯಕ್ಕೆ ತಂದಿದ್ದರು. ನ್ಯಾಯಾಲಯಕ್ಕೆ ಹಾಜರುಪಡಿಸುವ ಮೊದಲು ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬೇಕಾಗಿರುವುದರಿಂದ ಸಂಜೆ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಒಬ್ಬರು ಪೋಲೀಸ್ ಕಾನ್ ಸ್ಟೇಬಲ್ ಚೀಟಿ ಮಾಡಿಸುತ್ತಿರುವಾಗ ತನ್ನನ್ನು

ಪೊಲೀಸರಿಂದ ತಪ್ಪಿಸಿಕೊಂಡ ಕಳ್ಳನ್ನು ಹಿಡಿಯಲು ಸಾರ್ವಜನಿಕರು ಸಹಕರಿಸಲು ಪೊಲೀಸರ ಮನವಿ Read More »

ಕಲ್ಲೆಂಬಿಯ ದೈವ ನರ್ತಕ ರಮೇಶ್ ಕಲ್ಲೆಂಬಿ ನಿಧನ

ಆಲೆಟ್ಟಿವ: ಆಲೆಟ್ಟಿ ಗ್ರಾಮದ ಕಲ್ಲೆಂಬಿಯ ನಿವಾಸಿ ದೈವ ನರ್ತಕ ದಿ.ಕುಕ್ಕ ರವರ ಪುತ್ರ ದೈವ ನರ್ತಕ ರಮೇಶ್ ಕಲ್ಲೆಂಬಿ ಯವರು ಅಲ್ಪ ಕಾಲದ ಅಸೌಖ್ಯದಿಂದ ಶನಿವಾರ ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 35 ವರ್ಷ ಪ್ರಾಯವಾಗಿತ್ತು ಮೃತರು ಆಲೆಟ್ಟಿ ಭಾಗದಲ್ಲಿ ಕೆಲವು ಮನೆತನದ ತರವಾಡು ಮನೆಯ ನೇಮೋತ್ಸವದ ಸಂದರ್ಭದಲ್ಲಿ ಕಲ್ಲುರ್ಟಿ ಗುಳಿಗ ದೈವದ ನರ್ತನ ಸೇವೆ ಮಾಡಿಕೊಂಡು ಬರುತ್ತಿದ್ದರು. ಮೃತರು ಅವಿವಾಹಿತರಾಗಿದ್ದು ತಾಯಿ ಸರೋಜಿನಿ ಹಾಗೂ ಸಹೋದರಿಯರನ್ನು ಮತ್ತು ಬಂಧು ಮಿತ್ರರನ್ನು ಅಗಲಿದ್ದಾರೆ.

ಕಲ್ಲೆಂಬಿಯ ದೈವ ನರ್ತಕ ರಮೇಶ್ ಕಲ್ಲೆಂಬಿ ನಿಧನ Read More »

error: Content is protected !!
Scroll to Top